Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಫೆ. ೨೩ ರಂದು ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಾಲಯದ ಆವರಣದಲ್ಲಿ ನಡೆಯುವ ಕುಂದಾಪುರ ತಾಲೂಕು ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ವಿಶ್ರಾಂತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಸೋಮವಾರ ಬಿಡುಗಡೆ ಮಾಡಿ, ಪರಿಷತ್ ಘಟಕದ ಯುವ ಮತ್ತು ಉತ್ಸಾಹಿ ಅಧ್ಯಕ್ಷ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಕಿರಿಮಂಜೇಶ್ವರ ಪರಿಸರದ ಸಾಹಿತ್ಯಾಭಿಮಾನಿಗಳ ಸಹಕಾರದೊಂದಿಗೆ ಸಮ್ಮೇಳನವು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಬೈಂದೂರು ಸಮ್ಮೇಳನದ ರೂಪುರೇಷೆಗಳ ಮಾಹಿತಿ ನೀಡಿ, ಯಶಸ್ಸಿಗೆ ಎಲ್ಲ ಹೋಬಳಿ ಘಟಕ ಮತ್ತು ಸ್ಥಳೀಯರ ನೆರವು ಕೋರಿದರು. ಕಸಾಪ ಗೌರವ ಕಾರ್ಯದರ್ಶಿ ಡಾ. ಕಿಶೋರಕುಮಾರ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಗೌ. ಕೋಶಾಧ್ಯಕ್ಷ ರವೀಂದ್ರ ಎಚ್, ಅಗಸ್ತ್ಯೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಪರಶುರಾಮ್, ಸ್ಥಳೀಯ ಪ್ರಮುಖರಾದ ಕೆ. ಸದಾಶಿವ ಶ್ಯಾನುಭಾಗ್, ಎಸ್. ಎಸ್. ಭಗವತಿ, ಕೆ. ಬಾಲಕೃಷ್ಣ ಶ್ಯಾನುಭೋಗ್, ಕೆ. ವಾಸುದೇವ ಕಾರಂತ, ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಪ್ರಾಯೋಜಿತ ಜೇಸಿಐ ಕುಂದಾಪುರ ಚರಿಷ್ಮಾ ಘಟಕದ ಪದಗ್ರಹಣ ಸಮಾರಂಭವು ಇತೀಚೆಗೆ ಸುಮೇದಾ ಹೋಟೆಲ್ ಸಹನಾ ಕನ್ವೆನ್ಷನ್ ಸೆಂಟರ್ ಕುಂದಾಪುರದಲ್ಲಿ ಜರುಗಿತು. ನಾಯಕತ್ವ ನಿರ್ಮಾಣಕ್ಕೆ ವ್ಯಕ್ತಿತ್ವ ವಿಕಸನಕ್ಕೆ ಈ ಪ್ರಪಂಚಕ್ಕೆ ಇವರುವ ಅದ್ಬುತ ಸಂಸ್ಥೆ ಜೇಸಿ ಸಂಸ್ಥೆ. ಇದರಲ್ಲಿ ಮಹಿಳೆಯರಿಗೆ ನಾಯಕರಾಗಲ ಬೇಕಾದಷ್ಟು ಅವಕಾಶವಿದೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಾಯಕೀಯರಾಗಿ ಮಹಿಳೆಯರು ಮೂಡಿ ಬಂದಿದ್ದಾರೆ ಕಳೆದ ವರ್ಷದ ಪ್ರೇರಣೆಯಂತೆ ಈ ವರ್ಷದಲ್ಲಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಹಾಗೂ ವಲಯ ಆಡಳಿತ ಮಂಡಳಿ ಹಾಗೂ ಘಟಕದಲ್ಲಿ ಮಹಿಳಾ ಜೇಸಿಗಳೂ ಬಂದಿದ್ದಾರೆ ಎಂದು ಜೇಸಿಐ ಸೆನೆಟರ್ ಸದಾನಂದ ನಾವುಡ ಹೇಳಿದರು. ಪೂರ್ವ ರಾಷ್ಠೀಯ ಉಪಾಧ್ಯಕ್ಷ ಜೇಸಿಐ ಇಂಡಿಯಾ ಮಾನಾಡಿದರು. ಜೇಸಿಐ ಕುಂದಾಪುರದ ಅಧ್ಯಕ್ಷೆ ಜೆ.ಎಫ್.ಪಿ ಅಕ್ಷತಾ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷೆ ಗೀತಾಂಜಲಿ ಆರ್ ನಾಯಕ್ ಯವರಿಗೆ ಅಧಿಕಾರ ಹಸ್ತಾಂತರಿಸಲಾಯಿತು ಜೆ.ಎಫ್.ಪಿ ಸಂತೋಷ್ ಜಿ, ವಲಯ ಅಧ್ಯಕ್ಷರು ಜೆ.ಎಫ್.ಎಮ್ ಮರಿಯಪ್ಪ, ವಲಯ ಉಪಾಧ್ಯಕ್ಷರು ಜೆ.ಎಪ್.ಎಮ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪ್ರಸಿದ್ಧ ಚಲನಚಿತ್ರ ನಟ ರಮೇಶ ಭಟ್ ಅವರು ಬುಧವಾರ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದರು. ಶಾಲೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಶಾಲೆಯ ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಲನಚಿತ್ರ ರಂಗದ ಬಗ್ಗೆ ಅನುಭವವನ್ನು ಹಂಚಿಕೊಂಡ ಅವರು ಶಾಲೆಯ ಉಪನ್ಯಾಸಕರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಚಲನಚಿತ್ರ ರಂಗದಲ್ಲಿ ಹೆಸರು ಪಡೆದುಕೊಂಡ ನಾನು ಉಡುಪಿ ಜಿಲ್ಲೆಯವನು ಎಂದು ಯಾರಿಗೂ ತಿಳಿದಿಲ್ಲ. ಈ ಪ್ರದೇಶಕ್ಕೆ ಬಂದು ಎಲ್ಲರೊಂದಿಗೆ ಸೇರಿ ನಮ್ಮ ಹಿಂದಿನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದೇ ಒಂದು ಸಂತೋಷ. ಈ ಭಾಗದ ಜನರು ನೀಡುವ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಎಂದು ಅವರು ಹೇಳಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ನಿವೃತ್ತ ಪ್ರಾಂಶುಪಾಲ ಆರ್.ಎನ್.ರೇವಣ್‌ಕರ್, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ವಾಮನದಾಸ ಭಟ್, ಕಾಲೇಜಿನ ಉಪನ್ಯಾಸಕರು, ಸಹಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್-ಕಾಲೇಜು ಮಟ್ಟದ ಪುರುಷರ ಸಾಫ್ಟ್‌ಬಾಲ್ ಪಂದ್ಯಾಟದಲ್ಲಿ ಆತಿಥೇಯ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ತಂಡ ದ್ವಿತೀಯ ಸ್ಥಾನದೊಂದಿಗೆ ರಜತ ಪದಕವನ್ನು ಪಡೆದುಕೊಂಡಿದೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ. ಎನ್.ರವರು ಮತ್ತು ವಾಣಿಜ್ಯ ಉಪನ್ಯಾಸಕ ಹರೀಶ್ ಬಿ. ಅಭಿನಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೆಮ್ಮಾಡಿ ಬೈಪಾಸ್ ಬಳಿ ಖಾಸಗಿ ಬಸ್ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಕೋಟೇಶ್ವರ ಸರಕಾರಿ ಪದವಿ ಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕ ಭೋಜು ಹಾಂಡ (58) ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬೈಕಿನ  ಹಿಂಬದಿಯಲ್ಲಿ ಕುಳಿತಿದ್ದ ಹುಡುಗಿ ಅರ್ಪಿತಾ (11) ಸಣ್ಣಪುಟ್ಟ ಗಾಯಗಳಾಗಿದ್ದ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ ಯೋಗ ತರಬೇತಿ ನಡೆಸುವುದಕ್ಕಾಗಿ ಹೆಮ್ಮಾಡಿಯಿಂದ ಕಟ್‌ಬೆಲ್ತೂರಿಗೆ ತೆರಳಲು ಹೆಮ್ಮಾಡಿ ಬೈಪಾಸ್ ದಾಟುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಕಡೆಗೆ ಸಾಗುತ್ತಿದ್ದ ಬಸ್ ಬೈಕಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಭೋಜ ಹಾಂಡ ಅವರಿಗೆ ಗಂಭೀರ ಗಾಯಗಳಾಗಿದ್ದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಯೋಗ ತರಬೇತಿಗಾಗಿ ಅವರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಅರ್ಪಿತಾಗೂ ಸಣ್ಣಪುಟ್ಟ ಗಾಯಗಳಾಗಿದ್ದು ಕುಂದಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಂದಾಪುರ ಅತ್ಯುತ್ತಮ ಚಿತ್ರಕಲಾವಿದರಾಗಿದ್ದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಮ್ಮಾಡಿಯ ಆಧ್ಯಾತ್ಮಿಕ ಯೋಗ ಕಲಿಕಾ ಕೇಂದ್ರದ ಯೋಗ ಬಂಧುಗಳಿಂದ ಹೆಮ್ಮಾಡಿ ಪೇಟೆ ಪರಿಸರದಲ್ಲಿ ಸಾರ್ವಜನಿಕರಲ್ಲಿ ಯೋಗದ ಅರಿವನ್ನು ಮೂಡಿಸುವ ಸಲುವಾಗಿ ಯೋಗ ನಡಿಗೆ ಕಾರ್ಯಕ್ರಮವನ್ನು ನಡೆಸಿ ಎಲ್ಲರ ಗಮನ ಸೆಳೆದರು. ಸಂಘದ ಎಲ್ಲಾ ಯೋಗ ಬಂಧುಗಳು ಯೋಗದ ಮಹತ್ವವನ್ನು ಸಾರುವ ಭಿತ್ತಿ ಪತ್ರಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಸಂಘದ ವಾರ್ಷಿಕ ದಿನಾಚರಣೆಯನ್ನು ಆಚರಿಸಲಾಯಿತು. ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಹರೀಶ ಉದ್ಘಾಟಿಸಿದರು. ಸಂಘದ ಎಲ್ಲಾ ಯೋಗ ಬಂಧುಗಳು ವಿವಿಧ ರೀತಿಯ ಯೋಗಾಸನಗಳನ್ನು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ತೋರಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿ ಕನರಾಡಿ ವಾದಿರಾಜ್ ಭಟ್ ಮಾತನಾಡಿ ನಿತ್ಯ ಜೀವನದಲ್ಲಿ ಯೋಗ ಅಳವಡಿಕೆ ಮತ್ತು ಆತ್ಮ ಸಾಕ್ಷಾತ್ಕಾರವೇ ಯೋಗಿಯ ಪರಮ ಧ್ಯೇಯವಾಗಿರಬೇಕು ಎಂದರು. ವಿವಿಧ ಗ್ರಾಮಗಳಲ್ಲಿ ಯೋಗ ತರಬೇತಿಯನ್ನು ನಡೆಸುತ್ತಿರುವ ಹುಣ್ಸೆಮಕ್ಕಿ ಯೋಗ ಸಂಘದ ಅನಿಲ್‌ಕುಮಾರ್ ಶೆಟ್ಟಿ, ಬಸ್ರೂರಿನ ಪ್ರಭಾಕರ ಐತಾಳ್, ಉಪ್ಪಿನಕುದ್ರುವಿನ ಶ್ರೀಧರ ರಾವ್, ಕಟ್‌ಬೆಲ್ತೂರಿನ ನಂದಿ ದೇವಾಡಿಗ ಇವರು ವೇದಿಕೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೇನಾಪುರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕೃತ ಶಿಲಾದೇಗುಲದ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವವು ವಿದ್ವಾನ್ ಕೋಟ ಲಕ್ಷ್ಮೀನಾರಾಯಣ ಸೋಮಯಾಜಿ ಅವರ ಆಚಾರ್ಯತ್ವದಲ್ಲಿ ಜರುಗಿತು. ದೇವಸ್ಥಾನದ ಅನುವಂಶಿಯ ಅರ್ಚಕ ವೆಂಕಟೇಶ ಮಂಜ ವಿಷ್ಣುಮೂರ್ತಿ ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಅರುಣಕುಮಾರ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Read More

ಸೇನಾಪುರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕೃತ ಶಿಲಾದೇಗುಲದ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಸ್ಥಾನಗಳು ಜೀವನ ಪ್ರೀತಿಯನ್ನು ಕಲಿಸಿಕೊಡುವ ತಾಣಗಳು. ದೇವಸ್ಥಾನಗಳಿಂದಾಗಿ ಇಡೀ ಊರು ಒಟ್ಟುಗೂಡುವುದಲ್ಲದೇ ಸೌಹಾರ್ದಯುವತಾಗಿ ಬಾಳುವಂತೆ ಮಾಡುತ್ತದೆ. ಜೀವನ ಪ್ರೀತಿಗೆ ಬಡವ ಬಲ್ಲಿದನೆಂಬ ಭೇದವಿಲ್ಲ. ಅಲ್ಲಿ ಎಲ್ಲವನ್ನೂ ಸಮಾನವಾಗಿ ಕಾಣಲಾಗುತ್ತದೆ ಎಂದು ವಾಸ್ತುತಜ್ಞ ವೇ.ಮೂ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಹೇಳಿದರು. ಅವರು ಸೇನಾಪುರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕೃತ ಶಿಲಾದೇಗುಲದ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪ್ರವಚನವಿತ್ತರು. ಹಿಂದಿನ ಕಾಲದ ದುಸ್ತರ ಬದುಕಿನ ನಡುವೆಯೂ ಊರಿನಲ್ಲೊಂದು ಸುಂದರ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತಿದ್ದವು. ಆ ಕಾಲದಲ್ಲಿ ಹಸಿವು ನೀಗಿಸಿಕೊಳ್ಳಲು ಪ್ರತಿಫಲವನ್ನು ಬಯಸುತ್ತಿದ್ದರೇ ಹೊರತು ಹಣ ಮಾಡುವ ಉದ್ದೇಶ ಹೊಂದಿರಲಿಲ್ಲ. ಪ್ರತಿಫಲಾಪೇಕ್ಷೆ ಇಲ್ಲದ ನಮ್ಮ ಪೂರ್ವಜರುಗಳ ಕಾರ್ಯವೈಖರಿಯನ್ನು ಹಿಂದಿನ ಕಾಲದ ದೇವಸ್ಥಾನಗಳಲ್ಲಿ ನೋಡಿದರೆ ತಿಳಿಯುವುದು ಎಂದರು. ನಿವೃತ್ತ ಉಪನ್ಯಾಸಕ ಡಾ. ಬಿ. ಮಂಜುನಾಥ ಸೋಮಯಾಜಿ ಮಾತನಾಡಿ ದೇವಸ್ಥಾನದಲ್ಲಿ ದೇವರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸ್ಥಳೀಯರಿಗೆ ಟೋಲ್‌ನಲ್ಲಿ ವಿನಾಯಿತಿ ನೀಡಬೇಕು ಎನ್ನುವ ಸಾರ್ವಜನಿಕರ ಹೋರಾಟದ ಕಾವು ತೀವ್ರಗೊಂಡಿದೆ. ಶನಿವಾರ ಸಾಸ್ತಾನದ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಪ್ರತಿಭಟನ ನಿರತರು ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಿದ ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅನಂತರ ಟೋಲ್‌ಗೇಟಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ ಪೊಲೀಸರಿಂದ ಬಂಧನಕ್ಕೊಳಗಾದರು. ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲಾಧಿಕಾರಿಗಳು ಟೋಲ್‌ ವಿಚಾರದಲ್ಲಿ ಅವಸರದ ತೀರ್ಮಾನ ಕೈಗೊಂಡಿದ್ದಾರೆ. ಏಕಾಏಕಿ ಟೋಲ್‌ಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದರು. ಸಾಮಾಜಿಕ ಹೋರಾಟಗಾರ ಕಿಶೋರ ಕುಮಾರ್‌ ಮಾತನಾಡಿ, ಉಡುಪಿ ಜಿಲ್ಲಾಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಬಿಹಾರದ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸಾರ್ವಜನಿಕರ ಬೇಡಿಕೆಗಳಿಗೆ ಬೆಲೆ ನೀಡುವ ಬದಲು ಬಂಡವಾಳಶಾಹಿಗಳ ಪರ ನಿಂತಿದ್ದಾರೆ ಎಂದರು. ಇಂದಿನ ಪೊಲೀಸ್‌ ಬಂದೋಬಸ್ತ್, ಪ್ರತಿಭಟನೆ ಯನ್ನು ಹತ್ತಿಕ್ಕಲು ಮಾಡುತ್ತಿರುವ ಪ್ರಯತ್ನಗಳನ್ನು ನೋಡಿದರೆ ಸ್ವಾತಂತ್ರÂ ಪೂರ್ವದ ದಿನಗಳು ನೆನಪಾಗುತ್ತಿವೆ ಎಂದು ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ…

Read More

ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಧಾರ್ಮಿಕ ಸಭಾ ಕಾರ್ಯಕ್ರಮ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಮನುಷ್ಯ ದ್ವೇಷಿಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಜಾತಿ, ಧರ್ಮ, ಭಾಷೆ, ಪಂಥವನ್ನು ಮೀರಿ ಮನುಷ್ಯಕೋಟಿಯನ್ನು ಪ್ರೀತಿಸುವುದನ್ನು ಕಲಿತರೆ ಮಾತ್ರವೇ ಜಗತ್ತನ್ನು ಗೆಲ್ಲಬಹುದೇ ಹೊರತು ದ್ವೇಷದಿಂದಲ್ಲ. ನಿಶ್ಕಲ್ಮಶ ಮನಸ್ಸಿನಲ್ಲಿ ದೇವರ ಸ್ಮರಣೆಯಿಂದ ಸಾಕ್ಷಾತ್ಕಾರ ಸಾಧ್ಯವಿದೆ. ದೇವಳದ ಬ್ರಹ್ಮಕಲಶೋತ್ಸವದೊಂದಿಗೆ ಆತ್ಮಶುದ್ಧಿಯಾದಾಗ ಮಾತ್ರ ಪ್ರೀತಿ ಸಾಮರಸ್ಯದ ಸುಂದರ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನವೀಕೃತ ಶಿಲಾಮಯ ದೇವಾಲಯದ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವದಲ್ಲಿ ಶಿಲಾಮಯ ಗರ್ಭಗುಡಿ ಉದ್ಘಾಟಿಸಿ ಮಾತನಾಡಿದರು. ರಾಜಾಶ್ರಯದಲ್ಲಿ ನಡೆಸಲಾಗುತ್ತಿದ್ದ ದೇವಾಲಯಗಳು ಕಾಲಕ್ರಮೇಣ ಕೆಲವೇ ಕುಟುಂಬದ ಒಡೆತನದಲ್ಲಿ ನಡೆಯುತ್ತಿತ್ತು. ಆದರೀಗ ಬಹುಪಾಲು ದೇವಾಲಯಗಳು ಜನಾಶ್ರಯದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಊರಿನ ಅಭಿವೃದ್ಧಿಯ ಸಂಕೇತದ ಸೂಚಕವಾಗಿದೆ. ಇದರಿಂದ ಊರಿನ ಶಕ್ತಿ ಹೆಚ್ಚುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಯುವ ಜನಾಂಗಕ್ಕೆ ಧಾರ್ಮಿಕ ಆಚರಣೆಗಳ…

Read More