Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರುವಿನಲ್ಲಿ ಅಧ್ಯಾಪಕನಾಗಿ 2 ದಶಕಗಳ ಕಾಲ ಸೇವೆ ಸಲ್ಲಿಸಿದ ದಿನಗಳು ನನ್ನ ಬದುಕಿನಲ್ಲಿ ಸದಾ ಅಚ್ಚಳಿಯದೇ ಉಳಿದ ಮಧುರ ನೆನಪುಗಳಾಗಿವೆ. ಇಲ್ಲಿನ ಜನರು, ವಿದ್ಯಾರ್ಥಿಗಳು ಅಪಾರ ಪ್ರೀತಿಯನ್ನು ಕೊಟ್ಟಿರುವ ಜೊತೆಗೆ ಇದೀಗ ಯಜ್ಞ ಪ್ರಶಸ್ತಿ ನೀಡಿ ಗೌರವಿಸಿರುವುದು ಸೇವೆಗೆ ಸಂದ ಫಲವೆಂದು ಸಾರ್ಥಕ ಭಾವ ತುಂಬಿದೆ ಎಂದು ನಿವೃತ್ತ ಅಧ್ಯಾಪಕ ಕೊರಗಯ್ಯ ಶೆಟ್ಟಿ ಹೇಳಿದರು. ಅವರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ದಿ.ಯಜ್ಞನಾರಾಯಣ ಐತಾಳ್‌ರ ಸ್ಮರಣಾರ್ಥ ಕೊಡಮಾಡುವ ಯಜ್ಞ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದರು. ಭಾರತೀಯ ಜೀವ ವಿಮಾ ನಿಗಮ ಶಿವಮೊಗ್ಗ ಶಾಖೆಯ ಅಭಿವೃದ್ಧಿ ಅಧಿಕಾರಿ ರವೀಂದ್ರ ಐತಾಳ್ ಮಾತನಾಡಿ ದಿ.ಯಜ್ಞನಾರಾಯಣ ಐತಾಳ್‌ರು ಉಪ್ಪಿನಕುದ್ರುವಿನಲ್ಲಿ ಫ್ರೌಡಶಾಲೆಯ ನಿರ್ಮಾಣಕ್ಕೆ ಅವಿರತ ಶ್ರಮವಹಿಸಿರುವುದನ್ನು ಸ್ಮರಿಸಿಕೊಂಡು ಅವರು ಊರು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿ ದೃಷ್ಠಿಯಿಂದ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ ಕೊಂಡಿದ್ದರು. ಅವರ ಮಕ್ಕಳಾಗಿ ತುಂಬು ಅಭಿಮಾನದಿಂದ ದಿ.ಯಜ್ಞನಾರಾಯಣ ಐತಾಳ್‌ರ ಹೆಸರಿನಲ್ಲಿ ಸಾಧಕ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಯಕ್ಷಿ ಅನ್ನಪೂರ್ಣೇಶ್ವರಿ ಯುವ ಸಂಘಟನೆ ವಂಡ್ಸೆ ಇದರ ವಾರ್ಷಿಕ ಸಭೆ ಇತ್ತೀಚೆಗೆ ನಡೆಯಿತು. ೨೦೧೭ರ ಶಿವರಾತ್ರಿ ಆಚರಣೆ, ಸಂಘಟನೆಯ ವಾರ್ಷಿಕೋತ್ಸವ, ಸಾಮಾಜಿಕ ಚಟುವಟಿಕೆಗಳ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ೨೦೧೬-೧೭ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಉಮೇಶ ಭಟ್ರಬೆಟ್ಟು, ಕಾರ್ಯದರ್ಶಿಯಾಗಿ ದಿನಕರ ಗಾಣಿಗ ಬಳಗೇರಿ, ಗೌರವಾಧ್ಯಕ್ಷರಾಗಿ ನಾಗರಾಜ ಆಚಾರ್ಯ, ಉಪಾಧ್ಯಕ್ಷರಾಗಿ ಸದಾನಂದ ಎಂ.ವಂಡ್ಸೆ, ಜೊತೆ ಕಾರ್ಯದರ್ಶಿಯಾಗಿ ಶಶಿಧರ ಶೆಟ್ಟಿ ವಂಡ್ಸೆ, ಖಜಾಂಚಿಯಾಗಿ ಅಣ್ಣಪ್ಪ ಗಾಣಿಗ ಮಲ್ಲಾರಿ, ಸಂಘಟನಾ ಕಾರ್ಯದರ್ಶಿಯಾಗಿ ವಿಶ್ವನಾಥ ಪೂಜಾರಿ ವಂಡ್ಸೆ, ಸಾಂಸ್ಕೃತಿಕ ಕಾರ್ಯದರ್ಶಿ ರಾಘವೇಂದ್ರ ಹೊಲಾಡು, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿ ರಾಮಚಂದ್ರ ಆಚಾರ್ಯ ವಂಡ್ಸೆ, ಕ್ರೀಡಾ ಕಾರ್ಯದರ್ಶಿಯಾಗಿ ರಘುರಾಮ ಮಡಿವಾಳ, ಜೊತೆ ಕ್ರೀಡಾ ಕಾರ್ಯದರ್ಶಿ ಪ್ರವೀಣ ಶೆಟ್ಟಿ, ಸಲಹ ಸಮಿತಿ ಸದಸ್ಯರಾಗಿ ದಿನೇಶ ಕಾಂಚನ್ ಜಯರಾಜ್ ವಂಡ್ಸೆ, ಲೆಕ್ಕ ಪರಿಶೋಧಕರು ಶಂಕರ್ ಆಚಾರ್ಯ ಟೈಲರ್, ಗೌರವ ಸಲಹೆಗಾರರು ವಾಸು ಜಿ.ನಾಯ್ಕ್, ದಿನೇಶ ಬಿಲ್ಲಾ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳಲ್ಲಿ ಒಬ್ಬರಲ್ಲಿ ಒಂದೊದು ಪ್ರತಿಭೆಗಳು ಇರುತ್ತದೆ ಅದನ್ನು ಗುರುತಿಸುವುದು ಮಖ್ಯು ಅದರಿಂದ ಕಾಲೇಜಿನಲ್ಲಿ ನಡೆಯುವ ಪಠೇತ್ಯರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಗಳನ್ನು ತೋರಿಸುವುದರ ಮೂಲಕ ವಿದ್ಯಾರ್ಥಿ ಜೀವನವನ್ನು ಉಜ್ವಲಗೊಳಿಸಲು ಸಾಧ್ಯ ಅದರಿಂದ ಸಿಕ್ಕ ಅವಕಾಶಗಳನ್ನು ಸದುಉಪಯೋಗ ಪಡೆದುಕೊಂಡಗ ಮಾತ್ರ ಮುಂದೆ ಯಶ್ವಸಿಯಾಗಲು ಸಾಧ್ಯ ಎಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು. ಅವರು ಕೋಟೇಶ್ವರ ಶ್ರೀ ಕಾಳಾವರ ವರದರಾಜ ಎಂ, ಶೆಟ್ಟಿ ಸರಕಾರಿ ಪ್ರಥಮ ದರ್ಜೇ ಕಾಲೇಜಿನಲ್ಲಿ ನಡೆದ ಸಿಂಚನ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಶ್ರೀ ಕಾಳಾವರ ವರದರಾಜ ಎಂ, ಶೆಟ್ಟಿ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್ ಅಧ್ಯಕ್ಷತೆ ವಹಿದರು. ಸಾಂಸ್ಕೃತಿ ಸಮಿತಿ ಸಂಚಾಲಕಿ ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಉಷಾದೇವಿ ಜೆ.ಎಸ್ ಉಪಸ್ಥಿತರಿದರು. ಅತಿಥಿ ಉಪನ್ಯಾಸಕ ರಂಜಿತ್ ಕುಮಾರ ಶೆಟ್ಟಿ ವಕ್ವಾಡಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ, ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ನಾಡ ಗ್ರಾಮ ಪಂಚಾಯತ್ ಕಛೇರಿ ಎದುರು ದಿನಾಂಕ : ೨೨ ಸೆಪ್ಟೆಂಬರ್ ೨೦೧೬ ರಂದು ನಿವೇಶನ ರಹಿತ ಅರ್ಜಿದಾರರು ಭೂಮಿ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ನಾಡ ಗುಡ್ಡೆಯಂಗಡಿ ರಾಮಕೃಪಾ ಸಭಾಭವನದಲ್ಲಿ ಪೂರ್ವಬಾವಿ- ಜರಗಿದ ನಿವೇಶನ ರಹಿತರ ಸಮಾವೇಶವನ್ನು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡುತ್ತಾ- ನಿವೇಶನ ರಹಿತರ ಅಂತಿಮ ಪಟ್ಟಿ ೩೨೦ ಫಲಾನುಭವಿಗಳನ್ನು ನಾಡ ಗ್ರಾಮ ಪಂಚಾಯತ್ ವತಿಯಿಂದ ಗುರುತಿಸಿ ವರ್ಷ ಕಳೆದರೂ ಈ ತನಕ ಗುರುತಿಸಿರುವ ಸರಕಾರಿ ಜಮೀನು ಹಕ್ಕು ಪತ್ರ ವಿತರಣೆ ಮಾಡದ ಗ್ರಾಮ ಪಂಚಾಯ್ತಿ ಆಡಳಿತ ನೀತಿಯನ್ನು ತೀವ್ರವಾಗಿ ಖಂಡಿಸಿದರು. ನಾಡ ಗ್ರಾಮದ ಮುಖ್ಯ ಬೀದಿಯಲ್ಲಿ ನಿವೇಶನ ರಹಿತರು ಮೆರವಣಿಗೆ ಮೂಲಕ ಘೋಷಣೆ ಕೂಗುತ್ತಾ -…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕೋಟೇಶ್ವರದಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಪುಟ್ಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ.ನೌಮಾನ್, ತಾಬಿಷ್, ಸಮಾನ್, ಫೈಝಾನ್, ದಾನಿಯಲ್, ನವಾಝ್, ಫವಾಝ್, ಅಫ್ತಾಭ್, ಅಯಾನ್, ನಾಗರಾಜ್, ಝೈನ್, ಸಾದತ್ ಹಸನ್ ಮತ್ತು ಫಿರಾಜ್ ಅಹ್ಮದ್ ತಾವು ಗಳಿಸಿದ ಟ್ರೋಫಿಯೊಂದಿಗೆ.ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ, ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ ಅವರು ಚಿತ್ರದಲ್ಲಿದ್ದಾರೆ. ಚಿತ್ರ ವರದಿ : ನರೇಂದ್ರ ಎಸ್ ಗಂಗೊಳ್ಳಿ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಆಸೋಡು ಶ್ರೀ ನಂದಿಕೇಶ್ವರ ದೇವಸ್ಥಾನ, ಆನಗಳ್ಳಿ ಇಲೆಕ್ಟ್ರಿಶಿಯನ್ ಅಂಗಡಿ ಹಾಗೂ ಬಸ್ರೂರು ಮಾರ್ಗದಲ್ಲಿನ ಮೊಬೈಲ್ ಅಂಗಡಿಗೆ ಕನ್ನ ಹಾಕಿರುವ ಕಳ್ಳರು ಸಾವಿರಾರು ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಆಸೋಡು ಬೆಳ್ಳಿಕಾನ್ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ದೇವರ ಬೆಳ್ಳಿಯ ಪ್ರಭಾವಳಿ, ಬಾಗಿಲಿನ ಬೆಳ್ಳಿಯ ಕವಚ, ದೇವಳದ ಹೊರಬಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಹಾಗೂ ಸಿಸಿ ಕ್ಯಾಮರಾದ ಡಿವಿಆರ್ ಕದ್ದೊಯ್ದಿದ್ದಾರೆ. ಆನಗಳ್ಳಿ ಶ್ರೀ ಮಾತಾ ಇಲೆಕ್ಟ್ರಿಕಲ್ಸ್ ಅಂಗಡಿಗೆ ಶಟರ್ ಮುರಿದು ನುಗ್ಗಿರುವ ಕಳ್ಳರು ಫ್ಯಾನ್, ಸ್ವಿಚ್ ಸೇರಿದಂತೆ ಸುಮಾರು 35,000ರೂ. ಮೌಲ್ಯದ ಸೊತ್ತುಗಳನ್ನು ಕದ್ದೊಯ್ದಿದ್ದಾರೆ. ಬಸ್ರೂರು ಬಿ.ಹೆಚ್ ರಸ್ತೆಯ ಎಸ್.ಎಸ್. ಫ್ಯಾನ್ಸಿ ಮೊಬೈಲ್ ಅಂಗಡಿಯ ಶಟರ್ ಮುರಿದು ನುಗ್ಗಿರುವ ಕಳ್ಳರು ಏಳು ಮೊಬೈಲ್ ಪೋನ್ ಹಾಗೂ ಇನ್ನಿತರ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್, ವೃತ್ತ ನಿರೀಕ್ಷಕ ರಾಘವ ಪಡೀಲ್, ಕುಂದಾಪುರ ಠಾಣಾಧಿಕಾರಿ ನಾಸಿರ್ ಹುಸೇನ್, ಅಪರಾಧ ವಿಭಾಗದ ಎಸೈ ದೇವರಾಜ್ ಘಟನಾ ಸ್ಥಳಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದ ಶ್ರೀ ನಾಗಬನಲ್ಲಿ ಜರುಗುವ 27ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಶಿವಾನಂದ ಚಂದನ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರಾಗಿ ಪ್ರದೀಪ್ ಆಚಾರ್ಯ, ಮಂಜುನಾಥ ದಾಸ್, ಅಕ್ಷಯ ಶೆಟ್ಟಿ, ಸಂತೋಷ್ ಆಚಾರ್ಯ ಆಯ್ಕೆಯಾಗಿದ್ದರೇ ಕಾರ್ಯದರ್ಶಿಯಾಗಿ ಗುರುರಾಜ ಆಚಾರ್ಯ, ವಿಕ್ರಮ್, ಸುಬ್ರಹ್ಮಣ್ಯ ಆಚಾರ್ಯ, ಪ್ರಶಾಂತ ಆಚಾರ್ಯ ಆಯ್ಕೆಗೊಂಡಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ ಹಕ್ಲುಮನೆ, ಮಂಜುನಾಥ ಹಾಡಿಮನೆ, ನಾಗರಾಜ ಶೆಟ್ಟಿ, ಶ್ರೀನಿವಾಸ ಆಚಾರ್ಯ, ಮಂಜುನಾಥ ಆಚಾರ್ಯ, ಮಂಜುನಾಥ ಸಿದ್ಧನಹಿತ್ಲು, ರಾಘವೇಂದ್ರ ಆಚಾರ್ಯ, ದಯಾನಂದ ಚಂದನ್; ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ, ಸೋಮಶೇಖರ ಆಚಾರ್ಯ, ರಾಜಶೇಖರ್, ಪ್ರಮೋದ್ ಆಚಾರ್ಯ, ಚಂದನ್, ನಟರಾಜ್ ಆಚಾರ್ಯ, ಸುದೇಶ ಆಚಾರ್ಯ, ಪ್ರಭಾಕರ ಮೊಗವೀರ್, ಮಂಜುನಾಥ ಚಂದನ್, ಸಂತೋಷ್ ಶೇರುಗಾರನಹಿತ್ಲು, ವಸಂತ ಪೂಜಾರಿ, ನಾಗರಾಜ ಚಂದನ್; ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವರಾಜ ಆಚಾರ್ಯ, ಪ್ರವೀಣ ಆಚಾರ್ಯ, ಮಹೇಶ್, ಗುರುಪ್ರಸಾದ್ ಆಚಾರ್ಯ, ಹರೀಶ್ ಎನ್., ಗೋಪಾಲ್ ಹಾಡಿಮನೆ, ಗುರುರಾಜ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತ ದೇಶ ಎಂದಿಗೂ ಶಾಂತಿ ಬಯಸುತ್ತದೆ. ಆದರೆ ಪಾಕಿಸ್ತಾನದ ಭಯೋತ್ಪಾದರು ದೇಶ ಶಾಂತಿ ಕದಡುವ ಕೆಲಸಕ್ಕೆ ಮುಂದಾಗಿದ್ದಾರೆ. ಸೈನಿಕರ ನಿದ್ರೆಯಲ್ಲಿದ್ದಾಗ ಅವರ ಮೇಲೆ ದಾಳಿ ನಡೆಸಿ 18 ವೀರ ಸೈನಿಕರ ಸಾವಿಗೆ ಕಾರಣರಾದ ಕೃತ್ಯ ಖಂಡನೀಯವಾದುದು ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದರು. ಅವರು ಬೈಂದೂರು ಬಿಜೆಪಿ ಯುವಮೋರ್ಚಾ ವತಿಯಿಂದ ಇಲ್ಲಿನ ಬೈಪಾಸ್ ಬಳಿ ಆಯೋಜಿಸಲಾಗಿದ್ದ ‘ಯೋಧರಿಗೆ ನಮನ’ ಕಾರ್ಯಕ್ರಮದಲ್ಲಿ ಹುತಾತ್ಮ ಯೋಧನಿಗೆ ಪುಷ್ಪಾರ್ಚನೆಗೈದು, ಮೊಂಬತ್ತಿ ಬೆಳಗಿ ಮಾತನಾಡಿದರು. ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ಮಾತನಾಡಿ ನಮ್ಮ ದೇಶದ ಬುದ್ಧಿಜೀವಿಗಳಿಗೆ ದೇಶದ ಗಡಿಕಾಯ್ದು ದೇಶಕ್ಕಾಗಿಯೇ ವೀರ ಮರಣವನ್ನಪ್ಪುವ ಸೈನಿಕರಿಗಿಂತ ದೇಶದೊಳಗಿದ್ದುಕೊಂಡು ಐಕ್ಯತೆ ಹಾಗೂ ಸಾಮರಸ್ಯಕ್ಕೆ ಭಂಗ ತರುವವರ ಮೇಲೆಗೆ ಅನುಕಂಪ ಜಾಸ್ತಿಯಾಗುತ್ತಿದೆ. ಇದು ಖಂಡನೀಯವಾದುದು. ದೇಶದ ಒಗ್ಗಟ್ಟನ್ನು ಒಡೆಯುವ ಹುನ್ನಾರವನ್ನು ನಾವೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಿದೆ ಎಂದರು. ಬೈಂದೂರು ಬಿಜೆಪಿ ಮಾಜಿ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಮಾತನಾಡಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಉಪ್ಪುಂದದಲ್ಲಿ ಪ್ರಥಮ ಭಾರಿಗೆ ನಮ್ಮ ಕಲಾಕೇಂದ್ರ ಕೋಟೇಶ್ವರದ ಸಹಯೋಗದೊಂದಿಗೆ ಉಪ್ಪುಂದದ ಶಂಕರ ಕಲಾಮಂದಿರದಲ್ಲಿ ಆಯೋಜಿಸಿದ ’ಯಕ್ಷ ಪಂಚಮಿ-2016’ 5 ದಿನಗಳ ಯಕ್ಷ ಹಬ್ಬಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಚಾಲನೆ ನೀಡಿದರು. ಹಿರಿಯ ಸಾಹಿತಿ ಯು. ಚಂದ್ರಶೇಖರ ಹೊಳ್ಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಿದ್ಧಿವಿನಾಯಕ ದೇವಳದ ಅರ್ಚಕ ಚಾಲಚಂದ್ರ ಭಟ್, ಕುಂದಾಪುರ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೆ. ರವಿರಾಜ ಶೆಟ್ಟಿ, ನಮ್ಮ ಕಲಾಕೇಂದ್ರದ ಗೌರವಾಧ್ಯಕ್ಷ ಕೆ. ಗೋಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.  ಶ್ರೀ ಹಟ್ಟಿಯಂಗಡಿ ಮೇಳದ ಸಂಚಾಲಕ ವಕ್ವಾಡಿ ರಂಜಿತ್‌ಕುಮಾರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಯಕ್ಷಹಬ್ಬದ ಸಂಚಾಲಕ ಸಂತೋಷ್ ಕೋಣಿ ವಂದಿಸಿದರು. ಸುನಿಲ್ ಹೆಚ್. ಜಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ನಾಲ್ಕು ಗೋಡೆಗಳ ಮಧ್ಯ ಕುಳಿತು ಓದುವ ವಿಶ್ವವಿದ್ಯಾಲಯವನ್ನು ಬಿಟ್ಟು ಇಡೀ ವಿಶ್ವವನ್ನೆ ವಿಶ್ವವಿದ್ಯಾಲಯವನ್ನಾಗಿಕೊಂಡು ನೋಡಿ, ಕೇಳಿ, ಅನುಭವಿಸಿ ಕಲಿತವರು ಕಾರಂತರು. ಅವರ ಪ್ರತಿಯೊಂದು ಕೃತಿಯಲ್ಲೂ ಕೂಡ ಸೃಜನ ಶೀಲತೆಯನ್ನು ನಾವು ಕಾಣಬಹುದು, ಆದರೆ ಇಂದು ಮಕ್ಕಳಲ್ಲಿ ಸೃಜನೆ ಶೀಲತೆಗೆ ಪ್ರೋತ್ಸಾಹಿಸುವ ಕೆಲಸಗಳು ಆಗುತ್ತಿಲ್ಲ. ಬರೀ ಕಟ್, ಕಾಪಿ, ಪೇಸ್ಟ್ ಸಂಸ್ಕೃತಿಯಿಂದಾಗಿ ಸೃಜನಶೀಲತೆ ಮರೆಯಾಗುತ್ತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅವರು ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು, ಕೋಟತಟ್ಟು ಗ್ರಾಮ ಪಂಚಾಯಿತಿ ಕೋಟ, ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಡಾ.ಶಿವರಾಮ ಕಾರಂತರ ವಿಷಯಾಧಾರಿತ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ.ಶಿವರಾಮ ಕಾರಂತರ ಫೈಬರ್ ಪ್ರತಿಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಮ್ಮ ರಾಜ್ಯದಲ್ಲಿ ಜ್ಞಾನ ಪೀಠ ಪ್ರಶಸ್ತಿ…

Read More