Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉದ್ಯಮಿ, ಧಾರ್ಮಿಕ ಮುಂದಾಳು, ವಿವಿಧ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸುರೇಶ ಪಡುಕೋಣೆ (82) ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಚಿಕ್ಕವಯಸ್ಸಿನಲ್ಲೇ ಬಾಂಬೆ ಸೇರಿದ ಸುರೇಶ ಪಡುಕೋಣೆ ಅವರು ಭಾರತ್ ಬೋರಿಂಗ್ ಕಂಪನಿಯಲ್ಲಿ ಗ್ರೈಂಡರ್ ಆಪರೇಟರಾಗಿ ವೃತ್ತಿ ಆರಂಭಿಸಿ, ನಂತರ ಅಪೋಲೋ ಬೋರಿಂಗ್ ಇಂಡಸ್ಟ್ರೀಸ್ ಮೂಲಕ ಸ್ವಂತ ಉದ್ಯಮ ಆರಂಭಿಸಿದರು. ಬಳಿಕ ಹೊಟೇಲ್ ಉದ್ಯಮಕ್ಕೂ ಕಾಲಿಟ್ಟರು. ಧಾರ್ಮಿಕ ಕ್ಚೇತ್ತದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡ ಸುರೇಶ್ ಪಡುಕೋಣೆ ಅವರು ಆಂಜನೇಯ ಸ್ವಾಮಿ ಪರಮ ಭಕ್ತರಾಗಿದ್ದು, ಕುಂದಾಪುರ ಹಂಗಳೂರಲ್ಲಿ 82 ಅಡಿ ಎತ್ತರ ಆಂಜನೇಯ ಸ್ವಾಮಿ ಪ್ರತಿಷ್ಠಾನೆ ಮಾಡಿ, ಪ್ರತೀ ವರ್ಷ ಪ್ರತಿಷ್ಠಾ ಮಹೋತ್ಸವ ನಡೆಸಿ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಸಿಕೊಂಡು ಬರುತ್ತಿದ್ದರು. ಆನೆಗುಡ್ಡೆ ಸ್ವಾಗತ ಗೋಪುರ, ಪಡುಕೋಣೆ ಶ್ರೀ ಮಹಾವಿಷ್ಣು ದೇವಸ್ಥಾನ, ಶ್ರೀ ಈಶ್ವರ, ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕೆರೆ ನವೀಕರಿಸಿದ್ದರು. ಬಾರಕೂರು ಏಕನಾಥೇಶ್ವರಿ ದೇವಸ್ಥಾನದ ಟ್ರಸ್ಟೀ, ಕುಂದಾಪುರ ತಾಲೂಕು ದೇವಾಡಿಗ ಸಂಘದ ಮಹಾಪೋಷಕರಾಗಿಯೂ ಸೇವೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ,ಫೆ13: ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಾರ್ಥಿಗಳ ಸಮವಸ್ತ್ರದ ವಿವಾದದ ಹಿನ್ನಲೆಯಲ್ಲಿ ಹಾಗೂ ಜಿಲ್ಲೆಯಲ್ಲಿನ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲಾ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪ್ರೌಢಶಾಲೆಗಳ ಸುತ್ತ ಮುತ್ತಲು 200ಮೀ ಪ್ರದೇಶವನ್ನು ಫೆ.14ರ ಬೆಳಿಗ್ಗೆ 6 ರಿಂದ ಫೆ.19ರ ಸಂಜೆ 6 ಗಂಟೆಯ ವರೆಗೆ ನಿಷೇದಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಆದೇಶಿಸಿದ್ದಾರೆ. ಸಮವಸ್ತ್ರದ ವಿವಾದದ ಹಿನ್ನಲೆಯಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ವಿಸ್ತೃತ ಪೀಠದಲ್ಲಿ ಮಧ್ಯಂತರ ಆದೇಶವಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿ/ ಕಾಲೇಜು ಆಡಳಿತ ಮಂಡಳಿ/ಕಾಲೇಜು ಶಿಸ್ತು ಸಮಿತಿ ಮತ್ತು ಶಿಕ್ಷಕರ/ ಪಾಲಕರ ಸಭೆಗಳನ್ನು ಕೂಡಲೇ ಕರೆದು ಮಾನ್ಯ ಉಚ್ಚ ನ್ಯಾಯಾಲಯದ ವಿಸ್ತೃತ ಪೀಠದಲ್ಲಿ ಮಧ್ಯಂತರ ಆದೇಶದಾದುದನ್ನು ಮನವರಿಕೆ ಮಾಡುವಂತೆ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿಕುಂದಾಪುರ: ಶ್ರೀರಾಮ್ ಕ್ರಿಕೆಟರ್ಸ್ ಕೇವಲ ಕ್ರಿಕೆಟ್ ಆಡುವುದಕ್ಕೋಸ್ಕರ ಹುಟ್ಟಿದ ಸಂಸ್ಥೆಯಲ್ಲ. ಕೆಲ ಸಮಾಜಮುಖಿ ಕಾರ್ಯದ ಜೊತೆಗೆ ಈ ಭಾಗದ ಏಳಿಗೆಗಾಗಿ ಶ್ರಮಿಸುತ್ತಿದೆ. ಒಂದಿಲ್ಲೊಂದು ಹೊಸತನವನ್ನು ಮಾಡುತ್ತಾ ಬಂದಿರುವ ಈ ಸಂಸ್ಥೆ ಸಾಧಕರನ್ನು ಅದರಲ್ಲೂ ಮುಖ್ಯವಾಗಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವವರನ್ನು ಸಮ್ಮಾನಿಸುವಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಹೇಳಿದರು. ಅವರು ಹೆಮ್ಮಾಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀರಾಮ್ ಕ್ರಿಕೆಟರ್ಸ್ ಆಶ್ರಯದಲ್ಲಿ ಜರುಗಿದ 3ನೇ ಬಾರಿಗೆ ಎರಡು ದಿನಗಳ 30 ಗಜಗಳ ಸಂಪತ್ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಮೈದಾನವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ರಂಗದಲ್ಲೂ ಮೀಸಲಾತಿಯಿದೆ. ಆದರೆ ಕ್ರಿಕೆಟ್ ಅಥವಾ ಕ್ರೀಡೆಯಲ್ಲಿ ಮಾತ್ರ ಮೀಸಲಾತಿ ಇಲ್ಲದೆಯೂ ಸಾಧನೆಯ ಮೂಲಕವೇ ಉನ್ನತ ಮಟ್ಟಕ್ಕೇರಬಹುದು. ಸಂಪತ್ ಅವರ ಸ್ಮರಣಾರ್ಥ ಆಯೋಜಿಸುತ್ತಿರುವ ಈ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಲಿ ಎಂದರು. ಈ ಸಂದರ್ಭದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸೌಕೂರು ಇದರ ಈ ವರ್ಷದ ತಿರುಗಾಟದ ನೂತನ ಪ್ರಸಂಗ ಅಂಬಿಕಾ ವಕ್ವಾಡಿ ವಿರಚಿತ ಪ್ರೇಮ ಸಂಘರ್ಷ ಪ್ರಸಂಗವನ್ನು ಶ್ರೀ ಕ್ಷೇತ್ರ ಕೊಲ್ಲೂರು ವ್ಯವಸ್ಥಾಪನ ಸಮಿತಿ ಸದಸ್ಯ ಕೆ.ಪಿ ಶೇಖರ ಪೂಜಾರಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ ನೂತನ ಪ್ರಸಂಗವನ್ನು ಮೇಳದ ಮುಖ್ಯ ಭಾಗವತ ರವಿ ಸುರಾಲ್ ಇವರಿಗೆ ಹಸ್ತಾಂತರಿಸಲಾಯಿತು. ಪದ್ಯ ರಚಿಸಿ ಕೊಟ್ಟ ದೇವದಾಸ ಈಶ್ವರ್ ಮಂಗಲ್ ಅವರನ್ನು ಸನ್ಮಾನಿಸಲಾಯಿತು. ವಕೀಲ ಎಮ್.ಜಿ ಶೆಟ್ಟಿ, ಸತೀಶ್ ಪೂಜಾರಿ ವಕ್ವಾಡಿ, ಕೋಡಿ ವಿಶ್ವನಾಥ್ ಗಾಣಿಗ ಉಪಸ್ಥಿತರಿದ್ದರು. ಮಹಾಬಲೇಶ್ವರ ಭಟ್ ಕ್ಯಾದಗಿ ಅವರು ಪ್ರಾಸ್ತಾವಿಕ ಮಾತನಾಡಿದರು. ಅಂಬಿಕಾ ವಕ್ವಾಡಿ ಸ್ವಾಗತಿಸಿದರು. ವಿ.ಜಿ ರಾಘವೇಂದ್ರ ಆಚಾರ್ ಕಾರ‍್ಯಕ್ರಮ ನಿರೂಪಣೆ ಮಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ಮೂವರು ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವಿಶಂಕರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡ ರಾಜೀವ ಶೆಟ್ಟಿ, ಸುಜಾತಾ ಹಾಗೂ ಮಂಜುಳಾ ಅವರನ್ನು ಶಾಲೆಯ ಸಹಶಿಕ್ಷಕರು ಹಾಗೂ ಎಸ್‌ಡಿಎಂಸಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಸುಮತಿ ಎಂ., ನಿವೃತ್ತ ಮುಖ್ಯ ಶಿಕ್ಷಕಿ ಸುಜಾತಾ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ರಾಘವೇಂದ್ರ ಪೈ ಹಾಗೂ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ ಕೋಟಾನ್ ಶುಭ ಹಾರೈಸಿದರು. ಶಿಕ್ಷಕರ ಪರವಾಗಿ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ ಶುಭಾಶಂಸನೆಗೈದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಣುಕಾ, ಎಸ್‌ಡಿಎಂಸಿ ಸದಸ್ಯರು, ಸಹಶಿಕ್ಷಕರು, ಗೌರವ ಶಿಕ್ಷಕಿಯರು ಮೊದಲಾದವರು ಉಪಸ್ಥಿತರಿದ್ದರು. ಸಹಶಿಕ್ಷಕಿ ಉಷಾಕುಮಾರಿ ಸ್ವಾಗತಿಸಿದರು. ಸಹಶಿಕ್ಷಕಿಯರಾದ ಯಶೋಧಾ, ಸರಿತಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ಕಳೆದ ಡಿಸೆಂಬರ್ 2021ರಲ್ಲಿ ನಡೆಸಿದ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತಾಲೂಕು ತ್ರಾಸಿಯ ವಿದ್ಯಾಶ್ರೀ ಮಧ್ಯಸ್ಥ ಉತ್ತೀರ್ಣರಾಗಿದ್ದಾರೆ. ಇವರು ತ್ರಾಸಿಯ ಅನಂತ ಮಧ್ಯಸ್ಥ ಮತ್ತು ಪೂರ್ಣಿಮಾ ಮಧ್ಯಸ್ಥ ಇವರ ಪುತ್ರಿ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಹಳೆವಿದ್ಯಾರ್ಥಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪ್ರಸಿದ್ಧ ಜ್ಯೋತಿಷಿ ಮತ್ತು ವಾಸ್ತುಶಾಸ್ತ್ರಜ್ಞ ಚಂದ್ರಶೇಖರ ಸ್ವಾಮೀಜಿ ಇವರು ಶನಿವಾರ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ದೇವಳದ ಅರ್ಚಕರಾದ ವೇದಮೂರ್ತಿ ಜನಾರ್ದನ ಅಡಿಗ ಇವರು ಶ್ರೀ ದೇವರ ಪ್ರಸಾದ ನೀಡಿ ಸ್ವಾಮೀಜಿಯವರನ್ನು ಗೌರವಿಸಿ ಸನ್ಮಾನಿಸಿದರು. ವ್ಯವಸ್ಥಾಪಕ ಎಚ್ ನಾಗರಾಜ ಹಂದೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಲ್ಲಿ ಆತ್ಮ ಜಾಗೃತಿ ಹೆಚ್ಚಾಗಿರುತ್ತದೆ ಎಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ ಕೋಟ್ಯಾನ್ ಹೇಳಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮ ಜಾಗೃತಿ ಬೆಳೆಯುತ್ತದೆ. ಪ್ರಸ್ತುತ ಜಾಗತಿಕವಾಗಿ ಗುರುತಿಸಿಕೊಳ್ಳಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಸೈನ್ಸ್ ಮುಂತಾದ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದಲೇ ಕಲಿಯುವುದು ಅಗತ್ಯ. ಜೀವನದಲ್ಲಿ ಸಾಧಿಸುವ ಛಲ ಹಾಗೂ ಅವಕಾಶಗಳನ್ನು ಬಳಸಿಕೊಂಡು ಆಸಕ್ತಿಯಿಂದ ತೊಡಗಿಸಿಕೊಂಡಾಗ ಮಾತ್ರ ಯಶಸ್ಸಿನ ಹಾದಿ ಸುಗಮವಾಗುತ್ತದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕೇಳುವ ವಿಷಯಗಳಿಕ್ಕಿಂತ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳ ಪ್ರತಿಯೊಂದು ನಡೆಯೂ ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ನಮ್ಮಲ್ಲಿರುವ ವಿಭಿನ್ನತೆಯಂತೆ ಮಾತ್ರ ಅಸ್ತಿತ್ವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀಗುರು ನಿತ್ಯಾನಂದ ಸೌಹಾರ್ದ ಸಹಕಾರಿಯ ನೂತನ ಶಾಖೆಯು ಹೇರೂರು ಗ್ರಾಮದ ಯರುಕೋಣೆಯಲ್ಲಿ ಆರಂಭಗೊಂಡಿತು. ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಕೋರಿದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿರುವ ರಾಜು ಪೂಜಾರಿಯವರು ಕಛೇರಿ ಉದ್ಘಾಟನೆ ಮಾಡಿ, ಸಾಮಾನ್ಯವಾಗಿ ಶಾಖೆಗಳನ್ನು ಆರಂಭಿಸುವಾಗ ಲಾಭಗಳಿಸುವ ಲೆಕ್ಕಾಚಾರ ಮಾಡಿ ಸುಗಮ ವ್ಯವಹಾರಕ್ಕೆ ಪೂರಕ ವಾತಾವರಣ ಹೊಂದಿದ ಸ್ಥಳ ಆಯ್ಕೆ ಮಾಡುತ್ತಾರೆ, ಆದರೆ ಸಹಕಾರಿಯ ಅಧ್ಯಕ್ಷರಾದ ಡಾ.ಎನ್ ಕೆ ಬಿಲ್ಲವರು ಹಾಗೆ ಯೋಚಿಸದೆ ತೀರಾ ಹಿಂದುಳಿದ ಪ್ರದೇಶದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ದೃಷ್ಠಿಯಿಂದ ಯರುಕೋಣೆಯಲ್ಲಿ ಶಾಖೆ ಆರಂಭಿಸಿದ್ದಾರೆ. ಶಾಖೆಯು ಲಾಭದಾಯಕವಾಗಿ ಅಭಿವೃದ್ದಿ ಹೊಂದಲಿ ಎಂದು ಶುಭಕೋರಿದರು, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಬಿ. ಎಮ್ ಸುಕುಮಾರ ಶೆಟ್ಟಿಯವರು ಭದ್ರತಾ ಕೊಠಡಿ ಉದ್ಘಾಟಿಸಿ ನೂತನ ಶಾಖೆಯು ಸಹಕಾರಿ ತತ್ವದಂತೆ ಗ್ರಾಮೀಣ ಜನತೆಯ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿ ಸಂಸ್ಥೆಯು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಇಂಟರ್ ಇನ್ಸಿಟ್ಯೂಶನಲ್ ಮ್ಯಾನೇಜ್‌ಮೆಂಟ್ ಫೆಸ್ಟ್ ‘ಅಗ್ರಿ ಮಂಥನ 2022’ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ ಆಳ್ವ ‘’ಡಿಜಿಟಲ್ ಪ್ರಪಂಚದಲ್ಲಿ ಕೃಷಿಯ ಮಹತ್ವದ ಕುರಿತು ಮಾತನಾಡಿದ ಅವರು, ಕೃಷಿ ನಮ್ಮ ದೇಶದ ಬೆನ್ನೆಲುಬಾಗಿದ್ದು, 50% ದೇಶದ ದುಡಿಯುವ ವರ್ಗ ಈ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ ಹಾಗೂ ದೇಶದ ಜಿಡಿಪಿಗೆ 20%ನ್ನು ಕೊಡುಗೆ ನೀಡುತ್ತಿದೆ ಎಂದರು. ಕೃಷಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಮತ್ತು ಆವಿಷ್ಕಾರದಿಂದಾಗಿ ಕೃಷಿ ಉದ್ಯಮ ಪ್ರಾಮುಖ್ಯತೆ ಹೆಚ್ಚಿಸಿಕೊಂಡಿದೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಕಾಣಲಿದೆ ಎಂದರು. ಕಾರ್ಯಕ್ರಮವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ, ಕೃಷಿ ಕಡೆ ಯುವಜನತೆಯನ್ನು ಸೆಳೆಯುದರತ್ತ ಒತ್ತು ನೀಡಬೇಕು ಎಂದರು. ಕೃಷಿಯನ್ನು ಸಂಸ್ಕೃತಿಯ ಭಾಗವಾಗಿ ಕಾಣುವ ಕಾಲ ಒಂದಿತ್ತು. ಆದರೆ ಈಗ ಅದು ಉದ್ಯಮವಾಗಿ…

Read More