ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪರಿಸರದ ಬಗ್ಗೆ ಕಾಳಜಿ ಅತ್ಯಗತ್ಯ ಆದರೆ ಪ್ರಸ್ತುತ ನಿರ್ಲಕ್ಷ್ಯ ಅತಿಯಾಗಿ ಕಾಡುತ್ತಿದೆ. ಇದು ಸರಿಯಲ್ಲ ಮುಂದಿರುವ ದಿನಗಳು ಕ್ಲಿಷ್ಟಕರ ಎಂದು ಮಣೂರು ಚಿತ್ತಾರಿ ನಾಗಬ್ರಹ್ಮ ದೇಗುಲದ ಅಧ್ಯಕ್ಷ ಕೆ. ರಮೇಶ್ ಪ್ರಭು ಹೇಳಿದರು. ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ ಹಾಗೂ ಚಿತ್ತಾರಿ ದೇಗುಲದ ಸಹಯೋಗದೊಂದಿಗೆ 287ನೇ ಭಾನುವಾರದ ಅಂಗವಾಗಿ ಮಣೂರು ಚಿತ್ತಾರಿ ನಾಗಬ್ರಹ್ಮ ದೇಗುಲದ ಸ್ವಚ್ಛತಾ ಕಾರ್ಯದಲ್ಲಿ ಮಾತನಾಡಿದರು. ದಿನದಿಂದ ದಿನಕ್ಕೆ ಪರಿಸರದ ಮೇಲೆ ಮುನುಕುಲ ಹಾನಿಯುಂಟುಮಾಡುತ್ತಿದ್ದಾನೆ ಪ್ಲಾಸ್ಟಿಕ್ ತ್ಯಾಜ್ಯಗಳು ಮನುಕುಲ ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಸಂಚಕಾರ ತಂದೊಡ್ಡುತ್ತಿವೆ ಹೀಗಾದರೆ ಮುಂದಿನ ದಿನಗಳು ಆಪತ್ತು ತಪ್ಪಿದಲ್ಲ ಈಗಲೇ ಜಾಗೃತರಾಗಿ ಎಂದು ಕರೆಕೊಟ್ಟರು. ದೇಗುದ ಪ್ರಮುಖರಾದ ಗೋಪಾಲ್ ಪೈ, ಪಂಚವರ್ಣ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಮಣೂರು ಫ್ರೆಂಡ್ಸ್ ಸುರೇಶ್ ಆಚಾರ್ ಸೇರಿದಂತೆ ಹಲವರು ಇದ್ದರು. ಇದೇ ಜ.24ರ ಶನಿವಾರ ಮಣೂರು ಚಿತ್ತಾರಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಂದೂರು ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ರ‍್ಯಾಲಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು. ಬೈಂದೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ನರಸಿಂಹ ದೇವಾಡಿಗ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಾಯಕತ್ವ ಪ್ರತಿಭೆ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಾದರಿಯಾಗಿದೆ. ಜೊತೆಗೆ ಉತ್ತಮ ನಾಗರೀಕರನ್ನಾಗಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುತ್ತದೆ ಎಂದು ಹೇಳಿದವರು. ಕಾರ್ಯಕ್ರಮದಲ್ಲಿ ತಾಲೂಕು ಸರಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾ ಶೇಖರ್ ಪೂಜಾರಿ ಅವರು ಉಪಸ್ಥಿತರಿದ್ದು ಜೀವನದಲ್ಲಿ ಕೌಶಲ್ಯ, ಸಂಸ್ಕಾರ ಮತ್ತು ಸಂಸ್ಕೃತಿಯನ್ನ ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ ಎಂದು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ವಿಜಯ ಕುಮಾರ್ ಶೆಟ್ಟಿ ಅವರು ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಾವಲಂಬನೆಯನ್ನು ಬೆಳೆಸುತ್ತದೆ ಎಂದು ಹೇಳಿದರು. ರ‍್ಯಾಲಿ ಪಕ್ಷಿ ನೋಟವನ್ನು ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಮಂಜುನಾಥ್ ಹೆಗಡೆ ಅವರು ಪ್ರಸ್ತುತ ಪಡಿಸಿದರು. ಸಭೆಯಲ್ಲಿ ಜಿಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಶಂಕರನಾರಾಯಣ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ 2006ನೇಯ ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ 80,000 ರೂ. ಮೊತ್ತದ ಪ್ರೊಜೆಕ್ಟರ್ ಮತ್ತು ಲ್ಯಾಪ್ ಟಾಪ್ ಕೊಡುಗೆಯಾಗಿ ಇತ್ತೀಚಿಗೆ ನೀಡಿದರು. ಶಾಲೆಯ ಉಪಪ್ರಾಂಶುಪಾಲರಾದ ರಂಜೀತ್ ಬೋಳಾರ್ ಮತ್ತು ನಿಕಟಪೂರ್ವ ಉಪಪ್ರಾಂಶುಪಾಲರಾದ ಮೋಹನ್ ರಾವ್ ಎಂ.ಜೆ. ಸಂಸ್ಥೆಯೊಂದಿಗಿನ ಸವಿನೆನಪು ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ಸಿಹಿಯೂಟ ನೀಡಿದರು. ಜೊತೆಗೆ ಮುಂದೆಯೂ ಶಾಲಾ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಜೊತೆಗಿರುವುದಾಗಿ ಭರವಸೆ ನೀಡಿದರು. ತಾವು ಕಲಿತ ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಾಧಾರಿತ ಶಿಕ್ಷಣದ ಪ್ರಯೋಜನವನ್ನು ಪಡೆಯಬೇಕೆಂಬ ಉದಾತ್ತ ಧ್ಯೇಯದಿಂದ ಕೊಡುಗೆಯನ್ನು ನೀಡಿದ ಹೆಮ್ಮೆಯ ಪೂರ್ವ ವಿದ್ಯಾರ್ಥಿಗಳ ಶಾಲಾಭಿಮಾನದ ಕುರಿತು ಪ್ರಶಂಸೆಯ ಮಾತುಗಳನ್ನಾಡಿದರು. ಅವರ ಗುರುಗಳಾದ ಉದಯ ಕುಮಾರ್ ರಾಯ್ಕರ್ ಅವರು ತಮ್ಮ ಶಿಷ್ಯರ ಸಾಧನೆ ಮತ್ತು ಔದಾರ್ಯದ ಬಗ್ಗೆ ಮಾತನಾಡಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಪ್ರಭಾ, ಪೋಷಕರು, ಪೂರ್ವ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಕೃಷ್ಣ ಡಿ. ಎಸ್. ಸ್ವಾಗತಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ಮಾನವ ಅಭಿವೃದ್ಧಿ ವರದಿ- 2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ- 2031 ವರದಿಯನ್ನು ಸಿದ್ಧಪಡಿಸಲು ಅಧಿಕಾರಿಗಳು ಕಾಳಜಿ ವಹಿಸುವುದರೊಂದಿಗೆ ನಿಖರ ದತ್ತಾಂಶವನ್ನು ಕಾಲಮಿತಿಯ ಒಳಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ- 2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ- 2031 ವರದಿಯನ್ನು ಸಿದ್ಧಪಡಿಸುವ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ- 2025 ಮತ್ತು ಸಮಗ್ರ ಹಾಗೂ ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ- 2031 ವರದಿಯು ಅತೀ ಪ್ರಾಮುಖ್ಯ ದಾಖಲೆಯಾಗಿದ್ದು, ಎಲ್ಲಾ ಇಲಾಖಾಧಿಕಾರಿಗಳು ಇದರ ತಯಾರಿಕೆಯ ಪ್ರಕ್ರಿಯೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಂಬಂಧಿಸಿದ ದಾಖಲೆಗಳನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ದಾನಿಗಳ ಸಹಕಾರದೊಂದಿಗೆ ರೂಪಾಯಿ 96 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊರಗ ಕಾಲೋನಿಯ ಎಂಟು ಹೊಸ ಮನೆ ನಿರ್ಮಾಣಕ್ಕೆ ನಾಡೋಜ ಜಿ. ಶಂಕರ ಅವರು 3 ಲಕ್ಷ ಸಹಾಯ ಧನ ಚೆಕ್ ನೀಡಿದರು. ನಂತರ ಅವರು ಮಾತನಾಡಿ, ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಕೊರಗರ ಎಂಟು ಹೊಸ ಮನೆ ನಿರ್ಮಾಣ ಕಾರ್ಯ ಶ್ಲಾಘನೀಯ. ಇಂದು ಸಹಾಯ ಧನ ಚೆಕ್ ವಿತರಿಸುತ್ತಿರುವ ಬಗ್ಗೆ ಖುಷಿ ಇದೆ. ಇಲ್ಲಿಯ ಮೂಲ ನಿವಾಸಿಗಳಿಗೆ ಹೊಸ ಎಂಟು ಮನೆ ನಿರ್ಮಿಸಿ ಕೊಡುವ ಮೂಲಕ ಕೋಟತಟ್ಟು ಗ್ರಾಮ ಪಂಚಾಯತ್ ಇತರ ಗ್ರಾಮ ಪಂಚಾಯತ್ ಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡುವುದಾಗಿ ಹೇಳಿದರು. ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಕುಂದರ್ ಬಾರಿಕೆರೆ ಅವರು ಮಾತನಾಡಿ, ತಳಮಟ್ಟದ ಸಮುದಾಯವನ್ನು ಮೇಲಕ್ಕೆತ್ತುವ ಕಲ್ಯಾಣ ಕಾರ್ಯಕ್ಕೆ ಸಹಾಯ ಧನ ನೀಡಿದ ಶ್ರೀಯುತರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ಇಲ್ಲಿನ ಎಂಬಿಎ ವಿಭಾಗದ ವತಿಯಿಂದ ಇತ್ತೀಚೆಗೆ ಎಫ್‌ಎಸ್‌ಎಲ್ ಇಂಡಿಯಾ ಸಹಯೋಗದೊಂದಿಗೆ ಸೋಶಿಯಲ್ ಲೀಡರ್ಶಿಪ್ ಟ್ರೈನಿಂಗ್ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ರಾಕೇಶ್ ಸೋನ್ಸ್, ಪ್ರೆಸಿಡೆಂಟ್, ಎಫ್ ಎಸ್ ಎಲ್ ಇಂಡಿಯಾ ಅಂಡ್ ಹಿಸ್ ಟೀಮ್ ಅವರು ಆಗಮಿಸಿ ವಿದ್ಯಾರ್ಥಿಗಳು ಹೇಗೆ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎನ್ನುವುದರ ಬಗ್ಗೆ ವಿವಿಧ ಚಟುವಟಿಕೆಗಳನ್ನು ನೀಡುವುದರ ಮೂಲಕ ಪ್ರತಿ ವಿದ್ಯಾರ್ಥಿಗಳಲ್ಲಿಯೂ ನಾಯಕತ್ವ ಗುಣಗಳಿರುತ್ತದೆ ಅದನ್ನು ಹೇಗೆ ಸಾಮಾಜಿಕ ಅಭಿವೃದ್ಧಿಗೆ ಉಪಯೋಗಪಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಉತ್ತಮವಾದ ತರಬೇತಿಯನ್ನು ನೀಡಿದರು. ಈ ಕಾರ್ಯಗಾರದಲ್ಲಿ ಎಫ್ ಎಸ್ ಎಲ್ ಇಂಡಿಯಾ, ಸಿಇಎಲ್ ಕೊರ್ಡಿನೇಟರ್ ಅಂಡ್ ಇಂಚಾರ್ಜ್ ಆದ ನಾಗರಾಜ್ ಶೆಟ್ಟಿ ಎನ್, ಎಫ್ ಎಸ್ ಎಲ್ ಇಂಡಿಯಾ ವೈಡಿಪಿ ಕೋರ್ಡಿನೇಟರ್ ರಕ್ಷಾ ವಿ. ಶೆನೊಯ್ ಕೆ, ಸಿಇಎಲ್ ವಾಲೆಂಟಿರ್ ಫ್ರಮ್ ಜರ್ಮನಿಯಾವಾರಾದ ಆಂಟೋನಿಯಾ ಗ್ರೋಸ್ ಮತ್ತು ಜೋಯೆಲ್ ಫುಮಗಲ್ಲಿ ಅವರುಗಳು ಕೂಡ ಅವರ ಜೊತೆ ಸಹಕರಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ಎನ್.ಐ.ಎಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಮರುಪಾವತಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಯ ಅರ್ಹ ವಿದ್ಯಾರ್ಥಿಗಳು ಪ್ರಸ್ತಾವನೆಯನ್ನು ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದೂ.ಸಂ: 0820-2521324/9845432303 ಅನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿ ಪ್ರಕಟಣೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಸಂಘಟನೆಗಳು ಸಮಾಜ ಹಾಗೂ ಸಮುದಾಯದ ಆಸ್ತಿಯಾಗಿ ಕಾರ್ಯನಿರ್ವಹಿಸಬೇಕು. ಇದಕ್ಕೆ ಯುವ ವೇದಿಕೆಯ ಒಂಭತ್ತು ವರ್ಷಗಳ ಸಾಮಾಜಿಕ ಕಾರ್ಯಗಳೇ ಸಾಕ್ಷಿ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್ ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಸಾಲಿಗ್ರಾಮದ ಶ್ರೀ ಗುರುನರಸಿಂಹ ಬಯಲು ರಂಗಮಂದಿರದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇದರ 9ನೇ ವರ್ಷದ ವಾರ್ಷಿಕೋತ್ಸವ, ಗೌರವ ಸನ್ಮಾನ, ವಿದ್ಯಾನಿಧಿ ವಿತರಣೆ ಮತ್ತು ಸಾಂಸ್ಕೃತಿಕದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದಶಮಾನೋತ್ಸವ ಹೊಸ್ತಿಲ್ಲಲ್ಲಿರುವ ಈ ಸಂಸ್ಥೆ ಇನ್ನಷ್ಟು ಸಾಮಾಜಿಕ ಯೋಜನೆಗಳನ್ನು ನೀಡಲಿ ಎಂದು ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಯ್ಯ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಸಾಲಿಗ್ರಾಮ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ ಶುಭಶಂಸನೆಯನ್ನು ಗೈದರು. ಪೊಂಪೈ ಕಾಲೇಜು ಐಕಳ ಇದರ ನಿವೃತ್ತ ಪ್ರಾಂಶುಪಾಲ ಡಾ| ಕೆ. ಜಗದೀಶ್ ಹೊಳ್ಳ, ಸಮಾಜಸೇವಕ ಬಿ. ಸುರೇಶ್ ಅಡಿಗ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೊಸದಾಗಿ ಕುಂದಾಪುರದಲ್ಲಿ ಪ್ರಾರಂಭವಾದ ಸೈಂಟ್ ಫಿಲಿಫ್ ನೆರಿ ಸೊಸೈಟಿ, ಇದರ ಸ್ಥಾಪಕ ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ ಆನಗಳ್ಳಿ ಆಯ್ಕೆಯಾಗಿದ್ದಾರೆ. ಸಂಸ್ಥೆಯನ್ನು ಮುಖ್ಯ ಪ್ರವರ್ತಕರಾಗಿ ಸಂಸ್ಥೆಯನ್ನು ಸಂಘಟಿಸಿದ್ದ ಅವರು ಜ.8ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆಯನ್ನು ಸರಕಾರದ ಸಹಾಯಕ ನಿಬಂಧಕರ ಕಛೇರಿ ಕುಂದಾಪುರ ಇದರ ಅಧಿಕಾರಿಯಾದ ಎಂ.ಸಿ. ಸ್ವಾಮಿ ಅವರು ನೆರವೇರಿಸಿಕೊಟ್ಟರು. ಉಪಾಧ್ಯಕ್ಷರಾಗಿ ಅಲಿಷಾ ಡಿಸೋಜಾ ಆಯ್ಕೆಯಾದರು. ಸ್ವ-ಉದ್ಯೋಗಿಗಳಿಗೆ ನೆರವು ನೀಡುವ ಮುಖ್ಯ ಉದ್ದೇಶವಾಗಿದ್ದು, ಸಂಘದ ಸದಸ್ಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಬೇಕಾದ ಆನ್ಲೈನ್ ಅರ್ಜಿ ಸಲ್ಲಿಕೆ, ಹಣಕಾಸು ನೆರವು, ಮಾಹಿತಿ ಮತ್ತು ತರಬೇತಿ ಉಚಿತವಾಗಿ ನೀಡುವುದಾಗಿ ತಿಳಿಸಿದರು. ಚುನಾವಣೆ ನಡೆಸಲು ನೆರವಾದ ಎಲ್ಲಾ ನಿರ್ದೇಶಕರಿಗೆ ಮತ್ತು ಸರಕಾರದ ಅಧಿಕಾರಿಗಳಿಗೆ ಸಂಸ್ಥೆಯ ಉಪಾಧ್ಯಕ್ಷೆ ಆಲಿಷಾ ಡಿಸೋಜಾ ಧನ್ಯವಾದ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ತಾಲೂಕಿನ ಶಿರೂರು ಕರಾವಳಿ ಕಡಲ-ತಡಿಯಲ್ಲಿ ರೋಟರಿ ಕ್ಲಬ್ ಬೈಂದೂರಿನ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಡಾ. ಉಮೇಶ್ ಪುತ್ರನ್ ಮಾತನಾಡಿ, ‘ರೋಟರಿ ಸಂಸ್ಥೆಯು ವಿಶ್ವಶಾಂತಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ರೋಟರಿಯ ಅಂತರರಾಷ್ಟ್ರೀಯ ಬಾಂಧವ್ಯ ನೀತಿಗಳು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ, ರೋಟರಿ ಕ್ಲಬ್ ಜನಮುಖಿ ಕಾರ್ಯ ಯೋಜನೆಗಳನ್ನು ಅನುಷ್ಠಾನ ಮಾಡುತ್ತಾ ಬಂದಿದೆ ಎಂದರು. ಹ್ಯಾಟ್ರಿಕ್ ಡಿಸ್ಟಿಕ್ ಕಲ್ಬರಲ್ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಬೈಂದೂರು ರೋಟರಿಯ ಅಧ್ಯಕ್ಷ- ಕಾರ್ಯದರ್ಶಿ ಅವರನ್ನು, ರೋಟರಿ ಟ್ರಸ್ಟ್ ಪರವಾಗಿ ಟ್ರಸ್ಟ್ ಅಧ್ಯಕ್ಷ ಕೆ. ಬಾಬು ಶೆಟ್ಟಿ ಗೌರವಿಸಿದರು. ಕಾರ್ಯಕ್ರಮದ ಪ್ರಾಯೋಜಕರಾದ ಲಕ್ಷ್ಮಿ ಪ್ರಕಾಶ್ – ದೀಪಿಕಾ ದಂಪತಿಯನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. 2026- 27ನೇ ಸಾಲಿನ ಅಧ್ಯಕ್ಷರಾಗಿ ಅರುಣ್ ಕುಮಾರ್ ಶಿರೂರು, 2027-28ನೇ ಸಾಲಿನ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ಸೂರ್ಕುಂದ ಆಯ್ಕೆಯಾದರು. ರೋಟರಿ ಕ್ಲಬ್ ಬೈಂದೂರು…
