Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ರೈತರು ಬೆಳೆದ ಭತ್ತಕ್ಕೆ ಕನಿಷ್ಠ ರೂ.2500/ ಖರೀದಿ ಬೆಲೆಯನ್ನು ನ.5ರೊಳಗೆ ಸರಕಾರ ಘೋಷಿಸಬೇಕು. ಘೋಷಿಸದೇ ಇದ್ದಲ್ಲಿ ನ.6ರಂದು ರೈತರು ಪ್ರತಿಭಟನೆ ಕೈಗೊಳ್ಳಾಗುತ್ತದೆ ಎಂದು ಬ್ರಹ್ಮಾವರ ರೈತ ಹೋರಾಟ ಸಮಿತಿ ಎಚ್ಚರಿಸಿದೆ. ಅವರು ಇಲ್ಲಿನ ಮದರ್ ಪ್ಯಾಲೇಸ್‌ನಲ್ಲಿ ನಡೆದ ರೈತ ಹೋರಾಟ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ರೈತ ಹೋರಾಟ ಸಮಿತಿ ಈ ಹಿಂದೆಯೇ ಸರಕಾರವನ್ನು ಮಾದ್ಯಮಗಳ ಮೂಲಕ ಎಚ್ಚರಿಸಿದರೂ ರೈತರ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಕೇರಳದಲ್ಲಿ ಭತ್ತದ ಕ್ವಿಂಟಾಲ್‌ಗೆ ರೂ. 2740೦ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಕೇವಲ ರೂ. 1700 ನೀಡುತ್ತಿದ್ದಾರೆ. ಇಲ್ಲಿ ತಾನು ಬೆಳೆದ ಭತ್ತಕ್ಕೆ ರೈತ ಬೆಲೆ ನಿಗದಿಪಡಿಸುತ್ತಿಲ್ಲ. ಬದಲಾಗಿ ರೈಸ್‌ಮಿಲ್ ಮಾಲಕರೇ ಬೆಲೆ ನಿಗದಿಪಡಿಸುತ್ತಿದ್ದಾರೆ. ರೈತ ತಾನು ಬೆಳೆದ ಭತ್ತವನ್ನು ಕೆಜಿಯೊಂದಕ್ಕೆ 17ರೂಗೆ ನೀಡಿ ಅಕ್ಕಿಯನ್ನು ರೂ.32ಕ್ಕೆ ಖರೀದಿಸುತ್ತಿದ್ದಾನೆ. ಎಲ್ಲೆಡೆ ಕಟಾವು ಮುಗಿಯುತ್ತಾ ಬಂದಿದೆ. ರೈತ ರೈಸ್‌ಮಿಲ್ಲಿಗೆ ಭತ್ತ ತಲುಪಿಸುವ ಮೊದಲೇ ಸರಕಾರ ಬೆಲೆ ನಿಗದಿಪಡಿಸಬೇಕಿತ್ತು. ಬೆಲೆ ನಿಗದಿ ಮಾಡದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದೀಪಾವಳಿ ಅಂಗವಾಗಿ ಆಯುಧ ಪೂಜೆ ನಡೆಯಿತು. ಈ ಸಂದರ್ಭ ಪೊಲೀಸ್ ಉಪನಿರೀಕ್ಷಕ ಸುಬ್ಬಣ್ಣ ಬಿ. ಹಾಗೂ ಸಿಬ್ಬಂದಿ ವರ್ಗ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮದಿಂದ ಪಾಲ್ಗೊಂಡಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರೋಟರಾಕ್ಟ್ ಡಿಸ್ಟ್ರಿಕ್ಟ್ ಕೌನ್ಸಿಲ್ ಮತ್ತು ರೋಟರಾಕ್ಟ್ ಕ್ಲಬ್ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ಭುವನೇಂದ್ರ ಕಾಲೇಜಿನ ದಾಮೋದರ ಕಿಣಿ ಮೆಮೋರಿಯಲ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ರೋಟರಾಕ್ಟ್ ಇಂಡೋರ್ ಸ್ಫೋರ್ಟ್ಸ್ ಮೀಟ್ ನಲ್ಲಿ ಭಾಗವಹಿಸಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಾಕ್ಟ್ ಕ್ಲಬ್ ರನ್ನರ್ ಅಪ್ ಸ್ಥಾನವನ್ನು ಪಡೆಯಿತು. ಅರ್ಲಿ ಬರ್ಡ್, ಅತಿ ಹೆಚ್ಚು ಸದಸ್ಯರ ಭಾಗವಹಿಸುವಿಕೆ ಸೇರಿದಂತೆ ಶ್ರೀನಿಧಿ ಮತ್ತು ವೈಷ್ಣವಿ ಹುಡುಗಿಯರ ಶಟಲ್ ಬ್ಯಾಡ್ಮಿಂಟನ್ನಲ್ಲಿ, ಪ್ರಥಮ ಸ್ಥಾನ ಪಡೆದರೆ, ಕೇರಂ ನಲ್ಲಿ ಶ್ರೇಯ ಗಾಣಿಗ ಮತ್ತು ರಂಜಿತ ಬಿಲ್ಲವ, ಚೆಸ್ ನಲ್ಲಿ ಅಗ್ನಿಶ್, ಕೇರಂ ಡಬಲ್ಸ್ ನಲ್ಲಿ ಅಗ್ನಿಶ್ ಮತ್ತು ಮನಿಶ್ ರನ್ನರ್ ಅಪ್ ಸ್ಥಾನವನ್ನು ಪಡೆದರು. ಒಟ್ಟಾರೆ ಕ್ರೀಡಾ ನಿರ್ವಹಣೆಯಲ್ಲಿ ರೋಟರಾಕ್ಟ್ ಗಂಗೊಳ್ಳಿ ತಂಡವು ರನ್ನರ್-ಅಪ್ ಸ್ಥಾನವನ್ನು ಪಡೆಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ದೀಪಾವಳಿಯ ಅಂಗವಾಗಿ ಬೈಂದೂರು ಪೊಲೀಸ್ ಠಾಣೆ ಹಾಗೂ ವೃತ್ತ ನಿರೀಕ್ಷಕರ ಲಕ್ಷ್ಮೀ ಪೂಜೆ ಹಾಗೂ ಆಯುಧ ಪೂಜೆ ಕಾರ್ಯಕ್ರಮ ಗುರುವಾರ ಬೆಳಿಗ್ಗೆ ನಡೆಯಿತು. ಬೆಳಿಗ್ಗೆ ಠಾಣೆ ಎದುರಿನ ನಾಗಬನದಲ್ಲಿ ಪೂಜೆ, ಬಳಿಕ ಠಾಣೆ ಹಾಗೂ ವೃತ್ತ ನಿರೀಕ್ಷಕರ ಕಛೇರಿಗಳಲ್ಲಿ ಗಣಹೋಮ, ಲಕ್ಷ್ಮೀ ಪೂಜೆ, ಆಯುಧ ಪೂಜೆ ಜರುಗಿದವು. ಹಬ್ಬದ ಪ್ರಯುಕ್ತ ಠಾಣೆಯಲ್ಲಿ ಸಿಂಗರಿಸಲಾಗಿತ್ತು. ಪುರುಷ ಸಿಬ್ಬಂದಿಗಳು ಬಿಳಿ ಉಡುಗೆ ಹಾಗೂ ಮಹಿಳಾ ಸಿಬ್ಬಂಧಿಗಳು ನೀಲಿ ಧಿರಿಸು ಧರಿಸಿ ಹಬ್ಬದ ಸಂಭ್ರಮದಲ್ಲಿ ಭಾಗವಹಿದರು. ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ, ಪೊಲೀಸ್ ಉಪನಿರೀಕ್ಷಕ (ಸಿವಿಲ್) ಪವನ್ ನಾಯಕ್, ಪೊಲೀಸ್ ಉಪನಿರೀಕ್ಷಕ (ತನಿಕಾಧಿಕಾರಿ) ಅನಿಲ್ ಬಿ.ಎಂ ಹಾಗೂ ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಸಿಗದೆ ಇರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ಅನುಕೂಲವಾಗುವಂತೆ ಊಟ ಮತ್ತು ವಸತಿ ಸೌಲಭ್ಯಕ್ಕೆ ಸಹಾಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿ ವಿದ್ಯಾರ್ಥಿಗೆ ಮಾಹೆಯಾನ ರೂ. 1,500/- ರಂತೆ 6 ತಿಂಗಳಿಗೆ ಗರಿಷ್ಠ ರೂ.9,000/- ಅನುದಾನ ಲಭ್ಯತೆಯನುಸಾರ ಮಂಜೂರು ಮಾಡಲಾಗುವುದು. ವಿದ್ಯಾರ್ಥಿಗಳು ಹಿಂದಿನ ವರ್ಷದ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು. ಈ ಸೌಲಭ್ಯ ಪಡೆಯಲು ವಿದ್ಯಾರ್ಥಿಯ ಪೋಷಕರ ಕುಟುಂಬದ ವಾರ್ಷಿಕ ವರಮಾನ ಪ್ರವರ್ಗ-1 ರೂ.2.50ಲಕ್ಷ ಹಾಗೂ ಇತರ ಅಲ್ಪಸಂಖ್ಯಾತ ವರ್ಗದವರಿಗೆ ರೂ 2 ಲಕ್ಷ ಹೊಂದಿರಬೇಕು. ಆನ್ಲೈನ್ ಅರ್ಜಿ ನಮೂನೆಯನ್ನು ಇಲಾಖೆ ವೆಬ್‌ಸೈಟ್ https://dom.karnataka.gov.in/udupi/public/ ನಲ್ಲಿ ಪಡೆದು ಸೂಕ್ತ ದಾಖಲೆಗಳೊಂದಿಗೆ ಆಯಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಕ್ಕೆ ಅಥವಾ ಜಿಲ್ಲಾ ಕಛೇರಿಗೆ ಸಲ್ಲಿಸಲು ನವೆಂಬರ್ 30…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಮ ಟೈಲರ್ ಅವರನ್ನು ಸುರಭಿ ರಿ. ಬೈಂದೂರು ಸಂಸ್ಥೆಯ ಪರವಾಗಿ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಸನ್ಮಾನಿಸಿದ ಬಳಿಕ ಮಾತನಾಡಿ, ರಾಮ ಟೈಲರ್ ಅವರು ಸಂಘಟನಾತ್ಮಕವಾಗಿ ಸುಧೀರ್ಘವಾಗಿ ತೊಡಗಿಸಿಕೊಂಡವರು. ಬೆಳಕಿನ ವಿನ್ಯಾಸದಲ್ಲಿ ಪರಿಣತಿ ಹೊಂದಿ ಹಲವು ನಾಟಕಗಳ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದರು. ಅವರ ತೆರೆಮರೆಯ ಸೇವೆಗೆ ಅರ್ಹವಾಗಿಯೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ ಎಂದರು. ಈ ಸಂದರ್ಭ ಸುರಭಿಯ ನಿಟಕಪೂರ್ವ ಅಧ್ಯಕ್ಷ ಸತ್ಯನಾ ಕೊಡೇರಿ, ನಿಕಟಪೂರ್ವ ಉಪಾಧ್ಯಕ್ಷ ಆನಂದ ಮದ್ದೋಡಿ, ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು, ಸದಸ್ಯ ವೆಂಕಟೇಶ ಮಯ್ಯಾಡಿ ಮೊದಲಾದವರು ಮಾತನಾಡಿದರು. ಸುರಭಿ ಕಾರ್ಯದರ್ಶಿ ಭಾಸ್ಕರ ಬಾಡ, ಖಜಾಂಚಿ ಸುರೇಶ್ ಹುದಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಘವೇಂದ್ರ ಪಡುವರಿ, ಸುನಿಲ್ ಹೆಚ್. ಜಿ. ಬೈಂದೂರು, ಲಕ್ಷ್ಮಣ ಕೊರಗ, ಉದಯ ಗಾಣಿಗ ಬೈಂದೂರು ಹಾಗೂ ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯು ಕನ್ನಡ ರಾಜ್ಯೋತ್ಸವ ವನ್ನು ಇಲ್ಲಿನ ಚೈತನ್ಯ ವೃದ್ದಾಶ್ರಮದ ಹಿರಿಯರೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು. ಕುಂದಾಪುರ ಹೆಲ್ಪಿಂಗ್ ಹ್ಯಾಂಡ್ಸ್ ಟ್ರಸ್ಟಿ ಶಾಂತಾ ಅವರು, ತಮ್ಮ ಸಹೋದರಿಯ ಜನುಮದಿನದ ಪ್ರಯುಕ್ತ ವೃದ್ದಾಶ್ರಮದಲ್ಲಿ ವಿಶೇಷ ಸಿಹಿ ಊಟದ ವ್ಯವಸ್ಥೆ ಮಾಡಿದರು. ಕುಂದಾಪುರ ಹೆಲ್ಪಿಂಗ್ ಹ್ಯಾಂಡ್ಸ್ ಸಂಸ್ಥೆಯ ಎಲ್ಲಾ ಸೇವಾ ಯೋಜನೆಗಳಿಗೆ ಆರ್ಥಿಕ ಸಹಕಾರ ನೀಡುತ್ತಾ ಬಂದಿರುವ ಶಾಂತಾ ಅವರನ್ನು ಸಂಸ್ಥೆಯ ವತಿಯಿಂದ ಗೌರವಪೂರ್ಣವಾಗಿ ಸನ್ಮಾನಿಸಲಾಯಿತು. ಹಾಗೂ ಅಶಕ್ತರಿಗೆ ಮನೆ ನಿರ್ಮಾಣದ ಸಲುವಾಗಿ ಆಯೋಜಿಸಿರುವ ಮುಂದಿನ ಕ್ರಿಕೆಟ್ ಪಂದ್ಯಕ್ಕೆ ಆಮಂತ್ರಿಸಲಾಯಿತು. ಈ ಸಂದರ್ಭ ಹೆಲ್ಪಿಂಗ್ ಹ್ಯಾಂಡ್ಸ್‌ನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Read More

ಕುದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವುದರಿಂದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ. ಶಿಕ್ಷಣ ಇಂದಿನ ವ್ಯವಸ್ಥೆಗೆ ಪ್ರಸ್ತುತವಾಗಬೇಕು ಮತ್ತು ವ್ಯವಸ್ಥೆಗೆ ಹೊಂದಾಣಿಕೆಯಾಗಬೇಕೆಂಬ ದೃಷ್ಟಿಯಿಂದ ಶಿಕ್ಷಣ ಇಲಾಖೆ ಅನೇಕ ಹೊಸ ವಿಧಾನಗಳ ಮತ್ತು ತಂತ್ರಜ್ಞಾನಗಳ ಮೂಲಕ ಮುನ್ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಸದಾನಂದ ಬೈಂದೂರು ಹೇಳಿದರು. ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಟಲ್ ಟಿಂಕರಿಂಗ್ ಲ್ಯಾಬ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿರುವ ಕೌಶಲ್ಯ ಅಭಿವೃದ್ಧಿಗೆ, ಹೊಸ ಆವಿಷ್ಕಾರ ಮತ್ತು ಪ್ರಯೋಗಗಳನ್ನು ಸ್ವಕಲಿಕೆ ಮೂಲಕ ತಿಳಿದುಕೊಳ್ಳಲು ಅಟಲ್ ಟಿಂಕರಿಂಗ್ ಲ್ಯಾಬ್ ಸಹಕರಿಯಾಗಲಿದ್ದು, ಶಿಕ್ಷಕರು ಇದರ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಬೇಕಿದೆ. ಸರಕಾರದ ಈ ಯೋಜನೆಯ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಹೊಸ ಕ್ರಾಂತಿಗೆ ಮುನ್ನುಡಿ ಬರೆಯಬೇಕು ಎಂದು ಅವರು ಹೇಳಿದರು. ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಮಲೆನಾಡು ಪ್ರಾಂತ್ಯದಲ್ಲಿ ಬುಧವಾರ ಅಪರಾಹ್ನದ ಬಳಿಕ ಭಾರಿ ಗಾಳಿ ಮಳೆ ಉಂಟಾಗಿದ್ದು, ಗಾಳಿ ಮಳೆಯ ಅಬ್ಬರಕ್ಕೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಸೌಡ ಪರ್ವತಬೆಟ್ಟು ನಿವಾಸಿ ಬೇಬಿ ಶೆಟ್ತಿ ಅವರ ಮನೆ ಮೇಲೆ ಮರ ಬಿದ್ದು ಮನೆ ಹಾನಿಗೊಂಡಿದೆ. ರೂ.1ಲಕ್ಷ ನಷ್ಟ ಎಂದು ಅಂದಾಜಿಸಲಾಗಿದೆ. ಹಲವೆಡೆ ಗ್ರಾಮ ಪಂಚಾಯಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಲವಕರ ಶೆಟ್ಡಿ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕೋಟ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ ಬ್ರಹ್ಮಾವರ ಮದರ್ ಪ್ಯಾಲೇಸ್ ಮಿನಿಸಭಾಂಗಣದಲ್ಲಿ ಜರಗಿತು. ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ಮೂರ್ತಿ ಹಾಗೂ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸಿದರು. ಇಲಾಖೆಗೆ ಸಂಬಂಧಿಸಿ ಸಾರ್ವಜನಿಕರಿಂದ ಸ್ವೀಕರಿಸಲಾದ ದೂರುಗಳನ್ನು ಸಂವಾದದಲ್ಲಿ ಪ್ರಸ್ತಾವಿಸಿ ಪ್ರತಿಕ್ರೀಯೆ ಪಡೆಯಲಾಯಿತು. ದಾಖಲೆ ತಿದ್ದುಪಡಿ ಹಕ್ಕು ತಹಶೀಲ್ದಾರರಿಗೆ ನೀಡಿ:ಕಂದಾಯ ಪಹಣಿ ಮುಂತಾದ ಪ್ರಮುಖ ದಾಖಲೆಯ ದೋಷಗಳನ್ನು ಸರಿಪಡಿಸುವ ಅಧಿಕಾರ ಈ ಹಿಂದೆ ತಹಶೀಲ್ದಾರರಿಗೆ ನೀಡಲಾಗಿತ್ತು. ಆದರೆ ಪ್ರಸ್ತುತ ಇದನ್ನು ಎ.ಸಿ.ಯವರಿಗೆ ನೀಡಲಾಗಿದೆ. ಎ.ಸಿ. ಕಾರ್ಯದೊತ್ತಡದಿಂದ ದಾಖಲೆ ಸರಿಪಡಿಸಲು ಹಲವು ವರ್ಷಗಳೇ ಬೇಕಾಗುತ್ತದೆ. ಆದ್ದರಿಂದ ಈ ಅಧಿಕಾರವನ್ನು ಮರಳಿ ತಹಶೀಲ್ದಾರಿಗೆ ನೀಡಬೇಕು. ಈ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಜಿ.ಪಂ. ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿಯವರು ಸಲಹೆ ನೀಡಿದರು ಹಾಗೂ ಸರ್ವೆ ಇಲಾಖೆ ಮೇಲೆ ಈ ಹಿಂದೆ ತಹಶೀಲ್ದಾರರಿಗೆ ಅಧಿಕಾರವಿತ್ತು. ಆದರೆ ಪ್ರಸ್ತುತ ಇದನ್ನು ಪ್ರತ್ಯೇಕಗೊಳಿಸಿದ್ದರಿಂದ…

Read More