Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ಕುಂದಾಪುರ ಸುತ್ತಲಿನ ಪರಿಸರದ ಜನತೆಗಾಗಿ ಚಿನ್ಮಯ ಆಸ್ಪತ್ರೆಯಲ್ಲಿ ಚರ್ಮದ ವಿವಿಧ ಕಾಯಿಲೆಗಳ ನಿವಾರಣೆ ಹಾಗೂ ಸೌಂದರ್ಯವರ್ಧಕ ಚಿಕಿತ್ಸೆಗಳಿಗಾಗಿ ಲೇಸರ್, ಡರ್ಮಾಟೋಸರ್ಜರಿ ಹಾಗೂ ಕಾಸ್ಮಟಾಲಜಿ ವಿಭಾಗ ಆರಂಭಗೊಳ್ಳುತ್ತಿದೆ ಎಂದು ಚಿನ್ಮಯಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಉಮೇಶ್ ಪುತ್ರನ್ ತಿಳಿಸಿದ್ದಾರೆ. ಡಿ. 27ರಂದು ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರು ಕ್ಯೂಟಿಸ್ ಅಕಾಡೆಮಿ ಆಫ್ ಕ್ಯೂಟನಿಯಸ್ ಸೈನ್ಸ್‌ನ ಚೀಪ್ ಡರ್ಮಾಟೋಲೊಜಿಸ್ಟ್ ಡಾ. ಚಂದ್ರಶೇಖರ್ ಬಿ.ಎಸ್. ಚಿನ್ಮಯ ಆಸ್ಪತ್ರೆಯಲ್ಲಿ ಈ ವಿಭಾಗವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ದಿನಮಾನಗಳಲ್ಲಿ ಈ ಚಿಕಿತ್ಸೆ ಸೌಂದರ್ಯಪ್ರಿಯರಿಗೆ ವರದಾನವಾಗಲಿದೆ. ಮಹಿಳೆಯರ ಮುಖ ಹಾಗೂ ದೇಹದ ಮೇಲಿರುವ ಹೆಚ್ಚುವರಿ ಕೂದಲು, ಮುಖದ ಮೊಡವೆಯಿಂದಾದ ಹೊಂಡದ ಕಲೆಗಳು, ಗಾಯದಿಂದ ಉಂಟಾದ ಕಲೆಗಳು, ಸ್ತ್ರೀಯರ ಮುಖದ ಮೇಲೆ ಕಂಡುಬರುವ ಕಪ್ಪು ಬಣ್ಣದ ಕರಂಗಲ, ಕಪ್ಪು ಚುಕ್ಕೆಗಳು, ಮಚ್ಚೆಗಳು, ಕೃತಕವಾಗಿ ಹಾಕಿಸಿಕೊಂಡ ಟ್ಯಾಟೋ, ಜಿಡ್ಡು, ನೆರಿಗೆಗಟ್ಟಿದ ಮುಖ. ಹೀಗೆ ನಾನಾ ತರಹದ ಸಮಸ್ಯೆಗಳಿಗೆ ಈ ಚಿಕಿತ್ಸೆಯಿಂದ ಪರಿಹಾರ ಕಂಡಕೊಳ್ಳಬಹುದಾಗಿದೆ. ಚಿಕಿತ್ಸೆಗೆ ಮೊದಲು…

Read More

ಕುಂದಾಪುರ: ತಾಲೂಕು ಕೇಂದ್ರವೊಂದರಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿರುವುದು ಕ್ರೀಡಾ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿರುವುದಲ್ಲದೇ ವಿವಿಧ ರಾಜ್ಯಗಳ ಉಡುಗೆ-ತೊಡುಗೆ, ಭಾಷೆ, ಸಂಸ್ಕೃತಿಗಳ ಸಮಾಗಮವೂ ಆದಂತಾಗಿದೆ. ಶಾಂತಿ ಮತ್ತು ಸಾಮರಸ್ಯದ ರಾಯಭಾರಿಯಾದ ಕ್ರಿಕೆಟ್ ನಾಡಿನ ಸೌಹಾರ್ದತೆಯ ಕೊಂಡಿಯಾಗಿ ಉಳಿಯಲಿ ಎಂದು ಕುಂದಾಪುರದ ಡಿಎಸ್ಪಿ ಮಂಜುನಾಥ ಶೆಟ್ಟಿ ಹೇಳಿದರು. ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ’ಚಕ್ರವರ್ತಿ ಟ್ರೋಫಿ’ಯನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಜಗತ್ತು ಶಾಂತಿ ಸಾಮರಸ್ಯವನ್ನು ಅರಸಿ ಭಾರತದತ್ತ ಮುಖಮಾಡುತ್ತಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.65ರಷ್ಟು ಯುವಜನರೇ ಇರುವುದರಿಂದ ಅದನ್ನು ಕಾಪಿಡುವ ಜವಬ್ದಾರಿ ಅವರ ಮೇಲಿದೆ ಎಂದರು. ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಉದ್ಯಮಿಗಳಾದ ಎನ್.ಟಿ. ಪೂಜಾರಿ, ಸುರೇಶ್ ಎನ್. ಶೆಟ್ಟಿ ಮರತ್ತೂರು, ಉದ್ಯಮಿ ಕೃಷ್ಣ ಪೂಜಾರಿ, ಜಗದೀಶ್ ಶೆಟ್ಟಿ, ಪಿಡಬ್ಲ್ಯೂಡಿ ಗುತ್ತಿಗೆದಾರ ರಾಜೇಶ್ ಕಾರಂತ್ ಅತಿಥಿಗಳಾಗಿದ್ದರು. ಚಕ್ರವರ್ತಿ ಕ್ರಿಕೆಟ್ ಕ್ಲಬ್ ಗೌರವಾಧ್ಯಕ್ಷ…

Read More

ಬಸ್ರೂರು ಅಪ್ಪಣ್ಣ ಹೆಗ್ಡೆ ಬದುಕು ತೆರೆದ ಪುಸ್ತಕ. ದತ್ತಿನಿಧಿ ವಿತರಣೆಯಲ್ಲಿ ಶ್ರೀ ಸ್ವಾಮಿ ವಿನಾಯಕನಂದಜೀ ಮಹರಾಜ್ ಕುಂದಾಪುರ: ಪ್ರಸಕ್ತ ಆದರ್ಶ ನಾಯಕರ ಹಾಗೂ ವ್ಯಕ್ತಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಸಮಾಜ ಸನ್ಮಾರ್ಗದಲ್ಲಿ ನಡೆಸುವ ನಾಯಕರಿಲ್ಲದೆ ಯುವ ಸಮಾಜಕ್ಕೆ ಉತ್ತಮ ದಾರಿ ತಿಳಿಯದೆ ದಿಕ್ಕು ತಪ್ಪುತ್ತಿದ್ದಾರೆ ಎಂದು ಕಾರ್ಕಳ ಬೈಲೂರು ಶ್ರೀ ರಾಮಕೃಷ್ಣಾಶ್ರಮ ಶ್ರೀ ಸ್ವಾಮಿ ವಿನಾಯಕನಂದಜೀ ಮಹರಾಜ್ ಅಭಿಪ್ರಾಯಪಟ್ಟಿದ್ದಾರೆ. ಬಸ್ರೂರು ಅಪ್ಪಣ್ಣ ಹೆಗ್ಡೆ ದತ್ತಿನಿಧಿ ಪ್ರತಿಷ್ಠಾನ ಆಶ್ರಯದಲ್ಲಿ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆದ ಬಸ್ರೂರು ಅಪ್ಪಣ್ಣ ಹೆಗ್ಡೆ 81 ನೇ ಜನ್ಮ ದಿನಾಚರಣೆ ಮತ್ತು ದತ್ತಿ ನಿಧಿ ವಿತರಣೆಯಲ್ಲಿ ಆಶೀರ್ವಚನ ನೀಡಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಬದುಕು ತೆರೆದ ಪುಸ್ತಕವಿದ್ದಂತೆ ಎಂದು ಬಣ್ಣಿಸಿದರು. ಸ್ವತಂತ್ರ್ಯ ನಂತರ ಈ ದೇಶ ಉತ್ತಮ ನಾಯಕರ ಅಭಾವ ಎದುರಿಸುತ್ತಿದ್ದು, ಅರ್ಪಣಾ ಮನೋಭಾವ ಬದಲು ದೋಚಿ ತಿನ್ನುವವರೇ ಹೆಚ್ಚಿದ್ದಾರೆ. ಇದರಿಂದ ಆದರ್ಶದ ದಾರಿ ತೋರಿಸುವ ನಾಯಕರಿಲ್ಲದಂತಾಗಿದೆ. ಬರೇ ಬುದ್ದಿ ಬೆಳೆದಿದೆಯೇ ಹೊರತು, ಹೃದಯ ಬೆಳೆದಿಲ್ಲ.…

Read More

ಕುಂದಾಪುರ: ಕ್ಯಾಲೆಂಡರ್ ಪ್ರತಿಯೊಬ್ಬನ ಅಗತ್ಯದ ಸಾಧನಗಳಲ್ಲೊಂದು, ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊರತಂದಿರುವ 2016ನೇ ಸಾಲಿನ ಕ್ಯಾಲೆಂಡರ್ ಶಿಕ್ಷಕರಿಗೆ ಅಗತ್ಯವಾದ ಎಲ್ಲಾ ಶೈಕ್ಷಣಿಕ ವಿವರಗಳನ್ನು ಒಳಗೊಂಡಿದ್ದು ಸಂಗ್ರಹ ಯೋಗ್ಯ ದಿನದರ್ಶಿಯಾಗಿದೆ. ಈ ರೀತಿ ಇಲಾಖೆಯ ಎಲ್ಲಾ ಮಾಹಿತಿಗಳನ್ನು ಒಳಗೊಂಡ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತಹ ಕಾರ್ಯನಿರ್ವಹಿಸಿದ ಸಂಘದ ಕಾರ್ಯ ಅಭಿನಂದನಾರ್ಹ ಎಂದು ಉಡುಪಿ ಜಿಲ್ಲಾ ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ಎಚ್. ದಿವಾಕರ ಶೆಟ್ಟಿ ಹೇಳಿದರು. ಅವರು ವಡೇರಹೋಬಳಿ ಶಾಸಕರ ಮಾದರಿ ಶಾಲೆಯಲ್ಲಿ ಕುಂದಾಪುರ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ೨೦೧೬ನೇ ಸಾಲಿನ ಆಕರ್ಷಕ ಮುದ್ರಣದ ವಿನೂತನ ವಿನ್ಯಾಸದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಉಡುಪಿ ಡಯಟ್‌ನ ಪ್ರಾಂಶುಪಾಲ ಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಘದ ಕಾರ್ಯದರ್ಶಿಯಾಗಿ ೫ ವರ್ಷ ಸೇವೆ ಸಲ್ಲಿಸಿ ಬೈಂದೂರು ವಲಯದ ವಂಡ್ಸೆ ಶಿಕ್ಷಣ ಸಂಯೋಜಕರಾಗಿ ಪದೋನ್ನತಿ ಹೊಂದಿದ ಹಳನಾಡು ನಿತ್ಯಾನಂದ ಶೆಟ್ಟಿ ಅವರನ್ನು ಸಂಘದ…

Read More

ಬೈಂದೂರು: ಇಂದು ಇಂಗ್ಲೀಷ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೇ ಪೈಪೋಟಿ ನೀಡುತ್ತಿರುವುದು ಹೆಮ್ಮಯ ವಿಷಯವಾಗಿದೆ, ಶಾಲೆಯಲ್ಲಿ ದೊರೆಯುವ ಸರಕಾರಿ ಸೌಲಭ್ಯಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಕನ್ನಡ ಶಾಲೆಗಳ ಮೇಲೆ ಹಿಂಜರಿಕೆ ಸಲ್ಲದು ಎಂದು ಕುಂದಾಪುರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಹೇಳಿದರು. ಅವರು ಬಿಜೂರು ಸ.ಪ್ರೌಢ ಶಾಲೆ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಬಯಲು ರಂಗ ಮಂಟಪವನ್ನು ಕೆ.ಟಿ. ದಿವಾಕರ ಉದ್ಘಾಟಿಸಿದರು, 2014-15ರ ಅವಧಿಯಲ್ಲಿ ನಡೆದ ಶಾಲಾ ವಾರ್ಷಿಕ ಚಟುವಟಿಕೆಯ ಪೋಟೋ ಗ್ಯಾಲರಿಯನ್ನು ಪ್ರದರ್ಶಿಸಲಾಯಿತು. ಮಹಿಳಾ ಮತ್ತು ಮಕ್ಕಳ ಮಿತ್ರ ಕುಂದಾಪುರ ಸಂಚಾಲಕ ರಾಜೇಂದ್ರ ಬಿಜೂರು, ಬಿಜೂರು ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಅನಂತಪದ್ಮನಾಭ ಮಯ್ಯ , ಎಸ್‌ಡಿಎಂಸಿ ಸದಸ್ಯ ಸುಬ್ರಹ್ಮಣ್ಯ ಖಾರ್ವಿ, ಅಂಗನವಾಡಿ ಶಿಕ್ಷಕಿ ಸುಶೀಲಾ, ಶಿಕ್ಷಕ ಗಿರೀಶ ಶ್ಯಾನುಭಾಗ್, ಗ್ರಾಪಂ ಸದಸ್ಯರಾದ ಕೆ.ಟಿ ರಾಜೇಶ, ಜಯರಾಮ ಶೆಟ್ಟಿ ಬಿಜೂರು ಹಾಗೂ…

Read More

ಕುಂದಾಪುರ: ತೆಂಗು ಬೆಳೆಗಾರರ ಫೆಡರೇಶನ್ ಕಟ್‌ಬೇಲ್ತೂರು, ರೋಟರಿ ಕ್ಲಬ್ ಕುಂದಾಪುರ, ಮಹಾವಿಷ್ಣು ಯುವಕ ಮಂಡಲ ಹರೆಗೋಡು ಕಟ್‌ಬೇಲ್ತೂರು ಹಾಗೂ ಶ್ರೀ ಜನನಿ ಸ್ವಸಹಾಯ ಸಂಘ ಹರೆಗೋಡು ಇವರ ಸಂಯುಕ್ತ ಆಶ್ರಯದಲ್ಲಿ ರೈತರ ದಿನಾಚರಣೆ ಕಾರ್ಯಕ್ರಮ ಕಟ್‌ಬೇಲ್ತೂರಿನ ಮಹಾವಿಷ್ಣು ಯುವಕ ಮಂಡಲದ ವಠಾರದಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಕೆ.ಆರ್.ನಾಯ್ಕ್, ಇತ್ತೀಚಿನ ದಿನಗಳಲ್ಲಿ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಜನರ ಅಭಾವ ಸೃಷ್ಟಿಯಾಗುತ್ತಿದೆ. ಯುವ ಜನರು ಪಟ್ಟಣ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು. ಕಟ್‌ಬೇಲ್ತೂರು ತೆಂಗು ಬೆಳೆಗಾರರ ಫೆಡರೇಶನ್‌ನ ಅಧ್ಯಕ್ಷ ಚಂದ್ರ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ತೆಂಗು ಬೆಳೆಗಾರರರ ಫೆಡರೇಶನ್‌ನ ಕಾರ್ಯದರ್ಶಿ ನರಸಿಂಹ ಗಾಣಿಗ ಶುಭ ಹಾರೈಸಿದರು. ಕೃಷಿಕರಾದ ಸೇಸು ಗಾಣಿಗ,…

Read More

ಸುನಿಲ್ ಹೆಚ್. ಜಿ. ಬೈಂದೂರು. ವಿಧಾನ ಪರಿಷತ್ ಚುನಾವಣೆ. ಇಲ್ಲಿ ಉಳಿದ ಚುನಾವಣೆಗಳಂತೆ ಹೇಳಿಕೊಳ್ಳುವಂತಹ ಅಬ್ಬರ ಇಲ್ಲದಿದ್ದರೂ ರಾಜಕೀಯ ಕಸರತ್ತು ಇಲ್ಲದಿಲ್ಲ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಭಾರಿ ನಾಯಕರುಗಳ ಪ್ರತಿಷ್ಠೆಯ ಪ್ರಶ್ನೆ, ಬಂಡಾಯ ಅಭ್ಯರ್ಥಿಗಳ ಅಳಿವು ಉಳಿವಿನ ಪ್ರಶ್ನೆ ಎದುರುಗೊಂಡು ಗೆಲುವಿಗಾಗಿ ತೆರೆ ಮರೆಯ ಕಸರತ್ತು ನಡೆಯುತ್ತಿದೆ. ಮೇಲ್ನೋಟಕ್ಕೆ ಪಕ್ಷಗಳ ನಡುವಿನ ಸಮರ ಎಂದೆನಿಸಿದರೂ ವ್ಯಕ್ತಿಗಳ ನಡುವೆ ಸ್ವರ್ಧೆ ಏರ್ಪಟ್ಟಿರುವುದನ್ನು ಅಲ್ಲಗಳೆಯಲಾಗದು. ಕಳೆದ ಭಾರಿ ಅವಿರೋಧ ಆಯ್ಕೆ ಕಂಡ ಈ ಕ್ಷೇತ್ರದಲ್ಲಿ ಸ್ವರ್ಧೆಯ ಕಾವು ಏರುತ್ತಿದೆ. ರಾಜ್ಯದ ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಕ್ಷೇತ್ರವು ದ.ಕ ಜಿಲ್ಲೆಯ ಮಂಗಳೂರು, ಪುತ್ತೂರು, ಸುಳ್ಯ, ಬಂಟ್ವಾಳ ಬೆಳ್ತಂಗಡಿ ತಾಲೂಕು ಹಾಗೂ ಉಡುಪಿ ಜಿಲ್ಲೆಯ ಉಡುಪಿ ಕುಂದಾಪುರ ಹಾಗೂ ಕಾರ್ಕಳ ತಾಲೂಕು ಸೇರಿ ಒಟ್ಟು 13 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅವಿಭಜಿತ ಜಿಲ್ಲೆಯ ಸ್ಥಳೀಯ ಪಾಧಿಕಾರದ 6631 ಮತದಾರರ ಪೈಕಿ ಗ್ರಾಮ ಪಂಚಾಯತ್ ಸದಸ್ಯರದ್ದು ಇಲ್ಲಿ ಬಹುಮುಖ್ಯ ಪಾತ್ರ. ಉಳಿದಂತೆ ಸಂಸದರಾದ ಬಿ.ಎಸ್.…

Read More

ಹಾಸ್ಯದ ಹೈವೇಲಿ ನಗೋಕೆ ನೂರಾರು ನೆಪಗಳು! ಕುಂದಾಪ್ರ ಡಾಟ್ ಕಾಂ ವರದಿ. ದೇಶಕ್ಕೆ ಹಲವು ವ್ಯಂಗ್ಯಚಿತ್ರಕಾರರನ್ನು ಕೊಟ್ಟ ಕುಂದಾಪುರ ಮತ್ತೆ ಕಾರ್ಟೂನಿಂದಲೇ ಸದ್ದು ಮಾಡಹೊರಟಿದೆ. ಮಣ್ಣಿನ ಗುಣವೂ, ಪ್ರತಿಭೆಗೆ ಸಾಣೆ ಹಿಡಿದ ಫಲವೂ ಕುಂದಾಪುರದ ವ್ಯಂಗ್ಯಚಿತ್ರಕಾರರು ಪ್ರಪಂಚವನ್ನೇ ಅಣಕಿಸಿ, ನಗಿಸಿ ಯಶಕಂಡಿದ್ದಾರೆ. ಕುಂದಾಪುರದಲ್ಲಿದ್ದುಕೊಂಡೇ ಕಾರ್ಟೂನ್ ಪ್ರಪಂಚಕ್ಕೆ ತೆರೆದುಕೊಳ್ಳುವುದರ ಜೊತೆಗೆ ಕಾರ್ಟೂನ್ ಲೋಕದ ಹೊಸ ಸಾಧ್ಯತೆಗಳನ್ನು ಅರಿತು, ಬೆರೆತು, ಕಾರ್ಟೂನಿಷ್ಟ್ ಹಾಗೂ ಕಾರ್ಟೂನ್ ಪ್ರೀಯರಿಗೆ ಮುಖಾಮುಖಿಯಾಗುತ್ತಾ, ನಿಮ್ಮಲ್ಲಿನ ಕಾರ್ಟೂನ್ ಪ್ರೀತಿಯನ್ನು ಗುರುತಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದ ಖ್ಯಾತ ಕಾರ್ಟೂನಿಷ್ಠ್ ಸತೀಶ್ ಆಚಾರ‍್ಯ ಅವರ ಮುಂದಾಳತ್ವದಲ್ಲಿಯೇ ಈ ಭಾರಿಯ ಕಾರ್ಟೂನು ಹಬ್ಬ ಕಳೆಗಟ್ಟುತ್ತಿದೆ. ಡಿಸೆಂಬರ್ 10ರಿಂದ ಕುಂದಾಪುರದ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಟೂನ್ ಹಬ್ಬದಲ್ಲಿ ಕುಂದಾಪುರದ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರ ಪ್ರದರ್ಶನ, ಕಾರ್ಟೂನ್ ಕಾರ್ಯಾಗಾರ, ಪ್ರಸಿದ್ಧ ಕಾರ್ಟೂನಿಷ್ಠರೊಂದಿಗೆ ಸಂವಾದ, ಕ್ಯಾರಿಕೇಚರ್, ವಿದ್ಯಾರ್ಥಿನಿರಿಗೆ ಮಾಯಾ ಕಾಮತ್ ಸ್ವರ್ಧೆ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಲವಾರು ಸ್ವರ್ಧೆ, ವಿಶಿಷ್ಠ ಸೆಲ್ಫಿ ಕಾರ್ನರ್, ಕಾರ್ಟೂನ್ ಪುಸ್ತಕ…

Read More

ಕುಂದಾಪುರ: ಡಿ.10 ರಿಂದ 13 ವರೆಗೆ ಕುಂದಾಪುರದ ಕಲಾಮಂದಿರದಲ್ಲಿ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಇಲ್ಲಿನ ಕಾರ್ಟೂನ್ ಹಬ್ಬ ಜರುಗಲಿದ್ದು ಕೊನೆಯ ದಿನ ವಿದ್ಯಾರ್ಥಿನಿಯರಿಗಾಗಿ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ ಜರುಗಲಿದೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರಲ್ಲಿ ಕಾರ್ಟೂನ್ ಕಲೆಯತ್ತ ಒಲವು ಬೆಳೆಸುವ ಹಾಗೂ ಉತ್ತೇಜಿಸುವ ಸಲುವಾಗಿ ಖ್ಯಾತ ಕಾರ್ಟೂನಿಷ್ಠ್ ದಿ. ಮಾಯಾ ಕಾಮತ್ ಅವರ ಸ್ಮರಣಾರ್ಥ, ಮಾಯಾ ಕಾಮತ್ ಕುಟುಂಬದ ಸಹಭಾಗಿತ್ವದಲ್ಲಿ ’ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ’ ಜರುಗಲಿದೆ. ಡಿ.13ರ ಭಾನುವಾರ ಮಧ್ಯಾಹ್ನ 2:30ಕ್ಕೆ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆಗಳು ನಡೆಯಲಿದೆ. ಬೆಲೆಯೇರಿಕೆ, ಡಿಜಿಟಲ್ ಇಂಡಿಯಾ ಹಾಗೂ ಶಿಕ್ಷಣ ಈ ಮೂರು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಕಾರ್ಟೂನ್ ರಚಿಸಬಹುದಾಗಿದ್ದು ಸ್ವರ್ಧಾಳುಗಳು ಡ್ರಾಯಿಂಗ್ ಹಾಳೆಗಳನ್ನು ಹೊರತುಪಡಿಸಿ ಉಳಿದ ಪರಿಕರಗಳನ್ನು ತಾವೇ ತರಬೇಕು. ವಿಜೇತರಿಗೆ ಅದೇ ದಿನ ಸಂಜೆ ಪ್ರಮಾಣಪತ್ರದೊಂದಿಗೆ ನಗದು ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9482736873 ಅಥವಾ cartoonuhabba@gmail.com ಗೆ ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪುರ: ಡಿ.10ರಿಂದ 13 ವರೆಗೆ ಕುಂದಾಪುರದ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಜರುಗುವ ಕಾರ್ಟೂನ್ ಹಬ್ಬ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಾರ್ಟೂನ್ ಬಿಡಿಸೋ ಸ್ವರ್ಧೆ – ಕಾರ್ಟೂನ್ ಮೊಗ್ಗು ಜರುಗಲಿದ್ದು ಹೋಟೆಲ್ ಪಾರಿಜಾತದ ಗಣೇಶ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಡಿ.12ರ ಶನಿವಾರ ಮಧ್ಯಾಹ್ನ 3ಗಂಟೆಗೆ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆಗಳು ನಡೆಯಲಿದೆ. ಭ್ರಷ್ಟಾಚಾರ, ರಾಜಕೀಯ, ವಿದ್ಯಾರ್ಥಿ ಜೀವನ ಈ ಮೂರು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಕಾರ್ಟೂನ್ ರಚಿಸಬಹುದಾಗಿದ್ದು ಡ್ರಾಯಿಂಗ್ ಹಾಳೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪರಿಕರಗಳನ್ನು ಸ್ವರ್ಧಾಳುಗಳೇ ತರಬೇಕೆಂದು ಕೋರಲಾಗಿದೆ. ವಿಜೇತರಿಗೆ ಮರುದಿನ ಸಂಜೆ ಪ್ರಮಾಣಪತ್ರದೊಂದಿಗೆ ನಗದು ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9482736873 ಅಥವಾ cartoonuhabba@gmail.com ಗೆ ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More