Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಮೂಲಕ ಬೈಂದೂರು ಶಿರೂರಿನಿಂದ ತೂದಳ್ಳಿ ಮಾರ್ಗವಾಗಿ ಸಾಗಿ ಮುಂದೆ 4 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದಾಗ ಮಿನಿ ಜೋಗ ಖ್ಯಾತಿಯ ಕೂಸಳ್ಳಿಯ ಅಬ್ಬಿ ಜಲಪಾತ ಎದುರುಗೊಳ್ಳುತ್ತದೆ. ಕಣ್ಣು ಹಾಯಿಸಿದಷ್ಟು ಹಚ್ಚ ಹಸುರಿನ ಪಶ್ಚಿಮ ಘಟ್ಟದ ಕಾನನದ ನಡುವೆ ಹತ್ತಾರು ಚಿಕ್ಕ ಪುಟ್ಟ ತೊರೆಗಳನ್ನು ದಾಟಿ, ಅಲ್ಲಲ್ಲಿ ಎದುರಾಗುವ ಪ್ರಾಣಿ, ಪಕ್ಷಿಗಳನ್ನು ನೋಡುತ್ತಾ ತೆರಳುವ ಕಾಡುಹಾದಿ ಚಾರಣಪ್ರೀಯರ ಅಚ್ಚುಮೆಚ್ಚಿನ ತಾಣ. ನೂರಾರು ಅಡಿ ಎತ್ತರದಿಂದ ಎರಡು ಹಂತದಲ್ಲಿ ಧುಮುಕುವ ಜಲಪಾತದ ಹಾಲ್ನೊರೆಯನ್ನೊಮ್ಮೆ ನೋಡಿ ಕಣ್ಣುತುಂಬಿಕೊಳ್ಳಬೇಕು. ಫೆಬ್ರವರಿಯ ತನಕ ಸಾಮಾನ್ಯವಾಗಿ ನೀರಿದ್ದರೂ ಮಳೆಗಾಲದಲ್ಲಿ ಇದರ ಅದ್ಬುತ ಸೋಬಗನ್ನು ವರ್ಣಿಸಲಸಾಧ್ಯ. ಜಲಪಾತದಿಂದ ಹರಿಯುವ ನೀರು ಸುಂಕದಗುಂಡಿಯ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಈ ನಡುವೆ ನೂರಾರು ಕೃಷಿ ಭೂಮಿಗಳಿಗೂ ಆಸರೆಯಾಗಿದೆ. ಜಲಪಾತದ ತನಕ ಕ್ರಮಿಸುವುದಕ್ಕೆ ಕ್ಲಿಷ್ಟ ಹಾದಿಯಿದ್ದರೂ ಅಲ್ಲಿನ ಸೋಬಗಿನ ಮಂದೆ ಅವೆಲ್ಲವೂ ನಗಣ್ಯವೆನಿಸುತ್ತದೆ. ಯಾವ ದೊಡ್ಡ ಜಲಪಾತಗಳಿಗೂ ಪರ್ಯಾಯವಾಗಬಲ್ಲ ಈ ಜಲಪಾತ ಮಾಹಿತಿ ಕೊರತೆಯಿಂದ ಮರೆಯಲ್ಲಿಯೇ ಉಳಿದಿದೆ.

Read More

ಬೈಂದೂರು ಕೊಲ್ಲೂರು ಅಥವಾ ಕುಂದಾಪುರ ಕೊಲ್ಲೂರು ಮಾರ್ಗ ಮಧ್ಯೆ ಸಿಗುವ ಆನೆಝರಿ ನೇಸರಧಾಮವು ಪ್ರಕೃತಿ ಪ್ರಿಯರ ನೆಚ್ಚಿನ ತಾಣ. ಸೂರ್ಯನ ಕಿರಣಗಳನ್ನು ಕಾಣಲಾಗದಷ್ಟು ದಟ್ಟ ಕಾನನ. ಹೆಮ್ಮರಗಳು, ಅವಕ್ಕೆ ಸುತ್ತಿಕೊಂಡ ಬಳ್ಳಿಗಳು, ಔಷಧಿ ಗಿಡಗಳು ಸೇರಿದಂತೆ ನೂರಾರು ಬಗೆಯ ಸಸ್ಯ ಪ್ರಬೇಧಗಳು, ಪ್ರಾಣಿ, ಪಕ್ಷಿ, ಸೂಕ್ಷಜೀವಿಗಳ ಆವಾಸಸ್ಥಾನ ಆನೆಝರಿ. ಸೌಪರ್ಣಿಕಾ ನದಿಯಲ್ಲಿ ಜಲಕ್ರೀಡೆ ಆಡುತ್ತಾ, ಕಾಡಿನ ಮಧ್ಯದಿ ಸಾಗಿ ಹಕ್ಕಿಗಳ ಕಲರವವನ್ನು ಕೇಳುತ್ತಾ, ಅಲ್ಲಲ್ಲಿ ಸಂಚರಿಸುವ ಪ್ರಾಣಿಗಳನ್ನು ನೋಡುತ್ತಾ ಸುತ್ತುವಾಗ ಬೇರೆಯದೇ ಲೋಕದಲ್ಲಿ ಸಂಚರಿಸಿದ ಅನುಭವವಾಗುತ್ತದೆ. ಅರಣ್ಯ ಇಲಾಖೆ ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಚಿಕ್ಕ ಕುಟೀರ ಟೆಂಟ್ ಹಾಕಿದೆ. ಹಾಗೆ ನದಿಯಲ್ಲಿ ದೋಣಿ ವಿಹಾರ ಮಾಡಬಹುದು. ಕೊಲ್ಲ್ಲೂರು ಶ್ರೀ ಮಾಕಾಂಬಿಕೆ ದೇವಿ ದರ್ಶನ ಮಾಡಿದವರು ಹಾಗೆ ಆನೆಝರಿಗೂ ಭೇಟಿ ನೀಡುತ್ತಾರೆ. ದೂರದಲ್ಲಿ ಅರಶಿಣಗುಂಡಿ ಜಲಪಾತವೂ ಇದೆ.

Read More

ಸೋಮೇಶ್ವರ ಕಡಲತೀರಕ್ಕೆ ತಾಕಿಕೊಂಡಿರುವ ಗುಡ್ಡವೇ ಒತ್ತಿನಣೆ. ಹಲವು ಬಗೆಯ ಔಷದ ಸಸ್ಯಗಳು, ಅಪರೂಪದ ಮರಗಿಡಗಳು ಈ ಭಾಗದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 200 ಅಡಿ ಎತ್ತರದಲ್ಲಿರುವ ನೇಸರಧಾಮದ ತುದಿಯಿಂದ ಸಮುದ್ರ ವೀಕ್ಷಣೆ ಮಾಡಿದವರಿಗೆ ಸ್ವರ್ಗವೀಕ್ಷಿಸಿದಂತಹ ಅನುಭವ. ಇಲ್ಲಿ ನಿಂತು ಸಮುದ್ರ ನದಿಗಳು ಸೇರುವ ದೃಶ್ಯ, ಸೂರ್ಯಾಸ್ತಮಾನ ಇವೆಲ್ಲವನ್ನೂ ನೋಡುವುದೇ ಮನಮೋಹಕವಾಗಿರುತ್ತದೆ. ಸಮುದ್ರದ ಸೊಬಗು ಸವಿಯಲೆಂದೇ 1996ರಲ್ಲಿ ಒತ್ತಿನಣೆಯಲ್ಲಿ ಅರಣ್ಯ ಇಲಾಖೆ ಕ್ಷಿತಿಜ ನೇಸರಧಾಮವನ್ನು ನಿರ್ಮಿಸಿದೆ. ಎರಡು ಹವಾನಿಯಂತ್ರಿತ ಕಾಟೇಜ್ ಹಾಗೂ ಐದು ಸಾಮಾನ್ಯ ಕಾಟೇಜ್ ಮತ್ತು ಫಲಹಾರ ಮಂದಿರ ನೇಸರಧಾಮದಲ್ಲಿದೆ. ಇಲ್ಲಿಂದ ಕೆಳಗಿಳಿಯಲು ಮೆಟ್ಟಿಲು ವ್ಯವಸ್ಥೆ ಇದ್ದು ರಸ್ತೆಯನ್ನು ದಾಟಿ ಸೋಮೇಶ್ವರ ಕಡಲತೀರಕ್ಕೆ ತೆರಳಬಹುದಾಗಿದೆ. ರಾಷ್ಟ್ರಿಯ ಹೆದ್ದಾರಿಯಿಂದ 2 ಕಿ. ಮೀ. ದೂರದಲ್ಲಿರುವ ಕ್ಷಿತಿಜ ನೇಸರಧಾಮಕ್ಕೆ ತೆರಳಲು ಅರ್ಧ ಕಿ.ಮೀ. ನಷ್ಟು ಡಾಂಬಾರು ರಸ್ತೆಯಿದ್ದು, ಮುಂದೆ ಮಣ್ಣಿನ ರಸ್ತೆಯಲ್ಲಿಯೇ ಸಾಗಬೇಕಾಗಿದೆ. ಅರಣ್ಯ ಇಲಾಖೆಗೆ ಒಳಪಡುವ ಒತ್ತಿನಣೆ ಪ್ರದೇಶದಲ್ಲಿ ಅನೇಕ ಔಷಧಿ ಸಸ್ಯಗಳೂ ಇವೆ.

Read More

ಬೈಂದೂರಿನ ಪೇಟೆಯಲ್ಲಿರುವ ಅಧಿದೇವ ಶ್ರೀ ಸೇನೇಶ್ವರ ದೇವಸ್ಥಾನ ಧಾರ್ಮಿಕ ಪಾವಿತ್ರ್ಯ ಕ್ಷೇತ್ರ ಮಾತ್ರವಲ್ಲದೇ ಪ್ರವಾಸಿ ತಾಣವೂ ಹೌದು. 11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಸಾಮಂತರಾಗಿದ್ದ ಸೇನವಾರ ಅರಸರು ಈ ದೇವಾಲಯವನ್ನು ನಿರ್ಮಿಸಿದರೆಂದು ಇತಿಹಾಸ ತಿಳಿಸುತ್ತದೆ. ದೇವಾಲಯದ ಗರ್ಭಗುಡಿ, ಸುಕನಾಸಿ, ಬಸವ ಮಂಟಪ ಸಂಪೂರ್ಣ ಶಿಲೆಯಿಂದಲೇ ನಿರ್ಮಿತವಾಗಿದೆ. ಇಲ್ಲಿನ ಅದ್ಬುತವೆನಿಸುವ ಶಿಲ್ಪಗಳ ಚಿತ್ತಾರ ಎಂಥವರನ್ನೂ ಬೆರಗುಗೊಳಿಸುತ್ತದೆ. ಚಾಲುಕ್ಯರ ದೇವಾಲಯಗಳ ಶೈಲಿಯಲ್ಲಿಯೇ ಈ ದೇವಾಲಯ ನಿರ್ಮಾಣಗೊಂಡಿದ್ದು ಇಲ್ಲಿನ ಪ್ರತಿ ಕೆತ್ತನೆಯೂ ಚಿತ್ತಾಕರ್ಷಕವಾದುದು. ದೇವಾಲಯದ ನಂದಿ ಮಂಟಪ, ಲೇಪಾಕ್ಷಿ, ಸುಕನಾಸಿಯ ಜಾಲಂದ್ರಗಳ ಮಧ್ಯದಲ್ಲಿರುವ ಮಕರ ತೋರಣ ಇವೆಲ್ಲರ ನಡುವೆ ವಿರಾಜಿಸುವ ಶ್ರೀ ಸೇನೇಶ್ವರನ ಸನ್ನಿಧಾನ ಭಕ್ತಿ ಭಾವನೆಯನ್ನು ತುಂಬುವುದರೊಂದಿಗೆ ಕಲಾಪ್ರೀಯರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

Read More

ಅಳ್ವೆಗದ್ದೆ ಕಡಲತೀರ ಶಿರೂರು ರಾಷ್ಟ್ರಿಯ ಹೆದ್ದಾರಿ 66ರಿಂದ 3 ಕಿ.ಮೀ ದೂರದಲ್ಲಿರುವ ಅಳ್ವೆಗದ್ದೆ ಕಡಲತೀರ ನಿಸರ್ಗ ಸೌಂದರ್ಯದಿಂದ ಕಂಗೊಳಿಸುತ್ತದೆ. ಇದು ಸಮುದ್ರ ಹಾಗೂ ನದಿಗಳ ಸಂಗಮ ಸ್ಥಾನ ಹಾಗೂ ಕಿರು ಬಂದರು ಪ್ರದೇಶವಾಗಿದೆ. ಸಮುದ್ರದ ನಡುವಲ್ಲಿರುವ ಬಂಡೆ ಹಾಗೂ ಬಂಡೆಯ ಅಪ್ಪಳಿಸುವ ತೆರೆಗಳನ್ನು ನೋಡುವುದೇ ಮನಮೋಹಕವಾಗಿರುತ್ತದೆ. ಬಂಡೆಯ ತನಕ ತೆರಳಲು ಕಲ್ಲಿನ ಹಾಸು ಇದ್ದು ಇತ್ತಿಚಿಗೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಉಪ್ಪುಂದ ಮಡಿಕಲ್ ಕಡಲತೀರ ಉಪ್ಪುಂದದ ರಾಷ್ಟ್ರಿಯ ಹೆದ್ದಾರಿಯಿಂದ ಮಡಿಕಲ್ ತೆರಳುವ ಮಾರ್ಗವಾಗಿ 3 ಕಿ.ಮೀ ಕ್ರಮಿಸಿದರೆ ಉಪ್ಪುಂದದ ಈ ಕಡಲತಡಿ ಎದುರುಗೊಳ್ಳುತ್ತದೆ. ಸೋಮೇಶ್ವರ, ಅಳ್ವೆಗದ್ದೆ ಕಡಲತೀರಕ್ಕಿಂತ ಸ್ವಲ್ಪ ಭಿನ್ನವಾಗಿಯೇ ಕಾಣಿಸಿಕೊಂಡಿರುವ ಮಡಿಕಲ್ ಕಡಲತೀರ ಕೂಡ ಪ್ರವಾಸೋದ್ಯಮ ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದೆ. ಚರ್ಚ್‌ಗುಡ್ಡ ಕ್ರೈಸ್ತರ ಪವಿತ್ರ ಸ್ಥಳವಾಗಿರುವ ಚರ್ಚ್‌ಗುಡ್ಡ ಪ್ರವಾಸಿಗರಿಗೂ ಅಚ್ಚುಮೆಚ್ಚು. ಬೈಂದೂರು ಚರ್ಚ್‌ರಸ್ತೆಯ ಮೂಲಕ ಸಾಗಿ ಮುಂದೆ ಚರ್ಚ್ ಗುಡ್ಡಕ್ಕೆ ತೆರಳಲು ರಸ್ತೆ ಇದ್ದು ಇಲ್ಲಿಂದ ಸಮುದ್ರ ಹಾಗೂ ಕೂಸಳ್ಳಿ ಜಲಪಾತವನ್ನೂ ದೂರದಿಂದ ವೀಕ್ಷಿಸಬಹುದಾಗಿದೆ.

Read More

ಬೈಂದೂರಿನಿಂದ 10 ಕಿ.ಮೀ ದೂರದಲ್ಲಿರುವ ಎಳಜಿತಕ್ಕೆ ತೆರಳಿ ಅಲ್ಲಿಂದ ಕಿರಿದಾದ ಅಡ್ಡ ರಸ್ತೆಗಳಲ್ಲಿ ಒಂದು ಕಿ.ಮೀ ಕ್ರಮಿಸಿದರೆ ಗುಳ್ಳಾಡಿ ಹಾಗೂ ಎರಡು ಕಿ,ಮಿ ಕ್ರಮಿಸಿದರೆ ಮಂದಣಕಲ್ಲು ಜಲಪಾದ ಎದುರುಗೊಳ್ಳುತ್ತದೆ. ಅದ್ಬುತವಾದ ಸೌಂದರ್ಯದಿಂದ ಕಂಗೋಳಿಸುವ ಈ ಕಿರು ಜಲಪಾತಗಳು ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತದೆ. ಇಲ್ಲಿನ ಕೊರತಿಕಲ್ಲು ಗುಡ್ಡ ಚಾರಣಪ್ರೀಯರಿಗೆ ಹೇಳಿ ಮಾಡಿಸಿದಂತಿದೆ. ಎಳಜಿತ ಪೇಟೆಯಿಂದ ಸುಮಾರು ನಾಲ್ಲು ಗಂಟೆ ಹಾದಿ ಕ್ರಮಿಸಿದರೆ ಈ ಬೆಟ್ಟವನ್ನು ಏರಬಹುದಾಗಿದೆ. ಇಲ್ಲಿನ ಜಲಪಾತ ಹಾಗೂ ಬೆಟ್ಟಕ್ಕೆ ತೆರಳುವ ಮೊದಲು ಸ್ಥಳಿಯರಲ್ಲಿ ಸೂಕ್ತ ಮಾಹಿತಿ ಪಡೆದು ಹೋಗುವುದು ಉತ್ತಮ. ಬೈಂದೂರು ಭಾಗದಲ್ಲಿ ಹತ್ತಾರು ಸಣ್ಣಪುಟ್ಟ ತೊರೆಗಳು, ಜಲಪಾತಗಳು, ಬೆಟ್ಟಗುಡ್ಡಗಳು ಕಾಣಸಿಗುತ್ತವೆ.

Read More

ಬೈಂದೂರು ರಾಷ್ಟ್ರೀಯ ಹೆದ್ದಾರಿಯಿಂದ 4 ಕಿ.ಮೀ ದೂರದಲ್ಲಿರುವ ಸೋಮೇಶ್ವರ ಕಡಲತೀರ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಿ ಗುರುತಿಸಿಕೊಂಡಿದ್ದು ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. 2 ಕಿ.ಮೀ ಉದ್ದದ ಸೋಮೇಶ್ವರ ಕಡಲತೀರದ ನೋಟ ಮನಮೋಹಕವಾದುದು. ತೆರೆಗಳು ಬಂಡೆಗಪ್ಪಳಿಸುವ ದೃಶ್ಯ, ಸಮುದ್ರ ಹಾಗೂ ನದಿಯ ಸಂಗಮ ಸ್ಥಾನದ (ಅಳಿವೆ) ಇವೆಲ್ಲದರ ಸೌಂದರ್ಯವನ್ನು ವರ್ಣಿಸಲಸಾಧ್ಯ. ಶ್ರೀ ಸೋಮೇಶ್ವರ ದೇವಾಲಯದಿಂದಾಗಿ ಈ ತೀರಕ್ಕೆ ಸೋಮೇಶ್ವರ ಕಡಲತೀರ ಎಂಬ ಹೆಸರು ಬಂದಿದ್ದು ಈ ತೀರದ ಮೂಲಕವೇ ಬ್ರಿಟಿಷರು ವ್ಯಾಪಾರ ವಹಿವಾಟು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳು ತಿಳಿಸುತ್ತದೆ. ದೇವಳದ ಪಕ್ಕದಲ್ಲೇ ಎಂದಿಗೂ ಬತ್ತದ ನಾಗತೀರ್ಥವಿದ್ದು ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿ ಸಿಹಿನೀರು ಶೇಖರಣೆಯಾಗುತ್ತದೆ. ಪಕ್ಕದಲ್ಲೇ ಉಪ್ಪು ನೀರಿನ ಸಮುದ್ರವಿದ್ದರೂ ಇಲ್ಲಿನ ನಾಗತೀರ್ಥ ಮಾತ್ರ ಸಿಹಿಯಾಗಿರುವುದು ಇಲ್ಲಿನ ನೈಸರ್ಗಿಕ ವೈಶಿಷ್ಟ್ಯವೇ ಸರಿ. ಒಂದೆಡೆ ದೇವಸ್ಥಾನ, ಮತ್ತೊಂದೆಡೆ ಪ್ರವಾಸಿತಾಣ ಇರುವ ಈ ಅಪರೂಪದ ಕ್ಷೇತ್ರವನ್ನು ಸಂದರ್ಶಿಸಲು ದಿನಪ್ರತಿ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಈ ಸ್ಥಳದ ಬಗೆಗೆ…

Read More

ಕುಂದಾಪುರ: ಪ್ರತಿಯೋರ್ವ ವ್ಯಕ್ತಿಗೂ ಕೆಲವು ಸಾಮರ್ಥ್ಯಗಳು ಹಾಗೂ ಕೆಲವು ನ್ಯೂನತೆಗಳಿರುತ್ತವೆ. ನಾವು ಅವುಗಳನ್ನು ಅರಿತು ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ನಾವು ಮಾಡುತ್ತಿರುವ ಕೆಲಸದಲ್ಲಿ ಜಯವನ್ನು ಸಾಧಿಸಲು ಸಾಧ್ಯ ಎಂದು ಭಂಡಾರ್‌ಕಾರ್ಸ್ ಕಾಲೇಜಿನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಮ್.ಗೊಂಡ ಹೇಳಿದರು. ಅವರು ಇಂದು (ಸೆ. 09) ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ನಡೆಯುತ್ತಿರುವ ಜೇಸಿ ಸಪ್ತಾಹದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರದ ಸಹಭಾಗಿತ್ವದಲ್ಲಿ ಭಂಡಾರ್‌ಕಾರ್ಸ್ಸ ಕಾಲೇಜಿನಲ್ಲಿ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವಧ್ಯಕ್ಷರುಗಳಾದ ಕೆ. ಕಾರ್ತೀಕೇಯ ಮಧ್ಯಸ್ಥ, ರಾಘವೇಂದ್ರಚರಣ ನಾವುಡ, ತರಬೇತುದಾರರಾದ ಅವಿನಾಶ ಕಾಮತ್ ಉಪಸ್ಥಿತರಿದ್ದರು. ಚರಣ ಸುವರ್ಣ ಹಾಗೂ ಯುವ ಜೇಸಿ ಅಧ್ಯಕ್ಷ ಸನತ್ ಶೇಟ್ ಕಾರ್ಯಕ್ರಮ ನಿರೂಪಿಸಿ, ಗೌತಮ್ ನಾವಡ ವಂದಿಸಿದರು.

Read More

ಕುಂದಾಪುರ: ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ಕಾರಿನಲ್ಲಿ ಬಂದ ಯುವಕ ಅವಾಚ್ಯವಾಗಿ ಬೈದು ನಿಂದಿಸಿ ಕೊಲೆ ಬೆದರಿಕೆ ಹಾಕಿ ಹೊಡೆದಾಟ ನಡೆದ ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾದರೆ ಆರೋಪಿ ಯುವಕನ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಶುಕ್ರವಾರ ಸಂಜೆ ಎಂ.ಕೋಡಿಯಲ್ಲಿ ನಡೆದಿದೆ. ಎಂ. ಕೋಡಿ ನಿವಾಸಿ ಮಹಮ್ಮದ್ ಷರೀಫ್(50) ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ. ಮಹಮ್ಮದ್ ಷರೀಪ್ ಎಂ.ಕೋಡಿ ನಿವಾಸಿ ಜಬ್ಬಾರ್ ಎಂಬುವರ ಮನೆ ರಿಪೇರಿಗೆಂದು ತಂದು ರಸ್ತೆ ಬದಿಗೆ ಹಾಕಲಾಗಿದ್ದ ಹೋಲೋ ಬ್ಲಾಕ್‌ಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ರಂಜಿತ್ ಎಂಬಾತ ಕಾರಿನಲ್ಲಿ ಬಂದು ಅವಾಚ್ಯವಾಗಿ ಬೈದಾಗ ಆಕ್ಷೇಪಿಸಿದ್ದಕ್ಕೆ ಕಾರಿನಿಂದಿಳಿದು ಬಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಹಲ್ಲೆಗೊಳಗಾದ ಮಹಮ್ಮದ್ ಷರೀಪ್ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಹಲ್ಲೆ ಪರಿಣಾಮ ತಲೆಗೆ ಗಾಯಗಳಾಗಿದ್ದ ಷರೀಪ್ ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಳಸಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೋಮು ಸೂಕ್ಷ್ಮ…

Read More

ಸುಸಜ್ಜಿತ, ಐಷಾರಾಮಿ ಹೋಟೇಲ್ ಯುವ ಮೆರಿಡಿಯನ್ ಬೇ ರಿಸಾರ್ಟ್ ಇದು ದೇಶದ ಕೆಲವೇ ಕೆಲವು ಸುಸಜ್ಜಿತ, ಐಷಾರಾಮಿ ಹೋಟೆಲ್‌ಗಳ ಪೈಕಿ ಒಂದಾಗಿದೆ. ಸುಸಜ್ಜಿತ ಮತ್ತು ಆಧುನಿಕ ವಿಸ್ತಾರವಾದ ಹಸಿರು ರಾಶಿಗಳ ನಡುವೆ ಉತ್ತಮ ಸೌಲಭ್ಯಗಳನ್ನು ಹಾಗೂ ಸರ್ವಶ್ರೇಷ್ಠ ಸೇವೆಗಳನ್ನು, ಅತ್ಯಂತ ವಿಶೇಷ ಮತ್ತು ವೈಯಕ್ತಿಕಗೊಳಿಸಿದ ಅನುಭವವನ್ನು ನೀಡುವ ಆದರ್ಶ ಮನೆಯಾಗಲಿದೆ. ವಿಶೇಷವೆಂದರೆ ಯುವ ಮೆರಿಡಿಯನ್ ಬೇ ರೆಸಾರ್ಟ್‌ನಲ್ಲಿ ಅತಿಥಿಗಳಿಗಾಗಿ ತಮ್ಮ ಸೇವೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ಸುಪೀರಿಯರ್ ರೂಂ, ಕ್ಲಬ್ ರೂಂ, ಡಿಲಕ್ಸ್ ರೂಂ ಹಾಗೂ ಸೂಟ್ ರೂಂ. ಎಂದು ನಾಲ್ಕು ವಿಧದ ವಿಶ್ರಾಂತಿ ಕೊಠಡಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸುಪೀರಿಯರ್ ರೂಂ: ವಿಶೇಷ ಅತಿಥಿಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳಿದ್ದು, ಪ್ರತೀ ಕೋಣೆಯೂ ೨೭೫ ಚದರ ಅಡಿಗಳನ್ನು ಹೊಂದಿದೆ. ದೂಮಪಾನ ನಿಷೇಧಿತ ಹವಾನಿಯಂತ್ರಿತ ಕೊಠಡಿಗಳಾಗಿದ್ದು, ವಾರ್ತಾ ಪತ್ರಿಕೆಗಳ ಸೌಲಭ್ಯ, ಫಿಟ್‌ನೆಸ್ ಸೆಂಟರ್, ಈಜು ಕೊಳ ಸೌಕರ್ಯ, ಉನ್ನತ ಹಾಸಿಗೆಗಳು, ವಿಶೇಷ ಸ್ನಾನಗೃಹ, ಸೌಂದರ್ಯ ಸಾಧನಗಳು, ಸುರಕ್ಷಿತ ಲಾಕರ್ ವ್ಯವಸ್ಥೆ, ಅಂತರ್ಜಾಲ ಸೌಕರ್ಯ, ಓದು…

Read More