ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ಫೆ.28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಂಡ್ಸೆ ವಲಯ ಮತ್ತು ಭಜನಾ ಪರಿಷತ್ ವಂಡ್ಸೆ ವಲಯ ಇವರ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಹಾಗು 10 ಮಹಿಳಾ ಭಜನಾ ಮಂಡಳಿ ಉದ್ಘಾಟನೆ ವಂಡ್ಸೆ ನೂಜಾಡಿ ಕ್ರಾಸ್ನಲ್ಲಿರುವ ಮಹಾತ್ಮ ಗಾಂಧಿ ಸಭಾ ಭವನದಲ್ಲಿ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಧ.ಗ್ರಾ ಯೋಜನೆ ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕರಾದ ಗಣೇಶ್ ಬಿ ಮಾತನಾಡಿ, ವ್ಯಕ್ತಿ ಸರಿಯಾದರೆ ದೇಶವೇ ಸರಿಯಾಗುತ್ತದೆ ಎನ್ನುವ ಕಲ್ಪನೆಯಲ್ಲಿ ನಾವಿಂದು ಸಾಗಬೇಕಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಒಗ್ಗಟ್ಟು, ಸಂಸ್ಕೃತಿ, ಸಂಸ್ಕಾರವನ್ನು ಕಂಡುಕೊಳ್ಳಲು ಸಾಧ್ಯ. ಭಜನೆಯ ಮೂಲಕ ಬದುಕಿನಲ್ಲಿ ಪ್ರಜ್ಞಾವಂತಿಕೆ ಜೀವನಾದರ್ಶಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು. ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ ಅವರು ವಲಯದ ೧೦ ಮಹಿಳಾ ಭಜನಾ ಮಂಡಳಿಗಳ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೆಂಕು-ಬಡಗುತಿಟ್ಟಿನಲ್ಲಿ ಸುದೀರ್ಘ 40 ವರ್ಷಗಳ ಕಾಲ ಸೇವೆಗೈದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ವಂಡ್ಸೆ ನಾರಾಯಣ ಗಾಣಿಗರ ಸ್ಮರಣಾರ್ಥವಾಗಿ ಪ್ರಶಸ್ತಿ ಸ್ಥಾಪಿಸಲಾಗಿದ್ದು, 2022ನೇ ಸಾಲಿನ ‘ವಂಡ್ಸೆ ನಾರಾಯಣ ಪ್ರಶಸ್ತಿ’ಗೆ ಬಡಗುತಿಟ್ಟಿನ ಹಿರಿಯ ಹಾಸ್ಯಕಲಾವಿದ ಹೊಳ್ಮಗೆ ನಾಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್ 5 ಶನಿವಾರ ವಂಡ್ಸೆಯ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವರ್ಧಂತ್ಯುತ್ಸವದ ಅಂಗವಾಗಿ ಮಧ್ಯಾಹ್ನ 2:30ರಿಂದ ದೇವಳದ ಆಶ್ರಯದಲ್ಲಿ ನಡೆಯುವ ತಾಳಮದ್ದಲೆ ಕಾರ್ಯಕ್ರಮದಲ್ಲಿ ನಾರಾಯಣ ಗಾಣಿಗರ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹಿರಿಯ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗಿಳಿಯಾರು ಶ್ರೀಧರ ಶೆಟ್ಟಿ, ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಬಡಗುತಿಟ್ಟಿನ ತೆರೆಮರೆಯ ಹಿರಿಯ ಕಲಾವಿದ ಹೊಳ್ಮಗೆ ನಾಗಪ್ಪನವರು ಸುಮಾರು 60ಕ್ಕೂ ಹೆಚ್ಚು ವರ್ಷಗಳಿಂದ ಯಕ್ಷತಿರುಗಾಟ ನಿರತರಾಗಿದ್ದಾರೆ. ಪ್ರಸ್ತುತ ಕೋಟದ ಅಮೃತೇಶ್ವರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಕ್ಲಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳೂರು ಇದರ ಬೈಂದೂರು ವಲಯ ಘಟಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ವತಿಯಿಂದ ಚಿತ್ತೂರು ಸ.ಹಿ. ಪ್ರಾ ಶಾಲೆಯಲ್ಲಿ ಬೈಂದೂರು ವಲಯ ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಡಾ. ಅತುಲ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೈಂದೂರು ವಲಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಚಿತ್ತೂರು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಪೂಜಾರಿ, ಉದ್ಯಮಿ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ಸ್ಥಳೀಯ ವೈದ್ಯ ಡಾ. ರಾಜೇಶ್ ಬಾಯರಿ, ಚಿತ್ತೂರು ಗ್ರಾ.ಪಂ.ಸದಸ್ಯ ರವೀಂದ್ರ ಶೆಟ್ಟಿ, ಸ. ಹಿ. ಪ್ರಾ ಶಾಲೆ ಚಿತ್ತೂರಿನ ಎಸ್.ಡಿ.ಎಂ.ಸಿ ಅಧ್ಯಕ್ಷ ದಿವಾಕರ ಆಚಾರ್ಯ, ಭಟ್ಕಳ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ, ಸಿ.ಆರ್. ಪಿ ನಾಗರಾಜ ಶೆಟ್ಟಿ,ತಾಲೂಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಬೈಂದೂರು ಸಿಟಿ ಇದರ ವತಿಯಿಂದ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 52 ಬಾರಿ ರಕ್ತದಾನ ಮಾಡಿದ ಬ್ಲಡ್ ಹೆಲ್ತ್ ಕೇರ್ ಕಾರ್ಯಕರ್ತರಾದ ಪೈಯಾಜ್ ಅಲಿ ಯೋಜನಾನಗರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ವತ್ತಿನಕಟ್ಟೆ ಮಹಾಸತಿ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ವಿಜಯ ನರಸಿಂಹ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಕ್ತದಾನದ ಮಹತ್ವ ತಿಳಿಸಿದರು. ಅಧ್ಯಕ್ಷತೆಯನ್ನು ಜೆಸಿ ಸವಿತಾ ದಿನೇಶ್ ವಹಿಸಿದ್ದರು. ಈ ಸಂಧರ್ಭದಲ್ಲಿ ಮಹಮ್ಮದ್ ಅಶ್ರಪ್, ಶ್ರೀಧರ ಆಚಾರ್ಯ, ಸೌಮ್ಯ ಬಿ, ಅನೂಪ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸತೀಶ್ ಎಂ. ಸ್ವಾಗತಿಸಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಎ. ಎಸ್. ಗೋಜು ರಿಯು ಕರಾಟೆ ಅಸೋಸಿಯೇಶನ್ ಇಂಡಿಯಾ ವತಿಯಿಂದ ನಡೆದ ಮುಕ್ತ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಆರಾಧ್ಯ ಶಂಕರ ಪೂಜಾರಿ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ. ಈಕೆ ಕುಂದಾಪುರದ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಗುಜ್ಜಾಡಿಯ ಉದ್ಯಮಿ ಆಶಾ ಮತ್ತು ಶಂಕರ ಪೂಜಾರಿ ಪುತ್ರಿ. ಫಿನಿಕ್ಸ್ ಅಕಾಡೆಮಿ ಇಂಡಿಯಾ ಕರಾಟೆ ಮಾಸ್ಟರ್ ಅಕ್ಷಯ್ ಹೆಮ್ಮಾಡಿ ಅವರ ಶಿಷ್ಯೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಇಂದುಶ್ರೀ ಮಹಿಳಾ ಸಂಘದ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶಿವ ಪಾರ್ವತಿ ಕಲ್ಯಾಣೋತ್ಸವ ಬುಧವಾರ ಸಂಜೆ ಸುಮೂಹರ್ತದಲ್ಲಿ ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಪಾಂಡುರಂಗ, ಶಿವಾನಂದ ಚಂದ್ರ ಭಟ್ ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರಗಿತು. ಶಿವ-ಪಾರ್ವತಿ ವಿಗ್ರಹವನ್ನು ವಾದ್ಯ ಘೋಷದೊಂದಿಗೆ ಅದ್ದೂರಿಯಾಗಿ ದೇವಸ್ಥಾನದ ಸಭಾಂಗಣಕ್ಕೆ ತರಲಾಯಿತು. ವಧು ನಿರೀಕ್ಷಣೆ, ಅರಸಿನ ಕುಂಕುಮ ಸಮರ್ಪಣೆ, ದಾರೆ ಮಣಿ ಕಟ್ಟುವಿಕೆ, ಮಾಲಾಧಾರಣೆ, ಕಂಕಣ ಮಾಂಗಲ್ಯ ಸೂತ್ರಧಾರಣೆ, ಚಿನ್ನಾಭರಣ ಕಪ್ಪಕಾಣಿಕೆ ಸಮರ್ಪಣೆ, ಪ್ರಸನ್ನ ಪೂಜೆ, ಹೋಮ ಸೇವೆಗಳ ಮೂಲಕ ಕಲ್ಯಾಣೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ, ಗೌರವಾಧ್ಯಕ್ಷೆ ಸರೋಜ, ಜಯಂತಿ ಜಿ.ಟಿ., ನೇತ್ರಾವತಿ, ನಾಗಿಣಿ, ಪಾರ್ವತಿ, ಗಂಗಾ ಜಿ.ಟಿ., ವಸಂತಿ ಪಿ., ರುದ್ರಮ್ಮ, ಕುಸುಮಾ, ಗಿರಿಜಾ, ಮಹಿಳಾ ಮಂಡಲದ ಸದಸ್ಯರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಭಜಕರು ಮತ್ತಿತರರು ಉಪಸ್ಥಿತರಿದ್ದರು.
ನೊಂದವರು, ದೀನ ದಲಿತರ ಸೇವೆಯೇ ನಿಜವಾದ ಭಗತಂತನ ಆರಾಧನೆ – ಮಂತ್ರಾಲಯ ಶ್ರೀ ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ,ಫೆ.26: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ದೀನ ದಲಿತರಿಗೆ ಸಹಕಾರ ನೀಡುವುದೇ ನಿಜವಾದ ಭಗವಂತನ ಆರಾಧನೆಯಾಗಿದ್ದು, ಇದರಿಂದಾಗಿ ದೇವರು ಸಂತೃಪ್ತಿಯನ್ನು ಹೊಂದುತ್ತಾನೆ ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾ?ಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು. ಅವರು ಕೋಟ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ವತಿಯಿಂದ ಮೂಡುಗಿಳಿಯಾರಿನ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನಡೆದ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿ ಮಾತನಾಡಿ ಭಕ್ತಿ ಹಾಗೂ ಸೇವೆಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವಿದೆ. ಜನಸೇವಾ ಟ್ರಸ್ಟ್ ಕೈಗೊಳ್ಳುತ್ತಿರುವ ಭಕ್ತಿಪೂರ್ವಕ ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿಯಾದದ್ದು ಎಂದರು. ಈ ಸಂದರ್ಭ ಬಸ್ರೂರು ಬಳಕೆದಾರರ ವೇದಿಕೆ ಮತ್ತು ಉಡುಪಿ ಮಾನವ ಹಕ್ಕುಗಳ ಪ್ರತಿಷ್ಟಾನದ ಸಂಚಾಲಕ ಡಾ| ರವೀಂದ್ರನಾಥ ಶಾನುಭಾಗ್ ಅವರಿಗೆ ಕೀರ್ತಿ ಕಲಶ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ರವೀಂದ್ರನಾಥ ಶ್ಯಾನುಭಾಗ್ ಅವರು, ನಾನು ಇದುವರೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಸಂಸ್ಥೆಯಲ್ಲಿ, ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಫೆ. 21ರಿಂದ 24ರವರೆಗೆ ನಡೆದ 81ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಂಗಳೂರು ವಿವಿಯ ಮಹಿಳಾ ತಂಡವು ರಾಷ್ಟ್ರೀಯ ಮಟ್ಟದಲ್ಲಿ ಸತತ 5ನೇ ಬಾರಿಗೆ ಚಾಂಪಿಯನ್ಶಿಪ್ ಪಟ್ಟ ಮುಡಿಗೇರಿಸಿಕೊಂಡಿದೆ. ಕ್ರೀಡಾಕೂಟದಲ್ಲಿ 51 ಅಂಕ ಪಡೆದ ಮಂಗಳೂರು ವಿವಿ ಅಗ್ರಸ್ಥಾನ ಪಡೆದಿದ್ದು, ಒಟ್ಟು 3 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕ ಸೇರಿದಂತೆ ಒಟ್ಟು 7 ಪದಕ ಪಡೆದ ಸಾಧನೆ ಮಾಡಿದೆ. ಪದಕ ವಿಜೇತ ಕ್ರೀಡಾರ್ಥಿಗಳೆಲ್ಲರೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಎಂಬುದು ಇಲ್ಲಿ ಉಲ್ಲೇಖಾರ್ಹ. ಜಾವೆಲಿನ್ ಥ್ರೋನಲ್ಲಿ ಕರಿಷ್ಮಾ ಸನಿಲ್ (ಪ್ರಥಮ), ಹಾಫ್ ಮ್ಯಾರಥಾನ್ನಲ್ಲಿ ಕೆ. ಎಂ ಲಕ್ಷ್ಮೀ (ಪ್ರಥಮ), 10,000ಮೀ ಓಟದಲ್ಲಿ ಕೆ. ಎಂ ಲಕ್ಷ್ಮೀ (ತೃತೀಯ), ಶಾಟ್ಪುಟ್ನಲ್ಲಿ ರೇಖಾ (ತೃತೀಯ), ಲಾಂಗ್ ಜಂಪ್ನಲ್ಲಿ ಶೃತಿಲಕ್ಷ್ಮೀ (ದ್ವಿತೀಯ), ಶಾಲಿನಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ24: ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ರೂಪಿಸಲಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಜಿಲ್ಲೆಯಲ್ಲಿ ಸಾಗರೋತ್ಪನ್ನವನ್ನು ಒಂದು ಜಿಲ್ಲೆ ಒಂದು ಉತ್ಪನ್ನವಾಗಿ ಆಯ್ಕೆ ಮಾಡಲಾಗಿದೆ. ಸದ್ರಿ ಯೋಜನೆಯಡಿ ಅಸಂಘಟಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಉನ್ನತಿಕರಣಕ್ಕಾಗಿ ಈ ಹಿಂದೆ ನೀಡಲಾಗುತ್ತಿದ್ದ ಕೇಂದ್ರ ಸರ್ಕಾರದ ಶೇ.35 ರ ಸಹಾಯಧನದೊಂದಿಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ಶೇ.15 ರ ಸಹಾಯಧನ ಪ್ರಸ್ತುತ ಒದಗಿಸಲಾಗುತ್ತಿದ್ದು, ಯೋಜನೆಯಡಿ ದೊರೆಯುವ ಸಹಾಯಧನವನ್ನು ಶೇ. 50ಕ್ಕೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮೀನು, ತೆಂಗು, ಹಾಲಿನ ಉತ್ಪನ್ನ, ಪಶು ಆಹಾರ, ಮಾಂಸದ ಉತ್ಪನ್ನ ಮತ್ತು ಇತರೆ ಆಹಾರ ಸಂಸ್ಕರಣೆ ಘಟಕ ಮೇಲ್ದರ್ಜೆಗೇರಿಸಲು ಆದ್ಯತೆ ಮೇರೆಗೆ ಸಹಾಯಧನವನ್ನು ನೀಡಲಾಗುತ್ತಿದೆ. ಆಸಕ್ತ ಫಲಾನುಭವಿಗಳು ಸ್ವಂತ ಉದ್ಯಮವನ್ನು ಸ್ಥಾಪಿಸಲು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸೂರಜ್ ಶೆಟ್ಟ, ಮೊ: 9019075051/7204192914 ಅಥವಾ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೃಷಿ ಇಲಾಖೆ, ರಜತಾದ್ರಿ ಮಣಿಪಾಲ ಕಚೇರಿಯನ್ನು…
ತಗ್ಗರ್ಸೆ ಶಾಲೆಯ ಸ್ಮಾರ್ಟ್ ಕ್ಲಾಸ್, ಪೀಠೋಪಕರಣ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೀವನದಲ್ಲಿ ಕನಸು ಕಂಡರಷ್ಟೇ ಸಾಲದು. ಅದನ್ನು ನನಸಾಗಿಸಿಕೊಳ್ಳುವ ತನಕ ಛಲ ಹಾಗೂ ಗುರಿ ಮುಟ್ಟುವ ಭರವಸೆ ಇರಬೇಕು. ಶ್ರದ್ಧೆಯಿಂದ ನಾವು ಯಾವುದೇ ಕಾರ್ಯ ಮಾಡಿದರೂ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ, ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು. ಶುಕ್ರವಾರ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಹಾಗೂ ಪೀಠೋಪಕರಣಗಳನ್ನು ಉದ್ಘಾಟಿಸಿ ಮಾತನಾಡಿದರು. ನಾವು ಉದ್ಯೋಗ ವ್ಯವಹಾರಕ್ಕಾಗಿ ಯಾವುದೇ ಊರಿನಲ್ಲಿದ್ದರೂ ಹುಟ್ಟೂರಿನ ನೆನಪು ಬಿಡಬಾರದು. ಈ ನಿಟ್ಟಿನಲ್ಲಿ ಬೈಂದೂರು ತಾಲೂಕಿನಲ್ಲಿ ಟ್ರಸ್ಟ್ ಮೂಲಕ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಭಾಗದಲ್ಲಿ ಉದ್ಯಮ ಸ್ಥಾಪಿಸಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವುದು ನನ್ನ ಕನಸಾಗಿದ್ದು ಅದಕ್ಕಾಗಿ ಶ್ರಮಿಸಲಾಗುತ್ತಿದೆ. ಉಚಿತ ಮನೆ ನಿರ್ಮಾಣ, ಯುವಕರಿಗೆ ಸೈನ್ಯದ ತರಬೇತಿ ಮೊದಲಾದ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಖುಷಿಯಿದೆ ಎಂದರು.…
