Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸುತ್ತಲಿನ ಸ್ಪಚ್ಛತೆ ಹಾಗೂ ಪಾವಿತ್ರತೆಯನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯವಾಗಿದೆ. ಅದನ್ನು ಸಾಧ್ಯವಾಗಿಸಲು ಮೊದಲು ಮನವೊಲಿಕೆ, ಸಾಧ್ಯವಾಗದಿದ್ದರೆ ಹೋರಾಟದ ಹಾದಿಯನ್ನೇ ಹಿಡಿಯಬೇಕಾಗುತ್ತದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು. ಅವರು ಕೊಲ್ಲೂರು ಕಾಶಿಹೊಳೆಯಲ್ಲಿ ಆರ್.ಎಸ್. ವೆಂಚರ್ ಹಾಗೂ ಮೂಕಾಂಬಿಕಾ ಡೆವಲಪರ್ಸ್ ಜಂಟಿಯಾಗಿ ನಿರ್ಮಿಸಿದ ದೇವಿ ಮೂಕಾಂಬಿ ಸರ್ವಿಸ್ ಅಪಾರ್ಟ್ಮೆಂಟ್ ಹಾಗೂ ರಾಜ್ಯದ ಮೊದಲ ಬಯೋ ಡೈಜಿಸ್ಟ್ ಎಸ್ಟಿಪಿ ಉದ್ಘಾಟಿಸಿ ಮಾತನಾಡಿ ಸ್ವಚ್ಛತೆಯ ಬಗ್ಗೆ ನಾವು ಮಾತನಾಡುತ್ತಿರುವಾಗಲೇ ಬಯೋ ಡೈಜಿಸ್ಟರ್ ಸೆಫ್ಟಿಕ್ ಟ್ಯಾಂಕ್ ಉಪಯೋಗಿಸಿ ನೈರ್ಮಲ್ಯತೆಗೆ ಒಂದು ಮಾದರಿ ಸಿದ್ಧಪಡಿಸಿಕೊಟ್ಟಿದೆ. ಇದರ ಬಳಕೆ ಎಲ್ಲೆಡೆಯೂ ಆದರೆ ನೈರ್ಮಲ್ಯ ತಾನಾಗಿಯೇ ಬರಲಿದೆ ಎಂದರು. ಬೈಂದೂರು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಇಕೋ ಟೂರಿಸಂ, ಟೆಂಪಲ್ ಟೂರಿಸಂ ಅಭಿವೃದ್ಧಿಗೆ ಸರಕಾರ, ಜನಪ್ರತಿನಿಧಿಗಳೊಂದಿಗೆ ಜನರೂ ಕೂಡ ಮನಸ್ಸು ಮಾಡಬೇಕಿದೆ. ಮನಸ್ಥಿತಿ ಬದಲಾಗದ ಅಭಿವೃದ್ಧಿ ಸಾಧ್ಯವಿಲ್ಲ. ಸಮೃದ್ದ ಬೈಂದೂರಿನ ಕನಸನ್ನು ಸಾಕಾರಗೊಳಿಸಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರಮಟ್ಟದಲ್ಲಿ ಜರುಗಿದ 2023 ನೇ ಸಾಲಿನ ಜೆ ಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಣಮ್ಯ G H ರಾಷ್ಟ ಮಟ್ಟದಲ್ಲಿ category wise(ವರ್ಗವಾರು )2126 ನೇ ರ್ಯಾಂಕ್ ಪಡೆದು ಅದ್ಭುತ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಗಳು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ಕನಸಿನ ಯೋಜನೆಯಾದ ಸಮೃದ್ಧ ಬೈಂದೂರಿನ ಭಾಗವಾದ ಕ್ಲೀನ್ ಕಿನಾರದ ಮೂರನೇ ವಾರ ಕಿರಿಮಂಜೇಶ್ವರದ ಗಂಗೆಬೈಲು ಸಮುದ್ರ ತೀರ ಸ್ವಚ್ಛತೆಯಲ್ಲಿ ಪಾಲ್ಗೊಂಡರು. ಈ ವೇಳೆ ಕೇಸರಿ ದಳದ ಕಾರ್ಯಕರ್ತರು, ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನೆರವೇರಿತು. ಕಳೆದರಡು ವಾರ ಬೈಂದೂರು ಸೋಮೇಶ್ವರ ಹಾಗೂ ಉಪ್ಪುಂದ ಮಡಿಕಲ್ ಬೀಚ್ ಸ್ವಚ್ಛತಾ ಕಾರ್ಯ ಜರುಗಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ದೇಶ ಪ್ರೇಮದ ಸ್ಫೂರ್ತಿ ಕಡಿಮೆಯಾಗುತ್ತಾ ಬರುತ್ತಿದೆಯೋ ಎಂಬ ಕಾಳಜಿ ಸಹಜವಾದರೂ ಆಸಕ್ತ ಪ್ರಜೆಗಳು ತಮ್ಮ ವೃತ್ತಿ ಪ್ರವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ತೋರಿ ಇತರರಿಗೆ ಮಾದರಿಯಾದರೆ ಸಹಜವಾಗಿ ಅವರಿಂದ ಪ್ರೇರಣೆ ಪಡೆದವರು ದೇಶ ಪ್ರೇಮಿಗಳಾಗುತ್ತಾರೆ. ನಮ್ಮ ದೇಶದ ಸಂಸ್ಕೃತಿ, ಕೌಶಲ್ಯಗಳನ್ನು ನಾಶ ಮಾಡಲು ತುಂಬ ಆಕ್ರಮಣಕಾರರು ಪ್ರಯತ್ನ ಪಟ್ಟರೂ ಆಗಲಿಲ್ಲ. ಅಲೆಕ್ಸಾಂಡರ್ ಕಥೆ ಅದಕ್ಕೆ ತಕ್ಕ ಉದಾಹರಣೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಆಕ್ರಮಣಗಾರರನ್ನು ಪರಿಚಯಿಸಿದಷ್ಟು ನಮ್ಮ ದೇಶಕ್ಕಾಗಿ ಹೋರಾಡಿದವರನ್ನು ಮಕ್ಕಳಿಗೆ ಪರಿಚಯಿಸಲಿಲ್ಲ. ನಮ್ಮದೇ ಪರಿಸರದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆ ತಿಳಿದಿಲ್ಲ. ದೇಶ ಪ್ರೇಮ ನಮ್ಮ ಹೃದಯದಿಂದಲೇ ಸ್ಪುರಿಸಬೇಕೇ ಹೊರತು ಯಾರ ಒತ್ತಡದಿಂದಲ್ಲ. ಎಂದು ಸ್ವರಾಜ್ಯ 75ಸಂಘಟನೆಯ ಸ್ಥಾಪಕ ಪ್ರದೀಪ್ ಬಸ್ರೂರು ಹೇಳಿದರು. ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ ದೇಶ ಪ್ರೇಮ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು. ನಮ್ಮ ಜಿಲ್ಲೆಯಲ್ಲಿ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರಿದ್ದು ೫೬ ಸ್ವಾತಂತ್ರ್ಯ ಹೋರಾಟಗಾರರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ.17: ವಾರಾಹಿ ನೀರಾವರಿ ಯೋಜನೆಯನ್ನು ಆರಂಭಿಸಿರುವುದೇ ಕುಂದಾಪುರ ವಿಧಾನಸಭಾ ಕ್ಷೇತ್ರ, ಬೈಂದೂರು ಹಾಗೂ ಹಿಂದಿನ ಬಹ್ಮಾವರ ಕ್ಷೇತ್ರಗಳ ಕೃಷಿ ಭೂಮಿಗೆ ನೀರಾವರಿ ಒದಗಿಸುವುದಕ್ಕಾಗಿ. ಆದರೆ ಇತ್ತೀಚಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಬೇರೆ ಕಡೆಗಳಿಗೆ ವಾರಾಹಿ ಯೋಜನೆಯ ನೀರನ್ನೇ ಕೊಂಡೊಯ್ಯಲಾಗುತ್ತಿದೆ. ಕುಡಿಯುವ ನೀರು ಒದಗಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಇದರ ಹೆಸರಿನಲ್ಲಿ ವಾರಾಹಿ ಅಚ್ಚುಕಟ್ಟು ಪ್ರದೇಶದವರನ್ನು ನಿರ್ಲಕ್ಷಿಸಿದ್ದಲ್ಲದೇ, ವಾರಾಹಿ ನೀರಾವರಿ ಯೋಜನೆಯನ್ನೇ ಮುಗಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ. ಪ್ರತಾಪ್ಚಂದ್ರ ಶೆಟ್ಟಿ ಆರೋಪಿಸಿದರು. ಅವರು ಇಲ್ಲಿನ ಆರ್.ಎನ್. ಶೆಟ್ಟಿ ಮಿನಿ ಹಾಲ್ನಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಉಡುಪಿ, ಕಾರ್ಕಳ ಹಾಗೂ ಶಿವಪುರಕ್ಕೆ ಕುಡಿಯುವ ನೀರು ಪೂರೈಸುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಆದರೆ ವಾರಾಹಿ ಅಚ್ಚುಕಟ್ಟು ಪ್ರದೇಶದವರನ್ನು ನಿರ್ಲಕ್ಷಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಮೂಲ ಯೋಜನೆಯಲ್ಲಿದ್ದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ನಡೆಯುವ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆ ಕೆ-ಸಿಇಟಿ ಫಲಿತಾಂಶದಲ್ಲಿ ಹೆಮ್ಮಾಡಿಯ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಐಶ್ವರ್ಯ ಖಾರ್ವಿ B.sc Agri-450,BNYS-1050,ಇಂಜಿನಿಯರಿಂಗ್-1189 ರ‍್ಯಾಂಕ್ ಗಳನ್ನು,ನೇಶಲ್ -ಇಂಜಿನಿಯರಿಂಗ್ 1966ನೇ ರ‍್ಯಾಂಕ್, ಆಯುಷ್ ಜೆ.ಸಿ- ಇಂಜಿನಿಯರಿಂಗ್ -2060ನೇ ರ‍್ಯಾಂಕ್, ತಿಲಕ್ ಇಂಜಿನಿಯರಿಂಗ್-2500ನೇ ರ‍್ಯಾಂಕ್, ಧನುಷ್ಯ-ಇಂಜಿನಿಯರಿಂಗ್-3958ನೇ ರ‍್ಯಾಂಕ್, ಸುಮಂತ್- ಇಂಜಿನಿಯರಿಂಗ್-4062ನೇ ರ‍್ಯಾಂಕ್, ಓಂಕಾರ್ ಪ್ರಭು-ಇಂಜಿನಿಯರಿಂಗ್-4203ನೇ ರ‍್ಯಾಂಕ್,ಸಂಪದ-ಇಂಜಿನಿಯರಿಂಗ್-5620ನೇ ರ‍್ಯಾಂಕ್, ತನಿಷಾ-ಇಂಜಿನಿಯರಿಂಗ್-5923ನೇ ರ‍್ಯಾಂಕ್ ಶ್ರೀಶ್ ಶೆಟ್ಟಿ-6560ನೇ ರ‍್ಯಾಂಕ್‌ಗಳನ್ನು ಪಡೆದು ಅರ್ಹತೆಯನ್ನು ಪಡೆದಿರುತ್ತಾರೆ. 100ಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,40ಕ್ಕೂ ಹೆಚ್ಚು ವಿದ್ಯಾರ್ಥಿಗಳು 10,000 ಒಳಗಿನ ರ‍್ಯಾಂಕ್‌ಗಳನ್ನು ಪಡೆದಿರುತ್ತಾರೆ. ಕಾಲೇಜು ಪ್ರಾರಂಭದ ಪ್ರಥಮ ವರ್ಷದಲ್ಲಿಯೇ ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ‘ಯುವ ಮೆರಿಡಿಯನ್’ ಮಾಲೀಕರಾದ ಉದಯ್ ಕುಮಾರ್ ಶೆಟ್ಟಿ ಅವರು ಕೊಡುಗೆಯಾಗಿ ನೀಡಿದ ಸುಮಾರು 21,000 ರೂಪಾಯಿ ಮೌಲ್ಯದ ಬ್ಯಾಗುಗಳನ್ನು ಶನಿವಾರ ವಿತರಿಸಲಾಯಿತು. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ ಗಾಣಿಗ ಹಾಗೂ ಮಾಜಿ ಎಸ್ಡಿಎಂಸಿ ಅಧ್ಯಕ್ಷರಾದ ವೀರಭದ್ರ ಗಾಣಿಗ ಬ್ಯಾಗುಗಳನ್ನು ವಿತರಿಸಿದರು. ಈ ಕೊಡುಗೆ ಶಾಲೆಗೆ ತರುವಲ್ಲಿ ಶ್ರಮಿಸಿದ ಮಾಧ್ಯಮ ಪ್ರತಿನಿಧಿ ಮಂಜುನಾಥ ಗಾಣಿಗ, ತಿರುಮಲ ಎಫ್.ಸಿ ಫ್ರೆಂಡ್ಸ್ ತಗ್ಗರ್ಸೆ ಸದಸ್ಯರಾದ ಹರ್ಷೇಂದ್ರ , ದಿಲೀಪ್ ಕುಮಾರ್, ಅಣ್ಣಪ್ಪ ಎಸ್. ಉಪಸ್ಥಿತರಿದ್ದರು. ಈ ವೇಳೆ ಮುಖ್ಯೋಪಾಧ್ಯಾಯರು, ಸಹಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಸಂತ ಮೇರಿ ಪ ಪೂ ಕಾಲೇಜಿನಲ್ಲಿ ಶನಿವಾರ ಪ್ರಸಕ್ತ ಶೈಕ್ಷಣಿಕ ವರ್ಷದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಸಂತ ಮೇರಿ ಪ.ಪೂ ವಿದ್ಯಾಸಂಸ್ಥೆಗಳ ಸಂಚಾಲಕರಾದ ಫಾದರ್ ಸ್ಟ್ಯಾನಿ ತಾವರೊ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ,ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮುಖ್ಯ. ಪರಸ್ಪರ ತಮ್ಮನ್ನು ವಿಮರ್ಶಿಸಿಕೊಳ್ಳಬೇಕು. ಶಿಸ್ತು ಜೀವನದ ಅತಿ ಮುಖ್ಯ ಅಂಗ ಎನ್ನುತ್ತಾ ಸಂಸ್ಥೆಯಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಸಂತ ಜೋಸೆಫ ಕಾನ್ವೆಂಟಿನ ಸುಪಿರಿಯರ್ ಸಿಸ್ಟರ್ ಸುಪ್ರಿಯ ಎ. ಸಿ ಅವರು ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಅನೇಕ ಮೌಲ್ಯಯುತ ಪ್ರಶ್ನೆಗಳನ್ನು ಕೇಳಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಪೆನ್ನನ್ನು ನೀಡಿ ಹುರಿದುಂಬಿಸಿದರು. ಅವರು ವಿದ್ಯಾರ್ಥಿಗಳಿಗೆ ಪ್ರತಿಯೊಬ್ಬರು ಉತ್ತಮವಾಗಿ ಕಲಿಯಬೇಕು. ಒಬ್ಬರನೊಬ್ಬರು ಗೌರವಿಸಬೇಕು.ತಾವೆಲ್ಲರೂ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಬೇಕು ಎಂದರು. ಇದೆ ವೇಳೆ ಕಛೇರಿ ಸಹಾಯಕ ಗುಮಾಸ್ತರಾಗಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮೇಬಲ್ ಡಿಸೋಜಾರವರನ್ನು ಅವರನ್ನು ಸನ್ಮಾನಿಸಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ 2023) ಫಲಿತಾಂಶವು ಬಿಡುಗಡೆಯಾಗಿದ್ದು, ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ ಇದರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು ಸಿ.ಇ.ಟಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಸಿ.ಇ.ಟಿ 2023 ರ ಪರೀಕ್ಷೆಗೆ ಕುಳಿತ 123 ವಿದ್ಯಾರ್ಥಿಗಳ ಪೈಕಿ, ಲತೀಫಾ ರಫಾ 897 ರ್ಯಾಂಕ್‌ನೊಂದಿಗೆ ಅತ್ಯುತ್ತಮ ಸಾಧನೆಯನ್ನು ತೋರಿದ್ದಾರೆ. ಅನ್ವಿತ್ ಶೆಟ್ಟಿ 1042 ರ್ಯಾಂಕ್ ಪಡೆಯುವುದರ ಮೂಲಕ ನಮ್ಮ ಸಂಸ್ಥೆಗೂ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿದ್ದಾರೆ. ನಮ್ಮ ಸಂಸ್ಥೆಯ ಅನುಶ್ರೀ ಶೆಟ್ಟಿ 1420 ನೇ ರ್ಯಾಂಕ್, ಪುರುಷೋತ್ತಮ್ 1763 ನೇ ರ್ಯಾಂಕ್ , ಶ್ರೀನಿಧಿ ಶೆಟ್ಟಿ 1977 ನೇ ರ್ಯಾಂಕ್, ನಿಹಾಲ್ ಎನ್ ಶೆಟ್ಟಿ 2235 ನೇ ರ್ಯಾಂಕ್ , ಸಿಂಚುಶ್ರೀ ಎನ್ 2284 ನೇ ರ್ಯಾಂಕ್, ಸಂಚಿತಾ ವೈ ಎಮ್. 2499 ನೇ ರ್ಯಾಂಕ್ , ಪ್ರಣೀತಾ 2502 ನೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಜೂ.16: ಪಶ್ಚಿಮ ವಲಯದ 32 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿ ಐಜಿಪಿ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ. ಕುಂದಾಪುರ ನಗರ ಪೊಲೀಸ್ ಠಾಣೆಗೆ ವಿನಯ್ ಕೊರ್ಲಹಳ್ಳಿ, ಗಂಗೊಳ್ಳಿ ಪೊಲೀಸ್ ಠಾಣೆಗೆ ಹರೀಶ್ ನಾಯ್ಕ್, ಶಂಕರನಾರಾಯಣ ಪೊಲೀಸ್ ಠಾಣೆಗೆ ನಾಸೀರ್ ಹುಸೇನ್, ಕೊಲ್ಲೂರು ಪೊಲೀಸ್ ಠಾಣೆಗೆ ಜಯಶ್ರೀ ಅವರನ್ನು ವರ್ಗಾಯಿಸಲಾಗಿದೆ.

Read More