ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸಮಾಜಮುಖಿ ಚಿಂತನೆಯ ಜೊತೆಗೆ ಕಷ್ಟದಲ್ಲಿರುವ ಬಡವರ, ಅಸಾಯಕರ, ರೋಗಿಗಳ, ಅಂಗವಿಕಲರ ಮುಖದಲ್ಲಿ ನಗು ಕಾಣಬೇಕಾದರೆ ನಾವು ಅಂತವರನ್ನು ಗುರುತಿಸಿ ತಕ್ಷಣ ಸ್ಪಂದಿಸಬೇಕು. ಹೃದಯಪೂರ್ವಕವಾಗಿ ಮಾಡಿದ ಸೇವೆಗಿಂತ ದೊಡ್ಡ ಯಜ್ಞ ಮತ್ತೊಂದಿಲ್ಲ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಹೆರ್ಗ ವಿಶ್ವನಾಥ ಶೆಟ್ಟಿ ಹೇಳಿದರು. ನಾವುಂದ ಲಯನ್ಸ್ ಕ್ಲಬ್ಗೆ ಅಧಿಕೃತ ಭೇಟಿ ನೀಡಿ, ಸಂಜೆ ಮಾಲಸಾ ಆರ್ಕೆಡ್ನಲ್ಲಿ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆರಂಭಗೊಂಡ ಕೇವಲ ಎರಡು ವರ್ಷಗಳಲ್ಲಿ ನಾವುಂದ ಕ್ಲಬ್ ಕಳೆದ ಡಿಸೆಂಬರ್ನಲ್ಲಿ ಟಾಪ್ ೧೦ ಕ್ಲಬ್ಗಳಲ್ಲಿ ೫ನೇ ಸ್ಥಾನ ಪಡೆದುಕೊಂಡ ಬಗ್ಗೆ ತುಂಬಾ ಹೆಮ್ಮೆಯಾಗುತ್ತದೆ. ಸೇವಾ ಮನೋಭಾವನೆಯಿರುವ ಯುವಕರನ್ನು ಕ್ಲಬ್ಗೆ ಸೇರಿಸಿಕೊಂಡು ಗ್ರಾಮೀಣಾಭಿವೃದ್ಧಿಯತ್ತ ಗಮನ ಹರಿಸಬೇಕು. ಸೇವೆಯೇ ನಮ್ಮೆಲ್ಲರ ಪ್ರಮುಖ ಅಜೆಂಡವಾಗಬೇಕು. ಸಹೋದರತೆಯ ಮನೋಭಾವನೆಯಿಂದ ಎಲ್ಲರೂ ಪರಸ್ಪರ ಸಂತೋಷ ಹಂಚಿಕೊಂಡು ಜೀವನ ಸಾಗಿಸುವಂತಾಗಬೇಕು ಎಂದರು. ಲಯನ್ಸ್ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ಐದು ನೂತನ ಸದಸ್ಯರಿಗೆ ಲಯನ್ಸ್ ದ್ವಿತೀಯ ಗವರ್ನರ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ನಾವುಂದ: ಕಿರಿಮಂಜೇಶ್ವರ ಶುಭದಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾರತರತ್ನ ಪುರಸ್ಕ್ರತ, ಗಾನ ಸಾಮ್ರಾಜ್ಞೆ ಲತಾ ಮಂಗೇಶ್ಕರ್ರವರ ಭಾವ ಚಿತ್ರಕ್ಕೆ ಪುಷ್ಪ ನಮನದೊಂದಿಗೆ ಶೃದ್ದಾಂಜಲಿ ಅರ್ಪಿಸಲಾಯಿತು. ಮುಖ್ಯ ಶಿಕ್ಷಕರಾದ ರವಿದಾಸ್ ಶೆಟ್ಟಿ ಮಾತನಾಡಿ ಏಳುವರೆ ದಶಕಗಳ ಕಾಲ ಭಾರತಿಯ ಸಿನಿಮಾ ಕ್ಷೇತ್ರದ ಅನಭಿಷಕ್ತ ರಾಣಿಯಾಗಿ, ಸ್ವರ ಸಾಮ್ರಾಜ್ಞೆಯಾಗಿ ಮೆರೆದ ಲತಾ ಮಂಗೇಶ್ಕರ್ರವರ ನಿಧನವು ದೇಶಕ್ಕೆ, ಸಂಗೀತ ಸಾಮ್ರಾಜ್ಯಕ್ಕೆ ತುಂಬಲಾರದ ನಷ್ಟ, ಭಾರತೀಯ ಸಂಗೀತ ಕ್ಷೇತ್ರದ ಧೀಮಂತ ಮಹಿಳೆಯಾಗಿರುವ ಲತಾಜೀ ಅವರನ್ನು ಮುಂದಿನ ಪೀಳಿಗೆಯವರು ನೆನಪಿಸಿಕೊಳ್ಳುವಂತಹ ವ್ಯಕ್ತಿತ್ವ ಹಾಗೂ ಅವರ ಮಧುರ ಧ್ವನಿ ಪ್ರಪಂಚದಾದ್ಯಂತ ಜನರನ್ನು ಮಂತ್ರ ಮುಗ್ಧಗೊಳಿಸುವ ಅಪ್ರತಿಮ ಸಾಮರ್ಥ್ಯ ಹೊಂದಿದ್ದು ಅವರ ನಿಧನದಿಂದ ದೇಶ ಅಮೂಲ್ಯ ಸಂಪತ್ತನ್ನು ಕಳೆದುಕೊಂಡಿದೆ ಎಂದು ಹೇಳಿದರು. ಸಂತಾಪ ಸೂಚಕ ಸಭೆಯಲ್ಲಿ ಶುಭದಾ ಸಂಸ್ಥೆಯ ಅಧ್ಯಕ್ಷರಾದ ಡಾ. ಎನ್.ಕೆ. ಬಿಲ್ಲವ, ಸಲಹಾ ಸಮಿತಿಯ ಸದಸ್ಯರಾದ ರಾಜೀವ ಶೆಟ್ಟಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜ್ಯುಕೇಶನ್ ಸಿ.ಎ/ಸಿ.ಎಸ್/ಸಿ.ಎಮ್.ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ ನಡೆಸಿದ ಸಿ.ಎ ಅಂತಿಮ ಪರೀಕ್ಷೆ ಮತ್ತು ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದುವುದರ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಡಿಸೆಂಬರ್ನಲ್ಲಿ ನಡೆದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಪುನೀತ್ ಶೆಟ್ಟಿ (449) ಅಂಕಗಳನ್ನು ಪಡೆಯುವುದರ ಮೂಲಕ ಸಿ.ಎ ಪರೀಕ್ಷೆ ಎಲ್ಲಾ ಹಂತಗಳನ್ನು ತೇರ್ಗಡೆ ಹೊಂದಿ ಲೆಕ್ಕ ಪರಿಶೋಧಕನಾಗಿ ಹೊರಹೊಮ್ಮಿದ್ದಾರೆ. ಮತ್ತು ಅಂತಿಮ ಪರೀಕ್ಷೆಯ ಗ್ರೂಪ್ 2 ವಿಭಾಗದಲ್ಲಿ ಪ್ರಕಾಶ್ ಶೆಟ್ಟಿ 400 ಅಂಕಗಳಲ್ಲಿ 212 ಅಂಕ ಪಡೆಯುವುದರ ಮೂಲಕ ಸಿ.ಎ ಅಂತಿಮ ಪರೀಕ್ಷೆಯ ಎರಡನೇ ಗ್ರೂಪ್ನ್ನು ಉತ್ತೀರ್ಣರಾಗಿರುತ್ತಾರೆ. ಡಿಸೆಂಬರ್ 2021 ರಲ್ಲಿ ನಡೆದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಅನಿಕೇತ್ ಕೆದ್ಲಾಯ(278), ಕಾರ್ತಿಕ್ ವಿ(260), ಶ್ರೀ ನಿಧಿ ಹೆಗ್ಡೆ(237), ಅನುಷ್.ಎ.ದೇವಾಡಿಗ(236), ಶ್ಯಾವ್ಯ ಶೆಟ್ಟಿ(227),…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಕಾಲೇಜಿನಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೂಂಡು ಉತ್ತಮ ಜೀವನ ನಿರ್ವಹಿಸುವತ್ತಾ ವಿದ್ಯಾರ್ಥಿಗಳು ಹೆಚ್ಚಿನ ಗಮನ ವಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿ?ನದ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ ೨೦೧೯-೨೦ ಸಾಲಿನ ಬಿಬಿಎಂ ರ್ಯಾಂಕ್ ವಿಜೇತರಿಗೆ ನಡೆದ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಥಿ ಜೀವನದಲ್ಲಿ ಸಕಾರಾತ್ಮಕ ಯೋಚನೆಗಳು ಅಗತ್ಯ. ವಿದ್ಯಾರ್ಥಿಗಳ ನಡುವೆ ಜಾತಿ-ಮತಗಳ ಭಿನ್ನಾಬಿಪ್ರಾಯ ಅನಗತ್ಯ. ವಿದ್ಯಾರ್ಜನೆ ಒಂದೇ ವಿದ್ಯಾರ್ಥಿಗಳ ಗುರಿಯಾಗಿರಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಲಭಿಸಿರುವ ಸ್ವಾತಂತ್ರ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅನಗತ್ಯ ವಿಷಯಗಳಲ್ಲಿ ತಮ್ಮ ಸಮಯವನ್ನು ಕಾಲಹರಣ ಮಾಡಬಾರದು ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ೨೦೧೯-೨೦೨೦ನೇ ಸಾಲಿನ ಬಿಬಿಎಂ ಪರೀಕ್ಷೆಯಲ್ಲಿ ಐದನೇ ರ್ಯಾಂಕ್ ಪಡೆದ ಶ್ರೇಯಾ ಕೆ ಶೆಟ್ಟಿ, ಏಳನೇ ರ್ಯಾಂಕ್ ಪಡೆದ ಶ್ರೀಲಕ್ಷ್ಮಿ, ಎಂಟನೇ ರ್ಯಾಂಕ್ ಪಡೆದ ಕೀರ್ತಿ ಎಸ್, ಹತ್ತನೇ ರ್ಯಾಂಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬದುಕಿನಲ್ಲಿ ಅವಕಾಶಗಳು ಎದುರಾದಾಗ ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಯಶಸ್ಸು ಅವಲಂಬಿತವಾಗಿರುತ್ತದೆ. ಧನಾತ್ಮಕ ಚಿಂತನೆಯೊಂದಿಗೆ ಅವಕಾಶವನ್ನು ಗುರುತಿಸುವ ಹಾಗೂ ಸ್ವೀಕರಿಸುವ ಮುನ್ನಡೆಯುವ ಜಾಣ್ಮೆ ನಮ್ಮದಾಗಬೇಕಿದೆ ಎಂದು ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಎಂ. ಜಿ. ರಾಮಚಂದ್ರ ಮೂರ್ತಿ ಹೇಳಿದರು. ಅವರು ಬುಧವಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಆಯೋಜಿಸಲಾದ ಬೈಂದೂರು ರೋಟರಿ ಕ್ಲಬ್ಗೆ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಾವು ಮಾಡುವ ಸೇವಾ ಕಾರ್ಯದ ಮೂಲಕ ಯಾರದ್ದೋ ಬದುಕಿನಲ್ಲಿ ಬದಲಾವಣೆ ತರುವಂತಾದರೆ ಅದರಿಂದ ದೊರೆಯುವ ಸಂತೃಪ್ತಿ ದೊಡ್ಡದು. ಪ್ರಸಕ್ತ ಸಾಲಿನಲ್ಲಿ ರೋಟರಿ ಜಿಲ್ಲೆಯಲ್ಲಿ ಒಟ್ಟು 12ಕೋಟಿಗೂ ಅಧಿಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಸದಸ್ಯರಿಗೆ ರೋಟರಿ ಮಾಹಿತಿ ಉತ್ತಮವಾಗಿದ್ದರೆ, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ. ವೃತ್ತಿಯೊಂದಿಗೆ ಉತ್ತಮ ಪ್ರವೃತ್ತಿ ನಮ್ಮದಾಗಿದ್ದರೆ ಅದರಿಂದ ನೆಮ್ಮದಿಯೂ ದೊರೆಯುತ್ತದೆ ಎಂದರು. ಯಕ್ಷಗಾನ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆಗೈದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ದೇವಳದಲ್ಲಿ ತತ್ವಕಲಾ ಹೋಮ ಮತ್ತು ಕಲಶಾಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ಜರುಗಿತು. ದೇವತಾ ಪ್ರಾರ್ಥನೆ ಪೂರ್ವಕ ಕಲಶಸ್ಥಾಪನೆ, ಏಕಾದಶ ರುದ್ರಾಭಿಷೇಕ, ಮಹಾಮಂಗಳಾರತಿ ಮೊದಲಾದವುಗಳು ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಕೋಟ ಜಿ. ಸುಬ್ರಹ್ಮಣ್ಯ ಅಡಿಗರ ಅಧ್ವರ್ಯದಲ್ಲಿ ಹಾಗೂ ಪರ್ಯಾಯ ಅರ್ಚಕರ ನೇತೃತ್ವದಲ್ಲಿ ಜರುಗಿತು. ಫೆಬ್ರವರಿ 14ರಂದು ದೇವಳದಲ್ಲಿ ವಾರ್ಷಿಕ ಮನ್ಮಹಾರಥೋತ್ಸವ ಜರುಗಲಿದ್ದು, ಫೆ.11ರಿಂದ 16ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಇತ್ತಿಚಿಗೆ ಮೂಡುಬಿದಿರೆಯಲ್ಲಿ ನಡೆದ 6ನೇ ಆಲ್ ಇಂಡಿಯಾ ಕರಾಟೆ ಚಾಂಪಿಯನ್ಶಿಪ್ ಕಟಾ ವಿಭಾಗದಲ್ಲಿ ಬಾಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ತೇಜಸ್ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಪ್ರಸ್ತುತ 4ನೇ ತರಗತಿಯಲ್ಲಿ ಕಲಿಯುತ್ತಿರುವ ತೇಜಸ್ ಕುಮಾರ್, ಈ ಹಿಂದೆ ಬೆಳ್ತಂಗಡಿಯಲ್ಲಿ ನಡೆದ 18ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್-2021ರಲ್ಲಿ 10 ವರ್ಷದ ಒಳಗಿನ ಕಟಾದಲ್ಲಿ ಬೆಳ್ಳಿ ಪದಕ ಮತ್ತು ಕಮೇಟಿಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದುಕೊಂಡಿದ್ದು, ಶಾಲಾ ಶಿಕ್ಷಕರು ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿದ್ದು, ಮಿಜಾರಿನ ಆಳ್ವಾಸ್ ಹೋಮಿಯೋಪಥಿ ಮೆಡಿಕಲ್ ಕಾಲೇಜಿನ ವಿದಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಹೋಮಿಯೋಪಥಿ ವೈದ್ಯಕೀಯ ವಿಭಾಗದಲ್ಲಿ ಮೊದಲ 10 ರ್ಯಾಂಕ್ಗಳಲ್ಲಿ ಪ್ರಥಮ ರ್ಯಾಂಕ್ ಸಹಿತ ಆಳ್ವಾಸ್ಗೆ 3 ರ್ಯಾಂಕ್ ಲಭಿಸಿದೆ. ವಿದ್ಯಾರ್ಥಿ ಸಾಯಿಕಿರಣ್ ರಾಗಮ್ (ಪ್ರಥಮ ರ್ಯಾಂಕ್), ಪ್ರಣಮ್ಯ ಜೈನ್ (4ನೇ ರ್ಯಾಂಕ್), ಶ್ವೇತಾ ಸುಬಾಸ್ ಮುರಗುಂಡಿ (8ನೇ ರ್ಯಾಂಕ್) ಪಡೆದಿದ್ದಾರೆ. ಅಂತಿಮ ವರ್ಷದ ಹೋಮಿಯೋಪಥಿ ವಿಭಾಗದಲ್ಲಿ ಪ್ರಣಮ್ಯ ಜೈನ್ (1ನೇ ರ್ಯಾಂಕ್), ಸಾಯಿಕಿರಣ್ ರಾಗಮ್ (ಎರಡನೇ ರ್ಯಾಂಕ್), ಶ್ವೇತಾ ಸುಬಾಸ್ ಮುರಗುಂಡಿ (4ನೇ ರ್ಯಾಂಕ್), ಶಿಫಾ ಸಿತಾರ (6ನೇ ರ್ಯಾಂಕ್), ಕ್ಯಾರಲ್ ಪರ್ಲ್ ಡಿಸೋಜ (9ನೇ ರ್ಯಾಂಕ್), ಅಶ್ವಿನಿ ಕೆ. (10ನೇ ರ್ಯಾಂಕ್) ಗಳಿಸಿದ್ದಾರೆ. ವಿಷಯವಾರು ಹಾಗೂ ಕೋರ್ಸವಾರು ರ್ಯಾಂಕ್ಗಳಲ್ಲಿ ಒಟ್ಟು 99 ರ್ಯಾಂಕ್ಗಳನ್ನು ಆಳ್ವಾಸ್ ವಿದ್ಯಾರ್ಥಿಗಳು ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ,…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ರಾಜ್ಯದ ಹಲವು ಕಾಲೇಜುಗಳಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ಹೆಚ್ಚಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಎಲ್ಲಾ ಶಾಲೆ- ಕಾಲೇಜುಗಳಿಗೆ ಮೂರು ದಿನ ರಜೆ ಘೋಷಣೆ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಈ ಬಗ್ಗೆ ಮಾಹಿತಿ ನೀಡಿದ್ದು, ಹೈಕೋರ್ಟ್ ನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಇಡೀ ರಾಜ್ಯಾದ್ಯಂತ ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂರು ದಿನಗಳ ರಜೆ ಘೋಷಣೆ ಮಾಡಲಾಗಿದೆ ಎಂದರು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ. ಹೈಕೋರ್ಟ್ನಲ್ಲಿ ಹಿಜಾಬ್ ಸಂಬಂಧ ತೀರ್ಪುನ್ನು ನಾಳೆಗೆ ಮುಂದೂಡಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕುಂದಾಪುರ ತಾಲೂಕು ಸ್ಥಾನಿಕ ಬ್ರಾಹ್ಮಣರ ಸಂಘದ 27ನೇ ವಾರ್ಷಿಕೋತ್ಸವ ಮಟ್ನಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನ ನಾಯ್ಕನಕಟ್ಟೆ ಕೆರ್ಗಾಲ್ನಲ್ಲಿ ಜರುಗಿತು. ಅಧ್ಯಕ್ಷರಾದ ಎಮ್. ಸತ್ಯನಾರಾಯಣ ಹೆಬ್ಬಾರ್ ಮಾತನಾಡಿ ಸಂಘದ ಸದಸ್ಯರೆಲ್ಲರೂ ಪರಸ್ಪರ ಸಹಕರಿಸಿದಾಗ ಮಾತ್ರ ಉತ್ತಮ ರೀತಿ ಸಂಘಟನೆ ಬೆಳೆಯಲು ಸಾಧ್ಯ ಎಂಬುದಾಗಿ ತಿಳಿಸಿದರು. ಆನಂದ ರಾವ್ ಹೊಸ್ಕೋಟೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. 2021ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪಡೆದವರ ಸನ್ಮಾನದಲ್ಲಿ ಎಮ್. ಸತ್ಯನಾರಾಯಣ ಹೆಬ್ಬಾರ್ ಮರೂರು. ಕೃಷ್ಣಮೂರ್ತಿ, ಪಿ.ಕೆ ಕೋಟೇಶ್ವರ, ಉಷಾ ಶೀಧರ ಹೆಬ್ಬಾರ್, ಅಲ್ಬಾಡಿ ಮಂಜುನಾಥ ಹೆಬ್ಬಾರ್ ಇವರುಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಗರತ್ನ ಹೆಬ್ಬಾರ್ ಅಬ್ಲಾಕಟ್ಟೆ ಸೂರಾಲು ಶ್ರೀ ಗುರುಪ್ರಸಾದ ರಾವ್ ಕಮಲಶಿಲೆ, ವಿಜಯ ಎಸ್. ರಾವ್ ಹೆರಂಜಾಲು, ಲೋಕೇಶ ಶ್ಯಾನುಬೋಗ್ ಇವರುಗಳನ್ನು ಸನ್ಮಾನಿಸಲಾಯಿತು. ಉದರಕುಮಾರ್ ಹೆಬ್ಬಾರ್ ಮ್ಯಾನೇಜಿಂಗ್ ಡೈರೆಕ್ಟ್ರರ್ ಕ್ರೆಡಿಟ್ ಗ್ರಾಮೀಣ ಲಿ. ಬೆಂಗಳೂರು ಇವರು ಕೊಡ ಮಾಡಿದ ವಿದ್ಯಾರ್ಥಿತಿ. ವೇತನವನ್ನು ವಿತರಿಸಲಾಯಿತು. ಉಮೇಶ ಶ್ಯಾನುಭೋಗ್,…
