ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೊಗವೀರ ಯುವ ಸಂಘಟನೆ ರಿ. ಉಡುಪಿ ಜಿಲ್ಲೆ ಹಾಲಾಡಿ ಶಂಕರನಾರಾಯಣ ಘಟಕ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ರಿ. ಅಂಬಲಪಾಡಿ, ಉಡುಪಿ ಇವರ ಆಶ್ರಯದಲ್ಲಿ ವಾಗ್ಜ್ಯೋತಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆ ಮೂಡುಬಗೆ ಅಂಪಾರಿನಲ್ಲಿ 80ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯನ್ನು ಶಾಲಾ ಮಕ್ಕಳ ಜೊತೆಗೆ ಆಚರಿಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಯೋಧರಿಗೊಂದು ಸನ್ಮಾನ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಲ್ಯಾನ್ಸ್ ನಾಯಕ್ ಉಮೇಶ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಮ್ಮ ಘಟಕದ ಅಧ್ಯಕ್ಷರಾದ ಶರತ್ ಸೌಡ, ನಿಕಟಪೂರ್ವ ಅಧ್ಯಕ್ಷರಾದ ರಾಘವೇಂದ್ರ ಶಂಕರನಾರಾಯಣ, ಕಾರ್ಯದರ್ಶಿ ರಂಜಿತ್ ಬೈಲೂರು, ಸತೀಶ್ ನ್ಯಾಕ್ ಕೋಟೇಶ್ವರ, ಶಾಲಾ ಮುಖ್ಯೋಪಾಧ್ಯಾಯರಾದ ರವೀಂದ್ರ ದೇವಾಡಿಗ , ರಂಜಿತ್ ಸೌಡ, ನರಸಿಂಹ ಕೊಂಡಳ್ಳಿ, ಗಣೇಶ್ ನೆಲ್ಲಿಕಟ್ಟೆ, ಸಂದೀಪ ಮರ್ಜಿ, ಸುರೇಶ್ ಮೂಡುಬಗೆ, ವನಜ ಮೊಗವೀರ ಅಂಪಾರು, ನಂದಿನಿ ಅಂಪಾರು, ನೇತ್ರಾವತಿ ಮತ್ತು ಶಾಲಾ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.











