Author: ನ್ಯೂಸ್ ಬ್ಯೂರೋ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರಿಗೆ ಹುಟ್ಟೂರ ಸನ್ಮಾನ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ವಿಪೋರ್ಟ್ ಗೇಟ್ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ಓಕ್‌ವುಡ್ ಇಂಡಿಯನ್ ಸ್ಕೂಲ್ ಪೋಷಕರಿಗಾಗಿ ಏರ್ಪಡಿಸಲಾದ ಕಾರ್ಯಗಾರವನ್ನು ಹರಿಪ್ರಸಾದ್ ಹೋಟೆಲ್ ಅಕ್ಷತಾ ಹಾಲಿನಲ್ಲಿ ನಡೆಯಿತು. ಉಡುಪಿಯ ಎವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಪೋಷಕರು ಅವರಿಗೆ ಇರುವ ಸಮಸ್ಯೆಯನ್ನು ಕೇಳಿಕೊಂಡು ಅದಕ್ಕೆ ಪರಿಹಾರವನ್ನು ಪಡೆದರು. ಸಭೆಯಲ್ಲಿ ಪೋರ್ಟ್ ಗೇಟ್ ಎಜುಕೇಶನ್ ಅಧ್ಯಕ್ಷರಾದ ಅಭಿನಂದನ್ ಶೆಟ್ಟಿ, ಕಾರ್ಯದರ್ಶಿ ನೀತಾ ಶೆಟ್ಟಿ ಆಡಳಿತ ಮಂಡಳಿ ಮುಖ್ಯಸ್ಥರು ಮುಖ್ಯ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ನೀತಾ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಸಿಲ್ವಿಯಾ ಫೆರ್ನಾಂಡಿಸ್ ನಿರೂಪಿಸಿದರು. ಅತಿಥಿಗಳ ಪರಿಚಯವನ್ನು ಶಿಕ್ಷಕಿ ಕಾವ್ಯ ಮಾಡಿದರು. ಸಹನ ಶೆಟ್ಟಿ ಧನ್ಯವಾಗೈದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆರೋಗ್ಯ ಸಂಬಂಧಿ ಲೇಖನಗಳನ್ನು ಬರೆಯುವ ಲೇಖಕರು ಎಚ್ಚರಿಕೆಯನ್ನು ವಹಿಸಬೇಕು. ಕಾಯಿಲೆಗಳ ಬಗ್ಗೆ ಬರೆಯುವಾಗ ಲೇಖನದ ಕೊನೆಯಲ್ಲಿ ರೋಗಿಗಳಿಗೆ ಭಯಹುಟ್ಟಿಸವಂತಹ ’ಭಯೋತ್ಪಾದಕ’ರಾಗದೆ, ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಧನಾತ್ಮಕ ಅಂಶಗಳಿಂದ ಲೇಖನವನ್ನು ಮುಕ್ತಾಯಗೊಳಿಸಿಬೇಕು ಎಂದು ಖ್ಯಾತ ಮನೋರೋಗ ತಜ್ಞರು ಹಾಗೂ ವೈದ್ಯ ಸಾಹಿತಿ ಡಾ. ಸಿ. ಆರ್. ಚಂದ್ರಶೇಖರ್ ಕರೆ ನೀಡಿದರು. ಅವರು ಆಳ್ವಾಸ್ ಕಾಲೇಜಿನಲ್ಲಿ ನಡೆದ ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ರಾಜ್ಯ ಶಾಖೆಯ ೮೮ನೇ ರಾಜ್ಯ ಸಮ್ಮೇಳನದ ಎರಡನೇ ದಿನದಂದು ನಡೆದ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವೈದ್ಯಕೀಯ ಲೇಖನಗಳನ್ನು ಬರೆಯುವಾಗ ಕೇವಲ ಇಂಟರ್‌ನೆಟ್ ಮೂಲವನ್ನು ಮಾತ್ರ ಅವಲಂಬಿತವಾಗಿರದೆ, ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಜೊತೆಗೆ ತಮ್ಮ ಸ್ವಾನುಭವ ಅಥವಾ ತಜ್ಞರ ಹಾಗೂ ರೋಗಿಗಳ ಅನುಭವಗಳನ್ನು ಸಂಗ್ರಹಿಸಿ ಬರೆಯುವ ಮೂಲಕ ಉತ್ತಮ ಲೇಖನಗಳನ್ನು ರಚಿಸಬಹುದು ಎಂದರು. ಬರಹಗಾರರು ಕಾಲಮಿತಿ, ಪುಟಗಳ ಮಿತಿ, ಪದಗಳ ಮಿತಿ ಹಾಗೂ ಓದುಗರ ಸಹನೆಯ ಮಿತಿಯನ್ನು ಗಮನದಲ್ಲಿರಿಸಿಕೊಂಡು- ಚಿಕ್ಕ ವಾಕ್ಯಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ದೀಕ್ಷಾ ಆಯುರ್ವೇದ ಅಕಾಡೆಮಿ ಹಾಗೂ ಎವಿಪಿ ಕೊಯಂಬತ್ತೂರು ಇವರು ಆಯೋಜಿಸಿದ್ದ “ಆಯುರ್ ಕೋನ್-ನ್ಯಾಷನಲ್ ವೆಬ್ ಕಾನ್ಫರೆನ್ಸ್ ಆನ್ ಆಯುರ್ವೇದ ಫಾರ್ ಲಿಪಿಡ್ ಡಿಸಾರ್ಡರ್ಸ್”ರಲ್ಲಿ ಕುಂದಾಪುರ ಕೋಟೇಶ್ವರದ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕಿ ಡಾ. ನಿಶಾ ಕುಮಾರಿ ಇವರು ನಿರೂಪಿಸಿದ ಕಿರು ಚಿತ್ರವು ಪ್ರಾತ್ಯಕ್ಷಿಕೆಗೆ ಆಯ್ಕೆಯಾಗಿದೆ. ಡಾ. ನಿಶಾ ಕುಮಾರಿ ಇವರು ರಚಿಸಿದ “ಕರ ಪ್ರಚಿತೀಯ ಆಮಲಕಿ ರಸಾಯನ” ಎಂಬ ಸಾಕ್ಷ್ಯಚಿತ್ರದಲ್ಲಿ ಮರ, ಮಣ್ಣು, ಮನುಷ್ಯನ ಒಡನಾಟವನ್ನು ವಿವರಿಸಲಾಗಿದೆ. ಪ್ರಕೃತಿಯೊಂದಿಗಿನ ಒಡನಾಟವು ಮನುಷ್ಯನ ದೇಹ, ಮನ ಮತ್ತು ಆರೋಗ್ಯದಲ್ಲಿ ಯಾವ ಪರಿಣಾಮ ಬೀರಬಹುದೆಂಬ ಕಿರು ಪರಿಚಯ ಈ ಚಿತ್ರದಲ್ಲಿದೆ. ಇದು ಆಯುರ್ವೇದದಲ್ಲಿ ತಿಳಿಸಿದರ ರಸಾಯನ ಪದ್ಧತಿಯಾದರೆ ಜಪಾನ್ ದೇಶದಲ್ಲಿ ಇದು “ಫಾರೆಸ್ಟ್ ಬಾತ್” ಎಂಬ ಹೆಸರಿನಲ್ಲಿ ಪ್ರಚಲಿತವಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಗ್ರಾಮದ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಯತ್ನ ಮತ್ತು ಗಂಗೊಳ್ಳಿಯಲ್ಲಿ ಹಾಕಿರುವ ಬ್ಯಾನರ್ ಹರಿದ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಹಚ್ಚುವಲ್ಲಿ ಕೋಟೇಶ್ವರದ ಅಂಕದಕಟ್ಟೆಯ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯು ಅಳವಡಿಸಿದ ಸಿಸಿ ಟಿವಿ ಕ್ಯಾಮರದ ಪುಟೇಜ್‌ಗಳು ಸಹಕಾರಿಯಾಗಿವೆ. ಸಂಸ್ಥೆಯ ಈ ಕಾರ‍್ಯದಿಂದ ಪೊಲೀಸ್ ಇಲಾಖೆ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ಇವರಿಗೆ ಕುಂದಾಪುರ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ಕೆ ಇವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ ವಿಭಾಗದ ವತಿಯಿಂದ ಅಂತಿಮ ವರ್ಷದ ಬಿ.ಸಿ.ಎ. ಮತ್ತು ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಐಟಿ ಕಂಪೆನಿಗಳಲ್ಲಿ ದೊರೆಯುವ ಉದ್ಯೋಗ ಮಾಹಿತಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಗ್ಲೋಬಲ್ ಲಾಜಿಕ್ ಹಿಟಾಚಿ ಗ್ರೂಪ್ ಕಂಪೆನಿಯ ಮ್ಯಾನೇಜರಾದ ವಿಪಿನ್ ಕುಮಾರ್ ನಿಟ್ಟೂರು ಇವರು ಐ.ಟಿ. ಕಂಪೆನಿಗಳಲ್ಲಿ ವಿದ್ಯಾರ್ಥಿಗಳಿಗೆ ಇರುವಂತಹ ವಿಪುಲ ಅವಕಾಶಗಳ ಕುರಿತು ಸವಿಸ್ತಾರವಾದ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಮಾತನಾಡಿ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ ಸ್ವಾಗತಿಸಿ, ಉಪನ್ಯಾಸಕ ಶ್ರೀಕಾಂತ್ ವಂದಿಸಿದರು. ಉಪನ್ಯಾಸಕಿ ಪವಿತ್ರಾ ಶೆಟ್ಟಿ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ.ನ.2: ಕಾಂತಾರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಬುಧವಾರ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ. ಹೆಗ್ಗಡೆ ದಂಪತಿಗಳನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದುಕೊಂಡರು. ಡಿ. ಹರ್ಷೆಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೆಂದ್ರ ಕುಮಾರ್ ಅವರು ಉಪಸ್ಥಿತರಿದ್ದರು. ಈ ಸಂದರ್ಭ ರಿಷಬ್ ಶೆಟ್ಟಿ ದಂಪತಿಗಳನ್ನು ಹೆಗ್ಗಡೆಯವರು ಗೌರವಿಸಿದರು. ಈ ವೇಳೆ ನಟ ಪ್ರಮೋದ್ ಶೆಟ್ಟಿ, ಸುಹಾಸ್ ಶೆಟ್ಟಿ ಮೊದಲಾದವರು ಜೊತೆಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ನ.02: ಕಾಲೇಜು ವಿದ್ಯಾರ್ಥಿಯೋರ್ವನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, 24 ಗಂಟೆಯೊಳಗೆ ಕುಂದಾಪುರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಹರಣಕ್ಕೊಳಗಾದ ವಿದ್ಯಾರ್ಥಿಯನ್ನು ಸಿದ್ದಾಪುರ ಜನ್ಸಾಲೆಯ ಗೋವಿಂದ ಶೆಟ್ಟಿ ಎಂಬುವರ ಪುತ್ರ ಶಶಾಂಕ (21) ಎಂದು ಗುರುತಿಸಲಾಗಿದೆ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಶಶಾಂಕ್, ಅ.31ರ ಬೆಳಿಗ್ಗೆ ಕಾಲೇಜಿಗೆ ತೆರಳಿದ್ದು, ಬಳಿಕ 9.30ರ ಸುಮಾರಿಗೆ ತಂದೆಯ ಮೊಬೈಲಿಗೆ ಕರೆ ಮಾಡಿ, ತನ್ನನ್ನು ಕೋಟೇಶ್ವರದ ಕೋಸ್ಟೆಲ್ ಕ್ರೌನ್ ಮಾಲ್ ಬಳಿಯಿಂದ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾಗಿ ತಿಳಿಸಿದ್ದಾನೆ. ಬಳಿಕ 30 ಲಕ್ಷ ಹಣ ನೀಡಿ ಮಗನನ್ನು ಕರೆದೊಯ್ಯುವಂತೆ ಆರೋಪಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಘಟನೆ ನಡೆದು ಒಂದು ದಿನ ಕಳೆದರೂ ಮಗ ಮನೆಗೆ ಬರದೇ ಇರುವುದರಿಂದ ಗಾಬರಿಗೊಂಡ ಶಶಾಂಕ್ ತಾಯಿ ಕುಂದಾಪುರ ಠಾಣೆಯಲ್ಲಿ ಮಂಗಳವಾರ ಸಂಜೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗಿ 24 ಗಂಟೆಗಳೊಳಗೆ ನಾಪತ್ತೆಯಾದ ಶಶಾಂಕ್ ಹಾಗೂ ಆರೋಪಿ ಹುಬ್ಬಳ್ಳಿ ಮೂಲದ ವ್ಯಕ್ತಿಯನ್ನು ಪತ್ತೆ ಹಚ್ಚಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2022-23ನೇ ಸಾಲಿನ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಶಂಕರನಾರಾಯಣ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಜನಪದ ನೃತ್ಯ ಮತ್ತು ಕವ್ಹಾಲಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಅಭೀಜ್ಞಾ – ಜನಪದ ಗೀತೆ, ದ್ವಿತೀಯ ಸ್ಥಾನ; ಆರ್ಯ ಅಯ್ಯಪ್ಪ ಹಾಲಂಬಿ ಮತ್ತು ಮಯೂರ್ ಜಿ – ರಸಪ್ರಶ್ನೆ, ದ್ವಿತೀಯ ಸ್ಥಾನ ಹಾಗೂ ಪ್ರಾಥಮಿಕ ಕಿರಿಯರ ವಿಭಾಗದಲ್ಲಿ ಸಿಂಧೂ ಮಧ್ಯಸ್ಥ – ಭಕ್ತಿಗೀತೆ, ದ್ವಿತೀಯ ಸ್ಥಾನ ಮತ್ತು ಆಶ್ರಿತ್ – ಇಂಗ್ಲಿಷ್ ಕಂಠಪಾಠ ಮೂರನೇ ಸ್ಥಾನ ಪಡೆದಿರುತ್ತಾರೆ. ಇವರಿಗೆ ಆಡಳಿತ ಮಂಡಳಿ, ಮುಖ್ಯೋಪಾಧ್ಯಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಎಸ್ಎಚ್ಎಲ್ ಸಂಸ್ಥೆಯಿಂದ ಕೊಡಮಾಡುವ ‘ನ್ಯಾಷನಲ್ ಎಂಪ್ಲೋಯೆಬಿಲಿಟಿ ಅವಾರ್ಡ್ಸ್ -2022’ ರಾಷ್ಟ್ರೀಯ ಪುರಸ್ಕಾರವನ್ನು ಮಿಜಾರಿನ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯವು ಪಡೆದುಕೊಂಡಿದೆ. 2022ನೇ ಸಾಲಿನ ವಿದ್ಯಾರ್ಥಿಗಳ ಆಸ್ಪೈರಿಂಗ್ ಮೈಂಡ್ಸ್ ಕಂಪ್ಯೂಟರ್ ಅಡಾಪ್ಟಿವ್ ಟೆಸ್ಟ್ (ಎಎಂಸಿಎಟಿ) ಆಧಾರಿತ ಅಂಕಗಳನ್ನು ಆಧರಿಸಿ ಆಳ್ವಾಸ್ ಸಂಸ್ಥೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಸಂಸ್ಥೆಯ ಈ ಸಾಧನೆ ಬಗ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆನಾಂಡಿಸ್ ಹರ್ಷ ವ್ಯಕ್ತಪಡಿಸಿದ್ದಾರೆ. ಎಎಂಸಿಎಟಿ ಒಂದು ಯಾಂತ್ರಿಕ ಔದ್ಯೋಗಿಕ ಪರೀಕ್ಷೆಯಾಗಿದ್ದು, 700ಕ್ಕೂ ಅಧಿಕ ಕಂಪೆನಿಗಳು ಉದ್ಯೋಗಾಕಾಂಕ್ಷಿಗಳಿಗೆ ಕಡ್ಡಾಯವಾಗಿ ಇದನ್ನು ಕೈಗೊಳ್ಳುತ್ತವೆ. ವಿದ್ಯಾರ್ಥಿಗಳ ಎಎಂಸಿಎಟಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಮೆರಿಟ್ ನೀಡಲಾಗುತ್ತದೆ. ಈ ಮೂಲಕ ಕಂಪೆನಿಗಳು ಕೌಶಲ್ಯಭರಿತ ಉತ್ತಮ ಅಭ್ಯರ್ಥಿಗಳನ್ನು ಆಯ್ದುಕೊಳ್ಳುತ್ತವೆ. ದೇಶದ ಸಾವಿರಾರು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದ್ದು, ಅವುಗಳಲ್ಲಿ ಕೇವಲ 97 ಶಿಕ್ಷಣ ಸಂಸ್ಥೆಗಳಿಗೆ ಈ ಪುರಸ್ಕಾರ ಪುರಸ್ಕೃತವಾಗಿದ್ದು, ಅವುಗಳಲ್ಲಿ ಆಳ್ವಾಸ್…

Read More