Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಂದಿನ ಪೀಳಿಗೆಯನ್ನು ತಿದ್ದುವ ಕೆಲಸ ಮಾಡದಿದ್ದರೆ ಭವಿಷ್ಯದ ಸಮಾಜ ಕಲ್ಪಿಸಿಕೊಳ್ಳುವುದು ಕಷ್ಟ. ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದ್ದು, ರೋಟರಿ ಜಿಲ್ಲೆಯಿಂದ ಮೌಲ್ಯಾಧಾರಿತ ಶಿಕ್ಷಣ ನೀಡಲು ಒತ್ತು ನೀಡಲಾಗುತ್ತಿದೆ ಎಂದು ರೋಟರಿ ಜಿಲ್ಲೆ 3182ರ ಗವರ್ನರ್ ಬಿ.ಸಿ. ಗೀತಾ ಹೇಳಿದರು. ಅವರು ಇಲ್ಲಿನ ಅಂಬಿಕಾ ಇಂಟರ್ನ್ಯಾಷನಲ್ನಲ್ಲಿ ಬುಧವಾರ ಜರುಗಿದ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಈ ಭಾರಿ ನಾಲ್ಕು ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು, ಮಣ್ಣಿನ ಫಲವತ್ತತೆಯ ಪರೀಕ್ಷೆ, ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಬೈಂದೂರು ರೋಟರಿ ಕ್ಲಬ್ ಗುಣಾತ್ಮಕ ಕಾರ್ಯಕ್ರಮ ಆಯೋಜನೆಗೆ ಒತ್ತು ನೀಡಿರುವುದು ಸಂತಸ ತಂದಿದೆ ಎಂದರು. ಬೈಂದೂರು ರೋಟರಿ ಕ್ಲಬ್ಗೆ ಭೇಟಿ ನೀಡಿದ ಗವರ್ನರ್ ಅವರನ್ನು ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಶಿರೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾದ ಸ್ಯಾನಿಟರಿ ನ್ಯಾಪ್ಕಿನ್ ಡೆಸ್ಟ್ರಾಯ್ ಯುನಿಟ್ ಉದ್ಘಾಟಿಸಿದರು. ಬಳಿಕ ಕ್ಲೋಸ್ ಡೋರ್ ಮಿಟಿಂಗ್, ಕ್ಲಬ್ ಅಸ್ಸೆಂಬ್ಲಿಯಲ್ಲಿ ಭಾಗವಹಿಸಿದರು. ಬೈಂದೂರು ರೋಟರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಈ ವರ್ಷದ ಮೊದಲ ಕಂಬಳವು ಕಂಬಳದ ಭೀಷ್ಮ ದಿ.ಸುರೇಶ ಪೂಜಾರಿ ಕಾಡಿನತಾರು ಸ್ಮರಣಾರ್ಥ ಬೈಂದೂರು ತಾಲೂಕು ಕಂಬಳ ಸಮಿತಿ ಸಹಕಾರದಲ್ಲಿ ಮಿಯ್ಯಾಣಿ ಕಾಡಿನತಾರು ಸೂರ್ಯ ಕಂಬಳೋತ್ಸವ ಸಂಭ್ರಮ ಸಡಗರದಲ್ಲಿ ನೆರವೇರಿತು. ಕೇಂದ್ರ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಸದಸ್ಯ ಯು.ಎಸ್.ಯೋಗೀಶ ಕುಮಾರ್ ಕಂಬಳೋತ್ಸವ ಉದ್ಘಾಟಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತರಾಮ ಶೆಟ್ಟಿ ಬಾರ್ಕೂರು, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಪೊಲೀಸ್ ಸಿಬ್ಬಂದಿ ಶಂಕರ ಪೂಜಾರಿ ಕಾಡಿನತಾರು ಹಾಗೂ ಮರಳಿ ಮನಸಾಗಿದೆ ಸಿನಿಮಾ ತಂಡ ಮತ್ತಿತರರು ಉಪಸ್ಥಿತರಿದ್ದರು. ಸಂತೋಷ ಕಾಡಿನತಾರು ಸಂಘಟಿಸಿದ್ದರು. ಕಂಬಳೋತ್ಸವದಲ್ಲಿ ಸುಮಾರು ಜತೆ ಕೋಣಗಳು 50 ಪಾಲ್ಗೊಂಡಿದ್ದವು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲೆಯ ಮೂಲಭೂತ ಅವಶ್ಯಕತೆಗಳ ಪೂರೈಕೆಯ ಸಮಸ್ಯೆಗೆ ಇಲ್ಲಿಯ ಐದು ಜನ ಬಿಜೆಪಿ ಶಾಸಕರ ನಿಷ್ಕ್ರೀಯತೆಯೇ ಕಾರಣ. ಜನ ಶಾಸಕರುಗಳನ್ನು ಆಯ್ಕೆ ಮಾಡಿದ್ದು ಅವರ ಬೇಡಿಕೆ, ಆಗ್ರಹ, ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಶ್ನೆ ಹಾಕಿ, ಶೂನ್ಯ ವೇಳೆ, ನಿಯಮ 330ರ ಅಡಿ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಒದಗಿಸಿಕೊಡಲು. ಆದರೆ ಜಿಲ್ಲೆಯ ಶಾಸಕರುಗಳು ಪ್ರಾಮಾಣಿಕ ಪ್ರಯತ್ನ ಮಾಡುವುದನ್ನು ಬಿಟ್ಟು ಧರಣಿ ನಿರತರ ಜೊತೆ ಕೂತು ಫೋಟೋ ತೆಗೆಸಿಕೊಳ್ಳುವ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆರೋಪಿಸಿದ್ದಾರೆ. ಮರಳು, ಜಲ್ಲಿ, ಕಲ್ಲು, ಮಣ್ಣು, ಚಿಪ್ಪು ಮೊದಲಾದವುಗಳ ಸಾಗಣಿಕೆಗೆ ಕಾನೂನು ಮೀರಿ ಅವಕಾಶ ನೀಡಲು ಜಿಲ್ಲಾಡಳಿತ, ಪೊಲೀಸ್ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರಿಗೂ ಸಾಧ್ಯವಿಲ್ಲ. ಇವರ ಕೆಲಸ ಶಾಸಕಾಂಗ ರೂಪಿಸಿದ ಕಾನೂನುಗಳನ್ನು ಪಾಲಿಸುವುದು. ಕರಾವಳಿ ಜಿಲ್ಲೆಯ ಬಹುವರ್ಷಗಳ ಗಣಿ ಮತ್ತು ಖನಿಜ ಕಾಯಿದೆಯಲ್ಲಿನ ಸಡಿಲೀಕರಣದ ಬೇಡಿಕೆಗೆ ಸ್ಪಂದಿಸಬೇಕಾದ ಶಾಸನ ಸಭೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿಲ್ಲೆಯ ಲಾರಿ ಚಾಲಕ – ಮಾಲೀಕರ ಸಂಕಷ್ಟಗಳಿಗೆ ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಕೋಟ, ಕೋಟೇಶ್ವರ, ಹೆಮ್ಮಾಡಿ, ಬೈಂದೂರು, ಬ್ರಹ್ಮಾವರ, ಕಾರ್ಕಳ ಸೇರಿದಂತೆ ವಿವಿಧ ಭಾಗಗಳಲ್ಲಿ ಲಾರಿ ಮಾಲೀಕರು ಹಾಗೂ ಚಾಲಕರು ಕಟ್ಟಡ ಸಾಮಾಗ್ರಿ ಸಾಗಾಟ ಸ್ಥಗಿತಗೊಳಿಸಿ ಬುಧವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಮರಳು, ಕಲ್ಲು, ಕಬ್ಬಿಣ, ಕೆಂಪು ಕಲ್ಲು, ಜೆಲ್ಲಿ, ಕೆಂಪು ಮಣ್ಣು ಸಾಗಿಸುವ ವ್ಯವಹಾರದಲ್ಲಿ 5000ಕ್ಕೂ ಅಧಿಕ ವಾಹನಗಳು ತೊಡಗಿಕೊಂಡಿದೆ. ಸಾಗಾಟ ಪರವಾನಿಗೆ, ಟ್ರಿಪ್ ಶೀಟ್ ಮೊದಲಾದ ಕಾರಣಗಳನ್ನು ಮುಂದೊಡ್ಡಿ ಪೊಲೀಸರು ವಾಹನ ವಶಪಡಿಸಿಕೊಳ್ಳುತ್ತಿದ್ದಾರೆ. ಲಾರಿ ಮಾಲಿಕರಿಗೆ 50,000ಕ್ಕೂ ಅಧಿಕ ದಂಡ ವಿಧಿಸುತ್ತಿದ್ದಾರೆ. ವಾಸ್ತವ ಅರಿವಿರುವ ಸರಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸ್ಪಂದಿಸದೇ ಮೌನ ವಹಿಸಿದ್ದು, ಲಾರಿ ಮಾಲೀಕ ಚಾಲಕರನ್ನು ಸಂಕಷ್ಟಕ್ಕೆ ನೂಕಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ. ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲ:ಜಿಲ್ಲಾಡಳಿತ ಕಾನೂನು ಬಿಗುಗೊಳಿಸಿರುವುದರಿಂದ ಮರಳು, ಕಲ್ಲು, ಕೆಂಪು ಕಲ್ಲು, ಜೆಲ್ಲಿ, ಕೆಂಪು ಮಣ್ಣು ಮೊದಲಾದ ಕಟ್ಟಡ ಸಾಮಾಗ್ರಿಗಳನ್ನು ತೆಗೆಯುವ ಕಾರ್ಯದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಸ್ರೂರು ಶ್ರೀ ಶಾರದಾ ಪದವಿಪೂರ್ವ ಕಾಲೇಜು ಆಯೋಜಿಸಿದ ಅಂತರ್ ಕಾಲೇಜು ಭಕ್ತಿಗೀತೆ ಸ್ಪರ್ಧೆಯಲ್ಲಿ ಹೆಮ್ಮಾಡಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದ ಕೇದಾರ್ ಮರವಂತೆ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ. ಇದನ್ನೂ ಓದಿ:► ಸದ್ಗುರು ಜಗಜೀತ್ ಸಿಂಗ್ ಸಂಗೀತ ಸ್ಪರ್ಧೆ: ಕೇದಾರ್ ಮರವಂತೆ ದ್ವಿತೀಯ ಸುತ್ತಿಗೆ ತೇರ್ಗಡೆ – https://kundapraa.com/?p=69205 .

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶ್ರೀ ವಿನಾಯಕ ಯುವಕ ಮಂಡಲ(ರಿ)ಸಾಬ್ರಕಟ್ಟೆ-ಯಡ್ತಾಡಿ ಕೊಡಮಾಡುವ ೨೦೨೩ನೇ ಸಾಲಿನ ಶ್ರೀವಿನಾಯಕ ಸಾಧನಶ್ರೀ ಪುರಸ್ಕಾರಕ್ಕೆ ಈಜುಪಟು, ಮುಳುಗು ತಜ್ಞ, ಸಮಾಜ ಸೇವೆಯ ಮೂಲಕ ಸಮಾಜಕ್ಕೆ ಮಾದರಿಯಾಗಿರುವ ಅಪತ್ಭಾಂಧವ ಈಶ್ವರ್ ಮಲ್ಪೆ ಅವರನ್ನು ಆಯ್ಕೆ ಮಾಡಲಾಗಿದೆ. 900ಕ್ಕೂ ಮಿಕ್ಕಿ ಶವವನ್ನು ಮೇಲೆಕೆತ್ತಿದ, ಅದೆಷ್ಟೋ ಜೀವಗಳನ್ನು ರಕ್ಷಿಸಿದ, ಬಂದರಿನಲ್ಲಿ ಮುಳುಗಿದ ವಾಹನಗಳನ್ನು, 200ಕ್ಕೂ ಮಿಕ್ಕಿ ಮೊಬೈಲ್ ಪೋನುಗಳನ್ನು, ಬೋಟುಗಳ ಬಿಡಿ ಭಾಗಗಳನ್ನು ಮೇಲೆ ತರುವಲ್ಲಿ ಅವರ ಸಾಹಸ ಅನನ್ಯವಾದುದು. ಇಂತಹ ಸಾಹಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಈಶ್ವರ್ ಮಲ್ಪೆ ಅವರನ್ನು ೨೦೨೩ನೇ ಸಾಲಿನಲ್ಲಿ ಆಯ್ಕೆ ಮಾಡಲಾಗಿದೆ. ಪುರಸ್ಕಾರ ಪ್ರದಾನ ಕಾರ್ಯಕ್ರಮ ಆಕ್ಟೋಬರ್ 20ರ ಸಂಜೆ 7:30ಕ್ಕೆ ಮಹಾತ್ಮ ಗಾಂಧಿ ಫ್ರೌಡಶಾಲೆಯಲ್ಲಿ ಸಾಬ್ರಕಟ್ಟೆಯಲ್ಲಿ ನಡೆಯುವ ಶ್ರೀ ಸಾರ್ವಜನಿಕ ಶಾರದೋತ್ಸವದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಗಣ್ಯತಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದೆಂದು ಯುವಕ ಮಂಡಲದ ಅಧ್ಯಕ್ಷ ನಂದೀಶ್ ನಾಯ್ಕ, ಕಾರ್ಯದರ್ಶಿ ರಾಜೇಶ್ ನಾಯ್ಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿಪೂರ್ವ ಕಾಲೇಜು ಕೊಲ್ಲೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕರ ನೆಟ್ ಬಾಲ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಂಡದಲ್ಲಿ ವೀರೇಶ್, ಚರಣ್, ನಾಗರಾಜ್, ಆದಿತ್ಯ, ಶಮಿತ್, ಯುವರಾಜ್, ರಿತೇಶ್, ನವೀನ್ ಶರಣ್ ಮತ್ತು ಧನುಷ್ ಪ್ರತಿನಿಧಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ನಾಗರಾಜ್ ಶೆಟ್ಟಿ ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಬಳಗವು ಅಭಿನಂಧಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮನುಷ್ಯನ ಅರ್ಧ ವ್ಯವಹಾರಗಳು ಭೌತಿಕ ಪ್ರಪಂಚದಲ್ಲಿ ನಡೆದರೆ, ಉಳಿದರ್ಧ ಸೌಂದರ್ಯೋಪಾಸನೆಗೆ ಪೂರಕವಾದ ಭಾವ ಪ್ರಪಂಚದಲ್ಲಿ ನಡೆಯಬೇಕು. ಬದುಕು ಕೇವಲ ಭೌತಿಕ ಪ್ರಪಂಚಕ್ಕೆ ಮಾತ್ರ ಸೀಮಿತವಾದರೆ ಅದು ಶುಷ್ಕವಾಗುತ್ತದೆ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು. ನಾಗೂರಿನ ಕೆಎಎಸ್ ಆಡಿಟೋರಿಯಂನಲ್ಲಿ ನಡೆದ ಕುಸುಮ ಸಂಸ್ಥೆ ಬೆಳ್ಳಿಹಬ್ಬ ಸಂಭ್ರಮ, ನವೀಕೃತ ಪೆಟಲ್ಸ್ ಆರ್ಟ್ ಗ್ಯಾಲರಿ ಅನಾವರಣ, ಕಲಾ ಗಣಪ-2 ಸ್ಪರ್ಧೆಯ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಕುಸುಮ ೨೫ನೆ ವರ್ಷಾಚರಣೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಸೌಂದರ್ಯೋಪಾಸನೆ, ಕಲಾಸ್ವಾದನೆಯ ಮಹತ್ವವನ್ನು ಸಾರಿದ ಕವಿ ರವೀಂದ್ರರ ರೂಪಕವೊಂದನ್ನು ಉಲ್ಲೇಖಿಸಿದ ಜನಾರ್ದನ ಅವರು, ಉದ್ಯಮಿ ಎಚ್. ನಳಿನ್ಕುಮಾರ ಶೆಟ್ಟಿ 25 ವರ್ಷಗಳ ಹಿಂದೆ ಸ್ಥಾಪಿಸಿದ ತಮ್ಮ ಕುಸುಮ ಫೌಂಡೇಶನ್ ಆಶ್ರಯದಲ್ಲಿ ನಡೆಸುತ್ತ ಬಂದಿರುವ ವಿವಿಧ ಕಲಾ ತರಗತಿಗಳು ಮತ್ತು ಕಾರ್ಯಕ್ರಮಗಳು ನಾಗೂರು ಪರಿಸರವನ್ನು ಕಲಾಸಮೃದ್ಧಗೊಳಿಸಿವೆ ಎಂದು ಹೇಳಿದರು. ಕುಂದಾಪುರ ಮಿಡ್ಟೌನ್ ರೋಟರಿ ಕ್ಲಬ್ ಅಧ್ಯಕ್ಷ ಸಂತೋಷಕುಮಾರ ಶೆಟ್ಟಿ ಕಾವ್ರಾಡಿ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಅರವಿಂದ ಪೂಜಾರಿ ಅವರನ್ನು ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ. ಬೈಂದೂರು ತಾಲೂಕು ನಾಡ ಪಡುಕೋಣೆಯವರಾದ ಅರವಿಂದ ಪೂಜಾರಿ ಅವರು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ, ಕಾರ್ಯದರ್ಶಿಯಾಗಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಇದೀಗ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದವಿ ದೊರೆತಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಉಳ್ಳೂರು ಕಂದಾವರ ಗುಂಡಾಡಿಯ ನಿವಾಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವನ ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದಿರುವುದನ್ನು ಮನಗಂಡು ಸೆಲ್ಕೋ ಸೋಲಾರ್ ವತಿಯಿಂದ ಉಚಿತವಾಗಿ ಎರಡು ಸೋಲಾರ್ ಲೈಟ್ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸಿಸ್ಟಮ್ ಅಳವಡಿಸಲಾಯಿತು. ಬಸ್ರೂರು ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಮಣಿಕಂಠನ ತಂಗಿ ಐಶ್ವರ್ಯ ವಿದ್ಯಾಭ್ಯಾಸ ತ್ಯಜಿಸಿ ತಾಯಿಯೊಂದಿಗೆ ಮನೆಯಲ್ಲಿ ಗೇರು ಬೀಜ ಸುಲಿಯುವ ಕೆಲಸ ಮಾಡುತ್ತಿದ್ದಾಳೆ. ಸೋಲಾರ್ ಲೈಟ್ ಅಳವಡಿಸುವ ಕಾರ್ಯಕ್ರಮದಲ್ಲಿ ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನುಪಮಾ ಶೆಟ್ಟಿ, ಸೆಲ್ಕೋ ಸೋಲಾರ್ ಸಂಸ್ಥೆಯ ಏರಿಯ ಮ್ಯಾನೇಜರ್ ಶೇಖರ್ ಶೆಟ್ಟಿ , ಶಾಖಾ ಪ್ರಬಂಧಕರಾದ ಮಂಜುನಾಥ್, ಧರ್ಮಸ್ಥಳ ಗ್ರಾಮಾಅಭಿವೃದ್ಧಿ ಯೋಜನೆಯ ಬಸ್ರೂರು ವಲಯದ ವಲಯ ಅಧ್ಯಕ್ಷ ಅಶೋಕ್ ಕೆರೆಕಟ್ಟೆ, ವಲಯದ ಮೇಲ್ವಿಚಾರಕಿ ಶಕುಂತಲಾ, ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ, ಉದಯ್ ಹೇರಿಕೆರೆ, ಸೆಲ್ಕೋ ಸೋಲಾರ್ ಸೇವಾ ಪ್ರತಿನಿಧಿ ಮಂಜುನಾಥ್ ಶೆಟ್ಟಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ…

Read More