ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಮಾಧ್ಯಮ ಅಕಾಡೆಮಿಯು ಮೈಸೂರು ವಿಭಾಗ ಮಟ್ಟದ ಪತ್ರಕರ್ತರಿಗೆ ಸಂವಿಧಾನ ಮತ್ತು ಪತ್ರಿಕೋದ್ಯಮ, ಫ್ಯಾಕ್ಟ್ ಚೆಕ್ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಬಳಕೆ ಕುರಿತಂತೆ ಫೆಬ್ರವರಿ 27ರಂದು, ಕೊಡಗಿನಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ತರಬೇತಿ ಸಹಕಾರಿಯಾಗಲಿದೆ. ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಮೈಸೂರು ವಿಭಾಗದ (ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ) ಜಿಲ್ಲೆಯ ಪತ್ರಕರ್ತರು ಗೂಗಲ್ ಫಾರ್ಮ್ https://forms.gle/ZJ4X7NjBodXmzeUu5 ನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 22ರ ವರೆಗೆ ವಿಸ್ತರಿಸಲಾಗಿದೆ. ತರಬೇತಿಯ ಆಯ್ಕೆ ಕುರಿತಂತೆ ಅಕಾಡೆಮಿಯ ತೀರ್ಮಾನವೇ ಅಂತಿಮ ಎಂದು ಅಕಾಡೆಮಿಯ ಕಛೇರಿ ಪ್ರಕಟಣೆ ತಿಳಿಸಿದೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ವಾಕ್ ಮತ್ತು ಶ್ರವಣ ತಪಾಸಣಾ ಶಿಬಿರವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿತು. ಕಾರ್ಯಕ್ರಮವನ್ನು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಅಧ್ಯಕ್ಷೆ ಜ್ಯೋತಿ ಉದಯ ಕುಮಾರ್, ಸಾಮಾಜಿಕ ಕಾರ್ಯಕರ್ತ ಐರೋಡಿ ವಿಠ್ಠಲ್ ಪೂಜಾರಿ, ಪಾಂಡೇಶ್ವರ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಲಿಲಾವತಿ ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು. ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಘವೇಂದ್ರ ರಾವ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆರೋಗ್ಯ ಕೇಂದ್ರದ ರಜನಿ ಕಾರ್ಯಕ್ರಮ ನಿರೂಪಿಸಿ, ಫಾರ್ಮಸಿ ಅಧಿಕಾರಿ ಸೀಮಾ ಮ್ಯಾಥ್ಯೂ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕೃಷಿಲೋಕ ಮುನಿಯಾಲಿನ ಗೋಧಾಮವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 21ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗುರುವಾರ ಭಕ್ತಿ ವೈಭವದ ಚಾಲನೆ ನೀಡಲಾಯಿತು. ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್ ಮತ್ತು ಕುಟುಂಬಸ್ಥರು ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ಸಹಿತ ಋತ್ವಿಜರನ್ನು ಸ್ವಾಗತಿಸಿದರು. 6 ಕಾಯಿ ಗಣಯಾಗ, ಉಗ್ರಾಣ ಮುಹೂರ್ತ, ಅನ್ನಾರಾಧನ ಮುಹೂರ್ತ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತ್ರತ್ವದಲ್ಲಿ ವಾಸುದೇವ ಭಟ್ ಅವರ ಸಹಯೋಗದಲ್ಲಿ ನಡೆಯಿತು. ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, ಸವಿತಾ ಆರ್. ಆಚಾರ್, ಅನುಷಾ ಆಚಾರ್, ಪ್ರಜ್ವಲ್, ಆಚಾರ್, ಪೂಜಾ ಆಚಾರ್, ತೇಜಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಠಿಣ ಪರಿಶ್ರಮ ಹಾಗೂ ಪ್ರಯತ್ನ ಬದುಕಿನಲ್ಲಿ ಯಶಸ್ಸು ನೀಡುತ್ತದೆ. ಕಲೆ ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಳ್ಳುವುದು ಬಹುಮುಖ್ಯ. ಸುರಭಿ ತನ್ನ ಚಟುವಟಿಕೆಗಳ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದು ಬೈಂದೂರಿಗೆ ಇನ್ನಷ್ಟು ಹಿರಿಮೆ ತಂದಿದೆ ಎಂದು ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು. ಅವರು ಶನಿವಾರ ಸುರಭಿ ರಿ. ಬೈಂದೂರು ಇದರ ವಾರ್ಷಿಕ ಉತ್ಸವ ಸುರಭಿ ಜೈಸಿರಿ ಹಾಗೂ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ವಹಿಸಿದ್ದರು. ಅತಿಥಿಗಳಾಗಿ ಮಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಸತೀಶ್ ಬಟವಾಡಿ, ಉದ್ಯಮಿಗಳಾದ ಶರತ್ ಕುಮಾರ್ ಶೆಟ್ಟಿ, ಬೈಂದೂರು ಶ್ರೀ ಸೇನೇಶ್ವರ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯ ದೊಟ್ಟಯ್ಯ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಸದಸ್ಯೆ ಧನಾಕ್ಷಿ ವಿಶ್ವನಾಥ ಪೂಜಾರಿ, ಕಸಾಪ ಬೈಂದೂರು ಅಧ್ಯಕ್ಷ ಅರುಣ್ ಕುಮಾರ್, ರೋಟರಿ ಬೈಂದೂರು ನಿಕಟಪೂರ್ವ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವು ಯಡಾಡಿ – ಮತ್ಯಾಡಿಯ ಶ್ರೀ ವಿನಾಯಕ ಸಭಾಭವನದಲ್ಲಿ ನಡೆಯಿತು. ಈ ವಿಶೇಷ ಶಿಬಿರದ ಶ್ರಮದಾನವನ್ನು ಉದ್ಘಾಟಿಸಿ, ನಿವೃತ್ತ ಮುಖ್ಯ ಶಿಕ್ಷಕರಾದ ಸುಬ್ಬಣ್ಣ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ದಿನೇಶ್ ಯಡಾಡಿ, ರಾಘವ್ ಶೆಟ್ಟಿ, ವಿಮಾ ಪ್ರತಿನಿದಿ ಹಳ್ನಿರು, ರಘುರಾಮ ಶೆಟ್ಟಿ ಯಡಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಡಾಡಿ-ಮತ್ಯಾಡಿಯ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಸಂತೋಷ್ ಬೂದಾಡಿ, ಗೋಪಾಲ್, ಅರುಣ್, ಭಾಸ್ಕರ್ ಶೆಟ್ಟಿ ಮತ್ಯಾಡಿ, ರಾಘವೇಂದ್ರ ಪ್ರಭು ಗುಡ್ಡೆಯಂಗಡಿ ಉಪಸ್ಥಿತರಿದ್ದರು. ಶಿಭಿರಾಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ ಮತ್ತು ಪೂಜಾ ಕುಂದರ್ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಸ್ವಯಂಸೇವಕರಾದ ಪ್ರಥಮ ಬಿ.ಸಿ.ಎ. ಪ್ರಸನ್ನ ಸ್ವಾಗತಿಸಿ, ದ್ವಿತೀಯ ಬಿ.ಕಾಂ. ಸುಶ್ಮಿತಾ ಶೆಟ್ಟಿ ವಂದಿಸಿ, ದ್ವಿತೀಯ ಬಿ.ಸಿ.ಎ. ಸ್ವಾತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸೌತ್ ಕೆನರಾ ಫೊಟೋಗ್ರಾಫರ್ಸ್ ಆಸೋಸಿಯೇಶನ್ ದ.ಕ.-ಉಡುಪಿ ಜಿಲ್ಲೆ, ಕುಂದಾಪುರ-ಬೈಂದೂರು ವಲಯದ 2025-27ನೇ ಸಾಲಿನ ಪದಪ್ರದಾನ ಸಮಾರಂಭ ವಂಡ್ಸೆಯ ಶ್ರಿಯಾ ಕನ್ವೆನ್ಷನ್ ಹಾಲ್ನಲ್ಲಿ ನಡೆಯಿತು. ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸುವೂದರ ಮೂಲಕ ಉದ್ಘಾಟಿಸಿ ಮಾತನಾಡಿ, ಛಾಯಾಗ್ರಾಹಕರು ಇಲ್ಲದೆ ಇದ್ದರೆ ನಮ್ಮ ಯಾವುದೇ ನೆನಪುಗಳನ್ನು ಸ್ಮರಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದ ಯಾವುದೇ ಸಿಹಿ ಘಟನೆಗಳನ್ನು ನೀವು ತೆಗೆದಿರುವ ಛಾಯಾಚಿತ್ರ ನೆನಪಿಸಿಡುತ್ತದೆ. ಜೀವನದಲ್ಲಿ ಯಾವುದೇ ಕೆಲಸವು ನಿಕೃಷ್ಟವಲ್ಲ. ಇಂದು ಸಮಾಜದಲ್ಲಿ ತಾವು ಮಾಡುವ ಕೆಲಸದಿಂದ ಸಮಾಜದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಸಾಧ್ಯ. ವೃತ್ತಿಯನ್ನು ಪ್ರೀತಿಸಿದರೆ ವ್ಯಕ್ತಿ ಯಾವ ಸ್ಥಾನಕ್ಕೂ ಹೋಗಬಹುದು. ನಾವು ಜೀವನದಲ್ಲಿ ನಾವು ಏನಾಗಬೇಕು ಅಂತ ಬಯಸಿತ್ತೇವೋ, ಹಾಗೇ ನಮ್ಮ ಜೀವನ ಆಗಲಿಕ್ಕೆ ಆರಂಭವಾಗುತ್ತದೆ. ಯಾವ ವ್ಯಕ್ತಿಯಲ್ಲಿ ಅದ್ಭುತವಾದ ಚಿಂತನೆಗಳು, ಆತ್ಮಾಭಿಮಾನ, ಪರಿಶ್ರಮ ಇದ್ದರೆ ಅವನು ಜೀವನದಲ್ಲಿ ಅತ್ಯುತ್ತಮ ಸ್ಥಾನಕ್ಕೆ ಏರುತ್ತಾನೆ. ಕಠಿಣ ಪರಿಶ್ರಮ ಹಾಕಿ ಕೆಲಸ ಮಾಡಿದಾಗ ಯಾವ ಕೆಲಸಲದಲಿದ್ದರೂ ಜೀವನದಲ್ಲಿ ಗೆಲ್ಲಲು ಸಾಧ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಜೀವನದಲ್ಲಿ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಸ್ಪಂದಿಸುವ ಸಮಾಜಮುಖಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯ. ಇದಕ್ಕೆ ಪಂಚವರ್ಣ ಸಂಘಟನೆಯೇ ಸಾಕ್ಷಿ ಎಂದು ಕೋಟದ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ ನಾವಡ ಅಭಿಪ್ರಾಯಪಟ್ಟರು. ಅವರು ಬುಧವಾರ ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಸಂಘದ ಸದಸ್ಯರೊರ್ವರ ಹುಟ್ಟುಹಬ್ಬದ ಅಂಗವಾಗಿ ಅಶಕ್ತರಿಗೆ ನೆರವು ಎಂಬ ಶೀರ್ಷಿಕೆಯಡಿ ಮೂಡುಗಿಳಿಯಾರಿನ ಆಶಾ ಕಾರ್ಯಕರ್ತೆ ಲಕ್ಷ್ಮೀ ಎನುವಾಕೆಗೆ ನೆರವು ಹಾಗೂ ದಿನಸಿ ಪರಿಕರ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಿ ಮಾತನಾಡಿದರು. ಸದಾ ಕ್ರೀಯಾಶೀಲತೆಯೇ ಜೀವಾಳವಾಗಿರಿಸಿಕೊಂಡು ಪರಿಸರದ ಬಗೆಗಿನ ಕಾಳಜಿ ಕಾರ್ಯಕ್ರಮ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಹತ್ತು ಹಲವು ಕಾರ್ಯಕ್ರಮಗಳಿಂದ ಜನಮನದಿ ಅಚ್ಚಳಿಯದೆ ಉಳಿದ ಪಂಚವರ್ಣ ಸಂಘಟನೆ ಕಾರ್ಯನಿರ್ವಹಣೆ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲದಾಗಿದೆ ಅಶಕ್ತರಿಗೆ ನೆರವು ನಿತ್ಯನಿರಂತರ ಬಡವರ ಹಾಗೂ ಅನಾರೋಗ್ಯ ಪೀಡಿತರಿಗೆ ಧ್ವನಿಯಾಗಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ, ಗೊಂಬೆಗಳ ಮತ್ತು ಆಟಿಕೆಗಳ ವೈವಿಧ್ಯಮಯ ಪ್ರದರ್ಶನವು ಸಂಸ್ಥೆಯ ಕಾರ್ಯದರ್ಶಿಗಾಳಾದ ಕೆ. ರಾಧಕೃಷ್ಣ ಶೆಣೈ ಅವರು ದೀಪ ಬೆಳಗಿಸುವುದರ ಮುಖೇನ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕೃಷ್ಣ ಅಡಿಗ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಡಿಸೋಜ ಅವರು ಉಪಸ್ಥಿತರಿದ್ದರು. ಚಿತ್ತಾಕರ್ಷವಾದ ಗೊಂಬೆಗಳು ಮತ್ತು ಆಟಿಕೆಗಳೊಂದಿಗೆ, ಪುಟಾಟಿಗಳ ಸಂಗೀತ ನರ್ತನವು ಎಲ್ಲರ ಮನಸೊರೆಗೊಂಡವು.ಸಂಧ್ಯಾ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಶಿಕ್ಷಕಿಯರಾದ ಸುನೀತಾ ಡಿ. ಎಲ್ಲರನ್ನೂ ಸ್ವಾಗತಿಸಿ, ವಂದನಾರ್ಪಣೆ ಗೈದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಶರಧಿ ಪ್ರೆಂಡ್ಸ್ ಕ್ರಿಕೆಟರ್ಸ್ ಎಚ್.ಬಿ ಪ್ರೆಂಡ್ಸ್ ಕ್ರಿಕೆಟರ್ಸ್ ಇವರ ಸಂಯೋಜನೆಯಲ್ಲಿ ಕಾರ್ತಟ್ಟು ಚಿತ್ರಪಾಡಿಯ ಹುಣ್ಸೆಬೆಟ್ಟು ಗಿರಿಯಮ್ಮ ಕ್ರಿಕೆಟ್ ಮೈದಾನದಲ್ಲಿ ಶರಧಿ ಪ್ರೆಂಡ್ಸ್ ಹಾಗೂ ಎಚ್.ಬಿ ಪ್ರೆಂಡ್ಸ್ ಸದಸ್ಯರಿಗಾಗಿ ಶಿವರಾತ್ರಿ ಟ್ರೋಫಿ 2026 ಕ್ರಿಕೆಟ್ ಪಂದ್ಯಾಟ ಇತ್ತೀಚಿಗೆ ಜರಗಿತು. ನಿವೃತ್ತ ಪಶುವೈದ್ಯಾಧಿಕಾರಿ ಡಾ. ಮೋಹನ್ ಎಸ್. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಂ.ಕಾಂ ಪದವಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ತೃತಿಯ ರ್ಯಾಂಕ್ನೊಂದಿಗೆ ತೇರ್ಗಡೆಯಾದ ರಶ್ಮಿತಾ ಸಿ.ಆರ್. ಅವರಿಗೆ ಗೌರವ ಅಭಿನಂದನೆಯನ್ನು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸ್ಥಳೀಯ ವಿದ್ಯಾರ್ಥಿಗಳಾದ ಸೌಮ್ಯ, ಕಿಶನ್, ಅಮೂಲ್ಯ, ಚಿರಂತನ್ ಭಟ್, ಅನ್ವಿತ್ ಅವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. 1980-1990 ದಶಕದಲ್ಲಿ ಶರಧಿ ಹಾಗೂ ಎಚ್.ಬಿ ಪ್ರೆಂಡ್ಸ್ ತಂಡಗಳ ಪರವಾಗಿ ಆಡಿದ ಕರಾವಳಿ ಟೆನಿಸ್ ಬಾಲ್ ಕ್ರಿಕೆಟ್ನಲ್ಲಿ ಸಾಧನೆತೋರಿದ ಹಿರಿಯ ಕ್ರಿಕೆಟಿಗರಾದ ಕೃಷ್ಣದೇವಾಡಿಗ, ಗಿರೀಶ್ ಕುಂದರ್ , ಸೂರ್ಯ ಆಚಾರ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಜೆಸಿಐ ಹಾಲಾಡಿ ಘಟಕದ ವತಿಯಿಂದ ಅಂಪಾರು ಸಂಜಯಗಾಂಧಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಪರೀಕ್ಷೆಗೆ ತಯಾರಾಗುವುದು ಹೇಗೆ ಎನ್ನುವ ಕುರಿತು ಮಾಹಿತಿ ಶಿಬಿರವು ನಡೆಯಿತು. ಖ್ಯಾತ ತರಬೇತುದಾರರಾದ ಜೆಸಿ ಕೃಷ್ಣ ಮೂರ್ತಿ ಹಾಯ್ಕಾಡಿ ಅವರು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾರ್ಗದರ್ಶನ ನೀಡಿದರು. ಹಾಲಾಡಿ ಜೆಸಿಐ ಘಟಕದ ಅಧ್ಯಕ್ಷರಾದ ಪ್ರದೀಪ ಹಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರಾದ ಉದಯ್ ಕುಮಾರ್ .ಬಿ., ಗೀತಾ ನಾಯಕ್, ಲೇಡಿ ಜೆಸಿಐ ಪ್ರೆಸಿಡೆಂಟ್ ಅವಶ್ಯ ಶೆಟ್ಟಿ, ಜೆಸಿ ಉಪಾಧ್ಯಕ್ಷರಾದ ಜೆಸಿ ಕೃಷ್ಣ ಭಟ್ ಹಾಲಾಡಿ, ಉಪಸ್ಥಿತರಿದ್ದರು. ಹಾಲಾಡಿ ಬ್ರೈಟ್ ಪರ್ಲ್ ವಿದ್ಯಾಸಂಸ್ಥೆಯ ಜೆಸಿ ಆಶಾ ಆರ್ ಕುಲಾಲ್, ಜೆಸಿ ದೀಪಾ ಶೆಟ್ಟಿ ಹಾಲಾಡಿ, ಜೆಸಿ ಮಂಜುಳಾ ಶೆಟ್ಟಿ ಶಾಲಾ ಸಹಶಿಕ್ಷಕಿ ಸವಿತಾ ಕಾರ್ಯಕ್ರಮದಲ್ಲಿ ಸಹಕರಿಸಿದ್ದರು.
