ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಕಿರಣ್ಸ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ ಆಫ್ ಇಂಡಿಯಾ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಸಹನಾ ಕನ್‌ವೆನ್‌ಶನ್ ಸೆಂಟರ್ ಕೋಟೇಶ್ವರದಲ್ಲಿ ನಡೆಯಿತು. ಮೂರು ದಿನ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ಜನರಲ್ ಸೆಕ್ರೆಟರಿ ಶಿಹಾನ್ ಭರತ್ ಶರ್ಮಾ ಡೆಲ್ಲಿ ಉದ್ಘಾಟಿಸಿದರು. ಸಹನಾ ಗ್ರೂಪ್ ಮಾಲೀಕ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಗಣೇಶ್ ಶೆಟ್ಟಿ ಮೊಳಹಳ್ಳಿ, ಯಕ್ಷಗಾನ ಕಲಾರಂಗ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಯೋಗಿಂದರ್ ಚಾಹಾಣ್ ಡೆಲ್ಲಿ, ಲಕ್ಷ್ಮೀಕಾಂತ ಪಿ. ಸಾರಂಗ್ ಮುಂಬಯಿ, ತಾಲೂಕ್ ಬಿಲ್ಲವ ಸಂಘ ಪ್ರಧಾನ ಕಾರ‍್ಯದರ್ಶಿ ರಾಜೀವ ಕೋಟಿಯಾನ್, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಬಿಲ್ಲವ ಉಪಸ್ಥಿತರಿದ್ದರು. ಗ್ರ್ಯಾಂಡ್ ಚಾಂಪಿಯನ್ ಫೈಟಿಂಗ್‌ನಲ್ಲಿ ಬೆಂಗಳೂರು ಶರತ್ ಕಟಾದಲ್ಲಿ ಎಂ.ಪಿ. ಜಾಗ್ರತ್ ಬೆಂಗಳೂರು ಚಾಂಪಿಯನ್ ಆದರೆ ಹುಡುಗಿಯರ ವಿಭಾಗದಲ್ಲಿ ಕಟಾದಲ್ಲಿ ಮೇಘಾ ಉಡುಪಿ, ಫೈಟಿಂಗ್‌ನಲ್ಲಿ ಸನ ಉಡುಪಿ ಗ್ರ್ಯಾಂಡ್ ಚಾಂಪಿಯನ್…
Author: ನ್ಯೂಸ್ ಬ್ಯೂರೋ
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ. ಅದು ಅಕ್ಷರಶಃ ಹಬ್ಬದ ಸಡಗರ. ಪೇಪರ್, ಕಂಪ್ಯೂಟರ್ ಸ್ಕ್ರೀನ್ ಮೇಲೆ ಗೆರೆಗಳನ್ನು ಮೂಡಿಸಿ ನೋಡುಗರ ಮುಖ ಅರಳಿಸುವ ಮಂದಿಯೆಲ್ಲಾ ಜೊತೆಯಾದ ಸಂಭ್ರಮ. ವಿಚಾರ, ವಿನೋದ, ವಿಡಂಬನೆ, ವಿಮರ್ಷೆ, ಹರಟೆ. ಮೆದುಳಿಗೆ ಕೆಲಸ, ಮನಸ್ಸಿಗೆ ಮುದ, ಹೊರ ನಡೆಯುವಾಗ ಒಂದೊಳ್ಳೆ ಚಿಂತನೆ, ಗೆರೆ ಎಳೆಯಲೊಂದಿಷ್ಟು ಪ್ರೇರಣೆ. ಇದು ಕಾರ್ಟೂನು ಹಬ್ಬ. ಕುಂದಾಪುರದ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಟೂನು ಕುಂದಾಪುರ ಬಳಗದ ಆಶ್ರಯದಲ್ಲಿ ಜರುಗಿದ ಕಾರ್ಟೂನು ಹಬ್ಬ ಕಾರ್ಟೂನು ಪ್ರಿಯರಿಗಷ್ಟೇ ಅಲ್ಲದೇ ಕುಂದಾಪುರದ ನಾಗರೀಕರಿರಲ್ಲೂ ಒಂದು ಬಗೆಯ ಕಾರ್ಟೂನು ಕ್ರೇಜ್ ಹುಟ್ಟಿಸಿದೆ. ಸತತ ಮೂರನೇ ವರ್ಷ ಕುಂದೇಶ್ವರ ದೀಪೋತ್ಸವದ ಸಮಯದಲ್ಲಿ ಆಯೋಜನೆಗೊಳ್ಳುತ್ತಿರುವ ಕಾರ್ಟೂನು ಹಬ್ಬದಲ್ಲಿ ಭಾವಹಿಸಿದವರೆಲ್ಲ ಕುಂದೇಶ್ವರ ಹಬ್ಬದಂತೆ ಅವರಿಗೆ ಬೇಕಾದ ವಿಚಾರನ್ನು ಕೊಂಡು ಹೋಗಿದ್ದಾರೆ. [quote font_size=”15″ bgcolor=”#ffffff” bcolor=”#dd3333″ arrow=”yes” align=”right”]ಕಾರಿಕೇಚರ್ ಮೂಲಕ ಶಾಲೆಗೆ ದೇಣಿಗೆ: ಕಾರ್ಟೂನು ಹಬ್ಬದಲ್ಲಿ ಕಾರ್ಟೂನುಗಳಿಗಷ್ಟೇ ಸೀಮಿತವಾಗಿಲ್ಲ. ಕ್ಯಾರಿಕೇಚರ್ ಬಿಡಿಸಿ ಅದರಿಂದ ಬಂದ ಹಣವನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಹಕಾರಿ ಸಂಘಗಳ ಏಳಿಗೆಯಲ್ಲಿ ಗ್ರಾಮೀಣ ಭಾಗದ ಜನರು, ಕೃಷಿಕರು ಹಾಗೂ ಉದ್ದಿಮೆದಾರರ ಪಾಲು ದೊಡ್ಡದಿದ್ದು ಸಂಘದೊಂದಿಗಿನ ನಿರಂತರ ವ್ಯವಹಾರದಿಂದ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯವಾಗುತ್ತಿದೆ ಎಂದು ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಅವರು ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ನಾಗೂರು ಶಾಖೆಗೆ ಒಂದು ವರ್ಷ ಪೂರ್ಣಗೊಂಡ ಪ್ರಯುಕ್ತ ಆಯೋಜಿಸಲಾಗಿದ್ದ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಹಕರಿಗೆ ಸಕಾಲದ ಸ್ಪಂದನೆ, ಠೇವಣಿಗಳಿಗೆ ಉತ್ತಮ ಬಡ್ಡಿದರ ಹಾಗೂ ಸಕಾಲದಲ್ಲಿ ಆರ್ಥಿಕ ಅಗತ್ಯತೆಯನ್ನು ಪೂರೈಸುತ್ತಿರುವ ಸಂಘಕ್ಕೆ ಪ್ರತಿಯಾಗಿ ದೊರೆಯುತ್ತಿರುವ ಗ್ರಾಹಕರ ನೆರವು ಸಂಘದ ಯಶಸ್ಸಿಗೆ ಕಾರಣವಾಗಿದ್ದು ಪ್ರತಿಯೋರ್ವರಿಗೂ ಧನ್ಯವಾದ ಸಮರ್ಪಿಸುವುದಾಗಿ ಅವರು ಹೇಳಿದರು. ಶ್ರೀ ರಾಮ ಸೌಹಾರ್ದ ಕ್ರೇಡಿಟ್ ಕೋ-ಆಪರೇಟಿವ್ ಉಪಾಧ್ಯಕ್ಷ ವಿನಾಯಕ ರಾವ್, ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಪಿ. ಯಡ್ತರೆ, ಬೈಂದೂರು ವಲಯ ನವೋದಯ ಸಂಘದ ಮೇಲ್ವಿಚಾರಕ ಶಿವರಾಮ ಪೂಜಾರಿ ಯಡ್ತರೆ, ಶಾಖಾ ವ್ಯವಸ್ಥಾಪಕ ರಾಜೇಂದ್ರ ದೇವಾಡಿಗ ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹವ್ಯಾಸಿ ಕಲಾ ತಂಡ ಕಳವಾಡಿ ಶ್ರೀ ಮಾರಿಕಾಂಬ ಯುತ್ ಕ್ಲಬ್ ಇದರ ೨೦೧೬-೧೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಹಾಗೂ ಕಾರ್ಯದರ್ಶಿಯಾಗಿ ರಾಘವೇಂದ್ರ ಆಚಾರ್ಯ ಕಳವಾಡಿ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿರುವ ಸನರೈಸ್ ಮಾರ್ಕೆಟಿಂಗ್‌ನ ವಠಾರದಲ್ಲಿರುವ ಶ್ರೀ ಸುಧೀಂದ್ರ ಪ್ರಸಾದ ಕಟ್ಟಡದಲ್ಲಿ ಯುಪಿವಿಸಿಯಿಂದ ಬಾಗಿಲು ಹಾಗೂ ಕಿಟಕಿಯನ್ನು ತಯಾರಿಸುವ ಹೊಸ ಉದ್ಯಮವಾದ ‘ರೋಯ್ಸ ಯುಪಿವಿಸಿ ಡೋರ‍್ಸ & ವಿಂಡೋಸ್’ ಅನ್ನು ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು. ದೀಪ ಪ್ರಜ್ವಲಿಸಿ ಹಾಗೂ ಯಂತ್ರದ ಗುಂಡಿಯನ್ನು ಒತ್ತುವುದರ ಮೂಲಕ ಘಟಕದ ಆರಂಭಕ್ಕೆ ಚಾಲನೆ ನೀಡಿದರು. ಡಿ.ಜಿ.ಕೆ. ಸಮೂಹ ಸಂಸ್ಥೆಯ ಆಡಳಿತ ಪಾಲುದಾರರಾದ ದಿನೇಶ ಜಿ ಕಾಮತ್ ಸ್ವಾಮೀಜಿಯವರನ್ನು ಬರಮಾಡಿಕೊಂಡರು. ಯಂತ್ರಗಳ ಹಾಗೂ ತಯಾರಿಸ್ಪಡುವ ಉತ್ಪನಗಳ ಮಾಹಿತಿಯನ್ನು ಸ್ವಾಮೀಜಿಯವರಿಗೆ ರಾಜೇಂದ್ರ ಡಿ ಕಾಮತ್ ನೀಡಿದರು. ನಂತರ ಸ್ವಾಮೀಜಿಯವರಿಗೆ ಕುಟುಂಬದ ವತಿಯಿಂದ ಪಾದಪೂಜೆ ಸೇವೆ ಸಲ್ಲಿಸಲಾಯಿತು. ಈ ಸಂಸ್ಥೆಯ ವೆಬ್‌ಸೈಟನ್ನು ಹಾಗೂ ಮಾಹಿತಿ ಕೈಪಿಡಿಯನ್ನು ಗುರುವರ್ಯರು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಹೊಸ ಯುರೋಪಿಯನ್ ತಂತ್ರಜ್ಞಾನದಿಂದ ಇಲ್ಲಿ ಯುಪಿವಿಸಿ ಬಾಗಿಲು ಹಾಗೂ ಕಿಟಕಿಯನ್ನು ತಯಾರಿಸಲಾಗುತ್ತದೆ. ಸ್ಲೈಡಿಂಗ್, ಕೇಸ್‌ಮೆಂಟ್, ಫ್ರೆಂಚ್ ಡೋರ್, ಟಿಲ್ಟ್…
ನಾಲ್ಕು ದಿನಗಳ ಕಾರ್ಟೂನು ಹಬ್ಬಕ್ಕೆ ತೆರೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಸ್ಯ ಪ್ರಜ್ಞೆ ಕಲಾ ಪ್ರಕಾರದಲ್ಲಿಯೇ ಶ್ರೇಷ್ಠವಾದದ್ದು. ಅದು ಎಲ್ಲರಲ್ಲೂ ಕಾಣಲು ಸಾಧ್ಯವಿಲ್ಲ. ಹಾಸ್ಯ ಪ್ರಜ್ಞೆಯ ಜೊತೆಗೆ, ಸಮಾಜದ ಬಗೆಗೆ ಕಾಳಜಿ ಹಾಗೂ ಗೆರೆಗಳೊಂದಿಗೆ ಬೆರಳಾಡಿಸುವ ಚಾಕಚಕ್ಯತೆಯ ಸಮ್ಮಿಳಿತವಿದ್ದರೆ ಉತ್ತಮ ವ್ಯಂಗ್ಯಚಿತ್ರಕಾರರನ್ನು ರೂಪುಗೊಳ್ಳುವಂತೆ ಮಾಡುತ್ತದೆ ಎಂದು ನಟ, ಜಾದೂಗಾರ ಓಂ ಗಣೇಶ್ ಉಪ್ಪುಂದ ಹೇಳಿದರು. ಕಾರ್ಟೂನು ಕುಂದಾಪ್ರದ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಜರುಗಿದ ಕಾರ್ಟೂನು ಹಬ್ಬದ ಸಮಾರೋಪ ಹಾಗೂ ವಿವಿಧ ಸ್ವರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅಕ್ಷರ ಬರುವ ಮೊದಲೇ ಇತಿಹಾಸ ಸೃಷ್ಟಿಯಾದದ್ದು ಚಿತ್ರ ಕಲಾವಿದರಿಂದ. ನಮ್ಮ ನಾಗರಿಕತೆನ್ನೂ ಅವಲೋಕಿಸಿದಾಗಲೂ ಗೆರೆಗಳೂ ಸಂವಹನ ಮಾಧ್ಯಮವಾಗಿದ್ದನ್ನು ಕಾಣಬಹುದು. ಮಾತಿನಲ್ಲಿ ಹೇಳಬೇಕಾದ್ದನ್ನು, ಪುಟಗಟ್ಟಲೆ ಬರೆಯಬೇಕಾದ್ದನ್ನು ಸಣ್ಣ ಚಿತ್ರ ಸಂಕೇತಿಕರಿಸುತ್ತದೆ ಎಂದರೆ ಅದರ ಪ್ರಭಾವ ಅಂತಾದ್ದು ಎಂದರು. ಫ್ಯಾಶನ್ ಕೋರ್ಟ್ ಕುಂದಾಪುರದ ಮಾಲಿಕ ಕೆ. ಕಾರ್ತಿಕೇಯ ಮಧ್ಯಸ್ಥ, ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್…
ಆಡು ಭಾಷೆ ಉಳಿಸಿಕೊಳ್ಳುವುದೇ ನಮ್ಮೆದುರಿನ ಸವಾಲು: ರವಿ ಬಸ್ರೂರು ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಶಾಪಿಂಗ್ ಮಾಲುಗಳ ರೀತಿಯಲ್ಲಿ ಸಾಂಸ್ಕೃತಿಕ ಸಂಕೀರ್ಣಗಳು ಹುಟ್ಟಿಕೊಳ್ಳುವುದರ ಜೊತೆಗೆ ಸಾಂಸ್ಕೃತಿಕ ಪ್ರವಾಸೋದ್ಯಮ ಹೆಚ್ಚಾದಾಗ ಮಾತ್ರ ಸಾಂಸ್ಕೃತಿಕ ಅನನ್ಯತೆ ಹಾಗೂ ಸಂಸ್ಕೃತಿಯ ಉಳಿವು ಸಾಧ್ಯವಿದೆ ಎಂದು ಉದಯವಾಣಿ ಸಮೂಹ ಸಂಪಾದಕ ರವಿ ಹೆಗಡೆ ಹೇಳಿದರು. ಅವರು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಭವನದಲ್ಲಿ ಜರುಗಿದ ಅಭಿನಂದನ ಸಾಂಸ್ಕೃತಿಕ ಟ್ರಸ್ಟ್ ಒಂಭತ್ತನೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಅತಿಥಿ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿ ಇಂದಿನ ‘ವೇಷ ಭೂಷಣಗಳಿಂದ ವ್ಯಕ್ತಿಯ ಭೌಗೋಳಿಕ ಮೂಲವನ್ನು ಗುರುತಿಸುವುದು ಕಷ್ಟವಾಗುವಷ್ಟು ನಾವು ಬದಲಾಗಿದ್ದೇವೆ. ಆದರೆ ನಮ್ಮಲ್ಲಿ ಅಳಿಯದೆ ಉಳಿದಿರುವುದು ಹುಟ್ಟೂರಿನ ಆಡು ಭಾಷೆ ಮಾತ್ರ. ಅದನ್ನು ಉಳಿಸಿಕೊಂಡು ಗಟ್ಟಿಯಾಗಿ ಬೇರೂರುವಂತೆ ಮಾಡುವುದೇ ನಮ್ಮೆದುರಿನ ಸವಾಲು ಎಂದರು. ಕಾರ್ಯಕ್ರಮದಲ್ಲಿ ನಮ್ಮೂರ ಹಬ್ಬ 2017 ರ ಪೋಸ್ಟರ್ ಬಿಡುಗಡೆ, ಹಿಂದಿನ ವರ್ಷದ ಕಾರ್ಯಕ್ರಮದ ಸಿಡಿ ಹಾಗೂ ವೆಬ್ಸೈಟ್ ಲೋಕಾರ್ಪಣೆಗೊಳಿಸಲಾಯಿತು. ಸೃಜನ ಸಂಗೀತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಲೆ ಎಲ್ಲರನ್ನೂ ತಲುಪುವ ಸುಲಭ ಮಾಧ್ಯಮ. ಭಾವನೆಗಳನ್ನು ಪ್ರಕಟ ಪಡಿಸಲು ಹಲವು ದಾರಿಗಳಿದ್ದರೂ ಚಿತ್ರಗಳ ಮನಸ್ಸಿಗೆ ನಾಟಿದಷ್ಟು ಸುಲಭವಾಗಿ ಬೇರಾವುದೂ ನಾಟಲಾರವು ಎಂದು ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ಮನೋವೈದ್ಯ ಡಾ. ಪ್ರಕಾಶ್ ತೋಳಾರ್ ಹೇಳಿದರು. ಕಾರ್ಟೂನು ಕುಂದಾಪ್ರ ಬಳಗದ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಜರುಗಿದ ಕಾರ್ಟೂನು ಹಬ್ಬದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಸಂಪಾದಕೀಯ ಕಾರ್ಟೂನುಗಳ ಒಳಹೊರವುಳನ್ನು ಅರಿಯಲು ಆಯೋಜಿಸಲಾಗಿದ್ದ ‘ಎಡಿಟೂನ್ಸ್’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲ ಮಕ್ಕಳನ್ನು ಒಂದೇ ವೃತ್ತಿಯಲ್ಲಿ ಕಾಣಬೇಕೆಂಬ ಹಂಬಲ ಸರಿಯಲ್ಲ. ಮಕ್ಕಳಲ್ಲಿನ ಆಸಕ್ತಿಯನ್ನು ಗುರುತಿಸಿ ಆ ಕ್ಷೇತ್ರದಲ್ಲಿಯೇ ತೊಡಗಿಕೊಳ್ಳುವಂತೆ ಮಾಡಿದರೆ ಶ್ರಮದ ಸಾರ್ಥಕತೆ ತಿಳಿಯುವುದರ ಜೊತೆಗೆ ಯಶಸ್ಸೆಂಬುದು ಅರಸಿಕೊಂಡು ಬರುತ್ತದೆ ಎಂದರು. ಎಂಐಸಿ ಮಣಿಪಾಲದ ಉಪನ್ಯಾಸಕಿ ಶುಭಾ ಎಚ್. ಎಸ್ ಮಾತನಾಡಿ ಜನರನ್ನು ನಗಿಸುವುದು ಕಷ್ಟದ ಕೆಲಸ. ಆಡಳಿತದಲ್ಲಿರುವವರನ್ನು ಸದಾ ಕೆಣಕಿ, ಅಣಕಿಸಿ ಕೊನೆಗೆ ಮುಖದಲ್ಲೊಂದು ಮಂದಹಾಸ ಮೂಡುವಂತೆ ಮಾಡಲು ವ್ಯಂಗ್ಯಚಿತ್ರಕಾರರಿಂದ ಸಾಧ್ಯ. ಸಾವಿರ ಪುಟಗಳಲ್ಲಿ ತೆರೆದಿಡುವ ವಿಷಯವನ್ನು ಗರೆಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗು ಬದುಕನ್ನು ಪ್ರತಿಬಿಂಬಿಸಿದರೇ ವ್ಯಂಗ್ಯಚಿತ್ರ ನಗುವಿನ ಪ್ರತಿಬಿಂಬ. ಹಾಸ್ಯಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ವ್ಯಂಗ್ಯಚಿತ್ರಕಾರರು ಅದರ ಬೆಸುಗೆಯ ಕೊಂಡಿಯಾಗಿ ರೇಖೆಗಳ ಮೂಲಕ ನಗಿಸುವ ಜೊತೆಗೆ ಸಮಾಜಕ್ಕೊಂದು ಸಂದೇಶ ನೀಡುತ್ತಾರೆ ಎಂದು ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್ ಹೇಳಿದರು. ಅವರು ಕಾರ್ಟೂನು ಕುಂದಾಪ್ರ ಆಶ್ರಯದಲ್ಲಿ ಸ್ವಸ್ತಿಕ್ ಯೂತ್ ಕ್ಲಬ್ ಸಹಯೋಗದೊಂದಿಗೆ ಇಲ್ಲಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಕ್ಯಾರಿಕೇಚರ್ ಮೂಲಕ ನಿಧಿ ಸಂಗ್ರಹಿಸಿ ಬಿಆರ್ ರಾಯರ ಹಿಂದೂ ಶಾಲೆಗೆ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ವ್ಯಂಗ್ಯಚಿತ್ರಕಾರರು ಹಾಗೂ ಮಾಧ್ಯಮ ಸ್ವತಂತ್ರ್ಯಕ್ಕೆ ನಿರ್ಬಂಧ ಹೇರುವ ಕೆಲಸ ನಡೆಯಿತು. ಕಾರ್ಟೂನು ಬರೆಯುವಾಗ ನನ್ನನ್ನೂ ಬಿಡಬೇಡ ಎನ್ನುತ್ತಿದ್ದ ನೆಹರೂ ಅವರ ಮಗಳೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಿದ್ದರು. ಇದು ರಾಜಕಾರಣಿಗಳಲ್ಲಿ ಹಾಸ್ಯಪ್ರಜ್ಞೆ ಇಲ್ಲದ್ದನ್ನು ಸೂಚಿಸುತ್ತದೆ ಎಂದರು. ಸಮಾಜ ಸೇವಕ ಆರ್ಬೆಟ್ಟು ಜ್ಞಾನದೇವ ಕಾಮತ್ ಅವರ ಕ್ಯಾರಿಕೇಚರ್ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಿಲ್ಲವ ಸಂಘದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶದಲ್ಲಿ ೫೦೦, ೧೦೦೦ರೂ ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ ಜನಸಾಮಾನ್ಯರಿಗಾಗುತ್ತಿರುವ ತೊಂದರೆಯನ್ನು ಖಂಡಿಸಿ ಕೇಂದ್ರದ ಪ್ರತಿಪಕ್ಷಗಳ ಕರೆ ನೀಡಿದ್ದ ಆಕ್ರೋಶ್ ದಿವಸ್‌ಗೆ ಪ್ರತಿಯಾಗಿ ಉಪ್ಪಂದ ಪೇಟೆಯಲ್ಲಿ ಬೈಂದೂರು ಬಿಜೆಪಿ ಯುವ ಮೋರ್ಚಾ ಸಂಭ್ರಮ್ ದಿವಸ್ ಆಚರಿಸಿತು. ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಬ್ಯಾಂಕು ಹಾಗೂ ಪೇಟೆಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಕೇಂದ್ರ ಸರಕಾರದ ಈ ಮಹತ್ವದ ನಿರ್ಧಾರವನ್ನು ಸಂಭ್ರಮಿಸುವ ಕರೆ ನೀಡಿದರು.
