ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೂಡ್ಸ್ ರೈಲಿನ ಲಾರಿಯಲ್ಲಿ ಬಿಜೂರು ರೈಲ್ವೆ ನಿಲ್ದಾಣದ ಸಮೀಪ ಬೆಂಕಿ ಕಾಣಿಸಿಕೊಂಡಿದ್ದು, ಬಿಜೂರು ನಿಲ್ದಾಣದ ಸಿಬ್ಬಂದಿಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ರೈಲು ನಿಲ್ಲಿಸಿ, ಅಗ್ನಿಶಾಮಕದಳದ ನೆರವಿನೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಗೂಡ್ಸ್ ರೈಲು ಬಿಜೂರು ನಿಲ್ದಾಣ ಸಮೀಪ ಬರುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ರೈಲು ನಿಲ್ಲಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಲಾಯಿತು. ರೈಲಿನ ಮಧ್ಯಭಾಗದ ಲಾರಿಯಲ್ಲಿ ತುಂಬಿಸಲಾಗಿದ್ದ ಆಹಾರ ಸಾಮಾಗ್ರಿಗಳಿಗೆ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಲಾರಿಯಲ್ಲಿದ್ದ ಭಾಗಶಃ ವಸ್ತುಗಳು ಸುಟ್ಟುಹೊಗಿದ್ದವು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಅ.09: ನಗರದಲ್ಲಿ ಅ.01ರಂದು ರಾಘವೇಂದ್ರ ಶೇರುಗಾರ್ (42) ಯಾನೆ ಬನ್ಸ್ ರಾಘು ಕೊಲೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳಾದ ಶಫಿವುಲ್ಲ ಅಲಿಯಾಸ್ ಆಟೋ ಶಫಿ (40), ಮಹಮ್ಮದ್ ಇಮ್ರಾನ್ (43) ಎಂಬಿಬ್ಬರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಶಿವಮೊಗ್ಗ ಜಿಲ್ಲೆಯವರಾದ ಶಫಿವುಲ್ಲ ಹಾಗೂ ಮಹಮ್ಮದ್ ಇಮ್ರಾನ್ ಎಂಬಾತನ್ನು ಅ.5ರಂದು ಶಿವಮೊಗ್ಗ ರೈಲ್ವೇ ನಿಲ್ದಾಣದ ಬಳಿ ಬಂಧಿಸಿದ್ದು ಅ.6 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಸೋಮವಾರ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೃತ ರಾಘವೇಂದ್ರ ಶೇರಿಗಾರ್ ಅಲಿಯಾಸ್ ಬನ್ಸ್ ರಾಘು ಅವರ ಕಾರಿಗೆ ಆರೋಪಿಗಳ ಕಾರು ತಾಕಿದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆರೋಪಿ ಶಫಿವುಲ್ಲಾ ಚಾಕುವಿನಿಂದ ರಾಘವೇಂದ್ರ ಶೇರಿಗಾರ್ ಎಂಬುವವರಿಗೆ ಇರಿದಿದ್ದು ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದರು. ಆರೋಪಿ ಶಾಫಿವುಲ್ಲಾಗೆ ಜುಗಾರಿ ಆಡುವ ಚಟವಿದ್ದು ಆತನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಕರಾವಳಿಯ 600 ಮಂದಿ ನೆಲೆಸಿರುವ ಬಗ್ಗೆ ಮಾಹಿತಿ ಇದ್ದು ಈ ಪೈಕಿ ಕುಂದಾಪುರ, ಬೈಂದೂರು ತಾಲೂಕುಗಳ 75 ಮಂದಿ ಇರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಎಲ್ಲರೂ ಸುರಕ್ಷಿತರಾಗಿರುವ ಮಾಹಿತಿ ದೊರೆಯುತ್ತಿದೆ. ಇಸ್ರೇಲ್‌ನ ಥೆಲ್ ಅವೀವ್ ನಗರ ಹಾಗೂ ಸುಮಾರು 12 ಕೀಮೀ ದೂರದಲ್ಲಿರುವ ಅರ್ಜಲಿಯಾ ಹಾಗೂ ಹಿಪಾ ಭಾಗದಲ್ಲಿ ಹೆಚ್ಚಾಗಿ ಕುಂದಾಪುರ ಬೈಂದೂರು ತಾಲೂಕಿನವರು ವಾಸವಿದ್ದು, ಜೆರುಸಲೇಮ್ ಪ್ರದೇಶದಲ್ಲಿಯೂ ಕೆಲವರು ಇರುವ ಮಾಹಿತಿ ಇದೆ. ಕರಾವಳಿ ಜಿಲ್ಲೆಯವರು ಇರುವ ಕೆಲವು ಪ್ರದೇಶ ಕಡಿಮೆ ಯುದ್ಧಪೀಡಿತವಾಗಿದ್ದು ಬಂಕರ್, ಸೇಫ್ ಹೌಸ್’ಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಇಸ್ರೆಲಿನ ಅರ್ಜಲಿಯಾ ನಗರದಲ್ಲಿ ಹೌಸ್ ನರ್ಸ್ ಆಗಿರುವ ಉಪ್ಪುಂದ ಮೂಲಕ ಕ್ಲಾರೆನ್ಸ್ ಉಪ್ಪುಂದ ಅವರು ಇಸ್ರೆಲಿನ ಸದ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ. ಸೋಮವಾರ ಸೈರನ್ ಶಬ್ದ ಮಾಡಿದ್ದು ಬಿಟ್ಟರೆ ಸಾರ್ವಜನಿಕರಿಗೆ ಯಾವುದೇ ಸಂದೇಶ ರವಾನಿಸಿಲ್ಲ. ಹಾಗೇನಾದರೂ ಅಪಾಯದ ಸಂಧರ್ಭ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್’ನಲ್ಲಿ ಸ್ಪರ್ಧಿಸಿದ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗ ವಿದ್ಯಾರ್ಥಿ ತೇಜಸ್ವಿ ಮಿಥುನ್ ಜಿಲ್ಲಾ ಮಟ್ಟದಲ್ಲಿ ವಿಜೇತನಾಗಿ ರಾಜ್ಯ ಮಟ್ಟದ ಗ್ರಾಮೀಣ ಐ.ಟಿ.ಕ್ವಿಜ್ ಗೆ ಆಯ್ಕೆ ಆಗಿರುತ್ತಾನೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಮೂಡ್ಲಕಟ್ಟೆಯ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆ ಪಿಎಸ್ಐ ಪವನ್ ನಾಯಕ್ ಹಾಗೂ ಸಮುದಾಯ ಮುಖಂಡರ ಉಪಸ್ಥಿತಿಯಲ್ಲಿ ಭಾನುವಾರ ಜರುಗಿತು. ಈ ಸಂದರ್ಭ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹೇಗೆ ಮತ್ತು ಹೇಗೆ ಯಶಸ್ಸು ಸಾಧಿಸಬಹುದು ಎಂಬ ವಿಷಯದ ಕುರಿತು ಪಿಎಸ್ಐ ಪವನ್ ನಾಯಕ್ ಹಾಗೂ ಸ್ಪರ್ಧಾ ಸಾರಥಿ ಅಕಾಡೆಮಿ ಕುಂದಾಪುರ ಆದರ್ಶ ಕೆಲ ವಿಶೇಷ ಉಪನ್ಯಾಸ ನೀಡಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ ಹಾಲಾಡಿ ಶಂಕರನಾರಾಯಣ ಘಟಕ ದ ವತಿಯಿಂದ ಮೊಗವೀರ ಸಮಾಜದ ಮಾರ್ಗದರ್ಶಕರಾದ ನಾಡೋಜ ಡಾ. ಜಿ. ಶಂಕರ್ ಅವರ 68ನೇ ಹುಟ್ಟುಹಬ್ಬದ ಪ್ರಯುಕ್ತ ವಾಗ್ಜೋತಿ ಶ್ರವಣ ದೋಷವುಳ್ಳ ಅಂಧ ಮಕ್ಕಳ ವಸತಿ ಶಾಲೆ ಮೂಡುಬಗೆ ಅಂಪಾರು ಇಲ್ಲಿನ ಮಕ್ಕಳಿಗೆ ಮದ್ಯಾಹ್ನ ಊಟ ಮತ್ತು ಸಿಹಿ ತಿಂಡಿ ವಿತರಿಸಿ ಕೇಕ್ ಕಟ್ ಮಾಡಿ ಆಚರಿಸಲಾಯಿತು. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆಯ ಅಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡ್ಕ, ನಿಕಟಪೂರ್ವ ಅಧ್ಯಕ್ಷರಾದ ಶಿವರಾಮ್ ಕೆ. ಕೋಟ, ಪ್ರಧಾನ ಕಾರ್ಯದರ್ಶಿ ರವೀಶ್ ಎಸ್. ಕೊರವಡಿ, ಉಪಾಧ್ಯಕ್ಷರಾದ ಜಯಂತ್ ಅಮೀನ್, ಮಾಜಿ ಅಧ್ಯಕ್ಷರು ಗಣೇಶ್ ಕಾಂಚನ್, ಅಶೋಕ್ ತೆಕ್ಕಟ್ಟೆ, ಘಟಕ ದ ಅಧ್ಯಕ್ಷರಾದ ಕ್ರಷ್ಣ ಮೂರ್ತಿ ಕಾಂಚನ್, ನಿಕಟ ಪೂರ್ವ ಅಧ್ಯಕ್ಷರಾದ ಶೇಖರ್ ತೋಳರ್, ಕಾರ್ಯದರ್ಶಿ ಯಾದ ಶರತ್ ಮೊಗವೀರ ಸೌಡ, ಗೌರವ ಸಲಹೆಗರಾ ದ ರಘುರಾಮ್ ಹುಣಸೆಮಕ್ಕಿ, ಶಾಲಾ ಸಹ ಮುಖ್ಯಪಾಧ್ಯಾಯರಾದ ಸತ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲಾ ಪ್ರವಾಸೋದ್ಯಮ ಇಲಾಖೆಯವರು ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಆಯೋಜಿಸಿದ ತಾಲೂಕು ಮಟ್ಟದ ವಿವಿಧ ಸಾಹಿತ್ಯಕ ಸ್ಪರ್ಧೆಗಳಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ವಿಭಾಗಗಳಲ್ಲಿ ಸಾಧನೆ ಮೆರೆದಿದ್ದಾರೆ. ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವರ್ಷಾ ರವಿಶಂಕರ್ ಪ್ರಥಮ ಸ್ಥಾನ, ರಸಪ್ರಶ್ನೆ(ಕ್ವಿಜ್) ಸ್ಪರ್ಧೆಯಲ್ಲಿ ಪ್ರಥಮ ಪಿ.ಯು.ಸಿ.ಗಿರೀಶ್ ಪೈ ಪ್ರಥಮ ಸ್ಥಾನ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ಐಶ್ವರ್ಯ ವೈದ್ಯ ದ್ವಿತೀಯ ಸ್ಥಾನ,ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವೈಷ್ಣವಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು,ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಡ್ ಕಾಂ ಸುದ್ದಿ.ಬೆಂಗಳೂರು, ಅ.06: ಕಾನೂನು ಬಾಹಿರ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಆದರೆ ಕೆಂಪು ಕಲ್ಲು ಹಾಗೂ ಮಣ್ಣಿನ ವಿಚಾರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಕೂಡದು. ಮರಳು ಬ್ಲಾಕ್‌ಗೆ ಅನುಮತಿ ಪತ್ರ ನೀಡುವ ಪ್ರಕ್ರಿಯೆಯನ್ನು ವಿಳಂಬಗೊಳಿಸಬಾರದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೂಚಿಸಿದ್ದಾರೆ. ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳು, ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಗುರುವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಪರಿಸರ ಪ್ರಭಾವ ಮೌಲ್ಯ ಮಾಪನ ಪ್ರಾಧಿಕಾರ ಅನುಮತಿ ನೀಡಿದ ಬಳಿಕವೇ ಮರಳು ಬ್ಲಾಕ್ ಗಳಿಗೆ ಅನುಮತಿ ಪತ್ರ ದೊರೆಯುತ್ತದೆ. ಪ್ರಾಧಿಕಾರದ ತಿಂಗಳಿಗೊಮ್ಮೆ ಸಭೆ ನಡೆಯುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕೆಂದು ಮುಖ್ಯಮಂತ್ರಿಗಳು ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು. ಹೊಸ ಮರಳು ನೀತಿ 2020ನ್ನು ಡಿಸೆಂಬರ್ 2021ರಂದು ಜಾರಿಗೆ ತಂದಿದ್ದು, ಸಣ್ಣ ಬ್ಲಾಕ್ ಗಳಿವೆ. ಕಟ್ಟಡ ನಿರ್ಮಾಣ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರ ಹಿತಾಸಕ್ತಿಯನ್ನೂ ಕಾಪಾಡಬೇಕಿದೆ ಕಾರ್ಮಿಕರಿಗೆ ಸಮಸ್ಯೆಯಾಗದಂತೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಾಜಿ ಸಚಿವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕನ್ನಡ ಕಿರುತೆರೆ, ಸಿನಿಮಾ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ದಿವ್ಯಾ ಉರುಡುಗ ಇದೀಗ ಗುಡ್ ನ್ಯೂಸ್ ಎನ್ನುತ್ತಾ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ರೇಷ್ಮೆ ಸೀರೆ, ಮಲ್ಲಿಗೆ ಹೂ… ಮದುಮಗಳ ಹಾಗೆ ಕಂಗೊಳಿಸುತ್ತಾ ದಿವ್ಯಾ ಸದ್ಯದಲ್ಲೇ ಅನೌನ್ಸ್ ಮಾಡುತ್ತೀವಿ ಎನ್ನುವ ವಿಚಾರ ಬಹಿರಂಗ ಪಡಿಸಿದ್ದಾರೆ. ವಿಡಿಯೋ ನೋಡಿದ್ರೆ ಪಕ್ಕಾ ಮದುವೆ ಸುದ್ದಿ ನೀಡುತ್ತಾರೆ ಎನ್ನುವ ಅನುಮಾನ ಮೂಡಿಸಿದೆ. ಅಂದಹಾಗೆ ದಿವ್ಯಾ ಉರುಡುಗ ಅಂದಕ್ಷಣ ಅರವಿಂದ್ ಕೆಪಿ ಹೆಸರು ಕೂಡ ಪಕ್ಕದಲ್ಲೇ ತಗಲಾಕೊಂಡಿರುತ್ತೆ. ಬೈಕ್ ರೇಸರ್ ಅರವಿಂದ್ ಕೆಪಿ ಕೂಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ದಿವ್ಯಾ ಮತ್ತು ಅರವಿಂದ್ ಮೊದಲ ಬಾರಿಗೆ ಭೇಟಿಯಾಗಿದ್ದು ಬಿಗ್ ಬಾಸ್ ಶೋನಲ್ಲಿ. ಬಿಗ್ ಮನೆಯಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದ ಈ ಜೋಡಿ ಶೋ ಮುಗಿದ ಬಳಿಕವು ಅಷ್ಟೇ ಕ್ಲೋಸ್ ಆಗಿ ಇದ್ದಾರೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಇದೀಗ ಸಿಹಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಅ.5: ಜಿಲ್ಲೆಯಲ್ಲಿ ಎದುರಾಗಿರುವ ಮರಳು, ಕೆಂಪು ಕಲ್ಲು ಗಣಿಗಾರಿಕೆ – ಸಾಗಾಟ ಹಾಗೂ ಇನ್ನಿತರೇ ಸಮಸ್ಯೆಗಳ ಬಗ್ಗೆ ಚರ್ಚಿಸಲು ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಉಪಸ್ಥಿತಿಯಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ತಿಳಿಸಿದ್ದಾರೆ. ಗುರುವಾರ ಸಂಜೆ 5 ಗಂಟೆಗೆ ಬೆಂಗಳೂರಿನ ವಿಧಾನಸೌಧದ 3ನೇ ಮಹಡಿ ಕೊಠಡಿ ಸಂಖ್ಯೆ -313ರಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಉಡುಪಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದ ಜಿಲ್ಲೆಯ ಉಭಯ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು, ಜಲ್ಲಿ ಹಾಗೂ ಇನ್ನಿತರ ಕಟ್ಟಡ ಸಾಮಾಗ್ರಿಗಳ ಅಕ್ರಮ ಸಾಗಾಟಕ್ಕೆ ತಡೆ ಬಿದ್ದ ಬೆನ್ನಲ್ಲೇ ಲಾರಿ ಚಾಲಕ ಮಾಲೀಕರು…
