Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ಸರಕಾರದ ನೆಹರು ಯುವ ಕೇಂದ್ರ, ಯುವಕ-ಯುವತಿ ಮಂಡಳಿಗಳಿಗೆ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಯನ್ನು ಪ್ರತಿವರ್ಷ ನೀಡುತ್ತಾ ಬಂದಿದ್ದು, ಅದರಂತೆ 2018-19 ರ ಸಾಲಿನ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯುವಕ/ ಯುವತಿ ಮಂಡಳಗಳು ಜಿಲ್ಲಾ ನೊಂದಾಣಾಧಿಕಾರಿಗಳ ಕಛೇರಿಯಲ್ಲಿ ನೋಂದಾವಣೆಯಾಗಿದ್ದು, ನೆಹರು ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿರಬೇಕು. ಕಳೆದ ಸಾಲಿನ 2018-19 ರಲ್ಲಿ ಗ್ರಾಮ/ಪಟ್ಟಣ/ತಾಲೂಕು ಅಭಿವೃದ್ಧಿಗಾಗಿ ಜನಪರ ಕಾರ‍್ಯಕ್ರಮಗಳನ್ನು ನಡೆಸಿರಬೇಕು. ಮಾಹಿತಿಯು ಎಪ್ರಿಲ್ 1, 2018 ರಿಂದ ಮಾರ್ಚ್ 31, 2019 ರ ಒಳಗಿರಬೇಕು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಯುವ ಮಂಡಳಕ್ಕೆ 25,000 ರೂ., ಪ್ರಶಸ್ತಿ ಪತ್ರ ನೀಡಲಾಗುವುದು. ಸಂಪೂರ್ಣ ಮಾಹಿತಿ ಹಾಗೂ ಅರ್ಜಿಗಳನ್ನು ನೆಹರು ಯುವ ಕೇಂದ್ರ (ಬಿ-102, ಜಿಲ್ಲಾಧಿಕಾರಿ ಕಛೇರಿ ಆವರಣ), ರಜತಾದ್ರಿ, ಮಣಿಪಾಲ, ಉಡುಪಿ ಇವರ ಕಛೇರಿಯಿಂದ ಪಡೆದುಕೊಳ್ಳಬಹುದಾಗಿದೆ. ಸ್ಥಳೀಯ ಅರ್ಜಿಗಳನ್ನು ಸಲ್ಲಿಸಲು ಸೆಪ್ಟಂಬರ್ ೨೫ ಕೊನೆಯ ದಿನ. ಆಸಕ್ತ ಉಡುಪಿ ಜಿಲ್ಲೆಯ ಯುವಕ/ಯುವತಿ ಮಂಡಳಗಳು ಸಂಪೂರ್ಣ ಮಾಹಿತಿ ಹಾಗೂ ದಾಖಲೆಗಳೊಂದಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪ್ರಾಕೃತಿಕ ವಿಕೋಪ ಕಡಿಮೆಯಾಗಲು, ಮತ್ಸ್ಯಸಂಪತ್ತು ಸಮೃದ್ಧಿಯಾಗಲೆಂದು, ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಯಾವುದೇ ರೀತಿಯ ತೊಂದರೆಯಾಗದಿರಲೆಂದು ಹಾಗೂ ಗೋ ಸಂತತಿ ರಕ್ಷಣೆಗಾಗಿ ಮತ್ತು ಸಮಸ್ತ ಹಿಂದು ಸಮಾಜ ಒಗ್ಗಟ್ಟಿನಿಂದ ಇರಬೇಕೆಂಬ ಉದ್ದೇಶದಿಂದ ಗಂಗೊಳ್ಳಿ ಹಿಂದು ಜಾಗರಣ ವೇದಿಕೆಯ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಗಂಗೊಳ್ಳಿಯಿಂದ ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಸೋಮವಾರ ಪಾದಯಾತ್ರೆ ನಡೆಸಿದರು. ಇಂದು ಬೆಳಿಗ್ಗೆ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ಬಳಿಯಿಂದ ಶ್ರೀ ಕ್ಷೇತ್ರ ಮಾರಣಕಟ್ಟೆಗೆ ಪಾದಯಾತ್ರೆ ಕೈಗೊಂಡ ನೂರಾರು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಮಧ್ಯಾಹ್ನ ಶ್ರೀ ಮಾರಣಕಟ್ಟೆ ತಲುಪಿದರು. ಬಳಿಕ ಶ್ರೀ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವರಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ಕೈಗೊಂಡ ಉದ್ದೇಶವನ್ನು ಈಡೇರಿಸುವಂತೆ ಶ್ರೀದೇವರಲ್ಲಿ ಪ್ರಾರ್ಥಿಸಿದರು. ಶ್ರೀ ಕ್ಷೇತ್ರದ ಪ್ರಸಾದವನ್ನು ತಂದು ಪಂಚಗಂಗಾವಳಿ ನದಿಗೆ ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹಿಂದು ಜಾಗರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವಾಸುದೇವ ದೇವಾಡಿಗ, ಗಂಗೊಳ್ಳಿ ಹಿಂದು ಜಾಗರಣ ವೇದಿಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ (DDU –GKY) ಅಡಿಯಲ್ಲಿ ಗ್ರಾಮಿಣ ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ ಹಾಗೂ ಉದ್ಯೋಗವಕಾಶ / ಸ್ವ-ಉದ್ಯೋಗವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ನೈಪುಣ್ಯ ಇಂಟರ‍್ನ್ಯಾಷನಲ್ ಸಂಸ್ಥೆಯ ಮೂಲಕ ವಿವಿಧ ಕೋರ್ಸುಗಳ ನೊಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ. ಹತ್ತನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವ 18 ರಿಂದ 35 ವರ್ಷದ ವರೆಗಿನ ನಿರುದ್ಯೋಗಿ ಯುವಕ ಯುವತಿಯರ ಉಚಿತ ಉದ್ಯೋಗಾಧಾರಿತ ಕೋರ್ಸುಗಳಿಗೆ ನೊಂದಣಿ ಮಾಡಿಕೊಂಡು ಪ್ರವೇಶ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಹಾಜರಾಗಿ ಪ್ರವೇಶಾತಿ ಪಡೆಯಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಅಕೌಂಟ್ ಅಸಿಸ್ಟೆಂಟ್, ಟು-ವೀಲರ್ ಡೆಲಿವರಿ ಅಸೋಸಿಯೇಟ್ ಹಾಗೂ ರಿಟೇಲ್ ಕೋರ್ಸುಗಳಿಗೆ ಮೂರು ತಿಂಗಳ ತರಬೇತಿ ನೀಡಲಾಗುತ್ತದೆ. ಪ್ರವೇಶ ಪಡೆಯುವ ಪ್ರತಿ ಅಭ್ಯರ್ಥಿಗೂ ದಿನದ ಭತ್ಯೆ ನೀಡುವುದರೊಂದಿಗೆ ಟ್ಯಾಬ್ಲೆಟ್, ಕಲಿಕಾ ಸಾಮಾಗ್ರಿ, ಊಟ, ವಸತಿ, ಸಮವಸ್ತ್ರ ಹಾಗೂ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. ಬೆಳಿಗ್ಗೆ 9…

Read More

ಕುಂದಾಪ್ರ ಡಾಟ್ ಕಾಂ’ ಸುದ್ದಿ ಬೈಂದೂರು: ವಿಮಾ ಸೌಲಭ್ಯ ನೀಡುವುದರ ಜತೆಯಲ್ಲಿ ದೇಶದ ಆರ್ಥಿಕ ಪ್ರಗತಿಗೆ ಅಗತ್ಯವಾದ ಸಂಪನ್ಮೂಲ ಕ್ರೋಢೀಕರಣ ಮಾಡುವಲ್ಲಿ ನೆರವಾಗುತ್ತಿರುವ ಭಾರತೀಯ ಜೀವ ನಿಗಮದ ನೌಕರರು ಮತ್ತು ವಿಮಾ ಪ್ರತಿನಿಧಿಗಳು ಅರ್ಥವ್ಯವಸ್ಥೆಯ ಕಾಲಾಳುಗಳು ಎಂದು ಅಂಕಣಕಾರ ಬೈಂದೂರು ಚಂದ್ರಶೇಖರ ನಾವಡರು ಹೇಳಿದರು. ಅವರು ಇತ್ತೀಚೆಗೆ ಜೀವವಿಮಾ ನಿಗಮದ ಬೈಂದೂರು ಉಪಗ್ರಹ ಶಾಖೆಯಲ್ಲಿ ಏರ್ಪಡಿಸಿದ 63 ನೇ ವಿಮಾ ಸಪ್ತಾಹದ ಅಂಗವಾಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾಜದ ವಿವಿಧ ವರ್ಗಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನಿಗಮ ರೂಪಿಸುವ ಪ್ಲಾನ್ ಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹಾನ್ ಕಾರ್ಯ ಮಾಡುವ ವಿಮಾ ಪ್ರತಿನಿಧಿಗಳ ಸೇವೆಯನ್ನು ಅವರು ಪ್ರಶಂಸಿದರು. ಶಾಖಾಧಿಕಾರಿ ಜಗದೀಶ ಶೆಟ್ಟಿ 1956ರಲ್ಲಿ ಭಾರತ ಸರ್ಕಾರದ ಕೇವಲ 5 ಕೋಟಿ ರೂ ಹೂಡಿಕೆಯೊಂದಿಗೆ ಪ್ರಾರಂಭಗೊಂಡ ನಿಗಮ ಇಂದು ಸುಮಾರು 31 ಲಕ್ಷ ಕೋಟಿ ರೂ ಆಸ್ತಿ ಹಾಗೂ ಅಂದಾಜು 28 ಲಕ್ಷ ಕೋಟಿ ರೂ ವಿಮಾನಿಧಿ ಹೊಂದಿದ ಬೃಹದ್ ಸಂಸ್ಥೆಯಾಗಿ ಬೆಳೆದ ಪ್ರೇರಣಾದಾಯಿ ಯಶೋಗಾಥೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇವಾಡಿಗ ಸಮುದಾಯವು ದೀರ್ಘಕಾಲ ತುಳಿತಕ್ಕೆ ಒಳಗಾಗಿತ್ತು. ಶ್ರಮಪಟ್ಟು ಸಂಘಟಿತವಾಗಿ ಇದೀಗ ಸಮಾಜದ ಪ್ರಧಾನ ವಾಹಿನಿಗೆ ಸೇರಿಕೊಳ್ಳುತ್ತಿದೆ. ಅದನ್ನು ಇನ್ನಷ್ಟು ಉನ್ನತಿಗೊಯ್ಯಲು ಎಲ್ಲ ಹಂತಗಳಲ್ಲೂ ಅದು ಸಂಘಟಿತವಾಗಬೇಕು ಎಂದು ಶಿವಮೊಗ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಆಲೂರು ರಘುರಾಮ ದೇವಾಡಿಗ ಹೇಳಿದರು. ಮರವಂತೆ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮರವಂತೆ ದೇವಾಡಿಗ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ದೇವಾಡಿಗ ಸಮುದಾಯ ಸಂಘಟಿತವಾದರೆ ಮಹತ್ಸಾಧನೆ ಮಾಡಬಹುದು ಎನ್ನುವುದಕ್ಕೆ ಬಾರ್ಕೂರಿನಲ್ಲಿ ರೂ. ೯.೫ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಕುಲದೇವತೆ ಏಕನಾಥೇಶ್ವರಿ ದೇವಾಲಯವೇ ನಿದರ್ಶನ. ಸಮುದಾಯ ಮಕ್ಕಳ ಶಿಕ್ಷಣಕ್ಕೆ, ಪಾರಂಪರಿಕವಾಗಿ ಬಂದ ಕುಲಕಸುಬಿನ ಆಧುನೀಕರಣಕ್ಕೆ ಒತ್ತು ನೀಡಬೇಕು. ತಳಮಟ್ಟದ ಸಂಘಟನೆಗಳಲ್ಲಿ ಭೇದಭಾವಕ್ಕೆ ಎಡೆಕೊಡದೆ, ಹೊಂದಾಣಿಕೆಯ ಮೂಲಕ ಗುರಿ ಸಾಧಿಸಬೇಕು ಎಂದು ಅವರು ಹೇಳಿದರು. ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ, ದೇವಾಡಿಗ ಸಮುದಾಯ ತನ್ನ ಉನ್ನತ ಪರಂಪರೆ ಮತ್ತು ಸಮಾಜಕ್ಕೆ ನೀಡುತ್ತಬಂದ ಕೊಡುಗೆಗಳನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆರ್. ಎಸ್. ವೆಂಚರ‍್ಸ್ ಪ್ರವರ್ತಿತ ಬೈಂದೂರಿನ ಪ್ರಥಮ ಶಾಪಿಂಗ್ ಮಳಿಗೆ ’ರುಪೀ ಮಾಲ್’ ಸೆಪ್ಟೆಂಬರ್ 13ರಂದು ಅಧಿಕೃತವಾಗಿ ಆರಂಭಗೊಳ್ಳಲಿದೆ. ಭಾರತೀಯ ಕ್ರಿಕೆಟಿಗ ಹಾಗೂ ನಟ ಎಸ್. ಶ್ರೀಶಾಂತ್ ರುಪೀ ಮಾಲ್ ಉದ್ಘಾಟನೆಗೈಯಲಿದ್ದಾರೆ. ವೈವಿಧ್ಯಮಯ ಬಟ್ಟೆಗಳ ಭಂಡಾರ ’ಫ್ಯಾಶನ್ ಸ್ಟೋರ್’ನ್ನು ಮಿಸ್ ಸೌತ್ ಇಂಡಿಯಾ ನಿಖಿತಾ ಥೋಮಸ್ ಉದ್ಘಾಟಿಸಲಿದ್ದಾರೆ. 50,000 ಚದರ ಅಡಿ ವಿಸ್ತೀರ್ಣದ ಮಾಲ್‌ನ ಎರಡನೇ ಮಳಿಗೆಯಲ್ಲಿ ಅತ್ಯಾಧುನಿಕ ಕ್ರೀಡಾ ಸಾಮಾಗ್ರಿಗಳನ್ನೊಳಗೊಂಡ ’ಕಿಡ್ಸ್ ಝೋನ್’ ಆರಂಭಗೊಳ್ಳಲಿದ್ದು ಮಕ್ಕಳ ಮನೋರಂಜನಾ ಕೇಂದ್ರವಾಗಿ ಮಾರ್ಪಾಡಾಗಲಿದೆ. ಬೈಂದೂರು ಹಾಗೂ ಸುತ್ತಲಿನ ಊರುಗಳಲ್ಲಿ ಇದೇ ಮೊದಲ ಭಾರಿಗೆ ದೊಡ್ಡ ಮನೋರಂಜನಾ ತಾಣ ಆರಂಭಗೊಳ್ಳುತ್ತಿದೆ. ಮಾಲ್‌ನಲ್ಲಿ ಆರಂಭಗೊಳ್ಳಲಿರುವ ಬೃಹತ್ ’ಫ್ಯಾಶನ್ ಸ್ಟೋರ್’ನಲ್ಲಿ ಮೆಟ್ರೋ ನಗರಗಳ ಎಲ್ಲಾ ಫ್ಯಾಶನ್‌ನ ಬಟ್ಟೆಗಳು ಲಭ್ಯವಿರಲಿದೆ. ಮದುವೆ ಬಟ್ಟೆಗಳ ವಿಭಾಗದಲ್ಲಿ ವಿವಿಧ ನಮೂನೆಯ ಮದುವೆ ಬಟ್ಟೆಗಳು ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ. ರುಪೀ ಮಾಲ್ ’ಹೈಪರ್ ಮಾರ್ಕೆಟ್’ನ್ನು ಒಳಗೊಂಡಿದ್ದು ಮನೆಗೆ ಅಗತ್ಯವಾದ ಎಲ್ಲಾ ಸಾಮಾಗ್ರಿಗಳು, ಫ್ಯಾನ್ಸಿ ಸ್ಟೋರ್, ಪೂಟ್‌ವೇರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮಕ್ಕಿಗದ್ದೆ ತಗ್ಗರ್ಸೆ ರಿ. ಇದರ ಉತ್ಸವ ಸಮಿತಿ 2019 ಇದರ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಆಯ್ಕೆಯಾಗಿದ್ದಾರೆ. ಸಮಿತಿಯ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಭಾಕರ ಮೊಗವೀರ, ನಾಗೇಂದ್ರ ಶೆಟ್ಟಿ, ಸೋಮಶೇಖರ ಆಚಾರ್ಯ, ಜೊತೆ ಕಾರ್ಯದರ್ಶಿಗಳಾಗಿ ಮಂಜುನಾಥ್ ಸಿದ್ದನಹಿತ್ಲು, ಗುರುರಾಜ ಆಚಾರ್ಯ, ಗುರುಪ್ರಸಾದ್ ಆಚಾರ್ಯ, ಮಂಜುನಾಥ ಹಕ್ಲುಮನೆ, ಸಂತೋಷ್ ಆಚಾರ್ಯ, ದಯಾನಂದ ಚಂದನ್, ಗುರುರಾಜ್ ಹಾಡಿಮನೆ, ಶ್ರೀನಿವಾಸ ಆಚಾರ್ಯ, ಗಣೇಶ್ ಚಂದನ್, ಮಂಜುನಾಥ ಆಚಾರ್ಯ, ಮಂಜುನಾಥ ಚಂದನ್, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರದೀಪ್ ಆಚಾರ್ಯ, ಗೋವಿಂದರಾಜ್ ಆಚಾರ್ಯ, ದೇವರಾಜ್ ಆಚಾರ್ಯ, ರವಿದಾಸ್, ನವೀನ್ ಆಚಾರ್ಯ, ಅಣ್ಣಪ್ಪ, ವಿಶ್ವನಾಥ, ಸುದೇಶ ಆಚಾರ್ಯ, ನಟರಾಜ್ ಆಚಾರ್ಯ, ನಾಗರಾಜ್ ಚಂದನ್, ಅಕ್ಷಯ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ವಿಕ್ರಮ್, ಸಚಿನ್ ಆಚಾರ್ಯ, ಪ್ರವೀಣ್ ಆಚಾರ್ಯ, ಅಂಜನ್ ಕುಮಾರ್, ಅಭಿಷೇಕ್, ಕಿರಣ್ ಶೆಟ್ಟಿ, ಗಿರೀಶ್ ಎನ್., ಸಂತೋಷ್ ಜಟ್ಟಿಹಿತ್ಲು, ಸಚಿನ್ ಆಚಾರ್ಯ, ರಾಘವೇಂದ್ರ ಎಂ., ಕಾರ್ತಿಕ್ ಶೆಟ್ಟಿ, ಪ್ರಸನ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬೈಂದೂರು 2018-19ನೇ ಸಾಲಿನಲ್ಲಿ 17.64 ಲಕ್ಷ ರೂ. ಲಾಭಗಳಿಸಿ ಸದಸ್ಯರಿಗೆ ಶೇ.13 ಡಿವಿಡೆಂಟ್ ಘೋಷಿಸಿದೆ. ಗ್ರಾಹಕರ ಸಹಕಾರ, ನಿಧಿಗಳ ಸಮರ್ಪಕ ನಿರ್ವಹಣೆ, ಸಾಲಗಳ ವಿತರಣೆ ಹಾಗೂ ಸಮಯೋಜಿತ ಹೂಡಿಕೆಗಳಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಭಾನುವಾರ ಬೈಂದೂರಿನ ಸಂಘದ ಪ್ರಧಾನ ಕಛೇರಿಯಲ್ಲಿ ಜರುಗಿದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸಹಕಾರಿಯು 2018-19ನೇ ಸಾಲಿನಲ್ಲಿ ರೂ. 14.59 ಕೋಟಿ ಠೇವಣಿ ಹೊಂದಿದ್ದು 13.82 ಕೋಟಿ ಸಾಲ ನೀಡಿದೆ. ಕಳೆದ ಸಾಲಿನ ಕಾರ್ಯಯೋಜನೆಯಲ್ಲಿ ನಿಗದಿಪಡಿಸಿದ ಠೇವಣಿ, ಸಾಲ, ಅನುತ್ಪಾದಕ ಸಾಲ, ಸುಸ್ತಿ ಸಾಲ ಹಾಗೂ ಮುಂಗಡ ಲಾಭಗಳಿಕೆಯಲ್ಲಿ ನಿಗದಿತ ಗುರಿಯನ್ನು ಮೀರಿ ಸಂಸ್ಥೆ ಪ್ರಗತಿ ಸಾಧಿಸಿದೆ. ಆಡಿಟ್ ವರ್ಗೀಕರಣದಲ್ಲಿ ಸಂಸ್ಥೆ ’ಎ’ ತರಗತಿಯನ್ನು ಹೊಂದಿದೆ ಎಂದರು. ಜಿಲ್ಲೆಯಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಹಿಂದೆ ಗ್ರಾಹಕರ ಸಹಕಾರ ಹಾಗೂ ನೌಕರರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಫೆರ್ರಿ ರಸ್ತೆಯ ನಿವಾಸಿಯಾದ ಖತೀಬ್‌ ಅಬು ಮಹಮ್ಮದ್‌ ಎನ್ನುವರ ಪತ್ನಿ ಕೆ ಮೆಹರುನ್ನೀಸ ಶುಕ್ರವಾರ ಮಧ್ಯಾಹ್ನ ತಮ್ಮ ಮನೆಯಲ್ಲಿ ಇದ್ದಾಗ ಮನೆಗೆ ಬಂದ ಬುರ್ಕಾಧಾರಿ ಕಾಪು ಮಜೂರಿನ ಫಿರ್ದಾಸ್‌(29) ಹಾಗೂ ಕುಂಟಲಪಾಡಿ ಮಹಮ್ಮದ್‌ ಆಸೀಫ್‌ (37) ಎನ್ನುವ ಜೋಡಿ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಬಂದಿರುವುದಾಗಿ ನಂಬಿಸಿ ಕತ್ತಿನಲ್ಲಿ ಇದ್ದ ಚಿನ್ನವನ್ನು ಅಪಹರಿಸಲು ಯತ್ನಿಸಿದಾಗ ಕುಂದಾಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮನೆಯಲ್ಲಿ ಇದ್ದ 74 ವರ್ಷದ ಕೆ ಮೆಹರುನ್ನೀಸ ಅವರನ್ನು ಭೇಟಿಯಾಗಿದ್ದ ಬುರ್ಕಾ ಧರಿಸಿದ್ದ ಮಹಿಳೆ ಹಾಗೂ ಆಕೆಯೊಂದಿಗೆ ಇದ್ದ ಅಪರಿಚಿತ ವ್ಯಕ್ತಿ, ಸೊಸೆ ಸಮೀನಾ ಮನೆಯಲ್ಲಿ ಇದ್ದಾರಾ ಎಂದು ಪ್ರಶ್ನಿಸಿದ್ದಾರೆ. ಆಕೆ ಮನೆಯಲ್ಲಿ ಇಲ್ಲಾ, ನೀವು ಯಾರು ಎಂದು ಮರು ಪ್ರಶ್ನಿಸಿದಾಗ ಉತ್ತರಿಸಿದ್ದ ಬುರ್ಕಾಧಾರಿ ಮಹಿಳೆ ತಾನು ಆಕೆಯ ಸ್ನೇಹಿತೆ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಬಂದಿರುವುದಾಗಿ ತಿಳಿಸಿದ್ದಾರೆ. ಸೊಸೆಯ ಪರಿಚಿತರು ಇರಬೇಕು ಎಂದು ಭಾವಿಸಿ ಇಬ್ಬರನ್ನು ಮನೆಯ ಒಳಗೆ ಕುಳ್ಳಿರಿಸಿ ಸೊಸೆಗೆ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ/ಕತಾರ್: ಎಲ್ಲಾದರೂ ಇರು. ಎಂತಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಉದ್ಯೋಗಕ್ಕಾಗಿ ತಾನು ನೆಲೆನಿಂತ ದೇಶದಲ್ಲಿಯೇ ಕನ್ನಡದ ಕಂಪನ್ನ ಪಸರಿಸುತ್ತಾ, ಹೊರದೇಶದ ಕನ್ನಡಿಗರಲ್ಲಿನ ಭಾಷಾಭಿಮಾನವನ್ನು ಹುರಿದುಂಬಿಸುತ್ತಾ ಕನ್ನಡದ ಕಟ್ಟಾಳುವಾಗಿ ಬೆಳೆದಿದ್ದಾರೆ ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು. ಕಳೆದ 13 ವರ್ಷಗಳಿಂದ ಇಂಜಿನಿಯರ್ ಆಗಿ ಕತಾರಿನಲ್ಲಿ ನೆಲೆಸಿರುವ ಅವರು ಪ್ರಸ್ತುತ ಇಂಡಿಯನ್ ಕಮ್ಯುನಿಟಿಬೆ ನ್ವೆಲೆಂಟ್ (ಐ.ಸಿ.ಬಿ.ಎಫ್) ಫೋರಂ ಜಾಯಿಂಟ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಾದ್ದಾರೆ. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಬೈಂದೂರು ತಗ್ಗರ್ಸೆಯ ಗುರುದತ್ತ ಶೇರುಗಾರ್ ಹಾಗೂ ಮೂಕಾಂಬು ದಂಪತಿ ಪುತ್ರರಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಮಯ್ಯಾಡಿಯ ಧ.ಮ.ಹಿ.ಪ್ರಾ ಶಾಲೆಯಲ್ಲಿಯೂ, ಪ್ರೌಢ ಶಿಕ್ಷಣವನ್ನು ದಾವಣಗೆರೆ ಬಾಪೂಜಿ ಫ್ರೌಢಶಾಲೆಯಲ್ಲಿಯೂ ಬಳಿಕ ದಾವಣಗೆರೆಯಲ್ಲಿಯೇ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು ರಾಷ್ಟ್ರೀಯ ಹೆದ್ದಾರಿ-8ರಲ್ಲಿ ಮೇಲುಸ್ತುವಾರಿ ಅಭಿಯಂತರಾಗಿ ಸೇವೆಸಲ್ಲಿಸಿ ಬಳಿಕ ಪ್ರಸ್ತುತ ಕತಾರ್ ನ ಗಲ್ಪಾರ್ಆಲ್ಮಿಸ್ನಾದ್ ಕಂಪನಿಯಲ್ಲಿಅಭಿಯಂತರಾಗಿ ಸೇವೆಸಲ್ಲಿಸುತ್ತಿದ್ದಾರೆ. ಕತಾರಿನಲ್ಲಿ ಕನ್ನಡ ಸಿನೆಮಾ ಪ್ರದರ್ಶಕ: ಕನ್ನಡದ ಸಿನಿಮಾಗಳಾದ ‘ಒಂದು ಮೊಟ್ಟೆಯ ಕಥೆ, ‘ಕಾಫಿತೋಟ’, ಕೋಟಿಗೊಬ್ಬ-2, ‘ಹೆಬ್ಬುಲಿ’,…

Read More