Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ/ಬೈಂದೂರು,ಜು.06: ಕರಾವಳಿಯಲ್ಲಿ ಮಳೆಯ ತೀವ್ರತೆ ಮುಂದುವರಿದ ಪರಿಣಾಮ ತಾಲೂಕಿನ ನದಿಗಳು ತಂಬಿ ಹರಿಯುತ್ತಿದೆ. ಸಮುದ್ರ ಪ್ರಕ್ಷುಬ್ದಗೊಂಡು ಅಬ್ಬರಿಸುತ್ತಿದೆ. ಅಲ್ಲಲ್ಲಿ ತಗ್ಗು ಪ್ರದೇಶ ಜಲಾವೃತ, ಪ್ರವಾಹ ಪರಿಸ್ಥಿತಿ ಸೇರಿದಂತೆ ಮಳೆಹಾನಿ ಸಂಭವಿಸುತ್ತಿದೆ. ಕರಾವಳಿಯಲ್ಲಿ ಜೂ.05ರಿಂದ ರೆಡ್ ಅಲರ್ಟ್ ಘೋಷಿಸಲಾಗಿದ್ದು, ವಿಪರೀತ ಮಳೆ ಸುರಿಯುತ್ತಲೇ ಇದೆ. ಕುಂದಾಪುರದ ಪಂಚ ನದಿಗಳಾದ ಸೌರ್ಪಣಿಕ, ಖೇಟ, ಚಕ್ರ, ಕುಬ್ಜ, ವಾರಾಹಿ ನದಿಗಳು ತುಂಬಿ ಹರಿಯುತ್ತಿದೆ. ಕೋಡಿ, ಗಂಗೊಳ್ಳಿ, ಮರವಂತೆ, ಶಿರೂರು ಕರಾವಳಿಯ ಕೆಲ ಭಾಗಗಳಲ್ಲಿ ಸಮುದ್ರ ಕೊರೆತವೂ ಉಂಟಾಗಿದೆ. ಕರಾವಳಿಯಿಂದ ಮಲೆನಾಡಿಗೆ ಸಂಪರ್ಕಿಸುವ ರಸ್ತೆಯಲ್ಲಿ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು, ಕೆಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ. ಕಾಲ್ತೋಡು ಭಾಗದಲ್ಲಿ ಮನೆ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದೆ. ಚರಂಡಿಯಲ್ಲಿ ಸುಗಮವಾಗಿ ನೀರು ಹರಿಯದ ಕಾರಣ ಅಲ್ಲಲ್ಲಿ ಕೃತ ನೆರೆ ಸೃಷ್ಟಿಯಾಗುತ್ತಿದೆ. ಜಿಲ್ಲೆಯಲ್ಲಿ 196 ಮಿ.ಮಿ ಮಳೆಯಾಗಿದ್ದು, ಉಡುಪಿ ತಾಲೂಕಿನಲ್ಲಿ 325.7 ಮಿ.ಮಿ, ಬ್ರಹ್ಮಾವರದಲ್ಲಿ 206.5 ಮಿ.ಮಿ, ಕಾಪುವಿನಲ್ಲಿ 242.5 ಮಿ.ಮಿ, ಕುಂದಾಪುರದಲ್ಲಿ 170.4…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.೦6: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜುಲೈ 07ರಂದು ರಜೆ ಮುಂದುವರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ಜುಲೈ 5 ಹಾಗೂ 6ರಂದು ರಜೆ ಘೋಷಿಸಲಾಗಿದ್ದು, ರೆಡ್ ಅಲರ್ಟ್ ಹಾಗೂ ಮಳೆ ಪ್ರಮಾಣ ಹೆಚ್ಚಿರುವುದರಿಂದ ಜುಲೈ 7ರಂದು ರಜೆ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಖಾಸಗಿ ಬಸ್ ಹಾಗೂ ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ಚಾಲಕ ಸಹಿತ ಎಂಟು ಮಂದಿಗೆ ಗಂಭೀರ ಗಾಯಗೊಂಡ ಘಟನೆ ಆವರ್ಸೆ ಅಂಡರ್‌ಕಟ್ಟೆ ಎಂಬಲ್ಲಿ ನಡೆದಿದೆ. ಆವರ್ಸೆ ಗೋಳಿಯಂಗಡಿ ರಸ್ತೆಯಲ್ಲಿ ವಿಪರೀತ ಮಳೆಯಿಂದಾಗಿ ರಸ್ತೆ ಕಾಣಿಸುತ್ತಿರಲಿಲ್ಲ ಅಲ್ಲದೇ ಅಪಘಾತದ ಸ್ಥಳದಲ್ಲಿ ರಸ್ತೆಯ ಮೇಲೆಯೇ ವಿದ್ಯುತ್ ಕಂಬ ನೆಡಲಾಗಿರುವುದರಿಂದ ಕ್ಯಾಂಟರ್ ಚಾಲಕ ತೀರಾ ಎಡಗಡೆಗೆ ಚಲಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆ ಮೇಲೆಯೇ ಹೈ ಟೆನ್ಷನ್ ವಯರ್ ಗಳಿರುವ ವಿದ್ಯುತ್ ಕಂಬವಿರುವ ಬಗ್ಗೆ ಹಲವಾರು ಬಾರಿ ಮೆಸ್ಕಾಂ ಗಮನಕ್ಕೆ ತರಲಾಗಿದ್ದರೂ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿರುವ ಸ್ಥಳೀಯರು ಅಪಘಾತದಲ್ಲಿ ಗಾಯಗೊಂಡವರಿಗೆ ಮೆಸ್ಕಾಂ ಇಲಾಖೆಯೇ ನೇರ ಹೊಣೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವರುಣನ ಅಬ್ಬರಕ್ಕೆ ಕುಂದಾಪುರ ತಾಲೂಕಿನಲ್ಲಿ ಎರಡು ಸಾವು ಸಂಭವಿಸಿದೆ. ಉಳ್ತೂರು ಮಲ್ಯಾಡಿಯಲ್ಲಿ ದಿನಕರ ಶೆಟ್ಟಿ [53] ಎಂಬುವವರು ದ್ವಿಚಕ್ರ ವಾಹನ ಸಹಿತ ಕೆರೆಗೆ ಬಿದ್ದು ಮೃತಪಟ್ಟರೆ, ಯಡಮೊಗೆಯಲ್ಲಿ ನದಿ ದಾಟುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಅರ್ಚಕ ಶೇಷಾದ್ರಿ ಐತಾಳ್ (71) ಎಂಬುವವರು ದಾರುಣವಾಗಿ ಮೃತಪಟ್ಟಿದ್ದಾರೆ. ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮದ ತೊಪ್ಲು ನಿವಾಸಿ, ಕಮಲಶಿಲೆ ದೇಗುಲದ ಅರ್ಚಕ ಶೇಷಾದ್ರಿ ಐತಾಳ್ ಅವರು ಕುಬ್ಜಾ ನದಿಯ ಮಗ್ಗಲಲ್ಲಿ ಇರುವ ಅವರ ತೋಟಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ. ಅವರು ಮಂಗಳವಾರ ಸಂಜೆ ತೋಟಕ್ಕೆ ನಿರ್ಮಿಸಿಕೊಳ್ಳಲಾಗಿದ್ದ ತಾತ್ಕಾಲಿಕ ಮರದ ಕಾಲುಸಂಕದಿಂದ ನದಿಗೆ ಜಾರಿ ಬಿದ್ದು ಬಿದ್ದಿದ್ದಾರೆ. ಬುಧವಾರ ಮುಳುಗುತಜ್ಞರ ಸಹಾಯದಿಂದ ಶೋಧಕಾರ್ಯ ನಡೆಸಿದ್ದು, ಸುಮಾರು 8 ಅಡಿ ಅಳದ ಹರಿಯುವ ನೀರಿನ ಮುಂಡ್ಕನ ಓಲೆಯ ಪೊದೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ರೋಟರಿ ಬಂಧುಗಳು ವಿಶ್ವದ ಸೇವೆಯ ಕೈಂಕರ್ಯವನ್ನು ನಡೆಸುತ್ತಿರುವುದು, ಸ್ವಂತ ದುಡಿಮೆಯ ಒಂದು ಭಾಗವನ್ನು ಸೇವೆಯ ರೂಪದಲ್ಲಿ ವಿನಿಯೋಗಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಮಾಜಿ ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಬಿ ಹೇಳಿದರು. ಅವರು ಯಡ್ತರೆ ಬಂಟರ ಭವನದಲ್ಲಿ ಮಂಗಳವಾರ ಕ್ಲಬ್‌ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷ ಪ್ರಸಾದ್ ಪ್ರಭು ಅವರಿಗೆ ರೋಟರ್ ಕಾಲರ್ ಹಸ್ತಾಂತರಿಸಿ ಮಾತನಾಡಿದರು. ರೋಟರಿ ಮೂಲಕ ಕೈಗೊಳ್ಳುವ ಎಲ್ಲಾ ಚಟುವಟಿಕೆಗಳಲ್ಲಿ ಸದಸ್ಯರು ಸಕ್ರೀಯವಾಗಿ ಭಾಗವಹಿಸುವುದು ಮುಖ್ಯ. ಆ ನೆಲೆಯಲ್ಲಿ ರೋಟರಿ ಘನತೆಯನ್ನು ಪ್ರತಿ ಸದಸ್ಯರೂ ಅರಿತು ನಡೆಯಬೇಕು ಎಂದರು. ರೋಟರಿ ಝೋನ್ 1ರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ, ವಲಯ ಸೇನಾನಿ ಕೆ. ರಂಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬೈಂದೂರು ರೋಟರಿ ಕ್ಲಬ್ ನೂತನ ಅಧ್ಯಕ್ಷ ಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಐವರು ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಹಸ್ತಾಂತರಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.೦5: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜುಲೈ 06ರಂದು ರಜೆ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಜುಲೈ 5ರಂದು ರಜೆ ಘೋಷಿಸಲಾಗಿದ್ದು, ರೆಡ್ ಅಲರ್ಟ್ ಹಾಗೂ ಮಳೆ ಪ್ರಮಾಣ ಹೆಚ್ಚಿರುವುದರಿಂದ ಜುಲೈ 6ರಂದು ರಜೆ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಮೇ 2023ರಲ್ಲಿ ನೆಡೆಸಿದ ಸಿಎ ಫೈನಲ್ ಮತ್ತು ಸಿಎ ಇಂಟರ್ಮೀಡಿಯೆಟ್ ಪರೀಕ್ಷೆಯಲ್ಲಿ ಕುಂದಾಪುರದ ಶಿಕ್ಷ ಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ (ಸ್ಪೇಸ್) ನ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ವಿನಾರ್ಡ್ ಡಿ’ಕೋಸ್ಟಾ ( 232), ಸಚಿನ್ ಮೊಗವೀರ (216), ಸಾತ್ವಿಕ್ ಶೆಟ್ಟಿ (206) ಸಿಎ ಅಂತಿಮ ಪರೀಕ್ಷೆಯ ದ್ವಿತೀಯ ಗ್ರೂಪ್ ಅನ್ನು ತೇರ್ಗಡೆ ಹೊಂದುವುದರ ಮೂಲಕ ಲೆಕ್ಕ ಪರಿಶೋಧಕರಾಗಿ ಹೊರಹೊಮ್ಮಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಯಾದ ಸೃಜನ್ ಎಸ್ 514 ಅಂಕಗಳೊಂದಿಗೆ ಸಿಎ ಇಂಟರ್ಮೀಡಿಯಟ್ ಎರಡು ಹಂತದ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದುವುದರ ಮೂಲಕ ಸಂಸ್ಥೆಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಜೆಸ್ವಿಟಾ(262), ಸುಪ್ರೀತಾ(248), ಭೂಮಿಕಾ ಹತ್ವಾರ್ (238), ರಾಮನಾಥ್ ಶೆಣೈ (234), ಅಖಿಲಾ ಹೆಬ್ಬಾರ್(233), ಅರ್ಪಣ್ ಪೂಜಾರಿ(225), ಸ್ನೇಹಾ ದೇವಾಡಿಗ (220), ನಿಶಾ ಆಚಾರ್ಯ(220), ಕೇದಾರ್ ಭಟ್ (217), ಸುದರ್ಶನ್ ಅಡಿಗ(213), ಅಕ್ಷಿತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಐ.ಸಿ.ಎ.ಐ ಇನ್ಸ್ಟಿಟ್ಯೂಟ್ ಓಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಫೈನಲ್ ಪರೀಕ್ಷೆಯಲ್ಲಿ ಉಡುಪಿಯ ತ್ರಿಶಾ ಕ್ಲಾಸಸ್ ವಿದ್ಯಾರ್ಥಿನಿ ವೃಂದಾ ವಿ. ಕಿಣಿ ಉತ್ತೀರ್ಣರಾಗಿದ್ದಾರೆ. ಸಿ.ಎ ಗಿರಿಧರ್ ಕಾಮತ್ ಅವರ ‘ಗಣೇಶ್ ಆಂಡ್ ಸುಧೀರ್ ಕೋ ಮಂಗಳೂರಿನಲ್ಲಿ ತಮ್ಮ ಆರ್ಟಿಕಲ್ ಷಿಪ್ ಅನ್ನು 2021 ರಲ್ಲಿ ಮುಗಿಸಿದ್ದರು. ತಮ್ಮ ಸಿ.ಪಿ.ಟಿ ಹಾಗೂ ಇಂಟರ್ಮಿಡಿಯೇಟ್ ಹಾಗೂ ಫೈನಲ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದುಕೊಂಡಿದ್ದಾರೆ. ವೃಂದಾ ಕಿಣಿ ಬೈಂದೂರಿನ ಉದ್ಯಮಿ ಕೆ. ವೆಂಕಟೇಶ್ ಕಿಣಿ ಹಾಗೂ ನಯನಾ ವಿ. ಕಿಣಿ ದಂಪತಿಯ ಪುತ್ರಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜು.05: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿ ಕೆರೆ ಹಳ್ಳಗಳು ತುಂಬಿ ಹರಿಯುತ್ತಿದೆ. ಈ ನಡುವೆ ಮಂಗಳವಾರ ತಡರಾತ್ರಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ದ್ವಿಚಕ್ರ ವಾಹನ ಸಹಿತ ಕೆರೆಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಮಲ್ಯಾಡಿ ಎಂಬಲ್ಲಿ ನಡೆದಿದೆ. ಕೆದೂರು ಗ್ರಾಮದ ಮಲ್ಯಾಡಿ ನಿವಾಸಿ ದಿವಾಕರ್ ಶೆಟ್ಟಿ (53) ಮೃತ ದುರ್ದೈವಿ. ರಾತ್ರಿ ಕೆಲಸ ಮುಗಿಸಿ ತನ್ನ ಮ್ಯಾಸ್ಟ್ರೋ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಮನೆಯ ಸಮೀಪದ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಬಿದ್ದಿದ್ದಾರೆ. ರಾತ್ರಿ ಸುಮಾರು 11:30ರ ವೇಳೆಗೆ ಘಟನೆ ನಡೆದಿದ್ದು, ಅಂದಾಜು 15 ಅಡಿ ಆಳದ ಕೆರೆಗೆ ತಡೆಗೋಡೆ ಇಲ್ಲದಿರುವುದು ಹಾಗೂ ಕೆರೆ ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದ ಕಾರಣ ದಿವಾಕರ ಶೆಟ್ಟಿ ಅವರು ಆಯತಪ್ಪಿ ತನ್ನ ದ್ವಿಚಕ್ರ ವಾಹನ ಮ್ಯಾಸ್ಟ್ರೋ ಸಹಿತ ಕೆರೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಕೋಟ ಮಣೂರು ಸಮೀಪದ ಹೋಟೆಲೊಂದರಲ್ಲಿ ಕ್ಯಾಶಿಯರ್ ಆಗಿರುವ ದಿವಾಕರ್ ಅವರು ಸಮಯಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಜು.೦4: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾದ್ಯಂತ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜುಲೈ 05ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕಳೆದೆರಡು ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮುಂದಿನ 5 ದಿನಗಳ ಕಾಲ ರೆಡ್ ಹಾಗೂ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೊದಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳೀಯ ಮಳೆಯ ಪ್ರಮಾಣ ಹಾಗೂ ವಿಪತ್ತು ಪರಿಸ್ಥಿತಿಯನ್ನು ಆಧರಿಸಿ, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವಂತೆ ತಹಶಿಲ್ದಾರರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶಿಸಿದ್ದರು. ಆದರೆ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಜಿಲ್ಲಾಧಿಕಾರಿಗಳು ರಾತ್ರಿ 9:45ರ ಬಳಿಕ ರಜೆ ಘೋಷಿಸಿದ್ದು, ರಾತ್ರಿ 12:20ಕ್ಕೆ ಆದೇಶ ಪ್ರತಿ ಹೊರಡಿಸಿದ್ದರು. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗಿದ್ದು, ಪದವಿ ಕಾಲೇಜುಗಳಲ್ಲಿ ರಜೆ ಘೋಷಣೆ ಮಾಡಲಾಗಿಲ್ಲ. ಆದರೆ ಪದವಿ ಶಿಕ್ಷಣ ಸಂಸ್ಥೆಗಳು ಮಳೆ ವಿಪತ್ತು ಸಂದರ್ಭ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ. ವಿದ್ಯಾರ್ಥಿಗಳು ತೋಡು ಹಳ್ಳ ದಾಟಿ ಬರುವುದಿದ್ದರೆ…

Read More