Author: ನ್ಯೂಸ್ ಬ್ಯೂರೋ

ಕುಂದಾಪರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಮತ್ತು BAERU ಕಲೇಕ್ಟಿವ್ಸ್, ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಪ್ಲಾಸ್ಟಿಕ್ ಬಳಕೆಯ ಅರಿವಿನ ಕುರಿತಾದ ‘ಪ್ಲಾಸ್ಟಿಕಾಸುರ’ ಯಕ್ಷಗಾನ ಪ್ರಸ್ತುತಿ ನಡೆಯಿತು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ, ಆಡಳಿತ ನಿಕಾಯಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರೇಷ್ಮಾ ಶೆಟ್ಟಿ ಸ್ವಾಗತಿಸಿ, ಪ್ರವೀಣಾ ಎಮ್. ಪೂಜಾರಿ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಭೂಮಿಯನ್ನು ಮಲಿನಗೊಳಿಸುವ ವಿಕೃತ ಮನಸ್ಥಿತಿಯ ವಿರುದ್ಧ ಶಿಕ್ಷಣ ತಜ್ಞ ಡಾ. ಬಾಲಕೃಷ್ಣ ಶೆಟ್ಟಿ ತೀವ್ರ ಬೇಸರ ವ್ಯಕ್ತಪಡಿಸಿದರು. ಅವರು ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್, ಸಮುದ್ಯತಾ ಗ್ರೂಪ್ಸ್ ಕೋಟ, ಚಿತ್ತಾರಿ ಟ್ರಸ್ಟ್ ಮಣೂರು ಇವರುಗಳ ಸಯೋಗದೊಂದಿಗೆ ಕೋಟ ಗ್ರಾಮಪಂಚಾಯತ್ ಎಸ್ ಎಲ್ ಆರ್ ಎಂ ಘಟಕ ಇವರ ಸಂಯೋಜನೆಯೊಂದಿಗೆ 296ನೇ ಭಾನುವಾರದ ಪರಿಸರಸ್ನೇಹಿ ಕಾರ್ಯಕ್ರಮದ ಅಂಗವಾಗಿ ಕೋಟ ಗಿಳಿಯಾರು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಊರು ಸ್ವಚ್ಛವಾಗಿದ್ದರೆ ಮಾತ್ರ ಮನಸ್ಸು ಶುಚಿಯಾಗಿರಲು ಸಾಧ್ಯ. ಕಂಡಕಂಡಲ್ಲಿ ತ್ಯಾಜ್ಯ ಎಸೆಯುವ ಹೀನ ಮನಸ್ಥಿತಿಯನ್ನು ವಿರುದ್ಧ ಆಕ್ರೋಶ ಹೊರಹಾಕಿ ನಮ್ಮಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಆದರೆ ಪಂಚವರ್ಣದವರು ಮಾಡುವ ಪ್ರತಿ ಭಾನುವಾರ ಪ್ರಕೃತಿ ಮಾತೆಯನ್ನು ಆರಾಧಿಸುವ ಕಾರ್ಯ ಬಹು ಶ್ರೇಷ್ಠವಾದ ಕಾರ್ಯವಾಗಿದೆ. ಇಂತಹ ಮನಸ್ಸಗಳು ಗ್ರಾಮಗ್ರಾಮದಲ್ಲಿ ಪಸರಿಸಿಕೊಳ್ಳಲಿ.…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ನೈತಿಕತೆ, ನಿರಂತರ ಕಲಿಯುವಿಕೆ ಮತ್ತು  ಜೀವನ ಮೌಲ್ಯಗಳು  ಸುಸಂಬದ್ಧ ಮತ್ತು ಸಂತೋಷದ ಬದುಕಿಗೆ ಆಧಾರಸ್ತಂಭ ಎಂದು ಮೈಸೂರು ಮರ್ಕಂಟೈಲ್ ಕಂಪೆನಿ ಲಿಮಿಟೆಡ್ ಇದರ ಅಧ್ಯಕ್ಷರು ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ರಿ., ಬೆಂಗಳೂರು ಇದರ ಅಧ್ಯಕ್ಷರಾದ ಡಾ. ಹೆಚ್.ಎಸ್. ಶೆಟ್ಟಿ ಹೇಳಿದರು.  ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೀವನದ ಯಶಸ್ಸಿನಲ್ಲಿ ನೈತಿಕ ಮೌಲ್ಯಗಳ ಪಾತ್ರ ಬಹುದೊಡ್ಡದು. ಪ್ರತಿ ಸಂದೇಶಗಳು, ಅನುಭಗಳು, ಜ್ಞಾನ ಇವೆಲ್ಲವೂ ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸುವ ಅತ್ಯುತ್ತಮ ಸಾಧನಗಳು. ಇದರಿಂದ ಕೌಟುಂಬಿಕ, ಸಾಮಾಜಿಕ ಜೀವನ ಚೆನ್ನಾಗಿರುತ್ತದೆ. ಅಲ್ಲದೇ  ರಾಷ್ಟ್ರದ ಬೆಳವಣಿಗೆಯಲ್ಲಿ ನಮ್ಮ ಕೊಡುಗೆಯನ್ನು ಅತ್ಯುತ್ತಮ ರೀತಿಯಲ್ಲಿ ನೀಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತದ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ಯುವಜನತೆಯ ಓದುವಿಕೆ, ಜ್ಞಾನ ಮತ್ತು ಅನುಭವಗಳ ಆಳವನ್ನು ಕಸಿದುಕೊಳ್ಳುವ ಭೀತಿ ಎದುರಾಗಿದೆ ಎಂದು ವಿಷಾದಿಸಿದರು. ಆದರೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶ ಇನ್ನೂ ಅಭಿವೃದ್ಧಿಯಾಗಬೇಕಿದೆ. ಅಂದರೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಡಾ. ಕೋಟ ಶಿವರಾಮ ಕಾರಂತರ ಶಿಷ್ಯೆ, ದಿ. ಮಾಲಿನಿ ಮಲ್ಯರ ಸಂಸ್ಮರಣಾ ಕಾರ್ಯಕ್ರಮವು ಡಾ. ಶಿವರಾಮ ಕಾರಂತ ಸ್ಟಡಿ ಮತ್ತು ಸಂಶೋಧನಾ ಸೆಂಟರ್ “ಮಾನಸ” ಸಾಲಿಗ್ರಾಮದಲ್ಲಿ ಗಣ್ಯರ ಸಮ್ಮುಖದಲ್ಲಿ ಜರಗಿತು. ಮುಖ್ಯ ಅತಿಥಿಯಾಗಿ ಗೆಳೆಯರ ಬಳಗದ ಕೆ. ತಾರಾನಾಥ ಹೊಳ್ಳ, ಪುಷ್ಪನಮನಗೈದು, ಡಾ. ಕಾರಂತರ ನೆನಪು ಕಾಡಿನ ಹಸಿರು ಇರುವವರೆಗೂ ಸಮುದ್ರದ ಶಬ್ದ ನಿಲ್ಲುವವರೆಗೂ, ಪಣ ತೊಟ್ಟು ಕಾರ್ಯಕ್ರಮ ಯಶಸ್ವೀಯಾಗಿನಿರ್ವಹಿಸಿ, ಸರ್ವರ ಪ್ರಶಂಸೆಗೆ ಪಾತ್ರರಾದ ಧೀಮಂತ ಮಹಿಳೆ ಮಾಲಿನಿ ಮಲ್ಯರಾಗಿದ್ದಾರೆ ಎಂದರು. ಸಭೆಯಲ್ಲಿ ಗಣ್ಯರು ಮಲ್ಯರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪುಷ್ಪ ನಮನ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಬಿ.ಎಂ ಗುರುರಾಜ ರಾವ್, ಕಾರ್ಯದರ್ಶಿ ನಾರಾಯಣ ಆಚಾರ್ಯ ಟ್ರಸ್ಟಿನ ವಿಶ್ವಸ್ಥರಾದ ನಾರಾಯಣ ಶೆಣೈ, ಸಂದೀಪ್ ಶೆಟ್ಟಿ, ಕೆ. ಪಂಜು ಪೂಜಾರಿ, ಉದ್ಯಮಿ ಮಾದವ ಪೈ, ಪ್ರಸನ್ನ ಉರಾಳ ಹಾಗೂ ಸಂಗೀತಾ, ರಂಜನಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಮಾಬುಕಳದಲ್ಲಿ ಟ್ರಕ್ ಡಿಕ್ಕಿಯಾಗಿ ಸ್ಕೂಟಿ ಸವಾರೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಉಪ್ಪಿನಕೋಟೆ ಸಾಲಿಕೇರಿ ನಿವಾಸಿ ನಿರ್ಮಲಾ (54) ಮೃತ ಮಹಿಳೆ. ಅವರು ತನ್ನ ಪುತ್ರಿ ನಿರೀಕ್ಷಾ ಅವರೊಂದಿಗೆ ಸಾಲಿಗ್ರಾಮದ ಆಂಜನೇಯ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮಾಬುಕಳ ಸೇತುವೆ ಬಳಿ ಬ್ರಹ್ಮಾವರದಿಂದ ಕೋಟ ಕಡೆ ಸಂಚರಿಸುತ್ತಿದ್ದ ತೆಲಂಗಾಣ ನೋಂದಣಿಯ ಟ್ರಕ್ ಡಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ನಿರ್ಮಲಾ ಅವರು ಸ್ಥಳದಲ್ಲೇ ಮೃತಪಟ್ಟರು, ನಿರೀಕ್ಷಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಗಂಗೊಳ್ಳಿ: ಹರಿಓಂ ಗಂಗೊಳ್ಳಿ ಇದರ ಆಶ್ರಯದಲ್ಲಿ ಎಂ.ಜಿ. ಜಗನ್ನಾಥ ಪೈ, ಪೈ ಗ್ರೂಪ್ ಆಫ್ ಹೊಟೇಲ್ಸ್ ಬೆಂಗಳೂರು ಮತ್ತು ಜಿ. ವಿವೇಕಾನಂದ ನಾಯಕ್ ದುಬೈ ಪ್ರಾಯೋಜಕತ್ವದಲ್ಲಿ ಗಂಗೊಳ್ಳಿಯ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಭಾನುವಾರ ಜರಗಿದ ಜಿ.ಎಸ್.ಬಿ. ಸಮಾಜ ಬಾಂಧವರ ಸತತ 7ನೇ ವರ್ಷದ 30 ಗಜಗಳ ಲೀಗ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ’ಜಿ.ಜಿ.ಪಿ.ಎಲ್-2026’ದಲ್ಲಿ ಶ್ರೀ ಪಾರ್ಥಸಾರಥಿ ಇಲೆವೆನ್ ತಂಡ ಪ್ರಥಮ ಸ್ಥಾನ ಪಡೆದು ’ಜಿ.ಜಿ.ಪಿ.ಎಲ್-2026’ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕೆನರಾ ಸೂಪರ್ ಕಿಂಗ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಶ್ರೀ ಪಾರ್ಥಸಾರಥಿ ಇಲೆವೆನ್ ತಂಡದ ರಮೇಶ ಪೈ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ವಿಜಯೇಂದ್ರ ನಾಯಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ರಮೇಶ ಪೈ ಉತ್ತಮ ದಾಂಡಿಗ, ಗಣೇಶ ಪ್ರಭು ಉತ್ತಮ ಎಸೆತಗಾರ, ಅನಂತ ಪೈ ಮತ್ತು ವಿಜೇಶ ಪಡಿಯಾರ್ ಉತ್ತಮ ಕ್ಷೇತ್ರರಕ್ಷಕ ಹಾಗೂ ಪ್ರಥಮ ಆಚಾರ್ಯ ಉದಯೋನ್ಮುಖ ಆಟಗಾರ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಇಲ್ಲಿನ ಮಣೂರು ಪಡುಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಿಂಡರ್ ಗಾರ್ಟನ್ ವಿಭಾಗದಲ್ಲಿ ವಾರ್ಷಿಕ ಪದವಿ ಪ್ರದಾನ ಸಮಾರಂಭ ಇತ್ತೀಚಿಗೆ  ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ ಆನಂದ ಸಿ. ಕುಂದರ್ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಜೀವನದಲ್ಲಿ ಶಿಸ್ತಿನೊಂದಿಗೆ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಮುಖ್ಯ ಭಾಷಣಕಾರರಾಗಿ ವಿವೇಕ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲರಾದ ಪ್ರೀತಿ ರೇಖಾ ಅವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಉತ್ಸಾಹಭರಿತ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ವಿವೇಕಾನಂದ ಗಾವಂಕಾರ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಜ್ಯೋತಿ, ವಾಹಿನಿ ಯುವಕ ಸಂಘದ ರಮೇಶ್ ಕುಂದರ್, ಎಸ್‌ಡಿಎಂಸಿ ಅಧ್ಯಕ್ಷ ವಿನಯ್, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಪಂಚಾಯತ್ ಮಾಜಿ ಸದಸ್ಯ ಜಯರಾಮ ಶೆಟ್ಟಿ ಹಾಗೂ ಗಿತಾನಂದ ಫೌಂಡೇಶನ್‌ನ ವೈಷ್ಣವಿ ರಕ್ಷಿತ್ ಕುಂದರ್ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು…

Read More

ಕುಂದಾಪ್ರ ಡಾಟ್ ಕಾಂ‌ ಸುದ್ದಿ.ಬೈಂದೂರು: ತಾಲೂಕಿನ ನಾವುಂದ ರಾ.ಹೆ-66ರಲ್ಲಿ ಕಾರು ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತ ಅಪಘಾತದಲ್ಲಿ ಬೆಂಗಳೂರಿನ ಮಮತಾ (36) ಹಾಗೂ ಧೃತಿಕ (14) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾನ್ನವಿ (12) ಹಾಗೂ ರಾಘು ( 40) ಸಹಿತ ಮತ್ತಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವನ್ನಪ್ಪಿದವರು ಮತ್ತು ಗಾಯಾಳುಗಳ ಕುಟುಂಬ ಸದಸ್ಯರು ಬೆಂಗಳೂರಿನವರಾಗಿದ್ದು, ರಜೆ ನಿಮಿತ್ತ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ಅಲ್ಲಿಂದ ಮುರುಡೇಶ್ವರ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ತರಳಿದ ಗಂಗೊಳ್ಳಿ ಎಂ ಎಚ್ ಐ ತುರ್ತು ಸ್ಪಂದನ ತಂಡದ ಎರಡು ಅಂಬುಲೆನ್ಸ್ ಗಳಲ್ಲಿ ಗಾಯಾಳುಗಳನ್ನು ಹಾಗೂ ಶವಗಳನ್ನು ಕುಂದಾಪುರ ಹಾಗೂ ಮಣಿಪಾಲ ಆಸ್ಪತ್ರೆ ಕೊಂಡೊಯ್ಯಲಾಯಿತು. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ, ಬೈಂದೂರು ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು, ಭೇಟಿ ನೀಡಿದರು. ಘಟನಾ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ಕೆಲವರು ಗಾಯಾಳುಗಳನ್ನು ಹಾಗೂ ಶವಸಾಗಾಟ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಸಮ್ಮುಖದಲ್ಲಿ ಸಮಗ್ರ ಭಾರತದ ಸಾಂಸ್ಕೃತಿಕ ಚಿತ್ರಣವು ಜೀವ ಪಡೆದಂತೆ ಕಂಗೊಳಿಸಿದರೆ, ಅಷ್ಟೇ ವಿನೀತರಾದ ಶಿವರಾಜ್ ಕುಮಾರ್ ದಂಪತಿ ವಿನಮ್ರತೆ ತೋರಿದರು. ಇದು ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ- 2026′ ರ ಝೋಷ್. ಇದರಿಂದ ಪುಳಕಿತರಾದ ಶಿವರಾಜ್ ಕುಮಾರ್, ತಾಳ ಹಿಡಿದು, ‘ಕೋಲು ಮಂಡೆ ಜಂಗಮ ದೇವರು…..’ ಹಾಡಿ, ಹೆಜ್ಜೆ ಹಾಕಿದರು. ತಮ್ಮ ಆರಂಭಿಕ ‘ಆನಂದ್” ಸಿನಿಮಾದ ‘ಟುವ್ವಿ ಟುವ್ವಿ ‘ ಹಾಡಿನಿಂದ ಹಿಡಿದು ಪುನೀತ್ ರಾಜ್ ಕುಮಾರ್ ಅವರ ‘ ಬೊಂಬೆ ಹೇಳುತೈತೆ… ನೀನೆ ರಾಜಕುಮಾರ… ವರೆಗಿನ ಹಾಡುಗಳನ್ನು ಹಾಡಿದರು. ಕಿಕ್ಕಿರಿದ ವಿದ್ಯಾರ್ಥಿ ಸಾಗರವು ಪುನೀತವಾಯಿತು. ಸಾಕ್ಷಾತ್ಕರಿಸಿದ ಡಾ. ಎಂ.ಮೋಹನ ಆಳ್ವ ಖುಷಿ ಪಟ್ಟು, ನಸುನಕ್ಕರು. ಇದಕ್ಕೂ ಮೊದಲು ದೀಪ ಬೆಳಗಿ, ಚೆಂಡೆ ಪರಿಕರ ಬಡಿದು ಕಾರ್ಯಕ್ರಮಕ್ಕೆ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ವಿಧಾನ ಸಭಾ ಕ್ಷೇತ್ರದ ಜಲ ಜೀವನ್ ಮಿಷನ್ ಕಾಮಗಾರಿಗಳಲ್ಲಿನ ಕಳಪೆ ಗುಣಮಟ್ಟದ ಪೈಪ್‌ಗಳ ಬಳಕೆ, ನೀರಿನ ಮೂಲ ಇಲ್ಲದೇ ಇರುವುದು, ಮನಬಂದಂತೆ ರಸ್ತೆಗಳ ಇಕ್ಕೆಲಗಳನ್ನು ಅಗೆದು ಹಾಕುತ್ತಿರುವುದು, ಗುತ್ತಿಗೆದಾರರು ಹಾಗೂ ಇಲಾಖಾ ಅಭಿಯಂತರರುಗಳು ಶಾಮೀಲಾಗಿರುವ ಕುರಿತು ಕುಂದಾಪುರ ಹಾಗೂ ಬೈಂದೂರು ಶಾಸಕರುಗಳು ಇಲ್ಲಿಯ ತನಕ ಮೌನ ಮುರಿಯದೆ ಇರಲು ಕಾರಣವೇನು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್‌ ಹೆಗ್ಡೆ ಹೇಳಿದರು. ನೀರಿನ ಮೂಲಗಳನ್ನೇ ಗುರುತಿಸದೆ ಮನೆಗಳ ಮುಂಬಾಗ ನಳ್ಳಿ ಅಳವಡಿಸಿರುವುದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ, ಇದರ ಬಗ್ಗೆ ಧ್ವನಿ ಎತ್ತ ಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರುಗಳು ಮೌನಕ್ಕೆ ಶರಣಾಗಿರುವುದು ಹಲವು ಅನುಮಾನ ಕಾರಣವಾಗಿದೆ. ಶಾಸಕರುಗಳು ಇನ್ನಾದರೂ ಮೌನ ಮುರಿದು ಹಗಲು ದರೋಡೆಯಾಗಿರುವ ಜೆಜೆಎಂ ಕಾಮಗಾರಿಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಸರ್ಕಾರವನ್ನು ಒತ್ತಾಯಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Read More