36 ಕ್ವಾರ್ಟಸ್ ವಾಸಕ್ಕೆ ಸಿದ್ಧ: ಮಾರ್ಚ್‌ನಲ್ಲಿ ದ್ವಿತೀಯ ಹಂತ ಪೂರ್ಣ: ಎಸ್ಪಿ ಅಣ್ಣಾಮಲೈ ಕುಂದಾಪುರ: ಪೊಲೀಸರ ಬಹುಕಾಲದ ಬೇಡಿಕೆಯಾದ ಸುಸಜ್ಜಿತ ವಸತಿಗೃಹ ಅಂತು ಅಂತಿಮ ಹಂತ ತಲುಪಿದೆ. ಸುಮಾರು 2.96ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಸಮುಚ್ಚಯದಲ್ಲಿ 76 ಪೇದೆ ಹಾಗೂ 6 ಉನ್ನತ ಮಟ್ಟದ ಅಧಿಕಾರಿಗಳ ವಾಸಕ್ಕೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣಗೊಂಡಿದ್ದು ಮೊದಲ ಹಂತ 36ರ ವಸತಿಗೃಹವನ್ನು ವಾಸಕ್ಕೆ ಸಿದ್ಧಗೊಂಡಿದ್ದು ಕಾಮಗಾರಿಗೆ ಸಮುಚ್ಚಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಕಾಮಗಾರಿ ಪ್ರಗತಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಪೊಲೀಸ್ ಗೃಹ 2020ಯೋಜನೆಯ ಅನ್ವಯ ಕುಂದಾಪುರದ ಫೆರಿ ರಸ್ತೆಯಲ್ಲಿ ನಿರ್ಮಾಣಗೊಂಡ ಪೊಲೀಸ್ ವಸತಿ ಸಮುಚ್ಛಯ ಸಾಂಕೇತಿಕವಾಗಿ ಉದ್ಘಾಟಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಸುದ್ಧಿಗಾರರ ಜೊತೆ ಮಾತನಾಡಿ, ಕುಂದಾಪುರದ ಪೊಲೀಸ್ ಸಿಬ್ಬಂದಿಗಳ ವಸತಿ ಸಮಸ್ಯೆ ಹಲವು ದಿನಗಳಿಂದ ಇದ್ದು ಪೊಲೀಸ್ ಸಿಬ್ಬಂದಿಗಳು ಕ್ವಾರ್ಟಸ್ ಇಲ್ಲದೇ ಬೇರೆ ಬೇರೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಂಗ್ರೆಸ್ಸಿನ ಸಭೆಗಳಲ್ಲಿ ತಾನು ಸ್ವತಂತ್ರವಾಗಿ ಸ್ವರ್ಧಿಸಿರುವುದೇ ದೊಡ್ಡ ಪ್ರಮಾದ ಎಂಬಂತೆ ತನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡಲಾಗುತ್ತಿದೆ. ಹೀಗೆ ನಿರಾಧಾರವಾಗಿ ಆರೋಪಿಸುವ ಬದಲು ತನ್ನೊಂದಿಗೆ ಬಹಿರಂಗವಾಗಿ ವಿಷಯಾಧಾರಿತ ಚರ್ಚೆಗೆ ಬನ್ನಿ ಎಂದು ವಿಧಾನ ಪರಿಷತ್ ಸ್ವತಂತ್ರ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಸವಾಲು ಹಾಕಿದರು. ಹೆಮ್ಮಾಡಿ ಜೂವೆಲ್ ಪಾರ್ಕ್‌ನಲ್ಲಿ ನಡೆದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಪ್ರಕಾಶ್ ಹೆಗ್ಡೆ ಬೇರೆ ಪಕ್ಷದಿಂದ ಬಂದವರು ಎಂದು ಆರೋಪಿಸುವ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮತ್ತು ಮಾಜಿ ಶಾಸಕ ಯು.ಆರ್.ಸಭಾಪತಿ ಮೂಲ ಕಾಂಗ್ರೆಸಿಗರಾ? ಅವರೂ ಕೂಡ ಬೇರೆ ಬೇರೆ ಪಕ್ಷದಿಂದ ಕಾಂಗ್ರಸ್‌ಗೆ ಬಂದವರಲ್ಲವೇ ಎಂದು ಪ್ರಶ್ನಿಸಿದರು. ಅಧಿಕಾರ ದಾಹ ಯಾರಿಗೆ? ಜೆಪಿ ಹೆಗ್ಡೆಗೆ ಅಧಿಕಾರದಾಹ ಎಂದು ಗೂಬೆ ಕೂರಿಸಿವ ಕಾಂಗ್ರೆಸ್ಸಿಗರಿಗೆ ತಾನು ಎರಡು ಬಾರಿ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಸರಕಾರ ನಿಲುವು ಸರಿಕಾಣದಿದ್ದಾಗ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಕುಮಾರ ಸ್ವಾಮಿ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡುತ್ತೇನೆ…
ಕುಂದಾಪುರ: ಮಳೆ ನೀರಿನ ಕೊಯ್ಲು, ನೀರಿನ ಮಿತ ಬಳಕೆ, ನೀರಾವರಿ ಪದ್ಧತಿಗಳ ಕ್ರಮಬದ್ದ ನಿರ್ವಹಣೆ, ಬಹುಮಹಡಿ ಮಿಶ್ರಬೆಳೆ ಪದ್ಧತಿ, ಸುಧಾರಿತ ಅಡಿಕೆ ಕೊಯ್ಲು ಮನೆ ಮತ್ತು ತೋಟಗಳಲ್ಲಿ ಅಲಂಕಾರಿಕ ಸಸ್ಯಗಳ ಅಳವಡಿಕೆ ಮತ್ತು ಉತ್ತಮ ಸಾಗುವಳಿ ಪದ್ಧತಿಗಳ ಮೂಲಕ ರೈತ ವರ್ಗಕ್ಕೆ ಮಾರ್ಗದರ್ಶಕ ಪೈಲೂರು ಶ್ರೀನಿವಾಸ ರಾವ್ ಅವರಿಗೆ ಬಸ್ರೂರು ಅಪ್ಪಣ್ಣ ಹೆಗೆ ಹೆಸರಿನ 2015-16 ಸಾಲಿನ ಕೃಷಿ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಡಿ.24 ರಂದು ಬಸ್ರೂರಿನಲ್ಲಿ ನಡೆಯುವ ಬಿ. ಅಪ್ಪಣ್ಣ ಹೆಗ್ಡೆ ಅವರ 81ನೇ ಹುಟ್ಟುಹಬ್ಬದಂದು ಶ್ರೀ ರಾಮಕೃಷ್ಣ ಆಶ್ರಮ ಬೈಲೂರು ಶ್ರೀ ವಿನಾಯಕನಂದಜೀ ಮಹರಾಜ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಹಾಗೂ ಸಭೆ ಅಧ್ಯಕ್ಷv ಡಾ. ಎಚ್.ಎಸ್.ಬಲ್ಲಾಳ್ ವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಕಲ ಬಿ.ರಾಮಕಿಶನ್ ಹೆಗ್ಡೆ ತಿಳಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಸ್ಥಾನಮಾನ ಹಾಗೂ ಜನರ ವಿಶ್ವಾಸ ಹೊಂದಿರುವ ನೇರ ನುಡಿಯ, ಸರಳ ನಡೆಯ ರಾಜಕಾರಣಿಗಳ ಪೈಕಿ ಜಯಪ್ರಕಾಶ್ ಹೆಗ್ಡೆಯವರೂ ಒಬ್ಬರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿ ಜಯಕಂಡವರು. ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶಿಸಿ 1994ರಲ್ಲಿ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಂದರು ಮತ್ತು ಮೀನುಗಾರಿಕಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. 1999 ಮತ್ತು 2004ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಯ ಸಾಧಿಸಿದ್ದರು. ಆ ಬಳಿಕ ಕಾಂಗ್ರೆಸ್ ಪಕ್ಷ ಸೇರಿ 2007ರ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದಿಂದ ಡಿ.ವಿ ಸದಾನಂದ ಗೌಡರ ವಿರುದ್ದ ಸ್ವರ್ಧಿಸಿ ಸೋಲುಂಡರೂ ಮತ್ತೆ 2012ರ ಉಪ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಗೆಲುವು ತಂದುಕೊಟ್ಟು ಕಾಂಗ್ರೆಸ್ ನ ಸರಣಿ ಸೋಲಿಗೆ ಬ್ರೇಕ್ ಹಾಕಿದ್ದರು. ಇದೀಗ ಸ್ಥಳೀಯ ಸಂಸ್ಥೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಉಡುಪಿ-ದಕ್ಷಿಣ ಕನ್ನಡ ಕ್ಷೇತ್ರದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಫಲವಾಗಿ ಪಕ್ಷದಿಂದ ಆರು ವರ್ಷ ಉಚ್ಚಾಟನೆಯೂ ಆಗಿದ್ದಾರೆ. ಈ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಜಯಪ್ರಕಾಶ್…
ಕುಂದಾಪ್ರ ಡಾಟ್ ಕಾಂ . ಕುಂದಾಪುರ: ರಾಜ್ಯದ ಟೆನ್ನಿಸ್‌ಬಾಲ್ ಕ್ರಿಕೆಟ್‌ನ ಹೆಸರಾಂತ ತಂಡವಾದ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ವತಿಯಿಂದ 5೫ನೇ ಬಾರಿಗೆ ರಾಷ್ಟ್ರೀಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟ ‘ಚಕ್ರವರ್ತಿ ಟ್ರೋಫಿ’ ಡಿ. 24ರಿಂದ 27ರವರೆಗೆ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ. [quote font_size=”13″ bgcolor=”#b0d69c” bcolor=”#113b66″ arrow=”yes” align=”right”]ಚಕ್ರವರ್ತಿ ಕ್ರಿಕೆಟ್ ಕ್ಲಬ್: 1974 ರಲ್ಲಿ ಪ್ರಾರಂಭವಾದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಹಂತ ಹಂತವಾಗಿ ಬೆಳೆದು 1987 ರಿಂದ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಕೂಟಗಳನ್ನು ಗೆಲ್ಲುತ್ತಾ ರಾಜ್ಯದ ಹೆಸರಾಂತ ತಂಡವಾಗಿ ಹೊರಹೊಮ್ಮಿತು. ಈ ವರೆಗೆ ಸುಮಾರು 27 ರಾಜ್ಯಮಟ್ಟದ ಪ್ರಶಸ್ತಿ ಹಾಗೂ 100ಕ್ಕೂ ಮಿಕ್ಕಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಚಕ್ರವರ್ತಿ ಕುಂದಾಪುರ ತಂಡ ಗೆದ್ದಿದೆ. ಟೆನ್ನಿಸ್‌ಬಾಲ್ ಕ್ರಿಕೆಟ್‌ಗಷ್ಟೇ ತಮ್ಮನ್ನುಸೀಮಿತಗೊಳಿಸದೆ 1998 ರಿಂದ ಲೆದರ್‌ಬಾಲ್ ಕ್ರಿಕೆಟ್ ತರಬೇತಿ ಶಿಬಿರ ನಡೆಸಿ ಯುವ ಪ್ರತಿಭೆಗಳನ್ನು ಶೋಧಿಸಿ ವಿಶ್ವವಿದ್ಯಾನಿಲಯ, ರಾಜ್ಯ ಗ್ರಾಮಾಂತರ, ರಾಜ್ಯ ರಣಜಿ ಮೀಸಲು ಹಾಗೂ ರಾಷ್ಟ್ರಮಟ್ಟದ ಜೂನಿಯರ್ ತಂಡದವರೆಗೂ ಕುಂದಾಪುರದ ಪ್ರತಿಭೆಗಳನ್ನು ಪರಿಚಯಿಸಿದ…
ಬಸ್ರೂರು: ರೋಟರಿ ಸನರೈಸ್‌ನಿಂದ ಸ್ಮಾರ್ಟ್ ಕ್ಲಾಸ್ ಕೊಡುಗೆ ಕುಂದಾಪುರ: ಆಧುನಿಕ ಜಗತ್ತು ನಾಗಲೋಟದಲ್ಲಿ ಸಾಗುತ್ತಿರುವ ಕಾಲಘಟ್ಟದಲ್ಲಿ ಶಿಕ್ಷಣ ಕಲಿಕೆಯ ವ್ಯವಸ್ಥೆಯು ಉತ್ತಮಗೊಳ್ಳ ಬೇಕೆಂಬ ನಿಟ್ಟಿನಲ್ಲಿ ರೋಟರಿ ಕ್ಲಬ್ ಸಾಕ್ಷರತಾ ಯೋಜನೆಯಡಿ ಶಾಲೆಗಳಲ್ಲಿ ಇ-ಲರ್ನಿಂಗ್ ಕಿಟ್‌ನ್ನು ಅಳವಡಿಸಿ ಗುಣಮಟ್ಟದ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಅವಕಾಶವನ್ನು ಕಲ್ಪಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆನ್ನುವುದು ನಮ್ಮ ಆಶಯ ಆದುದರಿಂದ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲಿ ಎಂದು ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಆಧಿರಾಜ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿಯ ಸಂದರ್ಭ ಬಸ್ರೂರಿನ ನಿವೇದಿತಾ ಪ್ರೌಢ ಶಾಲೆಗೆ ಅಳವಡಿಸಿದ ಇ-ಲರ್ನಿಂಗ್ ಸ್ಮಾರ್ಟ್ ಕ್ಲಾಸ್‌ನ್ನು ಉದ್ಘಾಟಿಸಿ ಮಾತನಾಡಿದರು. ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ ಭಾರತವನ್ನು ಪಿಡುಗಾಗಿ ಕಾಡಿದ ಪಲ್ಸ್ ಪೋಲಿಯೋವನ್ನು ಭಾರತ ಮುಕ್ತಗೊಳಿಸುವಲ್ಲಿ ರೋಟರಿ ಕ್ಲಬ್ ಯಶಸ್ಸನ್ನು ಕಂಡಿದ್ದು, ಇದೀಗ ಶಿಕ್ಷಣ…
ರೋಟರಿಗೆ ಸಲ್ಲಿಸಿದ ಸೇವೆ ಅಪಾರ : ಸತೀಶ್ ಎನ್. ಶೇರೆಗಾರ್ ಕುಂದಾಪುರ: ರೋಟರಿ ಇಂಟರ್‌ನ್ಯಾಷನಲ್‌ಗೆ ಕಳೆದ ಮೂರು ತಲೆಮಾರುಗಳಿಂದ ಅನನ್ಯ ಸೇವೆಯನ್ನು ಸಲ್ಲಿಸುತ್ತಾ ಬಂದ ಕುಟುಂಬದ ಹಿನ್ನಲೆಯನ್ನೊಳಗೊಂಡು ಇದೀಗ ರೋಟರಿ ಜಿಲ್ಲೆ 3180 ವಿಭಾಗವಾಗಿ 3181 ಮತ್ತು 3182 ಪ್ರತ್ಯೇಕ ಜಿಲ್ಲೆಗಳಾಗಿ ಮಾರ್ಪಾಡು ಹೊಂದುತ್ತಿರುವ ಕಾಲಘಟ್ಟದಲ್ಲಿ 3182 ಇದರ 2018-19ನೇ ಸಾಲಿನ ರೋಟರಿ ಜಿಲ್ಲಾ ಗವರ್ನರ್ ಆಗಿ ಅವಿರೋಧವಾಗಿ ಆಯ್ಕೆಯಾದ ಅಭಿನಂದನ ಶೆಟ್ಟರು ರೋಟರಿಗೆ ಸಲ್ಲಿಸಿದ ಸೇವೆ ಅಪಾರವಾದುದು ಎಂದು ರೋಟರಿ ವಲಯ ೧ರ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಹೇಳಿದರು. ಅವರು ರೋಟರಿ ವಲಯ 1ರ ಆಶ್ರಯದಲ್ಲಿ ಕುಂದಾಪುರ ಈಸ್ಟ್‌ವೆಸ್ಟ್ ಕಂಟ್ರಿ ಕ್ಲಬ್‌ನಲ್ಲಿ ನಡೆದ 2018-19ರ ಸಾಲಿನ ಗವರ್ನರ್ ಆಗಿ ಆಯ್ಕೆಯಾದ ಅಭಿನಂದನ ಎ. ಶೆಟ್ಟರ ಸನ್ಮಾನ ಸಮಾರಂಭದಲ್ಲಿ ಅಭಿನಂದನ ಶೆಟ್ಟಿಯವರನ್ನು ಸನ್ಮಾನಿಸಿ ಮಾತನಾಡಿದರು. ರೋಟರಿಯ ಉನ್ನತ ಜವಾಬ್ದಾರಿಯನ್ನು ಹೊತ್ತಿರುವ ಸಂದರ್ಭದಲ್ಲಿ ಹಲವಾರು ಸವಾಲುಗಳು ಕಣ್ಮುಂದೆ ಇದೆ. ಅವೆಲ್ಲವನ್ನು ನಿರೀಕ್ಷೆಗೂ ಮೀರಿ ಸಂಘಟಿಸುವ, ತನ್ಮೂಲಕ ರೋಟರಿ 3182 ಬೆಳವಣಿಗೆಯಲ್ಲಿ ಮಹತ್ತರ…
ಬೈಂದೂರು: ಮಕ್ಕಳಿಗೆ ಶಾಲೆಯಲ್ಲಿ ಕೇವಲ ಶಿಕ್ಷಣ ಮಾತ್ರವಲ್ಲದೇ ಕರ್ತವ್ಯ ಪ್ರಜ್ಞೆ ಕಾನೂನುಗಳ ಅರಿವುಗಳಂತಹ ಸಾಮಾನ್ಯಜ್ಞಾನವನ್ನು ಎಳೆವೆಯಲ್ಲಿ ಕಲಿಸುವ ಮೂಲಕ ಅವರು ಸರಿದಾರಿಯಲ್ಲಿ ಸಾಗುವ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಣ ಪಡೆಯತ್ತಿರುವ ಮಕ್ಕಳು ಮೊದಲು ಮಾನಸಿಕವಾಗಿ ಬಲಿಷ್ಟರಾಗಬೇಕು ಎಂದು ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಮುದ್ರಾಡಿ ಹೇಳಿದರು. ನಾಗೂರು ಸಂದೀಪನ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕವೂ ಸಾಧನೆಗೆ ಅವಕಾಶಗಳನ್ನು ಕಲ್ಪಿಸಬೇಕು. ಸಮಾಜದ ಕುರಿತ ಕಳಕಳಿ, ಸಜ್ಜನರ, ಗುರು-ಹಿರಿಯರ ಸಲಹೆ, ಸೂಚನೆ ಮತ್ತು ಮಾರ್ಗದರ್ಶನದ ಮೂಲಕ ದೇಶದ ಅಭ್ಯುದಯಕ್ಕೆ ಇಂದಿನ ಮಕ್ಕಳು ಕಾರಣರಾಗಬೇಕು ಎಂದರು. ಮಕ್ಕಳು ದೇಶದ ಆಸ್ತಿ. ಹೆತ್ತವರ ಅತೀಯಾದ ಪ್ರೀತಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು. ಎಂದು ಎಚ್ಚರಿಸಿದ ಅವರು ಕೇವಲ ಪದವಿಪತ್ರ (ಡಿಗ್ರಿ ಸರ್ಟಿಫಿಕೇಟ್) ಮಾತ್ರ ಮಾನದಂಡವಾಗಬಾರದು. ಪಾಲಕರು ಮಕ್ಕಳ ಆಸಕ್ತಿಯ ವಿಷಯಗಳನ್ನು ಸೂಕ್ಷವಾಗಿ ಗಮನಿಸಿ ಆರಂಭದಿಂದಲೇ ಅವರ ಪ್ರತಿಭೆಗೆ ತಕ್ಕಂತೆ ವೇದಿಕೆ ನಿರ್ಮಿಸಬೇಕು. ಎಲ್ಲಾ…
ಬೈಂದೂರು: ಕರಾವಳಿಯಾದ್ಯಂತ ನಿರಂತರವಾಗಿ ನಡೆಯುತ್ತಿರುವ ಬಡ್ಡಿ ದಂಧೆಗೆ ಹಲವಾರು ಕುಟುಂಬಗಳು ಬಲಿಯಾಗುತ್ತಲೇ ಇವೆ. ತಮಗೇ ಗೊತ್ತಿಲ್ಲದಂತೆ ಹಲವು ಬಡ ಕುಟುಂಬಗಳು ಬಡ್ಡಿ ದಂಧೆಯಿಂದ ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತಿರುವ ಬೆನ್ನಿಗೇ ಯಡ್ತರೆ ಗ್ರಾಪಂ ವ್ಯಾಪ್ತಿಯ ಆಲಂದೂರು ಎಂಬಲ್ಲಿ ಇಂತಹ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಸಾಲ ಮತ್ತು ಬಡ್ಡಿ ತೀರಿದರೂ ಮತ್ತೆ ಒಂದು ಲಕ್ಷ ರೂಪಾಯಿ ಕೊಡುವಂತೆ ಕಿರುಕುಳ ನೀಡುತ್ತಿದ್ದ ಆರೋಪಿ ಆಲಂದೂರು ನಿವಾಸಿ ಅನಂತ ಕೊಠಾರಿ ಯಾನೆ ಅಂತ ಕೊಠಾರಿಯ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ಸಮಯದ ಹಿಂದೆ ಯಡ್ತೆರೆ ಗ್ರಾಮದ ಆಲಂದೂರು ನಿವಾಸಿ ಪ್ರಕರಣದ ಆರೋಪಿ ಅಂತ ಕೊಠಾರಿ ಎಂಬಾತ ಅಲ್ಲೇ ಮನೆ ಸಮೀಪದ ಮಾಚ ಪೂಜಾರಿ ಎಂಬುವರಿಗೆ ಒಂದು ಲಕ್ಷ ರೂಪಾಯಿ ಸಾಲವನ್ನು ಬಡ್ಡಿಗೆ ನೀಡಿದ್ದರು. ಅದರ ಜೊತೆಗೆ ಕೊಟ್ಟ ಸಾಲಕ್ಕೆ ಜಾಮೀನು ಎಂಬಂತೆ ಕರ್ನಾಟಕ ಬ್ಯಾಂಕಿನ ಶಿರೂರು ಶಾಖೆಯ ಖಾಲಿ ಚೆಕ್ಕನ್ನು ಪಡೆದುಕೊಂಡಿದ್ದರು. ಬಡ್ಡಿಗೆ ಹಣ ಪಡೆದಿದ್ದ ಮಾಚ ಪೂಜಾರಿ…
ಗಂಗೊಳ್ಳಿ: ಬೇರೆ ಎಲ್ಲಾ ಧರ್ಮಗಳಿಗೆ ಹೋಲಿಸಿದರೆ ಹಿಂದುಗಳಲ್ಲಿ ಧರ್ಮದ ಮೇಲೆ ಪ್ರೀತಿ ಕಡಿಮೆಯಾಗುತ್ತಿದೆ. ನಮ್ಮ ದೇಶದ ನೆಲ, ಜಲ, ಕುಲಕ್ಕೆ ನಾವು ಏನು ಮಾಡಿದ್ದೇವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಹಿಂದು ಧರ್ಮವನ್ನು ಒಡೆಯುವ, ಹಿಂದು ಧರ್ಮ ಗುರುಗಳನ್ನು ಅತಂತ್ರಗೊಳಿಸುವ ಹುನ್ನಾರ ಕುತಂತ್ರ ನಡೆಯುತ್ತಿದೆ. ಆ ಮೂಲಕ ಬಹುಸಂಖ್ಯಾತ ಹಿಂದುಗಳನ್ನು ಒಡೆದು ದೇಶದಲ್ಲಿ ಅಶಾಂತಿ ಅಜಾಗರೂಕತೆ ಸೃಷ್ಟಿಸುವ ಅಸಹಿಷ್ಣುತೆ ಹೆಸರಿನಲ್ಲಿ ಗೊಂದಲ ಮೂಡಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಶ್ರೀ ಸಂತೋಷ ಗುರೂಜಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ಗಂಗೊಳ್ಳಿಯ ಶ್ರೀ ವೀರೇಶ್ವರ ದೀಪೋತ್ಸವ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾಗಿರುವ ಸುಮಾರು 15 ಲಕ್ಷ ರೂ. ವೆಚ್ಚದ ನೂತನ ಪುಷ್ಪರಥವನ್ನು ಶ್ರೀದೇವರಿಗೆ ಸಮರ್ಪಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ನಾವು ಜಾತಿ ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಿದಾಗ, ನಮ್ಮಲ್ಲಿ ಸರಿಸಮಾನತೆ ಬೆಳೆದಾಗ ಮಾತ್ರ ನಮ್ಮ ದೇಶ ಒಂದಾಗಲು…
