ಬೈಂದೂರು: ವರ್ಷಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸುರಭಿ ಸಂಸ್ಥೆ ಬೈಂದೂರಿನ ಜನರನ್ನು ಸಾಂಸ್ಕೃತಿಕ ವೈಭವದಲ್ಲಿ ಮಿಂದೇಳುವಂತೆ ಮಾಡಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಇಲ್ಲಿನ ಶಾರದಾ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿರುವ ನಾಲ್ಕು ದಿನಗಳ ಸುರಭಿ ಕಲಾಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಭಾಗದ ವಿದ್ಯಾರ್ಥಿಗಳನ್ನೂ ಸಹ ಸಾಂಸ್ಕೃತಿಕವಾಗಿ ಅಣಿಗೊಳಿಸುತ್ತಿರುವ ಹಿರಿಮೆ ಈ ಸಂಸ್ಥೆಯದ್ದು ಎಂದು ಅವರು ನುಡಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕುಂದಾಪುರ ತಾ. ಪಂ. ಸದಸ್ಯ ರಾಜು ಪೂಜಾರಿ ಮಾತನಾಡಿ ರಥೋತ್ಸವದಿಂದ ಮಾತ್ರ ಬೈಂದೂರಿನ ಜಾತ್ರೆ ಪೂರ್ಣಗೊಂಡಂತಾಗುವುದಿಲ್ಲ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ಜಾತ್ರೆ ವಿಶಿಷ್ಟವಾಗಿ ಮೂಡಿಬರುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರು ಪಾಲ್ಗೊಂಡು ಊರಿನ ಅಭಿವೃದ್ಧಿಯ ಬಗೆಗೆ ಚಿಂತಿಸುವಂತಾಗಬೇಕಿದೆ ಎಂದರು. ಬೈಂದೂರು ಶ್ರಿ ಸೇನೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಚನ್ನಕೇಶವ ಉಪಧ್ಯಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೌಖ್ಯ ಶಿಕ್ಷಣ ಸಂಸ್ಥೆಯ ರಿಯಾಜ್ ಅಹಮ್ಮದ್ ಅತಿಥಿಯಾಗಿ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ 5ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಶುಕ್ರವಾರ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಜರುಗಿತು. ಬಿಲ್ಲವ ಸಮಾಜದ ನಾಗರಾಜ- ಶ್ರೀಲತಾ, ಮಯೂರ- ರೇಖಾ, ಗಣೇಶ- ಅಕ್ಷತಾ, ದಿನೇಶ್- ಆಶ್ವಿನಿ, ಗಿರೀಶ- ಲಕ್ಷ್ಮೀ ಜೋಡಿ ಹಸೆಮಣೆಗೇರಿದರು. ವರ-ವಧುವಿಗೆ ಬೇಕಾದ ದೋತಿ, ಶಾಲು, ಪೇಟಾ, ಹೂವಿನಮಾಲೆ, ಧಾರೆಸೀರೆ, ರವಿಕೆ ಕಣ, ಬಾಸಿಂಗ, ಮಂಗಳಸೂತ್ರ ಉಚಿತವಾಗಿ ನೀಡಲಾಯಿತು. ವಧು ವರರ ಕಡೆಯವರಿಗೆ ಸುಗ್ರಾಸ ಭೋಜನ ವ್ಯವಸ್ಥೆ ನಡೆಸಲಾಯಿತು. ಐವರು ಜೋಡಿಗಳ ಪೈಕಿ ಗಿರೀಶ ಮತ್ತು ಲಕ್ಷ್ಮೀ ಜೋಡಿ ಗಮನ ಸೆಳೆಯಿತು. ವಿಕಲಾಚೇತನೆ ಲಕ್ಷ್ಮೀಯವರ ಕೈಹಿಡಿಯುವ ಮೂಲಕ ಗಿರೀಶ್ ಗಮನ ಸೆಳೆದರು. ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಟಿ.ಪೂಜಾರಿ, ನಾರಾಯಣಗುರು ಯುವಕ ಮಂಡಲ ಅಧ್ಯಕ್ಷ ಡುಂಡಿರಾಜ್ ಹಟ್ಟಿಕುದ್ರು, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಲಲಿತಾ ಸುವರ್ಣ ಉಪಸ್ಥಿತರಿದ್ದರು. ಮುಂಬೈ ಉದ್ಯಮಿ ಭೋಜರಾಜ, ಪುರುಷೋತ್ತಮ ಮುಂಬೈ, ಶಾರದಾ ಕರ್ಕೇರಾ, ಬಾಬುಶಿವ ಪೂಜಾರಿ, ಕುಂದಾಪುರ…
ಬೈಂದೂರು: ಹಳೆ ದ್ವೇಷದ ಹಿನ್ನಲೆಯಲ್ಲಿ ಅಂಗಡಿಯೊಂದರ ಬಳಿ ನಿಂತಿದ್ದ ಯುವಕನೋರ್ವನ ಮೇಲೆ ಏಕಾಏಕಿ ದಾಳಿ ನಡೆಸಿದ ನಾಲ್ವರ ತಂಡ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಗ್ಗರ್ಸೆ ಗ್ರಾಮದಲ್ಲಿ ವರದಿಯಾಗಿದೆ. ತಗ್ಗರ್ಸೆಯ ರವಿಂದ್ರ ಗಾಣಿಗ(31) ಹಾಗೂ ಅವರ ಸಹೋದರ ಕೃಷ್ಣ ಗಾಣಿಗ ಅಂಗಡಿಯ ಬಳಿ ನಿಂತಿದ್ದಾಗ ಬೈಕಿನಲ್ಲಿ ಬಂದ ತಗ್ಗರ್ಸೆಯವರೇ ಆದ ಶಶಿಧರ ಹುದಾರ್, ರಾಜು ಹುದಾರ್ ಎಂಬುವವರು ರವೀಂದ್ರನನ್ನು ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೆನ್ನೆಗೆ ಬಾರಿಸಿದ್ದಲ್ಲದೇ ರಾಡ್ ನಿಂದ ಕಾಲುಗೆ ಹೊಡೆದಿದ್ದಾರೆ. ಆ ಸಮಯದಲ್ಲಿ ತಪ್ಪಿಸಲು ಹೋದ ಕೃಷ್ಣ ಎಂಬುವವರಿಗೂ ಅಲ್ಲಿಗೆ ಬಂದ ನೀಲಕಂಠ ಹುದಾರ್ ಹಾಗೂ ಜಯರಾಜ ಹುದಾರ್ ಎಂಬುವವರು ಕೆನ್ನೆ ಹಾಗೂ ಮೈಕೈಗೆ ಗುದ್ದಿ, ಇಬ್ಬರಿಗೂ ಕೊಲೆ ಬೆದರಿಕೆ ಹಾಕಿದ್ದಾರೆ. ಹಳೆ ವೈಶಷ್ಯವೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಕೆ ನಡೆಸುತ್ತಿದ್ದಾರೆ.
ಕುಂದಾಪುರ: ತಾಲೂಕಿನ ಕೆಂಚನೂರು ಗ್ರಾಮದ ಇಬ್ಬರು ಅಪ್ರಾಪ್ತ ಹೆಣ್ಣ ಮಕ್ಕಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ. ಅದೇ ಗ್ರಾಮದ ತಿಮ್ಮ(38) ಎಂಬಾತ ಈ ದುಷ್ಕೃತ್ಯ ಎಸಗಿದ್ದು, ದೂರಿನ ಆಧಾರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ಕೆಂಚನೂರು ಗ್ರಾಮದ ಕಂಬಳಗದ್ದೆ ಎಂಬಲ್ಲಿಯ ಅಕ್ಕಪಕ್ಕದ ಮನೆಯ ನಾಲ್ಕು ಹಾಗೂ ಐದನೇ ತರಗತಿಗೆ ಸೇರಿರುವ ಮಕ್ಕಳಿಬ್ಬರು ಮನೆಯಲ್ಲಿ ಆಟವಾಡುತ್ತಿದ್ದಾಗ, ಕದ್ರಿಗುಡ್ಡೆಯ ತಿಮ್ಮ ಎಂಬಾತ ಅಲ್ಲಿಗೆ ಬಂದು ಮಕ್ಕಳಿಗೆ ಸಿನೆಮಾ ತೋರಿಸುವುದಾಗಿ ಆಮಿಷವೊಡ್ಡಿ ಮನೆಗೆ ಕರೆದೊದಿದ್ದಾನೆ. ಅಲ್ಲಿ ಸಿನೆಮಾ ತೋರಿಸುವ ಬದಲು ತನ್ನ ಮೊಬೈಲ್ ನಲ್ಲಿದ್ದ ಅಶ್ಲೀಲ ಚಿತ್ರಗಳನ್ನು ತೋರಿಸಿ, ಮಕ್ಕಳಿಬ್ಬರಿಗೂ ಹಾಗೆಯೇ ಮಾಡುವಂತೆ ಬಲವಂತ ಮಾಡಿದ್ದಾನೆ. ಈತನ ದುಷ್ಕೃತ್ಯದಿಂದ ಮಕ್ಕಳು ದೈಹಿಕವಾಗಿ ಬಳಲಿದ್ದರು. ಸಂಜೆಯ ವೇಳೆಗೆ ಮನೆಗೆ ಬಂದ ತಾಯಿಯ ಮಕ್ಕಳ ಸ್ಥಿತಿಯನ್ನು ನೋಡಿ ಪ್ರಶ್ನಿಸಿದಾಗ, ಮಕ್ಕಳು ನಡೆದ ವಿಚಾರವನ್ನು ವಿವರಿಸಿದ್ದಾರೆ. ತಕ್ಷಣ ಸ್ಥಳೀಯರ ಮೂಲಕ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಆರೋಪಿ ತಿಮ್ಮನನ್ನು ಬಂಧಿಸಿ ಆತನ ಬಳಿ ಇದ್ದ ಮೊಬೈಲನ್ನು ವಶಪಡಿಸಿಕೊಂಡಿದ್ದಾರೆ.…
ಕುಂದಾಪುರ: ಸಮುದ್ರದ ಆಳದಲ್ಲಿ ಈಜಲು ತರಬೇತಿಗೆ ಬಂದ ಹೈದರಾಬಾದ್ ಮೂಲದ ಎಂಜಿನಿಯರ್ ಯುವತಿಗೆ ತರಬೇತಿ ನೀಡುತ್ತಿರುವಾಗಲೇ ಕಿರುಕುಳ ನೀಡಿದ ಪ್ರಕರಣ ಸಾಮಾಜಿಕ ತಾಣದ ಮೂಲಕ ಬೆಳಕಿಗೆ ಬಂದಿದ್ದು, ಪ್ರಕರಣ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿದ ಘಟನೆ ಇತ್ತಿಚಿಗೆ ವರದಿಯಾಗಿದೆ. ಏನಿದು ಪ್ರಕರಣ: ಮುರ್ಡೇಶ್ವರದಲ್ಲಿ ಕಾರ್ಯಾಚರಿಸುತ್ತಿರುವ ಡ್ರಿಮ್ಝ್ ಸ್ಕೂಬಾ ಡ್ರೈವಿಂಗ್ ಸಂಸ್ಥೆಯಲ್ಲಿ ಮೂಲಕ ಆಳ ಸಮುದ್ರದ ಈಜು ತರಬೇತಿಗಾಗಿ ಕುಂದಾಪುರ ತಾಲೂಕಿನ ಶಿರೂರಿಗೆ ತನ್ನ ಸಹೋದ್ಯೋಗಿಗಳೊಂದಿಗೆ 2015ರ ಜನವರಿ 26ರಂದು ಆಗಮಿಸಿದ್ದ ಹೈದರಬಾದ್ ಮೂಲದ, ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಐಟಿ ಎಂಜಿನೀಯರ್ ಆಗಿರುವ ಯುವತಿಗೆ ತರಬೇತಿ ನೀಡಲು, ಡ್ರಿಮ್ಝ್ ಸ್ಕೂಬಾ ಡ್ರೈವಿಂಗ್ ಸಂಸ್ಥೆಯ ನಿರ್ದೇಶಕನಾಗಿರುವ ಉತ್ತರಖಾಂಡ ಮೂಲಕ ಧೀರೇಂದ್ರ ರಾವತ್ ಎಂಬುವವನು ಬಂದಿದ್ದ. ಸಮುದ್ರದ ಮಟ್ಟದಿಂದ 12ಮೀಟರ್ ಕೆಳಗೆ ಡೈವಿಂಗ್ ತರಬೇತಿ ನೀಡುತ್ತಿದ್ದ ವೇಳೆ ಯುವತಿಗೆ ಕಿರುಕುಳ ನೀಡಿದ ಬಗ್ಗೆ ಸ್ವತಃ ಯುವತಿ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಆರೋಪಿಯ…
ಉಡುಪಿ: ವಿಧಿಯಾಟವೆಂಬುದು ಎಂಥಹ ಕ್ರೂರವಾದುದು ಎಂಬುದಕ್ಕೆ ಈ ಯುವಕನೇ ಸಾಕ್ಷಿ. ಛಲದಿಂದ ಬದುಕು ಕಟ್ಟಿಕೊಳ್ಳಬೇಕೆಂಬುದು ಹೊರಟ ಯುವಕ ಈಗ ಹಾಸಿಗೆಯಿಂದಾಚೆ ಏಳಲಾರದೆ ಪರಿತಪಿಸುತ್ತಿರುವ ರೀತಿ ಮನಕಲಕುವಂತದ್ದು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ನಿವಾಸಿ ಕೃಷ್ಣಯ್ಯ ಶೆಟ್ಟಿ ಮತ್ತು ಪ್ರೇಮಾ ಎಂಬುವವರ ಎರಡನೇ ಮಗನಾದ ನಾಗರಾಜ ಶೆಟ್ಟಿ (26) ಕಳೆದ 10 ವರ್ಷಗಳಿಂದ ಹಾಸಿಗೆಯಿಂದ ಎಳಲಾರದೇ ತನ್ನೆಲ್ಲಾ ಬೇಕು-ಬೇಡಗಳಿಗೆ ಮತ್ತೊಬ್ಬರನ್ನು ಅವಲಂಬಿಸಬೇಕಾದ ಸ್ಥಿತಿಯಲ್ಲಿ ಮಲಗಿದ್ದಾರೆ. ನಾಗರಾಜ ಅವರ ಮನೆಯಲ್ಲಿ ತೀರಾ ಬಡತನವಾದ್ದರಿಂದ ವಿದ್ಯಾಭ್ಯಾಸವನ್ನು ಪಿಯುಸಿಗೆ ಮೊಟಕುಗೊಳಿಸಿದ ಖಾಸಗಿ ವಿದ್ಯುತ್ ಗುತ್ತಿಗೆದಾರರಲ್ಲಿ ಬಳಿ ವಿದ್ಯುತ್ ಕಂಬ ಹಾಕುವ ಹಾಗೂ ತಂತಿ ಎಳೆಯುವ ಕೆಲಸಕ್ಕೆ ಸೇರಿದರು. 2005ರಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಕಂಬದಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದರಿಂದ ಅವರ ಬೆನ್ನುಮೂಳೆ ಮುರಿತಕ್ಕೊಳಗಾಗಿತ್ತಲ್ಲದೇ ಮೆದುಳು ಬಳ್ಳಿಯು ಜಖಂಗೊಂಡಿತ್ತು. ಇದರಿಂದ ಸೊಂಟದ ಕೆಳಭಾಗ ನಿಶ್ಚಲವಾಗಿತ್ತು. ಸ್ವಂತ ದುಡಿಮೆಯಲ್ಲಿ ಓದು ಮುಂದುವರಿಸಬೇಕು, ಮುಂದೆ ಒಳ್ಳೆಯ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂದು ಹೊರಟ್ಟಿದ್ದ ಯುವಕ ಬದುಕು ಹಾಸಿಗೆಗೆ ಸೀಮಿತವಾಯಿತು. ಮಣಿಪಾಲದ ಕೆಎಂಸಿಯಲ್ಲಿ…
ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಕೆ. ಕಾರ್ತಿಕೇಯ ಮಧ್ಯಸ್ಥ ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಕಾರ್ಯದರ್ಶಿಯಾಗಿ ರಂಜಿತ್ ಕುಮಾರ್ ಶೆಟ್ಟಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೃಷ್ಣಾನಂದ ಚಾತ್ರ, ಡಾ.ಸುಧಾಕರ ನಂಬಿಯಾರ್, ಬುದ್ದರಾಜ ಶೆಟ್ಟಿ, ಸಂದೀಪ್ ಎ. ಪೂಜಾರಿ, ಖಜಾಂಚಿಯಾಗಿ ಪ್ರೊ ಕೆ. ಶಾಂತಾರಾಮ್, ಜೊತೆ ಕಾರ್ಯದರ್ಶಿಯಾಗಿ ಅರ್ಚನ, ಮೈತ್ರಿ, ಜಯಮಾಲ, ನಿರ್ದೇಶಕರಾಗಿ ಸಚಿನ್ ನಕ್ಕತ್ತಾಯ, ಚಂದ್ರಕಾಂತ್ (ಚನ್ನ), ರಾಜೇಂದ್ರ, ಪ್ರವೀಣ್ ಕುಮಾರ್ ಟಿ., ಸುರೇಶ ಹಂಗಳೂರು, ದೀಪಕ್ ಕುಮಾರ್ ನಾವುಂದ, ರಾಘವೇಂದ್ರ ಭಟ್, ಸತೀಶ್ ದೇವಾಡಿಗ, ಸಲಹಾ ಸಮಿತಿ ಸದಸ್ಯರಾಗಿ ರಾಜೀವ ಕೋಟ್ಯಾನ್, ಶಶಿಧರ ಶೆಟ್ಟಿ ಮಡಾಮಕ್ಕಿ, ಪ್ರೊ ಅರುಣಾಚಲ ಮೈಯ್ಯ, ನವೀನ್ ಕುಮಾರ್ ಶೆಟ್ಟಿ ಆಯ್ಕೆಗೊಂಡರು. ಇತ್ತೀಚೆಗೆ ನಡೆದ ಸಮಾನ್ಯ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕುಂದಾಪುರ: ತಾಲೂಕಿನ ಕಂಡ್ಲೂರಿನಲ್ಲಿ ತನ್ನ ಮನೆಯ ಬಾವಿ ಕಟ್ಟೆಯ ಆವರಣ ಮೇಲೆ ಮಗುವನ್ನು ಕುಳ್ಳಿರಿಸಿಕೊಂಡು ಉಟ ಮಾಡಿಸುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಮುದ್ದು ಕಂದಮ್ಮ ಶೆಹರಾಝ್(11 ತಿಂಗಳು) ಮೃತ ದುರ್ದೈವಿ ಘಟನೆಯ ವಿವರ: ಕಡ್ಲೂರಿನ ರಾಮಮಂದಿರ ರಸ್ತೆಯ ದಾರು ಸ್ಸೂರೂರ್ ಸರ್ಫರಾಜ್ ಅವರ ಪತ್ನಿ ಹೀನಾ ಅವರು ಎಂದಿನಂತೆ ತನ್ನ ಮನೆಯ ಬಳಿ ಇರುವ ಬಾವಿ ಕಟ್ಟೆಯ ಮೇಲೆ ಮಗುವನ್ನು ಹಿಡಿದು ಕೂರಿಸಿಕೊಂಡು ಊಟ ಮಾಡಿಸುತ್ತಿದ್ದರು. ಊಟ ಮಾಡುತ್ತಿದ್ದ ಮಗು ಕೊಸರಿಕೊಂಡಗ ಒಮ್ಮೆಲೆ ಆಯತಪ್ಪಿ ಬಾವಿಗೆ ಬಿದ್ದಿತ್ತು. ಮಗುವನ್ನು ರಕ್ಷಿಸಲು ತಾಯಿಯೂ ಬೊಬ್ಬೆ ಹಾಕುತ್ತಾ ತಕ್ಷಣ ಬಾವಿಗೆ ಹಾರಿದ್ದಳು. ತಾಯಿಯ ಬೊಬ್ಬೆ ಕೇಳಿದ ನೆರೆಹೊರೆಯವರು ಅಲ್ಲಿಗೆ ಧಾವಿಸಿ ಬಂದು ತಾಯಿ ಮಗುವನ್ನು ರಕ್ಷಿಸಲು ಬಾವಿಗಿಳಿದರಾದರೂ ಅದಾಗಲೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು. ತಾಯಿ ಜೀವನ್ಮರಣದ ಮಧ್ಯೆ ಹೋರಾಟುತ್ತಿದ್ದಳು. ತಕ್ಷಣ ತಾಯಿ ಮಗುವನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಿದರಾದರೂ ವೈದ್ಯರು ಮಗು ಮೃತ ಪಟ್ಟಿರುವುದನ್ನು ದೃಢಪಡಿಸಿದರು. ದುಬೈನಲ್ಲಿ…
ಬೈಂದೂರು: ಇಲ್ಲಿನ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಶ್ರೀ ಮನ್ಮಹಾ ರಥೋತ್ಸವಕ್ಕೆ ಎಪ್ರಿಲ್ 24ರಂದು ಜರುಗಲಿದ್ದು, ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಇಡಿ ನಗರವೇ ಸಜ್ಜಾಗಿದೆ. ಚಾರಿತ್ರಿಕ ಹಿನ್ನೆಲೆಯುಳ್ಳ ಬೈಂದೂರು ರಥೋತ್ಸವದಲ್ಲಿ ಊರ ಪರವೂರ ಸಾವಿರಾರು ಭಕ್ತಸಮೂಹ ಪಾಲ್ಗೊಂಡು ಪುನೀತರಾಗುತ್ತಾರೆ. ಕಲಾವೈಭವಗಳಿಂದ ಕಂಗೊಳಿಸುವ ದೇವಾಲಯಕ್ಕೆ ವಾರ್ಷಿಕ ರಥೋತ್ಸವ ಇನ್ನಷ್ಟು ಮೆರಗನ್ನು ನೀಡುತ್ತದೆ. ರಥಕ್ಕೆ ಗರ್ನಪಟ್ಟೆ ಕಟ್ಟಿದ ಹನ್ನೊಂದು ದಿನಗಳಿಗೆ ರಥೋತ್ಸವ ನಡೆಯುವುದೆಂಬ ಸೂಚನೆ ದೊರೆಯುತ್ತದೆ. ಒಟ್ಟು ಏಳು ದಿನಗಳ ಕಾಲ ನಡೆಯುವ ಉತ್ಸವವು ಧಾರ್ಮಿಕ ಕಾರ್ಯಗಳಿಂದ ಆರಂಭಗೊಳ್ಳುತ್ತದೆ. ಈ ಮಧ್ಯೆ ನಾಕಟ್ಟೆ ಉತ್ಸವ, ಪಡುವರಿ ಕಟ್ಟೆ ಉತ್ಸವ, ಬಂಕೇಶ್ವರ ಕಟ್ಟೆ ಉತ್ಸವ ನಡೆದ ಬಳಿಕ ರಥೋತ್ಸವ, ಅವಭೃಥೋತ್ಸವ ಕೊನೆಯಲ್ಲಿ ನಗರೋತ್ಸವ ನಡೆಯುತ್ತದೆ. ರಥೋತ್ಸವದ ಪೂರ್ವದಲ್ಲಿ ಮುಸ್ಲಿಂ ಭಾಂದವರನ್ನು ಆಹ್ವಾನಿಸುವ, ರಥೋತ್ಸವದ ಆರಂಭದಲ್ಲಿ ಬೈಂದೂರಿನ ಪೊಲೀಸ್ ಠಾಣಾಧಿಕಾರಿಯನ್ನು ಕರೆತಂದು ಚಾಲನೆ ದೊರಕಿಸುವ ಸಂಪ್ರದಾಯ ಇಂದಿಗೂ ರೂಢಿಯಲ್ಲಿದೆ. ನಗರೋತ್ಸವದಲ್ಲಿ ಜಾತಿ ಮತ ಭೇದವಿಲ್ಲದೇ ಎಲ್ಲಾ ಧರ್ಮಿಯರೂ ಪಾಲ್ಗೊಂಡು ಸಂಭ್ರಮಿಸುತ್ತಾರೆ. ರಥೋತ್ಸವದ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು…
ಕುಂದಾಪುರ: ಕಳೆದ ವಾರ ಗೋಪಾಡಿಯಲ್ಲಿ ಗರ್ಭಿಣಿಯನ್ನು ಮಹಿಳೆಯನ್ನು ಅತ್ಯಾಚಾರಗೈದು ಕೊಲೆ ನಡೆಸಿರುವ ಪ್ರಕರಣವನ್ನು ಖಂಡಿಸಿ ಹಾಗೂ ಹತ್ಯೆ ಗೀಡಾದ ಮಹಿಳೆಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕುಂದಾಪುರ ತಾಲೂಕಿನ ಮಹಿಳಾ ಮಿತ್ರರು ಹಾಗೂ ಮಕ್ಕಳ ಮಿತ್ರರು, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸಂಘಟನೆ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಕುಂದಾಪುರದ ಶಾಸ್ತ್ರೀ ವೃತ್ತದಿಂದ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ಕುಂದಾಪುರ ಮಿನಿ ವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರು ಉಪವಿಭಾಗಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಬಳಿಕ ಪೊಲೀಸ್ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ, ಮಕ್ಕಳ ಮಿತ್ರ ರವೀಂದ್ರ ದೊಡ್ಮನೆ ಕರಾವಳಿಯಲ್ಲಿ ಹೆಚ್ಚುತ್ತಿರುವ ಮಹಿಳೆಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕರಾವಳಿಯ ಹಲವಾರು ಕಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮಿನಾ, ದಿ ಕನ್ಸ್ರ್ರ್ಡ್ ಫಾರ್…
