Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದ ಆರಂಭಗೊಂಡಿದ್ದ ಅಖಂಡ ಭಜನಾ ಸಪ್ತಾಹ ಮಹೋತ್ಸವು ಸೋಮವಾರ ದೀಪ ವಿಸರ್ಜನೆಯೊಂದಿಗೆ ಸಮಾಪನಗೊಂಡಿದೆ. ಭಜನಾ ಸಪ್ತಾಹ ಮಹೋತ್ಸವದ ಅಂಗವಾಗಿ ಸಂಜೆ ನಗರ ಭಜನೆ, ರಾತ್ರಿ ಶ್ರೀದೇವರಿಗೆ ವಿಶೇಷ ಪೂಜೆ ಮೊದಲಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಆಗಸ್ಟ್ 8ರಂದು ಆಗಸ್ಟ್ 14ರವರೆಗೆ ಊರ ಪರ ಊರುಗಳಿಂದ ಆಗಮಿಸಿದ ಸುಮಾರು ೩೦ಕ್ಕೂ ಮಿಕ್ಕಿ ಭಜನಾ ತಂಡಗಳು ಭಜನಾ ಸೇವೆ ನಡೆಸಿಕೊಟ್ಟರು. ಏಳು ದಿನ ಶ್ರೀದೇವರಿಗೆ ವಿವಿಧ ಪೂಜೆ ಪುನಸ್ಕಾರಗಳು ವಿಧಿವಿಧಾನಗಳೊಂದಿಗೆ ಭಕ್ತಿಶ್ರದ್ಧೆಯಿಂದ ವಿಜೃಂಭಣೆಯಿಂದ ನಡೆಯಿತು. ಅಸಂಖ್ಯ ಭಕ್ತರು ಅಖಂಡ ಭಜನಾ ಸಪ್ತಾಹ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಖ್ಯಾತ ಗೋಡೆ ಸ್ಟುಡಿಯೋ ಮಾಲಕ ದಿನೇಶ್ ಗೋಡೆ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಲಾಗಿದ್ದು, ಕಾರು ಚಲಾಯಿಸುತ್ತಿದ್ದ ದಿನೇಶ್ ಅವರ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿವರ ಪೋಟೋಗ್ರಫಿ ಕಾರ್ಯನಿಮಿತ್ತ ಮೂಡುಬಿದಿರೆ ಸಮೀಪದ ಮುಡ್ಕೂರಿಗೆ ತೆರಳಿ ಅಲ್ಲಿಂದ ಕುಂದಾಪುರಕ್ಕೆ ಹಿಂತಿರುಗುತ್ತಿದ್ದ ವೇಳೆ ಕಾಪು ಪ್ಲೈಓವರ್‌ನಲ್ಲಿ ಅವರ ವೆಗನಾರ್ ಕಾರು ಬೆಂಕಿಗಾಹುತಿಯಾಗಿದೆ. ಕಾರು ಇದ್ದಕ್ಕಿಂತ ಜರ್ಕ್ ಹೊಡೆದು ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಕಾರು ಚಲಾಯಿಸುತ್ತಿದ್ದ ದಿನೇಶ್, ಕೂಡಲೇ ಹೊರಬಂದಿದ್ದು ನೋಡನೋಡುತ್ತಿದ್ದಂತೆಯೇ ಕಾರು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವ ಹೊತ್ತಿಗೆ ಕಾರು ಸಂಪೂರ್ಣ ಸುಟ್ಟು ಹೋಗಿದ್ದವು. ಕಾಪು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ೭೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಬಾಂಡ್ಯ ಎಜ್ಯುಕೇಶನ್ ಸಂಸ್ಥೆಯ ಜಂಟಿ ಕಾರ‍್ಯನಿರ್ವಹಕರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ ಧ್ವಜಾರೋಹಣ ಮಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ವೀರರನ್ನು ಸ್ಮರಿಸಿ ಅವರು ಗಳಿಸಿಕೊಟ್ಟ ಸ್ವಾತಂತ್ರ್ಯದ ಸದುಪಯೋಗ ಮಾಡಿಕೊಂಡು ಭಾರತವನ್ನು ಮುನ್ನಡೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಧ್ವಜಾರೋಹಣ ಸಂದರ್ಭದಲ್ಲಿ ಬಾಂಡ್ಯ ಎಜ್ಯುಕೇಶನ್ ಸಂಸ್ಥೆಯ ಜಂಟೀ ಕಾರ‍್ಯನಿರ್ವಹಕಿ ಅನುಪಮ ಎಸ್.ಶೆಟ್ಟಿ, ಶಾಲೆಯ ಪ್ರಾಂಶುಪಾಲ ಸಾಯಿಜು ನಾಯರ್, ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚೆನ್ನಬಸಪ್ಪ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಧ್ವಜರೋಹಣ ಕಾರ‍್ಯಕ್ರಮದ ನಂತರ ಗುರುಕುಲ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಕರಾಟೆ ಪ್ರದರ್ಶನ ಹಾಗೂ ಸ್ಕೇಟಿಂಗ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ನಾಲ್ಕು ಪಂಗಡಗಳಲ್ಲಿ ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಹಾಡುಗಳ ಸ್ಪರ್ಧೆಯನ್ನು ಮಾಡಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇಂಗ್ಲೀಷ್ ಅಧ್ಯಾಪಕ ರಾಮಚಂದ್ರ ಹೆಬ್ಬಾರ್ ರವರು ಕಾರ‍್ಯಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೦ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಶೈಕ್ಷಣಿಕ ಸಲಹಾಗಾರರಾದ ಎಚ್. ಎನ್. ಐತಾಳ್ ಧ್ವಜಾರೋಹಣ ಮಾಡಿದರು. ಮುಖ್ಯೋಪಾಧ್ಯಾಯರಾದ ಪ್ರವೀಣ ಕುಮಾರ್, ಕೆ. ಪಿ. ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ಸಂಸ್ಥಾಪಕಡಾ. ಎನ್. ಕೆ. ಬಿಲ್ಲವ, ಕಾರ್ಯದರ್ಶಿ ಬಿ. ಎ. ರಝಾಕ್ ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶಂಶುದ್ದೀನ್‌ರವರು ತಮ್ಮ ಪರಿಣಾಮಕಾರಿ ಭಾಷಣದಿಂದ ಮಕ್ಕಳ ಮನಸ್ಸನ್ನು ಗೆದ್ದರು. ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ವಿದ್ಯಾರ್ಥಿಗಳಾದ ಕು. ಅಖಿಲಾ ಹೆಬ್ಬಾರ್ ನಿರೂಪಣಿಯನ್ನು, ಕು. ಸಿಂಚನ ಜಿ ನಾಯ್ಕ್ ಸ್ವಾಗತವನ್ನು, ಕು. ಕವನ ವಂದನೆಯನ್ನು ಮಾಡಿದರು. ಕೊನೆಯಲ್ಲಿ ಸಿಹಿಯನ್ನು ವಿತರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಪೂರ್ಣವಿರಾಮ ಹಾಕಲಾಯಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ, ಆ.15: ವೈವಿಧ್ಯಮಯ ಹೂಗಳಿಂದ ಅಲಂಕೃತಗೊಂಡ ವಿಶಾಲ ಬಯಲು ರಂಗಮಂದಿರ. ಆ ವಿಶಾಲ ಆವರಣದಲ್ಲಿ ನೆರೆದ ಸುಮಾರು 24,000 ವಿದ್ಯಾರ್ಥಿಗಳು. ಎಲ್ಲರ ಕೈಯಲ್ಲೂ ಮಿಂಚುತ್ತಿದ್ದ ತ್ರಿವರ್ಣ ಧ್ವಜಗಳು. ಸಾವಿರ ಕಂಠಗಳಿಂದ ಹೊರಹೊಮ್ಮುತ್ತಿದ್ದ ದೇಶಭಕ್ತಿಯ ಗೀತೆ. ಈ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳುತ್ತಿದ್ದ ಸಾವಿರಾರು ಸಾರ್ವಜನಿಕರು….. ಇದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ವೈಭವದ ನೋಟ. ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂಟಪದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಅತ್ಯಂತ ವಿಶಿಷ್ಟವಾಗಿ ನಡೆದ ಆಚರಣೆಗೆ 35,000 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಕ್ಷಿಯಾದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಧರ್ಮಾಧ್ಯಕ್ಷ ಅಲೋಶಿಯಸ್ ಪೌಲ್ ಡಿ’ ಸೋಜ ಧ್ವಜಾರೋಹಣವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಸಂದೇಶ ನೀಡಿದ ಅವರು, ಯುವಶಕ್ತಿಯನ್ನು ಕಟ್ಟಿ ಬೆಳೆಸುವುದೆಂದರೆ ಅದು ದೇಶವನ್ನು ಕಟ್ಟಿದಂತೆ. ಅಗಾಧವಾದ ಶಕ್ತಿಯನ್ನು ಹೊಂದಿರುವ ಬೃಹತ್ ಯುವಸಮುದಾಯ ಇಲ್ಲಿದೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಅಮೋಘವಾದುದನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬಿಟ್ಟುಹೋಗಿದ್ದ ವ್ಯಾನಿಟಿ ಬ್ಯಾಗ್ ಸಹಿತ ಹಣ ಹಾಗೂ ಬಂಗಾರ ಹಿಂದಿರಿಗಿಸುವ ಮೂಲಕ ಕುಂದಾಪುರದ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಕುಂದಾಪುರ ಖಾರ್ವಿಕೇರಿ ನಿವಾಸಿ ಆಟೋರಿಕ್ಷಾ ಚಾಲಕ ವಿಘ್ನೇಶ್ ನಾಯ್ಕ್ ಆಟೋದಲ್ಲಿ ದೊರೆತ ವಸ್ತುಗಳನ್ನು ಮರಳಿಸಿದ ಚಾಲಕ. ಶನಿವಾರ ಬಸ್ರೂರು ನಿವಾಸಿ ಆಸ್ಮಾ ತನ್ನ ಗಂಡ ಮಕ್ಕಳೊಂದಿಗೆ, ವಿಘ್ನೇಶ್ ಖಾರ್ವಿ ಅವರ ಆಟೋದಲ್ಲಿ ತೆರಳಿದ್ದಾಗ ತನ್ನ ವೆನಿಟ್ ಬ್ಯಾಗ್ ಅಲ್ಲಿಯೇ ಬಿಟ್ಟು ಇಳಿದಿದ್ದರು. ಬ್ಯಾಗ್‌ನಲ್ಲಿ ೫.೬ ಪವನ್ ಚಿನ್ನದ ತಾಳಿ, ಮೊಬೈಲ್ ಹಾಗೂ ಸಾವಿರ ರೂ ನಗದಿತ್ತು. ಭಾನುವಾರ ಕುಂದಾಪುರ ಠಾಣೆಗೆ ದೂರು ನೀಡಲು ಬಂದ ಆಸ್ಮಾಗೆ ಅಚ್ಚರಿ ಕಾದಿತ್ತು. ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೈನ್ ಅವರಿಗೆ ವಿಘ್ನೇಶ್ ನಾಯ್ಕ್ ಆಟೋದಲ್ಲಿ ಬಿಟ್ಟುಹೋದ ವಸ್ತುಗಳ ಬಗ್ಗೆ ಮಾಹಿತಿ ನೀಡಿದ್ದು, ಹಿಂದಿರುಗಿಸಲು ಸಹಾಯ ಕೇಳಿದ್ದ. ಆಸ್ಮ ಠಾಣೆಗೆ ಬಂದಿದ್ದರಿಂದ ವಿಘ್ನೇಶ್ ಅವರನ್ನು ಠಾಣೆಗೆ ಕರೆಯಿಸಿ, ಕಳೆದುಕೊಂಡ ವಸ್ತು ಮರಳಿಸಲಾಗಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ./

Read More

ನಾವೇ ಅಭಿವೃದ್ಧಿಯ ರುವಾರಿಗಳಾಗೋಣ: ಧ್ವಜಾರೋಹಣ ನೆರವೇರಿಸಿ ಎಸಿ ಅಶ್ವಥಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ ಬೈಂದೂರು: ನಾಗರಿಕ ಸಮಾಜ ಎಲ್ಲದಕ್ಕೂ ಸರಕಾರವನ್ನು ಅವಲಂಭಿಸದೇ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ಸೇವಾ ಮನೋಭಾವದಿಂದ ತೊಡಗಿಸಿಕೊಂಡಾಗ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯವಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್. ಹೇಳಿದರು. ಕುಂದಾಪುರ ತಾಲೂಕು ಆಡಳಿತ, ಕುಂದಾಪುರ ಪುರಸಭೆ ಹಾಗೂ ರಾಷ್ಟ್ರೀಯು ಹಬ್ಬಗಳ ದಿನಾಚರಣೆ ಸಮಿತಿ ಆಶ್ರಯದಲ್ಲಿ ಸೋಮವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ 70ನೇ ಸ್ವತಂತ್ರ್ಯೋತ್ಸವ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ನೆಲ, ಜಲ ಭಾಷೆ ಭಾವನಾತ್ಮಕ ಬೆಸುಗೆಯಿಂದ ಮೂಲಭೂತ ಸೌಕರ್ಯ, ಕೃಷಿ, ವಿಜ್ಞಾನ, ತಂತ್ರಜ್ಞಾನ ಮುಂತಾದ ಕ್ಷೇತ್ರದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದು ವಿಶ್ವವೇ ಭಾರತದತ್ತ ಮುಖಮಾಡಿದೆ ಎಂದರು. ಕರ್ನಾಟಕ ರಾಜ್ಯ ಸರಕಾರ ಕೂಡಾ ರಾಜ್ಯದ ಜನರ ಕಲ್ಯಾಣಕ್ಕಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿ, ಸಕಾಲ ಮುಂತಾದ ಹಲವು ಕಲ್ಯಾಣ ಯೋಜನೆ ನೀಡಿದೆ. ಗ್ರಾಮಮಟ್ಟದಲ್ಲಿ ಬಾಪೂಜೆ ಕೇಂದ್ರದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮಂಗಳವಾರ ಮೀನುಗಾರರು ಸಾಮೂಹಿಕವಾಗಿ ಸಮುದ್ರಪೂಜೆ ನೆರವೇರಿಸಿ ಸಮೃದ್ಧ ಮತ್ಸ್ಯಸಂಪತ್ತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಗಂಗೊಳ್ಳಿಯ ಬಂದರಿನ ಅಳಿವೆ ಪ್ರದೇಶದಲ್ಲಿ ಗಂಗೊಳ್ಳಿಯ ಆಳ ಸಮುದ್ರ ಮೀನುಗಾರರ ಯೂನಿಯನ್, ಪರ್ಸಿನ್ ಬೋಟ್ ಯೂನಿಯನ್ ಹಾಗೂ ಟ್ರಾಲ್ ಬೋಟ್ ಯೂನಿಯನ್ ಆಶ್ರಯದಲ್ಲಿ ವೇದಮೂರ್ತಿ ಜಿ.ವಿಠಲದಾಸ ಭಟ್ ಮತ್ತು ವೇದಮೂರ್ತಿ ಜಿ.ಅನಂತಕೃಷ್ಣ ಭಟ್ ಪೌರೋಹಿತ್ಯದಲ್ಲಿ ಆಳ ಸಮುದ್ರ ಮೀನುಗಾರರ ಯೂನಿಯನ್‌ನ ಸೌಪರ್ಣಿಕ ಬಸವ ಖಾರ್ವಿ, ಪರ್ಸಿನ್ ಬೋಟ್ ಯೂನಿಯನ್‌ನ ಪ್ರಭಾಕರ ಖಾರ್ವಿ ಮತ್ತು ಟ್ರಾಲ್ ಬೋಟ್ ಯೂನಿಯನ್‌ನ ಬಿ.ಎಂ.ಗಣೇಶ ನೇತೃತ್ವದಲ್ಲಿ ಸಮಸ್ತ ಮೀನುಗಾರರು ಸಮುದ್ರಪೂಜೆ ನಡೆಸಿ, ಸಮುದ್ರರಾಜನಿಗೆ ಬಾಗಿನ ಅರ್ಪಿಸಿ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಎಲ್ಲಾ ಮೀನುಗಾರರ ಕುಟುಂಬಗಳು ಸುಖ ಶಾಂತಿ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಮತ್ತು ಈ ಮೀನುಗಾರಿಕಾ ಋತುವಿನಲ್ಲಿ ಸಮೃದ್ಧ ಮತ್ಸ್ಯ ಸಂಪತ್ತನ್ನು ಶ್ರೀದೇವರು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಗಂಗೊಳ್ಳಿ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ರಮೇಶ…

Read More

ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಹತ್ತಿರ ಬರುತ್ತಿದ್ದಂತೆ ಬಾವುಟಗಳ ಮಾರಾಟ ಆರಂಭಗೊಳ್ಳುತ್ತವೆ. ಶಾಲಾ ಕಾಲೇಜು, ಕಛೇರಿ, ವಾಹನ, ಮಕ್ಕಳು ಹೀಗೆ ಎಲ್ಲರಿಗಾಗಿಯೂ ವಿವಿಧ ಗಾತ್ರದ ಬಾವುಟಗಳಂತೂ ಬೇಕೆಬೇಕು. ಕುಂದಾಪುರದ ಹಳೆ ಬಸ್‌ಸ್ಟ್ಯಾಂಡಿನ ಬಳಿ ಹಳೆದ ಹದಿನೈದು ವರ್ಷಗಳಿಂದ ಅದೇ ಹಳೆಯ ಕಟ್ಟದ ಮುಂಭಾಗದಲ್ಲಿ ತಾತ್ಕಾಲಿಕವಾಗಿ ಕಾಣಸಿಗುವ ಅಬ್ದುಲ್‌ರ ಅಂಗಡಿಯಲ್ಲಿನ ತ್ರಿವರ್ಣ ಧ್ವಜಗಳಿಗಂತೂ ಕುಂದಾಪುರದಲ್ಲಿ ಭಾರಿ ಬೇಡಿಕೆ. 10ರೂಪಾಯಿಂದ ಆರಂಭಗೊಂಡು 500 ರೂಪಾಯಿ ವರೆಗಿನ ವಿವಿಧ ಗಾತ್ರದ ತ್ರಿವರ್ಣ ಧ್ವಜಗಳು ಈ ಮಾರ್ಗದಲ್ಲಿ ಸಾಗುವವನ್ನು ಒಂದು ಕ್ಷಣ ಆಕರ್ಷಿಸುತ್ತವೆ. ಪ್ರತಿವರ್ಷವೂ ಇಲ್ಲಿಯೇ ಸುಮಾರು ೬,೦೦೦ ಬಾವುಟಗಳು ಮಾರಾಟವಾಗುತ್ತಿವೆ. ಕಳೆದ ಹದಿನೈದು ವರ್ಷಗಳಿಂದಲೂ ನಡೆದು ಬಂದಿರುವ ಈ ಬಾವುಟದ ಮಾರಾಟ ಕೇವಲ ಲಾಭಕ್ಕಷ್ಟೇ ಅಲ್ಲ. ಅದೊಂದು ಹವ್ಯಾಸವಾಗಿದೆ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್. ಕುಂದಾಪ್ರ ಡಾಟ್ ಕಾಂ ವರದಿ ಒಂದು ಕಾಲದಲ್ಲಿ ಬಾವುಟಗಳಿಗೆ ದುಪ್ಪಟ್ಟು ಹಣ ನೀಡಬೇಕಿದ್ದುದನ್ನು ಕಂಡ ಅಬ್ದುಲ್ ಅವರೇ ಸ್ವತಃ ಕಡಿಮೆ ಬೆಲೆಗೆ ಬಾವುಟ ಮಾರಲು ಮುಂದಾದರು. 300-400 ಬಾವುಟಗಳಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಸಿಐ ಪುತ್ತೂರು ಆತಿಥೇಯದಲ್ಲಿ ಜರುಗಿದ ರಜತವಿಕಾಸ ಅಭಿವೃದ್ಧಿ ಮತ್ತು ಬೆಳವಣಿಗೆಯ ವ್ಯಾವಹಾರಿಕ ಸಮ್ಮೇಳನದಲ್ಲಿ ಪತ್ರಕರ್ತ ಹಾಗೂ ಸಂಘಟಕ ಅರುಣಕುಮಾರ್ ಶಿರೂರು ಅವರಿಗೆ ಸಾಧನಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ವ್ಯವಹಾರ ವಿಭಾಗದ ನಿರ್ದೇಶಕ ಸಚಿನ್, ವಲಯಾಧ್ಯಕ್ಷ ಸಂದೀಪ್‌ಕುಮಾರ್, ಪೂರ್ವವಲಯಾಧ್ಯಕ್ಷ ಸಂಪತ್ ಸುವರ್ಣ, ಉಪಾಧ್ಯಕ್ಷ ನಿತಿನ್, ಕೃಷ್ಣಮೋಹನ್, ಚಂದ್ರಶೇಖರ್ ನಾಯರ್, ಶಿರೂರು ಜೆಸಿಐ ಸ್ಥಾಪಕಾಧ್ಯಕ್ಷ ಮೋಹನ್ ರೇವಣ್ಕರ್, ಅಧ್ಯಕ್ಷ ಹರೀಶ್ ಶೇಟ್, ಕಾರ್ಯದರ್ಶಿ ನಾಗೇಶ್ ಕೆ., ಪ್ರಸಾದ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

Read More