ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕಳೆದ ಎಂಟು ವರ್ಷಗಳಿಂದ ವಿಭಿನ್ನವಾಗಿ ಯಕ್ಷಗಾನ ಸಂಘಟನೆ ಮಾಡುತ್ತಿರುವ ಜೊತೆಗೆ ಹಲವು ಸಮಾಜಮುಖಿ ಕಾರ್ಯಗಳಿಗೆ ಮಾದರಿಯಾದ ಯಕ್ಷರಾತ್ರಿ, ಈ ಬಾರಿ ಡಿಸೆಂಬರ್ 2ರ ಶನಿವಾರ ಕುಂದಾಪುರದ ನೆಹರೂ ಮೈದಾನದಲ್ಲಿ ನಡೆಯಲಿದ್ದು ಈ ವೇಳೆ ಸಾಧಕರಿಗೆ ಗೌರವ ಪುರಸ್ಕಾರ, ಕಲಾ ಪುರಸ್ಕಾರ ನೀಡಲಾಗುತಿದೆ. ಯಕ್ಷಕಾಶಿಯ ಮೊದಲ ಆಟ ‘ಯಕ್ಷರಾತ್ರಿ’ಯಲ್ಲಿ ಗೌರವ ಪುರಸ್ಕಾರವನ್ನು ಮುಳುಗು ತಜ್ಞ ಸಮಾಜಸೇವಕ ಈಶ್ವರ ಮಲ್ಪೆ ಹಾಗೂ ಸ್ವಾವಲಂಬಿ ಬದುಕು ನಡೆಸುವ ರಾಜ್ಯದ ಪ್ರಥಮ ಮಂಗಳಮುಖಿ ರಿಕ್ಷಾ ಚಾಲಕಿ ಕಾವೇರಿ ಮೇರಿ ಡಿಸೋಜ ಅವರನ್ನು ಆಯ್ಕೆ ಮಾಡಲಾಗಿದೆ. ಯಕ್ಷರಾತ್ರಿ ಕಲಾ ಪುರಸ್ಕಾರವಾಗಿ ಬಡಗಿನ ಪ್ರಸಿದ್ದ ಸ್ತ್ರೀ ವೇಷಧಾರಿ ಸುಧೀರ್ ಉಪ್ಪೂರು ಅವರನ್ನು ಆಯ್ಕೆಮಾಡಲಾಗಿದೆ. ಶ್ರೀ ಪೆರ್ಡೂರು ಮೇಳದವರಿಂದ ಪ್ರೊ. ಪವನ್ ಕಿರಣಕೆರೆ ವಿರಚಿತ ಗಂಗೆ- ತುಂಗೆ-ಕಾವೇರಿ ಎನ್ನುವ ನೂತನ ಸಾಮಾಜಿಕ ಪ್ರಸಂಗವನ್ನು ಕುಂದಾಪುರದಲ್ಲಿ ಮೊಟ್ಟಮೊದಲ ಭಾರಿಗೆ ಆಯೋಜಿಸಲಾಗಿದೆ ಎಂದು ಸಂಘಟಕ ಗಜೇಂದ್ರ ಆಚಾರ್ ಕೋಣಿ ತಿಳಿಸಿದ್ದಾರೆ ಯಕ್ಷರಾತ್ರಿ ಜೊತೆಗೆ ಸಾಧಕರಿಗೆ ಪುರಸ್ಕಾರ, ವಿದ್ಯಾರ್ಥಿ ವೇತನ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ನೂತನ ಶಿಲಾಮಯ ಮಹಾಪ್ರವೇಶದ್ವಾರ ಗೋಪುರ ನಿರ್ಮಾಣ ಯೋಜನೆ ಮನವಿಪತ್ರವನ್ನು ದೇವಳದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು. ದೇವಳದ ಸೇವಾಸಮಿತಿ ಗೌರವಾಧ್ಯಕ್ಷರಾದ ಎಸ್. ರಾಜು ಪೂಜಾರಿ ಮನವಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ ದೇವಸ್ಥಾನದಲ್ಲಿ ಬೈಂದೂರು ಭಾಗದ ಪ್ರಮುಖ ಶ್ರದ್ಧಾಕೇಂದ್ರವಾಗಿ ಮಾರ್ಪಾಡಾಗಿದ್ದು, ನಿತ್ಯ ಸೇವೆ ವಾರ್ಷಿಕ ಜಾತ್ರೆಯ ಜೊತೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯುತ್ತಿದೆ. ಮುಂದುವರಿದ ಭಾಗವಾಗಿ ಮಹಾಪ್ರವೇಶದ್ವಾರ ಗೋಪುರ ನಿರ್ಮಾಣವಾಗುತ್ತಿದ್ದು, ರೂ. 60 ಲಕ್ಷ ವೆಚ್ಚವಾಗುವ ಅಂದಾಜಿದೆ. ದೇವಳದ ಎಲ್ಲಾ ಅಭಿವೃದ್ಧಿ ಕಾರ್ಯದಲ್ಲಿ ಕೈಜೊಡಿಸಿರುವ ಭಕ್ತರು ಪ್ರವೇಶದ್ವಾರ ನಿರ್ಮಾಣದಲ್ಲಿಯೂ ಭಾಗಿಯಾಗುವಂತೆ ಕೋರಿದರು. ಪ್ರಧಾನ ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವಡ ಅವರು ಮಾತನಾಡಿ ಶಕ್ತಿದೇವತೆ ಮಹಾಸತಿ ಅಮ್ಮನವರ ದೇವಸ್ಥಾನದ ಶಿಲಾಮಯ ಗರ್ಭಗುಡಿಯನ್ನು 2010ರಲ್ಲಿ ನಿರ್ಮಾಣ ಮಾಡಲಾಗಿತ್ತು. ಪ್ರವೇಶದ್ವಾರವನ್ನ ಮಾತ್ರವೇ ಅಂದು ನಿರ್ಮಿಸಿದ್ದರಿಂದ ನೂತನ ಶಿಲಾಮಯ ಮಹಾಪ್ರವೇಶದ್ವಾರ ಗೋಪುರವನ್ನು ನಿರ್ಮಿಸಲು ಸಮಿತಿ ನಿರ್ಧರಿಸಿದ್ದು, ಭಕ್ತರ ಸಹಕಾರ ಅಗತ್ಯವಾಗಿ ಬೇಕಿದೆ ಎಂದರು. ಇದನ್ನೂ ಓದಿ: ►…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎಚ್‌ಡಿಎಫ್‌ಸಿ ಬ್ಯಾಂಕ್ ಕುಂದಾಪುರ ಶಾಖೆಯ ಉದ್ಯೋಗಿ ನಾಗೇಂದ್ರ ಹೆಚ್ ಅವರು 2022-23 ಸಾಲಿನ ಆರ್ಥಿಕ ವರ್ಷದಲ್ಲಿ ವೃತ್ತಿಯಲ್ಲಿ ತೋರಿದ ಸಾಧನೆಗಾಗಿ ಸೌತ್ ಕೊರಿಯಾದಲ್ಲಿ ನಡೆದ ಎಂಡಿಆರ್‌ಟಿ ಸಭೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಫೆಬ್ರವರಿಯಲ್ಲಿ ದುಬೈನಲ್ಲಿ ನಡೆದ ಸಭೆಯಲ್ಲಿ “ಬೆಸ್ಟ್ ಬ್ಯಾಂಕರ್” ಮತ್ತು ಮಲೇಷಿಯಾದಲ್ಲಿ ನೆಡೆದ ಸಭೆಯಲ್ಲಿ “ಪರ್ಪಾರ್ಮರ್ ಆಫ್ ದಿ ಇಯರ್” ಪ್ರಶಸ್ತಿಯನ್ನು ಪಡೆದಿದ್ದರು. ನಾಗೇಂದ್ರ ಅವರು ಮಯ್ಯಾಡಿ ಹೆಬ್ಬಾಗಿಲು ಮನೆ ಪ್ರೇಮ ಮತ್ತು ಅಶ್ವಥನಾರಾಯಣ ಅವರ ಪುತ್ರ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರಕಾರಿ ಕಾಲೇಜುಗಳಲ್ಲಿ ಕಲಿಯುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಿದ್ದ ಬಹುದೊಡ್ಡ ಕೊರತೆಯನ್ನು ನೀಗಿಸುವಲ್ಲಿ ಸಮೃದ್ಧ ಬೈಂದೂರು ತಂಡ ಪ್ರಥಮ ಹೆಜ್ಜೆ ಇರಿಸಿದ್ದು, ಉಚಿತ ಕೆಸಿಇಟಿ ಹಾಗೂ ನೀಟ್ ತರಬೇತಿ ನೀಡಲು ಯೋಜಿಸಿದೆ. ಗುಣಮಟ್ಟದ ತರಬೇತಿ ನೀಡುವ ಮೂಲಕ ಅವಕಾಶವನ್ನು ಸೃಷ್ಟಿಸಿಕೊಡುವ ಜವಾಬ್ದಾರಿ ನಮ್ಮದಾಗಿದ್ದು, ಆಸಕ್ತಿಯ ಕಲಿಕೆ ಹಾಗೂ ಫಲಿತಾಂಶವನ್ನು ತೋರಿಸುವ ಹೊಣೆ ವಿದ್ಯಾರ್ಥಿಗಳದ್ದಾಗಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ಸಮೃದ್ಧ ಬೈಂದೂರು ಪರಿಕಲ್ಪನೆಯಡಿಯಲ್ಲಿ ಬೈಂದೂರು ಹಾಗೂ ಉಪ್ಪುಂದ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗಾಗಿ, ಜ್ಞಾನದೀಪ ಟುಟೋರಿಯಲ್ ಕಾಲೇಜಿನ ಸಹಯೋಗದೊಂದಿಗೆ ಹಮ್ಮಿಕೊಂಡ ಉಚಿತ ಕೆಸಿಇಟಿ ಹಾಗೂ ನೀಟ್ ತರಬೇತಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಬಡತನವೆಂಬುದು ಕೊರತೆಯಾಗಬಾರದು. ಅದನ್ನೇ ಸವಾಲಾಗಿ ಸ್ವೀಕರಿಸಿದ ಅದೇಷ್ಟೋ ಮಂದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆದ್ದ ನೂರಾರು ಉದಾಹರಣೆಗಳು ನಮ್ಮ ಮುಂದಿದೆ. ಅಂತಹದ್ದೊಂದು ಇಚ್ಚಾಶಕ್ತಿಯನ್ನು ಬೆಳಿಸಿಕೊಳ್ಳಿ ಎಂದರು. ತರಗತಿಗಳಲ್ಲಿ ಕಲಿಕೆಯಲ್ಲಿ ಉತ್ತಮ ಹಾಗೂ ಸಾಧಾರಣವಿರುವ ವಿದ್ಯಾರ್ಥಿಗಳಿಗೂ ಪಾಠ ಮಾಡಬೇಕಾಗುತ್ತದೆ. ಬಾಹ್ಯ ತರಬೇತಿಗಳಲ್ಲಿ ಕಲಿಕೆಯಲ್ಲಿ ಉತ್ತಮವಿರುವ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ ನಟನೆಯ 40ನೇ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ. ಹಬ್ಬದ ಸಂಭ್ರಮದಲ್ಲಿ ಪೋಸ್ಟರ್ ಜೊತೆಗೆ ಅಭಿಮಾನಿಗಳ ಮುಂದೆ ಬಂದಿರುವ ಪ್ರಜ್ವಲ್ ಅವರ ಈ ಹೊಸ ಸಿನಿಮಾಗೆ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಪೋಸ್ಟರ್ ಭರ್ಜರಿಯಾಗಿದ್ದು ಇದುವರೆಗೂ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ. ಪ್ರಜ್ವಲ್ ಅವರ 40ನೇ ಸಿನಿಮಾಗೆ ‘ಅಂಬಿ ನಿಂಗೆ ವಯಸಾಯ್ತೋ’ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಗುರುದತ್ ನಿರ್ದೇಶನದ ಮೊದಲ ಸಿನಿಮಾ ‘ಅಂಬಿ ನಿಂಗೆ ವಯಸಾಯ್ತೋ’ 2018 ರಲ್ಲಿ ಬಿಡುಗಡೆಯಾಗಿತ್ತು. ಮೊದಲ ಸಿನಿಮಾದಲ್ಲೇ ರೆಬಲ್ ಸ್ಟಾರ್ ಅಂಬರೀಶ್, ಕಿಚ್ಚ ಸುದೀಪ್, ಸುಹಾಸಿನಿ ಅಂತಹ ದೊಡ್ಡ ದೊಡ್ಡ ಸ್ಟಾರ್ ಕಲಾವಿದರಿಗೆ ನಿರ್ದೇಶನ ಮಾಡಿದ್ದ ಗುರು ಮುಂದಿನ ಸಿನಿಮಾ ಯಾರ ಜೊತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಇದೀಗ ಆ ಎಲ್ಲಾ ಕುತೂಹಲ ಮತ್ತು ಪ್ರಶ್ನೆಗಳಿಗೆ ತೆರೆಬಿದ್ದಿದೆ. ಸಿನಿಮಾದ ಪೋಸ್ಟರ್ ನೋಡಿದ್ದರೆ ಇದು ಕಂಬಳದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ಶಾರದೋತ್ಸವ ಸುವರ್ಣ ಮಹೋತ್ಸವದ ಅಂಗವಾಗಿ ಬೈಂದೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಭಾನುವಾರ ಬೈಂದೂರು ಗಾಂಧಿ ಮೈದಾನದಲ್ಲಿ ಜರುಗಿತು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆ ಮನುಷ್ಯರಲ್ಲಿ ಏಕಾಗ್ರತೆ ಹಾಗೂ ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯವಿದೆ. ಸೋಲೇ ಗೆಲುವಿನ ಸೋಪಾನ ಎಂದು ಕ್ರೀಡಾಸ್ಪೂರ್ತಿಯಿಂದ ಸ್ವರ್ಧೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು. ಬೈಂದೂರು ದಸರಾ ಸಮಿತಿ ಅಧ್ಯಕ್ಷ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕ್ರೀಡಾಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಗಿರೀಶ್ ಬೈಂದೂರು, ಬಿ.ಎಮ್. ನಾಗರಾಜ್ ಗಾಣಿಗ, ಶಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಆಚಾರ್ ಬೈಂದೂರು, ಬೈಂದೂರು ತಾಲೂಕು ಯುವ ಜನ ಕ್ರೀಡಾ ಇಲಾಖೆಯ ಯೋಜನಾಧಿಕಾರಿ ಪ್ರಭಾಕರ್ ಎಸ್ ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು,ಅ.15: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಾನವರಾತ್ರಿ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು. ದೇವಳದ ತಂತ್ರಿಗಳಾದ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಪೂಜೆಯೊಂದಿಗೆ ನವರಾತ್ರಿ ಪರ್ವಕ್ಕೆ ಚಾಲನೆ ನೀಡಿದ ಬಳಿಕ ಶ್ರೀದೇವಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಿತು. ಬಳಿಕ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಮಾತನಾಡಿ 9 ದಿನಗಳ ಕಾಲ ನಡೆಯುವ ಉತ್ಸವಕ್ಕೆ ದೇವಳ ಸಕಲ ಸಿದ್ಧತೆ ಮಾಡಿಕೊಂಡಿದ್ದು ಊರ- ಪರವೂರಿನಿಂದ ಭಕ್ತರಿಗೋಸ್ಕರ ವಿಶೇಷ ಸೌಕರ್ಯ ಒದಗಿಸಲಾಗಿದೆ. ಚಂಡಿಕಾ ಯಾಗ, ರಥೋತ್ಸವ, ವಿದ್ಯಾರಂಭ, ನವಾನ್ನಪ್ರಾಶನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನವರಾತ್ರಿ ಸಂದರ್ಭ ನಡೆಯುತ್ತವೆ. ಪ್ರತಿದಿನ ನಡೆಯುವ ಸಾಂಸ್ಕೃತಿಕ ಉತ್ಸವವೂ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಡಾ ಕೆ. ರಾಮಚಂದ್ರ ಅಡಿಗ, ಜಯಾನಂದ ಹೋಬಳಿದಾರ್, ಡಾ. ಅತುಲ್ ಕುಮಾರ್ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು. ದೇವಸ್ಥಾನದ ಸೇವಾಸಮಿತಿ ಅಧ್ಯಕ್ಷರಾದ ಎನ್. ನಾಗರಾಜ ಶೆಟ್ಟಿ ಉತ್ಸವಕ್ಕೆ ಚಾಲನೆ ನೀಡಿದರು. ಪ್ರಧಾನ ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವಡ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಈ ಸಂದರ್ಭದಲ್ಲಿ ಸೇವಾಸಮಿತಿಯ ಗೌರವಾಧ್ಯಕ್ಷರಾದ ಎಸ್. ರಾಜು ಪೂಜಾರಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ನಾಗರಾಜ ಗಾಣಿಗ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ, ಪಾತ್ರಿಗಳಾದ ಅಣ್ಣಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗುವ ನೂರಾರು ಗೋವುಗಳಿಗೆ ಆಪತ್ಬಾಂದವರಂತೆ ಸೇವೆ ಸಲ್ಲಿಸುತ್ತಿದ್ದಾರೆ ಯಡ್ತರೆಯ ಈ ಬೈಕ್ ಮೆಕ್ಯಾನಿಕ್. ಬೈಂದೂರು ತಾಲೂಕಿನ ಯಡ್ತರೆಯಲ್ಲಿ ಶ್ರೀ ದುರ್ಗಾ ಆಟೋ ವರ್ಕ್ಸ್ ಎಂಬ ಹೆಸರಿನ ಸ್ವಂತ ಗ್ಯಾರೇಜ್ ನಡೆಸುತ್ತಿರುವ ಸಂಜೀವ ದೇವಾಡಿಗ ಅವರು ಮೂರು ದಶಕಗಳ ಅನುಭವ ಹೊಂದಿರುವ ಪರಿಣತ ಬೈಕ್ ಮೆಕ್ಯಾನಿಕ್. ತನ್ನ ವೃತ್ತಿಯ ಜೊತೆಗೆ ಪ್ರೌವೃತ್ತಿಯಾಗಿ ಆಯ್ದುಕೊಂಡದ್ದು ಅನಾಥ ಗೋವುಗಳ ಚಿಕಿತ್ಸೆ. ಕಳೆದ 15 ವರ್ಷದಿಂದ ಸದ್ದಿದ್ದಲೇ ಗೋಸೇವೆಯಲ್ಲಿ ತೊಡಗಿರುವ ಸಂಜೀವ ದೇವಾಡಿಗ ಅವರು, ನೂರಾರು ಗೋವುಗಳ ಪಾಲಿಗೆ ಆಪತ್ಬಾಂದವರಾಗಿದ್ದಾರೆ. ಅಪಘಾತಕ್ಕೀಡಾಗುವ ದನಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ವೈದ್ಯರ ಮಾರ್ಗದರ್ಶನದಲ್ಲಿ ತಿಂಗಳುಗಟ್ಟಲೇ ಸಲಹುತ್ತಿದ್ದಾರೆ. ತನ್ನ ವೈಯಕ್ತಿಕ ಬದುಕಿನ ನೋವುಗಳ ನಡುವೆಯೂ ಗೋಸೇವೆಯಲ್ಲಿ ಬದುಕಿನ ನೈಜ ಖುಷಿ ಕಾಣುತ್ತಿದ್ದಾರೆ.
