ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಕುಂದಾಪುರ ಬಾರ್ ಅಸೋಸಿಯೇಶನ್ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆದ ನ್ಯಾಯವಾದಿ ಗುರುಮೂರ್ತಿ ರಾವ್ ಅವರ ಪುತ್ರ, ಕುಂದಾಪುರ ಆರ್‌ಎನ್‌ಎಸ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಕ್ಷಯ್ ಜಿ. ರಾವ್ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ಸನ್ಮಾನಿಸಿ ಮಾತನಾಡಿದರು. ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಶೀನಿವಾಸ ಸುವರ್ಣ, ನ್ಯಾಯಾಧೀಶರಾದ ಪ್ರೀತ್ ಜೆ, ಲಾವಣ್ಯ ಚಂದ್ರಶೇಖರ್ ಬಣಕಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ರವೀಂದ್ರ ಶೆಟ್ಟಿ ವಂದಿಸಿದರು. ಸಂತೋಷ್ ವಿದ್ಯಾರ್ಥಿಯ ಪರಿಚಯ ಪತ್ರ ವಾಚಿಸಿದರು. ನ್ಯಾಯವಾದಿ ರಾಘವೇಂದ್ರ ಚರಣ ನಾವಡ ಕಾರ್ಯಕ್ರಮ ನಿರ್ವಹಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಬಿಜೂರು ಕಳುಹಿನಬಾಗಿಲು ನಿವಾಸಿ, ನಿವೃತ್ತ ಉಪನ್ಯಾಸಕ ಶಿಕ್ಷಣ ತಜ್ಞ ಬಿ. ಹೊನ್ನ ದೇವಾಡಿಗ (೮೫) ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಮದ್ರಾಸಿನ ವೈ.ಎಮ್.ಸಿ.ಎ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ತರಬೇತಿಯನ್ನು ಪಡೆದಿದ್ದ ಅವರು, ಬೈಂದೂರು ಬೋರ್ಡ್ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕರಾಗಿ, ಬಳಿಕ ಖಾಸಗಿಯಾಗಿ ಸ್ನಾತಕೋತರ ಪದವಿ ಪಡೆದು, ತೆಕ್ಕಟ್ಟೆ, ಶಿರೂರು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ಬೈಂದೂರು ಪದವಿಪೂರ್ವ ಕಾಲೇಜಿನಲ್ಲಿ ಸುಧೀರ್ಘ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ದಾಖಲೆ ಹೊಂದಿದ್ದಾರೆ. ಅಲ್ಲದೇ ಅದೇ ಕಾಲೇಜಿನಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕಾಲೇಜಿನಲ್ಲಿ ಸ್ಕೌಟ್ ಗೈಡ್ ಕಮಾಂಡರ್ ಆಗಿ ವಿದ್ಯಾರ್ಥಿಗಳ ಮೆಚ್ಚಿನ ಹೊನ್ನ ಮಾಸ್ಟ್ ಆಗಿದ್ದರು. ಬೈಂದೂರಿನ ದೇವಾಡಿಗ ಸಂಘದ ಅಧ್ಯಕ್ಷರಾಗಿ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ದುಡಿದಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಗಣ್ಯರಿಂದ ಅಂತಿಮ ನಮನ: ಜಿ.ಪಂ. ಸದಸ್ಯೆ ಗೌರಿ ದೇವಾಡಿಗ, ತಾ.ಪಂ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಭೆ ಇದ್ದವರಿಗೆ ಅವಕಾಶಗಳ ಕೊರತೆ ಇಲ್ಲ. ಆದರೆ ಪ್ರತಿ ದಿನವೂ ಎದುರಾಗುವ ಅವಕಾಶಗಳನ್ನು ಜಾಣ್ಮೆಯಿಂದ ಬಳಸಿಕೊಳ್ಳುವ ಚಾಕಚಕ್ಯತೆ, ಸಾಗುವ ಹಾದಿಗೆ ನಿರ್ದಿಷ್ಟ ಗುರಿ ಇದ್ದರೇ ಮಾತ್ರ ನಾವು ಎಲ್ಲರಿಂದಲೂ ಭಿನ್ನರಾಗಿ ಗುರುತಿಸಿಕೊಳ್ಳುತ್ತೇವೆ ಮತ್ತು ಯಶಸ್ಸು ತಾನಾಗಿಯೇ ಹಿಂಬಾಲಿಸುತ್ತದೆ ಎಂದು ಪತ್ರಕರ್ತ ಅರುಣಕುಮಾರ್ ಶಿರೂರು ಹೇಳಿದರು. ಸಂಚಲನ ರಿ. ಹೊಸೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಬೈಂದೂರು ಗ್ರಾಪಂ ವ್ಯಾಪ್ತಿಯ ಹೊಸೂರಿನ ಹೊಂಗಿರಣ ರಂಗಮಂದಿರದಲ್ಲಿ ಚಾಲನೆಗೊಂಡ ನಾಲ್ಕು ದಿನಗಳ ಕಾನನದೊಳಗೊಂದು ರಂಗಸುಗ್ಗಿ ‘ಶರತ್ ರಂಗ ಸಂಚಲನ -2016’ರ ಜನಪದ-ಮಾಯಾ ವೈಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಟಿ.ವಿ ಮಾಧ್ಯಮಗಳು ಹಾಗೂ ಹಣದ ಪ್ರಭಾವ ಒಂದು ದಿನದಲ್ಲಿ ಸಾಧನೆಯ ಉತ್ತುಂಗ ಸ್ಥಾನಕ್ಕೇರುವುದೇ ಯಶಸ್ಸು ಎಂಬ ಸಂಕುಚಿತ ಭಾವನೆಯನ್ನು ಮನಸ್ಸಿನೊಳಕ್ಕೆ ತುರುಕುತ್ತಿದೆ. ಹೀಗೆ ಪಡೆದ ಯಶಸ್ಸು ಬಹುಕಾಲ ಉಳಿಯದು ಎಂದ ಅವರು ಜನಪರವಾದ ವಿಚಾರಗಳನ್ನು ಕೂಡಿಸಿಕೊಂಡು ಸಾಮಾಜಿಕವಾಗಿ ಏನನ್ನಾದರೂ ಕೊಡಬೇಕು ಎಂಬು ತುಡಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ವೃತ್ತಿಗೆ ಅನುಗುಣವಾಗಿ ಸಂಘಟನೆಗಳ ಸದಸ್ಯರ ವೃತ್ತಿ ಕೌಶಲ್ಯ ಹೆಚ್ಚಿಸಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ಅತ್ಯಗತ್ಯ. ಧ್ವನಿ-ಬೆಳಕು ವೃತ್ತಿ ನಿರತರು ಅಪಾಯದ ನಡುವೆ ಕೆಲಸ ಮಾಡಬೇಕು. ಅವರಲ್ಲಿ ವೃತ್ತಿ ಕೌಶಲ್ಯಗಳಿದ್ದರೆ ಅದರ ಬಗೆಗೆ ಮುನ್ನೆಚ್ಚರಿಕೆ ವಹಿಸಬಹುದು ಮತ್ತು ಗ್ರಾಹಕರ ನಿರೀಕ್ಷೆಯ ಮಟ್ಟದ ಸೇವೆ ನೀಡಬಹುದು ಎಂದು ಖಂಬದಕೋಣೆ ರೈತರ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘದ ಐದನೇಯ ವಾರ್ಷಿಕ ಮಹಾಸಭೆ, ಐದು ಸಾಧಕರಿಗೆ ಸನ್ಮಾನ ಹಾಗೂ ಕುಟುಂಬ ಸಮ್ಮಿಲನ ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಎನ್. ಶಶಿಧರ ಶೆಣೈ ಅಧ್ಯಕ್ಷತೆವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರಾದ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಪತ್ರಕರ್ತ-ಸಮಾಜ ಸೇವಕ ಎಸ್. ಜನಾರ್ದನ್ ಮರವಂತೆ, ಶಿಕ್ಷಕ ಬಿ. ವಿಶ್ವೇಶ್ವರ ಅಡಿಗ, ರಂಗಭೂಮಿ-ಸಂಗೀತ ಯು. ಶ್ರೀನಿವಾಸ ಪ್ರಭು, ಅಂತರಾಷ್ಟ್ರೀಯ ಕ್ರೀಡಾಪಟು ಶಂಕರ ಪೂಜಾರಿ ಕಾಡಿನ್‌ತಾರು ಇವರನ್ನು ಗೌರವಿಸಲಾಯಿತು.…
ರೋಟರಿ ತತ್ವಗಳು ಮೌಲ್ಯಯುತವಾದ ಮನುಜ ಧರ್ಮವನ್ನು ಪ್ರತಿಪಾದಿಸುತ್ತದೆ : ರವಿ ಹೆಗ್ಡೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವವನ್ನೇ ಒಂದು ಮನೆಯಂತೆ ನೋಡುವ ಅಂತರಾಷ್ಟ್ರೀಯ ರೋಟರಿ ನಮ್ಮ ಸನಾತನ ಸಂಸ್ಕೃತಿಯ ವಸುಧೈವ ಕುಟುಂಬಕಮ್ ನೀತಿಗನುಗುಣವಾಗಿಯೇ ಇದೆ. ರೋಟರಿಯ ಸ್ವಾರ್ಥ ಮೀರಿದ ಸೇವೆ ಧ್ಯೇಯವು ನಮ್ಮ ಸಿರಿ ಸಂಪನ್ನ ಪರಂಪರೆಯ ಪರೋಪಕಾರಕ್ಕಾಗಿಯೇ ಮನುಜ ಶರೀರರವು ಉಕ್ತಿಯೇ ಆಗಿದೆ. ವಿಶ್ವದಾದ್ಯಂತ ಒಂದೇ ಮಾದರಿಯಾಗಿರುವ ರೋಟರಿ ಸಂವಿಧಾನ ಮತ್ತದರ ತತ್ವಗಳು ಮೌಲ್ಯಯುತವಾದ ಮನುಜ ಧರ್ಮವನ್ನೇ ಪ್ರತಿಪಾದಿಸುತ್ತದೆ. ರೋಟರಿಯ ಈ ಎಲ್ಲಾ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಸದಸ್ಯರ ಜನುಮ ಸಾರ್ಥಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುವುದಾಗಿ ರೋಟರಿ ಜಿಲ್ಲೆ 3170 ಇದರ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ರವಿ ಹೆಗಡೆ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ಆಶ್ರಯದಲ್ಲಿ ಕೋಟೇಶ್ವರದ ಸಹನಾ ಕನ್‌ವೆನ್ಶನ್ ಸೆಂಟರ್‌ನ ಕೃಷ್ಣ ಸಭಾಂಗಣದಲ್ಲಿ ನಡೆದ ನೂತನ ಅಧ್ಯಕ್ಷ, ಕಾರ್ಯದರ್ಶಿಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಕೆ. ನರಸಿಂಹ ಹೊಳ್ಳ, ಕಾರ್ಯದರ್ಶಿಯಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕರ್ನಾಟಕದ ಇಂದಿನ ಪರಿಸ್ಥಿತಿ ತುಂಬಾ ಗೊಂದಲಮಯವಾದುದು. ನಮ್ಮ ಮುಂದಿನ ಜನಾಂಗ ಆಂಗ್ಲ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ದಕ್ಷಿಣ ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಪರಿಸ್ಥಿತಿ ಚಿಂತಾಜನಕವಾಗಿದೆ. ಕನ್ನಡ ನಾಡಿನಲ್ಲೇ ಕನ್ನಡವನ್ನು ಉಳಿಸುವ ಪ್ರಮೇಯ ಬಂದೊದಗಿದೆ ಎಂದು ಅಂಕಣಕಾರ ನರೇಂದ್ರ ರೈ ದೇರ್ಲ ಹೇಳಿದರು. ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಕೋಟೇಶ್ವರ ಹೋಬಳಿ ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಇಂದು ಆಹಾರ, ಶಿಕ್ಷಣ, ಯುದ್ದ, ಗಾಳಿ ಎಲ್ಲವೂ ವ್ಯಾಪಾರಿಕರಣವಾಗಿದೆ. ಜಾಗತೀಕರಣದಿಂದ ಭಾಷೆಗೆ ಇಂತಹ ಪರಿಸ್ಥಿತಿ ಬಂದಿದೆ ಎನ್ನುವುದು ಕಲ್ಪನೆಗೆ ಸರಿಯಲ್ಲ ಎಂದರು. ಕೋಟ ಗೀತಾನಂದ ಪೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆಂಗ್ಲ ಭಾಷೆ ವೈಭವೀಕರಣದಿಂದ ಕನ್ನಡ ಭಾಷೆ ಅಪಾಯದ ಅಂಚಿನಲ್ಲಿದೆ. ನಮ್ಮ ಭಾಷೆ ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಇಂಗ್ಲಿಷ್ ಜತೆಗೆ ಕನ್ನಡ ಕಡ್ಡಾಯಗೊಳಿಸುವ ಕೆಲಸವಾಗಬೇಕು ಎಂದರು. ಕನ್ನಡ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ,ಜು.4: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಪಾರಂಪರಿಕವಾಗಿ ಪೂಜೆ ನಡೆಸುವ ಅರ್ಚಕ ಕುಟುಂಬದ, ಪ್ರಸ್ತುತ ಬ್ರಹ್ಮಾವರದಲ್ಲಿ ನೆಲೆಸಿದ್ದ ಅರುಣ ಅಡಿಗ ಅಸೌಖ್ಯದಿಂದ ನಿಧನರಾಗಿದ್ದಾರೆ. ಒಂದು ವರ್ಷದ ಹಿಂದೆ ಬ್ರಹ್ಮಾವರದ ತಮ್ಮ ನಿವಾಸಿದಿಂದ ಬ್ಯಾಂಕಿಗೆ ತೆರಳುತ್ತಿದ್ದ ಸಂದರ್ಭ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿಂಡಿಕೇಟ್ ಬ್ಯಾಂಕಿನ ಹಿರಿಯ ಉದ್ಯೋಗಿಯಾಗಿ ಬೈಂದೂರು, ಬ್ರಹ್ಮಾವರ ಮುಂತಾದೆಡೆ ಸೇವೆ ಸಲ್ಲಿಸುತ್ತಲೇ ತಮ್ಮ ಸಾಮಾಜಿಕ, ಧಾರ್ಮಿಕ ಸೇವಾ ಕಾರ್ಯಗಳ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದರು. ದಿವಂಗತ ವಿ.ಎಸ್. ಆಚಾರ್ಯ ಅವರ ಪರಮಾಪ್ತರಲ್ಲಿ ಓರ್ವರಾಗಿದ್ದ ಅಡಿಗರು ಅಭಿವೃದ್ಧಿಯ ವಿಷಯದಲ್ಲಿ ಪಕ್ಷಾತೀತ ನಿಲುವು ತಳೆದಿದ್ದರು. ಬೈಂದೂರು ಒತ್ತಿನಣೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಜೀರ್ಣೋದ್ಧಾರದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಅವರು ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಾಣಿಗ ಸಮಾಜದ ಪ್ರಮುಖ ಶಕ್ತಿ ಪೀಠವಾದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಶ್ರೀ ವ್ಯಾಸರಾಜ ಮಠದ ಜೀರ್ಣೊದ್ಧಾರ ಕಾರ್ಯ ಹಂತಿಮ ಹಂತದಲ್ಲಿದ್ದು ಇದರ ನೂತನ ವೃಂದಾವನ ಸಮರ್ಪಣೆ ಕಾರ್ಯಕ್ರಮ ಶನಿವಾರ ಮಠದ ವಠಾರದಲ್ಲಿ ನಡೆಯಿತು. ವೇದಮೂರ್ತಿ ವಿಜಯ ಪೆಜತ್ತಾಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವೃಂದಾವನ ದಾನಿಗಳಾದ ಶಾರದಾ ಪುಂಡಲೀಕ ಗಾಣಿಗ, ಉದ್ಯಮಿ ನಿತ್ಯಾನಂದ ಗಾಣಿಗ, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರ ನಾರಾಯಣ ಗಾಣಿಗ ಬೀಜಾಡಿ, ಕುಂದಾಪುರ ಟಿಂಬರ್ ಡಿಪೊ ಮಾಲೀಕ ಗೋಪಾಲ ಗಾಣಿಗ, ಗ್ರಾಮ ಪಂಚಾಯಿತಿ ಸದಸ್ಯ ರವಿ ಗಾಣಿಗ ಆಜ್ರಿ, ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಗಾಣಿಗ, ಹಿರಿಯರಾದ ಕೊಗ್ಗ ಮಾಸ್ಟರ್, ನರಸಿಂಹ ಗಾಣಿಗ ಹಂಗಳೂರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ ಗಂಗೊಳ್ಳಿ: ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳಿಹಿತ್ಲು ರಸ್ತೆಯು ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಈ ರಸ್ತೆಯಲ್ಲಿ ಜನ ಹಾಗೂ ವಾಹನ ಸಂಚಾರ ದುಸ್ತರವಾಗಿದೆ. ಕಳಿಹಿತ್ಲು ಪರಿಸರದಲ್ಲಿ ಸುಮಾರು 60ಕ್ಕೂ ಮಿಕ್ಕಿ ಕುಟುಂಬಗಳು ವಾಸಿಸುತ್ತಿದ್ದು ತಮ್ಮ ದಿನಿತ್ಯದ ಅವಶ್ಯಕತೆಗಳಿಗೆ ಗುಜ್ಜಾಡಿ ಪೇಟೆಯನ್ನು ಅವಲಂಬಿಸಿದ್ದಾರೆ. ಕಳಿಹಿತ್ಲುವಿನಿಂದ ಗುಜ್ಜಾಡಿಗೆ ಬರಲು ಇರುವ ಏಕೈಕ ರಸ್ತೆಯಾಗಿರುವ ಈ ರಸ್ತೆಯು ಪ್ರತಿವರ್ಷ ಮಳೆಗಾಲದ ಸಮಯದಲ್ಲಿ ಹಾನಿಯಾಗುತ್ತಿತ್ತು. ಪ್ರತಿವರ್ಷ ಅಲ್ಪಸ್ವಲ್ಪ ಹಾನಿಗೊಳಗಾಗುತ್ತಿದ್ದ ಈ ರಸ್ತೆಯನ್ನು ಸ್ಥಳೀಯ ಗ್ರಾಮ ಪಂಚಾಯತ್ ದುರಸ್ಥಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಿತ್ತು. ಕಳೆದ ವರ್ಷ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಶಾಸಕರ ನಿಧಿಯಿಂದ ಸುಮಾರು 3ಲಕ್ಷ ರೂ. ಮಂಜೂರಾಗಿದ್ದು, ಈ ಅನುದಾನವನ್ನು ಬಳಸಿಕೊಂಡು ರಸ್ತೆಯುದ್ಧಕ್ಕೂ ಒಂದು ಒಂದು ಅಡಿಯಷ್ಟು ಕೆಂಪು ಮಣ್ಣು ಹಾಕಿ ರಸ್ತೆಯ ಅಭಿವೃದ್ಧಿಪಡಿಸಲಾಗಿತ್ತು ಎನ್ನಲಾಗಿದೆ. ಆದರೆ ಇತ್ತೀಚಿಗೆ ಸುರಿದ ಧಾರಾಕರ ಮಳೆಗೆ ಇಡೀ ಕಳಿಹಿತ್ಲು ರಸ್ತೆ ರಸ್ತೆಯೇ ಸಂಪೂರ್ಣವಾಗಿ ಕೆಸರುಮಯ ರಸ್ತೆಯಾಗಿ ಮಾರ್ಪಾಡಾಗಿದೆ. ರಸ್ತೆಯ ಮೇಲೆ ಜನರು ನಡೆದಾಡಲು ಕಷ್ಟಪಡುತ್ತಿದ್ದರೆ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಾಣಿಗ ಸಮಾಜದ ಪ್ರಮುಖ ಶಕ್ತಿ ಪೀಠವಾದ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಶ್ರೀ ವ್ಯಾಸರಾಜ ಮಠದ ಜೀರ್ಣೊದ್ಧಾರ ಕಾರ್ಯ ಹಂತಿಮ ಹಂತದಲ್ಲಿದ್ದು ಸಮಾಜ ಭಾಂದವರ ಸಮ್ಮುಖದಲ್ಲಿ ಶ್ರಮದಾನ ಕಾರ್ಯಕ್ರಮ ಸೋಮವಾರ ಮಠದ ವಠಾರದಲ್ಲಿ ನಡೆಯಿತು. ವಿವಿಧ ಘಟಕಗಳ ಸಮಾಜ ಭಾಂದವರೂ ಹಾಗೂ ಮಹಿಳಾ ಸದಸ್ಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಸಿ ಶ್ರಮದಾನದ ಮೂಲಕ ಮಠದ ಸ್ವಚ್ಚತೆಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರ ನಾರಾಯಣ ಗಾಣಿಗ ಬೀಜಾಡಿ, ಕುಂದಾಪುರ ಟಿಂಬರ್ ಡಿಪೊ ಮಾಲೀಕ ಗೋಪಾಲ ಗಾಣಿಗ, ಬಸ್ರೂರು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಗಾಣಿಗ, ಹಿರಿಯರಾದ ಮಹಾಬಲ ಗಾಣಿಗ, ಕೊಗ್ಗ ಮಾಸ್ಟರ್, ನರಸಿಂಹ ಗಾಣಿಗ ಹಂಗಳೂರು, ಪುಂಡಲೀಕ ಗಾಣಿಗ, ಶಿಕ್ಷಕ ಭಾಸ್ಕರ ಗಾಣಿಗ ಕೊಡಪಾಡಿ, ಸುಬ್ರಮಣ್ಯ ಚರ್ಚ್‌ರೋಡ್, ನಿವೃತ್ತ ಸೈನಿಕ ರಾಮಚಂದ್ರ ಗಾಣಿಗ, ಚಂದ್ರಶೇಖರ ಕೋಡಿ,…
