Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಮಂಗಳೂರು ಕೃಷ್ಣಭವನ ಕನ್ವೆನ್‌ಷನ್ ಹಾಲ್‌ನಲ್ಲಿ ಜರುಗಿದ ಕರ್ನಾಟಕ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಆಳ್ವಾಸ್ ಕಾಲೇಜು ಮೂಡಬಿದಿರೆ ಮಹಿಳಾ ವಿಭಾಗ ದಲ್ಲಿ ಪ್ರಥಮ ತಂಡ ಪ್ರಶಸ್ತಿ ಪಡೆದರೆ ಪುರುಷರ ವಿಭಾಗದಲ್ಲಿ ದ್ವಿತೀಯ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಕರ್ನಾಟಕ ರಾಜ್ಯ ಪವರ್‌ಲಿಫ್ಟಿಂಗ್ ಸಂಸ್ಥೆ ಆಶ್ರಯದಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗದ ತಂಡ ಪ್ರಶಸ್ತಿ ಬಾಲಂಜನೇಯ ಜಿಮ್ ಮಂಗಳೂರು ಪಡೆದರೆ, ಮಹಿಳಾ ವಿಭಾಗದ ದ್ವಿತೀಯ ತಂಡ ಪ್ರಶಸ್ತಿ ಐರನ್ ಎನ್ ಡೆನ್ ಬೆಂಗಳೂರು ತಂಡ ಪಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಪೋಷಕರು ತಾವು ಪೋಷಕರು ಎನ್ನುವ ಅಧಿಕಾರದಿಂದ ಮಕ್ಕಳ ಮೇಲೆ ಒತ್ತಡ ಹೇರದೆ ಮಕ್ಕಳಲ್ಲಿನ ಆಸಕ್ತಿ ಕ್ಷೇತ್ರ ಗುರುತಿಸಿ ಅದರಲ್ಲಿ ಅವರನ್ನು ತೊಡಗಿಸಿಕೊಳ್ಳುವುದಕ್ಕೆ ಪ್ರೇರೇಪಿಸುವ ಕೆಲಸ ಮಾಡಬೇಕು. ಮಕ್ಕಳಲ್ಲಿನ ಸೂಕ್ತ ಪ್ರತಿಭೆ ಹೊರಹೊಮ್ಮಲು ಸೂಕ್ತವಾದ ವೇದಿಕೆ ಅಗತ್ಯ, ಈ ನಿಟ್ಟಿನಲ್ಲಿ ಕಾರಂತ ಥೀಮ್ ಪಾರ್ಕ್ ಕಾರ್ಯವೆಸಗುತ್ತಿರುವುದು ಶ್ಲಾಘನೀಯ ಎಂದು ಸಾಂಸ್ಕೃತಿಕ ಚಿಂತಕಿ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಅವರು ಹೇಳಿದರು. ಅವರು ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ರಿ. ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ರಿ. ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ವತಿಯಿಂದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಕೋಟದಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚಿಲುಮೆ-೨೦೨೧(ಭರವಸೆಯ ತಂಗಾಳಿ) ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆ ಕುಂಭಾಶಿ ವಿದ್ಯಾರ್ಥಿನಿ ಶ್ಲಾಘ ಸಾಲಿಗ್ರಾಮ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದು, ಬಾಲ್ಯ ವಿವಾಹಗಳಿಗೆ ಒಳಪಡಿಸುವುದು ಸೇರಿದಂತೆ ಮಕ್ಕಳ ಮೇಲೆ ನಡೆಯುವ ಶೋಷಣೆಗಳ ಕುರಿತು ಮಾಹಿತಿ ಇದ್ದಲ್ಲಿ , ಸಾರ್ವಜನಿಕರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ,ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಕೂಡಲೇ ಮಾಹಿತಿ ನೀಡುವುದರ ಮೂಲಕ, ಮಕ್ಕಳನ್ನು ಶೋಷಣೆಯಿಂದ ತಪ್ಪಿಸಲು ಸಾಧ್ಯ ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜೆ.ಎನ್. ಸುಬ್ರಮಣ್ಯ ಹೇಳಿದರು. ಅವರು ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ರಿ. ಪೊಲೀಸ್ ಇಲಾಖೆ,ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ 1098, ವಿದ್ಯೋದಯ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ನಡೆದ , ಮಕ್ಕಳ ದಿನಾಚರಣೆ 2021 ಹಾಗೂ 75 ನೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕಿರಿಮಂಜೆಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಗ್ರಂಥಾಲಯಕ್ಕೆ ಸಂಸ್ಥೆಯ ಹಿತೈಷಿ ಹಾಗೂ ಮುಂಬೈನ ಹರಡಿನ್ ಕೊಲಿನ್ಸ್ ಪಬ್ಲೀಷರ್ಸ್ ಇಂಡಿಯಾ ಲಿಮಿಟೆಡ್ ಇದರ ಉಪ ವ್ಯವಸ್ಥಾಪಕರಾದ ದಿವಂಗತ ವಿನಯ್ ಅಂಚನ್ ಕುಟುಂಬಿಕರು ಶಾಲೆಯ ಗ್ರಂಥಾಲಯಕ್ಕೆ 6,500 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ನಾಗೂರಿನ ಸಮಾಜ ಸೇವಕರು ಹಾಗೂ ವಡೇರಮಠ ಮಾಲಕರಾದ ಮಂಜುನಾಥ ಉಡುಪ ಅವರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸಿದರು. ಈ ಸಂಧರ್ಭ ಶಾಲಾ ಆಡಳಿತ ಮಂಡಳಿ ಸದಸ್ಯರಾದ ರಾಮಕೃಷ್ಣ ಬಿಲ್ಲವ, ರಾಜೀವ ಶೆಟ್ಟಿ ಮುಖ್ಯ ಶಿಕ್ಷಕರಾದ ರವಿದಾಸ ಶೆಟ್ಟಿ, ಪಾಲಕರು, ವಿದ್ಯಾರ್ಥಿ ಪ್ರತಿನಿದಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದರೆ: ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಅತ್ಯಗತ್ಯ. ಏನೇ ಸಮಸ್ಯೆಯಿದ್ದರೂ, ಯಾವುದೇ ಬಗೆಯ ಸವಾಲು- ತೊಂದರೆಗಳಿದ್ದರೂ ವಿದ್ಯಾರ್ಥಿಗಳು ಅದನ್ನು ವ್ಯಕ್ತಪಡಿಸಬೇಕು. ಭಾವನೆಗಳನ್ನು ವ್ಯಕ್ತಪಡಿಸದಿದ್ದರೆ ಮುಂದೆ ಅದು ಮಾನಸಿಕವಾಗಿ ಮಾತ್ರವಲ್ಲದೇ ದೈಹಿಕವಾಗಿಯೂ ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಸಮಸ್ಯೆಗಳಿದ್ದಾಗ ಯಾವುದೇ ಹಿಂಜರಿಕೆಯಿಲ್ಲದೆ ಸಂಬಂಧ ಪಟ್ಟವರಿಗೆ ಅದನ್ನು ತಿಳಿಸುವ ಪ್ರಯತ್ನ ಮಾಡಬೇಕು. ಆಂತರಿಕ ದೂರು ನಿರ್ವಹಣಾ ಸಮಿತಿಗಳು ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ದೊಡ್ಡ ಸಹಾಯ ಮಾಡಬಲ್ಲವು. ಎಂದು ಮಂಗಳೂರಿನ ಮನ:ಶಾಂತಿ ಕೌನ್ಸಿಲಿಂಗ್ ಸಂಸ್ಥೆಯ ಮೆಂಟಲ್ ಹೆಲ್ತ್ ಪ್ರೊಫೆಶನಲ್ ಹಾಗೂ ಟ್ರೈನರ್ ಡಾ. ರಮೀಲಾ ಶೇಖರ್ ಹೇಳಿದರು. ಅವರು, ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಆಂತರಿಕ ದೂರು ನಿರ್ವಹಣಾ ಸಮಿತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಮಾನಸಿಕ ಒತ್ತಡದಿಂದ ಹೇಗೆ ಹೊರಬರಬಹುದು ಎಂಬುದರ ಬಗ್ಗೆ ಸಲಹೆಗಳನ್ನು ನೀಡಿದ ಡಾ.ರಮೀಲಾ, ನಿತ್ಯ ವ್ಯಾಯಾಮ, ಆತ್ಮವಿಶ್ವಾಸಪೂರ್ವಕ ನಡೆ ನುಡಿ ಮಾನಸಿಕ ಸದೃಢತೆಯನ್ನು ಒದಗಿಸುತ್ತದೆ. ಜೊತೆಗೆ ನಾವು ಮಾಡುವ ಒಳ್ಳೆಯ ಕೆಲಸಗಳು, ಇ?ದ ಜವಾಬ್ದಾರಿಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇತ್ತೀಚೆಗೆ ನಿಧನರಾದ ಪುನೀತ್ ರಾಜ್‌ಕುಮಾರ್ ಅವರಿಗೆ ಗಂಗೊಳ್ಳಿಯ ಮೇಲ್‌ಗಂಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ವಿದ್ಯಾರ್ಥಿಗಳು ನೃತ್ಯರೂಪಕದ ಮೂಲಕ ಪುಷ್ಪಾಂಜಲಿ, ದೀಪಾಂಜಲಿ ಅರ್ಪಿಸಿದರು. ನೃತ್ಯಪಟು ನಟರಾಜ್ ನಿರ್ದೇಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಬೊಂಬೆ ಹೇಳುತೈತೆ ಗಾಯನಕ್ಕೆ ನೃತ್ಯದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ನೃತ್ಯದ ಕೊನೆಯಲ್ಲಿ ಬಾವಪರವಶರಾದ ಮಕ್ಕಳು ಪುನೀತ್ ಭಾವಚಿತ್ರಕ್ಕೆ ಮುತ್ತನ್ನು ನೀಡಿ ಅಗಲಿದ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕ ರಮೇಶ ಮಹಾಲೆ, ಸಹಶಿಕ್ಷಕಿ ಲಲಿತಾ, ಲೈಟ್‌ಹೌಸ್ ಹಿಲ್ ಫ್ರೆಂಡ್ಸ್ ಸದಸ್ಯರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶ್ರೀ ಸಿದ್ಧಿವಿನಾಯಕ ಚೆಸ್ ಆಕಾಡೆಮಿ ಬೈಂದೂರು ಇವರ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆ ಇಲ್ಲಿನ ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ನಡೆಯಿತು. ಬೈಂದೂರು ತಾಲೂಕಿನ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಆನಂದ ಮದ್ದೋಡಿ ಸಭಾಧ್ಯಕ್ಷತೆಯನ್ನು ವಹಿಸಿ, ಚೆಸ್ ಆಟ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅತ್ಯಂತ ಸಹಕಾರಿ ಎಂದರು. ಈ ಸಂದರ್ಭ ಶಿಕ್ಷಕರಾದ ರಾಘವೇಂದ್ರ, ದೈಹಿಕ ಶಿಕ್ಷಕರಾದ ಗುರುರಾಜ ಎಸ್, ಚಂದ್ರ ದೇವಾಡಿಗ ಉಪಸ್ಥಿತರಿದ್ದರು. ಚೆಸ್ ಆಕಾಡೆಮಿಯ ಅಧ್ಯಕ್ಷರಾದ ಬಾಬು ಜೆ. ಪೂಜಾರಿ ಕಾರ್ಯಕ್ರಮವನ್ನು ನಿರ್ವಸಿದರು. ಚೆಸ್ ಸ್ಪರ್ಧೆಯಲ್ಲಿ ಹನ್ನೆರಡು ವರ್ಷದ ವಿಭಾಗದ ಹುಡುಗಿಯರಲ್ಲಿ ಪ್ರಥಮ, ಮಧು ಮಯೂರಿ ಗ್ರೀನ್ ವ್ಯಾಲಿ ಆಂಗ್ಲ ಶಾಲೆ, ದ್ವಿತೀಯ, ಜೈನಿಕ್ ಸೈಂಟ್ ಥೋಮಸ್ ಸ್ಕೂಲ್ ಬೈಂದೂರು, ತ್ರತಿಯ, ಸಾನಿಕ ಮಾದರಿ ಸ್ಕೂಲ್ ಬೈಂದೂರು, ಹುಡುಗರ ವಿಭಾಗದಲ್ಲಿ ಆದ್ರಿತ್. ಸಂದೀಪನ್ ಆಂಗ್ಲ ಶಾಲೆ ನಾಗೂರು, ಶ್ರೀಚರಣ್ . ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ನಾಗೂರು, ವಿಖ್ಯಾತ. ಸೈಂಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಹಾಗೂ ಪ್ರೇರಣೆ ನೀಡುವ ಉದ್ದೇಶದಿಂದ ನಮ್ಮ ನಾಡ ಒಕ್ಕೂಟ ಬೈಂದೂರು ತಾಲೂಕು ಘಟಕ ಮತ್ತು ನಾಗೂರು ಜಾಮಿಯ ಮಸೀದಿಯ ಜಂಟಿ ಆಶ್ರಯದಲ್ಲಿ ತಾಲೂಕು ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿ ಅವರ ಅಧ್ಯಕ್ಷತೆಯಲ್ಲಿ ಮೈನಾರಿಟಿ ಎನ್.ಎಸ್.ಪಿ ಹಾಗೂ ವಿದ್ಯಾಸಿರಿ ವಿದ್ಯಾರ್ಥಿವೇತನ ಶಿಬಿರ ನಾಗೂರು ಜಾಮಿಯ ಮಸೀದಿಯ ಆವರಣದಲ್ಲಿ ನಡೆಯಿತು. ನಾಗೂರು ಜಾಮಿಯ ಮಸೀದಿಯ ಖತೀಬರು ಮೌಲಾನ ರಿಝ್ವಾನ್ ಸಾಹೇಬ್ ಅವರ ಕಿರಾತ್ ಮೂಲಕ ಸಮಾರಂಭವನ್ನು ಪ್ರಾರಂಭಿಸಲಾಯಿತು. ಸ್ವಯಂಸೇವಕರಾಗಿ ವಿದ್ಯಾರ್ಥಿಗಳಾದ ಝೀಶಾನ್ ಹಳಗೇರಿ, ಅಲ್ಫಾಝ್ ಹಳಗೇರಿ ಸ್ಕಾಲರ್ಶಿಪ್ ಅರ್ಜಿಯನ್ನು ಸಲ್ಲಿಸಲು ಸಹಕಾರ ನೀಡಿದರು. ಈ ಸಂದರ್ಭ ಬೈಂದೂರು ಘಟಕದ ಸಲಹೆಗಾರ ಉಸ್ಮಾನ್ ಜಾಫರ್ ಸಾಹಬ್, ಅಬ್ದುಲ್ ಮುನಾಫ್ ಸಾಹಬ್, ಸಮಾಜ ಸೇವಕ ಅಶ್ರಫ್ ನಾಗೂರು, ಅಮೀರ್ ಹುಸೈನ್ ಸಾಹಬ್, ಮಸೀದಿಯ ಮುಅಝ್ಝಿನ್ ಸಲೀಮ್ ಸಾಹಬ್, ಇರ್ಫಾನ್ ಸಾಹಬ್, ಮಸೀದಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರನ್ನು ಅಭಿನಂದಿಸಲಾಯಿತು. ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಜಮಾತ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ವಾಗ್ಜ್ಯೋತಿ ಬಳಗ ಬೈಂದೂರು, ಲಾವಣ್ಯ ರಿ. ಬೈಂದೂರು, ಜೇಸಿಐ ಬೈಂದೂರು ಸಿಟಿ, ಬಿಜೆಪಿ ಮಹಿಳಾ ಮೋರ್ಚಾ ಬೈಂದೂರು, ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಅಂಪಾರು- ಮೂಡುಬಗೆ ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ಶಾಲೆಯಲ್ಲಿ ಮಕ್ಕಳ ಹಬ್ಬ 2021 ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಯೂನಿಯನ್ ಬ್ಯಾಂಕ್ ಇಂಡಿಯಾ ಕೊಲ್ಲೂರು ಶಾಖೆಯ ಪ್ರಬಂಧಕ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಾವಣ್ಯ ರಿ. ಬೈಂದೂರು ಇದರ ಅಧ್ಯಕ್ಷ ಹರೆಗೋಡು ಉದಯ್ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹೋಟೆಲ್ ಉಡುಪಿ ಸವಿರುಚಿ ಮಾಲೀಕ ವಾಸುದೇವ ದೇವಾಡಿಗ, ಜೇಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಅಂಪಾರು ಜಿ.ಪಂ ಮಾಜಿ ಸದಸ್ಯೆ ಜ್ಯೋತಿ ಅಚ್ಯುತ್, ರಾಜ್ಯ ಯೋಜನಾ ಆಯೋಗ ಅಧಿಕಾರೇತರ ಸದಸ್ಯೆ ಪ್ರೀಯದರ್ಶಿನಿ ಬೆಸ್ಕೂರು, ಜೇಸಿಐ ಬೈಂದೂರು ಸಿಟಿ ಅಧ್ಯಕ್ಷ ಪಿ. ಶ್ರೀಧರ್ ಆಚಾರ್ಯ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಾಯಿನಾಥ್ ಶೇಟ್ ಕುಂದಾಪುರ, ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಂದಾಪುರದ ಸತೀಶ್ ಖಾರ್ವಿ 66 ಕೆಜಿ ಭಾಗದಲ್ಲಿ ಒಟ್ಟು 570 ಕೆಜಿ ಭಾರ ಎತ್ತಿ ಕಂಚಿನ ಪದಕ ಪಡೆದಿದ್ದಾರೆ. ಅವರು ಕುಂದಾಪುರದ ನ್ಯೂ ಹಕ್ಯುಲೆಸ್ ಜಿಮ್‌ನ ವ್ಯವಸ್ಥಾಪಕರು ಹಾಗೂ ಖಾರ್ವಿ ಕೇರಿ ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿದ್ದಾರೆ. ನ.16ರಂದು ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಕರ್ನಾಟಕದ ಪ್ರತಿನಿಧಿಸಲಿದ್ದಾರೆ.

Read More