ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇಲ್ಲಿನ ನಾಗೂರು ರೈಲ್ವೆ ಬ್ರಿಡ್ಜ್ ಕ್ರಾಸ್ ಮಾಡುತ್ತಿದ್ದ ವ್ಯಕ್ತಿ ರೈಲು ಬಡಿದು ಮೃತಪಟ್ಟಿದ್ದಾರೆ. ಹೇರೂರು ನಿವಾಸಿ ದಿವಾಕರ ಆಚಾರ್ಯ (56) ಮೃತಪಟ್ಟವರು. ಮರದ ಕೆಲಸ ಮಾಡಿಕೊಂಡಿದ್ದ ಅವರು ಭಾನುವಾರ ಸಂಜೆ ರೈಲ್ವೆ ಮೇಲ್ ಸೇತುವೆ ಕ್ರಾಸ್ ಮಾಡುತ್ತಿರುವ ವೇಳೆ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿರುವ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಯಡಾಡಿ ಮತ್ಯಾಡಿ ಗ್ರಾಮದಲ್ಲಿ ನಡೆದ ಚಿನ್ನದ ಸರ ಕಳವು ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರದ ಶಿರಿಯಾರ ಗ್ರಾಮದ ಶಿರಿಯಾರ ಅಂಗನವಾಡಿ ಬಳಿಯ ಗುಡ್ಡಟ್ಟು ಗಣಪತಿ ದೇವಸ್ಥಾನ ರಸ್ತೆಯ ಕಮಲಮ್ಮ ಮನೆಯಲ್ಲಿ ವಾಸವಾಗಿರುವ ಸುಬ್ರಹ್ಮಣ್ಯ ಭೋವಿ ಎಂಬವರ ಪುತ್ರ ಆನಂದ್ (26) ಎಂಬಾತನನ್ನು ಬಂಧಿಸಲಾಗಿದೆ. ಕುಂದಾಪುರದ ಯಡಾಡಿ ಮತ್ಯಾಡಿ ನಿವಾಸಿ ಬಸವ ಪೂಜಾರಿ (72) ನೀಡಿದ ದೂರಿನ ಪ್ರಕಾರ, ಸೆ.26 ರಂದು ಸಂಜೆ 7 ಗಂಟೆಯಿಂದ ಸೆ. 27 ರಂದು ಬೆಳಿಗ್ಗೆ 9 ಗಂಟೆಯ ನಡುವೆ ತಮ್ಮ ನಿವಾಸದಲ್ಲಿ ಗೋದ್ರೇಜ್ ಕಪಾಟಿನಲ್ಲಿ ಇರಿಸಲಾಗಿದ್ದ 18 ಗ್ರಾಂ ಚಿನ್ನದ ಸರವನ್ನು ಕಳವು ಮಾಡಲಾಗಿದೆ. ಕದ್ದ ಸರದ ಅಂದಾಜು ಮೌಲ್ಯ 1,45,000 ರೂ. ಅಂದಾಜಿಸಲಾಗಿದೆ. ದೂರಿನ ಆಧಾರದ ಮೇಲೆ ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಆರ್, ಪಿಎಸ್ಐ ಸುಧಾ ಪ್ರಭು ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಗ್ರಾಮಾಂತರದ ನೂತನ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಸಂತೋಷ್ ಕಾಯ್ಕಿಣಿ ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ. ಮುರ್ಡೇಶ್ವರದಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಬೈಂದೂರು ಸಬ್ ಇನ್ಸಪೆಕ್ಟರ್ ಆಗಿದ್ದ ಸಂತೋಷ್ ಕಾಯ್ಕಿಣಿ ಅವರು ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಬಳಿಕ ಕೋಟ, ಹೊನ್ನಾವರದ ಪೊಲೀಸ್ ಠಾಣೆ, ನಕ್ಸಲ್ ನಿಗ್ರಹ ದಳದ ಶೃಂಗೇರಿ ಕ್ಯಾಂಪ್‌ನಲ್ಲಿ ಸಬ್ ಇನ್ಸಪೆಕ್ಟರ್ ಸೇವೆ ಸಲ್ಲಿಸಿ ಅಲ್ಲಿಯೇ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಹೊಂದಿದ್ದರು. ಬಳಿಕ ಬೈಂದೂರು, ಮುರುಡೇಶ್ವರದಲ್ಲಿ ವೃತ್ತನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದ 131 ಸಿವಿಲ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ತಕ್ಷಣದಿಂದ ಜಾರಿಯಾಗುವಂತೆ ವರ್ಗಾವಣೆ ಮಾಡಲಾಗಿದೆ. ಕುಂದಾಪುರ ಗ್ರಾಮಾ೦ತರ ವೃತ್ತವು ಕಂಡೂರು, ಶಂಕರನಾರಾಯಣ, ಅಮಾಸೆಬೈಲು ಠಾಣಾ ವ್ಯಾಪ್ತಿಯನ್ನು ಒಳಗೊಂಡಿದೆ. ಇನ್ನು ಬೈಂದೂರಿನಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಸವಿತ್ರ ತೇಜ್ ಅವರನ್ನು ಮಂಗಳೂರು ಐಜಿಪಿ ಕಛೇರಿಗೆ ವರ್ಗಾವಣೆ ಮಾಡಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಡಾ. ಶಿವರಾಮ ಕಾರಂತ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆಯ ಅಂಗವಾಗಿ ಬ್ರಹ್ಮಗಿರಿಯ ರೆಡ್ ಕ್ರಾಸ್ ಭವನದಲ್ಲಿ ನಡೆದ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗಾಗಿನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ. ದೇವಾಡಿಗ ಪ್ರಥಮ ಸ್ಥಾನವನ್ನು ಗಳಿಸಿರುತ್ತಾನೆ. ಈತ ಗಂಗೊಳ್ಳಿಯ ಚಿತ್ರಕಲಾ ಶಿಕ್ಷಕ ಮಾಧವ ದೇವಾಡಿಗ ಮತ್ತು ಉಪನ್ಯಾಸಕಿ ಸಾವಿತ್ರಿ ಎಸ್. ದಂಪತಿ ಪುತ್ರ. ವಿದ್ಯಾರ್ಥಿಯ ಈ ಸಾಧನೆಗೆ ಶಾಲಾ ಎಸ್‌ಡಿಎಂಸಿ ಬಳಗ, ಮುಖ್ಯೋಪಾಧ್ಯಾಯರು, ಬೋಧಕ ಮತ್ತು ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಚಿತ್ರಪಾಡಿ ಈಶಲಾಸ್ಯ ನಾಟ್ಯಾಲಯ ಅವರಿಂದ ನೃತ್ಯಾಂಜಲಿ ಕಾರ್ಯಕ್ರಮ ಸಾಲಿಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಜರಗಿತು. ನೃತ್ಯಗುರು ವಿದ್ವಾನ್ ಸುಧೀರ್ ರಾವ್ ಕೊಡವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಅನಂತ ಪದ್ಮನಾಭ ಐತಾಳ ವಹಿಸಿದ್ದರು. ಈ ವೇಳೆ ನೃತ್ಯಗುರು ವಿದ್ವಾನ್ ಸುಧೀರ್ ರಾವ್ ಕೊಡವೂರು ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಸಾಂಸ್ಕೃತಿಕ ಚಿಂತಕಿ ಪ್ರೇಮ ಶೆಟ್ಟಿ ಉಪಸ್ಥಿತರಿದ್ದರು. ಈಶ್ಯಲಾಸ್ಯ ನಾಟ್ಯಾಲಯದ ಮುಖ್ಯಸ್ಥೆ ಅಮೃತ ವೆಂಕಟೇಶ ಮಯ್ಯ ಕಾರ್ಯಕ್ರಮ ಸಂಯೋಜಿಸಿದರು. ಡಾ. ಸ್ವಾತಿ ಉಪಾಧ್ಯ ನಿರೂಪಿಸಿ, ವಿದ್ವಾನ್ ಮಂಜುನಾಥ ಉಪಾಧ್ಯ ಸ್ವಾಗತಿಸಿ, ರಾಜ ಪಾರಂಪಳ್ಳಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಈಶಲಾಸ್ಯ ತಂಡದಿಂದ ನೃತ್ಯ ಕಾರ್ಯಕ್ರಮ ಜರಗಿತು. ಈಶಲಾಸ್ಯ ತಂಡದ ವನಿತಾ ಉಪಾಧ್ಯ ನಿರ್ವಹಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಹಾಗೂ ಓಡಿಶಾ ಅಥ್ಲೆಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಭುವನೇಶ್ವರದಲ್ಲಿ ನಡೆಯಲಿರುವ 40ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 14 ಬಾಲಕರು ಹಾಗೂ 07 ಬಾಲಕಿಯರು ಸೇರಿದಂತೆ ಒಟ್ಟು 21 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಂದೇ ಸಂಸ್ಥೆಯಿಂದ 21 ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ. ಬಾಲಕಿಯರ ವಿಭಾಗ:ಐಶ್ವರ್ಯ (ಚಕ್ರ ಎಸೆತ), ಗೀತಾ (400 ಮೀ.), ನಾಗಿನಿ (1000 ಮೀ.), ಚರಿಶ್ಮಾ (1000 ಮೀ.), ವೈಷ್ಣವಿ (ಉದ್ದ ಜಿಗಿತ), ಪ್ರೇಕ್ಷಿತಾ (ಜಾವಲಿನ್ ಎಸೆತ), ಮೇಘಾ (ತ್ರಯಥ್ಲಾನ್ ಸಿ). ಬಾಲಕರ ವಿಭಾಗ: ನೋಯಿಲ್ (ಉದ್ದ ಜಿಗಿತ), ಗುರು (ಹೆಪ್ಟಾಥ್ಲಾನ್), ದಯಾನಂದ (400 ಮೀ., 4 *400 ರಿಲೇ), ದರ್ಶನ (5 ಕಿ.ಮೀ ನಡಿಗೆ), ಕವೀಶ್ ನಾಯ್ಕ (ಜಾವಲಿನ್ ಎಸೆತ), ಮನಿಷ್ (ಉದ್ದ ಜಿಗಿತ), ಲೋಹಿತ್ ಗೌಡ (ಉದ್ದ ಜಿಗಿತ), ನವೀನ್ (ಉದ್ದ ಜಿಗಿತ), ಕೃಷ್ಣ ಪ್ರಕಾಶ (ಜಾವಲಿನ್ ಎಸೆತ), ಮೈಲಾರಿ (ಜಾವಲಿನ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಭಾರತ ಸರಕಾರದ ಶಾಸನಬದ್ದ ವಿಶ್ವ ವಿದ್ಯಾನಿಲಯಗಳಲ್ಲಿ ಪೂರ್ಣಕಾಲಿಕವಾಗಿ ಪಿ.ಎಚ್.ಡಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್) ಸಮುದಾಯದ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ೩ ವರ್ಷ ಅವಧಿಗೆ ಫೆಲೋಶಿಪ್ ಮೂಲಕ ನೀಡಲಾಗುತ್ತಿದ್ದು ರಾಜ್ಯದ ನಿವಾಸಿಯಾಗಿರುವ ೩೫ ವರ್ಷ ವಯಸ್ಸಿನೊಳಗಿನ ಅರ್ಹ ಅಭ್ಯರ್ಥಿಗಳು ನವಂಬರ್ 30ರ ಒಳಗಾಗಿ ಸೇವಾ ಸಿಂಧು ತಂತ್ರಾಶ https://sevasindhu.karnataka.gov.in/sevasindhu/departmentservice ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 8277799990 ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ್ ಜೀವನ್ ಮಿಷನ್ ಯೋಜನೆಯಡಿ ನಿಗದಿಯಾಗಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಪ್ರತಿ ಮನೆಗೂ ನೀರಿನ ಸಂಪರ್ಕ ಒದಗಿಸಿ ಶೇ. 100 ರಷ್ಟು ಪ್ರಗತಿ ದಾಖಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಹೇಳಿದರು. ಅವರು ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕುಡಿಯುವ ನೀರಿನ ಗುಣಮಟ್ಟ ಮೇಲ್ವಿಚಾರಣೆಯ ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಕಳ ಮತ್ತು ಕುಂದಾಪುರ ವ್ಯಾಪ್ತಿಯಲ್ಲಿ ಮೀಸಲು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆ ಮತ್ತು ಓವರ್ ಹೆಡ್ ಟ್ಯಾಂಕ್ ಕಾಮಗಾರಿಗಳಿಗೆ ಅರಣ್ಯ ಇಲಾಖೆಯ ಅನುಮತಿಯ ಅಗತ್ಯವಿದ್ದು, ಅರಣ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದು ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ತಿಗೊಳಿಸಬೇಕು. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ನಳ್ಳಿ ನೀರಿನ ಸಂಪರ್ಕಗಳ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಇಲ್ಲಿನ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಕಾರ್ಯಧ್ಯಕ್ಷ ಕರ್ನಾಟಕ ಸರಕಾರದ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಇವರ ಆಪ್ತ ಸಹಾಯಕ ರಾಜಶೇಖರ ಮೆಣಸಿನಕಾಯಿ ಹಾಗೂ ಕರ್ನಾಟಕ ಜಂಗಮ ಕ್ಷೇಮಭಿವೃದ್ಧಿ ಮಹಾಸಭಾದ ರಾಜ್ಯಾಧ್ಯಕ್ಷ ಬಂಗಾರೇಶ್ ಹಿರೇಮಠ್, ಕೆಪಿಸಿಸಿ ಪದಾಧಿಕಾರಿ ಸುರೇಶ ಸವಣೂರ, ಬಾಂಡ್ ಉದ್ಯಮಿ ರಫೀಕ್ ದೊಡ್ಡಮನಿ ಭೇಟಿ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಶಾಲು ಹೊದಿಸಿ ದೇವಿಯ ಪ್ರಸಾದವನ್ನು ನೀಡಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಬ್ರಾಯ ಜೋಗಿ, ಸುಧಾ ಎ. ಪೂಜಾರಿ, ಸುಭಾಸ್ ಶೆಟ್ಟಿ, ಗಣೇಶ್ ಕೆ ನೆಲ್ಲಿಬೆಟ್ಟು, ಜ್ಯೋತಿ ಡಿ ಕಾಂಚನ್, ರತನ್ ಐತಾಳ್, ಕಾಂಗ್ರೆಸ್ ಮುಖಂಡರಾದ ಉಣಕಲ್ ಪ್ರಕಾಶ್ ಶೆಟ್ಟಿ, ಅಪ್ಪಣ್ಣ ಕಮ್ಮಾರ, ಸೂರ್ಯಕಾಂತ್ ಗೋಡ್ಕೆ ಹಾಗೂ ದೇವಸ್ಥಾನದ ವ್ಯವಸ್ಥಾಪಕ ಗಣೇಶ್ ಹೊಳ್ಳ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ಎಂ.ಬಿ.ಎ. ವಿಭಾಗ ವತಿಯಿಂದ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ಸ್ ಸಹಯೋಗದೊಂದಿಗೆ ಫೈನಾನ್ಸಿಯಲ್ ಪ್ಲಾನಿಂಗ್ ಫಾರ್ ಯಂಗ್ ಪ್ರೊಫೆಷನಲ್ ಬಿಲ್ಡಿಂಗ್ ಎ ಸ್ಟ್ರಾಂಗ್ ಫೌಂಡೇಶನ್ ಎಂಬ ವಿಷಯದ ಬಗ್ಗೆ ಎರಡು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಸ್ಟಿವನ್ ರಾಬರ್ಟ್ ಟೆಲ್ಲಿಸ್, ಸೆ.ಬಿ ಸ್ಮಾರ್ಟ್ ಟ್ರೈನರ್ ಇವರು ಆಗಮಿಸಿ ವಿವಿಧ ಹೂಡಿಕೆಗಳ ಬಗ್ಗೆ ಅರಿವು ಮೂಡಿಸಿದರು. ಮೊದಲು ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ರೂಪಿಸಿಕೊಳ್ಳಬೇಕು, ಈ ಗುರಿಯನ್ನು ಹೇಗೆ ನಿರ್ಧರಿಸಬೇಕು ಹಾಗೆ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಉಳಿತಾಯ ಮಾಡಿ ಈ ಉಳಿತಾಯವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಕೆಯ ವಿವಿಧ ಸ್ತರಗಳನ್ನು ತಿಳಿಸಿದರು. ಮ್ಯೂಚುವಲ್ ಫಂಡ್, ಇಕ್ವಿಟಿ, ಡಿರಾವೇಟಿವ್ ಹಾಗೂ ಕಮೋಡಿಟಿ ಮಾರುಕಟ್ಟೆಗಳ ಬಗ್ಗೆ ತಿಳಿಸಿದರು. ಇದರ ಜೊತೆಗೆ ರಿಯಲ್ ಟ್ರೇಡಿಂಗ್ ಮಾಡಿಸುವುದರೊಂದಿಗೆ ವಿದ್ಯಾರ್ಥಿಗಳಿಗೆ ಹೂಡಿಕೆಯ ಬಗ್ಗೆ ಆಸಕ್ತಿ ಮೂಡಿಸಿದರು. ಈ ಕಾರ್ಯಗಾರದಲ್ಲಿ ಎಂಐಟಿಕೆ…
