ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಖಾಸಗಿ ಶಾಲೆಗಳ ಪೈಪೋಟಿ ಹಾಗೂ ಅಬ್ಬರದ ನಡುವೆ ಸರಕಾರಿ ಶಾಲೆಗಳು ಉತ್ತಮ ಸಾಧನೆ ಮಾಡುತ್ತಿದ್ದು, ಸರಕಾರಿ ಶಾಲೆಗಳಲ್ಲಿನ ಮೂಲಭೂತ ಸೌಲಭ್ಯ ಹಾಗೂ ಶಿಕ್ಷಣದ ಗುಣಮಟ್ಟದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿದೆ ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಸಮನ್ವಯಾಧಿಕಾರಿ ಸದಾನಂದ ಬೈಂದೂರು ಹೇಳಿದರು. ಮೇಲ್ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಶನಿವಾರ ಜರುಗಿದ ಕಂಪ್ಯೂಟರ್ ಕ್ಲಾಸ್ ಉದ್ಘಾಟನೆ ಮತ್ತು ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅವರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಫಾರಸ್ಸಿನ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಎರಡು ಕಂಪ್ಯೂಟರ್ಗಳನ್ನು ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ಗ್ರಾಪಂ ಉಪಾದ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಸದಸ್ಯ ಬಿ.ರಾಘವೇಂದ್ರ, ನಿವೃತ್ತ ಮುಖ್ಯೋಪಾಧ್ಯಾಯ ರಮೇಶ ಮಹಾಲೆ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶ್ರೀ ಪೇಟೆ ವೆಂಕಟರಮಣ ದೇವರ ಜಾತ್ರೆಯ ಪ್ರಯುಕ್ತ ಶ್ರೀಗಣೇಶ ಯಕ್ಷಗಾನ ಮಂಡಳಿ, ಉಪ್ಪಿನಕುದ್ರು ಸಂಯೋಜನೆಯಲ್ಲಿ ನಡೆದ ಹತ್ತನೇ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಹೆಸರಾಂತ ಭಾಗವತೆ ಕಾವ್ಯಶ್ರೀ ನಾಯಕ್ ಅಜೇರುಗೆ ಕಲಾಕೀರ್ತಿ ಬಿರುದಿನೊಂದಿಗೆ ಸನ್ಮಾನಿಸಲಾಯಿತು. ದೇವಳದ ಆಡಳಿತ ಮೊಕ್ತೇಸರ ಮೋಹನದಾಸ ಶೆಣೈ ಅಧ್ಯಕ್ಷತೆ ವಹಿಸಿದ್ದರು. ದೇವಳದ ಆಡಳಿತ ಸದಸ್ಯರಾದ ಸುಬ್ರಾಯ ಪೈ, ವಿವೇಕ ಪೈ, ಶೋಭಾ, ಶ್ಶಾಲಿನಿ, ಪ್ರೀತಮ್ ಉಪಸ್ಥಿತರಿದ್ದರು. ರಂಗಸ್ಥಳ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ವಿ. ರಾಘವೇಂದ್ರ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟರಮಣ ನಾಯಕ್ ಸನ್ಮಾನಪತ್ರ ವಾಚಿಸಿದರು. ವಿಠಲ ಕಾಮತ್ ಸ್ವಾಗತಿಸಿದರು. ವಸಂಯರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಪುರಸಭೆಯಲ್ಲಿ ಆಟೋರಿಕ್ಷಾ ಸ್ಟ್ಯಾಂಡ್ ಒದಗಿಸುವಂತೆ ಕಳೆದ ನಲವತ್ತು ವರ್ಷದಿಂದ ನೂರರಷ್ಟು ಮನವಿ ಸಲ್ಲಿಸಿದ್ದರೂ ಆಟೋಚಾಲಕರ ಬವಣೆ ನೀಗಿಲ್ಲ. ಆಟೋರಿಕ್ಷಾ ಎಲ್ಲರಿಗೂ ಬೇಕು. ಚಾಲಕರ ಸಮಸ್ಯೆ ಯಾರಿಗೂ ಬೇಡ. ರಸ್ತೆ ವಿಸ್ತರಣೆ ಕಟ್ಟಡಗಳ ನಿರ್ಮಾಣಕ್ಕೆ ಆಟೋಚಾಲಕರು ನೆಲೆಯಿಲ್ಲದೆ ಪರದಾಡುತ್ತಿದ್ದು, ಪುರಸಭೆ ಅಟೋಚಾಲಕರ ಸಮಸ್ಯೆ ಸ್ಪಂದಿಸದೆ ಅವರ ತುತ್ತಿನ ತಟ್ಟೆ ಕಸಿದುಕೊಳ್ಳುತ್ತದೆ ಎಂದು ಆಟೋ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘ ಸಮನ್ವಯ ಸಮತಿ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಆರೋಪಿಸಿದ್ದಾರೆ. ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕ ಸಂಘಟನೆಗಳ ಸಮನ್ವಯ ಸಮಿತಿ ಆಶ್ರಯದಲ್ಲಿ ಕುಂದಾಪುರ ಪುರಸಭೆ ಎದುರು ಮಂಗಳವಾರ ನಡೆದ ಪ್ರತಿಯಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಮಾತನಾಡಿದರು. ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮನವಿ ಸ್ವೀಕರಿಸಿ, ಆಟೋರಿಕ್ಷಾ ಚಾಲಕರ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದು, ಹಿಂದೆಯೂ ಕೂಡಾ ಪುರಸಭೆ ಆಟೋಚಾಲಕರ ಸಮಸ್ಯೆ ಬಗ್ಗೆ ಸ್ಪಂದಿಸಿದ್ದು, ಬೇಡಿಕೆ ಬಗ್ಗೆ ಸಂಘಟನೆ ಮುಖಂಡರು ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ನಮ್ಮನ್ನು ಮಾತನಾಡದೇ ಇರುವ ಹಾಗೆ ಮಾಡುವ ಪ್ರಯತ್ನಗಳು ಸುತ್ತಲು ನಡೆಯುತ್ತಿರುವ ಈ ಸಮಯದಲ್ಲಿ ರಂಗಭೂಮಿಯ ಜವಾಬ್ದಾರಿ ಹೆಚ್ಚಿದೆ. ಹೇಳಬೇಕಾದ್ದನ್ನು ಗಟ್ಟಿಯಾಗಿ ಹೇಳುವ ತಾಕತ್ತು ಇಲ್ಲಿರುವುದರಿಂದ ರಂಗಭೂಮಿಯ ಕಲಾವಿದರು ಜೊತೆ ಸೇರುವ ಬದುಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗೆ ಯೋಚಿಸುವ, ನಮ್ಮ ಹಾಗೂ ಜನರ ಸಮಸ್ಯೆಗಳನ್ನು ಹೇಳಿ ಪರಿಹಾರ ಕಂಡುಕೊಳ್ಳುವ ಅಗತ್ಯತೆ ಇದೆ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಲಾವಣ್ಯ ಬೈಂದೂರು ವತಿಯಿಂದ ಐದು ದಿನಗಳ ಕಾಲ ನಡೆಯುವ ರಂಗಪಂಚಮಿ-2022 ನಾಟಕೋತ್ಸವದ ಮೂರನೇ ದಿನದ ಸಭಾಧ್ಯಕ್ಷತೆವಹಿಸಿ ಮಾತನಾಡಿದರು. ಪ್ರಾದೇಶಿಕ ಭಾಷಾ ಸೊಗಡನ್ನು ರಂಗಭೂಮಿಯಲ್ಲಿ ಅಳವಡಿಸಿಕೊಂಡರೆ ಸುಲಭವಾಗಿ ಜನರ ಮನಸ್ಸನ್ನು ತಟ್ಟಲು ಸಾಧ್ಯವಿದೆ ಎನ್ನುವುದನ್ನು ಲಾವಣ್ಯ ತೋರಿಸಿಕೊಟ್ಟಿದೆ ಎಂದರು. ಬೈಂದೂರು ಕಸಾಪ ಅಧ್ಯಕ್ಷ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ರಘು ನಾಯ್ಕ್ ಮಾತನಾಡಿ ಕಲೆ ಮತ್ತು ಸಾಹಿತ್ಯವನ್ನು ಜೀವಂತವಾಗಿಡಲು ಇಂತಹ ಉತ್ಸವಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಚಿಕ್ಕಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲಿನ ದೋಷಾರೋಪ ಸಾಬೀತಾದ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 25 ಸಾವಿರ ದಂಡ ವಿಧಿಸಿದ್ದು ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ. ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳ್ ಕಲ್ಪನಾ ಅವರು ತೀರ್ಪು ನೀಡಿದ್ದಾರೆ. 16 ವರ್ಷ ಪ್ರಾಯದ ಬಾಲಕಿಯನ್ನು ಆಕೆಯ ಚಿಕ್ಕಪ್ಪ (ಸಂತ್ರಸ್ತೆ ತಾಯಿಯ ತಂಗಿ ಗಂಡ) ತನ್ನ ಮನೆಯಲ್ಲಿ ಆಕೆಯ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ಆಕೆ 7 ತಿಂಗಳ ಗರ್ಭವತಿಯಾದಾಗ ಘಟನೆ ಕುಟುಂಬಿಕರ ಗಮನಕ್ಕೆ ಬಂದಿದ್ದು ವಿಚಾರಿಸಿದಾಗ ಕೂಲಿ ಕೆಲಸ ಮಾಡಿಕೊಂಡಿದ್ದ ಚಿಕ್ಕಪ್ಪನೇ ಈ ಕೃತ್ಯ ಎಸಗಿರುವುದು ತಿಳಿದು ಬಂದಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕುಟುಂಬ ಸದಸ್ಯರ ಕೈಕಾಲಿಗೆ ಬಿದ್ದು ಪ್ರಕರಣ ರಾಜಿ ಮೂಲಕ ಇತ್ಯರ್ಥ ಮಾಡಲು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.11: ಮುಂಬರುವ ದಿನಗಳಲ್ಲಿ ಬೀಚ್ ಟೂರಿಸಂ ಹಾಗೂ ಟೆಂಪಲ್ ಟೂರಿಸಂ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಲಿದೆ. ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಿಆರ್ಝಡ್ ನಿಯಮಾವಳಿಗಳು ಬದಲಾಯಿಸುವ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಸೂಕ್ತ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಕರ್ನಾಟಕ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗದ ವತಿಯಿಂದ ನೂತನವಾಗಿ ನಿರ್ಮಿಸಿರುವ ಡಾ. ವಿ.ಎಸ್.ಆಚಾರ್ಯ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ:ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆ. 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಪಿಪಿಪಿ ಮಾದರಿಯಲ್ಲಿಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. 200 ಹಾಸಿಗೆ ಸಾಮರ್ಥ್ಯದ ಸುಸಜ್ಜಿತವಾದ ತಾಯಿ ಮಕ್ಕಳ ಆಸ್ಪತ್ರೆಯ ನಿರ್ಮಾಣ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಮೀನುಗಾರಿಕೆ, ಪ್ರವಾಸೋದ್ಯಮಕ್ಕೆ ಸದಾ ಪ್ರೋತ್ಸಾಹ ನೀಡಲಿದ್ದು, ಕರಾವಳಿ ಭಾಗದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಇಲ್ಲಿನ ಶ್ರೀ ಸದ್ಗುರು ನಿತ್ಯಾನಂದ ನಾಗರಾಜ ಟ್ರಸ್ಟ್’ನ 63ನೇ ವಾರ್ಷಿಕೋತ್ಸವ ಕಾರ್ಯಕ್ರಮಗಳು ಎಪ್ರಿಲ್ 16 ಹಾಗೂ 17ರಂದು ಶ್ರೀ ಸ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಜರುಗಲಿದೆ. ಎಪ್ರಿಲ್ 15ರ ಶುಕ್ರವಾರ ಬೆಳಿಗ್ಗೆ ಶ್ರೀ ನಿತ್ಯಾನಂದ ಗುರು ಸನ್ನಿಧಿಯಲ್ಲಿ ದ್ವಾದಶ ನಾರೀಕೇಳ ಗಣಯಾಗ ಮತ್ತು ನವಕುಂಭ ಸ್ವಪನಾಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಎಪ್ರಿಲ್ 16ರ ಶನಿವಾರ ಸಂಜೆ ಶ್ರೀ ಗುರು ನಿತ್ಯಾನಂದ ಸನ್ನಿಧಿಯಲ್ಲಿ ಕಲಶಸ್ಥಾಪನಕಲ್ಪೋಕ್ತ ಪೂಜೆ ಮತ್ತು ಶ್ರೀ ಗುರು ಮಿಮಲಾನಂದ ಸ್ವಾಮೀಜಿಯವರ ಅಭಿಷೇಕ ಪೂಜೆ ಹಾಗೂ ಎಪ್ರಿಲ್ 17ರ ಆದಿತ್ಯವಾರ ಶ್ರೀ ನಾಗದೇವರ ಸನ್ನಿಧಿಯಲ್ಲಿ ಪಂಚವಿಂಶತಿ ಕಲಶಸ್ಥಾಪನಾ ಸ್ಥಪನಾಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜಾ, ಆಶೀರ್ವಾದ, ಪ್ರಸಾದ ವಿತರಣೆ ವಿಶೇಷ ಪೂಜೆ:ಎಪ್ರಿಲ್ 16ರ ಶನಿವಾರ ಬೆಳಿಗ್ಗೆ ಶ್ರೀ ಸತ್ಯನಾರಾಯಣ ವೃತೋದ್ಯಾಪನಾಂಗ ದಶವಿಧಿಸ್ನಾನ, ಶ್ರೀ ಗುರುಗಣಪತಿ ದೇವತಾ ಪ್ರಾರ್ಥನಾಪೂರ್ವಕ ಪುಣ್ಯಹ, ನಾಂದಿ, ಯಮುನಾ ಪೂಜೆ, ಸೌಪರ್ಣಿಕಾ ನದಿಯಿಂದ ವಾದ್ಯಘೋಷಗಳೊಂದಿಗೆ ಗಂಗೆ ತರುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದಿನಾಂಕ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಏ.11: ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಈ ಬಾರಿಯ ಬಜೆಟ್ನಲ್ಲಿ ಸಿಎಂ ಮಾರ್ಗದರ್ಶಿ ಎಂಬ ಯೋಜನೆ ರೂಪಿಸಿದ್ದು, ಯುವಜನತೆ ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಪುರಭವನದ ಬಳಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿದ್ಯಾ ವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಕಟ್ಟಡ ಡಿಜಿಟಲ್ ಗ್ರಂಥಾಲಯ ಹಾಗೂ ಡಾ.ಬನ್ನಂಜೆ ಗೋವಿಂದಾಚಾರ್ಯರವರ ಪುತ್ಥಳಿ ಅನಾವರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಿಎಂ ಮಾರ್ಗದರ್ಶಿ ಯೋಜನೆಯ ಮೂಲಕ, ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು, ಪರೀಕ್ಷಾ ವಿಧಾನ, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಸಾಫ್ಟ್ವೇರ್ನಲ್ಲಿ ಅಳವಡಿಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ತಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ.ದೋಹಾ,ಎ.11: ಕರ್ನಾಟಕ ಸಂಘ ಕತಾರ್ (ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿನ ಭಾರತೀಯ ಸಾಂಸ್ಕ್ರತಿಕ ಕೇಂದ್ರದ ಅಂಗಸಂಸ್ಥೆ) 2022-23ನೇ ಸಾಲಿಗೆ ತನ್ನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿತು. ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕರ್ನಾಟಕ ಸಂಘ ಕತಾರ್ನ 13ನೇ ಅಧ್ಯಕ್ಷರಾಗಿ ಮಹೇಶ್ ಗೌಡ ಅವರನ್ನು ಆಯ್ಕೆ ಮಾಡಲಾಯಿತು. ಮಹೇಶ್ ಗೌಡ ಅವರು ಮೂಲತಃ ಕರ್ನಾಟಕದ ಬೆಂಗಳೂರಿನವರು. ಕತಾರ್ನಲ್ಲಿರುವ ಭಾರತೀಯ ಸಮುದಾಯದ ಅತ್ಯಂತ ಸಕ್ರಿಯ ಸದಸ್ಯರಲ್ಲಿ ಒಬ್ಬರು. ವಿವಿಧ ಸಂಘಗಳ ಅಡಿಯಲ್ಲಿ ಕೆಲಸ ಮಾಡಿರುವ ಇವರು ಸಮುದಾಯ ಸೇವೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಅವರು ಭಾರತೀಯ ಸಮುದಾಯದ ಬೆನೊವಾಲೆಟ್ ಫ್ಯೂರೋಮ್ ನಿಕಟಪೂರ್ವ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿ ಸಹ ಸೇವೆ ಸಲ್ಲಿಸಿದ್ದಾರೆ. 2022-23ನೆ ಸಾಲಿನ ಸಮಿತಿಗೆ ಆಯ್ಕೆಯಾದ ಇತರ ಸದಸ್ಯರು: ಸಂದೀಪ್ ಡಿ ಎಸ್ -ಉಪಾಧ್ಯಕ್ಷರುಪ್ರದೀಪ್ ಕುಮಾರ್ ದಿಲೀಪ್- ಪ್ರಧಾನ ಕಾರ್ಯದರ್ಶಿರಮೇಶ ಕೆ.ಎಸ್-ಖಜಾಂಚಿಸುಶೀಲಾ ಸುನಿಲ್ -ಸಾಂಸ್ಕೃತಿಕ ಕಾರ್ಯದರ್ಶಿಮಂಜೋತ್ ಸುರೇಶ್- ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿಸೇವಿಯಸ್ ಎಸ್…
ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ಪ್ರಾಯೋಜಿತ ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಇಲೆವೆನ್ ಅಪ್ ಕೋಟ ಮತ್ತು ಅಂಶು ಕೋಟೇಶ್ವರ ತಂಡ ಪ್ರಶಸ್ತಿ ಜಯಿಸಿದೆ. ಫೈನಲ್ ಪಂದ್ಯದಲ್ಲಿ ಅಭಿ ಕೋಟ ಸರ್ವಾಂಗೀಣ ಆಟದ ಫಲವಾಗಿ, ಪಾರಂಪಳ್ಳಿ ಕ್ರಿಕೆಟರ್ಸ್ ತಂಡ ಸೋಲಿಸಿ ಪ್ರಥಮ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯಶ್ರೇಷ್ಟ ಮತ್ತು ಸರಣಿ ಶ್ರೇಷ್ಠ ಅಭಿ ಕೋಟ, ಬೆಸ್ಟ್ ಬ್ಯಾಟ್ಸ್ಮನ್ ಪುಂಡಲೀಕ ಸಾಸ್ತಾನ ಮತ್ತು ಬೆಸ್ಟ್ ಬೌಲರ್ ಪ್ರಶಸ್ತಿ ಯೋಗೀಶ್ ಕೋಟ ತನ್ನದಾಗಿಸಿಕೊಂಡರು. ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಸಚಿನ್ ಕೋಟೇಶ್ವರ, ಬೆಸ್ಟ್ ಬ್ಯಾಟ್ಸ್ಮನ್ ಗಣೇಶ್ (ಬೀಜಾಡಿ) ಟೊರ್ಪೆಡೋಸ್, ಬೆಸ್ಟ್ ಬೌಲರ್ ಸಚಿನ್ ಶೆಟ್ಟಿ ಪಡೆದುಕೊಂಡರು. ಸಮಾರೋಪ:ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಡಿ, ಯುವ ಆಟಗಾರರ ಭಾಗವಹಿಸುವಿಕೆಯಿಂದ ಟಿ.ಸಿ.ಎ ೭ ತಾಲೂಕುಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.೧೦ ಓವರ್ ಗಳಲ್ಲಿ ಆಟಗಾರರ ಪರಿಪೂರ್ಣ ಪ್ರದರ್ಶನ ಹೊರಹೊಮ್ಮಿದೆ. ಉಡುಪಿ…
