ಕುಂದಾಪ್ರ ಡಾಟ್ ಕಾಂ ಲೇಖನ.ಮರವಂತೆ ಮಹಾರಾಜ ಶ್ರೀ ವರಾಹಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿಷ್ಣು ಹಾಗೂ ಶ್ರೀ ವಿಷ್ಣುವಿನ ದಶವತಾರಗಳಲ್ಲಿ ಎರಡು ಮುಖ್ಯ ಅವತಾರಗಳಾದ ಶ್ರೀ ವರಾಹ ಮತ್ತು ಶ್ರೀ ನರಸಿಂಹ ದೇವರು ಈ ಮೂರು ದೇವರ ಮೂರ್ತಿಗಳು ಒಂದೇ ಗರ್ಭಗುಡಿಯಲ್ಲಿ ಸಾಲಾಗಿ ಸ್ಥಾಪಿಸಲ್ಪಟ್ಟಿರುವುದು ಈ ದೇವಾಲಯದ ವೈಶಿಷ್ಟ್ಯ. ಮೂರು ಮೂರ್ತಿಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿದ್ದರೂ ಎಡನಾಳಿ ಮತ್ತು ಮುಖಮಟಂಪ ಮಾತ್ರ ಒಂದೇ. ಮೂರು ದೇವರಿಗೆ ಆಗಮವಿದೆಯಂತೆ ಹಗಲು ಮತ್ತು ರಾತ್ರಿ ಪೂಜೆ ನಡೆಯುತ್ತದೆ. ಭರತ ಭೂಮಿಯಲ್ಲಿನ ಏಳು ವರಾಹ ದೇವಸ್ಥಾನಗಳಲ್ಲಿ ಮರವಂತೆಯ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನವು ಒಂದೇನಿಸಿಕೊಂಡಿದೆ. ದೇವಳದ ಐತಿಹ್ಯ:ಮರವಂತೆ ಧಾರ್ಮಿಕವಾಗಿ ಅತ್ಯಂತ ಪವಿತ್ರವಾದ ಕ್ಷೇತ್ರ. ಗತ ಪೂರ್ವದಲ್ಲಿ ದೇವೇಂದ್ರನು ಗೌತಮ ಮುನಿಯ ಪತ್ನಿ ಅಹಲ್ಯೆಯಲ್ಲಿ ಕಾಮಾತುರನಾಗಿ ಗೌತಮ ಋಷಿಯ ಶಾಪಕ್ಕೀಡಾಗಿ ಭೂಲೋಕದ ಸೌಪರ್ಣಿಕ ನದಿಯ ತಟದಲ್ಲಿ ವಾಸಿಸುತ್ತಿದ್ದನು. ಆ ಸಮಯದಲ್ಲಿ ಗುಹೇಶ್ವರ ಲಿಂಗವನ್ನು ಪೂಜಿಸಿ, ತಪಸ್ಸು ಮಾಡುತ್ತಾ, ಸಮಯ ಕಳೆದ ದೇವೇಂದ್ರನು ಶಾಪ ವಿಮುಕ್ತಿಯಾದ ನಂತರ ಬ್ರಹಸ್ಪತಿ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ವರದಿ.ಬೈಂದೂರು: ತಾಲೂಕಿನ ಶಿರೂರು ಟೋಲ್ ಪ್ಲಾಜಾದಲ್ಲಿ ಬುಧವಾರ ಸಂಜೆ ನಡೆದ ಭೀಕರ ಅಪಘಾತ ಸಾರ್ವಜನಿಕರ ಎದೆ ನಡುಗಿಸಿದೆ. ಟೋಲ್ ಪ್ಲಾಜಾದಲ್ಲಿನ ಸಣ್ಣ ಎಡವಟ್ಟು, ಅಂಬುಲೆನ್ಸ್ ವೇಗ ನಾಲ್ಕು ಜೀವಗಳನ್ನು ಬಲಿಪಡೆದುಕೊಳ್ಳುವಂತಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೊರಟ ವ್ಯಕ್ತಿಯೊಂದಿಗೆ ಆತನ ಬಂಧುಗಳೂ ಮಸಣ ಸೇರುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ನಿರ್ವಹಣಾ ಕಂಪೆನಿಯ ಎಡವಟ್ಟುಗಳು ಹೆದ್ದಾರಿಯನ್ನು ಮೃತ್ಯುಕೂಪವನ್ನಾಗಿಸುತ್ತಿದೆ. ಆಗಿದ್ದೇನು?ಹೊನ್ನಾವರದ ಹಾಡಗೇರಿ ಸಮೀಪದ ಹೋಟೆಲಿನಲ್ಲಿ ನೌಕರನಾದ್ದ ಗಜಾನನ ಗಣಪ ನಾಯ್ಕ್ ಎಂಬುವವರಿಗೆ ಬುಧವಾರ ಮಧ್ಯಾಹ್ನದ ವೇಳೆ ಹೈಬಿಪಿ ಹಾಗೂ ವಾಂತಿ ಕಾಣಿಸಿಕೊಂಡು ಅನಾರೋಗ್ಯಕ್ಕೀಡಾಗಿದ್ದರಿಂದ ಹೊನ್ನಾವರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚನೆ ನೀಡಿದ್ದರು. ಅದರಂತೆ ಅಂಬ್ಯುಲೆನ್ಸ್ ಮೂಲಕ ಗಜಾನನ ನಾಯ್ಕ್ ಅವರ ಪತ್ನಿ, ಸಂಬಂಧಿಗಳು ಹಾಗೂ ಸ್ನೇಹಿತರು ಗಜಾನನ ನಾಯ್ಕ್ ಅವರನ್ನು ಕರೆದುಕೊಂಡು ಉಡುಪಿಗೆ ಹೊರಟಿದ್ದರು. ಸಂಜೆ ನಾಲ್ಕು ಗಂಟೆ ವೇಳೆಗೆ (04:07pm) ಅಂಬ್ಯುಲೆನ್ಸ್ ಶಿರೂರು ಟೋಲ್ ಪ್ಲಾಜಾ ತಲುಪಿದೆ.…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ಕುಂದಾಪುರ ನೆಲದ ಭಾಷೆ ಕುಂದಾಪ್ರ ಕನ್ನಡದ ಅಭಿವೃದ್ಧಿ ಹಾಗೂ ತುಲನಾತ್ಮಕ ಅಧ್ಯಯನದ ದೃಷ್ಟಿಯಿಂದ ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯ ನಿರ್ಧರಿಸಿದ್ದು, ಕುಂದಾಪ್ರ ಕನ್ನಡ ಭಾಷೆಯ ಉಳಿವು, ಪ್ರಸರಣ ಹಾಗೂ ದಾಖಲಾತಿ ದೃಷ್ಟಿಯಿಂದ ದಶಕಗಳ ಬೇಡಿಕೆಗೆ ಜೀವಕಳೆ ಬಂದಂತಾಗಿದೆ. ಕುಂದಾಪ್ರ ಕನ್ನಡ ಅಧ್ಯಯನ ಪೀಠ ಆರಂಭಕ್ಕೆ ಕಳೆದೆರಡು ವರ್ಷಗಳಿಂದ ಹೆಚ್ಚಿನ ಆಸ್ಥೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಸರಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಆರಂಭದಲ್ಲಿ ವಿಶ್ವ ವಿದ್ಯಾನಿಲಯದ ಆಂತರಿಕ ಸಂಪನ್ಮೂಲದಿಂದ ರೂ.25 ಲಕ್ಷ ಹಣವನ್ನು ಮೀಸಲಿರಿಸಲಾಗಿದ್ದು, ಸರಕಾರದ ಅನುದಾನವನ್ನು ನಿರೀಕ್ಷಿಸಲಾಗಿದೆ. ಕುಂದಾಪ್ರ ಕನ್ನಡದಲ್ಲಿ ಸಾಹಿತ್ತಿಕ ಚಟುವಟಿಕೆಗಳು, ತುಲನಾತ್ಮಕ ಅಧ್ಯಯನ, ಸಂಶೋಧನೆ, ವಿಚಾರ ಸಂಕೀರಣ, ಭಾಷಾ ಬೆಳವಣಿಗೆಗೆ ಪೂಕರ ಕಾರ್ಯಕ್ರಮಗಳು, ಈ ನೆಲದ ಐತಿಹ್ಯವನ್ನು ಬೆಳಕಿಗೆ ತರುವ ಕಾರ್ಯಚಟುವಟಿಕೆಗಳು ಸೇರಿದಂತೆ ಹಲವು ವಿಚಾರಗಳು ಅಧ್ಯಯನ ಪೀಠದ ಮೂಲಕ ನಡೆಯಲಿದೆ. ಕುಂದಾಪ್ರ ಡಾಟ್ ಕಾಂ ವರದಿ. ಅಧ್ಯಯನ ಪೀಠ ಕುಂದಾಪುರದಲ್ಲಿಯೇ ಆಗಲಿ:ಮಂಗಳೂರು ವಿಶ್ವವಿದ್ಯಾನಿಲಯ…
ಶಿಕ್ಷಕ, ಸಂಘಟಕ, ಸಾಹಿತಿ ನರೇಂದ್ರ ಕುಮಾರ್ ಕೋಟ ಅವರೊಂದಿಗೆ ಕುಂದಾಪ್ರ ಡಾಟ್ ಕಾಂ ಸಂದರ್ಶನ
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ,ಜೂ.15: ಲಾಂಗ್ ರೈಡ್‌ಗೆ ತೆರಳೋದು ಪ್ರತಿಯೊಬ್ಬ ಬೈಕರ್‌ಗಳ ಕನಸು. ಸ್ನೇಹಿತರ ಪಡೆ ಜೊತೆಯಾದರಂತೂ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತೆ ರೈಡಿಂಗ್ ಅನುಭವ. ಹೀಗೆ ಕುಂದಾಪುರದಿಂದ ಆರಂಭಿಸಿ ಭಾರತದ ಸ್ವರ್ಗ ಲೇಹ್ ಸೇರಿದಂತೆ ಲಡಾಕ್ ನಗರದ ವಿವಿಧ ಪ್ರವಾಸ ತಾಣಗಳ ಸುತ್ತುತ್ತಾ ಕುಂದಾಪ್ರ ಕನ್ನಡದಲ್ಲಿಯೇ ವ್ಲಾಗಿಂಗ್ (Vlogging) ಅನುಭವಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ ಕೊಲ್ಲೂರಿನ ಯುವಕ ಜಿತೇಂದ್ರ ಕುಮಾರ್. ತನ್ನ ರಾಯಲ್ ಎನ್ಫಿಲ್ಡ್ ಹಿಮಾಲಯನ್ ಬೈಕಿನಲ್ಲಿ ಛಂಡಿಗಡ್ ಮಾರ್ಗವಾಗಿ ತೆರಳಿ ಇಂದು ಲೇಹ್ ತಲುಪಿರುವ ಜಿತೇಂದ್ರ, ಭಾರತದ ಎತ್ತರದ ಮೋಟೋರೆಬಲ್ ತಾಣವಾದ ಕಾರ್ದುಂಗ್ಲಾ ಲಾ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ತೆರಳಿ ಬಳಿಕ ಶ್ರೀನಗರ ಮೂಲಕ ಮರಳಿ ಊರಿನ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಕುಂದಾಪ್ರ ಕನ್ನಡದ ಮೋಟೋ ವ್ಲಾಗರ್:ಜಿತೇಂದ್ರ ಕುಮಾರ್ ವ್ಲಾಗಿಂಗ್ ಹವ್ಯಾಸ ಹೊಂದಿದ್ದು, ಆಗಾಗ್ಗೆ ಸೋಲೋ ಹಾಗೂ ಸ್ನೇಹಿತರೊಂದಿಗೆ ಮೊಟೋ ವ್ಲಾಗ್ (Youtube: Jini on Wheels) ಮಾಡುತ್ತಿರುತ್ತಾರೆ. ಅವರ ಕುಂದಾಪ್ರ ಕನ್ನಡದ ವಿವರಣೆಯುಳ್ಳ ವ್ಲಾಗಿಂಗ್ ಎಲ್ಲರ ಗಮನ…
ಅನಾರೋಗ್ಯದ ನಡುವೆಯೂ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ್ದ ವಿದ್ಯಾರ್ಥಿನಿಗೆ ಡಾ. ಗೋವಿಂದ ಬಾಬು ಪೂಜಾರಿ ಅವರಿಂದ ನೆರವು ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಗ್ವಾಡಿಯ ಯುವತಿ ಶ್ರಾವ್ಯಾ, ತನ್ನ ಅನಾರೋಗ್ಯದ ನಡುವೆಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿ ಪ್ರಥಮ ಶೇಣಿಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿರುವ ಬಗ್ಗೆ ವರದಿ ಪ್ರಕಟವಾದ ಬೆನ್ನಲ್ಲೇ ಉದಾರಿಗಳಿಂದ ನೆರವು ಹರಿದು ಬಂದಿದೆ. ಆಕೆಯ ಶಿಕ್ಷಣ ವೆಚ್ಚ ಹಾಗೂ ಚಿಕಿತ್ಸಾ ವೆಚ್ಚವನ್ನು ಭರಿಸಲು ದಾನಿಗಳು ಮುಂದೆ ಬಂದಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಶ್ರಾವ್ಯಳ ಪ್ರತಿಭೆ ಹಾಗೂ ಆಕೆಯ ಆರೋಗ್ಯ ಸಮಸ್ಯೆಯ ಬಗ್ಗೆ ತಿಳಿದುಕೊಂಡ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರು ಸ್ವತಃ ಬಗ್ವಾಡಿ ಸಿಂಗನಕೊಡ್ಲುವಿನಲ್ಲಿರುವ ಆಕೆಯ ಮನೆಗೆ ಭೇಟಿ ನೀಡಿ ಧೈರ್ಯತುಂಬಿದ್ದಾರೆ. ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಆಕೆಯ ಚಿಕಿತ್ಸಾ ವೆಚ್ಚವನ್ನು ಭರಿಸುವ ಭರವಸೆಯನ್ನು ನೀಡಿ ಕುಟುಂಬಕ್ಕೆ ಬೆಳಕಾಗಿದ್ದಾರೆ. ಒಂದು ವರ್ಷದ ಚಿಕಿತ್ಸೆ ವೆಚ್ಚ ಭರಿಸುವ ಜೊತೆಗೆ ಮಣಿಪಾಲ ಖಾಸಗಿ ಆಸ್ಪತ್ರೆಯ ವೈದ್ಯರು ಶಿಪಾರಸ್ಸು ಮಾಡಿದ…
7,000 ಕಿ.ಮೀ ಪಯಣ, ಮಹಿಳಾ ಸಬಲೀಕರಣ ಜಾಗೃತಿಯ ಕಂಕಣ ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬೈಕ್ ರೈಡಿಂಗ್ ಅನ್ನೊಂದು ಒಂದು ಥ್ರಿಲ್ಲಿಂಗ್ ಅನುಭವ. ಅದ್ರಲ್ಲೂ ಇಷ್ಟವಾದ ಬೈಕ್ ಸಿಕ್ಕರಂತೂ ಲಾಂಗ್ ಟ್ರಿಪ್ ಹೋಗೋದು ಪ್ರತಿ ಬೈಕರ್’ಗಳ ಕನಸು. ಅಂತಹದ್ದೊಂದು ರೈಡಿಂಗ್ ಕನಸು ಕಂಡದ್ದು ಮಾತ್ರವಲ್ಲ, ಒಂದು ತಿಂಗಳೊಳಗೆ ಅದನ್ನು ಸಾಕಾರಗೊಳಿಸಿಕೊಳ್ಳುವ ಸಾಹಸ ಮಾಡಿದ್ದಾಳೆ ಕುಂದಾಪುರದ ಈ ಹುಡುಗಿ. ಕುಂದಾಪುರ ತಾಲೂಕಿನ ಕುಂಭಾಸಿಯ ಸಾಕ್ಷಿ ಹೆಗಡೆ ಅಂತಹದ್ದೊಂದು ಸಾಹಸಕ್ಕೆ ಮುಂದಾದ ಯುವತಿ. ಕುಂಭಾಸಿಯಿಂದ ಕಾಶ್ಮೀರದ ತನಕ ಒಟ್ಟು 7,000 ಕಿ.ಲೋ ಮೀಟರ್ ಪ್ರಯಾಣ, 15 ದಿನಗಳ ಗುರಿ, ಮಹಿಳಾ ಸಶಕ್ತಿಕರಣದ ಜಾಗೃತಿಯ ಸಂದೇಶದೊಂದಿಗೆ ಸಾಕ್ಷಿಯ ಏಕಾಂಗಿ ಬೈಕ್ ಯಾತ್ರೆ, ಕಾಶ್ಮೀರ ತಲುಪಿ, ಮತ್ತೆ ಅಲ್ಲಿಂದ ಗ್ವಾಲಿಯರ್ ತನಕ ಹಿಂದಿರುಗಿಯಾಗಿದೆ. ಮೂಲತಃ ಇಡುಗುಂಜಿಯವರಾದ, ಪ್ರಸ್ತುತ ಕುಂಭಾಸಿಯಲ್ಲಿ ನೆಲೆಸಿರುವ ಶಿವರಾಮ ಹೆಗಡೆ ಹಾಗೂ ಪುಪ್ಪಾ ದಂಪತಿಗಳ ತೃತೀಯ ಪುತ್ರಿಯಾದ ಸಾಕ್ಷಿ, ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ತೃತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾಳೆ. ಬೈಕ್ ಬಗ್ಗೆ ಕ್ರೇಜ್ ಹೊಂದಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೆಂಗಳೂರು: ಭಾರತದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ’ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ 2022’ನ್ನು ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯಲಿರುವ ಕಥೆಗೆ ರೂ.50,000; ದ್ವೀತಿಯ ಸ್ಥಾನಕ್ಕೆ 25,000, ತೃತೀಯ ಸ್ಥಾನಕ್ಕೆ ರೂ. 15,000 ಮತ್ತು ಉಳಿದಂತೆ ಮೂರು ಕತೆಗಳಿಗೆ ತಲಾ ರೂ.5000 ಸಮಾಧಾನಕರ ಬಹುಮಾನ ನೀಡಲಾಗುವುದು. ಕನ್ನಡದ ಸಮೃದ್ಧ ಕಥಾ ಪರಂಪರೆ ಇನ್ನೂ ಹೆಚ್ಚು ಶ್ರೀಮಂತವಾಗಲಿ, ಮತ್ತಷ್ಟು ಮೌಲ್ಯಯುತವಾದ ಕಥೆಗಳು ಹೊರಹೊಮ್ಮಲಿ ಎನ್ನುವುದೇ ’ಬುಕ್ ಬ್ರಹ್ಮ- ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಯ ಮೂಲ ಉದ್ದೇಶ. ಕನ್ನಡ ಕಥಾ ಪ್ರಪಂಚದಲ್ಲಿ ಹಲವು ಮಹತ್ವದ ವಾರ್ಷಿಕ ಸ್ಪರ್ಧೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಆ ಝುಳು ಝುಳು ಹರಿವ ನದಿಗೆ ಹೊಸದಾಗಿ ಈಗ ’ಬುಕ್ ಬ್ರಹ್ಮ’ ತೊರೆ ಸೇರಲಿದೆ. ಪ್ರತಿ ವರ್ಷ ದೇಶದ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ಸ್ಪರ್ಧೆಯನ್ನು ಸಂಸ್ಥೆಯು ನಡೆಸಲಿದೆ. ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ: ಕತೆಯು ಸ್ವತಂತ್ರವಾಗಿರಬೇಕು. ಅನುವಾದ, ಅನುಕರಣವಾಗಿರಬಾರದು.ಕತೆಯು ಅಪ್ರಕಟಿತವಾಗಿಬೇಕು. ಮುದ್ರಣ…
ಕುಂದಾಪ್ರ ಡಾಟ್ ಕಾಂ ವರದಿ.ಕುಂದಾಪುರ: ವಿಹಾರ – ವಿರಾಮಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿಪಡಿಸಿದ ಪಾರ್ಕ್, ಉದ್ಘಾಟನೆಗೂ ಮುನ್ನವೇ ಮದ್ಯ ವ್ಯಸನಿಗಳ ಅಡ್ಡವಾಗಿ ಪರಿಣಮಿಸಿದೆ. ಕುಂದಾಪುರ ಪುರಸಭಾ ಅಧ್ಯಕ್ಷರೇ ಪ್ರತಿನಿಧಿಸುವ ಟಿಟಿ ರಸ್ತೆ ವಾರ್ಡಿನಲ್ಲಿರುವ ಉದ್ಯಾನವನವೀಗ ನಿರುಪಯುಕ್ತ ತಾಣವಾಗಿ ಮಾರ್ಪಾಡಾಗಿದೆ. ಟಿಟಿ ರಸ್ತೆಯ ಪ್ರಮುಖ ಹಾದಿಯಲ್ಲಿಯೇ ಇರುವ, ಇನ್ನು ಹೆಸರಿಡದ ಪಾರ್ಕ್ ಹೊರಗಿನಿಂದ ನೋಡಲಷ್ಟೇ ವಿಹಾರ ತಾಣವೆನಿಸುತ್ತದೆ. ಒಳಭಾಗದಲ್ಲಿ ಇಣುಕಿದರೆ ಅಲ್ಲಿನ ನಿಜಬಣ್ಣ ಬಯಲಾಗುತ್ತೆ. ರಾಶಿ ರಾಶಿ ಮಧ್ಯದ ಬಾಟಲಿಗಳು, ಸಿಗರೇಟು, ಕಸದ ರಾಶಿ, ಸುತ್ತಲೂ ಬೆಳೆದ ಗಿಡಗಂಟಿ ಪಾರ್ಕಿನ ಅಂದಗೆಡಿಸಿಬಿಟ್ಟಿದೆ. ಪಾರ್ಕ್ ಒಳಗೆ ಕುಳಿತು ಮದ್ಯವ್ಯಸನ ಮಾಡುವ ಘಟನೆಗಳು ನಡೆಯುತಿದ್ದು, ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸುವುದು ಕೂಡ ಕಷ್ಟವೆನಿಸಿದೆ ಎಂದು ಸ್ಥಳೀಯರೊಬ್ಬರು ಹೇಳಿಕೊಂಡಿದ್ದಾರೆ. ಅಭಿವೃದ್ಧಿಗೊಳಿಸಿ 2ವರ್ಷ ಕಳೆದರೂ ಉದ್ಘಾಟನೆಯ ಭಾಗ್ಯವಿಲ್ಲ:ಈ ಭಾಗದ ಸಾರ್ವಜನಿಕರು ಹಾಗೂ ಮಕ್ಕಳ ಉಪಯೋಗಕ್ಕಾಗಿ ಟಿಟಿ ರಸ್ತೆಯ ಬೃಹತ್ ವಾಟರ್ ಟ್ಯಾಂಕ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕ್ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಗಂಗೊಳ್ಳಿಯ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಸ್ಥಗಿತಗೊಂಡಿರುವ ಮೀನುಗಾರಿಕಾ ಬಂದರಿನ ಜೆಟ್ಟಿ ಕಾಮಗಾರಿಯನ್ನು ಪುನರಾರಂಭಿಸಲು ಕ್ರಮಕೈಗೊಳ್ಳಲಾಗುವುದು. ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಅನುಮತಿ ದೊರೆತಿದ್ದು, ಆದಷ್ಟು ಶೀಘ್ರ ಸರ್ವೆ ಕಾರ್ಯ ನಡೆಯಲಿದೆ. ಗಂಗೊಳ್ಳಿಯ ಅನೇಕ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಲಾಗಿದ್ದು, ಇಲ್ಲಿನ ಜನರ ಬಹುಬೇಡಿಕೆಯ ರಿಂಗ್ ರೋಡ್ ನಿರ್ಮಾಣದ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಗಂಗೊಳ್ಳಿಗೆ ಸೋಮವಾರ ಭೇಟಿ ನೀಡಿದ ಅವರು ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುಮಾರಸ್ವಾಮಿ ನೇತೃತ್ವದ ಸರಕಾರ, ಯಡಿಯೂರಪ್ಪನವರ ನೇತೃತ್ವದ ಸರಕಾರ ಹಾಗೂ ಬೊಮ್ಮಾಯಿ ನೇತೃತ್ವದ ಸರಕಾರಗಳಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನಿರೀಕ್ಷೆಗೂ ಮೀರಿ ಅನುದಾನ ದೊರೆತಿದೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಜನರ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು. ಗಂಗೊಳ್ಳಿ…
