Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ರೋಟರಿ ಜಿಲ್ಲೆ 31 82ರ ಜಿಲ್ಲಾ ಗವರ್ನರ್ ರೊಟೇರಿಯನ್ ಡಾ. ಜಯಗೌರಿ ಹಾದಿಗಲ್ ರವರ ಮಹತ್ವಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ ಮಹಿಳಾ ಸಬಲೀಕರಣದ ಭಾಗವಾಗಿ ಸಮಾಜದ ಆರ್ಥಿಕವಾಗಿ ಹಿಂದುಳಿದ ಆಯ್ದ ಮಹಿಳೆಯರಿಗೆ ಸ್ವ ಉದ್ಯೋಗ ಮಾಡುವಲ್ಲಿ ತರಬೇತುಗೊಳಿಸಲು ಆಯೋಜಿತವಾದ ಮೂರು ತಿಂಗಳ ಕಾಲಾವಧಿಯ ಉಚಿತ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ ಗಂಗೊಳ್ಳಿಯಲ್ಲಿ ನೆರವೇರಿತು. ವಲಯ ಒಂದರ ಅಸಿಸ್ಟೆಂಟ್ ಗವರ್ನರ್ ಡಾ. ಉಮೇಶ್ ಪುತ್ರನ್ ಶಿಬಿರವನ್ನು ಉದ್ಘಾಟಿಸಿದರು. ರೋಟರಿ ಕ್ಲಬ್ ಅಧ್ಯಕ್ಷೆ ಸುಗುಣ ಆರ್ ಕೆ ಅಧ್ಯಕ್ಷತೆ ವಹಿಸಿದ್ದರು. ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ಮನ್ ಉಮೇಶ್ ಎಲ್ ಮೇಸ್ತ ಮತ್ತು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ರತ್ನಾಕರ ಖಾರ್ವಿ ಶುಭ ಹಾರೈಸಿದರು. ರೋಟರಿ ಕ್ಲಬ್’ನ ಸದಸ್ಯರು ಮತ್ತು ಎಲ್ಲಾ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕಾರ್ಯದರ್ಶಿ ಚಂದ್ರಕಲಾ ತಾಂಡೇಲ ಕಾರ್ಯಕ್ರಮವನ್ನು ನಿರ್ವಹಿಸಿದರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ 73ನೇ ಸರಣಿ ಕಾರ್ಯಕ್ರಮ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಸಾಂಗವಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ, ಯಕ್ಷಗಾನ ಕಲಾವಿದರಾದ ಸುಜಯೇಂದ್ರ ಹಂದೆಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಮೇರಿಕಾದಲ್ಲಿ ಇಂಜಿನಿಯರ್ ಆಗಿರುವ ನಾಗರಾಜ ಪಾದೂರು, ಯಕ್ಷಗಾನ ತಾಳಮದ್ದಲೆ ಪ್ರಾಯೋಜಕರು ಹಾಗೂ ತೆಕ್ಕಟ್ಟೆಯ ಗಣೇಶ್ ಕ್ಲಾತ್ ಸ್ಟೋರ‍್ಸ್ ಮಾಲಕರಾದ ಅನಂತ ನಾಯಕ್, ಪಾವನಾ ಐತಾಳ್ ಹಾಗೂ ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ರವರು ಉಪಸ್ಥಿತರಿದ್ದರು. ಅಕಾಡೆಮಿಯ ವತಿಯಿಂದ ಅನಂತ ನಾಯಕ್ ಹಾಗೂ ಪಾವನಾ ಐತಾಳ್ ರವರನ್ನು ಸನ್ಮಾನಿಸಲಾಯಿತು. ಪಾವನಾ ಐತಾಳ್ ರ ಭಾಗವತಿಕೆ ಹಾಗೂ ನಿರ್ದೇಶನದಲ್ಲಿ ಯಕ್ಷಗಾನ ಕಲಾ ರಂಗ, ನೀರಸಾಲೆ, ಕೋಟೇಶ್ವರ ಇದರ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಲೆ ಜಾಂಬವತಿ ಕಲ್ಯಾಣ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ರವರು ಕಾರ್ಯಕ್ರಮ ನಿರೂಪಿಸಿದರು. ಉದಯ ಭಂಡಾರ್‌ಕಾರ್ ಹಟ್ಟಿಯಂಗಡಿ ಇವರು ವಂದನಾರ್ಪಣೆಗೈದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸಿಎ ಸಿಎಸ್ ಪ್ರೊಫೆಷನಲ್ ಕೋರ್ಸುಗಳ ಹೆಸರಾಂತ ತರಬೇತಿ ಸಂಸ್ಥೆ ಶಿಕ್ಷಪ್ರಭ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ (ಸ್ಪೇಸ್) ಸಂಸ್ಥೆಯ ವಿದ್ಯಾರ್ಥಿಗಳು ಮೇ 2022ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಇಂಟರ್ಮೀಡಿಯಟ್ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದುವುದರ ಮೂಲಕ ಉತ್ತಮ ಸಾಧನೆಗೈದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕಿರಣ್ ಕಾಮತ್ (273), ಸುಪ್ರೀತಾ (246), ಜಸ್ವಿಟಾ ಡಿಸೋಜಾ (235), ಅಭಿಷೇಕ್ ಶೆಟ್ಟಿ (219), ಮನೋಜ್ ಶೆಟ್ಟಿ (209), ಅಶ್ವಿನ್ ಸಿ ಶೆಟ್ಟಿ (205), ಸ್ನೇಹ ದೇವಾಡಿಗ (203), ಬಿ ಪ್ರತಿಮಾ (200), ಮಂದಾರ (200), ಶಮಂತ್ ಕೊಠಾರಿ (200) ಅಂಕಗಳಿಸುವುದರೊಂದಿಗೆ ಇಂಟರ್ಮಿಡಿಯೆಟ್ ಪ್ರಥಮ ಗ್ರೂಪ್ ಮೊದಲ ಪ್ರಯತ್ನದಲ್ಲೇ ಪೂರ್ಣಗೊಳಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಅಂಕಿತ ವಿ ಶೆಟ್ಟಿ(200), ಸಿಂಚನ ಶೆಟ್ಟಿ (200) ಸಿಎ ಇಂಟರ್ಮೀಡಿಯಟ್‌ನ ದ್ವಿತೀಯ ಗ್ರೂಪ್ ಉತ್ತೀರ್ಣ ಹೊಂದುವುದರ ಮೂಲಕ ಸಿಎ ಅಂತಿಮ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಭವಿ ಬೋಧಕ…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಬೈಂದೂರು: ಗದ್ದೆ ಕೆಲಸಕ್ಕೆಂದು ತೆರಳಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ತಾಲೂಕಿನ ಕಾಲ್ತೋಡು ಗ್ರಾಮದ ಕೂರ್ಸಿ ಎಂಬಲ್ಲಿ ನಡೆದಿದೆ. ಕೂರ್ಸಿಯ ಕಾರ್ತಿಕ್ ಆಚಾರ್ (26) ಮೃತ ಯುವಕ. ಬುಧವಾರ ಮಧ್ಯಾಹ್ನ ಗದ್ದೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಯುವಕ ಹೊರಟಿದ್ದು ವಾಪಾಸ್ ಮನೆಗೆ ಬಾರದೇ ಇದ್ದಿದ್ದರಿಂದ ಸಹೋದರರು ಗದ್ದೆ, ತೋಟದ ಬಳಿ ಹೋಗಿ ಹುಡುಕಾಡಿದ್ದಾರೆ. ಈ ವೇಳೆ ಗದ್ದೆಯ ಬಳಿ ಇರುವ ಕೆರೆಯಲ್ಲಿ ಕಾರ್ತಿಕ್ ಅವರ ಚಪ್ಪಲಿ ನೀರಿನಲ್ಲಿ ತೇಲುತ್ತಿದ್ದುದ್ದನ್ನು ನೋಡಿ ಅನುಮಾನಗೊಂಡು ಅಗ್ನಿಶಾಮಕ ದಳದವರಿಗೆ ತಿಳಿಸಿದ್ದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಕೆರೆಯಲ್ಲಿ ಹುಡುಕಾಡಿದಾಗ ಕಾರ್ತಿಕನ ದೇಹ ಕೆರೆಯಲ್ಲಿ ಸಂಜೆ ವೇಳೆಗೆ ದೊರಕಿದೆ. ಕಾರ್ತಿಕ್ ಮೃತ ದೇಹವನ್ನು ನೀರಿನಿಂದ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು. ಕೃಷಿ ಕೆಲಸದ ಬಗ್ಗೆ ಗದ್ದೆ ಕೆಲಸಕ್ಕೆ ಹೋದ ಕಾರ್ತಿಕ್ ಗದ್ದೆಯ ಬಳಿ ಇರುವ ಕೆರೆಯ ದಡದಲ್ಲಿರುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗಲೋ ಅಥವಾ ಬರುತ್ತಿರುವಾಗಲೋ ಆಕಸ್ಮಿಕವಾಗಿ ಕಾಲು ಜಾರಿ, ಕೆರೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಚಲಿಸುತ್ತಿದ್ದ ರಿಕ್ಷಾದ ಮೇಲೆ ಇಲೆಕ್ಟ್ರಿಕ್ ಕಂಬ ಮುರಿದು ಬಿದ್ದು ರಿಕ್ಷಾ ಚಾಲಕ ಗಾಯಗೊಂಡ ಘಟನೆ ತಾಲೂಕಿನ ಕಳವಾಡಿಯಲ್ಲಿ ನಡೆದಿದೆ. ಶಿರೂರು ಮೈದಿನಪುರದ ಹೊಸಮನೆ ನಿವಾಸಿ ಸದಾಶಿವ (45) ಗಾಯಗೊಂಡ ಚಾಲಕ. ಬೈಂದೂರು ಕೊಲ್ಲೂರು ರಾ.ಹೆ- 766ಸಿ‌ ಕಳವಾಡಿ ಎಂಬಲ್ಲಿ ತೆಂಗಿನ ಮರವೊಂದು ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬವೂ ಮುರಿದು ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದಿದೆ. ಆಟೋ‌ ರಿಕ್ಷಾ ಶಿರೂರಿನಿಂದ ಪ್ರಯಾಣಿಕರನ್ನು ಪಿಕ್‌ಅಪ್ ಮಾಡುವ ಸಲುವಾಗಿ ತಗ್ಗರ್ಸೆಗೆ ತೆರಳುತ್ತಿತ್ತು ಹಾಗಾಗಿ ಚಾಲಕ ಮಾತ್ರವೇ ಇದ್ದ ಎನ್ನಲಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕನ ಬೆನ್ನು ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹೊನ್ನಾವರದ ಆಸ್ಪತ್ರೆಯಿಂದ ಉಡುಪಿಯ ಆಸ್ಪತ್ರೆಗೆ ತೆರಳುತ್ತಿದ್ದ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಭೀಕರ ಘಟನೆ ತಾಲೂಕಿನ ಶಿರೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿದೆ. ಘಟನೆಯಲ್ಲಿ ಹೊನ್ನಾವರದ ಹಾಡಗೇರಿಯ ನಿವಾಸಿಗಳಾದ ಹೃದಯ ರೋಗಿಯಾದ ಗಜಾನನ ಗಣಪತಿ ನಾಯ್ಕ್ ಹಾಗೂ ಅವರ ಸಂಬಂದಿಗಳಾದ ಮಂಜುನಾಥ ನಾಯ್ಕ್, ಲೋಕೇಶ್ ನಾಯ್ಕ್ ಜೋತಿ ನಾಯ್ಕ್, ಮೃತಪಟ್ಟಿದ್ದಾರೆ, ಅಂಬುಲೆನ್ಸ್ ಒಳಗಿದ್ದ ಗಣೇಶ್ ನಾಯ್ಕ್, ಗೀತಾ ಗಜಾನನ ನಾಯ್ಕ್, ಶಶಾಂಕ್ ನಾಯ್ಕ, ಅಂಬುಲೆನ್ಸ್ ಚಾಲಕ ರೋಷನ್ ಹಾಗೂ ಟೋಲ್ ಸಿಬ್ಬಂದಿ ಶಂಬಾಜಿ ಘೋರ್ಪಡೆರವರು ಗಾಯಗೊಂಡಿದ್ದು ಹೆಚ್ವಿನ ಚಿಕಿತ್ಸೆ ಬಗ್ಗೆ ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಾಸ್ಟ್ ಟ್ರ್ಯಾಕಿನಲ್ಲಿ ಟೋಲ್ ಗೇಟ್ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಎದ್ದುಕಾಣುತ್ತಿದ್ದು, ಎರಡು ಬದಿಗಳಲ್ಲಿ ಬ್ಯಾರಿಕೇಟ್ ಇಟ್ಟಿರುವುದಲ್ಲದೇ ಅಲ್ಲಿಯೇ ಅದೇ ಮಾರ್ಗದಲ್ಲಿ ದನವೊಂದು ಮಲಗಿಕೊಂಡಿತ್ತು. ಅಂಬುಲೆನ್ಸ್ ಹತ್ತಿರ ಬಂದ ಬಳಿಕ ಅಲ್ಲಿನ ಸಿಬ್ಬಂದಿ ಬ್ಯಾರಿಕೇಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಉಡುಪಿ ಆಸ್ಪತ್ರೆಗೆ ಹೋಗುತ್ತಿದ್ದ ಅಂಬುಲೆನ್ಸ್, ಟೋಲ್ ದಾರಿಯಲ್ಲಿ ಮಲಗಿದ್ದ ದನವನ್ನು ತಪ್ಪಿದಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಸಂಗ್ರಹಣಾ ಕೌಂಟರ್’ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಭೀಕರ ಘಟನೆ ತಾಲೂಕಿನ ಶಿರೂರು ಟೋಲ್ ಪ್ಲಾಜಾದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಹೊನ್ನಾವರದ ಹಾಡಗೇರಿಯ ನಿವಾಸಿಗಳಾದ ಹೃದಯ ರೋಗಿಯಾದ ಗಜಾನನ ಗಣಪತಿ ನಾಯ್ಕ್ ಹಾಗೂ ಅವರ ಸಂಬಂದಿಗಳಾದ ಮಂಜುನಾಥ ನಾಯ್ಕ್, ಲೋಕೇಶ್ ನಾಯ್ಕ್ ಜೋತಿ ನಾಯ್ಕ್, ಮೃತಪಟ್ಟಿದ್ದಾರೆ, ಅಂಬುಲೆನ್ಸ್ ಒಳಗಿದ್ದ ಗಣೇಶ್ ನಾಯ್ಕ್, ಗೀತಾ ಗಜಾನನ ನಾಯ್ಕ್, ಶಶಾಂಕ್ ನಾಯ್ಕ, ಅಂಬುಲೆನ್ಸ್ ಚಾಲಕ ರೋಷನ್ ಹಾಗೂ ಟೋಲ್ ಸಿಬ್ಬಂದಿ ಶಂಬಾಜಿ ಘೋರ್ಪಡೆರವರು ಗಾಯಗೊಂಡಿದ್ದು ಹೆಚ್ವಿನ ಚಿಕಿತ್ಸೆ ಬಗ್ಗೆ ಉಡುಪಿ ಮತ್ತು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. Update about this news► ಶಿರೂರು ಟೋಲ್ ಪ್ಲಾಜಾದಲ್ಲಿ ಭೀಕರ ಅಂಬುಲೆನ್ಸ್ ಅಪಘಾತ. ನಾಲ್ವರ ದುರ್ಮರಣ, ನಾಲ್ವರಿಗೆ ಗಾಯ -…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು,ಜು.20: ಶಾಲೆಗೆ ಹೊರಟಿದ್ದ ಬಾಲಕಿ ಶಾಲಾ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟು ದಾರುಣ ಘಟನೆ ಬಿಜೂರು ಗ್ರಾಮದ ಗಂಟಿಹೊಳೆ ಎಂಬಲ್ಲಿ‌ ನಡೆದಿದೆ. ಗಂಟಿಹೊಳೆ ಕೊಚ್ಲುಗದ್ದೆಯ ಕರುಣಾಕರ ಪೂಜಾರಿ ಎಂಬುವವರ ಪುತ್ರಿ ಸಮನ್ವಿ (7 ವರ್ಷ) ಮೃತ ದುರ್ದೈವಿ. ಉಪ್ಪುಂದ ಖಾಸಗಿ ಶಾಲೆಯೊಂದರಲ್ಲಿ ಎರಡನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಸಮನ್ವಿ, ಬುಧವಾರ ಬೆಳಿಗ್ಗೆ ಎಂದಿನಂತೆ ಶಾಲೆಗೆ ತೆರಳಲು ಸಿದ್ಧಳಾಗಿ ತಾಯಿಯೊಂದಿಗೆ ಶಾಲಾ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಕೂಡಲೇ ರಿಕ್ಷಾದಲ್ಲಿ ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಬಾಲಕಿ ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದರು. ಬಾಲಕಿ ಚಾಕೊಲೇಟ್ ಜೊತೆಗೆ ಅದರ ಕವರ್ ನುಂಗಿರುವುದು ಘಟನೆಗೆ ಕಾರಣ ಎನ್ನಲಾಗುತ್ತಿದ್ದು ಮರಣೋತ್ತರ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ನಮ್ಮೊಳಗಿನ ಶಕ್ತಿಯನ್ನು ಅರಿಯುವ ತನಕ ಸಾಧನೆ ಸಾಧ್ಯವಾಗುವುದಿಲ್ಲ. ನಮ್ಮ ಶಕ್ತಿ ಅರಿತರೆ ನಮ್ಮ ಗುರಿಯನ್ನು ತಲುಪಬಹುದು ಎಂದು ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಸಚಿತ ನಂದಗೋಪಾಲ್ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಐಚ್ಛಿಕ ಭಾಷೆ ಇಂಗ್ಲಿಷ್, ಪತ್ರಿಕೋದ್ಯಮ, ಮನಶಾಸ್ತ್ರ ವಿಭಾಗಗಳು ಸೇರಿ ಆಯೋಜಿಸಿದ್ದ ‘ಸ್ವಯಂ ಪ್ರತಿಫಲನ’ ಎಂಬ ಕಾರ್ಯಗಾರದಲ್ಲಿ ಮಾತನಾಡಿ ಜೀವನದಲ್ಲಿ ಅನೇಕ ಬಾರಿ ಸೋಲು ಗೆಲುವು ಎಲ್ಲವನ್ನು ಎದುರಿಸುತ್ತೇವೆ. ಆದರೆ ಹೇಗೆ ನಿಭಾಯಿಸಬೇಕು ಎಂದು ಮೊದಲು ಅರಿತಿರಬೇಕು ಇಲ್ಲವಾದಲ್ಲಿ ಬದುಕನ್ನು ಗೆಲುವಿನ ಹಂತಕ್ಕೆ ಸಾಗಿಸುವುದು ಕಷ್ಟವಾಗಲಿದೆ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಮೀನಾಕ್ಷಿ ಎನ್.ಎಸ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಸುಮಲತಾ ನಾಯ್ಕ್ , ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ರಾಜೇಶ್ವರಿ ಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿ ಭಾವನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಯಜುಷಾ ಕಾರ್ಯಕ್ರಮ ನಿರ್ವಹಿಸಿ, ಫಾತಿಮಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಚೇತನ ಫೌಂಡೇಶನ್ ಕರ್ನಾಟಕ ಇವರ ಸಹಯೋಗದಲ್ಲಿ ನಡೆದ ಧಾರವಾಡ ನುಡಿಸಡಗರ ಕಾರ್ಯಕ್ರಮದಲ್ಲಿ ಕವಿ, ಲೇಖಕ ನಾಯ್ಕನಕಟ್ಟೆ ಕೆ. ಪುಂಡಲೀಕ ನಾಯಕ್ (ಎಡಕ್ಕೆ) ಇವರಿಗೆ ಕರ್ನಾಟಕ ವಿವಿಯ ಕುಲಪತಿ ಪ್ರೋ. ಕೆ. ಬಿ. ಗುಡಸಿ ಅವರು ಬೇಂದ್ರೆ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದ ವೇದಿಕೆಯಲ್ಲಿ ಪ್ರೋ. ನಿಜಲಿಂಗಪ್ಪ ಮಟ್ಟಿಹಾಳ, ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆ ಕ.ವಿ.ವಿ ಮುಖ್ಯಸ್ಥ ಡಾ. ಅರ್. ಸಿ. ಹಿರೇಮಠ, ಗದಗ. ಡಾ.ವಿ.ಬಿ. ಪ್ರತಿಷ್ಠಾನದ ಅಧ್ಯಕ್ಷ ಡಾ. ವಿ. ವಿ ಹಿರೇಮಠ, ಹಿರಿಯ ಸಾಹಿತಿ ಸುರೇಶ ಕೋರಕೊಪ್ಪ ಬೆಳಗಾವಿ, ಧಾರವಾಡದ ಕನಕ ಅಧ್ಯಯನ ಪೀಠದ ಸಂಯೋಜಕರು ಡಾ. ಹನುಮ ಗೌಡ, ಚೇತನ ಫೌಂಡೇಶನ್ ಅಧ್ಯಕ್ಷ ಹಾಗೂ ಧಾರವಾಡ ನುಡಿಸಡಗರ ಸಂಯೋಜಕ ಚಂದ್ರಶೇಖರ ಮಾಡಲಗೇರಿ, ಧಾರವಾಡ ನುಡಿಸಡಗರ ಸಂಚಾಲಕ ಪೀರಸಾಬ ನದಾಫ್ ಇದ್ದರು .

Read More