ವಂಡ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನದ ಸಂಭ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಉಡುಪಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಎಂದು ಗುರುತಿಸಿಕೊಳ್ಳುವ ವಂಡ್ಸೆ ಶಾಲೆ ಈಗಾಗಲೇ ಶತಮಾನವನ್ನು ಸಾರ್ಥಕವಾಗಿ ಪೂರೈಸಿದೆ. 1914ರಲ್ಲಿ ಸ್ಥಾಪನೆಯಾದ ಈ ಶಾಲೆ ಈಗ 102ವರ್ಷ ದಾಟಿದೆ. ಒಂದು ಇಡೀ ಶತಮಾನವನ್ನು ಕಂಡಿರುವ ಈ ಶಾಲೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನವನ್ನು ನೀಡಿದೆ. ವಂಡ್ಸೆಯ ಸುತ್ತಮುತ್ತ ಭಾಗದ ಜನ ಅಕ್ಷರ ಕಲಿತಿದ್ದಿದ್ದರೆ ಈ ಶಾಲೆಯ ಮೂಲಕವೇ. 1990ರ ದಶಕದ ತನಕ ಸುತ್ತ ಹಳ್ಳಿಗಳಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಯಾಗಲಿ ಇರಲಿಲ್ಲ. ಖಾಸಗಿ ಶಾಲೆಗಳಂತೂ ಇರಲೇ ಇಲ್ಲ. ಶ್ರೀಮಂತ ಇರಲಿ, ಬಡವ ಇರಲಿ, ಶಾಲೆ ಎಂದಾಕ್ಷಣ ಚಕ್ಕಂತ ನೆನಪಾಗುತ್ತಿದ್ದುದು ಈ ಶಾಲೆಯೇ. ಹಾಗಾಗಿ ವಂಡ್ಸೆ ಶಾಲೆ ಎಂದರೆ ಸುತ್ತ ಹತ್ತಾರು ಗ್ರಾಮಗಳ ವಿದ್ಯಾದೇಗುಲ.

Call us

Click Here

ಶತಮಾನಕ್ಕೂ ಪೂರ್ವದಲ್ಲಿ ವಂಡ್ಸೆಯಲ್ಲಿಯೂ ಕೂಡಾ ಐಗಳ ಮಠ ಇತ್ತಂತೆ. ಧನಿಕರ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದರು. ತದನಂತರ ಕಿರಿಯ ಪ್ರಾಥಮಿಕ ಶಾಲೆಯಾಗಿ ರೂಪುಗೊಂಡ ಶಾಲೆ ಒಂದಿಷ್ಟು ವರ್ಷ ವಿದ್ಯಾಭಿಮಾನಿಗಳ ಮನೆಯಲ್ಲಿಯೂ ಕಾರ್ಯಚರಿಸಿ, ೧೯೧೪ರಲ್ಲಿ ಈಗಿರುವ ಜಾಗದಲ್ಲಿ ಪುಟ್ಟದಾಗಿ ಕಿರಿಯ ಪ್ರಾಥಮಿಕ ಶಾಲೆಯಾಗಿ ತೆರೆದುಕೊಂಡಿತು. ಆಗ ವಂಡ್ಸೆಯ ಆರ್ಥಿಕ ಮಟ್ಟ ಕೂಡಾ ಸುಧಾರಿಸಿಲ್ಲದ ಕಾಲ. ಶಿಕ್ಷಣ ಎಂದರೆ ಏನು ಎನ್ನುವ ಪರಿಕಲ್ಪನೆಯೂ ಇರಲಿಲ್ಲ. ಒಂದಿಷ್ಟು ಮಕ್ಕಳು, ಓರ್ವ ಶಿಕ್ಷಕರ ಮೂಲಕ ಶಾಲೆ ಆರಂಭಗೊಂಡಿತ್ತಂತೆ. ಹೀಗೆ ಒಂದರೆಡು ವರ್ಷಗಳಲ್ಲಿ ವಂಡ್ಸೆಯ ಕಿರಿಯ ಪ್ರಾಥಮಿಕ ಶಾಲೆಯೇ ಸುತ್ತ ಗ್ರಾಮಗಳಾದ ಬೆಳ್ಳಾಲ, ಕೆರಾಡಿ, ನೂಜಾಡಿ, ಚಿತ್ತೂರು, ಇಡೂರು, ಹೊಸೂರು, ನೆಂಪು, ಬಾಳಿಕೆರೆ, ಆತ್ರಾಡಿ, ಬಗ್ವಾಡಿ ಆತ್ತ ಜಡ್ಕಲ್ ತನಕವೂ ಏಕೈಕ ಶಾಲೆಯಾಗಿ ಗುರುತಿಸಿಕೊಂಡಿತ್ತು. /ಕುಂದಾಪ್ರ ಡಾಟ್ ಕಾಂ ವರದಿ/

ಸ್ವಾತಂತ್ರನಂತರ ಅಂದರೆ 1986ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮುಂಭಡ್ತಿ ಪಡೆಯಿತು. ಬೈಂದೂರು ಕ್ಷೇತ್ರದ ಪ್ರಥಮ ಶಾಸಕ ಯಡ್ತರೆ ಮಂಜಯ್ಯ ಶೆಟ್ಟರು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಉದ್ಘಾಟಿಸಿದರು. ಇದು ವಂಡ್ಸೆಗೇ ಮಹತ್ವದ ದಿನ. ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟ ನಂತರ ಶಾಲೆ ನಿಜಕ್ಕೂ ಮಕ್ಕಳ ನಿಬಿಡ ಸ್ಥಳವಾಯಿತು. ಗುಣಮಟ್ಟದ ಶಿಕ್ಷಣಕ್ಕೂ ಹೆಸರು ಪಡೆಯಿತು. ಆಗಿನ ಕಾಲದಲ್ಲಿ ೭ನೇ ತರಗತಿ ಉತ್ತೀರ್ಣ ಆಗುವುದೆಂದರೆ ಇಂದಿನ ಪದವಿ ಪಡೆದಷ್ಟು. ಎಂಭತ್ತರ ದಶಕದ ತನಕವೂ ಇದೇ ಮುಂದುವರಿದಿತ್ತು. /ಕುಂದಾಪ್ರ ಡಾಟ್ ಕಾಂ ವರದಿ/

80-90ರ ದಶಕ ಈ ಶಾಲೆಗೆ ಸುವರ್ಣ ಯುಗ ಎನ್ನಬಹುದು. 7 ತರಗತಿಯ ತನಕ ಒಂದೊಂದು ಶೈಕ್ಷಣಿಕ ವರ್ಷದಲ್ಲಿ ೮೦೦ರಿಂದ 1000 ವಿದ್ಯಾರ್ಥಿಗಳಿಗಿಂತಲೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಕೂಲಿಯಿಂದ ಶಾಲೆಗೆ, ಸರ್ವಶಿಕ್ಷಾ ಅಭಿಯಾನ ಮೊದಲಾದ ಕಾರ್ಯಕ್ರಮ ಅನುಷ್ಠಾನ ಆದ ನಂತರ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು. 5,6,7ನೇ ತರಗತಿಯನ್ನು ಎರಡು, ಮೂರು ವಿಭಾಗಗಳಾಗಿ ವಿಂಗಡಿಸಿ ಪಾಠ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು.ಮಾದರಿ ಶಾಲೆಯಾಗಿ ರೂಪುಗೊಂಡಿತು. /ಕುಂದಾಪ್ರ ಡಾಟ್ ಕಾಂ ವರದಿ/

ಈ ಶಾಲೆಯ ನೂರು ವರ್ಷದ ಪಯಣ ಒಂದು ರೀತಿ ಕಡಲಿನಂತೆ. ಇಲ್ಲಿ ಶಿಕ್ಷಣ ಪಡೆದ ಅದೆಷ್ಟೋ ಪ್ರತಿಭೆಗಳು ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕೀರ್ತಿ ಸಂಪಾದಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಹಸ್ರ ಸಹಸ್ರ ಸಂಖ್ಯೆಯ ಸಾಧಕರು ಈ ಶಾಲೆಯ ಹಳೆ ವಿದ್ಯಾರ್ಥಿಗಳು.

Click here

Click here

Click here

Click Here

Call us

Call us

ಈ ಶಾಲೆ ಶತಮಾನಗಳಿಂದ ಆನೇಕ ಕ್ರೀಡಾ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರಕ್ಕೆ ನೀಡಿದೆ. ದಕ್ಷಿಣ ಏಷ್ಯಾನ್ ಗೇಮ್ಸ್‌ನಲ್ಲಿ ಬಂಗಾರದ ಪದಕ ವಿಜೇತ ಗುರುರಾಜ್ ಜೆಡ್ಡು ಇದೇ ಶಾಲೆಯ ಹಳೆ ವಿದ್ಯಾರ್ಥಿ. ಕ್ರೀಡಾಕೂಟದಲ್ಲಿ ವಲಯ ಮಟ್ಟದಿಂದ ರಾಷ್ಟ್ರ ಮಟ್ಟದ ತನಕ ಪ್ರತಿನಿಧಿಸಿದ ಪ್ರತಿನಿಧಿಗಳನ್ನು ಈ ಶಾಲೆ ಕಂಡಿದೆ. ಸಾಂಸ್ಕೃತಿಕವಾಗಿ ಕೂಡಾ ಅಸಂಖ್ಯಾತ ಪ್ರತಿಭೆಗಳನ್ನು ಈ ಶಾಲೆ ಪೋಷಿಸಿದೆ. ಇವತ್ತು ಚಿತ್ರರಂಗ, ಲಲಿತಾಕಲಾ ಕ್ಷೇತ್ರ, ಯಕ್ಷಗಾನ, ರಂಗಭೂಮಿ, ಸಂಗೀತ ಕ್ಷೇತ್ರದಲ್ಲಿ ಆನೇಕ ಪ್ರತಿಭೆಗಳು ಇದ್ದಾರೆ. ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ, ಸಾಹಿತ್ಯ, ಕಲೆ, ಸಂಸ್ಕೃತಿ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಹಳೆ ವಿದ್ಯಾರ್ಥಿಗಳು ಇದ್ದಾರೆ.

ಈ ನೂರು ಸಂವತ್ಸರಗಳಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಮಂದಿ ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಸ್ವಾರ್ಥ ಬಯಸದೆ ದುಡಿದ ಚಿಂತನಾಶೀಲ ಹಿರಿಯ ಚೇತನಗಳನೇಕರು ಕೀರ್ತಿಶೇಷರಾಗಿದ್ದಾರೆ. ಜಿಲ್ಲೆಯಲ್ಲಿಯೇ ಗುಣಮಟ್ಟದ ಶಿಕ್ಷಣಕ್ಕೆ ಶಾಲೆಗೆ ಹೆಸರು ತಂದಿತ್ತಿದ್ದಾರೆ. ಪ್ರತಿವರ್ಷ ಸಾಂವಿಧಾನಿಕ ಮಾದರಿಯಲ್ಲಿ ವಿದ್ಯಾರ್ಥಿ ಸರಕಾರ ರಚನೆ, ಮೀನ ಕ್ಲಬ್, ವಿಜ್ಞಾನ ಸಂಘ, ಸಾಹಿತ್ಯ ಸಂಘ ಮೊದಲಾದ ಚಟುವಟಿಕೆ ಆಧ್ಯತಾ ವೇದಿಕೆಗಳಿವೆ. ವಿಶಾಲವಾದ ಆಟದ ಮೈದಾನ, ಎಲ್ಲಾ ಮೂಲಭೂತ ಅವಶ್ಯಕತೆಗಳು ಇವೆ. ಉತ್ತಮ ಶಿಕ್ಷಣ ನೀಡುವ ನುರಿತ ಶಿಕ್ಷಕರಿದ್ದು, ಶಾಲೆಯ ಬೆಳವಣಿಗೆಯಲ್ಲಿ ಕೈ ಜೋಡಿಸುವ ಉತ್ತಮ ಶಾಲಾಭಿವೃದ್ಧಿ ಸಮಿತಿ ಇದೆ. ಸ್ಪಂದನೀಯ ಪೋಷಕ ಸಮುದಾಯವಿದೆ. ಪ್ರಸ್ತುತ ಶಾಲೆಯಲ್ಲಿ 114ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಖ್ಯೋಪಾಧ್ಯಾಯರಾಗಿ ಮೋಹಿನಿ ಬಾ, ಸಹಶಿಕ್ಷಕರಾಗಿ ಆಶಾ, ಶ್ರೀನಿವಾಸ ಎಚ್, ರಾಜು ಎನ್.(ದೈ.ಶಿ.ಶಿ), ನಾಗವೇಣಿ ಸೇವೆ ಸಲ್ಲಿಸುತ್ತಿದ್ದಾರೆ. /ಕುಂದಾಪ್ರ ಡಾಟ್ ಕಾಂ ವರದಿ/

ಮೇ 8ರಂದು ಶತಮಾನೋತ್ಸವ ನಡೆಯಲಿದ್ದು ಶತಮಾನೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಕೆ.ಗೋಪಾಲ ಪೂಜಾರಿ, ಅಧ್ಯಕ್ಷರಾಗಿ ಹರ್ಜಿ ಕರುಣಾಕರ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರ ನಾಯ್ಕ್ ರಾಯಪ್ಪನಡಿ, ಮುಖ್ಯೋಪಾಧ್ಯಾಯಿನಿ ಮೋಹಿನಿ ಬಾ, ಅಧ್ಯಾಪಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರು, ಹಳೆವಿದ್ಯಾರ್ಥಿಗಳು, ಸಮಿತಿ ಸದಸ್ಯರು ಶ್ರಮಿಸುತ್ತಿದ್ದಾರೆ. ಸ್ಮರಣ ಸಂಚಿಕೆ ಅನಾವರಣ, ಸೇವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನ, ಸಾಧಕರಿಗೆ ಗೌರವ, ದಾನಿಗಳಿಗೆ ಸನ್ಮಾನ, ವಿವಿಧ ಸ್ಪರ್ಧೆಗಳು, ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಒಂದು ಅರ್ಥಪೂರ್ಣ ಶತಾಬ್ದಿ ಮಹೋತ್ಸವಕ್ಕೆ ಶಾಲೆ ಸಿದ್ಧವಾಗಿದೆ. ಶತಮಾನೋತ್ಸವ ಕಟ್ಟಡ ನಿರ್ಮಾಣವಾಗುತ್ತಿದ್ದು ಹೈದರಬಾದ್ ಉದ್ಯಮಿ, ಶಾಲೆಯ ಹಳೆ ವಿದ್ಯಾರ್ಥಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕಟ್ಟಡದ ದಾನಿಗಳಾಗಿದ್ದಾರೆ.

Leave a Reply