ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಪೊಲಿಯೋ ನಿರ್ಮೂಲನೆಯಲ್ಲಿ ರೋಟರಿಯ ಪಾತ್ರದ ಬಗ್ಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೃಹತ್ ಬ್ಯಾನರೊಂದನ್ನು ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ಅನಾವರಣ ಗೊಳಿಸಲಾಯಿತು. ವಿಶ್ವ ಪೊಲೀಯೋ ದಿನಾಚರಣೆ ಸಂಬಂಧ ನಡೆದ ಈ ಬೃಹತ್ ಬ್ಯಾನರನ್ನು ಉದ್ಘಾಟಿಸಿದ ರೋಟರಿ ಜಿಲ್ಲೆ ೩೧೮೨ ನಿಯೋಜಿತ ಗವರ್ನರ್ ಅಭಿನಂನದನ ಶೆಟ್ಟಿಯವರು ಮಾತನಾಡಿ, ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಹೋರಾಟದ ಯಶೋಗಾಥೆಯನ್ನು ಬಿಂಬಿಸುವ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನವರ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು. ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರೋಟರಿ ವಲಯ ೧ರ ಪಲ್ಸ್ ಪೋಲಿಯೋ ಕೊ.ಆರ್ಡಿನೇಟರ್ ಬಿ.ಎಂ. ಚಂದ್ರಶೇಖರ, ಮಾಜಿ ಸಹಾಯಕ ಗವರ್ನರ್ ಸತೀಶ್ ಎನ್. ಶೇರೆಗಾರ್, ರೋಟರಿ ಸನ್‌ರೈಸ್ ಸ್ಥಾಪಕಾಧ್ಯಕ್ಷರಾದ ದಿನಕರ ಆರ್. ಶೆಟ್ಟಿ ಸಹಕರಿಸಿದರು. ರೋಟರಿ ಸನ್‌ರೈಸ್ ಸದಸ್ಯರಾದ ಪ್ರಮೋದ ಕುಮಾರ ಶೆಟ್ಟಿ, ಸೀತಾರಾಮ, ಅರುಣಚಂದ್ರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆಯ ಸಬ್ಸಿಡಿಯನ್ನು ಬಿಡುಗಡೆಗೊಳಿಸಲು ಸಹಕಾರಿಸಿದ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಅವರನ್ನು ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಒಕ್ಕೂಟದ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಎಚ್.ಮಂಜು ಬಿಲ್ಲವ, ಉಪ್ಪುಂದ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕೆ.ಸೋಮಶೇಖರ ಖಾರ್ವಿ, ಶಿರೂರು ವಲಯ ಅಲ್ಪಸಂಖ್ಯಾತ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕಬ್ಸಿ ಮಹಮ್ಮದ್, ಶಿರೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗಪ್ಪ ಮೊಗವೀರ ಹಾಗೂ ನಾಡದೋಣಿ ಮೀನುಗಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ, ಸಾಲಿಗ್ರಾಮ ಘಟಕ ಮತ್ತು ಮಹಿಳಾ ಸಂಘಟನೆ ಸಾಲಿಗ್ರಾಮ ಇವರ ಆಶ್ರಯದಲ್ಲಿ, ಪಟ್ಟಣ ಪಂಚಾಯಿತಿ ಸಾಲಿಗ್ರಾಮ ಇವರ ಸಹಕಾರದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ಮಶಾನಗಳ ಸ್ವಚ್ಛತಾ ಆಂದೋಲನವು ಭಾನುವಾರ ನಡೆಯಿತು. ತೋಡ್ಕಟ್ಟು-ಪಾರಂಪಳ್ಳಿ ಸ್ಮಶಾನ ಸ್ವಚ್ಛತೆಯೊಂದಿಗೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕಾಂಚನ್ ಚಾಲನೆ ನೀಡಿದರು. ಇದೇ ಸಂದರ್ಭ ಸಂಘಟನೆ ಅಧ್ಯಕ್ಷ ಸತೀಶ್ ಮರಕಾಲ ಮಾತನಾಡಿ, ರಕ್ತದಾನ ಶಿಬಿರಗಳ ಮೂಲಕ ಗುರುತಿಸಿಕೊಂಡಿದ್ದ ಮೊಗವೀರ ಸಂಘಟನೆಯು ಇನ್ನುಳಿದ ಸಮಾಜ ಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ನಾಡೋಜ ಡಾ.ಜಿ.ಶಂಕರ್ ಅವರ ಪ್ರೇರಣೆಯ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ರೂಪಿಸುವ ಉದ್ದೇಶವಿರಿಸಿಕೊಂಡಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾಧ್ಯಕ್ಷರುಗಳಾದ ಜಯ ಸಿ ಕೋಟ್ಯಾನ್, ಎಂ.ಎಸ್.ಸಂಜೀವ, ಸತೀಶ್ ಎಂ.ನಾಯ್ಕ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಘವೇಂದ್ರ ಸುವರ್ಣ ಬೈಕಾಡಿ, ಉದ್ಯಮಿಗಳಾದ ಅರುಣ್ ಕುಂದರ್ ಗಿರಿಮುತ್ತು,…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ದೇವಾಲಯಗಳಲ್ಲಿ ನಡೆಯುವ ಕರ್ಮಕ್ಕೆ ವಿಶೇಷ ಫಲ ದೊರಕುವುದಲ್ಲದೇ ಅಚಲವಾದ ನಂಬಿಕೆಯಿಂದ ಪ್ರಾರ್ಥಿಸಿದಲ್ಲಿ ದೇವರ ಪರಿಪೂರ್ಣ ಅನುಗ್ರಹವಾಗುತ್ತದೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಸರ್ವರ ಸಹಕಾರದೊಂದಿಗೆ ಒಗ್ಗಟ್ಟಿನಿಂದ ಮುಂದುವರಿದರೆ ಏನನ್ನಾದರೂ ಸಾಧಿಸಬಹುದು ಎಂದು ರಾಯಚೂರಿನ ಉದ್ಯಮಿ ಯು. ಸದಾನಂದ ಪ್ರಭು ಹೇಳಿದರು. ಉಪ್ಪುಂದ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ಹಾಗೂ ನೂತನ ಆಡಳಿತ ಟ್ರಸ್ಟಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರು ಹಾಕಿಕೊಟ್ಟ ವಿಚಾರಧಾರೆ ಹಾಗೂ ಸ್ವ-ಪ್ರತಿಭೆಯಿಂದ ಸಪ್ತ ಕೊಂಕಣಿ ಸಮುದಾಯದ ಭವ್ಯ ಪರಂಪರೆ ನಡೆದುಬಂದಿದೆ. ನಮ್ಮಲ್ಲಿರುವ ದ್ವೇಷ, ಮನೆಯ ಸಮಸ್ಯೆಗಳ ಚರ್ಚೆ ಈ ಚೌಕಟ್ಟಿನ ಒಳಗೆ ತಾರದೇ ಸಹಬಾಳ್ವೆ, ನೆಮ್ಮದಿ ಹಾಗೂ ಸಂತೋಷಕ್ಕಾಗಿ ಆತ್ಮ, ದೇಹಶುದ್ದರಾಗಿ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ಪರಮೋನ್ನತಿಗಾಗಿ ದೇವರಲ್ಲಿ ಪ್ರಾರ್ಥಿಸಬೇಕು ಎಂದರು. ಡಾ. ಎಸ್. ಎನ್. ಪಡಿಯಾರ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀಧರ ಪ್ರಭು, ಎನ್. ಅಚ್ಚುತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಉಪ್ಪುಂದ ಬಿಜೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಿಗ್ಗೆ ಬೊಲೆರೊ ಪಿಕ್‌ಅಪ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಯಡ್ತರೆ ಸಸಿಹಿತ್ಲು ಅಣ್ಣಪ್ಪ ಪೂಜಾರಿ ಅವರ ಪುತ್ರ ಗುರುರಾಜ ಪೂಜಾರಿ (28) ಮೃತ ದುರ್ದೈವಿ. ಗುರುರಾಜ್ ಯಡ್ತರೆಯಿಂದ ಕುಂದಾಪುರದ ಕಡೆಗೆ ತಮ್ಮ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಬೈಂದೂರಿಗೆ ಬರುತ್ತಿದ್ದ ಬೊಲೆರೋ ಪಿಕ್‌ಅಪ್ ವಾಹನಕ್ಕೆ ಢಿಕ್ಕಿಹೊಡೆದ ಪರಿಣಾಮ ಗುರುರಾಜ್ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದ್ದು ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಗ್ರಾಮಸಭೆ, ಜಮಾಬಂದಿ ಹಾಗೂ ಗ್ರಾಮ ಪಂಚಾಯತ್‌ನ ಮೂಲಕ ನಡೆಯುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಗ್ರಾಮಸ್ಥರ ಭಾಗವಹಿಸುವಿಕೆ ಗರಿಷ್ಠ ಪ್ರಮಾಣದಲ್ಲಿರಬೇಕು. ಇಲ್ಲಿ ನಡೆದ ಪರಸ್ಪರ ಆರೋಗ್ಯಕರ ಚರ್ಚೆಯಿಂದ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುವುದರೊಂದಿಗೆ ಸಭೆಗಳು ಔಚಿತ್ಯ ಪೂರ್ಣವಾಗಿರಲು ಸಾಧ್ಯವಾಗುತ್ತದೆ ಎಂದು ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಹೇಳಿದರು. ಕಾಲ್ತೋಡು ಅಂಬೇಡ್ಕರ್ ಭವನದಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಗ್ರಾಮಸ್ಥರ ಕುಂದು ಕೊರತೆಗಳನ್ನು ತಿಳಿಸಲು, ಗ್ರಾಮಸ್ಥರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಮತ್ತು ವಿವಿಧ ಯೋಜನೆಗಳ ಮಾಹಿತಿ ಪಡೆಯಲು ಇಂತಹ ವೇದಿಕೆಗಳನ್ನು ಗ್ರಾಮಸ್ಥರು ಬಳಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ನೀಡಿದರು. ಜಮಾಬಂದಿ ಅಧಿಕಾರಿಯಾಗಿ ಭಾಗವಹಿಸಿದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಮಾತನಾಡಿ, ಈ ಭಾಗದ ಕೆಲವು ಕಾಮಗಾರಿಗಳನ್ನು ಸ್ಥಳ ಸಮೀಕ್ಷೆ ನಡೆಸಿ ಪರಿಶೀಲಿಸಿದ ನಂತರ ಚಾಲನೆ ನೀಡಲಾಗುವುದು ಎಂದ ಅವರು ಜಮಾಬಂದಿಯಲ್ಲಿ ಮಂಡಿಸಿದ ಗ್ರಾಪಂನ ವಾರ್ಷಿಕ ಲೆಕ್ಕಪತ್ರದ ಬಗ್ಗೆ ಗ್ರಾಮಸ್ಥರು ಯಾರೂ ಆಕ್ಷೇಪಣೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಾತಿ ಹಾಗೂ ಮೀಸಲಾತಿ ವ್ಯವಸ್ಥೆಯ ಪ್ರಭಾವ ಹಾಗೂ ತಲ್ಲಣಗಳು ಕುಟುಂಬದ ಮೇಲೆ ಬೀರಬಹುದಾದ ಪರಿಣಾಮವನ್ನು ಕಥಾವಸ್ತುವಾಗಿಸಿಕೊಂಡು ಗುಲ್ವಾಡಿ ಟಾಕೀಸ್ ಬ್ಯಾನರ್‌ನಲ್ಲಿ ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಿಸಿ, ನಿಖಿಲ್ ಮಂಜೂ ನಿರ್ದೇಶಿಸುತ್ತಿರುವ ‘ರಿಸರ್ವೆಶನ್’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಹಟ್ಟಿಯಂಗಡಿ ನಮ್ಮಭೂಮಿ ಸ್ಟಡಿ ಸೆಂಟರ್‌ನಲ್ಲಿ ಜರುಗಿತು. ಅಕ್ಕ ಅಮೇರಿಕಾದ ಮಾಜಿ ಅಧ್ಯಕ್ಷ ಡಾ. ವಿಶ್ವಾಮಿತ್ರ ಹಳೆಕೋಟೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕರಾವಳಿಯನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾಗಿರುವ ಕಲಾತ್ಮಕ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆಯುತ್ತಿರುವುದಲ್ಲದೇ, ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಲಾಭದ ನಿರೀಕ್ಷೆ ಇಲ್ಲದ ಕಲಾತ್ಮಕ ಚಿತ್ರವನ್ನು ನಿರ್ಮಿಸುವ ದೊಡ್ಡ ಕೆಲಸಕ್ಕೆ ಯಾಕೂಬ್ ಖಾದರ್ ಮುಂದಾಗಿರುವುದು ಅವರಲ್ಲಿನ ಕಲೆಯ ಸೆಳೆತವೇ ಸಾಕ್ಷಿ ಎಂದರು. ಚಿತ್ರ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಚಿತ್ರಗಳಲ್ಲಿ ನಟನೆ ಹಾಗೂ ದೇಶ ವಿದೇಶ ಸುತ್ತಿ ಜನಜೀವನವನ್ನು ಅರಿತ ಬಳಿಕ ಕಲಾತ್ಮಕ ಚಿತ್ರಗಳನ್ನು ಮಾಡಬೇಕು ಎನ್ನುವ ಆಸೆ ಮೂಡಿತ್ತು. ಅದು ನಿರ್ದೇಶಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಂಗ್ಲ ಭಾಷೆಯ ಹಿಂದೆ ಬಿದ್ದಿರುವ ಪೋಷಕರು ಇಂದಿನ ಮಕ್ಕಳ ಮೇಲೆ ಒತ್ತಡ ಹೇರುತ್ತಿರುವುದರಿಂದ ಮಾತೃಭಾಷೆಗೆ ಕುತ್ತು ಬಂದೊದಗಿದೆ. ಮನೆಯಲ್ಲಿಯೂ ಇಂಗ್ಲಿಷ್ ಭಾಷೆ ಬಳಕೆಯಾಗುತ್ತಿದ್ದು ಕನ್ನಡ ಭಾಷೆ ಹಾಗೂ ಸಂಸ್ಕೃತಿ ಬೇರು ಮರೆಯಾಗುತ್ತಿದೆ ಎಂದು ಲೇಖಕಿ ಮಾಧುರಿ ಕೃಷ್ಣ ವಿಷಾದ ವ್ಯಕ್ತಪಡಿಸಿದರು. ಅವರು ಕುಂದಾಪುರ ಬೋರ್ಡ್ ಹೈಸ್ಕೂಲು ಶ್ರೀ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಕುಂದಪ್ರಭ ಆಶ್ರಯದಲ್ಲಿ ಜರುಗಿದ ಬರಹಗಾರರ ಅಕ್ಷರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅನ್ಯಭಾಷಿಗರನ್ನೂ ಕನ್ನಡದತ್ತ ಸೆಳೆಯುವ ಕೆಲಸ ಆಗದಿದ್ದರೆ ಕನ್ನಡ ಭಾಷೆಗೆ ಅಪಾಯ ತಪ್ಪಿದ್ದಲ್ಲ. ಸಾಹಿತ್ಯ ಕ್ಷೇತ್ರ ಶ್ರೀಮಂತ ಹಾಗೂ ಸದೃಢವಾಗಿ ಬೆಳೆಸಲು ಯುವ ಸಮುದಾಯ ಪಣತೊಡಬೇಕಿದೆ ಎಂದ ಅವರು, ಇಂದಿನ ದಿನಮಾನದಲ್ಲಿ ಸಾಹಿತ್ಯ ಕ್ಷೇತ್ರವೂ ವೇಗವನ್ನು ಕಂಡುಕೊಂಡಿದ್ದು ಸ್ವಲ್ಪ ನಿಧಾನಿಸಿದರೂ ನಮ್ಮನ್ನು ಬೇರೊಬ್ಬರು ಹಿಂದಕ್ಕಿಕ್ಕಿ ಮುಂದೆ ಸಾಗುತ್ತಾರೆ. ಗಟ್ಟಿಯಾದ ಕನಸುಗಳ ಕಟ್ಟಿ ಅದನ್ನು ಸಾಕಾರ ಮಾಡುವ ಪ್ರಯತ್ನ ಮಾಡಿದರೆ ಸಾಹಿತ್ಯ ಕೇತ್ರದಲ್ಲಿ ಒಂದೊಂದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗೋಮಾತೆ ಎಂದಿಗೂ ಶ್ರೇಷ್ಟ. ದೇಶ, ಸಂಸ್ಕೃತಿ, ಧರ್ಮ ಉಳಿಯಬೇಕಾದರೆ ಗೋವುಗಳ ರಕ್ಷಣೆಗೆ ಒತ್ತು ನೀಡಬೇಕಿದೆ. ಈ ನೆಲೆಯಲ್ಲಿ ಗೋವಿನ ಕುರಿತಾದ ಧನಾತ್ಮಕ ಚಿಂತನೆಗಳಿಂದ ಮಾಡುವ ಎಲ್ಲಾ ಕಾರ್ಯಗಳೂ ಯಶಸ್ಸನ್ನು ಕಾಣಲು ಸಹಕಾರಿಯಾಗುತ್ತದೆ ಎಂದು ಧಾರ್ಮಿಕ ಮುಖಂಡ, ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಗೋವಾದ ರಾಮನಾಥೀ ಕ್ಷೇತ್ರದಿಂದ ಆಗಮಿಸಿದ ಗೋಕಿಂಕರ ರಥಯಾತ್ರೆಯನ್ನು ಸ್ವಾಗತಿಸಿ, ಗೋಧ್ವಜಾರೋಹಣಗೈದು ಮಾತನಾಡಿದರು. ಭಾರತೀಯ ಜನಜೀವನದೊಂದಿಗೆ ಗೋವಿನ ಇತಿಹಾಸ ತಳಕುಹಾಕಿಕೊಂಡಿದೆ. ಅಲ್ಲದೇ ವಿಜ್ಞಾನದ ಸಂಶೋಧನೆಗಳೂ ಗೋವಿನ ಹಿರಿಮೆಯನ್ನು ಒಪ್ಪಿಕೊಂಡಿವೆ ಎಂದ ಅವರು ರಾಮಚಂದ್ರಾಪುರದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕಳೆದೆರಡು ದಶಕಗಳಿಂದ ಭಾರತೀಯ ಗೋತಳಿಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆವನ್ನು ಹಮ್ಮಿಕೊಳ್ಳತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಗೋಕಿಂಕರ ರಥಯಾತ್ರೆಯ ಮುಖ್ಯಸ್ಥ ಶಿಶಿರ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿ ಶ್ರೀ ರಾಮಚಂದ್ರಾಪುರ ಮಠದ ಮೂಲಕ ಮಾಡುತ್ತಿರುವ ಗೋರಕ್ಷಣಾ ಕಾರ್ಯಗಳಿಂದ ರಾಜ್ಯಾದ್ಯಂತ ಲಕ್ಷಾಂತರ ಗೋಪ್ರೇಮಿಗಳು ಹುಟ್ಟಿಕೊಂಡಿದ್ದು, ಹಲವಾರು ಗೋಶಾಲೆಗಳು ಸ್ಥಾಪನೆಯಾಗಿವೆ. ದೇಶೀ…
ನ್ಯೂಜಿಲ್ಯಾಂಡ್ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಗೆ ವಿಶ್ವನಾಥ್ ಮಲೇಷ್ಯಾ ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಗುರುರಾಜ್ ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ ಹೆಮ್ಮೆಯ ಕುವರರು ಕ್ರೀಡಾಕ್ಷೇತ್ರದಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟಿದ್ದಾರೆ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಿ ನಮ್ಮೂರಿಗೆ ಹೆಮ್ಮೆ ತಂದಿದ್ದ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗ ಈ ಭಾರಿ ನ್ಯೂಜಿಲ್ಯಾಂಡ್‌ನಲ್ಲಿ ನಡೆಯಲಿರುವ ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಗೆ ಆಯ್ಕೆಯಾಗಿದ್ದರೇ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಂಡ್ಸೆ ಜಡ್ಡುವಿನ ಗುರುರಾಜ್ ಮಲೇಷ್ಯಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿ ತಮ್ಮ ಸಾಮಥ್ಯ ಪ್ರದರ್ಶನಕ್ಕೆ ಅಣಿಯಾಗುತ್ತಿದ್ದಾರೆ. ಕಷ್ಟಗಳೊಂದಿಗೆ ಸೆಣಸಿದ ಹೆಮ್ಮೆಯ ಕ್ರೀಡಾಪಟು ವಿಶ್ವನಾಥ ಗಾಣಿಗ: ಬೇಕರಿಯಲ್ಲಿ ಕೆಲಸ ಮಾಡುತ್ತಾ, ಮರದ ದಿಮ್ಮಿಗಳನ್ನು ಲಾರಿಗಳಿಗೆ ತುಂಬುತ್ತಾ ಕುಟುಂಬದ ಆರ್ಥಿಕ ಸಂಕಷ್ಟ ನೀಗಿಸುತ್ತಿದ್ದ ವಿಶ್ವನಾಥ ಗಾಣಿಗ ಇಂದು ನಮ್ಮ ನಡುವಿನ ಹೆಮ್ಮೆಯ ಕ್ರೀಡಾಪಟು. ತನ್ನ ಕೆಲಸ ಓದಿನ ನಡುವೆಯೇ ಕ್ರೀಡಾಪಟುವಾಗಬೇಕೆಂಬ ಅದಮ್ಯ ತುಡಿತಕ್ಕೆ ತಕ್ಕಂತೆ ಹಾಕಿದ ಶ್ರಮವೇ…
