ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಅ.16: ಜಿಲ್ಲೆಯ ನೂತನ ಎಸ್ಪಿಯಾಗಿ ಐಪಿಎಸ್ ಅಧಿಕಾರಿ ಅಕ್ಷಯ್ ಹಾಕೆ ಮಚ್ಚಿಂದ್ರ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಈವರೆಗೆ ಜಿಲ್ಲೆಯ ಎಸ್ಪಿಯಾಗಿದ್ದ ವಿಷ್ಣುವರ್ಧನ್ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಯ ಅಧಿಕ್ಷಕರಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮಚ್ಚಿಂದ್ರ ಅವರು ಚಿಕ್ಕಮಗಳೂರು ಜಿಲ್ಲೆಯ ಎಸ್ಪಿಯಾಗಿದ್ದರು. 2020ರಲ್ಲಿ ಅವರನ್ನು ಜಿಲ್ಲೆಯ ಎಸ್ಪಿಯಾಗಿ ಆದೇಶ ಹೊರಡಿಸಲಾಗಿತ್ತಾದರೂ ಕೊನೆಗೆ ಅದು ರದ್ದಾಗಿ ವಿಷ್ಣುವರ್ಧನ್ ಅವರು ಎಸ್ಪಿಯಾಗಿ ಬಂದಿದ್ದರು.