ಕಾರ್ಟೂನು ಹಬ್ಬ: ಭರಪೂರ ವಿನೋದ ವಿಚಾರ ಚಿಂತನೆ ಪ್ರೇರಣೆ

Call us

Call us

Call us

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ.
ಅದು ಅಕ್ಷರಶಃ ಹಬ್ಬದ ಸಡಗರ. ಪೇಪರ್, ಕಂಪ್ಯೂಟರ್ ಸ್ಕ್ರೀನ್ ಮೇಲೆ ಗೆರೆಗಳನ್ನು ಮೂಡಿಸಿ ನೋಡುಗರ ಮುಖ ಅರಳಿಸುವ ಮಂದಿಯೆಲ್ಲಾ ಜೊತೆಯಾದ ಸಂಭ್ರಮ. ವಿಚಾರ, ವಿನೋದ, ವಿಡಂಬನೆ, ವಿಮರ್ಷೆ, ಹರಟೆ. ಮೆದುಳಿಗೆ ಕೆಲಸ, ಮನಸ್ಸಿಗೆ ಮುದ, ಹೊರ ನಡೆಯುವಾಗ ಒಂದೊಳ್ಳೆ ಚಿಂತನೆ, ಗೆರೆ ಎಳೆಯಲೊಂದಿಷ್ಟು ಪ್ರೇರಣೆ. ಇದು ಕಾರ್ಟೂನು ಹಬ್ಬ.

Call us

Click Here

ಕುಂದಾಪುರದ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಟೂನು ಕುಂದಾಪುರ ಬಳಗದ ಆಶ್ರಯದಲ್ಲಿ ಜರುಗಿದ ಕಾರ್ಟೂನು ಹಬ್ಬ ಕಾರ್ಟೂನು ಪ್ರಿಯರಿಗಷ್ಟೇ ಅಲ್ಲದೇ ಕುಂದಾಪುರದ ನಾಗರೀಕರಿರಲ್ಲೂ ಒಂದು ಬಗೆಯ ಕಾರ್ಟೂನು ಕ್ರೇಜ್ ಹುಟ್ಟಿಸಿದೆ. ಸತತ ಮೂರನೇ ವರ್ಷ ಕುಂದೇಶ್ವರ ದೀಪೋತ್ಸವದ ಸಮಯದಲ್ಲಿ ಆಯೋಜನೆಗೊಳ್ಳುತ್ತಿರುವ ಕಾರ್ಟೂನು ಹಬ್ಬದಲ್ಲಿ ಭಾವಹಿಸಿದವರೆಲ್ಲ ಕುಂದೇಶ್ವರ ಹಬ್ಬದಂತೆ ಅವರಿಗೆ ಬೇಕಾದ ವಿಚಾರನ್ನು ಕೊಂಡು ಹೋಗಿದ್ದಾರೆ.

[quote font_size=”15″ bgcolor=”#ffffff” bcolor=”#dd3333″ arrow=”yes” align=”right”]ಕಾರಿಕೇಚರ್ ಮೂಲಕ ಶಾಲೆಗೆ ದೇಣಿಗೆ:
ಕಾರ್ಟೂನು ಹಬ್ಬದಲ್ಲಿ ಕಾರ್ಟೂನುಗಳಿಗಷ್ಟೇ ಸೀಮಿತವಾಗಿಲ್ಲ. ಕ್ಯಾರಿಕೇಚರ್ ಬಿಡಿಸಿ ಅದರಿಂದ ಬಂದ ಹಣವನ್ನು ಕುಂದಾಪುರ ಬಿ.ಆರ್. ರಾಯರ ಹಿಂದೂ ಶಾಲೆಗೆ ದೇಣಿಗೆಯಾಗಿ ಕೊಡಲಾಗಿದೆ. ದೊಡ್ಡ ಕಾರ್ಯಕ್ರಮ ಆಯೋಜನೆಯೇ ಖರ್ಚಿನ ದಾರಿಯಾಗಿರುವಾಗ ಅದರ ನಡುವೆಯೇ ದೇಣಿಗೆ ನೀಡುವ ಚಿಂತನೆ ಮಾತ್ರ ಕಾಟೂನಿಷ್ಠರ ಸಮಾಜಮುಖಿ ಚಿಂತನೆಗೆ ಹಿಡಿದ ಕನ್ನಡಿ.[/quote]

ಕಾರ್ಟೂನಿಷ್ಠರ ನೆಲದಲ್ಲಿ ಆಸಕ್ತರಿಗಿತ್ತು ಭರಪೂರ ಅವಕಾಶ:
ಹೇಳಿಕೇಳಿ ಕುಂದಾಪುರ ಕಾರ್ಟೂನಿಷ್ಠರ ತವರೂರು! ಪಂಜು ಗಂಗೊಳ್ಳಿ, ಸತೀಶ್ ಆಚಾರ‍್ಯ, ಚಂದ್ರ ಗಂಗೊಳ್ಳಿ, ಸಂತೋಷ್ ಸಸಿಹಿತ್ಲು, ಕೇಶವ ಸಸಿಹಿತ್ಲು, ರಾಮಕೃಷ್ಣ ಹೇರ್ಳೆ, ಚಂದ್ರಶೇಖರ ಶೆಟ್ಟಿ, ಜಯರಾಮ ಉಡುಪ, ಬಿ.ಜಿ. ಕಲೈಕಾರ್, ದಿನೇಶ್ ಹೊಳ್ಳ, ರವಿಕುಮಾರ್ ಗಂಗೊಳ್ಳಿ ಸೇರಿದಂತೆ ೨೫ಕ್ಕೂ ಹೆಚ್ಚು ವೃತ್ತಿಪರ, ಹವ್ಯಾಸಿ ವ್ಯಂಗ್ಯಚಿತ್ರಕಾರರು ಕುಂದಾಪುರ ಪರಿಸರವರೇ ಆಗಿದ್ದಾರೆ. ಹಾಸ್ಯ, ವಿಡಂಬನೆ ಕುಂದಾಪುರದ ಮಣ್ಣಿನ ಗುಣವೋ ಎಂಬಂತೆ ಕಾರ್ಟೂನಿಷ್ಠರ ದಂಡು ಇಲ್ಲ ಹುಟ್ಟಿಕೊಂಡಿದೆ. ಇವರೆಲ್ಲರನ್ನೂ ಯಶಸ್ವಿಯಾಗಿ ಸಂಘಟಿಸಿ ಕಾರ್ಟೂನು ಕುಂದಾಪ್ರ ಬಳಗವನ್ನು ಕಟ್ಟಿದ್ದ ಕಾರ್ಟೂನಿಷ್ಠ ಸತೀಶ್ ಅಚಾರ‍್ಯ ಕಾರ್ಟೂನು ಹಬ್ಬವನ್ನು ಕೂಡ ಯಶಸ್ವಿಯಾಗಿ ಸಂಘಟಿಸುತ್ತಿದ್ದಾರೆ.

ಕಾರ್ಟೂನು ಹಬ್ಬದಲ್ಲಿ ಆಸಕ್ತರಿಗಾಗಿ ಬೇರೆ ಬೇರೆ ವಿಭಾಗಗಳಲ್ಲಿ ಸ್ವರ್ಧೆ, ಕಾರ್ಯಾಗಾರ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರಿಗೆ ಮಾಯಾ ಕಾಮತ್ ಸ್ವರ್ಧೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕಾರ್ಟೂನು ಮೊಗ್ಗು, ಸೈಬರ್ ಕಾರ್ಟೂನು ಸ್ವರ್ಧೆ, ಕಾರ್ಟೂನ್‌ಗೆ ಡೈಲಾಗ್ ಬರೆಯೋದು, ಕಾರ್ಟೂನು ಬಿಡಿಸೋದು, ಸೆಲ್ಫಿ ಕಾರ್ಟೂನು ಸ್ವರ್ಧೆ ಸೇರಿದಂತೆ ಹಲವು ಸ್ವರ್ಧೆಗಳಿದ್ದರೇ, ಕಾರ್ಟೂನು ಸಂಬಂಧಿ ಕಾರ್ಯಾಗಾರ, ಪ್ರಮುಖ ಕಾರ್ಟೂನಿಷ್ಠರ ಅನುಭವ ಅಂತರಾಳ ಹೀಗೆ ಕಾರ್ಟೂನು ಆಸಕ್ತರಿಗೆ ಅವಕಾಶಗಳ ಬಾಗಿಲೇ ತೆರೆದಿತ್ತು. ಕುಂದಾಪುರ ಪರಿಸರದ ಕಾರ್ಟೂನಿಷ್ಠರೊಂದಿಗೆ ನಲವತ್ತಕ್ಕೂ ಅಧಿಕ ಕಾರ್ಟೂನಿಷ್ಠರನ್ನು ಈವರೆಗೆ ಕಾರ್ಟೂನು ಹಬ್ಬದಲ್ಲಿ ಕಾಣವು ಅವಕಾಶ ದೊರೆತಿದೆ.

Click here

Click here

Click here

Click Here

Call us

Call us

ಎಲ್ಲವೂ ಭಿನ್ನ:
ಕಾರ್ಟೂನು ಹಬ್ಬ ಸತೀಶ್ ಆಚಾರ‍್ಯ ಅವರ ಕನಸಿನ ಕೂಸು. ಇಲ್ಲಿ ಎಲ್ಲವೂ ಭಿನ್ನ. ಕುಂದಾಪುರದ ಕಲಾಮಂದಿರದ ಒಳಹೊಕ್ಕಿದವರಿಗೆ ಕಾರ್ಟೂನು ಲೋಕದಲ್ಲಿ ಸುತ್ತಿ ಬಂದ ಅನುಭವ. ಕಾರ್ಟೂನು ಹಬ್ಬದ ಆಮಂತ್ರಣದಿಂದ ಕಾರ್ಟೂನು ಪ್ರದರ್ಶನ, ಕಾರ್ಟೂನು ಪುಸ್ತಕಗಳು, ಸಂದೇಶ ಹೊತ್ತ ಹೊರ್ಡಿಂಗ್, ಓಪನ್ ಕ್ಯಾನ್ವಾಸ್, ಕಾರ್ಟೂನು ಬರೆಯಿರಿ, ಡೈಲಾಗ್ ಬರೆಯಿಸಿ ಸ್ವರ್ಧೆಯಲ್ಲಿ ಭಾಗವಹಿಸಿದವರು ಕೊನೆಯಲ್ಲಿ ಡ್ರಾಯಂಗ್ ಮಾಡಿದ ಬಳಿಕ ಹಾಳೆಯನ್ನು ಹಾಕಬೇಕಾದ ಅಂಚೆ ಡಬ್ಬಿ ಮಾದರಿಯ ಪೆಟ್ಟಿಗೆ, ಕಾರ್ಟನು ಕಾರ್ಯಾಗಾರದಲ್ಲಿ ಭಾಗವಹಿಸುವ ಅತಿಥಿಗಳಿಗೆ ಕೊನೆಯಲ್ಲಿ ಕೊಡುವ ಯಕ್ಷಗಾನ ಕಲಾವಿದನ ಪ್ರತಿಕೃತಿ ಹೊಂದಿದ ಸ್ಮರಣಿಕೆ. ಹೀಗೆ ಕಾರ್ಟೂನು ಹಬ್ಬದಲ್ಲಿ ಬಳಸುವ ಪೇಪರ್‌ನಿಂದ ಹಿಡಿದು ಎಲ್ಲವೂ ಭಿನ್ನ ಹಾಗೂ ಸದಾ ಮನಸ್ಸಿನಲ್ಲಿ ಮುದ್ರೆಯೊತ್ತುವ ಹಾಗೂ ಒಂದು ಬ್ರ್ಯಾಂಡ್ ಸೃಷ್ಟಿಸುವ ಮಾದರಿಗಳೇ. ಕುಂದಾಪ್ರ ಡಾಟ್ ಕಾಂ.

ಸತೀಶ್ ಆಚಾರ‍್ಯರಿಗೆ ಅವರೇ ಸಾಟಿ:
ಸತೀಶ್ ಆಚಾರ‍್ಯ ವಿಶ್ವಮಾನ್ಯ ವ್ಯಂಗ್ಯಚಿತ್ರಕಾರ. ದೇಶದ ಪ್ರಮುಖ ಪತ್ರಿಕೆ ಹಾಗೂ ಪೋರ್ಟೆಲ್‌ಗಳಲ್ಲಿ ಅವರ ವ್ಯಂಗ್ಯಚಿಂತ್ರಗಳು ಪ್ರಕಟವಾಗುತ್ತಿರುವುದಲ್ಲದೇ, ವಿಶ್ವದಾದ್ಯಂತ ಅವರ ಕಾರ್ಟೂನುಗಳಿಗೆ ಅದರದ್ದೇ ಆದ ಅಭಿಮಾನಿ ವರ್ಗವಿದೆ. ಎಂಬಿಎ ಮುಗಿಸಿ ಸಂದರ್ಶನಕ್ಕೆ ತೆರಳಿದ್ದವರಿಗೆ ಯಾರೂ ಬೇಕಾದರು ಎಂಬಿಎ ಮಾಡಬಹುದು ಆದರೆ ಎಲ್ಲರೂ ವ್ಯಂಗ್ಯಚಿತ್ರಕರರಾಗಲಾರರು ಎಂಬ ಮಾತು ಬದುಕಿನ ದಾರಿ ಬದಲಿಸಿತು. ಕಾಲೇಜು ದಿನಗಳಲ್ಲಿಯೇ ಇದ್ದ ಆಸಕ್ತಿಯ ಜೊತೆಗೆ ಮುಂಬೈನಲ್ಲಿ ಬದುಕಿನ ರೇಸ್ ಆರಂಭಿಸಿದ್ದರು. ಒಂದು ಹಂತದ ಯಶಸಸ್ಸು ತಲುಪಿದ ಬಳಿಕ ತನ್ನ ಹುಟ್ಟೂರಿಗೆ ಮರಳಿ ರೇಸ್ ಮುಂದುವರಿಸಿದ ಸತೀಶ್ ಅವರು, ತಾನು ಸಾಗುವ ಮಾರ್ಗದಲ್ಲಿ ತನ್ನವರನ್ನೂ ಕರೆದೊಯ್ಯುತ್ತಿದ್ದಾರೆ. ಕಾರ್ಟೂನಿಷ್ಠರನ್ನು ಒಟ್ಟಾಗಿಸಿ ಸತತ ಮೂರು ವರ್ಷದಿಂದ ಕಾರ್ಟೂನು ಹಬ್ಬ ಆಯೋಜಿಸಿ ಕುಂದಾಪುರ ಮಣ್ಣಿನಲ್ಲಿ ವ್ಯಂಗ್ಯಚಿತ್ರದ ಅಭಿರುಚಿಯನ್ನು ಹಾಗೆಯೇ ಉಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಕನಸುಗಳನ್ನು ಸಕಾರಗೊಳಿಸುವಲ್ಲಿ ಯಶವನ್ನೂ ಕಂಡಿದ್ದಾರೆ.

ಒಟ್ಟಿನಲ್ಲಿ ಕಾರ್ಟೂನು ಹಬ್ಬ ಎಂಬ ವಿನೂತನ ಪರಿಕಲ್ಪನೆ ಕುಂದಾಪುರ ಪರಿಸರದ ವ್ಯಂಗ್ಯಚಿತ್ರಕಾರರನ್ನು ಸಂಘಟಿಸುತ್ತಾ, ಕಾರ್ಟೂನು ಬಗೆಗೆ ಆಸಕ್ತಿ ಇರುವವರಿಗೆ ಮಾರ್ಗದರ್ಶನ ನೀಡುತ್ತಿದೆ. ಮನಬಂದಂತೆ ಗೀಜುವ ಗರೆಗಳು ಹೊಸ ಗೆರೆಗಳಿಗೆ ಸ್ಪೂರ್ತಿಯಾಗಿದೆ, ಅಲ್ಲಲ್ಲಿ ಕಂಡ ವ್ಯಂಗ್ಯಚಿತ್ರಗಳು ಹೊಸ ಚಿಂತನೆಗೆ ದಾರಿಯಾಗಿದೆ. ಕಾರ್ಟೂನು ಲೋಕ ಹೊಕ್ಕವರು ಬೇಕಿರುವುದನ್ನು ಕಂಡು ಕೊಂಡು ಹೊಗಿದ್ದಾರೆ. ಮನಸ್ಸುಗಳು ಅರಳಿದೆ. ಹಬ್ಬದಲ್ಲಿ ಆಗಬೇಕಿರುವುದೂ, ಆಗುವುದು ಇದೇ ಅಲ್ಲವೇ.

► ಕಾರ್ಟೂನು ಹಬ್ಬದ ವಿಶೇಷ ಪುಟ – http://kundapraa.com/cartoonuhabba

cartoon-habba-post138a7224138a7486cartoon-habba-2016-4138a7485cartoon-habba-2016-mukta-cartoonu-clasu-3cartoon-habba-2016-mukta-cartoonu-clasu-7  cartoon-habba-2016-mukta-cartoonu-clasu-5   cartoon-habba-editoons-1 cartoon-habba-2016-5 138a7302cartoon-habba-master-strock-1cartoon-habba-2016-cyberasura-5    cartoon-habba-2016-mukta-cartoonu-clasu-1cartoon-habba-2016-citra-nidhi-3 news-cartoon-habba-4th-day2cartoon-habba-valedictory-1cartoon-habba-2016-3  138a7237 138a7222cartoon-habba-2016-10cartoon-habba-2016-mukta-cartoonu-clasu-12138a7487138a7476 cartoon-habba-2016-9 cartoon-habba-2016-8 cartoon-habba-2016-7    cartoon-habba-2016-2 cartoon-habba-2016-1 cartoon-habba-2016-citra-nidhi-10cartoon-habba-2016-11138a7394cartoon-habba-valedictory-8138a7372cartoon-habba-2016-mukta-cartoonu-clasu-2138a7471

Leave a Reply