ಅಜ್ಜನ ಅಂತಿಮ ದರ್ಶನಕ್ಕೆ ಹೊರಟ ಮೊಮ್ಮಗನೂ ಅಪಘಾತದಲ್ಲಿ ಸಾವು

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅಜ್ಜನ ಸಾವಿನ ಸುದ್ದಿ ಕೇಳಿ ಅವರ ಅಂತ್ಯಕ್ರಿಯೆಗೆ ಹೊರಟ ಮೊಮ್ಮಗನೂ ಅಪಘಾತದಲ್ಲಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.

Call us

Click Here

ಶೇಡಿಮನೆ ಗ್ರಾಮದ ಪಾಟ್ಲಮಕ್ಕಿಯಲ್ಲಿ ನಾರಾಯಣ ಪೂಜಾರಿ (70) ಅವರು ಮೃತಪಟ್ಟ ಸುದ್ದಿ ಕೇಳಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಚಾಮರಾಜನಗರದಿಂದ ಬೈಕಿನಲ್ಲಿ ಹೊರಟ ನಿತೀಶ್ ಪೂಜಾರಿ (20) ಅಪಘಾತದಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಚಾಮರಾಜನಗರದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ 2ನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು ತಾಯಿಯ ತಂದೆ ಮೃತಪಟ್ಟ ಸುದ್ದಿಯನ್ನು ಆತನಿಗೆ ತಿಳಿಸಲಾಗಿತ್ತು. ಅವಸರದಲ್ಲಿ ಊರಿಗೆ ಬರುವುದು ಬೇಡ ಎಂದು ಮನೆಯವರು ಹೇಳಿದ್ದರೂ, ಅಂತಿಮ ದರ್ಶನ ಪಡೆಯುವ ಸಲುವಾಗಿ ತನ್ನ ಬೈಕಿನಲ್ಲಿ ಕುಂದಾಪುರಕ್ಕೆ ಹೊರಟಿದ್ದರು. ಈ ಸಂದರ್ಭ ಚಾಮರಾಜನಗರ ತಾಲೂಕಿನ ಪಣ್ಯದಹಂಡಿ ಬಳಿ ರಸ್ತೆ ಮಧ್ಯದ ಹಂಪ್ ಅನ್ನು ಗಮನಿಸದೇ ಅಕಸ್ಮಾತ್ತಾಗಿ ರಸ್ತೆಗೆ ಬಿದ್ದು ಮೃತಪಟ್ಟಿದ್ದರು.

ಬಳಿಕ ಯುವಕನ ಮೃತದೇಹವನ್ನು ತಾಯಿಯ ತಂದೆ ಮನೆಗೆ, ಅಜ್ಜ ಮೊಮ್ಮಗನ ಶವಸಂಸ್ಕಾರವನ್ನು ಜತೆಯಾಗಿ ನಡೆಸಲಾಯಿತು.

ನಿತೀಶ್ ಪೂಜಾರಿ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಆಜ್ರಿ ಗ್ರಾಮದ ಚೌಕುಳಮಕ್ಕಿ ನಿವಾಸಿ ಚೆನ್ನ ಪೂಜಾರಿ ಹಾಗೂ ಇಂದಿರಾ ಅವರ ಏಕೈಕ ಪುತ್ರ

Click here

Click here

Click here

Click Here

Call us

Call us

Leave a Reply