Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ನವಂಬರ್ ರಲ್ಲಿ ನಡೆದ ಸಿ.ಎಸ್ – ಇ.ಇ.ಟಿ. ಪರೀಕ್ಷೆಯಲ್ಲಿ ಆಳ್ವಾಸ್‌ನ ವಿದ್ಯಾರ್ಥಿಗಳು ದಾಖಲೆಯ 75% ಫಲಿತಾಂಶ ಪಡೆದಿದ್ದಾರೆ. ಒಟ್ಟು 32 ವಿದ್ಯಾರ್ಥಿಗಳು ಸಿ.ಎಸ್. ಪರೀಕ್ಷೆ ಬರೆದಿದ್ದು 24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನಘ ಎಸ್. ದೇಶಪಾಂಡೆ, ಅಲಿನಾ ಮೇರಿ ಜಾನಿ, ಹರ್ಷಿತ್ ಕುಮಾರ್, ಫ್ಲೇವಿಯಾ, ಲೊರೈನ್, ಮೊಹಮ್ಮದ್ ರೆಯಾನ್ ರಾಜಾ, ಮೇಘನಾ ಶೆಟ್ಟಿ, ಶಮಾ ಶೆಟ್ಟಿ, ಶ್ರೇಯಾ ಪಿ. ಹೆಗ್ದೆ, ಶ್ರೇಯಾ ಶೆಣೈ, ಸೋನಾಲಿ ಎಸ್. ಡಿಸೋಜಾ, ಸಯ್ಯೆದ್ ಮಹೆಕ್ ಜಮೀಲ್, ದೀಪಶ್ರೀ, ಮನೀಷಾ, ಪ್ರೀತಿ, ಯೋಗೇಶ ಕೆ., ಶ್ರದ್ದಾ, ಸೂರಜ್, ನಿಮ್ರಾ ನಾಜ್, ಎಂ. ಸೌಮ್ಯ, ಶೆರೀನ್ ಖತೀಜಾ, ಭಾಗ್ಯಶ್ರೀ ಬಿ. ಹೊಸಂಗಡಿ, ಅನಂತೇಶ ಪಿ. ಜಿ., ಸೌಮ್ಯ ಟಿ. ಎಚ್. ಉತ್ತೀರ್ಣರಾಗಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ದ್ವಿತೀಯ ಬಿ.ಕಾಂ.ನ ಮೇಘನಾ ಶೆಟ್ಟಿ, 151 (75.5%) ಅಂಕಗಳೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನಿಯಾಗಿದ್ದು, ಸೋನಾಲಿ ಎಸ್. ಡಿಸೋಜಾ 146 (73%), ಶ್ರೇಯಾ ಶೆಣೈ, 144 (72%), ದೀಪಶ್ರೀ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಪ.ಜಾತಿ ಮತ್ತು ಪ. ಪಂಗಡದ ಯುವಕ ಯುವತಿಯರಿಗೆ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಕೈಗಾರಿಕಾ ಘಟಕ ಸ್ಥಾಪಿಸಲು, ಬ್ಯಾಂಕಿನಿಂದ ಸಾಲ ಪಡೆದು ಸಹಾಯಧನಕ್ಕಾಗಿ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2575650 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಬಾಲ್ಯದಲ್ಲಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷಣ ಅವರ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಒದಗಿಸಲಿದೆ. ಸರಕಾರ ಅಂಗನವಾಡಿ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಹೆಚ್ಚಿನ ಅನುದಾನ ಒದಗಿಸುತ್ತಿದೆ. ಗಂಗೊಳ್ಳಿಯ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಸುಮಾರು 60ಕ್ಕೂ ಮಿಕ್ಕಿ ಮಕ್ಕಳು ದಾಖಲಾಗಿರುವುದು ವಿಶೇಷವಾಗಿದ್ದು, ಮಕ್ಕಳ ಕಲಿಕೆಯನ್ನು ಇನ್ನಷ್ಟು ಉತ್ತಮವಾಗಿಸಲು ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ರಾಘವೇಂದ್ರ ಪೈ ಹೇಳಿದರು. ಗಂಗೊಳ್ಳಿ ಗ್ರಾಮದ ಮಲ್ಯರಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ ಸಹಾಯಕಿಯರು ಕೊಡ ಮಾಡಿದ ಕಲಿಕಾ ಸಾಮಾಗ್ರಿಗಳನ್ನು ಮಕ್ಕಳಿಗೆ ಮಂಗಳವಾರ ವಿತರಿಸಿ ಅವರು ಮಾತನಾಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ಲಕ್ಷ್ಮೀಕಾಂತ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಜಯಂತಿ ಖಾರ್ವಿ, ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜೀಟಾ, ಬಾಲವಿಕಾಸ ಸಮಿತಿ ಅಧ್ಯಕ್ಷೆ ನೇತ್ರಾವತಿ ಖಾರ್ವಿ, ಅಂಗನವಾಡಿ ಸಹಾಯಕಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾತೃಭೂಮಿ ಸೇವಾ ಟ್ರಸ್ಟ್ ರಿ. ತುಮಕೂರು ಇವರ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ಸೇವೆ ಗೈದವರಿಗೆ ಕೊಡ ಮಾಡುವ ರಾಜ್ಯ ಮಟ್ಟದ ಕರುನಾಡ ಕಣ್ಮಣಿ ಪ್ರಶಸ್ತಿಯನ್ನು ಬಸ್ರೂರಿನ ಪ್ರದೀಪ್ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು. ಕ್ರೀಡೆ, ಸಾಂಸ್ಕ್ರತಿಕ,ಶೈಕ್ಷಣೀಕ, ಸಾವ೯ಜನಿಕ ಸೇವಾ ವಲಯ, ಧಾಮಿ೯ಕ ಸೇವೆಯೊಂದಿಗೆ ಸ್ವತಂತ್ರ ಸಂಶೋಧನಾ ಕಾಯ೯ದಲ್ಲಿ ತೊಡಗಿಕೊಂಡು ಇವರ ಶಾಸನ ಶೋಧ ಕಾಯ೯ದ ಒಂದು ಶಾಸನವು ಹಂಪಿ ವಿಶ್ವವಿದ್ಯಾಲಯದ ಶಾಸನ ಪ್ರಸಾರಾಂಗ ವಿಭಾಗದಲ್ಲಿ ವರದಿಯಾಗಿದೆ. ಇದರೊಂದಿಗೆ ಅನೇಕ ವೀರಗಲ್ಲು, ಶಾಸನ ಕಲ್ಲು, ಪುರಾತನ ದೇವರ ವಿಗ್ರಹವನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು, ಹಟ್ಟಿಕುದ್ರು ಗುಜ್ಜಾಡಿ ಮನೆ ಪದ್ಮನಾಭ ಪೂಜಾರಿ ಹಾಗೂ ಉಗ್ರಾಣಿ ಮನೆ ಗಿರಿಜಾ ಪೂಜಾರಿ ದಂಪತಿಯ ದ್ವಿತೀಯ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮಂಗಳೂರು,ನ.23: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಮಂಗಳವಾರ ನಾಮಪತ್ರ ಸಲ್ಲಿಸಿದರು.  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಡಾ. ರಾಜೇಂದ್ರ ಕೆ.ವಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಶಾಸಕ ಯು.ಟಿ ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಬೈಂದೂರು ಮಾಜಿ ಶಾಸಕರುಗಳಾದ ಕೆ. ಗೋಪಾಲ ಪೂಜಾರಿ, ಶಕುಂತಲಾ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಉಡುಪಿ ಬೈಂದೂರು ಕಾಂಗ್ರೆಸ್ ಪ್ರಮುಖರಾದ ಮದನ್ ಕುಮಾರ್, ಎಸ್. ರಾಜು ಪೂಜಾರಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ರಘುರಾಮ್ ಶೆಟ್ಟಿ, ಎಸ್. ಪ್ರಕಾಶ್ವಂದ್ರ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ಪ್ರಸ್ನನ್ ಕುಮಾರ್ ಶೆಟ್ಟಿ, ಮೋಹನ್ ಪೂಜಾರಿ, ನರಸಿಂಹ ದೇವಾಡಿಗ, ಶೇಖರ್ ಪೂಜಾರಿ ಸೇರಿದಂತೆ ವಿವಿಧ ಬ್ಲಾಕ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕು ಕೇಂದ್ರದ ರುಪೀ ಮಾಲ್ ಕಟ್ಟಡದಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಪವರ್ ಜಿಮ್ ಮತ್ತು ಫಿಟ್‌ನೆಸ್ಸೆಂಟರ್ ಇದೀಗ ಉಪ್ಪುಂದದಲ್ಲಿ ತನ್ನ ಶಾಖೆ ತೆರೆಯುತ್ತಿದ್ದು ನ.24ರಂದು ಶುಭಾರಂಭಗೊಳ್ಳಲಿದೆ. ಉಪ್ಪುಂದ ಕಂಚಿಕಾನ್ ರಸ್ತೆಯಲ್ಲಿರುವ ವೈಶಾಲಿ ರೆಸ್ಟೋರೆಂಟ್ ಕಟ್ಟಡದಲ್ಲಿ ನ.24ರ ಬೆಳಿಗ್ಗೆ 10:30ಕ್ಕೆ ಪವರ್ ಜಿಮ್ ಮತ್ತು ಫಿಟ್‌ನೆಸ್ ಸೆಂಟರ್ ಉದ್ಘಾಟನೆಗೊಳ್ಳಲಿದೆ. ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರು ಜಿಮ್ ಉದ್ಘಾಟಿಸಲಿದ್ದು, ವೈದ್ಯ ಡಾ. ಪ್ರವೀಣ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಟ್ಟಡ ಮಾಲಿಕ ಬಿ. ವಜುರಾಜ ಶೆಟ್ಟಿ, ರುಪೀ ಮಾಲ್ ಸಿಇಓ ರಾಜೀವ ಕುಮಾರ್, ಪತ್ರಕರ್ತ ಅರುಣ ಕುಮಾರ್, ಸುಮುಖ ಗ್ರೂಫ್ ಸಿಇಓ ಬಿ. ಎಸ್. ಸುರೇಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಜಿಮ್ ಮತ್ತು ಫಿಟ್‌ನೆಸ್ ಸೆಂಟರ್ ಮಾಲಿಕ ವಿಘ್ನೇಶ್ ಅವರು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಯ್ಯಪ್ಪ ಸ್ವಾಮಿ ಭಕ್ತವೃಂದ ಮಾರಣಕಟ್ಟೆ ವತಿಯಿಂದ ಆದಿಗುರು ಶ್ರೀ ಶಂಕರಾಚಾರ್ಯ ಸ್ಥಾಪಿತ ಶ್ರೀಚಕ್ರ ಯಂತ್ರದ ಚಿತ್ರಪಟವನ್ನು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಅರ್ಪಿಸಲಾಯಿತು. ಈ ಸಂದರ್ಭ ಗುರುಸ್ವಾಮಿ ವಂಡಬಳ್ಳಿ ಜಯರಾಮ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ, ರಘುರಾಮ ಶೆಟ್ಟಿ, ನಾರಾಯಣ ಶೆಟ್ಟಿ ಮತ್ತು ಅಯ್ಯಪ್ಪ ಸ್ವಾಮಿ ಭಕ್ತವೃಂದದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಐಟಿ ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ ನಾರಾಯಣ ಅವರು ಸೋಮವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಳದ ವತಿಯಿಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಕಾರ್ಯನಿರ್ವಹಣಾಕಾರಿ ಎಸ್.ಪಿ.ಬಿ. ಮಹೇಶ್, ಸಹಾಯಕ ಕಾರ್ಯನಿರ್ವಹಣಾಕಾರಿ ಗೋವಿಂದ ನಾಯ್ಡ್, ವ್ಯವಸ್ಥಾಪನಾ ಸಮಿತಿ ಸದಸ್ಯೆ ರತ್ನ ರಮೇಶ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ದೃಷ್ಟಿಯಿಂದ ಅಮ್ಮೆಂಬಲ ಸುಬ್ಬರಾವ್ ಪೈ ಅವರು 1906ರಲ್ಲಿ ಕೆನರಾ ಬ್ಯಾಂಕ್‌ನ್ನು ಸ್ಥಾಪನೆ ಮಾಡಿ ಲಕ್ಷಾಂತರ ಕುಟುಂಬಗಳಿಗೆ ನೆರವಾದರು. ಸೇವೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಕೆನರಾ ಬ್ಯಾಂಕ್ ಇಂದು ದೇಶದಲ್ಲಿ ೩ನೇ ಅತಿ ದೊಡ್ಡ ಬ್ಯಾಂಕ್ ಆಗಿ ಬೆಳೆದು ನಿಂತಿದೆ. ಬ್ಯಾಂಕುಗಳು ಕೇವಲ ಹಣಕಾಸಿನ ಹೃದಯ ಮಾತ್ರವಲ್ಲದೇ, ಮಾನವೀಯ ಹೃದಯದಿಂದಲೂ ಕಾರ್ಯನಿರ್ವಹಿಸಿ, ಜನಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಶ್ರಮಿಸಬೇಕೆಂದು ಹೇಳುತ್ತಿದ್ದ ಕೆನರಾ ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರು ಬಡವರಿಗಾಗಿ ಬ್ಯಾಂಕ್ ತೆರೆದ ಕರ್ಮಯೋಗಿ ಎಂದು ಗಂಗೊಳ್ಳಿಯ ಉದ್ಯಮಿ ಎಚ್.ಗಣೇಶ ಕಾಮತ್ ಹೇಳಿದರು. ಕೆನರಾ ಬ್ಯಾಂಕ್‌ನ ಸಂಸ್ಥಾಪಕ ಅಮ್ಮೆಂಬಳ ಸುಬ್ಬ ರಾವ್ ಪೈ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖಾ ಪ್ರಬಂಧಕ ವಿಷ್ಣುಮೂರ್ತಿ, ಗಂಗೊಳ್ಳಿಯ ಉದ್ಯಮಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಜಿ.ಎಸ್.ಬಿ.ಮಹಿಳಾ ಮಂಡಳಿ ಗಂಗೊಳ್ಳಿ ಇವರ ವತಿಯಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ವಿದ್ಯಾಧಿರಾಜ ಸಭಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ತಾಂತ್ರಿಕ ಜಿ.ವಸಂತ ಭಟ್ ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಎಸ್.ವೆಂಕಟರಮಣ ಆಚಾರ್ಯ, ಪುರೋಹಿತರಾದ ಜಿ.ವೇದವ್ಯಾಸ ಆಚಾರ್ಯ, ಜಿ.ರಾಘವೇಂದ್ರ ಆಚಾರ್ಯ ಮತ್ತು ಜಿ.ನಾರಾಯಣ ಆಚಾರ್ಯ ಕಲ್ಯಾಣೋತ್ಸವದ ಧಾರ್ಮಿಕ ಅನುಷ್ಠಾನದಲ್ಲಿ ಸಹಕರಿಸಿದರು. ಭಾಂಡ್ಯ ಶ್ರೀಕಾಂತ ಪೈ ದಂಪತಿ ಯಜಮಾನಿಕೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಜಿ.ವೆಂಕಟೇಶ ನಾಯಕ್, ಜಿಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ನಿರ್ಮಲಾ ಡಿ.ನಾಯಕ್, ಕಾರ್ಯದರ್ಶಿ ವಿಜಯಶ್ರೀ ವಿ.ಆಚಾರ್ಯ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಭಜಕರು, ಸಮಾಜಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.

Read More