ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸತತ ಐದು ವರ್ಷಗಳ ನಿರಂತರ ಸೇವೆ ಪರಿಗಣಿಸಿ 2011ರಲ್ಲಿ ವಿಶೇಷ ವಿಧೇಯಕದ ಮೂಲಕ ಖಾಯಮಾತಿ ಪಡೆದ ಜೆಒಸಿ ನೌಕರರು ತಮಗೆ ಹಳೆ ಪಿಂಚಣಿ ಸೌಲಭ್ಯ ವಿಸ್ತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನಿಲ್ ಕುಮಾರ್ ಅವರಿಗೆ ಸಚಿವರ ಕಚೇರಿಯಲ್ಲಿ ಇತ್ತೀಚಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಜೆಒಸಿ ನೌಕರರ ಸಂಘದ ಗೌರವಾಧ್ಯಕ್ಷ ಬಾಲಚಂದ್ರ ಹೆಬ್ಬಾರ್ ಖಾಯಂ ಪೂರ್ವ ಅವಧಿಯ ಸೇವೆಯನ್ನು ಹಳೆ ಪಿಂಚಣಿಗೆ ಪರಿಗಣಿಸುವ ನಿಟ್ಟಿನಲ್ಲಿ ವಿಶೇಷ ವಿಧೇಯಕ ತಿದ್ದುಪಡಿಗೆ ಶಿಫಾರಸು ಮಾಡುವಂತೆ ಸಚಿವರನ್ನು ವಿನಂತಿಸಿದರು. ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜೆಓಸಿ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಹೆರಂಜಾಲು ಶ್ರೀಧರ ಗಾಣಿಗ, ದುರ್ಪಜೆ ಸುರೇಶ್ ಭಟ್, ಮುಂಡ್ಲಿ ಗುಣಪಾಲ ಜೈನ್ ಅವರು ಸಚಿವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿದರು. ಸಂಘದ ಕಾರ್ಯದರ್ಶಿ ದಿನಕರ್ ಪ್ರತಿನಿಧಿಗಳಾದ ನಿತ್ಯಾನಂದ ಬಿ ಶೆಟ್ಟಿ, ಶರ್ಮಿಳಾ ರಾವ್ ಪೂರ್ಣಿಮ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೊಲ್ಲೂರು: ಕೊಲ್ಲೂರು ನಿವಾಸಿ, ಉದ್ಯಮಿ ಮಂಜುನಾಥ ಶೇರುಗಾರ್ (63) ಅವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಬೈಂದೂರು ಬಾಡದ ಮಗಳ ಮನೆಗೆ ಬಂದಿದ್ದ ಮಂಜುನಾಥ್ ಅವರು ಮರಳಿ ಕೊಲ್ಲೂರಿಗೆ ತೆರಳುವ ಸಂದರ್ಭ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಬೈಂದೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತ್ತು. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ದೃಢಪಡಿಸಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೌಕರರಾಗಿದ್ದ ಅವರು ಸ್ವಯಂ ನಿವೃತ್ತಿ ಹೊಂದಿ ದೇವಸ್ಥಾನದ ಸಮೀಪ ವಿಧಾತ್ರಿ ಲಾಡ್ಜ್ ನಡೆಸುತ್ತಿದ್ದರು. ಅವರು ವಿಶ್ವ ರಾಮಕ್ಷತ್ರಿಯ ಮಹಾಸಂಘದ ಸದಸ್ಯರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಕರ್ನಾಟಕ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾಗಿ ಮಣಿಪಾಲದ ಎಂಐಟಿಯ ಪ್ರೊಫೆಸರ್ ಪ್ರೊ. ಕರುಣಾಕರ್ ಕೋಟೆಗಾರ್ ಅವರನ್ನು ನೇಮಕ ಮಾಡಲಾಗಿದೆ. ಪ್ರೊ. ಕರುಣಾಕರ ಕೋಟೆಗಾರ್ ಅವರು ಎಂಐಟಿ ಮಣಿಪಾಲದಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿದ್ದು, ಕಳೆದು 23 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಜುಲೈ 2020ರಂದು ನೇಮಗೊಂಡಿದ್ದರು. ಅವರು ಇತ್ತಿಚಿಗೆ ರಾಷ್ಟ್ರೀಯ ಶಿಕ್ಷಣ ನೀತಿ – 2020ರ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಸರಣಿ ವೀಡಿಯೋವನ್ನು ಮಂಗಳೂರು ವಿಶ್ವವಿದ್ಯಾನಿಲಯ ವೆಬ್ಸೈಟ್ ಮೂಲಕ ಬಿಡುಗಡೆಗೊಳಿಸಿದ್ದರು. ಕುಂದಾಪ್ರ ಡಾಟ್ ಕಾಂ ಮೂಲಕವೂ ವೀಡಿಯೋ ಸರಣಿ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವೀಡಿಯೋ ಸರಣಿ ಮಾಡಿದ್ದರು. ಇದನ್ನೂ ಓದಿ:► ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯರಾಗಿ ಡಾ. ಕರುಣಾಕರ ಕೊಟೇಗಾರ್ ನೇಮಕ – https://kundapraa.com/?p=39338 .
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಗೆ ಉಡುಪಿ ಜಿಲ್ಲೆಯ ಡಿ. ಡಿ. ಪಿ. ಐ ಎನ್. ಎಚ್. ನಾಗೂರ ಭೇಟಿ ನೀಡಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಗಳಿಸಿದ ಶ್ರೇಯಾ ಮೇಸ್ತ ಮತ್ತು ಅವರ ಸಹೋದರ ಸಂಜಯ್ ಮೇಸ್ತ ಇವರಿಗೆ ಸನ್ಮಾನಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭ, ಕಾರ್ಮೆಲ್ ಸಂಸ್ಥೆಯ ಶಿಕ್ಷಣ ಕಾರ್ಯದರ್ಶಿ ಭಗಿನಿ ಶುಭ ಎ. ಸಿ, ಶಿಕ್ಷಣ ಸಂಯೋಜಕರಾದ ಸಂತೋಷ್ ಕುಮಾರ್, ಜಂಟಿ ಕಾರ್ಯದರ್ಶಿ ಭಗಿನಿ ಜ್ಯೋತಿ, ಮುಖ್ಯ ಶಿಕ್ಷಕಿ ಭಗಿನಿ ಸಿ. ಕ್ರೆಸೆನ್ಸ್, ವಿದ್ಯಾರ್ಥಿಗಳ ತಾಯಿ ಪವಿತ್ರ, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದವರು ಭಜನೆ, ಭಾವಗೀತೆ, ವಚನಗಳಂತಹ ಅನ್ಯ ಪ್ರಕಾರಗಳನ್ನು ಸುಲಲಿತವಾಗಿ ಹಾಡಬಹುದು ಎಂದು ಸಂಗೀತ ಗುರು ವಿದ್ವಾನ್ ಸತೀಶ ಭಟ್ ಮಾಳಕೊಪ್ಪ ಹೇಳಿದರು. ಹಟ್ಟಿಯಂಗಡಿ ಶಂಕರನಾರಾಯಣ ದೇವಸ್ಥಾನದಲ್ಲಿ ಭಾನುವಾರ ಕೃಷ್ಣಾಷ್ಟ್ಟಮಿ ನಿಮಿತ್ತ ಕುಂದಾಪುರದ ಗುರುಪರಂಪರಾ ಸಂಗೀತ ಸಭಾದ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಭಜನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಗೀತ ಸಭಾದ ವಿದ್ಯಾರ್ಥಿಗಳು ಈ ವರೆಗೆ ವಿವಿಧೆಡೆ ನಡೆಯುವ ಬೈಠಕ್ಗಳಲ್ಲಿ ಶಾಸ್ತ್ರೀಯ ಸಂಗಿತವನ್ನು ಹಾಡುತ್ತಿದ್ದರು. ಈ ಬಾರಿ ಅವರಿಗೆ ಭಜನೆಗಳನ್ನು ಹಾಡುವ ಅವಕಾಶ ಸಿಕ್ಕಿದೆ. ಹಾಡಿದ ಎಲ್ಲರೂ ತಮ್ಮ ಪ್ರೌಢಿಮೆಯನ್ನು ಸಾದರ ಪಡಿಸಿದ್ದಾರೆ ಎಂದು ಅವರು ಶ್ಲಾಘಿಸಿದರು. ವಿದ್ವಾನ್ ಸತೀಶ ಭಟ್ ಮತ್ತು ವಿದುಷಿ ಪ್ರತಿಮಾ ಭಟ್ ದಂಪತಿಯ ಶಿಷ್ಯರಾದ ಜಾಹ್ನವಿ, ವಂದಿತಾ, ವೇದಿತಾ, ಈಶ್ವರಿ, ಸಂಕಲ್ಪಕುಮಾರ್, ಚಿಂತನಾ ಧನ್ಯ, ಕೇದಾರ ಮರವಂತೆ, ನಾಗರಾಜ ಭಟ್, ವೀಣಾ ನಾಯಕ್, ಚಿನ್ಮಯಿ ಧನ್ಯ, ಪ್ರಮೀಳಾ ಕುಂದಾಪುರ ಭಜನೆಗಳನ್ನು ವಿವಿಧ ರಾಗಗಳಲ್ಲಿ ಹಾಡಿದರು. ಶ್ರೀಧರ ಭಟ್ ಹಾರ್ಮೋನಿಯಂ, ಶಶಿಕಿರಣ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಆರ್ಗೆನಾನ್ ಮತ್ತು ಹೋಮಿಯೋಪತಿಕ್ ಫಿಲೋಸಫಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪ್ರಜ್ಞಾ ಆಳ್ವ ಕರ್ನಾಟಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹೊಮೀಯೋಪತಿ ಅಧ್ಯಯನ ಮಂಡಳಿಯ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. 163ನೇ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಿದಂತೆ ಮುಂದಿನ ಮೂರು ವರ್ಷಗಳ ಕಾಲ ಮಂಡಳಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಥಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ. ರೋಶನ್ ಪಿಂಟೋ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಧಾರ್ಮಿಕ ಆಚರಣೆಗಳನ್ನು ನಡೆಯಬೇಕು ಎನ್ನುವುದರ ಬಗ್ಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಆಚರಣೆಯ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು ಅಗತ್ಯ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನಿಯಮವಳಿಗಳನ್ನು ರೂಪಿಸಿ ರಾಜ್ಯ ಸರಕಾರಗಳಿಗೆ ಸುತ್ತೊಲೆ ಕಳುಹಿಸಿದೆ. ಧಾರ್ಮಿಕ ಆಚರಣೆಗಳಿಗೆ ಚ್ಯುತಿ ಬಾರದಂತೆ, ಸರಕಾರದ ಮಾರ್ಗಸೂಚಿ ಪಾಲಿಸಿಕೊಂಡು ಹಬ್ಬವನ್ನು ಆಚರಿಸುವುದು ಒಳ್ಳೆಯದು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಅಕಾಡೆಮಿಯಲ್ಲಿ ಹೊಸತನ ತರುವ ಪ್ರಯತ್ನ ಮಾಡುತ್ತಿದೆ. ಈ ಬಗ್ಗೆ ಇಲಾಖೆಯ ನಿರ್ದೇಶಕರುಗಳೊಂದಿಗೆ ಸಭೆ ನಡೆಸಲಾಗಿದೆ. ಎಲ್ಲಾ ಅಕಾಡೆಮಿಗಳಿಗೆ ಜೀವ ತುಂಬುವ ಕಾರ್ಯವನ್ನು ಮಾಡುತ್ತೇನೆ ಎಂದರು. ಕೊಲ್ಲೂರು ಹಾಗೂ ಹಟ್ಟಿಯಂಗಡಿ ದೇವಸ್ಥಾನಳಿಗೆ ಕುಟುಂಬಿಕರೊಂದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೆಕ್ಕಟ್ಟೆ ಗ್ರಾಮದ ಕೊಮೆಯಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶನೇಶ್ವರ ಮಹಾಯಾಗದೊಂದಿಗೆ ಸಾಮೂಹಿಕ ಶನಿ ಶಾಂತಿ ಮತ್ತು ತುಲಾಭಾರ ಸೇವೆಗಳು ನಡೆಯಿತು. ವೇದಮೂರ್ತಿ ಎಮ್. ಮಧೂಸೂದನ ಬಾಯಿರಿ ನೇತೃತ್ವದಲ್ಲಿ ಸಕಲ ವೈದಿಕ ಧಾರ್ಮಿಕ ಕಾರ್ಯಕ್ರಮನಡೆಯಿತು. ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಕೆ.ಎಸ್, ಕಾರ್ಯದರ್ಶಿ ಉಮೇಶ್ ಮೆಂಡನ್, ದೇವರ ದರ್ಶನ ಪಾತ್ರಿ ನರಸಿಂಹ ಕಾಂಚನ್, ದೇವಳದ ನಿಕಟ ಪೂರ್ವಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಆರ್ಚಕರು ಮತ್ತು ಸಿಬ್ಬಂದಿ ವರ್ಗ, ದೇವಳದ ಭಕ್ತರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಹಿಂದು ಜಾಗರಣ ವೇದಿಕೆಯ ಆಹ್ವಾನದ ಮೇರೆಗೆ ಉಪ್ಪಿನಕುದ್ರು ರಾಮ ಭಜನಾ ಮಂದಿರದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪಾಲ್ಗೊಂಡರು. ಸಚಿವರನ್ನು ಗೌರವಿಸಿದ ಗಂಗೊಳ್ಳಿಯ ಜಾಗರಣ ವೇದಿಕೆಯ ಮುಖಂಡರು ಗಂಗೊಳ್ಳಿಯ ಹಲವು ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಸಮಸ್ಯೆಯನ್ನು ಆಲಿಸಿ ಮನವಿಯನ್ನು ಸ್ವೀಕರಿಸಿದ ಸಚಿವರು ಪ್ರತಿ ಹಂತದಲ್ಲೂ ಹಿಂದು ಜಾಗರಣ ವೇದಿಕೆ ಸದಸ್ಯರ ಜೊತೆ ಇರುವುದಾಗಿ ಭರವಸೆ ನೀಡಿದರು. ಸದಾನಂದ ಉಪ್ಪಿನಕುದ್ರು, ಗಂಗೊಳ್ಳಿ ಹಿಂಜಾವೇ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್, ರಾಮಪ್ಪ ಖಾರ್ವಿ, ಗಣೇಶ ಶೆಣೈ, ಮೋಹನ್ ಖಾರ್ವಿ, ರಾಘವೇಂದ್ರ ಗಾಣಿಗ, ನವೀನ್ ಗಂಗೊಳ್ಳಿ, ಯಶವಂತ್ ಗಂಗೊಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಗಂಗೊಳ್ಳಿಯ ಸಂಘ ಪರಿವಾರದ ಪ್ರಮುಖರು, ಹಿರಿಯರು, ಬೈಂದೂರು ಹಿಂದು ಜಾಗರಣ ವೇದಿಕೆ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲಸೀಮಿಯಾ ಮೇಜರ್ ಕಾಯಿಲೆಯಿಂದ ಬಳಲುತ್ತಿರುವ ಬೈಂದೂರಿನ ಸುಶಾಂತ್ (4)ನ ಚಿಕಿತ್ಸೆಗಾಗಿ ಸಹೃದಯಿದಾನಿಗಳ ನೆರವಿನಿಂದ ಒಟ್ಟುಗೂಡಿಸಿದ ಒಟ್ಟು 42351 ರೂಪಾಯಿ (40351 ಚೆಕ್ ಮತ್ತು 2000 ನಗದು) ಹಣವನ್ನು ಕುಂದಾಪುರ ಪೋಲಿಸ್ ಠಾಣೆಯ ಠಾಣಾಧಿಕಾರಿಗಳಾದ ಸದಾಶಿವ್ ಗವರೋಜಿ ಅವರ ನೇತ್ರತ್ವದಲ್ಲಿ ಇಲ್ಲಿನ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಬಾಲನಕ ತಂದೆಗೆ ಹಸ್ತಾಂತರಿಸಲಾಯಿತು. ಹೆಲ್ಪಿಂಗ್ ಹ್ಯಾಂಡ್ಸ್ ಸಮಾಜಸೇವೆಯನ್ನು ಮೆಚ್ಚಿದ ಠಾಣಾಧಿಕಾರಿಗಳಾದ ಸದಾಶಿವ್ ಗೌರವಜಿ ಅವರು ಮುಂದಿನ ದಿನದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಆಗುವ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಬಾಲಕನ ಚಿಕಿತ್ಸೆ ಫಲಕಾರಿಯಾಗಲೆಂದು ಹೆಲ್ಪಿಂಗ್ ಹ್ಯಾಂಡ್ಸ್ ವತಿಯಿಂದ ಬಾಲಕನ ಹೆಸರಿನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥಾಪಕ ಅಧ್ಯಕ್ಷರಾದ ಪ್ರದೀಪ್ ಮೊಗವೀರ, ಗೌರವ ಸಲಹೆಗಾರರಾದ ರವೀಂದ್ರ ರಟ್ಟಾಡಿ, ಕಾರ್ಯದರ್ಶಿಗಳಾದ ಗುರುಪ್ರಸಾದ್ ಖಾರ್ವಿ, ಕಾರ್ಯಾಧ್ಯಕ್ಷರಾದ ಚರಣ್ ಗಂಗೊಳ್ಳಿ ,ಜೊತೆ ಕಾರ್ಯದರ್ಶಿ ಪ್ರಶಾಂತ್ ತಲ್ಲೂರು, ಸದಸ್ಯರಾದ ಸುನೀಲ್ ತಲ್ಲೂರು ಹಾಗೂ ಸುಕೇಶ್ ನಾಯ್ಕ ಉಪಸ್ಥಿತರಿದ್ದರು.…
