ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲಾವಣ್ಯ ರಿ. ಬೈಂದೂರು 40ನೇ ವರ್ಷದ ಸಂಭ್ರಮದ ಅಂಗವಾಗಿ ಜನವರಿ 27ರಿಂದ ಫೆಬ್ರವರಿ 05ವರೆಗೆ ಹಮ್ಮಿಕೊಂಡಿರುವ ಕಲಾಮಹೋತ್ಸವ ಹತ್ತು ದಿನಗಳ ಕಲಾ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬೈಂದೂರು ಸೇನೇಶ್ವರ ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು. ಲಾವಣ್ಯ ಬೈಂದೂರು ಕಾರ್ಯಕಾರಿ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಗೌರವಾಧ್ಯಕ್ಷ ಶ್ರೀನಿವಾಸ ಪ್ರಭು, ವ್ಯವಸ್ಥಾಪಕರಾದ ಬಿ. ಗಣೇಶ್ ಕಾರಂತ್, ಬಿ. ರಾಮ ಟೈಲರ್, ಗಣಪತಿ ಎಸ್., ಮೊದಲಾದವರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಸಮರ್ಥ ಭಾರತ್ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಪ್ರಯುಕ್ತ ಕೊಲ್ಲೂರು ದೇವಳದ ಹೊರಪ್ರಾಂಗಣದಲ್ಲಿರುವ ಪರಿವಾರ ದೇವರ ಗುಡಿಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ದೇವಳದ ಎಇಒ ಎಚ್. ಕೃಷ್ಣಮೂರ್ತಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಸಮರ್ಥ ಭಾರತ್ ಘಟಕದ ಸಂಚಾಲಕ ಶ್ರೀಧರ ಬಿಜೂರ್, ಸದಸ್ಯರಾದ ವಿನೋದ್ ಭಟ್, ಸಂದೀಪ್ ಆರ್., ಜಗದೀಶ್, ಅಶೋಕ ಶೆಟ್ಟಿ, ಕಿರಣ್ ಮೊಗವೀರ, ಕೃಷ್ಣಯ್ಯ ಬಳೆಗಾರ್ ಹಾಗೂ ಆರ್‌ಎಸ್‌ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಈ ಸಂದರ್ಭ ಮುಂದಿನ ದಿನಗಳಲ್ಲಿ ಕೂಡಾ ಕ್ಷೇತ್ರದಲ್ಲಿ ಸ್ಚಚ್ಛತಾ ಅಭಿಯಾನ ಮುಂದುವರಿಯಲಿದೆ ಎಂಬ ಬಗ್ಗೆ ನಿರ್ಣಯ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಿನ ಹಣ ನೀಡಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಿ ಅವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮುತುವರ್ಜಿ ವಹಿಸುವಂತೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಮಕ್ಕಳ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಕೂಡ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದ್ದು, ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ ಜರಗಿದ ಶಾಲೆಯ ೧೨೧ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದ್ದು ಶಾಲೆಯ ಎಸ್‌ಡಿಎಂಸಿ, ಪೋಷಕರು ಸೇರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಯೋಜನೆ ರೂಪಿಸಬೇಕು. ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಸರ್ಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೇವೆ ಮತ್ತು ತ್ಯಾಗ ನಮ್ಮ ರಾಷ್ಟ್ರೀಯ ಆದರ್ಶಗಳು. ಕರ್ತವ್ಯವೆಂಬ ಯಜ್ಞದ ಮೂಲಕ ನಾವು ದೇವರನ್ನು ಕಾಣಬೇಕು. ಇದಕ್ಕಿಂತ ದೊಡ್ಡ ಪೂಜೆ ಇನ್ನೊಂದಿಲ್ಲ. ವಿವೇಕನಿಧಿಯನ್ನು ಒಳಗೊಂಡಿರುವ ಮತ್ತು ಋಷಿ-ಮುನಿಗಳು ಪ್ರವರ್ತನಗೊಳಿಸಿದ ಭಾರತದ ಆಧ್ಯಾತ್ಮಿಕ ಪರಂಪರೆ, ಇಂದು ಭೌತಿಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಯಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕೃತಿಕ ಪ್ರತಿಷ್ಟಾನದ ಸಂಚಾಲಕ, ಸಂತ ವೈ. ಮಂಗೇಶ ಶೆಣೈ ಹೇಳಿದರು. ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನಾಚರಣೆ ಪ್ರಯುಕ್ತ ನಡೆಯುವ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟಿಸಿ ಉಪನ್ಯಾಸ ನೀಡಿದರು. ಇಂದಿನ ಯುವಜನರು ಕವಲುದಾರಿಯಲ್ಲಿದ್ದಾರೆ. ಒಂದೆಡೆ ಹಣವಂತರು ಸುಖ, ವೈಭೋಗ, ಬೆಡಗು ಬಿನ್ನಾಣದಿಂದ ಕೂಡಿದ ಜೀವನ ನಡೆಸುತ್ತಿದ್ದರೆ, ಇನ್ನೊಂದೆಡೆ ಲಕ್ಷಾಂತರ ಜನರು ತಮ್ಮ ಜೀವನಕ್ಕಾಗಿ ಹೋರಾಡುತ್ತಿರುವ ಶೋಚನೀಯ ಪರಿಸ್ಥಿತಿಯಲ್ಲಿರುವುದು ಸರ್ವಕಾಲಿಕ ಸತ್ಯವಾಗಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರ ಜೀವನತತ್ವ ಹಾಗೂ ಸಂದೇಶಗಳು ಬಹಳ ಉಪಯುಕ್ತವಾಗಬಲ್ಲದು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರ ೧೫೪ ನೇ ಜನ್ಮ ದಿನಾಚರಣೆ ಅಂಗವಾಗಿ ಸಮರ್ಥ ಭಾರತ ಬೈಂದೂರು ಕಾರ್ಯಾಲಯದಲ್ಲಿ “ಉತ್ತಮನಾಗು ಉಪಕಾರಿಯಾಗು” ಎಂಬ ಸಂದೇಶವಿರುವ ಬ್ಯಾಂಡನ್ನು ಧರಿಸಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚಿಕೊಳ್ಳಲಾಯಿತು. ಸಮರ್ಥ ಭಾರತ ಸಂಚಾಲಕ ಶ್ರೀಧರ್ ಬಿಜೂರು ರವರು ಬೌದ್ಧಿಕ್ ನಡೆಸಿಕೊಟ್ಟರು. ಕಾರ್ಯಾಧ್ಯಕ್ಷ ಜಯಾನಂದ ಹೋಬಳಿದಾರ್, ಭಿಮೇಶ್ ಕುಮಾರ್ ಎಸ್.ಜಿ, ಗೋಪಾಲ ಕೃಷ್ಣ, ಶರತ್ ಶೆಟ್ಟಿ ಉಪ್ಪುಂದ, ರಾಜೇಶ್ ಬಿಜೂರು, ಗಣೇಶ್ ಗಾಣಿಗ, ಸುಕುಮಾರ ಶೆಟ್ಟಿ, ಸುರೇಶ್ ಬಿಜೂರು, ರಾಜೇಶ್ ಹೋಬಳಿದಾರ್, ಕೃಷ್ಣ ಕೊಡೇರಿ. ಲಿಂಗಯ್ಯ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೈಕಂಬ್ಳಿ ಸಂಯೋಜನೆಯ ಯಕ್ಷ ಸಂಕ್ರಾಂತಿ ಯಕ್ಷಗಾನವು ಜನವರಿ 14ರ ರಾತ್ರಿ ಮಾರಣಕಟ್ಟೆಯಲ್ಲಿ ಸಾಲಿಗ್ರಾಮ ಮೇಳ ಮತ್ತು ಅತಿಥಿ ಕಲಾವಿದರಿಂದ ಪೌರಾಣಿಕ ಪ್ರದರ್ಶನಗೊಳ್ಳಲಿದೆ. ಶ್ರೀ ಕೃಷ್ಣ-ಶ್ರೀ ರಾಮ-ಶ್ರೀ ರಾಜಾರಾಮ ಎಂಬ ಮೂರು ಪೌರಾಣಿಕ ಪ್ರಸಂಗಗಳು ಪ್ರದರ್ಶನಗೊಳ್ಳಲಿದೆ. ರಾಘವೇಂದ್ರ ಮಯ್ಯ, ರವಿ ಕುಮಾರ್ ಸುರಾಲು, ಆರ್ಗೋಡು, ಮಂಕಿ ಈಶ್ವರ ನಾಯ್ಕ್, ರಾಜೇಶ ಭಂಡಾರಿ, ವಂಡಾರು, ತುಂಬ್ರಿ ಜೊತೆಗೆ ಅತಿಥಿಯಾಗಿ ಹಿಲ್ಲೂರು, ಚಂದ್ರಕಾಂತ್ ಮೂಡುಬೆಳ್ಳೆ ಮೇಳೈಸಲಿದ್ದಾರೆ. ಜಲವಳ್ಳಿ ಮಾಗಧ ಮತ್ತು ಸು. ಚಿಟ್ಟಾಣಿ ಕೃಷ್ಣ ಈ ಭಾಗದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಪ್ರಪ್ರಥಮವಾಗಿ ಶಶಿಕಾಂತ ಶೆಟ್ಟಿ ವಾಲಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಕ್ಯಾದಿಗೆ, ಜಾರ್ಕಳ ಜೋಡಿ ಹಾಸ್ಯ ಮೆರಗು ಹೆಚ್ಚಿಸಲಿದೆ. ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾಸಂಘ ನಂದ್ರೋಳ್ಳಿ ಇದರ ಸಹಾಯಾರ್ಥ ನಡೆಯುವ ಈ ಕಾರ್ಯಕ್ರಮದಲ್ಲಿ ಚೌಕಿಮನೆ ಗುರು ಆರ್ಗೋಡು ಮೋಹನದಾಸ್ ಶೆಣೈಯವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ನಾಗರಾಜ್ ಶೆಟ್ಟಿ ನೈಕಂಬ್ಳಿ ಯವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9741474255
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಾಥಮಿಕ ಶಿಕ್ಷಣದ ಕುರಿತಾಗಿ ವಿಶೇಷ ಅಧ್ಯಯನ ನಡೆಸಲು ಜರ್ಮನಿಯಿಂದ ಆಗಮಿಸಿದ್ದ ಯೂವಾಗ್ ಮತ್ತು ಪಾವೆಲ್ ಭೇಟಿ ನೀಡಿ ಶಾಲಾ ಶೈಕ್ಷಣಿಕ ಚಟುವಟಿಕೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಬಳಿಕ ಶಾಲಾ ವಿದ್ಯಾರ್ಥಿಗಳು ಅವರೊಂದಿಗೆ ಸಂವಾದ ನಡೆಸಿ ಜರ್ಮನಿಯ ಶಿಕ್ಷಣ ವ್ಯವಸ್ಥೆ, ಅಲ್ಲಿನ ಸಂಸ್ಕೃತಿ, ಆಹಾರ ಪದ್ಧತಿ, ಆಚಾರ-ವಿಚಾರಗಳ ಕುರಿತಾಗಿ ಬಹಳ ಕುತೂಹಲದಿಂದ ಪ್ರಶ್ನಿಸಿ ಅರಿತುಕೊಂಡರು. ಶಾಲಾ ಮುಖ್ಯ ಶಿಕ್ಷಕ ಶೇಖರ ಕುಮಾರ್ ಜರ್ಮನಿಗರನ್ನು ಸ್ವಾಗತಿಸಿದರು. ಸಹಶಿಕ್ಷಕಿ ವಿಜಯಾ ಆರ್. ವಂದಿಸಿದರು. ಸಹಶಿಕ್ಷಕರಾದ ಜಯಲಕ್ಷ್ಮೀ ಬಿ., ಜಯರಾಮ ಶೆಟ್ಟಿ, ವಿಜಯ ಶೆಟ್ಟಿ, ಗೌರವ ಶಿಕ್ಷಕಿ ಚೈತ್ರಾ ಆರ್., ಪ್ರತಿಮಾ, ಕಿಮ್ ಗ್ನೈಡರ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಮತದಾನ ಇಂದು (ಜ.12) ಬರದಿಂದ ಸಾಗುತ್ತಿದೆ. 6 ಕ್ಷೇತ್ರಗಳ 16 ಮಂದಿ ಚುನಾವಣಾ ಕಣದಲ್ಲಿದ್ದು, ಅಭ್ಯರ್ಥಿಗಳು ಭವಿಷ್ಯ ಜ.14ರಂದು ನಿರ್ಧಾರವಾಗಲಿದೆ. ಕುಂದಾಪುರ ಎಪಿಎಂಸಿಯಲ್ಲಿ ಒಟ್ಟು 13 ಕ್ಷೇತ್ರಗಳ ಪೈಕಿ 11 ಕೃಷಿಕರ ಕ್ಷೇತ್ರ, ತಲಾ ಒಂದು ಟಿಎಪಿಸಿಎಂ ಹಾಗೂ ಮಾರಾಟ ಪ್ರತಿನಿಧಿಗಳ ಕ್ಷೇತ್ರವಿದ್ದು, ಕೃಷಿಕರ ಕ್ಷೇತ್ರದ 6 ಅಭ್ಯರ್ಥಿಗಳು ಹಾಗೂ ಸಹಕಾರಿ ಸಂಘಗಳ ಪ್ರತಿನಿಧಿ ಕ್ಷೇತ್ರದ ಓರ್ವರು ಅವಿರೋಧ ಆಯ್ಕೆ ಆಯ್ಕೆಯಾಗಿದ್ದಾರೆ. ಉಳಿದಂತೆ ಕೃಷಿಕರ ಕ್ಷೇತ್ರದ 6 ಸ್ಥಾನಗಳು ಹಾಗೂ ವರ್ತಕರ ಪ್ರತಿನಿಧಿ ಕ್ಷೇತ್ರದ 1 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕ್ಷೇತ್ರಗಳು: ಶಿರೂರು, ಕಂಬದಕೋಣೆ, ಕಿರಿಮಂಜೇಶ್ವರ, ತ್ರಾಸಿ, ವಂಡ್ಸೆ, ಅಂಪಾರು, ಸಿದ್ದಾಪುರ, ಹಾಲಾಡಿ, ಹೊಂಬಾಡಿ-ಮಂಡಾಡಿ, ತೆಕ್ಕಟ್ಟೆ, ಕುಂದಾಪುರ. ವರ್ತಕರ ಪ್ರತಿನಿಧಿ, ಟಿಎಪಿಸಿಎಂಸಿ ಅವಿರೋಧವಾಗಿ ಆಯ್ಕೆಗೊಂಡವರು: ಕೃಷ್ಣಾವತಿ ಶೆಡ್ತಿ (ಕಾಂಗ್ರೆಸ್- ಅಂಪಾರು ಕ್ಷೇತ್ರ ಮೀಸಲು ಮಹಿಳೆ) ಕೆ.ರಾಮ ನಾಯ್ಕ್ (ಬಿಜೆಪಿ-ಸಿದ್ದಾಪುರ ಕ್ಷೇತ ಅನುಸೂಚಿತ ಪಂಗಡ), ಗಣೇಶ್ ಶೇರಿಗಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕನ್ನುಕರೆ: ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಮೀಪ ರಾ.ಹೆ 66ರಲ್ಲಿ ಕಾರೊಂದು ಡಿವೈಡರ್ ಏರಿ ವಿರುದ್ಧ ದಿಕ್ಕಿಗೆ ಬಂದು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವಿಗೀಡಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ತಡರಾತ್ರಿ ಸಂಭವಿಸಿದೆ. ವ್ಯಾಗನರ್ ಕಾರಿನಲ್ಲಿದ್ದ ಕೇರಳ ಮೂಲದ ಶಿಬು (32) ಮೃತಪಟ್ಟವರು. ಅವರ ಜತೆ ಕಾರಿನಲ್ಲಿದ್ದ ರಿಜೇಶ್ ಹಾಗೂ ಪ್ರಮೋದ್ ಅವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇನ್ನೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕೇರಳದಿಂದ ಕುಂದಾಪುರದೆಡೆಗೆ ಸಾಗುತ್ತಿದ್ದ ಮಾರುತಿ ವ್ಯಾಗನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕವನ್ನು ಏರಿ ವಿರುದ್ಧ ದಿಕ್ಕಿಗೆ ಸಾಗಿದ ಪರಿಣಾಮವಾಗಿ ಪುಣೆಯಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಫಾರ್ಚೂನಾರ್ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ವ್ಯಾಗನರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಫಾರ್ಚೂನಾರ್ ಕಾರಿನ ಬಲಭಾಗ ನಜ್ಜುಗುಜ್ಜಾಗಿದೆ. ಫಾರ್ಚೂನಾರ್ ಕಾರಿನಲ್ಲಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಕೈಕಾಲು ತೊಳೆಯಲು ತೆರಳಿದ್ದ ಮಹಿಳೆಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಬೆಂಗಳೂರಿನ ಗಿರಿನಗರದಲ್ಲಿ ನಿವಾಸಿ ತುಳಸಿ ಹೆಚ್.ಆರ್ (56) ಮೃತ ದುರ್ದೈವಿ. ಬಿಜಾಡಿ ಗ್ರಾಮದ ಹೊದ್ರಾಳಿ ಎಂಬಲ್ಲಿನ ತಮ್ಮ ಸ್ವಂತ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ತುಳಸಿ ಅವರು, ದೇವರ ದರ್ಶನಕ್ಕಾಗಿ ಕೋಟೇಶ್ವರಕ್ಕೆ ದೇವಸ್ಥಾನಕ್ಕೆ ತೆರಳುವ ಮುಂಚೆ ಅಲ್ಲಿನ ಕೆರೆಗೆ ಕೈಕಾಲು ಮುಖ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಈ ವೇಳೆ ಕೆರೆಯ ಸುತ್ತಮುತ್ತ ಯಾರೂ ಇಲ್ಲದ್ದರಿಂದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾಕಿಹೋಗಿತ್ತು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
