ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತೀರಾ ಗ್ರಾಮೀಣ ಭಾಗದಲ್ಲಿ ಸಂಪರ್ಕ ಸಾಧನೆಗಳ ಕೊರತೆ ಇದ್ದರೂ ಕಲೆ ಸಾಹಿತ್ಯ ಸಾಂಸ್ಕೃತಿಕ ಸಂವಹನಕ್ಕೆ ಕೊರತೆಯಾಗದಂತೆ ಶ್ರಮಿಸುತ್ತಿರುವ ಇಲ್ಲಿನ ಪ್ರತಿಭೆಗಳು ಹಾಗೂ ಸಂಘಟಕರ ಸಾಧನೆ ಅನನ್ಯವಾದುದು ಎಂದು ಉದ್ಯಮಿ ರವೀಂದ್ರ ಕಿಣಿ ಕಂಚಿಕಾನು ಹೇಳಿದರು. ಅವರು ಸಂಚಲನ ರಿ. ಹೊಸೂರು ಆಶ್ರಯದಲ್ಲಿ ಆಯೋಜಿಸಲಾದ 3 ದಿನಗಳ ರಾಜ್ಯಮಟ್ಟದ ನಾಟಕೋತ್ಸವ ರಂಗ ಸಂಚಲನ – 2023 ಉದ್ಘಾಟಿಸಿ ಮಾತನಾಡಿದರು. ಸ್ಪಂದನಾ ರಿ. ನಾಗರ ನಾಟಕ ತಂಡದ ನಿರ್ದೇಶಕಿ ಎಂ.ವಿ ಪ್ರತಿಭಾ ಶುಭಾಶಂಸನೆಗೈದರು. ಸಂಚಲನ ಕಾರ್ಯಾಧ್ಯಕ್ಷ ತಿಮ್ಮ ಮರಾಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಲ್ಲಿಬಾರು ಶಾಲೆಯ ಮುಖ್ಯ ಶಿಕ್ಷಕ ಎಸ್. ಮಹಾಬಲೇಶ್ವರ್, ಅತ್ಯಾಡಿ ಶಾಲಾ ಮುಖ್ಯ ಶಿಕ್ಷಕ ಹಾಲೇಶ್ ಡಿ.ಆರ್., ಉದ್ಯಮಿ ಮಹಾದೇವ ಪೂಜಾರಿ ಕಿಸ್ಮತಿ, ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಮಹಾದೇವ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಸಂಚಲನ ರಿ. ಹೊಸೂರು ಇದರ ಸಂಚಾಲಯ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಾಜು ಮರಾಠಿ ಸ್ವಾಗತಿಸಿ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಮುದಾಯ ಕುಂದಾಪುರದ ತಿಂಗಳ ಓದು ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ಕೆವಿ ತಿರುಮಲೇಶ್ ರವರಿಗೆ ನುಡಿ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕೆವಿ ತಿರುಮಲೇಶ್ ರವರ ಆರ್ತರು, ಕೀರ್ತನೆ, ರಾಜಧಾನಿಯ ಭಾಷೆ, ನೂರು ಮಂದಿ ಮನುಷ್ಯರು, ಮುಖಾಮುಖಿ, ಹಾಸಿಗೆ, ಮಂಡೂಕ ರಾಜ್ಯ, ಸರ್ಕಸ್, ಪೆಂಟಯ್ಯನ ಅಂಗಿ ಮುಂತಾದ ಕವಿತೆಗಳನ್ನು ಸಮುದಾಯ ಕುಂದಾಪುರದ ಸದಸ್ಯರು ವಾಚಿಸಿದರು. ಸಾಹಿತಿ ಮುರುಳಿಧರ ಉಪಾಧ್ಯಾಯ ಅವರು ಕೆ ವಿ ತಿರುಮಲೇಶ್ ರವರ ಕವಿತೆಗಳು ಬದುಕು ಮತ್ತು ಬರಹ ವಿಮರ್ಶೆ ಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅನೇಕ ಸಾಹಿತಿಗಳು ಸಾಹಿತ್ಯ ಅಭಿಮಾನಿಗಳು ಭಾಗವಹಿಸಿದ್ದರು. ಸಮುದಾಯ ಕುಂದಾಪುರದ ಅಧ್ಯಕ್ಷರಾದ ಡಾ. ಸದಾನಂದ ಬೈಂದೂರು ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಣೆ ಮಾಡಿ ಧನ್ಯವಾದಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಭಿನಯ ವಿಶಾರದ, ರಂಗಸ್ಥಳದ ರಾಜ ಮೊದಲಾದ ಬಿರುದುಗಳಿಂದ ಖ್ಯಾತರಾಗಿರುವ ಯಕ್ಷಗಾನದ ಸವ್ಯಸಾಚಿ ಕಲಾವಿದ 7 ದಶಕಗಳ ವೃತ್ತಿಪರ ತಿರುಗಾಟ ನಡೆಸಿರುವ ಅರುವ ಕೊರಗಪ್ಪ ಶೆಟ್ಟಿ ಅವರು ಪುನರೂರಿನಲ್ಲಿ ಮಾ.5 ರಂದು ನಡೆಯುವ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಯಕ್ಷಗಾನ ಕಲಾವಿದರಿಗೆ, ಕಲೆಗೆ ಗೌರವ ನೀಡುವುದಕ್ಕೆ ಮತ್ತು ರಂಗದಲ್ಲಿ ಅರುವ ಅವರ ಆಶು ಸಾಹಿತ್ಯಕ್ಕೆ ಗೌರವವಾಗಿ ಈ ಆಯ್ಕೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. 84 ರ ಹರೆಯದ ಅವರು ಪ್ರಸ್ತುತ ಕಿಶನ್ ಹೆಗ್ಡೆ ಅವರ ಸಂಚಾಲಕತ್ವದ ಹಿರಿಯಡ್ಕ ಮೇಳದ ಪ್ರಧಾನ ಕಲಾವಿದರಾಗಿದ್ದಾರೆ. ತೆಂಕುತಿಟ್ಟಿನ ಪ್ರತಿನಾಯಕ ಪಾತ್ರಧಾರಿಯಾಗಿ ತುಳು ಮತ್ತು ಕನ್ನಡ ಭಾಷೆಯ ಪ್ರದರ್ಶನಗಳಲ್ಲಿ ಅದ್ಬುತ ಪ್ರತಿಭೆ ಮೆರೆದಿದ್ದಾರೆ. ಬಬ್ಬಯ್ಯ ಶೆಟ್ಟಿ ಮತ್ತು ಕಾಂತಕ್ಕೆ ದಂಪತಿಯ ಸುಪುತ್ರರಾಗಿ ಅರುವದಲ್ಲಿ 1940 ನವಂಬರ್ 24 ರಂದು ಜನಿಸಿದರು. ಕೊರಗಪ್ಪ ಶೆಟ್ಟರು ಪ್ರಾಥಮಿಕ ಹಂತದವರೆಗೆ ಶಿಕ್ಷಣ ಪಡೆದಿದ್ದು ಅನುಭವಿ ಕಲಾವಿದರಾಗಿ ಮೆರೆಯುತ್ತಿದ್ದಾರೆಬಾಲ್ಯದಲ್ಲಿ ಯಕ್ಷಗಾನದತ್ತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಶ್ರೀ ಮೂಕಾಂಬಿಕಾ ದೇಳದ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ದಿನಾಂಕ 30-04-2023 ರಿಂದ 11-05-2023ರ ತನಕ ನಡೆಸುವು ಬಗ್ಗೆ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ಹೇಳಿದರು. ಅವರು ದೇವಳದ ಆಡಳಿತ ಕಛೇರಿಯಲ್ಲಿ ಹಮ್ಮಿಕೊಂಡ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು 1972ರಲ್ಲಿ ಹಾಗೂ 30 ವರ್ಷಗಳ ನಂತರ 2002ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ಇದೀಗ 21 ವರ್ಷಗಳ ನಂತರ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ಸಮಯ ಒದಗಿ ಬಂದಿದೆ. ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ನಡೆಸಬೇಕೆಂದು ಶಾಸ್ತ್ರ ಹೇಳುತ್ತದೆ. ಅನಿವಾರ್ಯ ಕಾರಣಗಳಿಂದ ಅಷ್ಟಬಂಧ ನಡೆಸಲು ಸಾಧ್ಯವಾಗಿರಲಿಲ್ಲ ಈಗ ಕಾಲ ಕೂಡಿ ಬಂದಿದೆ. ಕ್ಷೇತ್ರದ ತಂತ್ರಿಗಳು, ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರು, ಇಲಾಖಾ ಆಗಮ ಪಂಡಿತರು ಹಾಗೂ ಊರ ಪರ ಊರ ಭಕ್ತರ ಸಲಹೆ-ಸೂಚನೆಯನ್ನು ಪಡೆದು ಮಾನ್ಯ ಜಿಲ್ಲಾಧಿಕಾರಿಯವರ, ಮಾನ್ಯ ಧಾರ್ಮಿಕ ದತ್ತಿ ಆಯುಕ್ತರ ಹಾಗೂ ಸರ್ಕಾರದಿಂದ…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಮರವಂತೆಯಲ್ಲಿ ಫೆ.25ರಂದು ನಡೆದ ಅಪಘಾತದಿಂದಾಗಿ ಗಂಭೀರ ಗಾಯಗೊಂಡು ಮೆದುಳು ನಿಷ್ಕ್ರೀಯವಾಗಿದ್ದ ಉಪ್ಪುಂದ ಮಡಿಕಲ್ ನಿವಾಸಿ, ಶಿಕ್ಷಕಿ ಶಿಲ್ಪಾ ಪ್ರಸನ್ನ ಕುಮಾರ್ (44ವ) ಅವರ ಸಾವಿನ ನೋವಿನ ನಡುವೆಯೂ, ಅವರ ಕುಟುಂಬದ ಸಕಾಲಿಕ ನಿರ್ಧಾರದಿಂದಾಗಿ 6 ಮಂದಿಯ ಜೀವ ಉಳಿಸಲು ಸಾಧ್ಯವಾಗಿದೆ. ಘಟನೆಯ ವಿವರ:ಮರವಂತೆ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದ ಶಿಲ್ಪಾ ಅವರು ಶಾಲೆ ಮುಗಿಸಿ ತಮ್ಮ ಸ್ಕೂಟಿಯಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಕಾರಿಗೆ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆ ಬಳಿಕ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ರಕ್ಷಿಸಲು ಎಲ್ಲಾ ಪ್ರಯತ್ನದ ನಡುವೆಯೂ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಬಳಿಕ ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಅನುಸಾರ ಶಿಲ್ಪಾ ಅವರನ್ನು ಎರಡು ಭಾರಿ ಪರಿಶೀಲಿಸಿ, ಅಧಿಕೃತವಾಗಿ ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು. 6 ಮಂದಿಗೆ ಜೀವದಾನ:ಮೆದುಳು ನಿಷ್ಕ್ರೀಯಗೊಂಡಿರುವುದನ್ನು ವೈದ್ಯರು ಘೋಷಿಸಿದ ಬಳಿಕ ಅವರ ಪತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.27: ತಾಲೂಕಿನ ಹೆಮ್ಮಾಡಿ ಸಮೀಪದ ಕನ್ನಡಕುದ್ರು ಮೂವತ್ತುಮುಡಿ ಬಳಿಯ ಹೆದ್ದಾರಿಯಲ್ಲಿ ರಿಕ್ಷಾ ಹಾಗೂ ಪಿಕಪ್ ನಡುವಿನ ಅಪಘಾತದಲ್ಲಿ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹೆಮಾಡಿ ಗ್ರಾ.ಪಂ. ಸದಸ್ಯೆ ಕುಸುಮಾ (48) ಸಾವನ್ನಪ್ಪಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ಸೊಂಟ, ಬೆನ್ನಿಗೆ, ಮೈಕೈಗೆ ಗಂಭೀರ ಗಾಯಗೊಂಡಿದ್ದ ಕುಸುಮಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಫೆ. 26ರಂದು ಸಾವನ್ನಪ್ಪಿದ್ದಾರೆ. ಅವರು ಹೆಮ್ಮಾಡಿ ಗ್ರಾ.ಪಂ.ನ ಎರಡನೇ ವಾರ್ಡ್ ಆಗಿರುವ ಸಂತೋಷ್ನಗರ ಭಾಗದ ಸದಸ್ಯೆಯಾಗಿದ್ದರು. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಫೆ. 25ರ ಸಂಜೆ 4 ಗಂಟೆಯ ಸುಮಾರಿಗೆ ತಾಸಿ ಕಡೆಯಿಂದ ಕುಂದಾಪುರ ಹೆದ್ದಾರಿಯ ಕನ್ನಡಕುದು ಬಳಿ ಆಟೋ ರಿಕ್ಷಾಗೆ ತಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ದರ್ಶನ್ ಚಲಾಯಿಸುತ್ತಿದ್ದ ಪಿಕಪ್ ವಾಹನ ಢಿಕ್ಕಿಯಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ನಾರಾಯಣ, ಪ್ರಯಾಣಿಸುತ್ತಿದ್ದ ಕುಸುಮಾ ಗಂಭೀರವಾಗಿ ಗಾಯಗೊಂಡಿದ್ದರು. ಇವರೊಂದಿಗಿದ್ದ ಪತಿ ಚಂದ್ರಶೇಖರ ಮೆಂಡನ್, ಮಕ್ಕಳಾದ ಚಿರಾಗ್ (17) ಹಾಗೂ ಜಾಹ್ನವಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಫೆ.27: ಇಲ್ಲಿನ ಹೊಸ್ ಬಸ್ ನಿಲ್ದಾಣದ ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಳವಡಿಸಲು ವಿವಿಧ ಸಂಘ ಸಂಸ್ಥೆಗಳಿಂದ ಒಟ್ಟು ನಾಲ್ಕು ಬ್ಯಾರಿಕೇಡ್’ಗಳನ್ನು ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ನೀಡಲಾಯಿತು. ತಾಲೂಕಿನ ಬೈಂದೂರು ಅರ್ಬನ್ ಸೌಹಾರ್ದ ಸಹಕಾರಿ ಸಂಘ ನಿ., ಶ್ರೀ ರಾಮ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಜೆಸಿಐ ಬೈಂದೂರು ಸಿಟಿ ಹಾಗೂ ಇಲೆಕ್ಟ್ರಿಕ್ ಕಂಟ್ರಾಕ್ಟರ್ ಸಂಘ ಬೈಂದೂರು ಪ್ರಾಯೋಜಕತ್ವದಲ್ಲಿ 4 ಬ್ಯಾರಿಕೇಡ್ ಗಳನ್ನು ಬೈಂದೂರು ಠಾಣಾಧಿಕಾರಿ ನಿರಂಜನ್ ಗೌಡ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಎಸ್. ರಾಜು ಪೂಜಾರಿ, ಮಣಿಕಂಠ ಎಸ್. ದೇವಾಡಿಗ, ಮಂಜು ಶೇರುಗಾರ್ , ನರೇಂದ್ರ ಶೇಟ್ , ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನವೀನ್ ಕುಮಾರ್, ಸವೀತಾ ದಿನೇಶ್, ಗಣೇಶ್ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಫೆ.27: ತಾಲೂಕಿನ ಪಡುವರಿಯ ನಿವೃತ್ತ ಶಿಕ್ಷಕ, ಅಕ್ಕಿಯಂಗಡಿ ಮನೆ ಶ್ರೀನಿವಾಸ ಮಾಸ್ಟರ್ (79ವ) ಸೋಮವಾರ ಬೆಳಿಗ್ಗೆ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಚಲ್ಲ ಮಾಸ್ಟರ್ ಎಂದೇ ಪ್ರಸಿದ್ಧರಾಗಿದ್ದ ಶ್ರೀನಿವಾಸ್ ಮಾಸ್ಟರ್ ಅವರು ಬಾಡ ಸರಕಾರಿ ಪ್ರಾಥಮಿಕ ಶಾಲೆ, ಶಿರೂರು ಪ್ರೌಢಶಾಲೆ ಹಾಗೂ ನಿವೃತ್ತಿ ಬಳಿಕ ಬೈಂದೂರು ಮೊರಾರ್ಜಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕವಾಗಿಯೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಶ್ರೀನಿವಾಸ ಮಾಸ್ಟರ್ ಅವರು ಒಂದು ಅವಧಿಗೆ ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷರಾಗಿದ್ದರು. ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟಿನ ಟ್ರಸ್ಟೀಯಾಗಿ ಸೇವೆ ಸಲ್ಲಿಸಿದ್ದರು. ಶ್ರೀನಿವಾಸ್ ಮಾಸ್ಟರ್ ಅವರು ಪತ್ನಿ ಹಾಗೂ ಮೂವರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಬಂಧುಗಳು, ವಿಧ್ಯಾರ್ಥಿಗಳು ಮಿಡಿದಿದ್ದಾರೆ. ಅವರ ಅಂತಿಮ ವಿಧಿ ವಿಧಾನ ಮಾರ್ಚ್ 1ರ ಬೆಳಿಗ್ಗೆ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ 27: ಕೋಟದ ಮನಸ್ಮಿತ ಫೌಂಡೇಶನ್, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ನೀಡಲ್ಪಡುವ ಡಾ. ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿ 2023 ಹಾಗೂ ಮನಸ್ಮಿತ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ ಮಾ.24ಕ್ಕೆ ಯುವ ಮೆರಿಡಿಯನ್ ಒಪೆರಾ ಪಾರ್ಕಲ್ಲಿ ಜರಗಲಿದೆ. 2023ನೇ ಸಾಲಿನ ಎಸ್.ಜಾನಕಿ ರಾಷ್ಟ್ರೀಯ ಪ್ರಶಸ್ತಿಗೆ ಭಾರತದ ಖ್ಯಾತ ಗಾಯಕಿ ಪದ್ಮಭೂಷಣ ಕೆ.ಎಸ್.ಚಿತ್ರಾ ಹಾಗೂ ಮನಸ್ಮಿತ ಪುರಸ್ಕಾರಕ್ಕೆ ವೈದ್ಯಕೀಯಲೋಕದ ಸಂತ, ಸಾಹಿತಿ ಡಾ.ಸಿ.ಆರ್. ಚಂದ್ರಶೇಖರ್ ಆಯ್ಕೆಗೊಳಿಸಲಾಗಿದೆ. ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರವು ಒಂದು ಲಕ್ಷ ರೂ ನಗದು ಹಾಗೂ ಪ್ರಶಸ್ತಿಯನ್ನು ಒಳಗೊಂಡಿರುತ್ತದೆ. ಹಾಗೂ ಮನಸ್ಮಿತ ರಾಷ್ಟ್ರೀಯ ಪುರಸ್ಕಾರವು ಇಪ್ಪತ್ತೈದು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿಯನ್ನು ಒಳಗೊಂಡಿರುತ್ತದೆ. ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಸತೀಶ್ ಪೂಜಾರಿ ನೇತ್ರತ್ವದಲ್ಲಿ ಕರ್ನಾಟಕದ ಶ್ರೇಷ್ಟ ಗಾಯಕ, ಗಾಯಕಿಯರು ಹಾಗೂ ವಾದ್ಯ ವೃಂದದವರಿಂದ ಅದ್ದೂರಿ ಸಂಗೀತ ಸಂಜೆ ಮಾ.24ಕ್ಕೆ ಯುವ ಮೆರಿಡಿಯನ್ ಒಪೆರಾ ಪಾರ್ಕಲ್ಲಿ ಜರಗಲಿದೆ. ಎಲ್ಲರಿಗೂ ಉಚಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇನ್ನರ್ ವೀಲ್ ಕ್ಲಬ್ ಬೈಂದೂರು ಇವರಿಂದ ರತ್ತುಬಾಯಿ ಜನತಾ ಪ್ರೌಢಶಾಲೆಗೆ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು ಜಿಲ್ಲಾಧ್ಯಕ್ಷೆ ಕವಿತಾ ಸ್ಯಾನಿಟರಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಅವರು ಹಸ್ತಾಂತರಿಸಿದರು ದಾನಿಗಳಾದ ಶಾರದ ನಾರಾಯಣ ಮತ್ತು ಜ್ಯೋತಿ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಸ್ಥಾಪಕ ಅಧ್ಯಕ್ಷೆ ಚಂದ್ರಲೇಖ ಶೆಟ್ಟಿ ಹಾಗೂ ಇನ್ನರ್ ವೀಲ್ ಅಧ್ಯಕ್ಷೆ ಭಾನುಮತಿ ಬಿ.ಕೆ ಮತ್ತು ಕಾರ್ಯದರ್ಶಿ ಪಿಂಕಿ ಮೋಬಿ ಉಪಸ್ಥಿತರಿದ್ದರು ಶಾಲಾ ಮುಖ್ಯೋಪಾಧ್ಯಾಯ ಶ್ರೀಆನಂದ ಮದ್ದೋಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಚೈತ್ರಾ ನಿರೂಪಣೆ ಮಾಡಿದರು. ಪ್ರಕಾಶ್ ಮಾಕೋಡಿ ವಂದಿಸಿದರು
