Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ದೇಶದಲ್ಲಿ 75ಕೋಟಿ ಸಂಖ್ಯೆಯಲ್ಲಿ ಯುವಕರು ಇದ್ದಾರೆ. ಈ ಯುವಕ ಪಡೆ ಅನೇಕ ಧಾರ್ಮಿಕ ಉತ್ಸವಗಳನ್ನು ಮಾಡುತ್ತಿದ್ದಾರೆ. ಧಾರ್ಮಿಕ ಉತ್ಸವಗಳು ಜಾತಿ, ಧರ್ಮ, ಪಂಗಡಗಳ ನಡುವೆ ಸಂಘರ್ಷವಾಗಬಾರದು. ಯುವ ಪಡೆ ಧರ್ಮಕ್ಕಾಗಿ ಜಗಳ ಮಾಡದೆ, ಅಭಿವೃದ್ಧಿಗಾಗಿ ಜಗಳವಾಡಬೇಕು ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಕಾರಿ ಅಣ್ಣಾಮಲೈ ಅವರು ಹೇಳಿದರು. ಅವರು ಕಂಡ್ಲೂರು ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ರಾತ್ರಿ ಜರುಗಿದ ಕಂಡ್ಲೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಂಡ್ಲೂರು ಪರಿಸರದಲ್ಲಿ ಸಮಾನ ಸಂಖ್ಯೆಯಲ್ಲಿ ಹಿಂದುಗಳು ಹಾಗೂ ಮುಸ್ಲಿಂ ಬಾಂಧವರು ಇದ್ದಾರೆ. ಇಲ್ಲಿ ಸಣ್ಣ ಪುಟ ಘಟನೆಗಳು ಹೋರತು ಪಡಿಸಿದ್ದರೆ, ಶ್ರೀ ಶಾರದೋತ್ಸವ ಸಮಿತಿಯವರು ಸೌರ್ಹಾದತೆಯಿಂದ ಉತ್ಸವವನ್ನು ಮಾಡಿದ್ದಾರೆ. ನವರಾತ್ರಿ ಮಹೋತ್ಸವವು ವಿಶೇಷವಾದ ದಿನವಾಗಿದೆ. ದೇವರು ದುಷ್ಠರನ್ನು ಸಂಹಾರ ಮಾಡಿ, ಧರ್ಮ ರಕ್ಷಿಸಿದ್ದಾರೆ. ಇದರ ಪ್ರತಿಕವಾದ ನವರಾತ್ರಿ ಮಹೋತ್ಸವವು ದೂರದ ಊರುಗಳಲ್ಲಿರುವರಿಗೆ, ಊರಿಗೆ ಬಂದು ಆತ್ಮೀಯತೆ ಹಾಗೂ ಸೌರ್ಹಾದತೆಯಿಂದ ಬೇರೆಯುವ ದಿನವಾಗಿದೆ. ಸೌರ್ಹದತೆಯಿಂದ…

Read More

ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಶ್ರೀ ಶಾರದಾ ಮಹೋತ್ಸವದ ೪೧ನೇ ವರ್ಷದ ಧಾರ್ಮಿಕ, ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸವಿತಾ ಸಮಾಜದ ತ್ರಾಸಿ-ಗಂಗೊಳ್ಳಿ ವಲಯದ ಅಧ್ಯಕ್ಷ ಮಂಜುನಾಥ ಸಾಲಿಯಾನ್ ಮಾತನಾಡಿ, ಸೇವಾ ಸಂಘದ ಮುಖಾಂತರ ಗಂಗೊಳ್ಳಿಯಲ್ಲಿ ಎಲ್ಲಾ ಜಾತಿ ಧರ್ಮದವರು ಒಂದಾಗಿ ಶ್ರೀ ಶಾರದೋತ್ಸವವನ್ನು ಆಚರಿಸಿಕೊಂಡು ಬಂದಿರುವುದು ಶ್ಲಾಘನೀಯ. ನಿರಂತರ ೪೧ವರ್ಷ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎಲ್ಲರನ್ನು ಒಂದುಗೂಡಿಸುವ ಸಮಿತಿಯ ಕಾರ್ಯ ಅಭಿನಂದನಾರ್ಹವಾದುದು ಎಂದರು. ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ, ಪುರೋಹಿತರಾದ ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ ಮತ್ತು ಗಂಗೊಳ್ಳಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಆನಂದ ಬಿಲ್ಲವ ಶುಭ ಹಾರೈಸಿದರು. ಇದೇ ಸಂದರ್ಭ ದಸರಾ ಹಬ್ಬದ ಪ್ರಯುಕ್ತ ಮಹಿಳೆಯರು ಹಾಗೂ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರರಿಗೆ ಬಹುಮಾನ ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಕಾರ್ಯದರ್ಶಿ ಗೋಪಾಲ ಚಂದನ್, ಮಹಿಳಾ ಮಂಡಳಿಯ ರೇಣುಕಾ…

Read More

ಗಂಗೊಳ್ಳಿ: ಹೌದು. ನವರಾತ್ರಿ ಬಂತೆಂದರೆ ಎಲ್ಲೆಡೆ ವಿವಿಧ ವೇಷಧಾರಿಗಳು ಅದರಲ್ಲೂ ವಿಶೇಷವಾಗಿ ಹುಲಿವೇಷಧಾರಿಗಳು ಕಾಣ ಸಿಗುತ್ತಾರೆ. ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಶ್ರೀ ಶಾರದಾ ಮಹೋತ್ಸವದ 41ನೇ ವರ್ಷದ ಸಮಾರಂಭದಲ್ಲಿ ಭಾಗವಹಿಸಲು ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಶ್ರೀದೇವಿಯ ಭಕ್ತರು ಹುಲಿವೇಷ ಧರಿಸಿ ಎಲ್ಲರ ಕಣ್ಮನ ಸೆಳೆಯುತ್ತಿದ್ದಾರೆ. ಈ ಹುಲಿವೇಷಧಾರಿಗಳ ತಂಡ ಗಂಗೊಳ್ಳಿಯ ವಿವಿಧೆಡೆ ಘರ್ಜಿಸುತ್ತಿದ್ದು ನವರಾತ್ರಿಯ ಸಂಭ್ರಮ ಮನಮಾಡುವಂತಾಗಿದೆ.

Read More

ಗಂಗೊಳ್ಳಿ: ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವ್ಯಕ್ತಿ ವಿಕಾಸ ಕೇಂದ್ರ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀ ರವಿಶಂಕರ ಗುರುಜೀಯವರ ಆರ್ಟ್ ಎಕ್ಸೆಲ್ ಮಕ್ಕಳ ಬೇಸಿಗೆ ಶಿಬಿರ ಇತ್ತೀಚಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸರ್ವಾಂಗೀಣ ಬೆಳವಣಿಗೆಗಾಗಿ 8 ರಿಂದ 13 ವರ್ಷಗಳ ವಯೋಮಿತಿಯ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದ ಆರ್ಟ್ ಆಫ್ ಲೀವಿಂಗ್‌ನ ಶಿಕ್ಷಕಿಯರಾದ ಅನುಷಾ ಹಾಗೂ ಭಾನುಮತಿ ಶೇಟ್ ಅವರು, ಆಧುನಿಕ ಜೀವನ ಶೈಲಿಯಲ್ಲಿರುವ ಒತ್ತಡಗಳನ್ನು ಸಮರ್ಪಕವಾಘಿ ನಿಭಾಯಿಸಲು ಬೇಕಾಗುವ ಮಾನಸಿಕ ಸಿದ್ಧತೆಗಳನ್ನು ಮಾಡಿಸುವುದರೊಂದಿಗೆ, ವ್ಯಕ್ತಿ ಮೌಲಿಕತೆಯ ಬೋಧನೆ, ನಾಚಿಕೆ ಮತ್ತು ಪುಕ್ಕಲು ಸ್ವಭಾವದ ಹೋಗಲಾಡಿಸುವಿಕೆ, ಸುಪ್ತ ಪ್ರತಿಭೆಯ ಅನಾವರಣ, ಆತ್ಮವಿಶ್ವಾಸ ಮತ್ತು ಯೋಗ್ಯತೆಯ ಅರಿವನ್ನು ಮೂಡಿಸುವುದರಲ್ಲಿ ಶಿಬಿರವು ಸಹಕಾರಿಯಾಗುತ್ತದೆ ಎಂದರು. ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್‌ನ ನಾಗರಾಜ ಖಾರ್ವಿ ಉಪಸ್ಥಿತರಿದ್ದರು. ಕ್ಲಬ್‌ನ ಹಿರಿಯ ಸದಸ್ಯ ಜಿ.ಸೂರ್ಯಕಾಂತ ಖಾರ್ವಿ ಸ್ವಾಗತಿಸಿದರು. ಕ್ಲಬ್‌ನ ಕಾರ್ಯದರ್ಶಿ ಸತೀಶ…

Read More

ನರೇಂದ್ರ ಎಸ್ ಗಂಗೊಳ್ಳಿ. ಒಂದು ಸಮುದಾಯವನ್ನು ಓಲೈಸುವವರಂತೆ ತೋರುವ ಒಂದಷ್ಟು ಸಾಹಿತಿ ಗಣ್ಯರೆನ್ನಿಸಿಕೊಂಡವರು ಒಬ್ಬರ ಹಿಂದೊಬ್ಬರಂತೆ ಪ್ರಶಸ್ತಿ ವಾಪಾಸ್ ಪ್ರಕ್ರಿಯೆ ಎನ್ನುವ ಬೂಟಾಟಿಕೆ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ನೋಡಿ ನಮ್ಮ ದೇಶದ ಪ್ರಜ್ಞಾವಂತ ಜನ ನಗುತ್ತಿರುವುದು ಸುಳ್ಳಲ್ಲ. ಅಷ್ಟರ ಮಟ್ಟಿಗೆ ಈ ಸಾಹಿತಿಗಳ ಪ್ರಶಸ್ತಿ ವಾಪಾಸಾತಿ ಪ್ರಹಸನ ನಗೆಪಾಟಲಿನ ವಿಷಯವಾಗಿ ಮಾರ್ಪಟ್ಟಿದೆ ಎನ್ನುವುದೇ ಸ್ವತಃ ಅವರಿಗೂ ತಿಳಿಯದ ವಿಚಾರವೇನಲ್ಲ. ಅದು ಗೊತ್ತಿದ್ದೂ ಅವರುಗಳು ಮತ್ತೇ ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರೆ ಅವರುಗಳ ಸಾಮಾಜಿಕ ಬದ್ಧತೆ, ನೈತಿಕತೆಯನ್ನು ಪ್ರಶ್ನಿಸದೆ ವಿಧಿಯಿಲ್ಲ. ಪ್ರಶಸ್ತಿ ವಾಪಾಸಾತಿ ಸಾಹಿತಿಗಳೇ ನಿಮಗ್ಗೊತ್ತಾ? ನಿಮ್ಮ ಈ ಕಾರ್ಯವನ್ನು ಜನರು ಗಣನೆಗೆ ತೆಗೆದುಕೊಂಡೇ ಇಲ್ಲ. ನೀವೇನೇ ಮಾಡಿದರೂ ಅಷ್ಟೇ. ಬರೇ ಪ್ರಶಸ್ತಿಯಲ್ಲ ನೀವುಗಳು ಈಗ ನೀಡಿದ್ದೀರಲ್ಲಾ ಅದೇ ಕಾರಣಗಳಿಗಾಗಿ ನೀವು ಬೇರೇನನ್ನೇ ತ್ಯಾಗ ಮಾಡಿದರೂ ಜನ ಖಂಡಿತ ಮಾತನಾಡುವುದಿಲ್ಲ .ಜನ ನೀವಂದುಕೊಂಡಷ್ಟು ದಡ್ಡರಲ್ಲ. ಪ್ರತೀ ಮನುಷ್ಯನಿಗೂ ವಿವೇಚನೆ ಅನ್ನುವುದು ಇರುತ್ತದೆ. ಜನರನ್ನು ಪದೇ ಪದೇ ಮೋಸಗೊಳಿಸಲು ಸಾಧ್ಯವಿಲ್ಲ ಎನ್ನುವುದು ನಿಮಗಿನ್ನೂ ಅರ್ಥವಾಗದಿರುವುದು ನಿಜಕ್ಕೂ…

Read More

ಕುಂದಾಪುರ: ದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ವಹಿಸಿದ ಬಳಿಕ ನಿರಂತರವಾಗಿ ದಲಿತರ, ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಹಾಸನದ ಸಿಗರನಹಳ್ಳಿ ಪ್ರಕರಣ, ದಾವಣಗೆರೆಯ ಯುವ ಲೇಖಕ ಹುಚ್ಚಂಗಿ ಪ್ರಸಾದ್‌ರವರ ಕೈಗಳನ್ನು ಹಿಂದುತ್ವವಾದಿಗಳು ಕತ್ತರಿಸಿರುವ ಪ್ರಕರಣಗಳನ್ನು ಗಮನಿಸಿದರೆ ಕಾಂಗ್ರೇಸ್ ಸರಕಾರ ದಲಿತರಿಗೆ ರಕ್ಷಣೆ ನೀಡುವ ಬದಲು ಅತ್ಯಂತ ದಲಿತ ವಿರೋಧಿಯಾಗಿರುವುದು ಸಾಬೀತಾಗಿದೆ. ಹರಿಯಾಣದಲ್ಲಿ ದಲಿತ ಮಕ್ಕಳ ಸಜೀವದಹನ ಮನುಷ್ಯ ರೂಪದ ರಾಕ್ಷಕರು ನಡೆಸಿದ ಅತ್ಯಂತ ವೈಶಾಚಿತ ಕೃತ್ಯವಾಗಿದೆ. ಕೇಂದ್ರ ಸರಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ಬದಲು ಬಿಜೆಪಿ ಸಂಸದರು, ಸಚಿವರಾದ ವಿ.ಕೆ.ಸಿಂಗ್‌ರವರು ದಲಿತರನ್ನು ನಾಯಿಗೆ ಹೋಲಿಸಿ ಅವಹೇಳನ ಮಾಡುವ ಪ್ಯಾಸಿಸ್ಟ್ ಮಾದರಿಯ ಕೀಳು ಭಾಷೆಗಳನ್ನು ಬಳಸಿ ನಿಂದಿಸಿರುವುದು ಖಂಡನೀಯವಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಇತ್ತೀಚೆಗೆ ದೇಶದಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ದಾಳಿಯನ್ನು ಖಂಡಿಸಿ, ರಾಜಕೀಯ ಕಾರಣಕ್ಕಾಗಿ ಕೊಲೆಯಾದ ಅಖ್ಲಾಕ್ ಹಾಗೂ ಮೂಡುಬಿದಿರೆಯ ಪ್ರಶಾಂತ ಪೂಜಾರಿ ಹತ್ಯೆ ಖಂಡಿಸಿ ಕುಂದಾಪುರದ ಶಾಸ್ರ್ತೀ ವೃತ್ತದ ಬಳಿ ನಡೆದ…

Read More

ಗಂಗೊಳ್ಳಿ: ಗಂಗೊಳ್ಳಿಯ ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಶ್ರೀ ಶಾರದಾ ಮಹೋತ್ಸವದ ೪೧ನೇ ವರ್ಷದ ಶ್ರೀ ಶಾರದಾ ದೇವಿಯ ಜಲಸ್ತಂಭನದ ಪುರಮೆರವಣಿಗೆ ವಿಜೃಂಭಣೆಯಿಂದ ಜರಗಿತು. ಶ್ರೀ ಶಾರದಾ ಮಂಟಪದಿಂದ ಹೊರಟ ಪುರಮೆರವಣಿಗೆಯು ಮೇಲ್‌ಗಂಗೊಳ್ಳಿಯ ಬಾವಿಕಟ್ಟೆ ತನಕ ಸಾಗಿ ಪುನ: ಮುಖ್ಯರಸ್ತೆ ಮುಖಾಂತರ ಗಂಗೊಳ್ಳಿ ಬಂದರಿನ ಪೋರ್ಟ್ ಆಫೀಸಿನ ತನಕ ಸಾಗಿ ಪಂಚಗಂಗಾವಳಿ ನದಿಯಲ್ಲಿ ಶ್ರೀ ಶಾರದಾ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು. ಚಂಡೆ ವಾದನ, ನಾಸಿಕ್ ಬ್ಯಾಂಡ್, ಸುಮಾರು ಏಳು ಸ್ತಬ್ಧ ಚಿತ್ರಗಳು, ಹುಲಿವೇಷ, ಛದ್ಮವೇಷಗಳು ಪುರಮೆವಣಿಗೆಯ ಮೆರಗು ಹೆಚ್ಚಿಸಿದವು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ಪುರೋಹಿತರಾದ ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ಸಮಿತಿಯ ಅಧ್ಯಕ್ಷ ಸತೀಶ ಜಿ., ಪ್ರಧಾನ ಕಾರ್ಯದರ್ಶಿ ಶ್ರೀಧರ ಸಕ್ಲಾತಿ, ಕಾರ್ಯದರ್ಶಿ ಗೋಪಾಲ ಚಂದನ್, ಕೋಶಾಧಿಕಾರಿ ನಾಗೇಂದ್ರ ಪಿ.ಪೈ, ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ರೇಣುಕಾ ವಾಸುದೇವ ಶೇರುಗಾರ್, ಅನಿತಾ ಶೇಟ್, ರೇಷ್ಮಾ ವಿ.ನಾಯಕ್, ಪ್ರೇಮಾ ಸಿ.ಎಸ್.ಪೂಜಾರಿ ಹಾಗೂ ಸಮಿತಿಯ ಮತ್ತು ಮಹಿಳಾ…

Read More

ಕುಂದಾಪುರ: ಕರ್ನಾಟಕದ ಜನರು ಭಾಷಾ ಶ್ರೀಮಂತಿಕೆ ಹೊಂದಿದವರು. ಶಿಕ್ಷಣ ಹಾಗೂ ಇತರ ಉದ್ದೇಶಗಳಿಗಾಗಿ ಇಲ್ಲಿಗೆ ಬರುವ ಪ್ರತಿಯೊಬ್ಬರನ್ನು ನಮ್ಮ ಮನೆ ಮಂದಿಯಂತೆ ಸ್ವೀಕಾರ ಮಾಡುವ ಮನೋಭಾವವನ್ನು ಹೊಂದಿದ್ದಾರೆ. ನಮ್ಮ ರಾಜ್ಯ ಸಮೃದ್ದ ಭಾಷೆ ಹಾಗೂ ಅಭಿಮಾನವನ್ನು ಹೊಂದಿರುವ ಸುಂದರ ಹೂ ತೋಟ ಎಂದು ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಎಂ.ಮಂಜುನಾಥ ಶೆಟ್ಟಿ ಹೇಳಿದರು. ಇಲ್ಲಿನ ಬೋರ್ಡ್ ಹೈಸ್ಕೂಲಿನಲ್ಲಿ ಮಣಿಪಾಲದ ಟಿ.ಎ ಪೈ ಮ್ಯಾನೇಜ್‌ಮೆಂಟ್ ಇನ್ಟಿಟ್ಯೂಟ್ (ಟ್ಯಾಪ್‌ಮಿ) ವಿದ್ಯಾರ್ಥಿಗಳು ಆಯೋಜಿಸಿದ್ದ ’ಬ್ರಾಂಡ್ ಸ್ಕ್ಯಾನ್-2015’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣಾಭ್ಯಾಸದ ಜತೆಯಲ್ಲಿ ಶಿಕ್ಷಣೇತರ ಚಟುವಟಿಕೆಗಳು ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಸ್ತುಪ್ತವಾಗಿರುವ ಪ್ರತಿಭೆಗಳು ಅನಾವಣಗೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಆರ್ ಶೆಟ್ಟಿಯವರು ನಮ್ಮ ಮಾತೃ ಭಾಷೆಯ ಬಗ್ಗೆ ಅಭಿಮಾನವಿರಬೇಕು. ಉಡುಪಿ ಜಿಲ್ಲೆ ಶಿಕ್ಷಣ ಕ್ಷೇತ್ರದ ತವರು. ಇಲ್ಲಿಗೆ ಶಿಕ್ಷಣ ಆಶ್ರಯಿಸಿ ಬರುವ ಪ್ರತಿಯೊಬ್ಬರಿಗೂ ಇಲ್ಲಿನ ಜನ ಮಾತೃ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಇಲ್ಲಿ ಶಿಕ್ಷಣ…

Read More

ಇತ್ತೀಚೆಗೆ ವಿದ್ಯಾಗಿರಿಯ ಆಳ್ವಾಸ್ ಸಭಾಂಗಣದಲ್ಲಿ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲಿಖಿತ ಪರೀಕ್ಷೆ, ಆಶು ಭಾಷಣ ಸ್ಪರ್ಧೆ ಮತ್ತು ಸಂದರ್ಶನದ ಮೂಲಕ ಈ ಆಯ್ಕೆಗಳನ್ನು ನಡೆಸಲಾಯಿತು. ಇದೇ ಸಂದರ್ಭದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳನ್ನು ಮತ್ತು ಇತರ ಗೋಷ್ಠಿಗಳಿಗಿರುವ ಭಾಷಣಕಾರರನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ಮೌಲ್ಯ ಮಾಪಕರಾಗಿ ಅಂಡಾರು ಗುಣಪಾಲ ಹೆಗ್ಡೆ, ಶ್ರೀಧರ ಜೈನ್ , ಡಾ. ಧನಂಜಯ ಕುಂಬ್ಳೆ ಭಾಗವಹಿಸಿದ್ದರು. ಅದ್ಯಕ್ಷೆಯಾಗಿ ಆಯ್ಕೆಯಾದ ಶಾಲಿಕಾ ಎಕ್ಕಾರು ರಂಗಭೂಮಿ, ಯಕ್ಷಗಾನ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ. ಹಲವು ಶ್ರೇಷ್ಠ ನಿರ್ದೇಶಕರು ನಿರ್ದೇಶಿಸಿದ ನಾಟಕಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟನೆ. ನೀಲಿಕುದುರೆ, ನಿದ್ರಾನಗರಿ, ಪಂಜರ ಶಾಲೆ, ಪುಷ್ಪರಾಣಿ, ಅಗ್ನಿಪಥ, ಮಕ್ಕಳ ರಾಮಾಯಣ, ಗೆಲಿಲಿಯೋ, ಮೇರಿಕ್ಯೂರಿ, ಮಹಿಳಾ ಭಾರತ ಅವರು ನಟಿಸಿದ ಮುಖ್ಯ ನಾಟಕಗಳು. ಖ್ಯಾತ ಯಕ್ಷಗಾನ ಭಾಗವತ ಶ್ರೀ ಸದಾನಂದ ಐತಾಳರ…

Read More