Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಸೆ.17: ತಾಲೂಕಿನ ಶಿರೂರು ಟೋಲ್ ಬಳಿ ವಿಶ್ರಾಂತಿಗಾಗಿ ಚಾಲಕ ಲಾರಿ ನಿಲ್ಲಿಸಿದ್ದ ಸಂದರ್ಭ ಅದರ ಟಯರ್’ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ಮತ್ತು ತಂಡ ಮೂವರು ಆರೋಪಿಗಳನ್ನು ಶನಿವಾರ ಬಂಧಿಸಿದೆ. ಸೆ.14ರ ರಾತ್ರಿ ಶಿರೂರು ಟೋಲ್ ಬಳಿ ನಿಲ್ಲಿಸಲಾಗಿದ್ದ 16 ಚಕ್ರದ ಟಾಟಾ ಲಾರಿಯ, 1.85 ಲಕ್ಷ ಮೌಲ್ಯದ 5 ಚಕ್ರಗಳನ್ನು ಕಳವುಗೈಯಲಾಗಿತ್ತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ಎರಡೇ ದಿನದಲ್ಲಿ ಆರೋಪಿಗಳಾದ ಮಹಾರಾಷ್ಟದ ಶ್ಯಾಮ ಶಂಕರ ಶಿಂಧೆ (24), ಆಕಾಶ್ ಬಪ್ಪ ಶಿಂಧೆ (19), ಅಮೂಲ್ ರಾಮ ಕಾಳೆ (22) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಇತರ ಠಾಣೆಗಳಲ್ಲಿ ಬೇರೆ ಬೇರೆ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಆರೋಪಿತರಿಂದ ಕಳವಾದ ಚಕ್ರ 5 ಒಟ್ಟು ಮೌಲ್ಯ 1,85,000/- ಹಾಗೂ ಕೃತ್ಯಕ್ಕೆ ಬಳಸಿದ ಅಶೋಕ್ ಲೈಲ್ಯಾಂಡ್ ಲಾರಿ ಮೌಲ್ಯ 35,00,000/- ವಶಪಡಿಸಿಕೊಂಡ ಒಟ್ಟು ಸ್ವತ್ತುಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಸೆ.17: ಕೇಂದ್ರದ ಪ್ರವಾಸೋದ್ಯಮ ಇಲಾಖೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ಕುಂದಾಪುರ ಪುರಸಭೆ, ತ್ರಾಸಿ, ಮರವಂತೆ ಗ್ರಾ.ಪಂ. ಬೈಂದೂರು ಪಟ್ಟಣ ಪಂಚಾಯತ್, ಸೇವಾ ಸಂಗಮ ಟ್ರಸ್ಟ್, ರಾಷ್ಟ್ರಸೇವಿಕಾ ಸಮಿತಿ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ, ಎಫ್ಎಸ್ಎಲ್ ಇಂಡಿಯಾ, ಕರಾವಳಿ ಕಾವಲು ಪೊಲೀಸ್ ಪಡೆ, ಅರಣ್ಯ ಇಲಾಖೆ, ಇನ್ನಿತರ ಸಂಘ-ಸಂಸ್ಥೆಗಳ ಜತೆಗೂಡಿ ಕೋಡಿ ಹಾಗೂ ಮರವಂತೆಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕೋಡಿ ಹಾಗೂ ಮರವಂತೆಯ ಕಡಲ ತೀರದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಬಾಟಲಿಗಳು, ಚಪ್ಪಲಿ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಡಲ ತೀರವನ್ನು ಸ್ವಚ್ಛಗೊಳಿಸಿದರು. ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಮಹಮ್ಮದ್ ಫಾರೂಕ್ ಮಾತನಾಡಿ, ಎಲ್ಲ ಕಡಲ ತೀರ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ನಮ್ಮ ಆದ್ಯತೆ. ಪ್ರಧಾನಿ ಮೋದಿಯವರು ಕರೆ ನೀಡಿದ ಸ್ವಚ್ಛಾ ಭಾರತ ಅಭಿಯಾನದ ಜಾಗೃತಿ ಎಲ್ಲೆಡೆ ಮೂಡಿದೆ. ಮುಖ್ಯವಾಗಿ ಯುವಕ- ಯುವತಿಯರು, ಸಂಘ-ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಸೆ.17: ವಿಶ್ವಕರ್ಮ ಸಮಾಜದ ಮಹಾನ್ ಪುರುಷರು ಸಮಾಜದ ಏಳಿಗೆಗಾಗಿ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬೈಂದೂರು ಉಪ ತಹಶೀಲ್ದಾರ್ ಭೀಮಪ್ಪ ಹೇಳಿದರು. ಅವರು ಶನಿವಾರ ತಹಶೀಲ್ದಾರ್ ಕಚೇರಿ ವತಿಯಿಂದ ಹಾಗೂ ವಿಶ್ವಕರ್ಮ ಯುವಕ ಸಂಘ ರಿ ಬೈಂದೂರು ಇವರ ಸಹಯೋಗದೊಂದಿಗೆ ಕಚೇರಿಯ ಸಭಾಂಗಣದಲ್ಲಿ ನಡೆದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿ, ವಿಶ್ವಕರ್ಮ ಸಮಾಜದ ಜನರು ಶತಮಾನಗಳಿಂದ ಪಂಚ ಕಸುಬುಗಳ ಮೂಲಕ ದೇಶದ ಸಂಸ್ಕೃತಿ ಬಿಂಬುಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದ್ಭುತ ಕೆತ್ತನೆಯ ಮೂಲಕ ಐತಿಹಾಸಿಕ ಸ್ಮಾರಕ, ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮದ ಶಿಲ್ಪಿಗಳಿಗೆ ಸಲ್ಲುತ್ತದೆ. ವಿಶ್ವಕರ್ಮ ಸಮಾಜವು ಒಂದು ಜಾತಿಯಲ್ಲ, ಅದೊಂದು ಸಂಸ್ಕೃತಿ. ಈ ನಿಟ್ಟಿನಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಜನರಿಗೆ ಹಲವು ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೆ ತಂದಿದೆ. ವಿಶ್ವಕರ್ಮ ಸಮಾಜ ಭಾರತ ದೇಶದಲ್ಲಿ ವಿಗ್ರಹ ಮತ್ತು ಶಿಲ್ಪಕಲೆಯಿಂದ ಗುರುತಿಸಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶುಚಿತ್ವ ಹಾಗೂ ಆಹಾರ ಪದ್ಧತಿ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬಿ.ಪಿ, ಶುಗರ್ ಮುಂತಾದ ಕಾಯಿಲೆಗಳಿಂದ ಬಳಲುವವರಿಗೆ ಹೆಚ್ಚಾಗಿ ಕಣ್ಣಿನ ಸಮಸ್ಯೆಯೂ ಕಾಣಿಸುಕೊಳ್ಳುತ್ತದೆ. ಹಾಗಾಗಿ ಆಗಾಗ್ಗೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು, ಆರೋಗ್ಯ ಸಲಹೆಗಳನ್ನು ಪಡೆದುಕೊಳ್ಳುವುದು ಸೂಕ್ತ ಎಂದು ಬೈಂದೂರು ಸರಕಾರಿ ಆಸ್ಪತ್ರೆಯ ವೈದ್ಯೆ ಡಾ. ನಿವೇದಿತಾ ಹೇಳಿದರು. ಅವರು ರೋಟರಿ ಕ್ಲಬ್ ಬೈಂದೂರು ನೇತೃತ್ವದಲ್ಲಿ, ದೃಷ್ಟಿ (ಪ್ರ)ದಾನ ಯೋಜನೆ 2022-22 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಭಾರತೀಯ ರೆಡ್ ಕ್ರಾಸ್ ಬೈಂದೂರು ಘಟಕ ಹಾಗೂ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು – ಮುದ್ದುಮನೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಗಂಗಾನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾದ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದವನ್ನುಉದ್ಘಾಟಿಸಿ ಮಾತನಾಡಿದರು. ಬೈಂದೂರು ರೋಟರಿ ಅಧ್ಯಕ್ಷ ಎಚ್. ಉದಯ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಧಾನಮಂತ್ರಿಗಳ ಜನ್ಮದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಬಿಜೆಪಿ ಪಕ್ಷ ಹಾಗೂ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದು ವಿವಿಧ ರೂಪದಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾಸ್ತಾನ ನಿವಾಸಿಯಾಗಿರುವ ಉಪನ್ಯಾಸಕಿ ಸ್ಪೂರ್ತಿ ಆಚಾರ್ಯ ಹಾಗೂ ಬ್ರಹ್ಮಾವರದ ಚಿತ್ರಕಲಾವಿದ ಅಶ್ವಥ್ ಆಚಾರ್ಯ ಬೃಹತ್ ರಂಗೋಲಿಯಲ್ಲಿ ಭಾವಚಿತ್ರವನ್ನು ಬಿಡಿಸುವ ರಚಿಸುವ ಮೂಲಕ ಪ್ರಧಾನಿಗಳ ಬಗೆಗಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇವರಿಗೆ ಚಿತ್ರ ಕಲಾವಿದರಾದ ಆದಿತ್ಯ ಪೂಜಾರಿ ಇವರಿಗೆ ಸಹಕರಿಸಿದ್ದಾರೆ. ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಯೋಜನೆಯಡಿ ಮಾಹಿತಿ ತಂತ್ರಜ್ಞಾನ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸ್ಪೂರ್ತಿ ಆಚಾರ್ಯ ಅವರು. ಮೊದಲ ಭಾರಿಗೆ ಪೋರ್ಟೆಲ್ ರಂಗೋಲಿ ಬಿಡಿಸಿದ್ದಾರೆ. ಅಶ್ವಥ್ ಆಚಾರ್ಯ ಪದವೀಧರ ಚಿತ್ರಕಲಾವಿರಾಗಿದ್ದಾರೆ. ಸಾಸ್ತಾನದ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ ಐದು ಬಣ್ಣಗಳ ಮಿಶ್ರಣ ಮಾಡಿ 12 ಅಡಿ ಎತ್ತರ ಹಾಗೂ 5 ಅಡಿ ಅಗಲದ ರಂಗೊಲಿಯಲ್ಲಿ ಪ್ರಧಾನಿಯ ಭಾವಚಿತ್ರವನ್ನು ಅರಳಿಸಿದ್ದಾರೆ. ಇದಕ್ಕೆ ಸುಮಾರು 15 ಗಂಟೆಗಳ ಸಮಯ ವ್ಯಯಿಸಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2022ನೇ ಸಾಲಿನ ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್ (Mch) ಪ್ರವೇಶ ಪರೀಕ್ಷೆ ಸರ್ಜರಿ ವಿಭಾಗದಲ್ಲಿ ಕುಂದಾಪುರದ ಡಾ. ಅತೀಶ್ ಬಿ. ಶೆಟ್ಟಿ ದೇಶದಲ್ಲೇ ಪ್ರಥಮ ರಾಂಕ್ ಪಡೆದುಕೊಂಡಿದ್ದಾರೆ. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಸರ್ಜನ್ ಡಾ. ಬಾಲಕೃಷ್ಣ ಶೆಟ್ಟಿ ಹಾಗೂ ಸುನಿತಾ ಶೆಟ್ಟಿ ಕಂದಾವರ ಅವರ ಪುತ್ರರಾದ ಅತೀಶ್ ಬಿ. ಶೆಟ್ಟಿ ಅವರು ಬ್ರಹ್ಮಾವರ ಲಿಟಲ್ ರಾಕ್ ಸ್ಕೂಲಿನಲ್ಲಿ ಪಿಯುಸಿ ತನಕದ ವಿದ್ಯಾಭ್ಯಾಸ ಪೂರೈಸಿ, ಸಿಇಟಿಯಲ್ಲಿ 13ನೇ ರ್ಯಾಂಕ್ ಪಡೆದುಕೊಂಡಿದ್ದರು. ಬಳಿಕ ಕೆಎಂಸಿ ಮಣಿಪಾಲದಲ್ಲಿ ಎಂಬಿಬಿಎಸ್, ಬಿಎಂಸಿ ಮೆಡಿಕಲ್ ಕಾಲೇಜು ಬೆಂಗಳೂರಿನಲ್ಲಿ ಎಂ.ಎಸ್. ಪದವಿಯನ್ನು ಮುಗಿಸಿ ಅಗಸ್ಟ್’ನಲ್ಲಿ ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ ನೀಟ್ ಪರೀಕ್ಷೆ ಬರೆದಿದ್ದರು.

Read More

ಬೇರೆ ಬೇರೆ ಕಾರಣಗಳಿಂದಾಗಿ ಮನೆ, ಕಛೇರಿಯಲ್ಲಿ ನೆಗೆಟಿವ್ ಶಕ್ತಿಗಳೇ ತುಂಬಿಕೊಂಡಿರುತ್ತವೆ. ಒತ್ತಡದ ಜೀವನದ ಜೊತೆಗೆ ಇನ್ನೊಬ್ಬರ ಮೇಲಿನ ಹೊಟ್ಟೆಕಿಚ್ಚು, ತಾತ್ಸಾರದ ಮನೋಭಾವನೆ ಇದೆಲ್ಲವಕ್ಕೂ ಪ್ರಮುಖ ಕಾರಣವಾಗಿರುತ್ತವೆ. ಆದರೆ ಇವೆಲ್ಲವಿಂದ ದೂರವಿದ್ದು, ಸಕಾರಾತ್ಮಕ ಆಲೋಚನೆ ಬೆಳೆಸಿಕೊಳ್ಳವುದು ಒಂದು ಸವಾಲಿನ ಕೆಲಸ. ಅದಕ್ಕಾಗಿ ಧ್ಯಾನ, ವ್ಯಾಯಾಮದಂತಹ ಚಟುವಟಿಗಳ ಅಗತ್ಯವಿದೆ. ಇವುಗಳ ಜೊತೆಗೆ ಮನೆ ಅಥವಾ ಕಛೇರಿಯ ಅಲಂಕಾರವೂ ಸಹ ನಮ್ಮಲ್ಲಿ ಧನಾತ್ಮಕತೆ ಸೃಷ್ಟಿ ಮಾಡಬಲ್ಲದು. ಮನಸ್ಸಿನ ನೆಗೆಟಿವ್ ಆಲೋಚನೆಗಳನ್ನು ದೂರಮಾಡಿ, ಪಾಸಿಟಿವ್ ಮನಸ್ಥಿತಿ ನಮ್ಮದಾಗಲು ಮನೆ ಹಾಗೂ ಕಛೇರಿಯಲ್ಲಿ ಇಡಬಹುದಾದ ಕೆಲವು ಉತ್ತಮ ವಸ್ತುಗಳ ಮಾಹಿತಿ ಈ ಲೇಖನದಲ್ಲಿದೆ. ಮೀನು: ಮೀನು ಸಮೃದ್ಧಿಯನ್ನು ತರಲು ಬಹಳ ಪ್ರಸಿದ್ಧವಾಗಿದೆ. ಇದು ಸಮೃದ್ಧಿಯ ಜೊತೆಗೆ ಉತ್ತಮ ಆರೋಗ್ಯದ ಸಂಕೇತವಾಗಿದೆ. ನಿಮಗಿಷ್ಟವಾದ ಮಾರುಕಟ್ಟೆಯಲ್ಲಿ ಸಿಗುವ ಮೀನಿನ ಪ್ರತಿಮೆಯನ್ನು ಗೋಡೆಯ ಮೇಲೆ ನೇತುಹಾಕಬಹುದು. ಇದರ ಜೊತೆಗೆ ಅಕ್ವೇರಿಯಂ ಸಹ ಇಟ್ಟುಕೊಳ್ಳಬಹುದು, ಆದರೆ ಮೀನುಗಳನ್ನು ನೋಡಿಕೊಳ್ಳುವ ಮತ್ತು ಟ್ಯಾಂಕ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವವರಿಗೆ ಮಾತ್ರ ಇದು ಸೂಕ್ತ. ಆನೆ: ವಿವಿಧ ರೂಪಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಕಿಂಡರ್ ಪ್ಲೇ ಗಾರ್ಡನ್ ನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಉದ್ಯಮಿ ಆನಂದ ಸಿ ಕುಂದರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿದ್ಯಾ ಸಂಸ್ಥೆ ಒದಗಿಸುವ ಇಂತಹ ಸೌಲಭ್ಯಗಳು ಮಕ್ಕಳಲ್ಲಿ ಉತ್ಸಾಹ ವನ್ನು ಹೆಚ್ಚಿಸುತ್ತದೆ. ಕಲಿಕೆಯ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆಯನ್ನು ನೀಡುತ್ತವೆ ಎಂದು ಹೇಳಿದರು. ಜಿ ಎಸ್ ವಿ ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ ಕಾಶಿನಾಥ್ ಪೈ ಅಧ್ಯಕ್ಷತೆ ವಹಿಸಿದ್ದರು. ಜಿಎಸ್ ವಿ ಎಸ್ ಅಸೋಸಿಯೇಷನ್ ಕಾರ್ಯದರ್ಶಿ ಹೆಚ್ ಗಣೇಶ್ ಕಾಮತ್, ಸದಸ್ಯರಾದ, ರಾಮನಾಥ ನಾಯಕ್ ಅಶ್ವಿನ್ ನಾಯಕ್, ನಾಗೇಂದ್ರ ಪೈ, ಗೋವಿಂದರಾಯ ಆಚಾರ್ಯ, ಚಿನ್ಮಯಿ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ಉಮೇಶ್ ಪುತ್ರನ್, ಸುಮ ಪುತ್ರನ್, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ, ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ ಪ್ರಾಂಶುಪಾಲ ಉಮೇಶ್ ಕರಣಿಕ್, ಆಂಗ್ಲ ಮಾಧ್ಯಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸೆ.18 ರಿಂದ 24ರವರೆಗೆ ಜೆಸಿಐ ಉಪ್ಪುಂದ ನೇತೃತ್ವದಲ್ಲಿ ನಡೆಯಲಿರುವ ಜೇಸಿ ಸಪ್ತಾಹ ಸಮ್ಮಿಲನ – 2022 ಸಾಂಸ್ಕ್ರತಿಕ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಇತ್ತೀಚಿಗೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದದ ಅಧ್ಯಕ್ಷರಾದ ನಾಗರಾಜ್ ಪೂಜಾರಿ ಉಬ್ಜೇರಿ, ನಿಕಟ ಪೂರ್ವಾಧ್ಯಕ್ಷರಾದ ಪುರುಷೋತ್ತಮದಾಸ್, ಪೂರ್ವಾಧ್ಯಕ್ಷರಾದ ಪ್ರಕಾಶ್ ಭಟ್, ಮಂಗೇಶ್ ಶ್ಯಾನುಭಾಗ್, ಸುಬ್ರಮಣ್ಯ ಜಿ, ಉದಯ್ ಡಿ. ಆರ್. ಹಾಗೂ ಪ್ರದೀಪ್ ಕುಮಾರ್ ಶೆಟ್ಟಿ, ಶ್ರೀ ಗಣೇಶ್ ಗಾಣಿಗ, ನರಸಿಂಹ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ಸೇವಾ ಪಾಕ್ಷಿಕದಡಿ ನಡೆಯಲಿರು ವಿವಿಧ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಬಿಜೆಪಿ ವಕ್ತಾರ ರಾಘವೇಂದ್ರ ಕಿಣಿ ಮಾಹಿತಿ ನೀಡಿದರು. ಬೈಂದೂರು ಮಂಡಲದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಪ್ರತಾಪ ಶೆಟ್ಟಿ ಚೇರ್ಕಾಡಿ, ಜಿಲ್ಲಾ ಮಾಧ್ಯಮ ವಕ್ತಾರ ಶ್ರೀನಿಧಿ ಹೆಗ್ಡೆ, ಮಂಡಲ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು ಮೊದಲಾದವರು ಉಪಸ್ಥಿತರಿದ್ದರು.

Read More