ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಕೆ. ಕಾರ್ತಿಕೇಯ ಮಧ್ಯಸ್ಥ ಆಯ್ಕೆಯಾಗಿದ್ದು, ಗೌರವಾಧ್ಯಕ್ಷರಾಗಿ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಕಾರ್ಯದರ್ಶಿಯಾಗಿ ರಂಜಿತ್ ಕುಮಾರ್ ಶೆಟ್ಟಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಕೃಷ್ಣಾನಂದ ಚಾತ್ರ, ಡಾ.ಸುಧಾಕರ ನಂಬಿಯಾರ್, ಬುದ್ದರಾಜ ಶೆಟ್ಟಿ, ಸಂದೀಪ್ ಎ. ಪೂಜಾರಿ, ಖಜಾಂಚಿಯಾಗಿ ಪ್ರೊ ಕೆ. ಶಾಂತಾರಾಮ್, ಜೊತೆ ಕಾರ್ಯದರ್ಶಿಯಾಗಿ ಅರ್ಚನ, ಮೈತ್ರಿ, ಜಯಮಾಲ, ನಿರ್ದೇಶಕರಾಗಿ ಸಚಿನ್ ನಕ್ಕತ್ತಾಯ, ಚಂದ್ರಕಾಂತ್ (ಚನ್ನ), ರಾಜೇಂದ್ರ, ಪ್ರವೀಣ್ ಕುಮಾರ್ ಟಿ., ಸುರೇಶ ಹಂಗಳೂರು, ದೀಪಕ್ ಕುಮಾರ್ ನಾವುಂದ, ರಾಘವೇಂದ್ರ ಭಟ್, ಸತೀಶ್ ದೇವಾಡಿಗ, ಸಲಹಾ ಸಮಿತಿ ಸದಸ್ಯರಾಗಿ ರಾಜೀವ ಕೋಟ್ಯಾನ್, ಶಶಿಧರ ಶೆಟ್ಟಿ ಮಡಾಮಕ್ಕಿ, ಪ್ರೊ ಅರುಣಾಚಲ ಮೈಯ್ಯ, ನವೀನ್ ಕುಮಾರ್ ಶೆಟ್ಟಿ ಆಯ್ಕೆಗೊಂಡರು. ಇತ್ತೀಚೆಗೆ ನಡೆದ ಸಮಾನ್ಯ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸುನಿಲ್ ಹೆಚ್. ಜಿ. ಬೈಂದೂರು
ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.





