ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಸೋಮವಾರ 529 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 250, ಕುಂದಾಪುರ, ಬೈಂದೂರು ತಾಲೂಕಿನ 202, ಕಾರ್ಕಳ, ಹೆಬ್ರಿ ತಾಲೂಕಿನ 73 ಮಂದಿಗೆ ಹಾಗೂ ಹೊರ ಜಿಲ್ಲೆಯಿಂದ ಬಂದ 4 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 529 ಪ್ರಕರಣಗಳಲ್ಲಿ 195 ಸಿಂಟಮಿಕ್ ಹಾಗೂ 334 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 33 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 496 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಜಿಲ್ಲೆಯಲ್ಲಿ ಇಂದು 549 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 2488 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 2345 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಇಂದು 1309 ಮಂದಿಗೆ ಮೊದಲ ಡೋಸ್, 1477 ಮಂದಿಗೆ ಎರಡನೇ ಡೋಸ್ ವಾಕ್ಸಿನೇಷನ್ ಮಾಡಲಾಗಿದೆ. ಇಲ್ಲಿಯತನಕ ಒಟ್ಟು 1,94,339 ಮಂದಿಗೆ ಮೊದಲ ಡೋಸ್…
Author: ನ್ಯೂಸ್ ಬ್ಯೂರೋ
ಶರೀರದಿಂದ ಬೆವರು ಬರುವುದು ಒಳ್ಳೆಯದು ಆದರೆ ವಿಪರೀತ ಬರುವುದರಿಂದ ಆ ವ್ಯಕ್ತಿ ತುಂಬಾ ಕಿರಿಕಿರಿ ಅನುಭವಿಸುತ್ತಾನೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ ಹೈಡ್ರೋಸಿಸ್ ಎಂದು ಕರೆಯುತ್ತಾರೆ. ಹೈಪರ್ ಅಂದರೆ ಅತ್ಯಧಿಕ, ಹೃಡ್ರೋಸಿಸ್ ಅಂದರೆ ಬೆವರು. ವಿಪರೀತ ಬೆವರುವುದರಿಂದ ಯಾವುದೇ ಅಪಾಯವಿಲ್ಲ. ಆದರೆ ಅದು ವ್ಯಕ್ತಿಯ ಕ್ವಾಲಿಟಿ ಲೈಫ್(ದಿನನಿತ್ಯದ ಬದುಕಿನಲ್ಲಿ) ಮೇಲೆ ಪರಿಣಾಮ ಬೀರುತ್ತದೆ.ವಿಶ್ವದಲ್ಲಿ ಶೇ.5ರಷ್ಟು ಜನರಿಗೆ ಈ ತೊಂದರೆಯಿದೆ. ಇದು ಎಲ್ಲಾ ವಯಸ್ಸಿನವರಲ್ಲೂ ಕಂಡು ಬರಬಹುದು, ಆದರೆ 24-64 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಬಿಸಿಲಿನಲ್ಲಿ ಓಡಾಡಿದಾಗ, ವ್ಯಾಯಾಮ ಮಾಡಿದಾಗ ಮೈ ಬೆವರುವುದು ಸಹಜ, ಆದರೆ ಕೆಲವರಿಗೆ ಎಲ್ಲಾ ಸಮಯದಲ್ಲೂ ಮೈ ತುಂಬಾ ಬೆವರುವುದು. ಅವರ ಅಂಗೈ, ಕಾಲುಗಳು ಸದಾ ಬೆವರುತ್ತಿರುತ್ತದೆ. ಅತ್ಯಧಿಕ ಬೆವರು:ಬೆವರುವುದು ನಮ್ಮ ದೇಹದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದು ದೇಹದಲ್ಲಿ ಉಷ್ಣಾಂಶವನ್ನು ತಡೆಗಟ್ಟಿ, ತಂಪಾಗಿಸುವಲ್ಲಿ ಸಹಕಾರಿ. ನಮ್ಮ ದೇಹವು ಸುತ್ತಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ, ಆದ್ದರಿಂದಲೇ ಬೇಸಿಗೆಯಲ್ಲಿ ಹೆಚ್ಚು ಬೆವರುವ ಮೂಲಕ ದೇಹವನ್ನು ತಂಪಾಗಿಡುತ್ತದೆ, ಚಳಿಗಾಲದಲ್ಲಿ ಬೆವರದೆ ದೇಹದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ವೈದ್ಯಕೀಯ ಉಪಕರಣಗಳಾದ ಆಕ್ಸಿಮೀಟರ್, ಥರ್ಮಮೀಟರ್, ಪಿ.ಪಿ ಕೀಟ್, ವೆಂಟಿಲೇಟರ್, ಸಿ.ಪಿ.ಎ.ಪಿ, ಡಿವೈಸಸ್ ಒಳಗೊಂಡಂತೆ ಎಲ್ಲಾ ಮೊಟ್ಟಣಗಳ ಮೇಲೆ ಗರಿಷ್ಠ ಮಾರಾಟ ಬೆಲೆ (ಎಲ್ಲಾ ತೆರಿಗೆಗಳು ಸೇರಿ) ಹಾಗೂ ಇತರ ಘೋಷಣೆಗಳನ್ನು ಕಡ್ಡಾಯವಾಗಿ ನಮೂದಿಸಿರಬೇಕು. ನಮೂದಿಸಿದ ಗರಿಷ್ಠ ಮಾರಾಟ ಬೆಲೆ (ಎಲ್ಲಾ ತೆರಿಗೆಗಳು ಸೇರಿ) ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹ ಸಪ್ಲಾಯರ್, ಡಿಸ್ಟ್ರಿಬ್ಯೂಟರ್ ಮತ್ತು ಔಷಧಿ ಅಂಗಡಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರು ಮೊಟ್ಟಣದ ಮೇಲೆ ನಮೂದಿಸಿದ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಅಂಗಡಿಯವರು ತಮ್ಮಿಂದ ಪಡೆದುಕೊಂಡ ಸಂದರ್ಭದಲ್ಲಿ ತಾವು ಖಾಲಿ ಪೊಟ್ಟಣ ಮತ್ತು ಬಿಲ್ಲನ್ನು ಖಾಯ್ದಿರಿಸಿಕೊಂಡು ಅಂತಹ ಅಂಗಡಿಯವರ ವಿವರವನ್ನು ಸಹಾಯಕ ನಿಯಂತ್ರಕರು ಕಾನೂನು ಮಾಪನಶಾಸ್ತ್ರ ಇಲಾಖೆ ಉಡುಪಿ ಮೊಬೈಲ್ ಸಂಖ್ಯೆ 98451 54263 ಅಥವಾ ಈಮೇಲ್ ವಿಳಾಸ www.emapan.karnataka.gov.in ಗೆ ದೂರು ದಾಖಲಿಸುವಂತೆ ಜಿಲ್ಲಾ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ-19ರ ಎರಡನೆ ಅಲೆ, ಗ್ರಾಮೀಣ ಪ್ರದೇಶಗಳನ್ನೂ ವ್ಯಾಪಿಸಬಹುದು. ಈ ಹಂತದಲ್ಲಿ ಗ್ರಾಮಾಡಳಿತ ಅದನ್ನು ತಡೆಯುವ ನಿಟ್ಟಿನಲ್ಲಿ ವ್ಯಾಪಕ ಮುನ್ನೆಚ್ಚರಿಕೆ ಹಾಗೂ ಜನಜಾಗೃತಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಹೇಳಿದರು. ಅವರು ಮರವಂತೆ ಗ್ರಾಮ ಪಂಚಾಯತಿ ಕೋವಿಡ್ ಕಾರ್ಯಪಡೆ ರಚನೆಯ ಬಳಿಕ ನಡೆದ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು. ಈ ಹಂತದಲ್ಲಿ ಎಲ್ಲರೂ ಕರ್ಫ್ಯೂ ನಿರ್ಬಂಧಗಳನ್ನು ಮತ್ತು ವೈಯಕ್ತಿಕ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷ ಲೋಕೇಶ್ ಖಾರ್ವಿ, ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ, ಗ್ರಾಮ ಕರಣಿಕ ಸಂದೀಪ್, ಅಂಗನವಾಡಿ ಮೇಲ್ವಿಚಾರಕಿ ನಿವೇದಿತಾ, ಬೀಟ್ ಪಿಸಿ ಚಂದ್ರ, ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಗ್ರಂಥಾಲಯ ಮೇಲ್ವಿಚಾರಕಿ ಶ್ಯಾಮಲಾ, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿ ಅನಿತಾ ಆರ್. ಕೆ, ಸ್ತ್ರೀಶಕ್ತಿ ಸಂಘಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಗೆ ಇನ್ವರ್ಟರ್ ಬ್ಯಾಟರಿ ಕೊಳ್ಳಲು ಅಗತ್ಯವಿದ್ದ ಮೊತ್ತವನ್ನು ಉಪ್ಪುಂದದ ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೇಣಿಗೆಯಾಗಿ ನೀಡಲಾಯಿತು. ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಆಡಳಿತ ಟ್ರಸ್ಟೀ ಗೋವಿಂದ ಬಾಬು ಪೂಜಾರಿ ಅವರು ಟ್ರಸ್ಟ್ ವತಿಯಿಂದ ರೂ.50,000 ಚೆಕ್ಕನ್ನು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಆನಂದ ಕಾಯ್ಕಿಣಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಪಿಎಸ್ಐ ಸಂಗೀತಾ ಅವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಭಾನುವಾರ 653 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 347, ಕುಂದಾಪುರ, ಬೈಂದೂರು ತಾಲೂಕಿನ 200, ಕಾರ್ಕಳ, ಹೆಬ್ರಿ ತಾಲೂಕಿನ 104 ಮಂದಿಗೆ ಹಾಗೂ ಹೊರ ಜಿಲ್ಲೆಯಿಂದ ಬಂದ 2 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 653 ಪ್ರಕರಣಗಳಲ್ಲಿ 273 ಸಿಂಟಮಿಕ್ ಹಾಗೂ 380 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 22 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 631 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2508 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 788 ಮಂದಿಯನ್ನು ಇಂದು ಡಿಸ್ಚಾರ್ಜ್ ಮಾಡಲಾಗಿದೆ. ಇಂದು ಒಟ್ಟು 2926 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಶನಿವಾರ 430 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 226, ಕುಂದಾಪುರ, ಬೈಂದೂರು ತಾಲೂಕಿನ 162, ಕಾರ್ಕಳ, ಹೆಬ್ರಿ ತಾಲೂಕಿನ 39 ಮಂದಿಗೆ ಹಾಗೂ ಹೊರ ಜಿಲ್ಲೆಯಿಂದ ಬಂದ 3 ಮಂದಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಕೋವಿಡ್ ಪಾಸಿಟಿವ್ ಆಗಿದ್ದ 3 ಮಂದಿ ಇಂದು ಮೃತಪಟ್ಟಿದ್ದಾರೆ. ಒಟ್ಟು 430 ಪ್ರಕರಣಗಳಲ್ಲಿ 276 ಸಿಂಟಮಿಕ್ ಹಾಗೂ 154 ಅಸಿಂಟಮಿಕ್ ಪ್ರಕರಣಗಳಾಗಿವೆ. ಈ ಪೈಕಿ 39 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ 391 ಮಂದಿ ಹೋಮ್ ಐಸೊಲೇಷನ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2643 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 380 ಮಂದಿಯನ್ನು ಇಂದು ಡಿಸ್ಚಾರ್ಜ್ ಮಾಡಲಾಗಿದೆ. ಇಂದು ಕೋವಿಡ್ ಪಾಸಿಟಿವ್ ಆಗಿದ್ದ ಕುಂದಾಪುರದ 94 ವರ್ಷದ ಪುರುಷ, ಉಡುಪಿಯ 64 ವರ್ಷದ ಪುರುಷ ಹಾಗೂ 73 ವರ್ಷದ ಮಹಿಳೆ ಚಿಕಿತ್ಸೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀಕ್ಷೇತ್ರ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ ನಡೆಸಲು ನಿರ್ಧರಿಸಲಾಗಿತ್ತು. ಕೋವಿಡ್-19ರ ನಿರ್ಬಂಧದ ಕಾರಣ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ವಿವಾಹಕ್ಕೆ ನೋಂದಣಿ ಮಾಡಿಕೊಂಡವರು ಅವರ ಗ್ರಾಮದ ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಕುಟುಂಬದ ಸದಸ್ಯರೊಡನೆ ಸೇರಿಕೊಂಡು ವಿವಾಹ ನೆರವೇರಿಸಬಹುದು ಎಂದು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಬೈಂದೂರು ತಾಲ್ಲೂಕಿನ 9 ಜೋಡಿಗಳ ವಿವಾಹ ಗುರುವಾರ ನೆರವೇರಿತು ಎಂದು ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ಹೇಳಿದರು. ಅವರು ಹೇರಂಜಾಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ನಂದನವನದ ಎನ್. ಜಿ. ನರೇಂದ್ರ ಮತ್ತು ಹನೆಹಳ್ಳಿ ಜ್ಯೋತಿ ಅವರ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು. ಶ್ರೀ ಕ್ಷೇತ್ರದಿಂದ ವಧುವಿಗೆ ಮಂಗಳಸೂತ್ರ, ಸೀರೆ, ರವಿಕೆ ಕಣ, ವರನಿಗೆ ಪಂಚೆ, ಶಾಲು, ಇಬ್ಬರಿಗೂ ತಲಾ ರೂ 5 ಸಾವಿರ ಮೊತ್ತದ ಚೆಕ್, ಮಂಜುನಾಥ ಸ್ವಾಮಿಯ ಫೋಟೋ ಮತ್ತು ಉಡುಗೊರೆಯನ್ನು ನೀಡಲಾಗಿದೆ ಎಂದರು. ಇನ್ನೂಳಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎರಡು ವೇತನಗಳ ನಡುವೆ ಗಣನೀಯ ವ್ಯತ್ಯಾಸವಿದೆ. ಇದರಿಂದ ಉದ್ಯೋಗ ಖಾತ್ರಿ ಕೂಲಿಕಾರರಿಗೆ ಅನ್ಯಾಯವಾಗುತ್ತಿದೆ. ಅಕುಶಲ ಕೆಲಸದ ಕಾರ್ಮಿಕರ ಎರಡು ಗುಂಪುಗಳ ಕೂಲಿಯಲ್ಲಿ ಮಾಡಿರುವ ತಾರತಮ್ಯ ಖಂಡನೀಯ. ಇದರ ವಿರುದ್ಧ ತೀವ್ರ ಹೋರಾಟ ನಡೆಸಬೇಕು ಎಂದು ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಹೇಳಿದರು. ಅವರು ಕೆರ್ಗಾಲಿನಲ್ಲಿ ನಡೆದ ಕೂಲಿಕಾರರ ಸಭೆಯಲ್ಲಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಕೃಷಿಕಾರ್ಮಿಕರ ಕೂಲಿಯನ್ನು ಪರಿಷ್ಕರಿಸಿ ರೂ 424. 80ನಿಗದಿಗೊಳಿಸಿದೆ. ಆದರೆ ಕೇಂದ್ರದ ಯೋಜನೆಯಾದ ಮಹಾತ್ಮ ಗಾಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರಿಗೆ ರೂ 289 ನೀಡಲಾಗುತ್ತಿದೆ. ಈ ತಾರತಮ್ಯವನ್ನು ನಿವಾರಿಸಬೇಕು ಎಂದು ಬೇಡಿಕೆ ದಿನಾಚರಣೆ ಅಂಗವಾಗಿ ಬೈಂದೂರು ತಾಲ್ಲೂಕಿನ ವಿವಿಧೆಡೆ ನಡೆದ ಕೂಲಿಕಾರರ ಸಭೆಗಳಲ್ಲಿ ಒತ್ತಾಯಿಸಲಾಯಿತು. ಕೂಲಿಕಾರರ ಸಂಘದ ಮುಖಂಡರೂ, ಕಾಯಕ ಬಂಧುಗಳೂ ಆದ ಸಾಕು, ಸುಶೀಲಾ, ಜಯಂತಿ, ವೀಣಾ ಇದನ್ನು ಅನುಮೋದಿಸಿದರು. ಪ್ರಸಕ್ತ ವರ್ಷದಲ್ಲಿ ನರೇಗಾ ಕೂಲಿಕಾರರ ಹಕ್ಕಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೌಕೂರು ಏತ ನೀರಾವರಿ ಕಾಮಗಾರಿಯಲ್ಲಿಪೈಪ್‌ಲೈನ್ ಲೇಯಿಂಗ್ ಕಾಮಗಾರಿಯನ್ನು ಕೈಗೊಳ್ಳಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989 ರ ಕಲಂ 221(ಎ)(2) & (5) ರನ್ವಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಸರ್ಕಲ್ನಿಂದ ನೇರಳಕಟ್ಟೆ ಸರ್ಕಲ್ವರೆಗೆ ಮೇ 1 ರಿಂದ ಮೇ 11 ರ ವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ. ವಾಹನಗಳ ಪರ್ಯಾಯ ಮಾರ್ಗ: ಅಂಪಾರು-ನೇರಳಕಟ್ಟೆ-ನೆಂಪು-ಹೆಮ್ಮಾಡಿ ಮಾರ್ಗವಾಗಿ ಹಾಗೂ ಕಂಡ್ಲೂರು-ಗುಲ್ವಾಡಿ-ಮಾವಿನಕಟ್ಟೆ-ಹಟ್ಟಿಯಂಗಡಿ-ತಲ್ಲೂರು-ಹೆಮ್ಮಾಡಿ ಮಾರ್ಗವಾಗಿ ತಲುಪುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
