ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ತಲ್ಲೂರು ಹೊಯ್ಸಳ ಸ್ಟುಡಿಯೋ ಮಾಲಿಕ ಶ್ರೀಧರ ಉಪ್ಪಿನಕುದ್ರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಲ್ಲೂರಿನಲ್ಲಿ ಸ್ಟೂಡಿಯೋ ಹೊಂದಿದ್ದ ಅವರು ತನ್ನ ವೃತ್ತಿಯ ಮೂಲಕ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದರು. ಮೃತರು ಪತ್ನಿ, ಮಗು ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
Author: ನ್ಯೂಸ್ ಬ್ಯೂರೋ
ವಿದ್ಯಾರ್ಥಿಗಳಿಗೆ ಹಾಸ್ಟೆಲ್ನಲ್ಲಿ ದೊರಕದ ಪ್ರವೇಶಾತಿ – ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ಉಡುಪಿ ಜಿಲ್ಲೆಗೆ 300 ಮಕ್ಕಳ ಹಾಸ್ಟೆಲ್ ಮಂಜೂರು – ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಕ್ಕೆ ಕನಕದಾಸ ಹಾಸ್ಟೆಲ್ ಮಂಜೂರು ಕುಂದಾಪುರದಲ್ಲಿ 100 ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೀಟು ಸಿಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಬೈಂದೂರಿನಲ್ಲಿ ಬಿಜೆಪಿ ಕಛೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವರು ಹಿಂದೂಳಿದ ವರ್ಗಗಳ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡಿದ ಸಚಿವ ಕೋಟ
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೈಂದೂರು ಘಟಕದ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ‘ಮಾದಕ ವ್ಯಸನದ ದುಷ್ಪರಿಣಾಮಗಳು ಮತ್ತು ಅಪರಾಧ ಮುಕ್ತ ಸಮಾಜ’ ಎಂಬ ಕಾರ್ಯಾಗಾರ ಆಯೋಜಿಸಲಾಗಿತ್ತು. ಭ್ರಷ್ಟಾಚಾರ ನಿಗ್ರಹ ದಳದ ವೃತ್ತ ನಿರೀಕ್ಷಕರಾದ ವಿನಾಯಕ ಬಿಲ್ಲವ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಯುವಜನತೆ ವ್ಯಸನಮುಕ್ತ ಸಮಾಜ ಕಂಡುಕೊಳ್ಳುವ ಬಗೆ, ವಿವಿಧ ರೀತಿಯ ಮಾದಕ ವ್ಯಸನಗಳು, ವ್ಯಸನದಿಂದಾಗಿ ದುಶ್ಚಟಗಳಿಂದಾಗಿ ವ್ಯಕ್ತಿಯೋರ್ವ ಹೇಗೆ ಅಪರಾಧಗಳಿಗೆ ಬಲಿಯಾಗುತ್ತಾನೆ, ಅಲ್ಲದೆ ವ್ಯಸನಗಳಿಗಾಗಿ ಅಪರಾಧಗಳು ನಡೆಯುವ ಬಗೆ, ಡ್ರಗ್ಸ್ ಗಳಿಂದಾಗಿ ಮನುಷ್ಯನ ಮೇಲೆ ಪ್ರಭಾವ ಬೀರುವ ಅಂಶಗಳು, ಅದರಿಂದಾಗುವ ದುಷ್ಪರಿಣಾಮಗಳ ಕುರಿತು ರಾಜ್ಯದ ಮೂಲೆ ಗಳಲ್ಲಿ ದಾಖಲಾಗಿರುವ ಕೇಸ್ ಸಹಿತ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ಅಪರಾಧಮುಕ್ತ ಸಮಾಜ ನಿರ್ಮಾಣ ಮತ್ತು ಮಾದಕ ವ್ಯಸನಗಳ ಅರಿವಿನ ಕುರಿತು ಮಾಹಿತಿ ನೀಡಿದರು. ಬೈಂದೂರು ವೃತ್ತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನ, ಶ್ರೀ ರಾಮಕ್ಷತ್ರಿಯ ಯುವಕ ಸಮಾಜದ 36ನೇ ವರ್ಷದ ಅಧ್ಯಕ್ಷರಾಗಿ ರಾಘವೇಂದ್ರ ದಡ್ಡು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಂದ್ರ ಡಿ. ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ದಿನಕರ ಪಟವಾಲ್, ಕಾರ್ಯದರ್ಶಿಯಾಗಿ ಗಿರೀಶ್ ಕಲ್ಲುಕಂಟ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಗ್ಗರ್ಸೆ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಸಾರ್ವಜನಿಕ ಗಣೇಶೋತ್ಸವ 33ನೇ ವರ್ಷದ ಅಧ್ಯಕ್ಷರಾಗಿ ಸೂಲ್ಯಣ್ಣ ಗಾಣಿಗ ಹಾಗೂ ಕಾರ್ಯದರ್ಶಿಯಾಗಿ ಸುಧಾಕರ ಮೊಗವೀರ ಆಯ್ಕೆಯಾಗಿದ್ದಾರೆ. ಸಮಿತಿಯ ಗೌರವಾಧ್ಯಕ್ಷರಾಗಿ ಟಿ. ನಾರಾಯಣ ಹೆಗ್ಡೆ, ಉಪಾಧ್ಯಕ್ಷರಾಗಿ ಗುರುದತ್ತ ಎಮ್. ಎಚ್., ವೆಂಕಟರಮಣ ದೇವಾಡಿಗ, ನಾಗರಾಜ ಎಚ್, ದಿವಾಕರ ಶೆಟ್ಟಿ , ಕೆ.ವಿ ಸತೀಶ್, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಪೂಜಾರಿ, ವಸಂತ ಬಿ, ರಾಘವೇಂದ್ರ ಗಾಣಿಗ, ಕೃಷ್ಣ ಗಾಣಿಗ, ಮಂಜುನಾಥ ದೇವಾಡಿಗ, ಗಣೇಶ ಗಾಣಿಗ, ರಾಜು ಹುಳುವಾಡಿ, ನಾಗರಾಜ ಶೆಟ್ಟಿ, ಸಂತೋಷ ಬಿಲ್ಲವ ಆಯ್ಕೆಯಾಗಿದ್ದಾರೆ. ಸಂಘಟನಾ ಕಾರ್ಯದರ್ಶಿ ಸುಭಾಷ್ ಪೂಜಾರಿ, ಸುಧಾಕರ ಶೆಟ್ಟಿ, ನೆಲ್ಯಾಡಿ ಪ್ರಭಾಕರ ಮೊಗವೀರ, ನಾಗರಾಜ ದೇವಾಡಿಗ, ಸುಧೀರ ಶೆಟ್ಟಿ, ಮಹೇಶ ಗಾಣಿಗ, ರಾಘವೇಂದ್ರ ಮೋಗವೀರ, ಗಣೇಶ ದೇವಾಡಿಗ, ನೀಲಕಂಠ ಹುದಾರ್, ಚಂದ್ರ ಪೂಜಾರಿ, ಅಕ್ಷಯ ಶೆಟ್ಟಿ, ಜಯರಾಜ ಹುದಾರ್, ಸಾಂಸ್ಕೃತಿಕ ಕಾರ್ಯದರ್ಶಿ ತಿಮ್ಮಪ್ಪ ಗಾಣಿಗ, ಚಂದ್ರ ಶೆಟ್ಟಿ, ನಾಗಪ್ಪ ಬಿಲ್ಲವ, ಆನಂದ ಟೈಲರ್, ಮಾಧವ ಬಿಲ್ಲವ, ಸುಬ್ರಹ್ಮಣ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪತ್ನಿಯನ್ನು ಕೊಲೆಗೈದ ಪತಿ, ಬಳಿಕ ತಾನೂ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೇವಲ್ಕುಂದ ಶಾಲೆ ಸಮೀಪದಲ್ಲಿ ಭಾನುವಾರ ನಡೆದಿದೆ. ಸೊರಬ ನಿವಾಸಿ ಪೂರ್ಣಿಮಾ ಆಚಾರ್ಯ (38) ಕೊಲೆಯಾದ ಮಹಿಳೆ. ಕೋಗಾರ್ ನಿವಾಸಿ ರವಿ ಆಚಾರ್ಯ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೊರಬದ ತಾಯಿಯ ಮನೆಯಲ್ಲಿ ವಾಸವಿದ್ದ ಪೂರ್ಣಿಮಾ, ಭಾನುವಾರ ಹೆಮ್ಮಾಡಿ ಸಮೀಪದ ಸಂಬಂಧಿಕರ ಸೀಮಂತ ಕಾರ್ಯಕ್ರಮಕ್ಕಾಗಿ ದೇವಲ್ಕುಂದಕ್ಕೆ ಬಂದಿದ್ದರು. ಪತಿ ಕರೆ ಮಾಡಿ ಮನೆಗೆ ಬರುವಂತೆ ಕೇಳಿಕೊಂಡಿದ್ದು, ಪೂರ್ಣಿಮಾ ಕಾರ್ಯಕ್ರಮ ಮುಗಿದ ಬಳಿಕ ಪತಿ ನೆಲೆಸಿದ್ದ ಬಾಡಿಗೆ ಮನೆಗೆ ತೆರಳಿ ತಮ್ಮತಾಯಿಗೆ ಮಾಹಿತಿ ನೀಡಿದ್ದರು. ರಾತ್ರಿ ಪತಿ ಪತ್ನಿ ಮಧ್ಯೆ ಜಗಳವಾಗಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅವರು ಕಳೆದ ಹದಿನಾರು ವರ್ಷಗಳ ಹಿಂದೆ ಕೋಗಾರ್ ಮೂಲದ ರವಿ ಆಚಾರ್ಯ ಪೂರ್ಣಿಮಾರೊಂದಿಗೆ ವಿವಾಹವಾಗಿದ್ದರು. ಹೆಮ್ಮಾಡಿ ಸಮೀಪದ ಬಗ್ವಾಡಿಯಲ್ಲಿ ರವಿ ಆಚಾರ್ಯ ಟಿಪ್ಪರ್ ಚಾಲಕನಾಗಿ ದುಡಿಯುತ್ತಿದ್ದು, ಪತಿ ಹಾಗೂ ಪತ್ನಿ ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಅ.22: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ 2021-22ನೇ ಸಾಲಿನಲ್ಲಿ 37.86 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ. ಗ್ರಾಹಕರ ಸಹಕಾರದಿಂದ ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಸಂಘದ ಪ್ರಧಾನ ಕಛೇರಿಯಲ್ಲಿ ಭಾನುವಾರ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2021-22ನೇ ಸಾಲಿನಲ್ಲಿ ರೂ. 30.19 ಕೋಟಿ ಠೇವಣಿ ಹೊಂದಿದ್ದು 25.11 ಕೋಟಿ ಸಾಲ ನೀಡಿದೆ. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಹಿಂದೆ ಗ್ರಾಹಕರ ಸಹಕಾರ ಹಾಗೂ ನೌಕರರ ಶ್ರಮವಿದೆ ಎಂದರು. ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಉತ್ತಮ ಪ್ರಗತಿ ಸಾಧಿಸಿದ ಪ್ರಬಂಧಕರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸ್ವಾವಲಂಭಿ ಬದುಕಿಗೆ ಹೈನುಗಾರಿಕೆ ಉತ್ತಮ ಆಯ್ಕೆಯಾಗಿದೆ. ಹೈನುಗಾರಿಕೆಯ ಅನುಭವ ಇಲ್ಲದವರೂ ತರಬೇತಿ ಪಡೆದು ಇದರಲ್ಲಿ ತೊಡಗಿಕೊಳ್ಳಲು ಅವಕಾಶವಿದೆ. ದುಡಿಯುವ ಕೈಗಳಿಗೆ ಕೆಲಸ ಸಿಗಬೇಕಿದ್ದರೆ ಸ್ವ-ಉದ್ಯೋಗದ ಮಾರ್ಗ ಉತ್ತಮವಾದುದು ಎಂದು ಮೇಕೋಡು ಹಾಲು ಉತ್ಪಾದರ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಶನಿವಾರ ಶ್ರೀ ಮೇಕೋಡಮ್ಮ ಸಭಾಭವನದಲ್ಲಿ ಜರುಗಿದ ಸಂಘದ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿ ಮೇಕೋಡು ಸಂಘವು ಹಾಲು ಉತ್ಪಾದನೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು ವಾರ್ಷಿಕ 6,42,127 ಲೀ. ಹಾಲು ಸಂಗ್ರಹಿಸಿ ರೂ.1,92,02,862 ಹಣವನ್ನು ಸಂಘದ ಮೂಲಕ ಸದಸ್ಯರು ಪಡೆದುಕೊಂಡಿದ್ದಾರೆ. ವಾರ್ಷಿಕ ವಹಿವಾಟಿನಿಂದ ಸಂಘವು ರೂ.9.59 ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಡಿವಿಡೆಂಟ್ ಹಾಗೂ ಶೇ.65 ಉತ್ಪಾದಕರ ಬೋನಸ್ ನೀಡಲಾಗುತ್ತದೆ ಎಂದರು. ಮೇಕೋಡು ಸಾಂದ್ರ ಶೀತಲೀಕರಣ ಘಟಕದಿಂದ ಆರಂಭಿಸಿದ ಬಳಿಕ ಪ್ರತಿನಿತ್ಯ ಅಂದಾಜು 8,000 ಲೀ.ನಷ್ಟು ಹಾಲು ಪೂರೈಕೆ ಮಾಡಲಾಗುತ್ತಿದ್ದು ಅದರ ಪ್ರಮಾಣ ಮುಂದೆ ಹೆಚ್ಚಲಿದೆ. ದೂರದಿಂದ ಹಾಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜಿ ಕನ್ನಡ ಖಾಸಗಿ ವಾಹಿನಿ ನಡೆಸುತ್ತಿರುವ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ಸೀಸನ್ 4ನಲ್ಲಿ ಕುಂದಾಪುರ ಕೋಟೇಶ್ವರದ ಸಮೃದ್ಧಿ ಎಸ್. ಮೊಗವೀರ ವಿಜೇತಳಾಗಿದ್ದಾಳೆ. ಈ ಹಿಂದೆ ಜಿ ಕನ್ನಡ ವಾಹಿನಿ ನಡೆಸುತ್ತಿದ್ದ ಕನ್ನಡದ ಕಣ್ಮಣಿ ಕಾರ್ಯಕ್ರಮದಲ್ಲಿಯೂ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಳು. ಶ್ರೀಧರ ಮೊಗವೀರ ಹಾಗೂ ಭಾರತಿ ದಂಪತಿಯಗಳ ಪುತ್ರಿಯಾದ ಸಮೃದ್ಧಿ, ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೇಂದ್ರ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸ್ಥಾಯಿ ಸಮಿತಿಯಿಂದ ಬೆಂಗಳೂರಿನಲ್ಲಿ ಸಭೆ ನಡೆಯಿತು. ಸಮಿತಿಯ ಸದಸ್ಯರಾದ ಶಿವಮೊಗ್ಗ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಭಾಗವಹಿಸಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೂರವಾಣಿ ಸಂಪರ್ಕ, ಅಂಗನವಾಡಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸುವ ಬಗ್ಗೆ ಹಾಗೂ ಕಾಲುಸಂಕಗಳ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿ ಕೂಡಲೇ ಈ ವಿಷಯಗಳ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರವನ್ನು ನೀಡುವ ಬಗ್ಗೆ ವಿನಂತಿಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಇಲಾಖೆಗಳ ಮುಖ್ಯಸ್ಥರು, ರಾಜ್ಯ ಲೀಡ್ ಬ್ಯಾಂಕಿನ ಮುಖ್ಯಸ್ಥರಾದ ಕೆನರಾ ಬ್ಯಾಂಕು, ಯೂನಿಯನ್ ಬ್ಯಾಂಕ್ ಮುಖ್ಯಸ್ಥರು ಹಾಗೂ ಇತರ ಅಧಿಕಾರಿಗಳೊಂದಿಗೆ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಟಾನದ ಬಗ್ಗೆ ಸಹ ಚರ್ಚಿಸಲಾಯಿತು. ಹಾಗೂ ರಾಜ್ಯದ ವಿವಿಧ ಕೈಗಾರಿಕೋಧ್ಯಮದವರೊಂದಿಗೆ ಸಿ.ಎಸ್.ಆರ್. ಫಂಡ್ ಅನ್ನು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಬಳಸುವ ಬಗ್ಗೆ ಸಹ ಚರ್ಚಿಸಲಾಯಿತು. ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಪ್ರತಾಪ್ ರಾವ್ ಜಾಧವ್, ಸಮಿತಿಯ ಇತರ ಸಂಸತ್ ಸದಸ್ಯರು,…
