ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಕ್ರೀದ್ ಪ್ರಯುಕ್ತ ತಾಲೂಕು ವ್ಯಾಪ್ತಿಯಲ್ಲಿ ಗೋ ಕಳ್ಳತನ ನಡೆಯುತ್ತಿದ್ದು ಗಸ್ತು ಹೆಚ್ಚಿಸುವ ಹಾಗೂ ಚೆಕ್ ಪೋಸ್ಟ್ ಹೆಚ್ಚಿಸುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರಿಂದ ಪೋಲಿಸ್ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಈ ಸಂದರ್ಭ ಬೈಂದೂರು ತಾಲೂಕು ಬಜರಂಗದಳ ಸಂಚಾಲಕರಾದ ಸುಧಾಕರ್ ನೆಲ್ಯಾಡಿ, ಮಹೇಶ್ ಖಾರ್ವಿ, ಸುರಕ್ಷಾ ಪ್ರಮುಖ್, ಸುಕೇಶ್ ಬೈಂದೂರು , ಗಿರೀಶ್ ಶಿರೂರು, ಯೋಗೇಶ್ ಶಿರೂರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾ ಪ್ರಯೋಗಾಲಯದಲ್ಲಿ ಖಾಲಿ ಇರುವ ಮೈಕ್ರೋಬಯಾಲಾಜಿಸ್ಟ್ ಹುದ್ದೆಗೆ, ಮೆಡಿಕಲ್ ಗ್ರಾಜುಯೇಟ್ ವಿಥ್ ಪೋಸ್ಟ್ ಗ್ರಾಜುವೇಟ್ ಡಿಗ್ರಿ / ಡಿಪ್ಲೋಮಾ ಅಥವಾ ಮೆಡಿಕಲ್ ಗ್ರಾಜುಯೇಟ್ ವಿಥ್ ಟು ಎಕ್ಸ್ಪೀರಿಯನ್ಸ್ ಇನ್ ಲ್ಯಾಬೋರೇಟರಿ ಸೈನ್ಸಸ್ ಅಥವಾ ಎಮ್.ಎಸ್.ಸಿ ಇನ್ ಮೆಡಿಕಲ್ ಮೈಕ್ರೋಬಯಾಲಜಿ ಅರ್ಹತೆ ಹೊಂದಿರುವವರಿಗೆ, ಮಾಸಿಕ 40,000 ರೂ. ವೇತನದಂತೆ ಗುತ್ತಿಗೆ ಆಧಾರದಲ್ಲಿ 2022 ಮಾರ್ಚ್ 31 ಅಥವಾ ಮುಂದಿನ ಆದೇಶದವರೆಗೆ ನೇಮಕಾತಿ ಮಾಡಿಕೊಳ್ಳಲು ಜುಲೈ 26 ರಂದು ಬೆಳಗ್ಗೆ 10.30ರಿಂದ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ. ಬಸ್ರೂರು ಭುಜಂಗ ಹೆಗ್ಡೆಯವರ ನೆನಪಿನಲ್ಲಿ ಬಿ. ಬಿ ಹೆಗ್ಡೆ ಕಾಲೇಜನ್ನು ನಿರ್ಮಿಸಲು ಸ್ಥಳದಾನ ಮಾಡಿದ ಪ್ರತಿಷ್ಠಿತ ಸೌಕೂರು ಸೇರ್ವೆಗಾರ್ರ್ ಮನೆತನದ ವಿಶಾಲಾಕ್ಷಿ ಬಿ. ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದಿಂದ ಆಯೋಜಿಸಲಾಯಿತು. ಪ್ರಾಂಶುಪಾಲರಾದ ಉಮೇಶ್ ಶೆಟ್ಟಿ ಕೊತ್ತಾಡಿ, ಸಂಸ್ಮರಣಾ ಮಾತುಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೊವಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂಗ್ಲಿಷ್ ಉಪನ್ಯಾಸಕಿಯಾದ ದೀಪಿಕಾ ರಾಘವೇಂದ್ರ ಮತ್ತು ಭೌತಶಾಸ್ತ್ರ ಉಪನ್ಯಾಸಕಿ ಕುಮಾರಿ ದೀಕ್ಷಿತಾ ಪ್ರಾರ್ಥನೆಗೈದರು. ಕನ್ನಡ ಉಪನ್ಯಾಸಕಿಯಾದ ರೇಷ್ಮಾ ಶೆಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಸುಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕಿಯಾದ ಕುಮಾರಿ ಪ್ರವೀಣಾ ಪೂಜಾರಿ ವಂದನಾರ್ಪಣೆಗೈದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಇಲ್ಲಿನ ರೋಟರಿ ಕ್ಲಬ್ ರಾಯಲ್, ಗ್ರೀನಾಥನ್ ಇಂಡಿಯಾ ಮತ್ತು ಸಹಕಾರ ಭಾರತಿ ಉಡುಪಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಮತ್ತು ವನಮಹೋತ್ಸವ ಆಚರಣೆ ನಡೆಯಿತು. ಪರಿಸರವಾದಿ ಮತ್ತು ಗ್ರೀನೋಥಾನ್ ಭಾರತದ ಸಂಯೋಜಕರಾದ ಡಾ.ಬಾಲಕೃಷ್ಣ ಮದ್ದೋಡಿ ಮಾತನಾಡಿ, ಹಸಿರು ಪುನರುಜ್ಜೀವನವನ್ನುಂಟು ಮಾಡಲು ಸಾರ್ವಜನಿಕ ಚಳುವಳಿ ನಡೆಯಬೇಕು ಹಾಗು ಸಸಿಗಳನ್ನು ನೆಡುವುದರಲ್ಲಿ ಸಾಮೂಹಿಕ ಆಂದೋಲನವನ್ನು ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ನಾವು ಪಶ್ಚಿಮ ಘಾಟ್ ವಿಸ್ತಾರದಲ್ಲಿ ಸುಮಾರು ಇಪ್ಪತ್ತೆರಡು ಸಾವಿರ ಹೆಕ್ಟೇರ್ ಪ್ರಾಥಮಿಕ ಅರಣ್ಯವನ್ನು ಕಳೆದುಕೊಂಡಿದ್ದೇವೆ, ನಮ್ಮ ಅರಣ್ಯ ಸಂಪನ್ಮೂಲಗಳು ಹೆಚ್ಚಾಗುವುದನ್ನು ನೋಡಬೇಕು ಅದು ಜಾಗತಿಕ ತಾಪಮಾನ ಮತ್ತು ಅರಣ್ಯನಾಶಕ್ಕೆ ಸರಿಯಾದ ಉತ್ತರವನ್ನು ನೀಡುತ್ತದೆ ಎಂದು ಹೇಳಿದರು ವನಮೊಹೋತ್ಸವವನ್ನು ಉದ್ಘಾಟಿಸಿ ಪೆರ್ಡೂರ್ ಆಶ್ಲೇಶ್ ಹೋಟೆಲ್ ಮಾಲೀಕ ಉದಯ ಕುಮಾರ್ ಪೆರ್ಡೂರ್ ಮಾತನಾಡಿ, ಒಂದು ಸಸ್ಯವನ್ನು ನೆಡಲು ಮತ್ತು ಅದನ್ನು ಮರವಾಗಿ ಬೆಳೆಸುವುದು ಸಮಯದ ಅವಶ್ಯಕತೆಯಾಗಿದೆ. ಸಸಿ ನೆಡುವುದಷ್ಟೇ ಅಲ್ಲ, ಅದನ್ನು ಮರವಾಗಿ ಉಳಿಸಿಕೊಳ್ಳುವವರೆಗೂ ಅದನ್ನು ಪೋಷಿಸಿ ಕಾಳಜಿ ವಹಿಸಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿರಿಯ ನಾಗರಿಕರ ವೇದಿಕೆಯ ಮಾಸಿಕ ಸಭೆಯು ವೇದಿಕೆಯ ಅಧ್ಯಕ್ಷರಾದ ಗೋವಿಂದ ಎಮ್. ನಾಯ್ಕನಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯ ಸದಸ್ಯ ಹಿರಿಯ ಸಹಕಾರಿ ಹಾಗೂ ಲೇಖಕ ಕೆ. ಪುಂಡಲೀಕ ನಾಯಕ್ ಅವರು ಮಾತನಾಡಿ, ನಿವೃತ್ತಿಯ ನಂತರ ಬದುಕನ್ನು ಹೇಗೆ ಸುಗಮವಾಗಿ ಸಾಗಿಸಬಹುದೆಂದು, ಮತ್ತು ನಿವೃತ್ತಿಯ ನಂತರದ ತನ್ನ ಸಾಹಿತ್ಯ ಕ್ಷೇತ್ರದ ಬದುಕನ್ನು ವಿವರಿಸಿದರು. ಖ್ಯಾತ ಸಾಹಿತಿ ಪುರಷೋತ್ತಮ ಬಿಳಿಮಲೆ ಅವರ ‘ಕಾಗೆ ಮುಟ್ಟದ ನೀರು’ ಎಂಬ ಆತ್ಮಕಥನದ ಕಿರುಪರಿಚಯವನ್ನು ಮಾಡಿದರು. ಐವತ್ತರ ದಶಕದಲ್ಲಿ ಬಂಟಮಲೆಯ ಕಗ್ಗಾಡಿನ ನಡುವೆ ಕುಗ್ರಾಮವೊಂದರಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಬರೇ ಭಾಷೆ ಮತ್ತು ಜೀವನ ಪ್ರೇಮದಿಂದಲೇ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಪುರುಷೋತ್ತಮ ಬಿಳಿಮಲೆಯವರು ಜಿವಂತ ಸಾಕ್ಷಿ ಎಂದರು. ಕೊಣಿ ವೆಂಕಟೇಶ ನಾಯಕ್ ಅವರು ಸ್ವರಚಿತ ಪುಟ್ಟ ಕವನದೊಂದಿಗೆ ದಿನಕರ ದೇಸಾಯಿಯವರ ಕೆಲವು ಚುಟುಕುಗಳನ್ನು ಹಾಡಿದರು. ಸದಸ್ಯರು ವಿಚಾರ ವಿನಿಮಯ ಮಾಡಿಕೊಂಡರು. ಕಾರ್ಯದರ್ಶಿ ಸಂಜೀವ ಆಚಾರ್ ಅವರು ಗತಸಭೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಅಭಿವೃದ್ಧಿಗೆ ಶಿಕ್ಷಣವೇ ಬುನಾದಿಯಾಗಿರುವುದರಿಂದ ಕ್ಷೇತ್ರದ ಶಿಕ್ಷಣ ವ್ಯವಸ್ಥೆಯ ಉನ್ನತಿಗೆ ಆದ್ಯತೆ ನೀಡುತ್ತೇನೆ. ಶತಮಾನ ಪೂರೈಸಿದ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲವಾದ ಕಟ್ಟಡಗಳ ಸ್ಥಾನದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಭರವಸೆ ನೀಡಿದರು. ಅವರು ಶಾಲೆಗೆ ಭೇಟಿ ನೀಡಿ, ಕಟ್ಟಡ, ಶಾಲೆಯ ಸ್ಥಿತಿಗತಿ ಮತ್ತು ಚಟುವಟಿಕೆಗಳ ಅವಲೋಕನ ನಡೆಸಿದ ಬಳಿಕ ಮಾತನಾಡಿದರು. ಶಾಲೆಯ ಕುರಿತು ವಿವರ ನೀಡಿದ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಶಾಲಾ ಸ್ಥಾಪನೆಯ ದಾಖಲೆ ಇಲ್ಲದ್ದರಿಂದ 2015-16ರಲ್ಲಿ ಅಮೃತ ಮಹೋತ್ಸವ ಆಚರಿಸಲಾಯಿತು. ಆಗ ಸಭಾಂಗಣ, ಕಂಪ್ಯೂಟರ್ ಕೊಠಡಿ ನಿರ್ಮಿಸಲಾಯಿತು. ಆ ಬಳಿಕ ಸಂಸ್ಥೆ ಶತಮಾನ ಪೂರೈಸಿದೆ ಎನ್ನುವುದಕ್ಕೆ ಹಿರಿಯ ಹಳೆ ವಿದ್ಯಾರ್ಥಿ ಎಸ್. ಜನಾರ್ದನ ಪರ್ಯಾಯ ದಾಖಲೆ ಒದಗಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಶಾಲೆ ಶತಮಾನೋತ್ಸವ ಆಚರಿಸಲು ಸಿದ್ಧತೆ ನಡೆಸುತ್ತಿದೆ. ಹಳೆ ವಿದ್ಯಾರ್ಥಿ ಸಂಘ ರೂ 14 ಲಕ್ಷ ವೆಚ್ಚದಲ್ಲಿ ಬಸ್ ಒದಗಿಸಿದೆ. ಅದರೊಂದಿಗೆ ಗುಣಮಟ್ಟದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ , ಸರ್ಕಾರದ ಆದೇಶದಂತೆ , ಅಕ್ರಮವಾಗಿ ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವ ಕುರಿತು ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಪರ ಜಿಲ್ಲಾಧಿಕಾರಿ ರವರ ಅಧ್ಯಕ್ಷತೆಯಲ್ಲಿ , ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಮತ್ತು ವಧೆ ತಡೆಗಟ್ಟುವ ಸಂಬಂಧ ರಚಿಸಿರುವ ಜಿಲ್ಲಾ ಮಟ್ಟದ ಸಮಿತಿಯ ಸಭೆಯು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳು ಮಾತನಾಡಿ, ಜುಲೈ 21ರಂದು ನಡೆಯುವ ಬಕ್ರೀದ್ ಹಬ್ಬದ ಆಚರಣೆ ಸಂದರ್ಭದಲ್ಲಿ ಅಕ್ರಮವಾಗಿ ಒಂಟೆ/ಗೋವುಗಳ ಹತ್ಯೆ ಹಾಗೂ ಅನಧಿಕೃತ ಸಾಗಾಣಿಕೆಯನ್ನು ತಡೆಗಟ್ಟುವ ಸಂಬಂಧ ನಿರ್ದೇಶನಗಳನ್ನು ಪಾಲಿಸುವಂತೆ ಪೋಲೀಸ್ ಇಲಾಖೆ, ನಗರ ಸಭೆ, ಪುರಸಭೆ, ಸಾರಿಗೆ ಅಧಿಕಾರಿ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಪಶುಗಳ ಅಧಿಕೃತ ಸಾಗಾಣಿಕೆಗೆ ಪಶು ಇಲಾಖೆಯಿಂದ ಅನುಮತಿ ಪಡೆಯಬಹುದು. ಕೃಷಿಗೆ ಮತ್ತು ಪಶು ಸಂಗೋಪನೆಗೆ ಮಾತ್ರ ಸಾಗಾಟಕ್ಕೆ ಅನುಮತಿ ಇರುವುದು. ರೋಗಗ್ರಸ್ತ ಜಾನುವಾರುಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಮಾಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಲೆಯಾಳದ ಮಹಾಕವಿ ಚಙ್ಙಪ್ಪುಳ ಕೃಷ್ಣ ಪಿಳ್ಳೆ ಅವರು ಹೇಳಿದಂತೆ ಕಾವ್ಯವು ಒಬ್ಬ ನರ್ತಕಿ ಇದ್ದಂತೆ. ನರ್ತಕಿ ತನಗೆ ಹೇಳಬೇಕಾದ ವಿಚಾರಗಳನ್ನು ಸನ್ನೆ – ಸಂಕೇತಗಳ ಮೂಲಕವೇ ಸೂಚಿಸುತ್ತಾಳೆ. ಚಙ್ಙಪ್ಪುಳ, ವಳ್ಳತ್ತೋಳ್, ಉಳ್ಳೂರ್ ಮೊದಲಾದ ಮಹಾಕವಿಗಳು ಮಲೆಯಾಳ ಕಾವ್ಯದ ತೋರುಗಂಬಗಳಾಗಿ ಉತ್ಕೃಷ್ಟ ಕಾವ್ಯ ರಚನೆ ಮಾಡಿದರು. ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಮೊದಲಾದ ಮಹಾಕಾವ್ಯಗಳು, ಭಗವದ್ಗೀತೆಯಂಥ ಅಮೂಲ್ಯ ಗ್ರಂಥ, ಕಾಳಿದಾಸ-ಭಾಸರಂಥ ಮಹಾಕವಿಗಳು ಸಾಹಿತ್ಯವನ್ನು ಶ್ರೀಮಂತವಾಗಿಸಿದಂತಹ ನಾಡು ನಮ್ಮದು. ಅವರ ಆದರ್ಶದಲ್ಲೇ ಮಲೆಯಾಳ ಕಾವ್ಯವು ರೂಪ ಪಡೆಯಿತು. ಅಂಥ ಸಾಹಿತ್ಯಕ್ಕೆ ಈಗ ಕೆ.ವಿ.ತಿರುಮಲೇಶ್ ಅವರ ಕಾವ್ಯವೂ ಅನುವಾದದ ಮೂಲಕ ಸೇರ್ಪಡೆಗೊಳ್ಳುತ್ತಿರುವುದು ತುಂಬಾ ಸಂತಸ ಪಡಬೇಕಾದ ಸಂಗತಿ ‘ಎಂದು ಮಣಿಪಾಲ ಕೆ.ಎಂ.ಸಿ.ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಜಯರಾಜ್ ಹೇಳಿದರು. ಅವರು ಎಸ್.ಎಂ.ಎಸ್.ಕಾಲೇಜಿನ ಕಿರು ಸಭಾಂಗಣದಲ್ಲಿ ಡಾ.ಪಾರ್ವತಿ ಜಿ.ಐತಾಳ್ ಮಲೆಯಾಳಕ್ಕೆ ಅನುವಾದಿಸಿದ ‘ಕೆ.ವಿ. ತಿರುಮಲೇಶಿಂದೆ ತೆರಞ್ಣೆಡುತ್ತ ಕವಿತಗಳ್'( ಕೆ.ವಿ.ತಿರುಮಲೇಶರ ಆಯ್ದ ಕವಿತೆಗಳು) ಕೃತಿಯ ಅನಾವರಣಕ್ಕಾಗಿ ಏರ್ಪಡಿಸಿದ ಸಮಾರಂಭದಲ್ಲಿ ಮಾತನಾಡಿದರು. ಕಾಲೇಜಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುದೂರು ಗ್ರಾಮದ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಭೆಯು ಸ್ಥಳೀಯಕಾಮಿ೯ಕ ಮುಖಂಡ ಜೊಸೆಪ್ ಸಾಮ್ಯುಯಲ್ ರವರ ಮನೆ ವಠಾರದಲ್ಲಿ ನಡೆಯಿತು. ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಂಘದ ಪ್ರಧಾನ ಕಾಯ೯ದಶಿ೯ಗಣೇಶ ತೊಂಡೆಮಕ್ಕಿ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ, ಕಾಮಿ೯ಕ ಇಲಾಖೆಯಿಂದ ಕೊರೊನ ಪರಿಹಾರದ ಅಹಾರ ಕಿಟ್ ವಿತರಣೆಯಲ್ಲಾಗಿರುವ ತಾರತಮ್ಯ ಹಾಗೂ ಎಲ್ಲಾ ಕಟ್ಟಡ ಕಾಮಿ೯ಕರನ್ನು ಗುರುತಿಸದೇ ಏಕಪಕ್ಷೀಯವಾಗಿ ವಿತರಣೆ ಮಾಡಿ. ಅಹಾರ ಕಿಟ್ ಬದಲಿಗೆ ಎಲ್ಲಾ ನೊಂದಾಯಿತ ಕಟ್ಟಡ ಕಾಮಿ೯ಕರಿಗೆ ಕೊರೊನಾ ಪರಿಹಾರ ರುಪಾಯಿ ಹತ್ತು ಸಾವಿರ ನಗದು ಬ್ಯಾಂಕ್ ಖಾತೆಗೆ ವಗಾ೯ವಣೆ ಮಾಡಬೇಕು ಎಂದು ಈಗಾಗಲೆ ಹಲವಾರು ಭಾರಿ ಕಾಮಿ೯ಕ ಕಲ್ಯಾಣ ಮಂಡಳಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿದ್ದರೂ ಗಣನೆಗೆ ತೆಗೆದು ಕೊಳ್ಳದ ಇಲಾಖಾ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಕಾಮಿ೯ಕ ಮುಖಂಡ ವೆಂಕಟೇಶ್ ಕೋಣಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡರೈತ, ಕೃಷಿಕೂಲಿ ಕಾರರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಕೌಟುಂಬಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಸಮಾಜಕ್ಕೆ ಕಂಟಕ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಶ್ರೀಶೈಲ ಪ್ರೊಡಕ್ಷನ್ಸ್ ಅವರ ಮಹಿಳೆಯಾಧಾರಿತ ಕಿರುಚಿತ್ರ ‘ಶಾಂಭವಿ’ ಲೋಕಾರ್ಪಣೆ ಗೈದು ಮಾತನಾಡಿದ ಅವರು, ನಾಗರಿಕತೆಯ ಉಗಮವಾದ ದಿನಗಳಿಂದಲೂ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯವಾಗುತ್ತಿರುವುದು ಶೋಚನೀಯ. ಕುಟುಂಬ ಹಾಗೂ ಉದ್ಯೋಗ ಕ್ಷೇತ್ರದ ವಿವಿಧ ಸನ್ನಿವೇಶಗಳಲ್ಲಿ ಸ್ತ್ರೀಯರು ಅವಕಾಶ ವಂಚಿತರಾಗುವುದರ ಜತೆಗೆ ಶೋಷಣೆಗೂ ಒಳಗಾಗುತ್ತಿದ್ದಾರೆ. ವಿದ್ಯಾವಂತರಿದ್ದರೂ ಕೌಟುಂಬಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ ಇವೆಲ್ಲವನ್ನೂ ವಿರೋಧಿಸುವ ಹಾಗೂ ಹೋರಾಡುವ ಮನೋಸ್ಥಿತಿ ಮಹಿಳೆಯರಲ್ಲಿ ಬೆಳೆಯಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಿರುಚಿತ್ರದ ನಿರ್ಮಾಪಕ ಡಾ. ರಾಜೇಶ್ ಪೂಜಾರಿ ಮಾತನಾಡಿ, ಪ್ರತಿಯೊಂದು ಕುಟುಂಬದ ಯಶಸ್ಸಿನಲ್ಲಿ ಪುರುಷ ಹಾಗೂ ಮಹಿಳೆ ಸಮಾನ ಜವಾಬ್ದಾರಿ ಹೊಂದಿರುತ್ತಾರೆ. ಪುರುರು ಪ್ರತಿಯೊಂದು ಸ್ತ್ರೀಯನ್ನು ಗೌರವಿಸುವುದರೊಂದಿಗೆ ಅವರ ಮಾನಸಿಕ ಶಕ್ತಿಯಾಗಿರಬೇಕು. ಈ ನಿಟ್ಟಿನಲ್ಲಿ…
