Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಪೌಷ್ಟಿಕ ಆಹಾರದ ಕೊರತೆಯಿಂದ ಸಂಭವಿಸುವ ಮಹಿಳೆಯರ ಮತ್ತು ಮಕ್ಕಳ ಸಾವನ್ನು ತಡೆಯುವ ಮತ್ತು ಅವರ ಆರೋಗ್ಯ ವೃದ್ಧಿಗೆ ಪೋಷಕಾಂಶಯುಕ್ತ ಆಹಾರ ಸೇವನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2018ರಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಆರಂಭವಾಯಿತು. ಸಂಬಂಧಿಸಿದವರು ಇದರ ಪ್ರಯೋಜನ ಪಡೆಯಬೇಕು ಎಂದು ಕಾಲ್ತೋಡು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ಕಾರಂತ ಹೇಳಿದರು. ಮರವಂತೆ ಗ್ರಾಮ ಪಂಚಾಯಿತಿ, ಶಿಶು ಆಭಿವೃದ್ದಿ ಇಲಾಖೆ ಹಾಗೂ ಮರವಂತೆ ವಲಯದ ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು. ಗರ್ಬಿಣಿಯರು ಮತ್ತು ಕಿಶೋರಿಯರು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದರೆ ತಮ್ಮ ದಿನನಿತ್ಯದ ಆಹಾರ ಪದ್ದತಿಯನ್ನು ಮತ್ತು ಆಹಾರ ತಯಾರಿ ವಿಧಾನವನ್ನು ಬದಲಿಸಿಕೊಳ್ಳಬೇಕು, ಹೆಚ್ಚಾಗಿ ಮನೆಯಲ್ಲಿಯೇ ಬೆಳೆಸಿದ ತರಕಾರಿಗಳನ್ನು ಉಪಯೋಗಿಸಬೇಕು. ರಕ್ತಹೀನತೆ ತಡೆಗೆ ಮತ್ತು ಗರ್ಭದ ಬೆಳವಣಿಗೆಗೆ ಹೆಚ್ಚು ಹಸಿರು ತರಕಾರಿ ಬಳಸಬೇಕು. ಅಗತ್ಯವಿದ್ದಾಗ ವೈದ್ಯರು ಸೂಚಿಸುವ ಔಷಧವನ್ನು ತಪ್ಪದೆ ಸೇವಿಸಬೇಕು ಎಂದು ಅವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಮೇರಿಕಾ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ನಲ್ಲಿದ್ದ ಮೂರು ದಿನಗಳ ಕಾಲ ಊಟೋಪಚಾರ ಸಹಿತ ಅವರ ಆತಿಥ್ಯದ ನೇತೃತ್ವವನ್ನು ತಾಲೂಕಿನ ಆಲೂರು ಮೂಲದ ಹೋಟೆಲ್ ಉದ್ಯಮಿ ಅನಂದ ಪೂಜಾರಿ ಅವರು ವಹಿಸಿದ್ದರು. ಆಲೂರು ಗ್ರಾಮದ ಕಲ್ಲಂಗಡಿ ಮನೆ ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಗಳ ಪುತ್ರರಾದ ಆನಂದ ಪೂಜಾರಿ ಅವರು ಪತ್ನಿ ಸುಮಿತಾ ಅವರೊಂದಿಗೆ ವಾಷಿಂಗ್ಟನ್ ಡಿಸಿಯಲ್ಲಿ ಕಳೆದ 35 ವರ್ಷಗಳಿಂದ ನೆಲೆಸಿದ್ದು, 25 ವರ್ಷಗಳಿಂದ ವುಡ್‌ಲ್ಯಾಂಡ್ಸ್ ಹೋಟೆಲ್‌ನ್ನು ನಡೆಸುತ್ತಿದ್ದಾರೆ. ಅನಿವಾಸಿ ಭಾರತೀಯ ಆನಂದ ಪೂಜಾರಿ ಹಾಗೂ ಸುಮಿತಾ ದಂಪತಿಗಳು ಶುಕ್ರವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶ ಪಡೆದಿದ್ದರು. ಭಾರತದಿಂದ ಅಮೇರಿಕಾಕ್ಕೆ ಕೇಂದ್ರ ಸಚಿವರು ಸಹಿತ ಗಣ್ಯರು ಭೇಟಿ ನೀಡಿದರೆ ಅವರಿಗೆ ಆನಂದ ಪೂಜಾರಿ ಅವರ ಹೋಟೆಲ್ ಮೂಲಕವೇ ಆತಿಥ್ಯ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು ಮೂರನೇ ಭಾರಿಗೆ ಆತಿಥ್ಯ ನೀಡಲಾಗುತ್ತಿದ್ದು, ನಾಲ್ಕನೇ ಭಾರಿಗೆ ಪ್ರಧಾನಿಯವರನ್ನು ಭೇಟಿಯಾಗುತ್ತಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಏಷ್ಯಾ ವೇದಿಕ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯು ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಸ್ವಂತ ಪರಿಶ್ರಮದಿಂದಲೇ ಬದುಕು ಕಟ್ಟಿಕೊಂಡ ಉದ್ಯಮಿ ಗೋವಿಂದ ಬಾಬು ಪೂಜಾರಿ ಶೆಫ್ಟಾಕ್ ಪುಡ್ & ಹಾಸ್ಪಿಟಾಲಿಟಿ ಸಂಸ್ಥೆಯಿಂದ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಕರೋನಾ ಸಂದರ್ಭದಲ್ಲಿ ಸಾವಿರಾರು ಬಡ ಕುಟುಂಬಗಳಿಗೆಪುಡ್ ಕಿಟ್ ವಿತರಿಸಿದ್ದಾರೆ. ಹೂಟ್ಟೂರಿನಲ್ಲಿ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಸೂರಿಲ್ಲದವರಿಗೆ ಮನೆ ನಿರ್ಮಿಸಿಕೊಟ್ಟು ಬಡಕುಟುಂಬಗಳಿಗೆ ನೆರಳಾಗಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಕುಡಿಯುವ ನೀರಿನ ದಾಹ ತೀರಿಸಿದ್ದು ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ನಾಯಕತ್ವದ ಕೌಶಲ್ಯ ಮತ್ತು ಶ್ರಮದ ದುಡಿಮೆ ಮೂಲಕ ಯಶಸ್ಸು, ಪ್ರಸಿದ್ಧಿ ಗಳಿಸಿರುವ ಇವರು ಹುಟ್ಟೂರು ಉಪ್ಪುಂದದಲ್ಲಿ ಜನೋಪಕಾರಿ ಸಂಸ್ಥೆಯೊಂದು ಇರಬೇಕೆಂಬ ಆಶಯದಿಂದ 2015ರಲ್ಲಿ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿಯನ್ನು ತೆರೆದು ಸಾರ್ವಜನಿಕರ ವಿಶ್ವಾಸಕ್ಕೆ ಪಾತ್ರರಾದರು. ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಕಛೇರಿಯಲ್ಲಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ೧೦೫ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. 246 ಬೂತ್‌ಗಳಲ್ಲಿ ಕಾರ್ಯಕ್ರಮ:ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾತನಾಡಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ 105ನೇ ಜನ್ಮ ದಿನಾಚರಣೆಯನ್ನು ಬಿಜೆಪಿ ಕಛೇರಿಯಲ್ಲಿ ಮಾತ್ರವಲ್ಲದೇ 246 ಬೂತ್‌ಗಳಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಪಕ್ಷದ ಪ್ರತಿ ಕಾರ್ಯಕ್ರಮವನ್ನು ತಳಮಟ್ಟದ ಜನರಿಗೂ ತಲುಪಿಸುವ ಉದ್ದೇಶದಿಂದ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬೈಂದೂರು ಮಂಡಲ ಬಿಜೆಪಿ ಅತ್ಯಂತ ಕ್ರೀಯಾಶೀಲವಾಗಿ ಗರಿಷ್ಠ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಆನಂದ್ ಖಾರ್ವಿ ಉಪ್ಪುಂದ, ಜಿಲ್ಲಾ ಕಾರ್ಯದರ್ಶಿ ಮಾಲತಿ ಬಿ. ನಾಯ್ಕ್, ಜಿಲ್ಲಾ ಕೈಗಾರಿಕಾ ಪ್ರಕೋಷ್ಟ ಸಂಚಾಲಕರಾದ ಬಿ. ಎಸ್. ಸುರೇಶ್ ಶೆಟ್ಟಿ, ಮಂಡಲ ಉಪಾಧ್ಯಕ್ಷರಾದ ಶೇಖರ ಖಾರ್ವಿ ಹಾಗೂ ಮಾಲಿನಿ ಕೆ, ಮಹಿಳಾ ಮೋರ್ಚಾ ಅಧ್ಯಕ್ಷರಾಧ ಭಾಗೀರಥಿ ಸುರೇಶ್, ಎಸ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ೨೦೨೦-೨೧ನೇ ಸಾಲಿನ ಮಹಾಸಭೆಯು ಗಂಗೊಳ್ಳಿಯ ಎಸ್.ವಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ನೀಲಾವತಿ ಎಸ್. ಖಾರ್ವಿ, ಸಂಘವು ವರದಿ ವರ್ಷದಲ್ಲಿ ಒಟ್ಟು ೪೦೨೧ ಸದಸ್ಯರೊಂದಿಗೆ ೧೯.೧೭ ಲಕ್ಷ ರೂ. ಪಾಲು ಬಂಡವಾಳವನ್ನು ಹೊಂದಿದೆ. ವರ್ಷ ಅಂತ್ಯಕ್ಕೆ ೧೧.೦೯ ಕೋಟಿಗೂ ಮಿಕ್ಕಿ ಠೇವಣಿಯನ್ನು ಹೊಂದಿದ್ದು, ಸುಮಾರು ೩.೭೯ ಕೋಟಿ ರೂ.ಗಳನ್ನು ಇತರ ಸಂಘ, ಬ್ಯಾಂಕುಗಳಲ್ಲಿ ಹೂಡಿಕೆ ಮಾಡಲಾಗಿದೆ. ವರದಿ ವರ್ಷದಲ್ಲಿ ಆಡಿಟ್ ವರದಿಯಲ್ಲಿ ಎ ವರ್ಗ ಬಂದಿದ್ದು, ವರದಿ ವರ್ಷಾಂತ್ಯಕ್ಕೆ ಸಂಘವು ೧೧,೮೨,೯೭೬.೦೦ ರೂ. ನಿವ್ವಳ ಲಾಭ ಗಳಿಸಿದೆ. ೨೦೨೦-೨೧ರ ಸಾಲಿನಲ್ಲಿ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಗಣಪತಿ ಖಾರ್ವಿ ೨೦೨೧-೨೦೨೨ನೇ ಸಾಲಿನ ಆಯ-ವ್ಯಯ ಅಂದಾಜು ಬಜೆಟ್ ಹಾಗೂ ೨೦೨೦-೨೧ನೇ ಸಾಲಿನ ಲಾಭಾಂಶ ವಿಂಗಡನೆಯನ್ನು ಮಂಡಿಸಿ ಕಾರ್ಯಕ್ರಮ ನಿರ್ವಹಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್, ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ನಿಮಿತ್ತ ಹತ್ತಾರು ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಇಲ್ಲಿನ ಕೆರ್ಗಾಲು ಗ್ರಾಮದ ನಾಯ್ಕನಕಟ್ಟೆಯ ಕವಿ, ಸಂಘಟಕ ಕೆ. ಪುಂಡಲೀಕ ನಾಯಕ್ ಅವರನ್ನು ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. ನಾಯಕ್ ಸಹಕಾರಿ ರಂಗದಲ್ಲಿ ದುಡಿದು ನಿವೃತ್ತರಾದ ಬಳಿಕ ಸಾಹಿತ್ಯದಲ್ಲಿ ಆಸಕ್ತಿ ತಾಳಿ, ಕವನ ರಚನೆ ಆರಂಭಿಸಿದರು. ಈಗಾಗಲೆ ಅವರ ಮೂರು ಸಂಕಲನಗಳು ಪ್ರಕಟವಾಗಿವೆ. ಸಾಹಿತ್ಯ ಸಂಘಟನೆಯಲ್ಲೂ ತೊಡಗಿರುವ ಅವರು ಎರಡು ರಾಜ್ಯ ಮಟ್ಟದ ಕವಿಗೋಷ್ಟಿ, ಸಾಹಿತ್ಯ ಮತ್ತು ವಿಚಾರ ಸಂಕಿರಣಗಳನ್ನು ಏರ್ಪಡಿಸಿದ್ದಾರೆ. ರಾಜ್ಯದ ವಿವಿಧೆಡೆ ನಡೆದ ಕವಿಗೋಷ್ಠಿಗಳಲ್ಲಿ ತಮ್ಮ ಕವನ ವಾಚಿಸಿದ್ದಾರೆ. 25ರಂದು ಬೆಂಗಳೂರಿನಲ್ಲಿ ನಡೆಯುವ ಪ್ರತಿಷ್ಠಾನದ 30ನೇ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದು ಎಂದು ಪ್ರಕಟಿಸಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿಉಡುಪಿ,ಸೆ.24: ಪ್ರಸಕ್ತ ಸಾಲಿನ “ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯಡಿ” ಮೀನುಗಾರರ ಕಲ್ಯಾಣ ಯೋಜನೆಯಾದ ಉಳಿತಾಯ ಮತ್ತು ಪರಿಹಾರ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಮೀನುಗಾರರ ಸಹಕಾರ ಸಂಘಗಳು 2021-22ನೇ ಸಾಲಿಗೆ ಸದಸ್ಯರ ಹೊಸ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದಾಗಿದೆ. ಸದರಿ ಯೋಜನೆಯಡಿ ಭಾಗವಹಿಸಲು ಇಚ್ಛಿಸುವ ಫಲಾನುಭವಿಗಳು ಬಿ.ಪಿ.ಎಲ್ ಕಾರ್ಡ್ ಹೊಂದಿರುವವರಾಗಿದ್ದು, 18 ರಿಂದ 60 ವರ್ಷ ವಯೋಮಾನದವರಾಗಿರತಕ್ಕದ್ದು ಹಾಗೂ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬಿ.ಪಿ.ಎಲ್ ಕಾರ್ಡ್ ಪ್ರತಿ ಹಾಗೂ ಸಂಘದಲ್ಲಿ ಸದಸ್ಯರಾಗಿರುವ ಬಗ್ಗೆ ದೃಢೀಕರಣ ಪತ್ರದೊಂದಿಗೆ ಸದಸ್ಯತನ ಹೊಂದಿದ ಸಹಕಾರ ಸಂಘದ ಮುಖಾಂತರ ತಮ್ಮ ವ್ಯಾಪ್ತಿಯ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಉಡುಪಿ/ಕುಂದಾಪುರ) ಇವರ ಕಛೇರಿಗೆ ಸೆಪ್ಟಂಬರ್ 30 ರೊಳಗೆ ಸಲ್ಲಿಸುವಂತೆ ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಉಡುಪಿ ಅವರ ಪ್ರಕಟಣೆ ತಿಳಿಸಿದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/ ಮೀನುಗಾರರು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಸೀಡಿಂಗ್ ಮಾಡುವ ಬಗ್ಗೆ:ಮೀನುಗಾರಿಕೆ ಇಲಾಖೆಯ ಕೇಂದ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಸೆ.24: ಕೌಶಲ್ಯಾಭಿವೃಧ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ಮಣಿಪಾಲ್ ರಜತಾದ್ರಿಯ ಉದ್ಯೋಗ ವಿನಿಮಯ ಕಛೇರಿಯಲ್ಲಿ ಸೆಪ್ಟೆಂಬರ್ 30 ರಂದು ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ವಿವಿಧ ಕಂಪೆನಿ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಉದ್ಯೋಗಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದು, ಖಾಸಗಿ ವಲಯದಲ್ಲಿನ ಉದ್ಯೋಗಕ್ಕೆ ಆಸಕ್ತರಿರುವ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ, ಡಿಪ್ಲೋಮಾ, ಐ.ಟಿ.ಐ, ಸ್ನಾತಕೋತ್ತರ ಹಾಗೂ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯನ್ನು ಹೊಂದಿದ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9945856670 ಸಂಪರ್ಕಿಸುವಂತೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಗೆ ಭೇಟಿ ನೀಡುವಂತೆ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ, ಗ್ರಾಮ ಪಂಚಾಯತ್ ಗಂಗೊಳ್ಳಿ, ರೋಟರಿ ಕ್ಲಬ್ ಗಂಗೊಳ್ಳಿ, ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಮತ್ತು ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು ಇವರ ಜಂಟಿ ಆಶ್ರಯದಲ್ಲಿ ಪೋ?ಣ್ ಅಭಿಯಾನ ಮತ್ತು ಪೌಷ್ಠಿಕ ಆಹಾರ ಮಾಸಾಚರಣೆ ಕಾರ್ಯಕ್ರಮ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಗುರುವಾರ ಜರಗಿತು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಎಂ. ಜಿ. ಕಾರ್ಯಕ್ರಮ ಉದ್ಘಾಟಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಎಚ್.ಗಣೇಶ ಕಾಮತ್ ಶುಭಾಶಂಸನೆಗೈದರು. ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತಾ ಮತ್ತು ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಪೌಷ್ಟಿಕ ಆಹಾರದ ಮಾಹಿತಿ, ಪ್ರಾತ್ಯಕ್ಷಿಕೆ ನೀಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಆರ್ಥಿಕ ಹಿಂಜರಿತ ಹಾಗೂ ಕೋವಿಡ್-19 ಪರಿಣಾಮದ ಹೊರತಾಗಿಯೂ ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕ್ 2020-21ನೇ ಸಾಲಿನಲ್ಲಿ 24.57 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 10 ಪಾಲು ಮುನಾಫೆ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ವರ್ಷಾಂತ್ಯಕ್ಕೆ ಬ್ಯಾಂಕಿನ ಪಾಲು ಬಂಡವಾಳ ಸುಮಾರು 1.90 ಕೋಟಿ ರೂ ಮತ್ತು 28.80 ಕೋಟಿ ರೂ. ಠೇವಣಿ ಹೊಂದಿದೆ. ವಿವಿಧ ಸಹಕಾರಿ ಬ್ಯಾಂಕ್‌ಗಳಲ್ಲಿ 17.41 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಆನಂದ ಬಿಲ್ಲವ ಹೇಳಿದರು. ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಬುಧವಾರ ಜರಗಿದ ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಠೇವಣಿ ಸಂಗ್ರಹದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವುದು, ಸುಸ್ತಿ ಸಾಲಗಳ ಪ್ರಮಾಣ ಕಡಿಮೆ ಮಾಡುವುದು ಸೇರಿದಂತೆ ಬ್ಯಾಂಕಿನ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಚಿದು ಹೇಳಿದರು. ಇದೇ ಸಂದರ್ಭ ಪ್ರಸಕ್ತ ಸಾಲಿನ…

Read More