ಬೈಂದೂರು: ಇಂದು ಇಂಗ್ಲೀಷ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೇ ಪೈಪೋಟಿ ನೀಡುತ್ತಿರುವುದು ಹೆಮ್ಮಯ ವಿಷಯವಾಗಿದೆ, ಶಾಲೆಯಲ್ಲಿ ದೊರೆಯುವ ಸರಕಾರಿ ಸೌಲಭ್ಯಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಕನ್ನಡ ಶಾಲೆಗಳ ಮೇಲೆ ಹಿಂಜರಿಕೆ ಸಲ್ಲದು ಎಂದು ಕುಂದಾಪುರ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಹೇಳಿದರು.
ಅವರು ಬಿಜೂರು ಸ.ಪ್ರೌಢ ಶಾಲೆ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಿದ ಬಯಲು ರಂಗ ಮಂಟಪವನ್ನು ಕೆ.ಟಿ. ದಿವಾಕರ ಉದ್ಘಾಟಿಸಿದರು, 2014-15ರ ಅವಧಿಯಲ್ಲಿ ನಡೆದ ಶಾಲಾ ವಾರ್ಷಿಕ ಚಟುವಟಿಕೆಯ ಪೋಟೋ ಗ್ಯಾಲರಿಯನ್ನು ಪ್ರದರ್ಶಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಮಿತ್ರ ಕುಂದಾಪುರ ಸಂಚಾಲಕ ರಾಜೇಂದ್ರ ಬಿಜೂರು, ಬಿಜೂರು ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಅನಂತಪದ್ಮನಾಭ ಮಯ್ಯ , ಎಸ್‌ಡಿಎಂಸಿ ಸದಸ್ಯ ಸುಬ್ರಹ್ಮಣ್ಯ ಖಾರ್ವಿ, ಅಂಗನವಾಡಿ ಶಿಕ್ಷಕಿ ಸುಶೀಲಾ, ಶಿಕ್ಷಕ ಗಿರೀಶ ಶ್ಯಾನುಭಾಗ್, ಗ್ರಾಪಂ ಸದಸ್ಯರಾದ ಕೆ.ಟಿ ರಾಜೇಶ, ಜಯರಾಮ ಶೆಟ್ಟಿ ಬಿಜೂರು ಹಾಗೂ ಶಾಲಾ ನಾಯಕ ಶಿವಾನಂದ ಮತ್ತು ರಮಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಅಬ್ದುಲ್ ರವೂಪ್ ವಾರ್ಷಿಕ ವರದಿ ವಾಚಿಸಿದರು, ಶಿಕ್ಷಕ ರತ್ನಕರ ಎಂ ಸ್ವಾಗತಿಸಿದರು, ಸಾಂಸ್ಕತಿಕ ಮತ್ತು ಕ್ರೀಡೆಯಲ್ಲಿ ಬಹುಮಾನ ವಿಜೇತರಾದ ಹೆಸರನ್ನು ಶಿಕ್ಷಕಿ ವಿನೋದ ಜೋಗಿ ಮತ್ತು ಶಿಕ್ಷಕ ಗಜಾನನ ಗಾವಡಿ ಓದಿದರು, ಶಿಕ್ಷಕಿ ಶೋಭಾ ವಂದಿಸಿದರು, ಕಾರ್ಯಕ್ರಮವನ್ನು ಶಿಕ್ಷಕ ಸುಬ್ರಹ್ಮಣ್ಯ ಮದ್ದೋಡಿ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಜರಗಿತು.