Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜುಲೈ 2022ನೇ ಅಧಿವೇಶನಕ್ಕಾಗಿ ಡೆಹರಾಡೂನಲ್ಲಿರುವ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ದಿ. ಡಿ. 18ರಂದು ನಡೆಸಲಾಗುವುದು. ಅಭ್ಯರ್ಥಿಗಳು ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿ. 1-7-2-2022ರಂತೆ 11 1/2 ವರ್ಷದಿಂದ 13 ವರ್ಷದೊಳಗಿರುವ ( ಅಂದರೆ ದಿ. 02-07-2009 ರಿಂದ 1-1-2011 ರೊಳಗೆ ಜನಿಸಿರುವ) ಬಾಲಕಿಯರು ಮಾತ್ರ ಸದರಿ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. ಸಾಮಾನ್ಯ ಅಭ್ಯರ್ಥಿಗಳಿಗೆ ರೂ 600 ಮತ್ತು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ರೂ. 555 ಆನ್‌ಲೈನ್ ಪಾವತಿ ಮಾಡುವ ಮೂಲಕ ಪ್ರಾಸ್ಟೆಕ್ಟಸ್ ಕಮ್ ಅರ್ಜಿ ನಮೂನೆ ಮತ್ತು ಹಳೆಯ ಪ್ರಶ್ನೆ ಪತ್ರಿಕೆಗಳ ಕಿರುಪತ್ರಿಕೆಗಳನ್ನು ಸಹ ಪಡೆಯಬಹುದು. ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಗಳನ್ನು ದ್ವಿಪ್ರತಿಯಲ್ಲಿ ನ.15ರೊಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ವಕ್ವಾಡಿ ಕನಕ ನಿವಾಸದಲ್ಲಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಬೀಜಾಡಿ ಗೋಪಾಡಿ ಮಿತ್ರ ಸಂಗಮ ಮತ್ತು ರೋಟರಿ ಸಮುದಾಯ ದಳ ಬೀಜಾಡಿ ಇವರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ಮೇಲಿನ ಆತ್ಮೀಯತೆಯಿಂದ ನನ್ನನ್ನು ಸನ್ಮಾನಿಸಿ ಗೌರವಿಸಿದ್ದಿರಿ. ಗ್ರಾಮಗಳು ಅಭಿವೃದ್ದಿ ಕಾಣಬೇಕಾದರೆ ಸ್ಥಳೀಯ ಸಂಘ ಸಂಸ್ಥೆಗಳ ಕೊಡುಗೆ ಆಪಾರವಾಗಿರಬೇಕು. ಸಮಾಜಮುಖಿಯಾಗಿ ಸೇವೆ ನೀಡಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಸಂಸ್ಥೆ ಇನ್ನಷ್ಟು ಜನಪರ ಕಾರ್ಯಕ್ರಮಗಳ ಮೂಲಕ ಒಳ್ಳೆಯ ಹೆಸರು ಮಾಡಲಿ ಎಂದು ಹೇಳಿದರು. ಈ ಸಂದರ್ಭ ಮಿತ್ರ ಸಂಗಮ ಗೌರವಧ್ಯಕ್ಷ ವಾದಿರಾಜ್ ಹೆಬ್ಬಾರ್ ಫಲಪುಷ್ಟಗಳೊಂದಿಗೆ ಶಾಲು ಹೊದಿಸಿ ಪುಸ್ತಕಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ಅಧ್ಯಕ್ಷ ಚಂದ್ರಶೇಖರ ಬೀಜಾಡಿ, ಕಾರ್ಯದರ್ಶಿ ರಾಜೇಶ್ ಆಚಾರ್, ಬೆಳ್ಳಿ ಹಬ್ಬದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬೈಂದೂರು, ಇಲ್ಲಿ ಪ್ರಸಕ್ತ ಸಾಲಿಗೆ ಕರ್ನಾಟಕ ಸರಕಾರದ ಉದ್ಯೋಗ ಯೋಜನೆಯ ಟಾಟಾ ಟಕ್ನಾಲಜೀಸ್ ಸಹಯೋಗದೊಂದಿಗೆ advanced Manufacturing battery Electric Vehicle (scvt ಸಂಯೋಜನೆ ಹೊಂದಿರುವ) 2 ವರ್ಷ ಅವಧಿಯ ಹೊಸ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಲು ನವೆಂಬರ್ 18 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಭೇತಿ ಸಂಸ್ಥೆ ಬೈಂದೂರು ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನ ಆರೋಗ್ಯ ಕೇಂದ್ರ ಎಪಿಡೀಮೀಯಾಲಜಿ ವಿಭಾಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬೆಂಗಳೂರು ( ನಿಮ್ಹಾನ್ಸ್) ಇವರ ಸಹಯೋಗದೊಂದಿಗೆ ಆರಂಭಿಸಲಾಗಿರುವ ಯುವ ಸ್ಪಂದನ ಕೇಂದ್ರದಲ್ಲಿ ಯುವ ಪರಿವರ್ತಕರಾಗಿ ಕಾರ್ಯ ನಿರ್ವಹಿಸಲಿಚ್ಚಿಸುವ 21 ರಿಂದ 35 ವಯೋಮಿತಿಯೊಳಗಿನ ಯುವಕ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಪದವಿ ತೇರ್ಗಡೆ ಹೊಂದಿದ ಆಸಕ್ತ ಯುವಕ / ಯುವತಿಯರು ತಮ್ಮ ಸ್ವ ವಿವರಗಳೊಂದಿಗೆ ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆ, ಉಡುಪಿ ಇಲ್ಲಿ ಅಕ್ಟೋಬರ್ 15 ರ ಸಂಜೆ 5 ಗಂಟೆಯ ಒಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಲು ಮತ್ತು ಸಂವಹನ ಕಲೆ, ಕೌಶಲ್ಯ ಹೊಂದಿ ಸಮುದಾಯದಲ್ಲಿ ಕೆಲಸ ಮಾಡಲು ಇಚ್ಛೆ ಉಳ್ಳವರಾಗಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬೆಂಗಳೂರು (ನಿಮ್ಹಾನ್ಸ್) ಇಲ್ಲಿ ತರಬೇತಿ ನೀಡಲಾಗುವುದು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಬೈಂದೂರು ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಕಳೆದ ವರ್ಷ ರೂ.177 ಕೋಟಿ ವ್ಯವಹಾರ ನಡೆಸಿ ರೂ 27.6 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.10 ಲಾಭಾಂಶ ಘೋಷಿಸಲಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಸೋಮವಾರ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಂಘವು 19 ವರ್ಷ ಪೂರೈಸಿದೆ. ಐದು ಕಡೆ ಶಾಖೆಗಳನ್ನು ಹೊಂದಿದ್ದು, ಕುಂದಾಪುರ ಶಾಖೆ ಸ್ವಂತ ನಿವೇಶನ ಕಟ್ಟಡ ಹೊಂದಿದೆ. ಬೈಂದೂರಿನ ಪ್ರಧಾನ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿಸಲಾಗಿದೆ. ಆಡಳಿತ ಮಂಡಳಿ, ಸಿಬ್ಬಂದಿ ಸಹಕಾರದಿಂದ ಸೊಸೈಟಿ ಪ್ರಗತಿ ಸಾಧಿಸುತ್ತಿದೆ ಎಂದು ಅವರು ಹೇಳಿದರು. ಉತ್ತಮ ಠೇವಣಿ ಹಾಗೂ ಸಾಲ ವಸೂಲಾತಿ ಮಾಡಿದ ಸಿದ್ಧಾಪುರ ಶಾಖೆಯ ಪ್ರಬಂಧಕಿ ಕವಿತಾ ಪೂಜಾರಿ ಹಾಗೂ ಸಿಬ್ಬಂದಿ ರವೀಂದ್ರ ಪೂಜಾರಿ, ಹಾಲಾಡಿ ಶಾಖೆಯ ಪ್ರಬಂಧಕ ಗೋಪಾಲ ಪೂಜಾರಿ ಹಾಗೂ ಸಿಬ್ಬಂದಿಯನ್ನು ಗುರುತಿಸಲಾಯಿತು. ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನುಕೆರೆ ಗ್ರಾಮದ ಶಾರದಾ ಅಚ್ಯುತ್ ಗಾಣಿಗ ಇವರ ಮನೆಗೆ ತಡ ರಾತ್ರಿ ಬಡಿದ ಭಾರೀ ಸಿಡಿಲಿಗೆ ಮನೆ ಸಂಪೂರ್ಣ ಹಾನಿಯಾಗಿ ಜಖಂಗೊಂಡ ಘಟನೆ ನಡೆದಿದೆ. ಮಧ್ಯರಾತ್ರಿ ಒಂದೇ ಸಮನೆ ಸುರಿದ ಗಾಳಿ ಮಳೆಗೆ ಏಕಾಎಕಿ ಬಡಿದ ಸಿಡಿಲಿನ ಹೊಡೆತಕ್ಕೆ ಮನೆಯ ಗೋಡೆ, ಮೇಲ್ಚಾವಣಿ, ವಿದ್ಯುತ್ ಉಪಕರಣಗಳು ಸೇರಿದಂತೆ ವಿದ್ಯುತ್ ಲೈನ್‌ಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಸುಮಾರು 5 ಲಕ್ಷ ಹೆಚ್ಚು ಹಾನಿ ಎಂದು ಅಂದಾಜಿಸಲಾಗಿದೆ. ಘಟನೆ ವೇಳೆ ಮನೆಯ ಯಜಮಾನತಿ ವಯೋವೃದ್ಧೆ ಶಾರದಾ ಗಾಣಿಗ (80) ನಿದ್ದೆಯ ಮಂಪರಿನಲ್ಲಿದ್ದು ಆಘಾತಕೊಳ್ಳಗಾಗಿದ್ದು ಅದೃಷ್ಟವಶಾತ್ ಕುಟುಂಬ ಸದಸ್ಯರು ಯಾವುದೇ ಪ್ರಾಣಾಪಯವಿಲ್ಲದೇ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಪಾಧ್ಯಕ್ಷ ಸಂಜೀವ ದೇವಾಡಿಗ, ಪಿಡಿಒ ಸುನೀಲ್, ವಿಎ ದೀಪಿಕಾ ಶೆಟ್ಟಿ, ಗಾಣಿಗ ಸಮಾಜದ ಮುಖಂಡರಾದ ನಾಗರಾಜ ಗಾಣಿಗ ಸಾಲಿಗ್ರಾಮ, ಅರುಣ್ ಗಾಣಿಗ ತೆಕ್ಕಟ್ಟೆ ಬೇಟಿ ನೀಡಿ…

Read More

ಕುಂದಾಪ್ರ ಡಾಟ್ ಕಾಂ ಸದ್ದಿ.ಕುಂದಾಪುರ: ಇಂದಿನ ಆಧುನಿಕ ಜಗತ್ತಿನ ಪ್ಯಾಷನ್ ಲೋಕದಲ್ಲಿ ಲಕ್ಷಗಟ್ಟಲೇ ಹಣ ನೀಡಿ ನಾಯಿಗಳನ್ನು ಸಾಕುತ್ತಾರೆ. ಇದರಿಂದ ಶ್ರೀಮಂತಿಕೆ ಎಂಬುಂದನ್ನು ತೋರ್ಪಡಿಸುವುದು ಬಿಟ್ಟರೆ ಬೇರೆ ಯಾವುದೇ ಲಾಭಗಳಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಗೆ ಪ್ರತಿ ಮನೆಗೊಂದು ಗೋವುಗಳನ್ನು ಸಾಕಬೇಕಾಗಿದೆ. ಗೋವು ನಮ್ಮ ಮನೆಯ ದೇವರು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಜಿಲ್ಲಾ ಸಹಸಂಚಾಲಕ ಸುರೇಂದ್ರ ಕೋಟೇಶ್ವರ ಹೇಳಿದರು. ಅವರು, ವಿಶ್ವ ಹಿಂದೂ ಪರಿಷದ್ ಬಜರಂಗದಳ ಕುಂದಾಪುರ ಪ್ರಖಂಡ ಬೀಜಾಡಿ ವಲಯದ ನೇತೃತ್ವದಲ್ಲಿ ಗೋಪಾಡಿ ಶ್ರೀ ಚಿಕ್ಕು ಅಮ್ಮ ದೈವಸ್ಥಾನದ ವಠಾರದಲ್ಲಿ 2ನೇ ವರ್ಷದ ಸಾಮೂಹಿಕ ಗೋಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದರು. ಮುಂಜಾನೆ ಹಾಸಿಗೆಯಿಂದ ಎದ್ದ ಬಳಿಕ ಗೋವಿನ ಮುಖ ಮೊದಲು ನೋಡಿದರೆ ಅದೆಷ್ಟೂ ನಮ್ಮ ಕರ್ಮವನ್ನು ತೊಳೆದ ಫಲಗಳು ನಮಗೆ ಸಿಗುತ್ತದೆ. ಸಾರ್ವಜನಿಕರಲ್ಲಿ ಗೋವುಗಳ ಬಗ್ಗೆ ಜಾಗೃತಿ ಮತ್ತು ಸನಾತನ ಹಿಂದೂ ಸಂಸ್ಕೃತಿಯ ಉಳಿವಿಗಾಗಿ ಇತಂಹ ಸಾಮೂಹಿಕ ಗೋಪೂಜೆಯನ್ನು ದೇಶದ್ಯಾಂತ ವಿಶ್ವ ಹಿಂದೂ ಪರಿಷತ್…

Read More

ಅಮಾವಾಸ್ಯೆ ಸ್ನಾನಕ್ಕಿಳಿದ ಕೋಟಿಲಿಂಗೇಶ್ವರ ದೇವರು ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪುರಾಣ ಪ್ರಸಿದ್ಧ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವರ ಕೊಡಿ ಹಬ್ಬದ ಪ್ರಯುಕ್ತ ದೇವರ ಅಮಾವಾಸ್ಯೆ ಸ್ನಾನದ ಕಾರ್ಯಕ್ರಮ ನಡೆಯಿತು. ದೇವಳದ ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳು ನಡೆಯಿತು. ದೇವಳದ ವಠಾರದಿಂದ ಹೊರಟ ಶ್ರೀ ಕೋಟಿಲಿಂಗೇಶ್ವರ ದೇವರು ದೊಡ್ಡೋಣಿ ರಸ್ತೆಯ ಮೂಲಕ ಬೀಜಾಡಿ ಅಮಾವಾಸ್ಯೆ ಕಡು ಕಡಲ ತೀರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ಸ್ನಾನದ ಧಾರ್ಮಿಕ ಕಾರ್ಯಕ್ರಮಗಳು ಜರುಗಿತು. ದೇವರು ಸಾಗುವ ರಸ್ತೆಯ ಉದ್ದಕ್ಕೂ ಭಕ್ತರು ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ ಹಾಗೂ ರಸ್ತೆಯ ಮೇಲೆ ರಂಗೋಲಿ ಮತ್ತು ಸ್ವಾಗತ ಮಂಟಪಗಳನ್ನು ರಚಿಸಿ ಭಕ್ತಿಯ ಪರಾಕಷ್ಠೆ ಮೆರೆದರು. ಪಂಚವಾದ್ಯಗಳು ಸೇರಿದಂತೆ ದೇವರ ನಾಮಸ್ಮರಣೆಯ ಘೋಷಣೆಗಳು ದೇವರ ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ,ನ.07: ನಮ್ಮ ಹಿರಿಯರ ಆಚರಣೆಗಳಲ್ಲಿ ವೈಜ್ಞಾನಿಕ ಅರ್ಥ ಇರುತ್ತದೆ. ಅದನ್ನೆಲ್ಲ ಅನುಸರಿಸಿದ ಕಾರಣಕ್ಕೆ ಅವರು ಆಯುಷ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಂಡಿದ್ದರು ಎಂದು ಕುಂದಾಪುರದ ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ದೀಪಾವಳಿ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕು. ಆ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಶಿಕ್ಷಣದ ಜೊತೆಗೆ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಎಲ್ಲಾ ಹಬ್ಬದ ಆಚರಣೆಯ ಮಹತ್ವವನ್ನು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನ ಮಾಡುತಿದ್ದೇವೆ ಮುಖ್ಯ ಅತಿಥಿಗಳಾಗಿದ್ದ ಕುಂದಗನ್ನಡದ ಹಾಸ್ಯ ಪ್ರತಿಭಾವಂತ ಚೇತನ್ ಶೆಟ್ಟಿ ನೈಲಾಡಿ ದೀಪಾವಳಿಯ ಬಲೀಂದ್ರ ಕರೆಯುವಿಕೆ ವೈಶಿಷ್ಟ್ಯತೆ, ಹಬ್ಬದ ಕ್ರಮಗಳನ್ನು ಹಾಗೂ ಅದರ ಮಹತ್ವವನ್ನು ರಸವತ್ತಾಗಿ ವಿವರಿಸಿದರು. ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಹಬ್ಬದ ಸಂಭ್ರಮವನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ಉಪನ್ಯಾಸಕಿ ಪ್ರವೀಣಾ ಪೂಜಾರಿ ಸ್ವಾಗತಿಸಿ, ರೇಷ್ಮಾ ಶೆಟ್ಟಿ ವಂದಿಸಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಶಾರ್ಜಾ,ಅ.7: ಅರಬ್ ರಾಷ್ಟ್ರದಲ್ಲಿರುವ ಎಲ್ಲ ಕನ್ನಡಿಗರ ಪರವಾಗಿ, ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಶನಿವಾರ ಸಂಜೆ ಶಾರ್ಜಾ ದ ಮಕಾನಿ ರೆಸ್ಟೋರೆಂಟ್ ಆಯೋಜಿಸಲಾಗಿತ್ತು. ಪುನೀತ್ ಅವರ ಅಭಿಮಾನಿಗಳಾದ ಸದನ್ ದಾಸ್, ಮಧು ಗೌಡರ್ ಹಾಗೂ ವಿಜಯ್ ಗುಜ್ಜರ್ ಇವರ ಮುಂದಾಳ್ವತದಲ್ಲಿ ನಡೆಸಿದ ಈ ಕಾರ್ಯಕ್ರಮದಲ್ಲಿ ಅರಬ್ ರಾಷ್ಟ್ರದಲ್ಲಿ ನೆಲೆಸಿರುವಂತಹ ಅನೇಕ ಕನ್ನಡ ಪ್ರಿಯರು ಹಾಗೂ ಪುನೀತ್ ಅಭಿಮಾನಿಗಳು ಸೇರಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪುನೀತ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಹಾಗೂ ಮೌನಾಚರಣೆ ಮಾಡುವುದರ ಮೂಲಕ ಮನದಾಳದ ಮೂಕವೇದನೆಯನ್ನು ಅಭಿವ್ಯಕ್ತಗೊಳಿಸಿದರು. ನಂತರ ಅಭಿಮಾನಿಗಳು, ಪುನೀತ್ ಅವರ ಗುಣಗಾನ ಮಾಡುವುದರ ಮೂಲಕ, ಅವರು ಮಾಡಿರುವಂತಹ ಒಳ್ಳೆಯ ಕಾರ್ಯಕ್ರಮವನ್ನು ತಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದೆಂದು ಚರ್ಚಿಸಿದರು. ಆದಷ್ಟು ಬೇಗ ಬ್ಲಡ್ ಡೊನೇಷನ್ ಕ್ಯಾಂಪ್ ಮಾಡುವುದರ ಜೊತೆಗೆ, ಮುಖ್ಯವಾಗಿ ದೇಹದ ಅಂಗಾಂಗಗಳನ್ನು ದಾನ ಮಾಡುವುದರ ಬಗ್ಗೆ ಮಹತ್ವದ ಕಾರ್ಯಕ್ರಮಕ್ಕೆ ನಾಂದಿಯನ್ನು ಆಡಿದರು.…

Read More