ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಆರ್ಯಭಟ ಕಲ್ಚರಲ್ ಆರ್ಗನೈಜೇಷನ್ ನೀಡಲಾಗುತ್ತಿರುವ 2015ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಡಾ. ಸತೀಶ್ ಪೂಜಾರಿ ಅವರಿಗೆ ಲಭಿಸಿದೆ. ವೈದ್ಯಕೀಯ ಹಾಗೂ ಸಂಘಟನಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಸ್ವತಃ ಗಾಯಕರಾದ ಸತೀಶ್ ಪೂಜಾರಿ ಅವರು ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದಲ್ಲದೇ ಪ್ರಖ್ಯಾತ ಬಹು ಭಾಷಾ ಗಾಯಕರಾದ ಎಸ್. ಜಾನಕಿ, ವಾಣಿ ಜಯರಾಂ ಅವರ ಸಂಗೀತ ಕಾರ್ಯಕ್ರಮವನ್ನು ಕುಂದಾಪುರದಲ್ಲಿ ಯಶಸ್ವಿಯಾಗಿ ಸಂಘಟಿಸಿದ ಸೈ ಎನಿಸಿಕೊಂಡವರು. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾಗಿ, ಕೋಟದ ಪರಿವರ್ತನ ರಿಹ್ಯಾಬಿಲಿಟೇಶನ್ ಸೆಂಟರ್‌ನ ನಿರ್ದೇಶಕರಾಗಿ ವೈದ್ಯಕೀಯ ಕ್ಷೇತ್ರದಲ್ಲಿಯೂ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಇದರೊಂದಿಗೆ ಹ್ಯೂಮನ್ ರೈಟ್ ಫೆಡರೇಶನ್ ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, ಸಾಲಿಗ್ರಾಮದ ಗುರುನರಸಿಂಹ ವಿವಿಧೋದ್ಧೇಶ ಸಹಕಾರ ಸಂಘದ ನಿರ್ದೇಶಕರಾಗಿ, ಬ್ರಹ್ಮಾವರ ಬಾರ್ಕೂರಿನ ಲಯನ್ಸ್ ಕ್ಲಬ್‌ನ ಸಕ್ರೀಯ ಸದಸ್ಯರಾಗಿ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಎಂದು ಗುರುತಿಸಿಕೊಳ್ಳುವ ವಂಡ್ಸೆ ಶಾಲೆ ಈಗಾಗಲೇ ಶತಮಾನವನ್ನು ಸಾರ್ಥಕವಾಗಿ ಪೂರೈಸಿದೆ. 1914ರಲ್ಲಿ ಸ್ಥಾಪನೆಯಾದ ಈ ಶಾಲೆ ಈಗ 102ವರ್ಷ ದಾಟಿದೆ. ಒಂದು ಇಡೀ ಶತಮಾನವನ್ನು ಕಂಡಿರುವ ಈ ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ನೀಡಿದೆ. ವಂಡ್ಸೆಯ ಸುತ್ತಮುತ್ತ ಭಾಗದ ಜನ ಅಕ್ಷರ ಕಲಿತಿದ್ದಿದ್ದರೆ ಈ ಶಾಲೆಯ ಮೂಲಕವೇ. 1990ರ ದಶಕದ ತನಕ ಸುತ್ತ ಹಳ್ಳಿಗಳಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಯಾಗಲಿ ಇರಲಿಲ್ಲ. ಖಾಸಗಿ ಶಾಲೆಗಳಂತೂ ಇರಲೇ ಇಲ್ಲ. ಶ್ರೀಮಂತ ಇರಲಿ, ಬಡವ ಇರಲಿ, ಶಾಲೆ ಎಂದಾಕ್ಷಣ ಚಕ್ಕಂತ ನೆನಪಾಗುತ್ತಿದ್ದುದು ಈ ಶಾಲೆಯೇ. ಹಾಗಾಗಿ ವಂಡ್ಸೆ ಶಾಲೆ ಎಂದರೆ ಸುತ್ತ ಹತ್ತಾರು ಗ್ರಾಮಗಳ ವಿದ್ಯಾದೇಗುಲ. ಶತಮಾನಕ್ಕೂ ಪೂರ್ವದಲ್ಲಿ ವಂಡ್ಸೆಯಲ್ಲಿಯೂ ಕೂಡಾ ಐಗಳ ಮಠ ಇತ್ತಂತೆ. ಧನಿಕರ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು. ತದನಂತರ ಕಿರಿಯ ಪ್ರಾಥಮಿಕ ಶಾಲೆಯಾಗಿ ರೂಪುಗೊಂಡ ಶಾಲೆ ಒಂದಿಷ್ಟು ವರ್ಷ ವಿದ್ಯಾಭಿಮಾನಿಗಳ ಮನೆಯಲ್ಲಿಯೂ…
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಎಳವೆಯಲ್ಲಿಯೇ ಈ ಹುಡುಗಿಯ ಸಾಧನೆ ಅಸದಳ! ಚದುರಂಗದ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಬಾಲೆ ಕುಂದಾಪುರ ಹೆಸರನ್ನು ಕ್ರೀಡೆಯಮೂಲಕ ಎತ್ತರಕ್ಕೇರಿಸಿದ್ದಾಳೆ. ಅಮೂಲ್ಯ ಶೆಟ್ಟಿ. ಕುಂದಾಪುರ ಎಜ್ಯುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ವಿ.ಕೆ.ಆರ್.ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿದ್ದಾಳೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಚದುರಂಗ ಸ್ಪರ್ಧೆಯಲ್ಲಿ ಸತತ 5 ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದಲ್ಲದೇ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪ್ರತಿಭಾನ್ವಿತೆ. ಬುದ್ಧಿಶಕ್ತಿಗೆ ಪ್ರಚೋದನೆ ನೀಡಿ ಮಕ್ಕಳನ್ನು ಬೌದ್ಧಿಕವಾಗಿ ಎತ್ತರಕ್ಕೆ ಬೆಳೆಸುವ ಚದುರಂಗ ಆಟದಲ್ಲಿ ಸಾಧನೆ ಶಿಖರವೇರುವ ಅದೃಷ್ಟಶಾಲಿಗಳು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂತಹ ಪ್ರತಿಭಾನ್ವಿತರ ಸಾಲಿಗೆ ಸೇರುವ ಹೆಮ್ಮೆಯ ಕುವರಿ ಅಮೂಲ್ಯ. ಕುಂದಾಪ್ರ ಡಾಟ್ ಕಾಂ ವರದಿ. ಎಳವೆಯಲ್ಲೇ ಚದುರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಚತುರೆ ಎನಿಸಿರುವ ಅಮೂಲ್ಯಳ ತಂದೆ ವಡೇರ ಹೋಬಳಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಿ. ಸುಧಾಕರ…
ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್ ಮೂಲಕ ಸೌರಶಕ್ತಿಯ ಸಮರ್ಪಕ ಬಳಕೆ. ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಒಂದೆಡೆ ಪವರ್‌ಕಟ್. ಮತ್ತೊಂದೆಡೆ ಏರುತ್ತಿರುವ ಕರೆಂಟ್ ಬಿಲ್. ಇದಕ್ಕೊಂದು ಮುಕ್ತಿ ದೊರಕಿಸುವ ನಿಟ್ಟಿನಲ್ಲಿ ಕೈಗೊಂಡದ್ದು ಮಾತ್ರ ಮಾದರಿ ಯೋಜನೆ. ಅದು ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್. ಹೇರಳವಾಗಿ ದೊರೆಯುವ ಸೌರಶಕ್ತಿಯನ್ನು ಉಪಯೋಗಿಸಿಕೊಂಡು ಇಡಿ ಕ್ಯಾಂಪಸ್‌ಗೆ ಬೇಕಾದಷ್ಟು ವಿದ್ಯುತ್ತನ್ನು ಬಳಸಿಕೊಳ್ಳುವುದಲ್ಲದೇ ಮಿಕ್ಕಿದ್ದನ್ನು ಮೆಸ್ಕಾಂಗೆ ಮಾರಾಟ ಮಾಡುವ ಈ ವಿನೂತನ ಯೋಜನೆಯನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಅಳವಡಿಸಿಕೊಂಡದ್ದು, ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪಿಯುಸಿ ಶಿಕ್ಷಣ ಸಂಸ್ಥೆಗಳು. ಸೋಲಾರ್ ನೆಟ್ ಮೀಟರಿಂಗ್ ಸಿಸ್ಟಮ್: ಏನು, ಹೇಗೆ? ಗುರುಕುಲ ಸಂಸ್ಥೆಯ ಮೇಲ್ಛಾವಣಿಯಲ್ಲಿ ಸುಮಾರು 5 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ 225 ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಇದರ ಮೂಲಕ ದಿನವೊಂದಕ್ಕೆ ಸರಾಸರಿ 250 ಯೂನಿಟ್ ಸೌರವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆದರೆ ಇಲ್ಲಿನ ಉತ್ಪಾದನೆಯಾಗುವ ವಿದ್ಯುತ್ತನ್ನು ನೇರವಾಗಿ ಬಳಕೆ ಮಾಡಲಾಗದು. ಸೌರಶಕ್ತಿಯಿಂದ ಉತ್ಪಾದನೆಯಾದ ವಿದ್ಯುತ್‌ನ್ನು…
ಕುಂದಾಪ್ರ ಡಾಟ್ ಕಾಂ. ಬಿಡುಗಡೆಯ ಮುನ್ನವೇ ಬಹಳಷ್ಟು ಸದ್ದು ಮಾಡುತ್ತಿರುವ ರವಿ ಬಸ್ರೂರು ಅವರು ಕುಂದಾಪುರ ಕನ್ನಡ ಸಿನೆಮಾ ‘ಬಿಲಿಂಡರ್’ ಎಂಟ್ರಿ ಸಾಂಗಿಗೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಡಿದ್ದಾರೆ. ಚಿತ್ರದ ಇನ್ನೊಂದು ಹಾಡಿಗೆ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹಾಡಿದ್ದ, ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವೀಡಿಯೋ ನೋಡಿ | ಬಿಲಿಂಡರ್ ಚಿತ್ರಕ್ಕೆ ಪುನಿತ್ ರಾಜಕುಮಾರ್ ಹಾಡು! – http://kundapraa.com/?p=12604
ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಹಾಡಿದ್ದಾರೆ. ಕುಂದಾಪ್ರ ಕನ್ನಡ ಬಿಲಿಂಡರ್ ಚಿತ್ರ ಹೊಸ ನಿರೀಕ್ಷೆ ಹುಟ್ಟಿಸಿದೆ. ● ಸುನಿಲ್ ಹೆಚ್. ಜಿ. ಬೈಂದೂರು. ಕುಂದಾಪ್ರ ಡಾಟ್ ಕಾಂ: ಕುಂದಗನ್ನಡಕ್ಕೊಂದು ಹೊಸ ಖದರ್ ನೀಡುತ್ತಿದ್ದಾರೆ ನಮ್ ರವಿ ಬಸ್ರೂರ್! ಕುಂದಾಪ್ರ ಕನ್ನಡದಲ್ಲಿ ಹಾಡು, ಸಿನೆಮಾ ನಿರ್ಮಿಸಿ ಸೈ ಎನಿಸಿಕೊಂಡ ರವಿ ಬಸ್ರೂರು ತಮ್ಮ ಕುಂದಾಪ್ರ ಕನ್ನಡದ ಹೊಸ ಚಿತ್ರ ’ಬಿಲಿಂಡರ್’ನ ಹಾಡನ್ನು ಕನ್ನಡದ ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಹಾಗೂ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರಿಂದ ಕುಂದಗನ್ನಡದಲ್ಲಿಯೇ ಹಾಡಿಸಿದ್ದಾರೆ. ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯ ಸಂಗೀತವನ್ನು ತಂದು ಕೇಳುಗರ ಮನಮಿಡಿದಿದ್ದ ಬಸ್ರೂರು ಅವರ ಕುಂದಗನ್ನಡ ಪ್ರೀತಿ ಒಂದು ಸಿನೆಮಾಕ್ಕಷ್ಟೇ ಮುಗಿದಿಲ್ಲ. ಗರ್‌ಗರ್‌ಮಂಡ್ಲದಿಂದ ಆರಂಭಗೊಂಡು ಈಗಿನ ಬಿಲಿಂಡರ್ ಸಿನೆಮಾದಲ್ಲಿಯೂ ಮುಂದುವರಿದಿದೆ. ಕಣ್ಮರೆಯಾಗುತ್ತಿರುವ ಭಾಷೆಗಳ ಪಟ್ಟಿಯಲ್ಲಿ ತನ್ನೂರ ಭಾಷೆ ಸೇರಬಾರದೆಂಬುದೇ ರವಿ ಅವರ ಬಯಕೆ. ಹಾಗಾಗಿ ಅಚ್ಚಗನ್ನಡದ ಭಾಷೆಯಲ್ಲಿಯೇ ತಮ್ಮ ಸೃಜನಶೀಲತೆಯನ್ನು ಬೆರೆಸಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಬಂದ ಅವರು ಇಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕುಂದಗನ್ನಡದ ಮಾತುಗಾರಿಕೆಯ ಮೂಲಕ ಮನೆಮಾತನಾಗಿರುವ ಶಿಕ್ಷಕ ಮನೋಹರ ಹಂದಾಡಿ (ಮನು ಹಂದಾಡಿ) ಅವರು ಇತ್ತಿಚಿಗೆ ಅತ್ಯುತ್ತಮ ಶಿಕ್ಷಕ ಗೌರವಕ್ಕೆ ಪಾತ್ರರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಹುಬ್ಬಳ್ಳಿಯ ಸ್ವ-ರಕ್ಷಾ ಶಿಕ್ಷಣ ಸಂಸ್ಥೆಯು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಧಾರವಾಡದ ಕರ್ನಾಟಕ ಕಾಲೇಜು ಆವರಣದ ಡಾ. ಅಣ್ಣಾಜಿರಾವ್ ಸಿರೂರು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ದಯಾನಂದ ವಿದ್ಯಾಸಾಗರ ಭಾರತಿ ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಇಂಗ್ಲೀಷ್ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮನು ಹಂದಾಡಿಯವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ. ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಅವರು ಅತ್ಯುತ್ತಮ ಶಿಕ್ಷಕ ಗೌರವಕ್ಕೆ ಪಾತ್ರರಾದವರನ್ನು ಗೌರವಿಸಿದರು. ಧಾರವಾಡ ಶಿಕ್ಷಣ ಇಲಾಖೆಯ ಉಪನಿರ್ದೇಕರು ಸೇರಿದಂತೆ ಹುಬ್ಬಳ್ಳಿಯ ವಿವಿಧ ಅತಿಥಿ ಗಣ್ಯರು ವೇದಿಕೆಯಲ್ಲಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ ಇದನ್ನೂ ಓದಿ ► ಕುಂದಾಪ್ರ ಡಾಟ್ ಕಾಂ ಮೊಬೈಲ್ App ಬಿಡುಗಡೆಗೊಸಿದ ಮನು ಹಂದಾಡಿ – http://kundapraa.com/?p=8608 ► Download Kundapra.com’s Mobile…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕುಂದಾಪುರ ತಾಲೂಕಿನಲ್ಲಿ ಬಿಜೆಪಿ ಎಂಟು ಕ್ಷೇತ್ರಗಳಲ್ಲಿ ಜಯಗಳಿಸಿದ್ದರೇ, ಕಾಂಗ್ರೆಸ್ ಎರಡು ಸ್ಥಾನದಲ್ಲೂ ಜಯ ಸಾಧಿಸಿದೆ. ಕಂಬದಕೋಣೆ, ಕಾವ್ರಾಡಿ ಕಾಂಗ್ರೆಸ್ ಪಾಲಾದರೆ, ಶಿರೂರು, ಬೈಂದೂರು, ತ್ರಾಸಿ, ವಂಡ್ಸೆ, ಸಿದ್ದಾಪುರ, ಹಾಲಾಡಿ, ಕೋಟೇಶ್ವರ ಬೀಜಾಡಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಜಿಪಂ ಮಾಜಿ ಸದಸ್ಯೆ ಸಾಧು ಎಸ್.ಬಿಲ್ಲವ, ಮದನ ಕುಮಾರ್, ಮಂಜಯ್ಯ ಶೆಟ್ಟಿ ಹರ್ಕೂರು, ಸಂಪಿಗೇಡಿ ಸಂಜೀವ ಶೆಟ್ಟಿ, ಮಾಜಿ ಜಿಪಂ ಸದಸ್ಯ ಅನಂತ ಮೋವಾಡಿ, ಜಿಪಂ ಮಾಜಿ ಸದಸ್ಯ ಸಂತೋಷ ಕುಮಾರ್ ಶೆಟ್ಟಿ ಸೋತ ಪ್ರಮುಖರಾದರೆ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ, ಗೌರಿ ದೇವಾಡಿಗ, ಮಾಜಿ ಜಿಪಂ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ, ಮಾಜಿ ಜಿಪಂ ಉಪಾಧ್ಯಕ್ಷ ರಾಜು ದೇವಾಡಿಗ, ಮಾಜಿ ಕುಂದಾಪುರ ತಾಪಂ ಅಧ್ಯಕ್ಷೆ ಜ್ಯೋತಿ ವಿ. ಪುತ್ರನ್ ಗೆದ್ದ ಪ್ರಮುಖರು. ಕುಂದಾಪ್ರ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಹೊಸ ವರ್ಷವೆಂಬುದು ನಿತ್ಯ ನಿರಂತರ ಕಾಯಕಕ್ಕೊಂದು ಹೊಸ ಹುರುಪು, ಹೊಳಪು ನೀಡುವ ದಿನ. ಬದಲಾವಣೆ ಬಯಸುವವರಿಗೊಂದು ನೆಪ. ಕನಸು ಕಂಗಳಿಗೊಂದು ಭರವಸೆಯ ಮೂಟೆ. ಹೊಸ ವರ್ಷ ದಿನವೂ ಹರ್ಷ ತರಲಿ ಎಂಬ ಹಾರೈಕೆ ‘ಕುಂದಾಪ್ರ ಡಾಟ್ ಕಾಂ’ನದ್ದು. ಸಂಭ್ರಮದ ನಡುವೆ ಈ ನಿಲ್ಲದ ಕಾಲದ ಹಿಂದೆ ನಡೆದು ಬಂದ ಹಾದಿಯ ಅವಲೋಕನ ಮಾಡುತ್ತಾ ಮುನ್ನಡೆಯೋಣ ಬನ್ನಿ. 2016 ನಮಗೆ ಹೊಸತಾಗಿ ಕಂಡರೂ ಈ ಎಲ್ಲಾ ಸುದ್ದಿ, ಘಟನೆ, ಸವಾಲುಗಳು ಹೊಸತಾಗಿ ಉಳಿದಿಲ್ಲ. ಅದು ನಿರಂತರವಾಗಿ ಘಟಿಸುವಂತದ್ದು. ಆದರೆ ಎಡವಿದಲ್ಲೇ ಮತ್ತೆ ಎಡವದೇ, ಮಾಡಿದ ತಪ್ಪನ್ನೇ ಮತ್ತೆ ಮಾಡದೇ, ಸಹನೆಗೂ ಮೀರಿದ ಆಕ್ರಮಣವನ್ನು ಸಹಿಸಿಕೊಳ್ಳದೇ ಪ್ರತಿಭಟಿಸುತ್ತಾ, ಅಭಿವ್ಯಕ್ತಪಡಿಸುತ್ತಾ, ಅಭಿವೃದ್ಧಿಯ ವ್ಯಾಖ್ಯಾನಕ್ಕೆ ಹೊಸ ಅರ್ಥ ನೀಡುತ್ತಾ, ಸೃಜನಶೀಲ, ಸೌಹಾರ್ದಯುತ ಮನಸ್ಸುಗಳನ್ನು ಕಟ್ಟಲು ಹೊಸವರ್ಷವೊಂದು ಸ್ಪೂರ್ತಿಯಾಗಬೇಕಿದೆ. ಕುಂದಾಪುರ ತಾಲೂಕಿನ ಮಟ್ಟಿಗೆ 2015ರ ಆರಂಭ ಚನ್ನಾಗಿಯೇ ಆಗಿದ್ದರೂ ಬರಬರುತ್ತಲೇ ಸಾಕಷ್ಟು ತವಕ, ತಲ್ಲಣಗಳನ್ನು ಸೃಷ್ಟಿಸಿತ್ತು. ತಾಲೂಕಿನಾದ್ಯಂತ ಹಿಂದೆಂದೂ ಕಂಡು ಕೇಳರಿಯದ…
