Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಶೀ ಮಠದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯತಿಥಿ ಆರಾಧನಾ ಮಹೋತ್ಸವ ಹಾಗೂ ವೃಂದಾವನದಲ್ಲಿ ಮುಖ್ಯ ಪ್ರಾಣ ದೇವರ ಪ್ರತಿಷ್ಟಾ ಕಾರ್ಯಕ್ರಮ ಹರಿದ್ವಾರದ ವ್ಯಾಸ ಆಶ್ರಮದಲ್ಲಿ 30 ಡಿಸೆಂಬರ್ 2016 ರಿಂದ 06 ಜನವರಿ 2017ರ ವರೆಗೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವೆಬ್‌ಸೈಟ್ http://punyathithi.org ನ್ನು ಕಾಶೀ ಮಠಾದೀಶ ಶ್ರೀ ಶ್ರೀ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತ ಹಸ್ತಗಳಿಂದ ಕಾಜ್ಞಂಗಾಡ್‌ನಲ್ಲಿ ಲೋಕಾರ್ಪಣೆಗೊಳಿಸಿದರು. ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ವಿವರ ಈ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಂಕಗಳ ಜೊತೆಗೆ ಮಾನವೀಯ ಸಂಬಂಧಗಳನ್ನು ಬೆಳೆಸುವುದು ಇಂಟರ‍್ಯಾಕ್ಟ್ ಕ್ಲಬ್‌ನ ಉದ್ದೇಶವಾಗಿದೆ ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣವನ್ನು ಬೆಳಸಿಕೊಂಡು ಸಮಾಜಿಕ ಜವಬ್ದಾರಿಯನ್ನು ನಿರ್ವಹಿಸುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಿ ಎಂದು ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿ ಹೇಳಿದರು. ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಅಂಗ ಸಂಸ್ಥೆಯಾದ ಇಂಟರ‍್ಯಾಕ್ಟ್ ಕ್ಲಬ್‌ನ ನೂನತನ ಪದಾಧಿಕಾರಿಗಳ ಪದಗ್ರಹಣವನ್ನು ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಯಂಗಡಿಯಲ್ಲಿ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಅವರು, ಮಕ್ಕಳು ಸಣ್ಣ ವಯಸ್ಸಿನಲ್ಲೇ ಇಂತಹ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ನೇಹಪರತೆ, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಕುಂದಾಪುರದ ರೋಟರಿ ಕ್ಲಬ್‌ನ ಇಂಟರ‍್ಯಾಕ್ಟ್ ಕ್ಲಬ್ ಛೇರ್‌ಮನ್ ರಾಘವೇಂದ್ರ ಚರಣ ನಾವಡ ಮಾಹಿತಿ ನೀಡಿದರು. ಶಾಲೆಯ ಇಂಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾದ ಗಣಪತಿ ಜಿ ಭಟ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಶೈಕ್ಷಣಿಕ ಸಲಹೆಗಾರರಾದ ಮೃದುಲಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲೆಯ 2016-17ನೇ ಸಾಲಿನ ಧ್ವನಿ-ಬೆಳಕು ಸಂಯೋಜಕರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ಎಚ್.ಉದಯ್ ಆಚಾರ್ ಬೈಂದೂರು ಆಯ್ಕೆಯಾಗಿದ್ದಾರೆ. ಗೌವಾಧ್ಯಕ್ಷರಾಗಿ ಆಂಟೆನಿ ಡೇಸಾ, ನೂತನ ಜಿ ಉಪಾಧ್ಯಕ್ಷರಾಗಿ ಪಿ.ಬಾಲಕೃಷ್ಣ ಪೂಜಾರಿ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ್ ಕೆ ಮಣಿಪಾಲ, ಜೊತೆಕಾರ್ಯದರ್ಶಿಯಾಗಿ ಪ್ರಭಾಕರ ನಾಯಕ್ ಕಾರ್ಕಳ, ಕೋಶಾಧಿಕಾರಿಯಾಗಿ ಸಂತೋಷ ಶೆಟ್ಟಿಗಾರ್ ಉಡುಪಿ, ಸಂಘಟನಾ ಕಾರ್ಯದರ್ಶಿಯಾಗಿ ಸರ್ದಾರ ಕುಂದಾಪುರ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರದೀಪ್ ಕಾರ್ಕಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧಾಕರ್ ಸುವರ್ಣ ಕಾಪು, ಗೌರವ ಸಲಹೆಗಾರರಾಗಿ ಜಗದೀಶ್ ಬಲ್ಲಾಳ್, ವಿಜಯ್ ಕುಮಾರ್ ಉಡುಪಿ, ಶಿವರಾಜ್ ಕಾಪು, ಗೋವಿಂದ ಗಾಣಿಗ ಬ್ರಹ್ಮಾವರ, ಪಾಂಡುರಂಗ ಜೋಗಿ ಕುಂದಾಪುರ, ಪ್ರಭಾಕರ ಜಿ. ದೇವಾಡಿಗ ಉಪ್ಪುಂದ ಆಯ್ಕೆಗೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ವ್ಯಾಪ್ತಿ ಪ್ರದೇಶವನ್ನು ಹೊಂದಿದ ಕಾಲ್ತೋಡು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಇಲ್ಲಿನ ಗ್ರಾಮಸ್ಥರ ಸಮಸ್ತ ಸಮಸ್ಯೆಗಳ ಪರಿಹಾರಕ್ಕಾಗಿ ನನ್ನ ಅಧಿಕಾರದ ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಹೇಳಿದರು. ಗ್ರಾಪಂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಕಚೇರಿಯಲ್ಲಿ ಮಾತನಾಡಿದರು. ಗುಡ್ಡಗಾಡು ಪ್ರದೇಶವೇ ಹೆಚ್ಚಾಗಿರುವ ನಮ್ಮ ಗ್ರಾಮದಲ್ಲಿ ಪ್ರಮುಖವಾಗಿ ವಿದ್ಯುತ್ ಸಂಪರ್ಕ, ಕಾಲುಸಂಕಗಳಿಗೆ ಶೀಘ್ರವಾಗಿ ಕಾಯಕಲ್ಪ ನೀಡಬೇಕಾಗಿದೆ. ಅಲ್ಲದೇ ಸಂಪೂರ್ಣ ಹಾಳಾಗಿರುವ ಕೂಡು ರಸ್ತೆ ಮತ್ತು ವಾರ್ಡ್ ರಸ್ತೆಗಳ ದುರಸ್ತಿ ಕಾರ್ಯವನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು. ಸ್ಥಳೀಯ ಶಾಸಕರು, ಜಿಪಂ, ತಾಪಂ ಸದಸ್ಯರು ಇದಕ್ಕಾಗಿ ನೆರವು ನೀಡುವ ಭರವಸೆ ನೀಡಿದ್ದು, ಅವರಲ್ಲರೊಂದಿಗೆ ಸೇರಿ ಅತ್ಯಂತ ಮುತುವರ್ಜಿವಹಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಬೇಸಿಗೆಯಲ್ಲಿ ಗ್ರಾಮದ ಕೆಲವು ವಾಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಅದಕ್ಕೂ ಕೂಡಾ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿಗಳಲ್ಲಿ ಗ್ರಾಮದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವರಮಹಾಲಕ್ಷ್ಮೀ ಹಬ್ಬದ ಪ್ರಯಕ್ತ ತಾಲೂಕಿನ ವಿವಿಧೆಡೆ ವರಮಹಾಲಕ್ಷ್ಮೀ ವ್ರತ ಜರುಗಿತು. ಕುಂದಾಪುರ, ಗಂಗೊಳ್ಳಿ, ಶಂಕರನಾರಾಯಣ, ಸಿದ್ಧಾಪುರ, ಉಪ್ಪುಂದ, ಬೈಂದೂರು, ಶಿರೂರು ಮುಂತಾದೆಡೆ ವಿವಿಧ ದೇವಸ್ಥಾನಗಳಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಜರುಗಿದವು. ಬೆಳಿಗ್ಗೆ ದೇವತಾ ಪ್ರಾರ್ಥನೆ, ಕಲಶ ಪ್ರತಿಷ್ಠಾಪನೆ, ಕಲ್ಪೋಕ್ತ ಪೂಜೆ, ಕಥಾಶ್ರವಣ, ಮಂಗಳಾರತಿ, ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗಂಗೊಳ್ಳಿಯ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮಹಿಳಾ ಮಂಡಳಿ ವತಿಯಿಂದ ೨೬ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತವು ಭಕ್ತಿ ಶ್ರದ್ಧೆಯಿಂದ ಶುಕ್ರವಾರ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿತು. ಪುರೋಹಿತರಾದ ವೇದಮೂರ್ತಿ ಜಿ.ವಸಂತ ಭಟ್ ಮತ್ತು ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಜರಗಿತು. ಗಂಗೊಳ್ಳಿಯ ವರಮಹಾಲಕ್ಷ್ಮೀ ವೃತಾಚರಣೆ ಸಮಿತಿ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತವು ಗಂಗೊಳ್ಳಿಯ ಕಲೈಕಾರ ಮಠ ಶ್ರೀ ನಗರ ಮಹಾಂಕಾಳಿ ಕಲ್ಲುಕುಟ್ಟಿಗ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಜರಗಿತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇಳದ ಕಲಾವಿದರ ಜೊತೆ ಅತಿಥಿ ಕಲಾವಿದರು ಆಗಮಿಸಿ ಪೌರಾಣಿಕ ಯಕ್ಷ ರಸದೌತಣ ನೀಡಲು ಸಜ್ಜಾಗಿದ್ದಾರೆ. ವಿಶೇಷ ಆಯೋಜನೆಯ ಪೌರಾಣಿಕ ಆಖ್ಯಾನಗಳನ್ನು ಕಣ್ತುಂಬಿಕೊಳ್ಳಲು ಸಾಲಿಗ್ರಾಮ ಮೇಳದ ಈ ಸುತ್ತಿನ ಪ್ರಪ್ರಥಮ ಆಟ ಆಗಸ್ಟ್ 13 ಶನಿವಾರ ನಡೆಯಲಿದೆ. “ಕೃಷ್ಣಾರ್ಜುನ – ಕಾರ್ತವೀರ್ಯ – ಕೃಷ್ಣ ಪರಂಧಾಮ” ಅಪ್ಪಟ್ಟ ಪೌರಾಣಿಕ ಪ್ರಿಯರು ಅಪೇಕ್ಷೆಯ ಮೆರೆಗೆ ಆಯೋಜಿಸಲಾಗಿದೆ . ಭಾಗವತಿಕೆಯಲ್ಲಿ ಮಯ್ಯ ಹಿಲ್ಲೂರು, ಅಂಕೋಲ, ಜೊತೆ ಹೊಸಂಗಡಿ ರವೀಂದ್ರ ಶೆಟ್ಟಿ ರಂಜಿಸಲಿದ್ದಾರೆ .ಹೊಸ ಹುರುಪಿನ ಸಾಲಿಗ್ರಾಮ ಮೇಳದ ಜೊತೆ ಪ್ರೀತಿಯಿಂದ ಗೋಡೆ ನಾರಾಯಣ ಹೆಗಡೆ, ಜಲವಳ್ಳಿ ವಿಧ್ಯಾಧರ್ ರಾವ್, ಸುಬ್ರಮಣ್ಯ ಚಿಟ್ಟಾಣಿ ,ಕೋಡಿ ವಿಶ್ವನಾಥ್ ಗಾಣಿಗರು ಭಾಗವಹಿಸಲಿದ್ದಾರೆ. ಎಪ್ಪತ್ತರ ಚಿರಯುವಕ ಯಕ್ಷರಂಗದ ಕೌರವ ಖ್ಯಾತಿಯ ಗೋಡೆ ನಾರಾಯಣ ಹೆಗಡೆ ಅರ್ಜುನ ಸುಬ್ರಮಣ್ಯ ಚಿಟ್ಟಾಣಿಯವರ ಕೃಷ್ಣ ಮತ್ತು ಜಲವಳ್ಳಿಯವರ ರಾವಣ ಪ್ರಸನ್ನ ಶೆಟ್ಟಿಗಾರ್ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಿಸಿದೆ . ಅಪರೂಪದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರಾದ ಅಂಪಾರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯುತ್ ತಂತಿ ಅಳವಡಿಸುವ ಸಲುವಾಗಿ ವಿದ್ಯುತ್ ಕಡಿತಗೊಳಿಸುವ ಟ್ರಾನ್‌ಫಾರ್ಮ್‌ರ್ ಕಂಬ ಏರಿದ್ದ ವ್ಯಕ್ತಿಗೆ ವಿದ್ಯುತ್ ತಗಲಿ ಮೃತಪಟ್ಟ ಘಟನೆ ಕೋಡಿ ರಾಮಮಂದಿರದ ಬಳಿ ನಡೆದಿದೆ. ತಮಿಳುನಾಡು ಧರ್ಮಪುರಿಯ ಮೂಲದ ನರಸಿಂಹ(22) ಮೃತ ದುರ್ದೈವಿ. ಉಡುಪಿಯಲ್ಲಿ ತಂದೆ ಸಂಪತ್ ಹಾಗೂ ಸಹೋದರ ಸರ್ವಣ್ ಅವರೊಂದಿಗೆ ಗುತ್ತಿಗೆ ಆಧಾರದಲ್ಲಿ ಮೆಸ್ಕಾಂ ಇಲಾಖೆಯ ಕೆಲಸಗಳನ್ನು ಮಾಡಿಕೊಂಡಿದ್ದ ನರಸಿಂಹ, ಕೆಲವು ದಿನಗಳಿಂದ ಕೋಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಮಧ್ಯಾಹ್ನ ಕೋಡಿಯಲ್ಲಿ ವಿದ್ಯುತ್ ಲೈನ್ ಬದಲಿಸಲು ಸಹೋದನೊಂದಿಗೆ ತೆರಳಿದ್ದಾಗ. ಅಲ್ಲಿ ಟ್ರಾನ್‌ಫಾರ್ಮ್‌ರ್‌ನಿಂದ ವಿದ್ಯುತ್ ಕಡಿತಗೊಳಿಸುವ ಸಲುವಾಗಿ ನರಸಿಂಹ ಮೇಲೆರಿದಾಗ ವಿದ್ಯುತ್ ತಗಲಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಒಂದು ವರ್ಷದ ಪುತ್ರನನ್ನು ಅಗಲಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹಾಲಾಡಿ ಪೇಟೆಯ ಬಳಿ ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ವರದಿಯಾಗಿದೆ. ಹಳ್ನಾಡಿಯ ಚಂದ್ರ ಮಡಿವಾಳ (41) ಮೃತ ದುರ್ದೈವಿ. ಪತ್ನಿಯ ಮನೆಯಿಂದ ಹಳ್ನಾಡಿಗೆ ತೆರಳುತ್ತಿದ್ದ ವೇಳೆ ಹಾಲಾಡಿಯಲ್ಲಿ ಗ್ಯಾಸ್ ಸಿಲಿಂಡರ್ ಸಾಗಾಟದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಚಂದ್ರ ಮಡಿವಾಳ ರಸ್ತೆಗೆ ಬಿದ್ದು ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಜೀವನದಲ್ಲಿ ಮಾಡಿದ ಉತ್ತಮ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತದೆ. ವಿದ್ಯಾಭ್ಯಾಸಕ್ಕೆ ನೆರವು ನೀಡುವುದರಿಂದ ಅನೇಕ ಪ್ರತಿಭಾವಂತ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ. ನಮ್ಮ ದೇಶದಲ್ಲಿ ಎಲ್ಲಾ ರಂಗಗಳಲ್ಲಿಯೂ ವಿಪುಲ ಉದ್ಯೋಗಾವಕಾಶಗಳಿದ್ದು, ಯುವಶಕ್ತಿಗಳಿಂದ ೨೦೨೦ರಲ್ಲಿ ಭಾರತ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕುಂದಾಪುರ ಪುರಸಭೆಯ ಉಪಾಧ್ಯಕ್ಷ ರಾಜೇಶ ಕಾವೇರಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ಗಂಗೊಳ್ಳಿಯ ಪಂಚಗಂಗಾವಳಿ ಬಳಗ ಪ್ರಾಯೋಜಿತ ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ೧೨ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು. ಬಸ್ರೂರು ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕಿ ಸುಮತಿ ಶ್ಯಾನುಭಾಗ್ ಮಾತನಾಡಿ ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ಬುದ್ಧಿಗೆ ಮಾತ್ರ ನೀಡುವ ಶಿಕ್ಷಣವಾಗಿದೆ. ಇಂತಹ ಶಿಕ್ಷಣದಿಂದ ಮಕ್ಕಳ ಬೌದ್ಧಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಸಾಧ್ಯವಿಲ್ಲ. ಹೀಗಾಗಿ ಮಕ್ಕಳಿಗೆ ಹೃದಯದ ಶಿಕ್ಷಣದ ಅವಶ್ಯಕತೆ ಇದೆ. ಮನುಷ್ಯನ ಹೃದಯ, ಮನಸ್ಸುಗಳನ್ನು ತಲುಪುವ ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ರಕ್ತದಾನ ಮಾಡಿದರೆ ಜೀವಕ್ಕೆ ಹಾನಿಗಾಗಬಹುದೆಂಬ ಭಯದ ವಾತವರಣ ಮೊದಲು ಇದ್ದಿತ್ತು ಆದರೆ ಮೊಗವೀರ ಯುವ ಸಂಘಟನೆ ಸತತ ರಕ್ತದಾನ ಕಾರ್ಯಕ್ರಮಗಳ ಮೂಲಕ ಅದನ್ನು ಹೋಗಲಾಡಿಸಿವೆ ಇವರ ಕಾರ್ಯ ಶ್ಲಾಘನೀಯ. ಎಂದು ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದ್ದಾರೆ. ಮೋಗವೀರ ಯುವ ಸಂಘ, ಮಹಿಳಾ ಘಟಕ ಕೋಟ ಹಾಗೂ ಡಾ.ಜಿ.ಶಂಕರ್ ಫ್ಯಾಮೀಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ಗೀತಾನಂದ ಪೌಂಡೇಶನ್ ಮಣೂರು ಪಡುಕರೆ ,ಜನತಾ ಫಿಶ್‌ಮೀಲ್ ಎಂಡ್ ಆಯಿಲ್ ಪ್ರೋಡಕ್ಟ್ ಕೋಟ,ಕೆ.ಎಂ.ಸಿ ಮಣಿಪಾಲ ಮತ್ತು ಉಡುಪಿ ಜಿಲ್ಲಾಡಳಿತಗಳ ಸಯುಂಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಸೋಮವಾರ ಸರಕಾರಿ ಸಯುಂಕ್ತ ಪ್ರೌಡ ಶಾಲೆ ಮಣೂರು ಪಡುಕರೆಯಲ್ಲಿಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರಕ್ತದಾನ ಮಾಡುವುದರಿಂದ ನಮ್ಮ ದೇಹದ ಚೈತನ್ಯ ಪಡೆಯುದರೊಂದಿಗೆ ಇನ್ನೂಬ್ಬರ ಜೀವ ಉಳಿಸಿದಂತೆ ಆಗುತ್ತದೆ. ರಕ್ತದಾನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಸಂಘ ಸಂಸ್ಥೆಗಳು ಸಮಾಜ ಮುಖಿ ಕಾರ್ಯದಲ್ಲಿ ಇನ್ನಷ್ಟು ತೋಡಗಿಕೊಳ್ಳಬೇಕಿದೆ ಆಗ ಮಾತ್ರ…

Read More