ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ನಡೆಸಲ್ಪಡುವ ಶ್ರೀ ಭಗವದ್ಗೀತಾ ಅಭಿಯಾನದ ಅಂಗವಾಗಿ ಇತ್ತೀಚೆಗೆ ಬೈಂದೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರೇಷ್ಠ ಆರ್ ಶೇಟ್ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಕುಂದಾಪುರದ ಸುತ್ತಮುತ್ತಲಿನ ಸರಕಾರಿ ಅನುದಾನಿತ ಖಾಸಗಿ ಮತು ಅನುದಾನರಹಿತ ಖಾಸಗಿ ಕಾಲೇಜುಗಳ ಪ್ರಾಂಶುಪಾಲರುಗಳು ಮತ್ತು ಉಪನ್ಯಾಸಕರಿಗಳಿಗಾಗಿ ಮಂಗಳೂರು ವಿಶ್ವವಿದ್ಯಾನಿಲಯವು ಕಾರ್ಯಾಗಾರವನ್ನು ಹಮ್ಮಿಕೊಂಡಿತು. ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಇರುವ ಬಹುತೇಕ ವಿಷಯಗಳ ಕುರಿತಗೊಂದಲ ಮತ್ತು ಸಮಸ್ಯೆಗಳಿಗೆ ಪರಿಹಾರಗಳಿಲ್ಲವಾದರೂ ಸಮಾಧಾನಕರ ಉತ್ತರಗಳು ದೊರಕಿದವು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಮಂಗಳೂರು ವ್ಯಾಪ್ತಿಯ ನೋಡಲ್ ಅಧಿಕಾರಿಗಳಾದ ರವೀಂದ್ರ ಆಚಾರ್ ಮಾತನಾಡಿ, ಈ ಹಿಂದೆ ವಿದ್ಯಾರ್ಥಿಯು ಕೇವಲ ಓದುವುದು ಪರೀಕ್ಷೆ ಬರೆಯುವುದು ಮತ್ತು ಅಂಕ ಗಳಿಸುವುದು ಬಿಟ್ಟರೆ ಜ್ನಾನಾಧಾರಿತ ಶಿಕ್ಷಣಕ್ಕೆ ತೆರೆದುಕೊಳ್ಳುವ ಅವಕಾಶಗಳು ಕಡಿಮೆ ಇದ್ದವು. ಶಿಕ್ಷಣ ಕೇವಲ ಓದುವುದಕ್ಕೆ ಮತ್ತು ಅಂಕಕ್ಕೆ ಸೀಮಿತವಾಗಬಾರದು ಎಂಬುದನ್ನು ಮನಗಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ದೇಶದಲ್ಲಿಯೇ ಪ್ರಥಮವಾಗಿ ಅನುಷ್ಠನಗೊಳಿಸಲಾಗಿದೆ. ಈಗಿನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯದ ಕುರಿತಂತೆ ಕೌಶಲ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಪರವಾನಗಿ ನೀಡಲು ಮೀನಮೇಷ ಎಣಿಸುತ್ತಿರುದನ್ನು ವಿರೋಧಿಸಿ ಯಕ್ಷಗಾನ ಪ್ರಿಯರ ಒಕ್ಕೂಟವು ಸಹಾಯಕ ಕಮಿಷನರ್ಗೆ ಮನವಿ ಸಲ್ಲಿಸಲಾಯಿತು. ಕುಂದಾಪುರ ನೆಹರೂ ಮೈದಾನ ಯಕ್ಷಕಾಶಿ ಎಂದೇ ಗುರುತಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಪ್ರಿಯರು ಇಲ್ಲಿನ ಯಕ್ಷ ಸೊಬಗು ಸವಿಯಲು ಬರುತ್ತಾರೆ. 2016ರಲ್ಲಿ ಏಕಾಏಕಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಪ್ರತಿಭಟನೆ ನಡೆದಾಗ ಮತ್ತೆ ಅನುಮತಿ ನೀಡಲಾಗಿತ್ತು. ಇದೀಗ ಮತ್ತದೇ ಪರಿಸ್ಥಿತಿ ಎದುರಾಗಿದೆ. ಕೋವಿಡ್ನಿಂದ ಸಂಕಷ್ಟ ಎದುರಿಸಿರುವ ಯಕ್ಷಗಾನ ರಂಗ ಮೈಕೊಡವಿ ಏಳುತ್ತಿರುವಾಗಲೇ ತಾಲೂಕು ಆಡಳಿತ ಯಕ್ಷಗಾನ ಪ್ರದರ್ಶನ ಪರವಾನಗಿ ನೀಡಲು ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಅನುಮತ ನಿರಾಕರಿಸಿದ್ದೇ ಆದಲ್ಲಿ ಉಗ್ರ ಹೋರಾಟದ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಚ್ಚರಿಸಿದರು. ಕಲಾಕ್ಷೇತ್ರ ಅಧ್ಯಕ್ಷ ಕಿಶೋರ್ಕುಮಾರ್, ಸಾಲಿಗ್ರಾಮ ಮೇಳದ ಯಜಮಾನ ಕಿಶನ್ಕುಮಾರ ಹೆಗ್ಡೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಯಕ್ಷ ಸೊಬಗು ಅಧ್ಯಕ್ಷ ಶಶಿಧರ ಹೆಮ್ಮಾಡಿ, ಹಿರಿಯ ಪತ್ರಕರ್ತ ರಾಮಕೃಷ್ಣ ಹೇರ್ಳೆ, ಯಶಸ್,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ವಚ್ಛ ಕಡಲ ತೀರ, ಹಸಿರು ಕೋಡಿ ಅಭಿಯಾನದ ಮೂರನೆಯ ಹಂತವನ್ನು ಬ್ಯಾರೀಸ್ ವಿದ್ಯಾ ಸಂಸ್ಥೆ, ಕುಂದಾಪುರ ಪುರಸಭೆ ಮತ್ತು ಕೋಡಿ ಮಹಾಜನರ ಸಹಯೋಗದೊಂದಿಗೆ ಹಳಅಳಿವೆಯಿಂದ ಕೋಡಿಯ ಸೀ ವಾಕ್ ವರೆಗಿನ 4 ಕಿಲೋ ಮೀಟರ್ ದೂರದ ಕಡಲ ತೀರ ಹಾಗೂ ತೀರದ ಪಕ್ಕದಲ್ಲಿರುವ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಹಮ್ಮಿಕೊಳ್ಳಲಾಯಿತು. ಪುರಸಭೆಯ ಸಹಕಾರದೊಂದಿಗೆ ಕಸದ ವಿಲೇವಾರಿ ಮಾಡಲಾಯಿತು. ಈ ಅಭಿಯಾನದ ನಿರಂತರ ಪ್ರಕ್ರಿಯೆಯಾಗಿ ಪ್ರತಿ ತಿಂಗಳ ಕೊನೆಯ ರವಿವಾರ ನಡೆಸಲಾಗುವುದು ಮತ್ತು ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಈ ಕಾರ್ಯವನ್ನು ಕುಂದಾಪುರ ಜನರ ಆದ್ಯತೆ ಹಾಗೂ ಆಶಯವಾಗಿ ರೂಪಿಸುವ ಇಚ್ಛೆಯನ್ನು ಬ್ಯಾರೀಸ್ ಗ್ರೂಪಿನ ಛೇರ್ಮನ್ ಸಯ್ಯದ್ ಮೊಹಮ್ಮದ್ ಬ್ಯಾರಿ ವ್ಯಕ್ತಪಡಿಸಿದರು. ಬ್ಯಾರೀಸ್ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರು, ಕುಂದಾಪುರ ಪುರಸಭೆಯ ಕೌನ್ಸಿಲರ್ ಗಳು, ಶಿಕ್ಷಕರು, ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬದ ಸಂಭ್ರಮ (1995-2020) ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವ (1921-2021)ದ ಅಂಗವಾಗಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ನಿರಂತರ ಸರಣಿ ಕಾರ್ಯಕ್ರಮದಡಿ 67 ನೇ ತಿಂಗಳ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಸುಮನಾ ಸುಧಾಕರ್ ಆಚಾರ್, ತ್ರಾಸಿ ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.ನಿವೃತ್ತ ಶಿಕ್ಷಕ ಸದಾಶಿವ ಐತಾಳ್, ವಾಸುದೇವ ಶ್ಯಾನುಭಾಗ್ ಕುಂದಾಪುರ, ದೇವಕಿ ಪ್ರಭು ತಲ್ಲೂರು, ನಾಗರಾಜ ಆಚಾರ್ ತ್ರಾಸಿ ಮತ್ತು ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು. ಶ್ರೀ ರಾಮ ಗಣಪತಿ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ, ತ್ರಾಸಿ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ನಿರೂಪಿಸಿದರು, ಪ್ರಭಾಕರ್ ಆಚಾರ್ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ವಾರ್ಷಿಕ ಮಹಾಸಭೆ ಸಾಸ್ತಾನದ ಶಿವಕೃಪಾ ಕಲ್ಯಾಣ ಪಂಟದಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ಶ್ರೀಧರ್ ಜಿ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2021ರ ಆರ್ಥಿಕ ವ್ಯವಹಾರಕೆ ಶೇ97.18ರಷ್ಟು ಸಾಲ ವಸೂಲಾತಿಯಾಗಿದ್ದು ಆಡೀಮ ವರ್ಗೀಕರಣ ಎ ತರಗತಿಯದ್ದಾಗಿರುತ್ತದೆ ಎಂದು ತಿಳಿಸಿದರು. ವರದಿ ಸಾಲಿನಲ್ಲಿ ಸಂಘವು ೮೮ ಲಕ್ಷಕ್ಕೂ ಮಿಕ್ಕಿ ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 15% ಡಿವಿಡೆಂಟ್ ಘೋಷಿಸಲಾಯಿತು. ಸದಸ್ಯರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಸಭೆಗೆ ತಿಳಿಸಲಾಗುವುದು ಎಂದರು. ಈ ಸಂದರ್ಭ ಕಾರ್ಯವ್ಯಾಪ್ತಿಯ ಹಿರಿಯ ಕೃಷಿಕರಾದ ಜಗದೀಶ ಕಾರಂತ ಐರೋಡಿ, ನಾರಾಯಣ ಮರಕಲ ಪಾಂಡೆಶ್ವರ, ಜುಲಿಯಸ್ ಎಂ. ರೋಚ್, ಮೈಕಲ್ ಡಿಸೋಜ ಬಾಳ್ಕುದ್ರು, ಸದಾಶಿವ್ ಪೂಜಾರಿ ಪಾಂಡೆಶ್ವರ ಇವರಿಗೆ ಆಧುನಿಕ ರೈತ ಪದ್ದತಿಯ ಯುವ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ 2020-21ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ85 ಹಾಗೂ 85ಕ್ಕಿಂತ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬ್ಲಾಕ್ ಮಹಿಳಾ ಕಾಂಗ್ರೆಸ್ ನೂತನ ಉಪಾಧ್ಯಕ್ಷರಾಗಿ ಗುಲಾಬಿ ಪೂಜಾರಿ ಮರವಂತೆ ಆಯ್ಕೆಯಾಗಿದ್ದಾರೆ. ಬೈಂದೂರು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೌರಿ ದೇವಾಡಿಗ ಅವರ ಶಿಫಾರಸ್ಸಿನ ಮೇರೆಗೆ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲೆಯಲ್ಲಿ ಪ್ರಥಮ ಡೋಸ್ ಕೋವಿಡ್ ಲಸಿಕೆ ನೀಡುವಲ್ಲಿ ಶೇ.93ರಷ್ಟು ಸಾಧನೆ ಮಾಡಿದ್ದು, ಬಾಕಿ ಉಳಿದ ಶೇ.7 ರಷ್ಟು ಜನರಿಗೆ ಲಸಿಕೆ ಪಡೆಯುವಂತೆ ಎಲ್ಲಾ ಸಮುದಾಯಗಳ ಮುಖಂಡರು ಮತ್ತು ವೈದ್ಯರು ಮನವೊಲಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು, ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ, ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರು ಮತ್ತು ವೈದ್ಯರೊಂದಿಗೆ ನಡೆದ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎರಡೂ ಡೋಸ್ ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ನಿಂದ ಗರಿಷ್ಠ ಸುರಕ್ಷೆ ದೊರೆಯಲಿದೆ. ಜಿಲ್ಲೆಯಲ್ಲಿ ಪ್ರಥಮ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಮತ್ತು ಈಗಾಗಲೇ ಮೊದಲ ಡೋಸ್ ಪಡೆದು 2 ನೇ ಡೋಸ್ ಪಡೆಯಲು ಅವಧಿ ಮೀರಿದವರು ತಕ್ಷಣವೇ ಲಸಿಕೆಯನ್ನು ಪಡೆಯಬೇಕು. ಲಸಿಕೆ ಪಡೆಯಲು ನಿರಾಸಕ್ತಿ ತೋರುವವರನ್ನು ಸಂಬಂಧಪಟ್ಟ ಸಮುದಾಯಗಳ ಮುಖಂಡರು ಮನವೊಲಿಸಬೇಕು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು ಎಂದರು. ಜಿಲ್ಲೆಯ ಎಲ್ಲಾ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳು ಕೋವಿಡ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಉಪ್ಪುಂದ ಮೂಲದ 1.6 ವರ್ಷದ ಪೋರಿ ಅಗಮ್ಯ ಎಂ. ಶೆಟ್ಟಿ ತನ್ನ ವಿಶೇಷ ಬುದ್ಧಿಶಕ್ತಿ ಹಾಗೂ ನೆನಪಿನ ಶಕ್ತಿಯಿಂದ ಭಾರತದ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆ ಯಾಗಿದ್ದಾರೆ. ಅಗಮ್ಯ, ಮಹಾಭಾರತದ ಪ್ರಮುಖ 5 ಪಾತ್ರದಾರಿಗಳ ಅನುಕರಣೆ ಮಾಡುವುದಲ್ಲದೇ ಭಾವನಾತ್ಮಕವಾಗಿ ಅಭಿನಯಿಸು ತ್ತಾಳೆ. 7 ಬಗೆಯ ಪ್ರಾಣಿಗಳ ಧ್ವನಿಯನ್ನು ಅನುಕರಿಸುತ್ತಾಳೆ, ಆರು ಬಗೆಯ ಧಾನ್ಯ ಗಳನ್ನು ಗುರುತಿಸುತ್ತಾಳೆ, 14 ಪ್ರಾಣಿಗಳನ್ನು ಗುರುತಿಸುತ್ತಾಳೆ, ದೇಹದ ಎಂಟು. ಭಾಗಗಳನ್ನು ಗುರುತಿಸುತ್ತಾಳೆ, 20ಕ್ಕೂ ಹೆಚ್ಚು ಗೃಹಬಳಕೆ ವಸ್ತುಗಳನ್ನು ಗುರುತಿಸುವ ಮೂಲಕ ಕಿರಿಯ ವಯಸ್ಸಿನಲ್ಲಿ ಇಂಡಿಯಾ ಆಫ್ ರೆಕಾರ್ಡ್ಗೆ ಬುಕ್ ಸೇರ್ಪಡೆಯಾಗಿದ್ದಾಳೆ. ಬಾಲಕಿ ಉಪ್ಪುಂದ ನಿವಾಸಿ, ಶಹಾಪುರದ ಉದ್ಯಮಿ ಗುರುದತ್ತ ಶೆಟ್ಟಿ ಹಾಗೂ ಮಮತಾ ಶೆಟ್ಟಿ ದಂಪತಿಯ ಪುತ್ರಿ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ತಾಂತ್ರಿಕವಾಗಿ ಗೆಲುವು ಸಾಧ್ಯವಿದ್ದರೂ ತಲೆಯೆತ್ತಿ ನಿಲ್ಲುವ ಗೆಲುವು ನಮ್ಮದಾಗಬೇಕು ಎಂದು ವಿಧಾನ ಪರಿಷತ್ ನ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಹೇಳಿದರು. ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಕುಂದಾಪುರ ಸೋಮವಾರ ಆಯೋಜಿಸಿದ್ದ ಮತದಾರರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ 6 ಸಾವಿರ ಮತಗಳಿವೆ. ಬಿಜೆಪಿ ಬೆಂಬಲಿತ ಸ್ಥಳೀಯ ಪ್ರತಿನಿಧಿಗಳು 3,600 ಇದ್ದಾರೆ. ಕಾಂಗ್ರೆಸ್ ಪಕ್ಷ ಮತ ಹೊಂದಿದೆ. ಎಸ್ಡಿಪಿಐಗೆ 200 ಮತ ಇದೆ. 6 ಸಾವಿರದಲ್ಲಿ 2 ಸಾವಿರ ಮತ ಗೆದ್ದವರು ವಿಜಯ ಸಾಧಿಸಿದಂತೆ, 2 ಸಾವಿರಕ್ಕಿಂತ ಕಡಿಮೆಯಾದಲ್ಲಿ ಪ್ರಿಪರೆನ್ಸಿಯಲ್ ಸಿಸ್ಟಮ್ನಡಿ ಆಯ್ಕೆ ನಡೆಯುತ್ತದೆ. ತಾಂತ್ರಿಕವಾಗಿ ನಮಗೆ ಗೆಲುವು ಆಗಲಿದ್ದರೂ, ಪಕ್ಷೇತರ 27 ಮತಗಳು ಸಹಿತ ಕಾಂಗ್ರೆಸ್ನಲ್ಲಿ ಹಿಂದೆ ಸಾಕಷ್ಟು ಬೆಳೆದು, ಬಳಿಕ ಕಾರಣಾಂತರ ದಿಂದ ಅನ್ಯಪಕ್ಷದಲ್ಲಿರು ವವರ ಮನವೊಲಿಸಿ ಮತ ಪಡೆಯುವ ಮೂಲಕ ತಲೆಯೆತ್ತುವ ಗೆಲುವು ನಮ್ಮದಾಗಬೇಕಾಗಿದೆ ಎಂದರು. ಪ್ರತಾಪ್ಚಂದ್ರ…
